Tag: ಹೆಚ್ ಡಿ ಕುಮಾರಸ್ವಾಮಿ

  • ಎಚ್‍ಡಿಕೆ- ಅಂಬರೀಶ್ ಭೇಟಿ ವಿಷ್ಯ ನಂಗೆ ಗೊತ್ತಿಲ್ಲ: ಎಚ್.ಡಿ. ದೇವೇಗೌಡ

    ಎಚ್‍ಡಿಕೆ- ಅಂಬರೀಶ್ ಭೇಟಿ ವಿಷ್ಯ ನಂಗೆ ಗೊತ್ತಿಲ್ಲ: ಎಚ್.ಡಿ. ದೇವೇಗೌಡ

    ರಾಯಚೂರು: ಮಾಜಿ ಶಾಸಕ, ನಟ ರೆಬೆಲ್ ಸ್ಟಾರ್ ಅಂಬರೀಶ್ ಮನೆಗೆ ಕುಮಾರಸ್ವಾಮಿ ಭೇಟಿ ನೀಡಿದ್ದ ವಿಚಾರ ನನಗೆ ಗೊತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.

    ರಾಯಚೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಂಬರೀಶ್ ಮನೆಗೆ ಕುಮಾರಸ್ವಾಮಿ ಭೇಟಿ ನೀಡಿದ್ದ ವಿಚಾರ ನನಗೆ ಗೊತ್ತಿಲ್ಲ. ಅವರು ಹಳೆಯ ಸ್ನೇಹಿತರು, ಉತ್ತಮ ಒಡನಾಟ ಹೊಂದಿದ್ದಾರೆ. ಅವರು ಪಕ್ಷ ಸೇರುವ ಬಗ್ಗೆ ಚರ್ಚೆ ಆಗಿಲ್ಲ. ಕಾಂಗ್ರೆಸ್, ಬಿಜೆಪಿ ಯಾವ ಪಕ್ಷದಲ್ಲಿ ಇದ್ದರು ನಮ್ಮ ಜೊತೆ ಉತ್ತಮ ಸಂಬಂಧ ಹೊಂದಿದ್ದರು ಎಂದು ಹೆಚ್.ಡಿ. ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ.  ಇದನ್ನೂ ಓದಿ: ರೆಬೆಲ್ ಸ್ಟಾರ್ ಅಂಬರೀಶ್ ಭೇಟಿ ಬಗ್ಗೆ ಹೆಚ್‍ಡಿಕೆ ಪ್ರತಿಕ್ರಿಯೆ


    ಇದೇ ವೇಳೆ ನಾವು ಯಾರ ಪರವೂ ಇಲ್ಲ, ಜನರ ಪರ ಇದ್ದೇವೆ. ಮೋದಿ ಬಂದಾಗ ನಾವು ಬರಬಾರದೇ? ನಮ್ಮ ಕಾರ್ಯಕರ್ತರನ್ನು ಉದ್ದೇಶಿಸಿ ನಾವು, ಅವರ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಪ್ರಚಾರ ಮಾಡುತ್ತಾರೆ. ಯಾರಿಗೆ ಬಹುಮತ ಎಂಬುದನ್ನು ಜನ ನಿರ್ಧರಿಸುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಅಂಬಿ-ಹೆಚ್‍ಡಿಕೆ ಭೇಟಿ: ಪಾಪ ಮೀಟ್ ಆಗ್ಲಿ ಬಿಡಿ ಬೇಡ ಅಂದೋರು ಯಾರು?-ಸಿಎಂ

    ಈ ಬಗ್ಗೆ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಅಂಬರೀಶ್ ಅವರಿಗೆ ದೇವೇಗೌಡರು ಮತ್ತು ನಮ್ಮ ಬಗ್ಗೆ ಅಭಿಮಾನ ಇದೆ. ನಿನ್ನೆ ಭೇಟಿ ಮಾಡಿ ಚರ್ಚಿಸಿದ್ದೇನೆ. ನನ್ನನ್ನು ತಮ್ಮನಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಾರೆ. ಜನಹಿತಕ್ಕಾಗಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎನ್ನುವುದು ಅವರ ಅಭಿಲಾಷೆ. ರಾಜ್ಯದಲ್ಲಿಯ ರಾಜಕೀಯ ಆಗುಹೋಗು ಗಮನಿಸಿ ಸೂಕ್ತ ತೀರ್ಮಾನಕೈಗೊಳ್ಳುತ್ತಾರೆ ಎನ್ನುವ ಭರವಸೆ ಇದೆ. ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎನ್ನುವ ಭಾವನೆ ಅವರ ಮನಸ್ಸಿನಲ್ಲಿದೆ ಅಂತ ಹೇಳಿದ್ದರು.

