Tag: ಹೆಚ್ ಡಿ ಕುಮಾರಸ್ವಾಮಿ

  • ಬಿಜೆಪಿಯ ನಾಯಕರು ಭೋಗಿಯಾಗಿರೋದ್ರಿಂದ ಯೋಗಿಯನ್ನು ಕರೆಸಿಕೊಂಡಿದ್ದಾರೆ- ಹೆಚ್‍ಡಿಕೆ

    ಬಿಜೆಪಿಯ ನಾಯಕರು ಭೋಗಿಯಾಗಿರೋದ್ರಿಂದ ಯೋಗಿಯನ್ನು ಕರೆಸಿಕೊಂಡಿದ್ದಾರೆ- ಹೆಚ್‍ಡಿಕೆ

    ಮಂಗಳೂರು: ಕರ್ನಾಟಕದ ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ಬಿಜೆಪಿಯ ನಾಯಕರು ಭೋಗಿಯಾಗಿರೋದ್ರಿಂದ ಯೋಗಿಯನ್ನು ಕರೆಸಿಕೊಂಡಿದ್ದಾರೆ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

    ನಗರದಲ್ಲಿ ನಡೆದ ಸುದ್ದಿಗೋಷ್ಟಿ ವೇಳೆ ಬಿಜೆಪಿ ಜನಸುರಕ್ಷಾ ಜಾಥಾದ ಕುರಿತು ಮಾತನಾಡಿದ ಅವರು, ಕರಾವಳಿಯಲ್ಲಿ ಜನ ಆತಂಕದಲ್ಲಿದ್ದಾರೆ. ರಾಜ್ಯದ ಬೇರೆ ಪ್ರದೇಶಗಳಲ್ಲಿ ಇಂತಹ ಸ್ಥಿತಿ ಇಲ್ಲ. ಹೀಗಾಗಿ ಉತ್ತರಪ್ರದೇಶದ ಯೋಗಿಯನ್ನು ಕರೆಸಿಕೊಂಡಿದ್ದಾರೆ ಅಂದ್ರು.

    ಕರ್ನಾಟಕದ ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ಬಿಜೆಪಿಯ ನಾಯಕರೆಲ್ಲರು ಭೋಗಿಯಾಗಿರೋದ್ರಿಂದ ಯೋಗಿಯನ್ನು ಕರೆಸಿಕೊಂಡಿದ್ದಾರೆ. ನೂರಾರು ಮಕ್ಕಳನ್ನು ಬಲಿ ತೆಗೆದುಕೊಂಡ ಯೋಗಿಯಿಂದ ಭಾಷಣ ಮಾಡಿಸುತ್ತಿದ್ದಾರೆ. ಆಸ್ಪತ್ರೆಗೆ ಬಂದ ಮಕ್ಕಳ ರಕ್ಷಣೆ ಮಾಡದ ಯೋಗಿಯಿಂದ ಇಲ್ಲಿ ಭಾಷಣ ಮಾಡಿಸಲಾಗುತ್ತಿದೆ ಎಂದು ಟೀಕಿಸಿದ್ರು.

  • ಕಾಂಗ್ರೆಸ್-ಬಿಜೆಪಿ ಎರಡೂ ಒಂದೇ ಮುಖದ ಪಕ್ಷ: ಮಾಯಾವತಿ

    ಕಾಂಗ್ರೆಸ್-ಬಿಜೆಪಿ ಎರಡೂ ಒಂದೇ ಮುಖದ ಪಕ್ಷ: ಮಾಯಾವತಿ

    ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಇಂದು ರಣಕಹಳೆಯನ್ನು ಮೊಳಗಿಸಿದೆ. ಈ ಬಾರಿಯ ಚುನಾವಣೆಗೆ ಜೆಡಿಎಸ್ ಮತ್ತು ಬಿಎಸ್‍ಪಿ ಮೈತ್ರಿ ಮಾಡಿಕೊಂಡಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಇಂದು ಜೆಡಿಎಸ್ ನಗರದ ಯಲಹಂಕದ ಮೈದಾನದಲ್ಲಿ ವಿಕಾಸ ಪರ್ವವನ್ನು ಹಮ್ಮಿಕೊಂಡಿದ್ದು, ಬಿಎಸ್‍ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿಯವರು ಸಹ ಭಾಗಿಯಾಗಿ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.

    ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಒಂದೇ ಮುಖವನ್ನು ಹೊಂದಿರುವ ಪಕ್ಷಗಳಾಗಿವೆ. ಮುಂದಿನ ಚುನಾವಣೆಯಲ್ಲಿ ಕರ್ನಾಟಕದ ಜನತೆ ರಾಷ್ಟ್ರೀಯ ಪಕ್ಷಗಳಿಗೆ ಬುದ್ದಿ ಕಲಿಸಬೇಕಿದೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ದಲಿತ ನಾಯಕರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡುತ್ತೇವೆ ಎಂಬ ಭರವಸೆಯನ್ನು ನೀಡಿತ್ತು. ಆದ್ರೆ ಚುನಾವಣೆ ಗೆಲುವಿನ ಬಳಿಕ ಕಾಂಗ್ರೆಸ್ ತನ್ನ ಮಾತನ್ನು ಮರೆತು ಮೋಸ ಮಾಡಿತು. ಕಾಂಗ್ರೆಸ್ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರಿಗೆ ಅನ್ಯಾಯ ಮಾಡಿದೆ. ಕಾಂಗ್ರೆಸ್ ಲಕ್ಷ ದಲಿತರ ವೋಟ್‍ಗಳನ್ನ ಸೆಳೆಯಲು ನಾನಾ ಕಸರತ್ತುಗಳನ್ನು ಮಾಡುತ್ತಿದೆ. ಆದ್ರೆ ಕಾಂಗ್ರಸ್ ಇಲ್ಲಿವರೆಗೆ ದಲಿತರಿಗೆ ಸರಿಯಾದ ಸೌಲಭ್ಯಗಳನ್ನು ನೀಡದೇ ಕಡೆಗಣನೆ ಮಾಡಿದೆ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸಂಪೂರ್ಣವಾಗಿ ಆದರ್ಶವಾಗಿ ಕಂಡಿಲ್ಲ. ಲೋಕಸಭೆ ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಸೋಲಿಸಲಾಗಿತ್ತು. ಭಾರತರತ್ನ ಕೊಡುವಲ್ಲಿ ಅಂದಿನ ಕೇಂದ್ರ ಸರ್ಕಾರ ನೀಡಲು ಅಲ್ಲಗೆಳದಿತ್ತು ಎಂದು ಕಾಂಗ್ರೆಸ್ ವಿರುದ್ಧ ಮಾಯಾವತಿ ಕಿಡಿಕಾರಿದ್ರು.

    ಆರ್‍ಎಸ್‍ಎಸ್ ಕೈಯಲ್ಲಿ ಬಿಜೆಪಿ: ಆರ್‍ಎಸ್‍ಎಸ್ ಮುಷ್ಟಿಯಲ್ಲಿ ಬಿಜೆಪಿ ಇದೆ. ಬಿಜೆಪಿ ಸಹ ಬಡವರ ಪರವಾಗಿ ಕೆಲಸ ಮಾಡುತ್ತಿಲ್ಲ. ಯುವಕರು ಉದ್ಯೋಗ ನೀಡಿ ಅಂತಾ ಕೇಳಿದ್ರೆ ಪ್ರಧಾನಿ ಮೋದಿ ಪಕೋಡಾ ಮಾರಿ ಅಂತಾ ಸಲಹೆ ನೀಡುತ್ತಾರೆ. ಅಧಿಕಾರಕ್ಕೆ ಬಂದ ಕೂಡಲೇ ಕಪ್ಪು ಹಣ ತರುತ್ತೇವೆ ಅಂತಾ ಹೇಳಿದವರು ಇದೂವರೆಗೂ ಒಂದು ರೂಪಾಯಿಯನ್ನು ಸಹ ತಂದಿಲ್ಲ. ಇನ್ನು ನೋಟ್ ಬ್ಯಾನ್ ಮತ್ತು ಜಿಎಸ್‍ಟಿ ವ್ಯಾಪಾರಿಗಳಿಗೆ ಮತ್ತು ರೈತರಿಗೆ ಅನಾನುಕೂಲಕರವಾಗಿವೆ. ಬಿಜೆಪಿ ಉತ್ತರ ಪ್ರದೇಶ ಮತ್ತು ಗುಜರಾತ್ ಮಾದರಿಯಲ್ಲಿ ಧರ್ಮ ಸಂಘರ್ಷದ ಮೂಲಕ ಚುನಾವಣೆ ಗೆಲ್ಲಲ್ಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು.