     

  • ರೆಬೆಲ್ ಸ್ಟಾರ್ ಅಂಬರೀಶ್ ಭೇಟಿ ಬಗ್ಗೆ ಹೆಚ್‍ಡಿಕೆ ಪ್ರತಿಕ್ರಿಯೆ

    ರೆಬೆಲ್ ಸ್ಟಾರ್ ಅಂಬರೀಶ್ ಭೇಟಿ ಬಗ್ಗೆ ಹೆಚ್‍ಡಿಕೆ ಪ್ರತಿಕ್ರಿಯೆ

    ಹಾಸನ: ರೆಬೆಲ್ ಸ್ಟಾರ್ ಅಂಬರೀಶ್ ನಮ್ಮ ಪಕ್ಷದಲ್ಲಿದ್ದವರು. ಅವರ ಮೇಲೆ ಅಭಿಮಾನ ಇಟ್ಟಿರುವೆ. ಅವರ ರಾಜಕೀಯ ಆರಂಭದಲ್ಲಿ ನಮ್ಮ ಪಕ್ಷ ಅವರೊಂದಿಗೆ ಇತ್ತು ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಅವರಿಗೆ ದೇವೇಗೌಡರು ಮತ್ತು ನಮ್ಮ ಬಗ್ಗೆ ಅಭಿಮಾನ ಇದೆ. ನಿನ್ನೆ ಭೇಟಿ ಮಾಡಿ ಚರ್ಚಿಸಿದ್ದೇನೆ. ನನ್ನನ್ನು ತಮ್ಮನಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಾರೆ. ಜನಹಿತಕ್ಕಾಗಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎನ್ನುವುದು ಅವರ ಅಭಿಲಾಷೆ. ರಾಜ್ಯದಲ್ಲಿಯ ರಾಜಕೀಯ ಆಗುಹೋಗು ಗಮನಿಸಿ ಸೂಕ್ತ ತೀರ್ಮಾನಕೈಗೊಳ್ಳುತ್ತಾರೆ ಎನ್ನುವ ಭರವಸೆ ಇದೆ. ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎನ್ನುವ ಭಾವನೆ ಅವರ ಮನಸ್ಸಿನಲ್ಲಿದೆ ಅಂತ ಹೇಳಿದ್ರು. ಇದನ್ನೂ ಓದಿ: ಕಾಂಗ್ರೆಸ್ ನಿಂದ ದೂರ ಉಳಿದಿರೋ ಅಂಬರೀಶ್ ಜೆಡಿಎಸ್ ಸೇರ್ತಾರಾ?

    ಇದೇ ವೇಳೆ ಅಂಬರೀಶ್ ಭೇಟಿ ಕುರಿತು ಸಿಎಂ ವ್ಯಂಗ್ಯಕ್ಕೆ ಪ್ರತಿಕ್ರಿಯಿಸಿದ ಹೆಚ್‍ಡಿಕೆ, ಅವರಲ್ಲಿ ಈಗ ವ್ಯಂಗ್ಯ, ಕೋಪ, ಆಕ್ರೋಶ ಎಲ್ಲವೂ ಎದ್ದು ಕಾಣುತ್ತಿದೆ. ಜನ ಈಗಾಗಲೇ ಸಿದ್ದರಾಮಯ್ಯ ಬಗ್ಗೆ ತೀರ್ಮಾನ ಮಾಡಿದ್ದಾರೆ. ಅಂಬರೀಶ್ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಆದ್ರೆ 2007ರಲ್ಲಿ ಚಾಮುಂಡೇಶ್ವರಿ ಬೈ ಎಲೆಕ್ಷನ್‍ನಲ್ಲಿ ಸಿಎಂ ಪರ ಪ್ರಚಾರಕ್ಕೆ ಅಂಬರೀಶ್ ಹೋಗದಿದ್ದರೆ 10 ಸಾವಿರ ಮತಗಳಿಂದ ಸೋಲುತ್ತಿದ್ದರು. ಅಂಬರೀಶ್ ನಿಂದ ಸಿಎಂ ಚುನಾವಣೆಯಲ್ಲಿ ಮರುಜೀವ ಪಡೆದ್ರು. ಆದ್ರೆ ಅವರನ್ನು ಮಂತ್ರಿ ಸ್ಥಾನದಿಂದ ತೆಗೆದಿದ್ದು ಅವರಿಗೆ ನೋವಾಗಿದೆ. ಆ ಭಾವನೆ ಅವರಲ್ಲಿ ಇನ್ನೂ ಇದೆ. ನನ್ನ ಅಂಬರೀಶ್ ಭೇಟಿಗೆ ಸಿಎಂ ವ್ಯಂಗ್ಯಕ್ಕೆ ಮುಖ್ಯಮಂತ್ರಿ ತಕ್ಕದಾದ ಬೆಲೆ ತೆರಲಿದ್ದಾರೆ ಅಂತ ಸಿಎಂ ವಿರುದ್ಧ ಗುಡುಗಿದರು. ಇದನ್ನೂ ಓದಿ: ಅಂಬಿ-ಹೆಚ್‍ಡಿಕೆ ಭೇಟಿ: ಪಾಪ ಮೀಟ್ ಆಗ್ಲಿ ಬಿಡಿ ಬೇಡ ಅಂದೋರು ಯಾರು?-ಸಿಎಂ

  • ಇಂದು ಬಾಗಲಕೋಟೆಗೆ ಮೂವರು ಪ್ರಮುಖ ನಾಯಕರು ಭೇಟಿ

    ಇಂದು ಬಾಗಲಕೋಟೆಗೆ ಮೂವರು ಪ್ರಮುಖ ನಾಯಕರು ಭೇಟಿ

    ಬಾಗಲಕೋಟೆ: ಚುನಾವಣೆಯ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ಇಂದು ಜಿಲ್ಲೆಗೆ ಮೂರು ಜನ ಪ್ರಮುಖ ನಾಯಕರು ಭೇಟಿ ನೀಡಲಿದ್ದಾರೆ.

    ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಮುಧೋಳ ಮತ್ತು ತೇರದಾಳ ಕ್ಷೇತ್ರದ ಬನಹಟ್ಟಿಯಲ್ಲಿ ಯೋಗಿ ಆದಿತ್ಯನಾಥ್ ಪ್ರಚಾರ ನಡೆಸಲಿದ್ದಾರೆ.

    ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಆಗಮಿಸಲಿರುವ ಆದಿತ್ಯನಾಥ್, ಮಧ್ಯಾಹ್ನ ಸುಮಾರು 12.30ಕ್ಕೆ ಮುಧೋಳ ನಗರಕ್ಕೆ ಭೇಟಿ ನೀಡಲಿದ್ದಾರೆ. 12.30 ರಿಂದ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರ್.ಎಮ್.ಜೆ ಕಾಲೇಜ್ ವರೆಗೂ ರೋಡ್ ಶೋ ಮಾಡಲಿದ್ದಾರೆ. ನಂತರ 1.30 ಕ್ಕೆ ಆರ್.ಎಮ್.ಜೆ ಕಾಲೇಜು ಮೈದಾನದಲ್ಲಿ ಬಹಿರಂಗ ಪ್ರಚಾರ ಸಭೆ ನಡೆಸಲಿದ್ದು, ಮುಧೋಳ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪರ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮತಯಾಚನೆ ಮಾಡಲಿದ್ದಾರೆ.

    ಸಭೆಯ ಬಳಿಕ ಮಧೋಳದಿಂದ ತೇರದಾಳ ಮತಕ್ಷೇತ್ರ ಬನಹಟ್ಟಿ ಪಟ್ಟಣ ಎಸ್.ಆರ್.ಎ ಕಾಲೇಜು ಮೈದಾನದಲ್ಲಿ ಮಧ್ಯಾಹ್ನ ಸುಮಾರು 4 ಗಂಟೆಗೆ ಬಹಿರಂಗ ಪ್ರಚಾರ ಸಭೆ ನಡೆಸಲಿದ್ದಾರೆ. ತೇರದಾಳ ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ಪರ ಪ್ರಚಾರ ಭಾಷಣ ಮಾಡಲಿದ್ದಾರೆ.