    ಕರ್ನಾಟಕದ ಜನರು ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಎಸ್‍ಪಿ ಮೈತ್ರಿಗೆ ತಮ್ಮ ಮತವನ್ನು ನೀಡಬೇಕು ಎಂದು ಮನವಿ ಮಾಡಿಕೊಂಡರು. ಮುಂದಿನ ಚುನಾವಣೆಯ ಬಳಿಕೆ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗ್ತಾರೆ. ಎರಡು ರಾಷ್ಟ್ರೀಯ ಪಕ್ಷಗಳಿಗೆ ರೈತರು, ದಲಿತರು ಬಡವರ ಮೇಲೆ ಪ್ರೀತಿ ವಿಶ್ವಾಸ ಇಲ್ಲ. ಇಂದು ಜೆಡಿಎಸ್ ಜೊತೆ ಬಿಎಸ್ಪಿ ಹೊಂದಾಣಿಕೆ ಮಾಡಿಕೊಂಡಿದೆ. ಲಕ್ಷಾಂತರ ಜನ ಇವತ್ತು ಆಗಮಿಸಿದ್ದೀರಿ ನಿಮ್ಮನ್ನೆಲ್ಲ ನೋಡಿದ್ದು ನನಗೆ ಖುಷಿ ನೀಡಿದೆ. ಕನ್ನಡ ನಾಡಿನ ಜನತೆ ಮುಂದಿನ ಚುನಾವಣೆಯಲ್ಲಿ ಅಲ್ಪಸಂಖ್ಯಾತ, ದಲಿತರು, ರೈತರು, ಹಿಂದುಳಿದ ವರ್ಗದ ಹಿತಕ್ಕಾಗಿ ಜೆಡಿಎಸ್ ಗೆಲ್ಲಿಸಿ ಬೇಕಿದೆ ಎಂದು ಮನವಿ ಮಾಡಿಕೊಂಡರು.

    ಸಮಾರಂಭದ ವೇದಿಕೆಯಲ್ಲಿ ಮಯಾವತಿ ಅವರಿಗಾಗಿಯೇ ಬಿಎಸ್‍ಪಿ ಚಿಹ್ನೆಯುಳ್ಳ ಭಾಷಣದ ಟೇಬಲ್ ಸಿದ್ಧತೆ ಮಾಡಲಾಗಿತ್ತು. ಇತ್ತ ಜೆಡಿಎಸ್ ನಾಯಕರು ಮಾತನಾಡಲು ಪ್ರತ್ಯೇಕ ಭಾಷಣದ ಟೇಬಲ್ ವ್ಯವಸ್ಥೆ ಮಾಡಲಾಗಿತ್ತು.

  • ದೀಪಕ್‍ ರಾವ್ ಹತ್ಯೆ ಹಿಂದೆ ಬಿಜೆಪಿ ಕಾರ್ಪೋರೇಟರ್ ಕೈವಾಡವಿದೆ: ಹೆಚ್‍ಡಿಕೆ

    ದೀಪಕ್‍ ರಾವ್ ಹತ್ಯೆ ಹಿಂದೆ ಬಿಜೆಪಿ ಕಾರ್ಪೋರೇಟರ್ ಕೈವಾಡವಿದೆ: ಹೆಚ್‍ಡಿಕೆ

    ಮೈಸೂರು: ದೀಪಕ್‍ ರಾವ್ ಹತ್ಯೆ ಹಿಂದೆ ಬಿಜೆಪಿ ಕಾರ್ಪೋರೇಟರ್ ಕೈವಾಡವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

    ದೀಪಕ್ ರಾವ್ ಕೊಲೆಗೆ ಕೆಲವು ಬಿಜೆಪಿ ನಾಯಕರು ಕಾರಣಕರ್ತರಾಗಿದ್ದಾರೆ ಎಂಬ ಮಾಹಿತಿ ನನಗೆ ಲಭಿಸಿದೆ. ಇದೂವರೆಗೂ ನಾನು ಈ ಪ್ರಕರಣದ ಬಗ್ಗೆ ಮಾತನಾಡಿಲ್ಲ, ಇಂದು ನೀವೆಲ್ಲಾ ಕೇಳುತ್ತಿರುವುದಕ್ಕೆ ನಾನು ಉತ್ತರಿಸುತ್ತಿದ್ದೇನೆ. ದೀಪಕ್ ರಾವ್ ಕೊಲೆ ನಡೆದಾಗ ದುಷ್ಕರ್ಮಿಗಳ ಮೇಲೆ ಮುಸ್ಲಿಂ ಬಾಂಧವರು ಹಲ್ಲೆ ಮಾಡಿ ಕಾಪಾಡುವ ಪ್ರಯತ್ನ ಮಾಡಿದ್ದಾರೆ. ಆ ಮುಸ್ಲಿಂ ಬಾಂಧವರ ಹಿನ್ನೆಲೆಯಲ್ಲಿಯೇ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದಾರೆ. ಆದ್ರೆ ಆ ನಾಲ್ಕು ಜನಕ್ಕೆ ಸುಪಾರಿ ಕೊಟ್ಟಿದ್ದವರು ಯಾರೆಂಬುದನ್ನು ಸರ್ಕಾರಕ್ಕೆ ಇನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.

    ದೀಪಕ್ ರಾವ್ ಕೊಲೆಯ ಮೂಲ ವ್ಯಕ್ತಿಗಳು ಯಾರೆಂಬುದನ್ನು ಇನ್ನು ಬಹಿರಂಗೊಳಿಸಿಲ್ಲ ಯಾಕೆ? ಕೊಲೆ ನಡೆದು ಇಷ್ಟು ದಿನಗಳಾದ್ರೂ ಸರ್ಕಾರ ಮಾಹಿತಿಯನ್ನು ಬಹಿರಂಗಗೊಳಿಸಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ನಾಲ್ಕು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಆದ್ರೆ ಇದೂವರೆಗೂ ಸತ್ಯಾಂಶವನ್ನು ತಿಳಿಸುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿ ಎಚ್‍ಡಿಕೆ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

    ನನಗಿರುವ ಮಾಹಿತಿ ಪ್ರಕಾರ, ದೀಪಕ್ ರಾವ್ ಕೊಲೆಯಲ್ಲಿ ಸ್ಥಳೀಯ ಬಿಜೆಪಿ ಕಾರ್ಪೋರೇಟರ್ ಭಾಗಿಯಾಗಿದ್ದಾರೆ. ನಾನು ಪ್ರಕರಣ ಸಂಬಂಧ ಕೆಲವು ಮಾಹಿತಿಗಳನ್ನು ಪಡೆದಿದ್ದೇನೆ. ಈ ಎಲ್ಲ ಮಾಹಿತಿಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹೊಂದಾಣಿಕೆ ನಡೆದಿದೆಯಾ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಸತ್ಯ ಹೇಳಿದ್ದರೂ, ಸರ್ಕಾರ ಮಾತ್ರ ಮೌನವಹಿಸಿರುವುದು ಯಾಕೆ ಅಂತಾ ಪ್ರಶ್ನಿಸಿದ್ದಾರೆ.

    https://www.youtube.com/watch?v=AI_z5wUiDhM

    https://www.youtube.com/watch?v=p4Mfa77sfvE

  • ನಾಡಿನ ಜನರನ್ನ ಸಾಲಗಾರರನ್ನಾಗಿ ಮಾಡಿದ್ದೇ ಸಿಎಂ ಸಾಧನೆ: ಹೆಚ್‍ಡಿಕೆ

    ನಾಡಿನ ಜನರನ್ನ ಸಾಲಗಾರರನ್ನಾಗಿ ಮಾಡಿದ್ದೇ ಸಿಎಂ ಸಾಧನೆ: ಹೆಚ್‍ಡಿಕೆ

    ಚಿಕ್ಕಮಗಳೂರು: ಪ್ರತಿಕುಟುಂಬದ ಮೇಲೆ 50 ಸಾವಿರ ಹೊರೆ ನೀಡಿರೋದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಕ್ಕೆ ನೀಡಿದ ಮಹಾನ್ ಕೊಡುಗೆಯಾಗಿದೆ ಅಂತ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

    ಚಿಕ್ಕಮಗಳೂರಿನ ಮುಗುಳವಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ನೀರಾವರಿ, ರಸ್ತೆ, ಹಣ ದೋಚಿದೆ. ಅಲ್ಲದೇ ನಾಡಿನ ಜನರನ್ನ ಸಾಲಗಾರನ್ನಾಗಿ ಮಾಡಿದೆ. ಒಟ್ಟಿನಲ್ಲಿ ಜಾಹಿರಾತು ಮೂಲಕ ನಡೆಯುತ್ತಿರುವ ಸರ್ಕಾರ ಅಂದ್ರೆ ಸಿದ್ದರಾಮಯ್ಯನವರ ಸರ್ಕಾರ ಅಂತ ಅವರು ಹೇಳಿದ್ದಾರೆ.

     

    ರಾಜ್ಯದಲ್ಲಿ ಅತೀ ಹೆಚ್ಚು ಹಾಲು ಉತ್ಪಾದನೆ ಅಗಲು ಹೆಚ್.ಡಿ.ರೇವಣ್ಣ ಕಾರಣ. ಸಿಎಂ ಸಾಲಮನ್ನಾ ಘೋಷಣೆ ಮಾಡಿ 4 ತಿಂಗಳ ಅಗಿದೆ ಎಷ್ಟು ಜನರಿಗೆ ಸಾಲಮನ್ನ ಮಾಡಲು ಹಣ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಫೋಟೋ ಹಾಕಿ ಸಾಲ ಮನ್ನಾ ಮಾಡಿದ್ದೇವೆ ಎಂದು ಕರಪತ್ರ ಹಂಚುತ್ತಿದ್ದಾರೆ ಅಂತ ಅಂದ್ರು.

    ಇದನ್ನೂ ಓದಿ: ಗ್ರಾಮ ವಾಸ್ತವ್ಯಕ್ಕೆ ಹೊಸ ಟಚ್ ಕೊಟ್ಟ ಜೆಡಿಎಸ್

    ಗ್ರಾಮ ವಾಸ್ತವ್ಯದ ಮೂಲಕ ಜನರ ಸಮಸ್ಯೆಯನ್ನ ಆಲಿಸಿ ಪ್ರಣಾಳಿಕೆಯಲ್ಲಿ ನೀಡುವ ಉದ್ದೇಶದಿಂದ ನೀಡಲಾಗುತ್ತಿದೆ. ಜೆಡಿಎಸ್ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗುವುದು ಅಂತ ಹೇಳಿದ್ರು.

    ಇದನ್ನೂ ಓದಿ: ಹೆಚ್‍ಡಿಕೆ ಚುನಾವಣಾ ಪ್ರಚಾರಕ್ಕೆ 1 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಬಸ್: ಒಳಗಡೆ ಏನೆಲ್ಲಾ ಇದೆ ಗೊತ್ತಾ!

    ಎರಡು ರಾಷ್ಟ್ರೀಯ ಪಕ್ಷಗಳು ದ್ವೇಷದ ರಾಜಕಾರಣ ಮಾಡುತ್ತಿದ್ದು, ಲೂಟಿಕಾರರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಜಯಂತಿಗಳನ್ನ ನಡೆಸಿ ಸಮುದಾಯದ ಜನರನ್ನ ತೃಪ್ತಿಪಡಿಸಲು ಮುಂದಾಗಿವೆ. ಇದನ್ನ ಬಿಟ್ಟು ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸ ಮಾಡಲಿ ಎಂದು ಹೆಚ್‍ಡಿಕೆ ಸಲಹೆ ನೀಡಿದರು.

    ಇದನ್ನೂ ಓದಿ: ನಾಳೆ ಕರ್ನಾಟಕ ವಿಕಾಸ ವಾಹಿನಿ ಯಾತ್ರೆಗೆ ಚಾಲನೆ- ಮತ್ತೆ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಹೆಚ್‍ಡಿಕೆ

  • ತನ್ನ ಬಗೆಗಿನ ಸಿನಿಮಾ ನಿರ್ಮಾಣಕ್ಕೆ ಬಿಎಸ್‍ವೈ ಹೇಳಿದ್ದು ಹೀಗೆ

    ತನ್ನ ಬಗೆಗಿನ ಸಿನಿಮಾ ನಿರ್ಮಾಣಕ್ಕೆ ಬಿಎಸ್‍ವೈ ಹೇಳಿದ್ದು ಹೀಗೆ

    ಕಲಬುರಗಿ: ಹೆಚ್‍ಡಿಕೆ ಜೀವನ ಚಿತ್ರ ಬೆನ್ನಲ್ಲೇ ಬಿಎಸ್‍ವೈ ನೈಜಜೀವನ ಚಿತ್ರ ನಿರ್ಮಾಣವಾಗಲಿದೆ ಅನ್ನೋ ಮಾತಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.

    ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‍ವೈ, ನನ್ನ ಬಗ್ಗೆ ಸಿನಿಮಾ ಮಾಡುವ ಅವಶ್ಯಕತೆ ಇಲ್ಲ. ಸಿನಿಮಾ ಮಾಡುವ ಬಗ್ಗೆ ನನ್ನನ್ನು ಅನೇಕರು ಒತ್ತಾಯಿಸಿದ್ದಾರೆ. ಆದ್ರೆ ಅವರಿಗೆ ನಾನು ಒಪ್ಪಿಗೆ ನೀಡಿಲ್ಲಾ. ಅದರ ಅವಶ್ಯಕತೆ ಕೂಡ ನನಗಿಲ್ಲಾ ಅಂತಾ ಸ್ಪಷ್ಟಪಡಿಸಿದ್ದಾರೆ.

    ರಾಜ್ಯದಲ್ಲಿ ಚುನಾವಣೆ ನಡೆಯುವ ಸಮಯ ಸಮೀಪಿಸುತ್ತಿದೆ. ಹೀಗಾಗಿ ಎಲ್ಲರೂ ಚುನಾವಣೆಯತ್ತ ಗಮನಹರಿಸೋಣ ಅಂತಾ ಹೇಳಿದ್ದಾರೆ.

    ಬಿಎಸ್ ಯಡಿಯೂರಪ್ಪ ಅವರು ಬೆಳ್ಳೆತೆರೆ ಮೇಲೆ ರಾರಾಜಿಸಲಿದ್ದಾರೆ. ಬಿಎಸ್ ಯಡಿಯೂರಪ್ಪ ಪಾತ್ರಕ್ಕೆ ನಟ ಉಪೇಂದ್ರ ಬಣ್ಣಹಚ್ಚೋ ಸಾಧ್ಯತೆಗಳಿವೆ. ರುದ್ರೇಶ್, ಜಿ. ಮರಿಸ್ವಾಮಿ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬರಲಿದೆ. ಬಿಎಸ್‍ವೈ ಚಿತ್ರಕ್ಕೆ ನಿರ್ದೇಶಕ ಎಂಎಸ್ ರಮೇಶ್ ಆಕ್ಷನ್ ಕಟ್ ಹೇಳಲಿದ್ದಾರೆ. ಯಡಿಯೂರಪ್ಪ ಅವರ ಅನುಮತಿಗಾಗಿ ನಿರ್ಮಾಪಕರು ಕಾಯ್ತಾ ಇದ್ದಾರೆ. ಬಿಎಸ್ ವೈ ಅನುಮತಿ ನೀಡಿದ ತಕ್ಷಣವೇ ಸಿನಿಮಾ ಶೂಟಿಂಗ್ ಆರಂಭವಾಗಲಿದೆ ಕಂಠೀರವ ಸ್ಟುಡಿಯೋ ಮಾಜಿ ಅಧ್ಯಕ್ಷ ರುದ್ರೇಶ್ ಹೇಳಿದ್ದರು. ಆದ್ರೆ ಇದೀಗ ಬಿಎಸ್ ವೈ ತನ್ನ ಜೀವನ ಚಿತ್ರಕ್ಕೆ ಅನುಮತಿಯಿಲ್ಲ ಅಂದಿದ್ದಾರೆ.