    ಸಂಜೆ  ಕೇಂದ್ರ ಸಚಿವೆ ಸ್ಮೃತಿ ಇರಾನಿ ಬದಾಮಿ ಕ್ಷೇತ್ರದ ಗುಳೇದಗುಡ್ಡ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀ ರಾಮುಲು ಪರ ಪ್ರಚಾರ ಸಭೆ ನಡೆಸಲಿದ್ದಾರೆ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕೂಡ ಬಾಗಲಕೋಟೆ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಹುನಗುಂದ ಪಕ್ಷೇತರ ಅಭ್ಯರ್ಥಿ ಎಸ್.ಆರ್ ನವಲಿಹಿರೇಮಠ ಪರ ಹುನಗುಂದ ಪಟ್ಟಣದಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ. ಬಳಿಕ ಸಂಜೆ 6 ಗಂಟೆಗೆ ಬದಾಮಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಹನುಮಂತ ಮಾವಿನಮರದ ಪರ ರೋಡ್ ಶೋ ಪ್ರಚಾರ ಸಭೆ ನಡೆಸಲಿದ್ದಾರೆ.

  • ಸಿಎಂ ಹೇಳಿಕೆ 9ನೇ ಅದ್ಭುತ, ಸಿದ್ದರಾಮಯ್ಯಗೆ ಚಳಿ ಜ್ವರ ಶುರುವಾಗಿದೆ: ಎಚ್‍ಡಿಕೆ

    ಸಿಎಂ ಹೇಳಿಕೆ 9ನೇ ಅದ್ಭುತ, ಸಿದ್ದರಾಮಯ್ಯಗೆ ಚಳಿ ಜ್ವರ ಶುರುವಾಗಿದೆ: ಎಚ್‍ಡಿಕೆ

    ಚಿಕ್ಕಮಗಳೂರು: ಅಮಿತ್ ಶಾ ಕುಮಾರಸ್ವಾಮಿ ಭೇಟಿಯಾಗಿದ್ದಾರೆ ಎನ್ನುವ ಸಿಎಂ ಹೇಳಿಕೆ ಒಂಭತ್ತನೇ ಅದ್ಭುತ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ವ್ಯಂಗ್ಯವಾಡಿದ್ದಾರೆ.

    ಸಿದ್ದರಾಮಯ್ಯ ಅವರಿಗೆ ಚಳಿ ಜ್ವರ ಶುರುವಾಗಿದೆ. ಜೆಡಿಎಸ್ ಬಗ್ಗೆ ಮಾತನಾಡೋದಕ್ಕೆ ಅವರ ಬಳಿ ವಿಷಯವಿಲ್ಲ. ಅಮಿತ್ ಶಾ ಕಟ್ಟಿಕೊಂಡು ನನಗೇನು ಆಗಬೇಕು. ಅವರು ಹೇಳಿರುವ ಸಮಯದಲ್ಲಿ ನಾನು ಮಹಾಲಕ್ಷ್ಮಿ ಲೇಔಟ್ ನಲ್ಲಿ ಪ್ರಚಾರ ಮಾಡುತ್ತಿದ್ದೆ. ವಿಶೇಷ ವಿಮಾನದಲ್ಲಿ ದೆಹಲಿಗೆ ಹೋಗಿ ವಾಪಸ್ ಬಂದಿದ್ದಾರೆ ಎಂಬುದು ಸುಳ್ಳು ಸುದ್ದಿ ಎಂದು ಸ್ಪಷ್ಟೀಕರಣಕೊಟ್ಟರು. ಇದನ್ನೂ ಓದಿ:ನನಗೆ ಮರಾಠಿ ಬರಲ್ಲ ಕ್ಷಮಿಸಿ ಅನ್ನೋದ್ರಲ್ಲಿ ತಪ್ಪೇನಿದೆ: ಸಿಎಂ ಪ್ರಶ್ನೆ

    ಕೊಪ್ಪದಲ್ಲಿ ಇಂದು ಭಾಷಣ ಮಾಡುತ್ತಿರುವ ವೇಳೆ ಆಜಾನ್ ಧ್ವನಿ ಕೇಳಿದ ಹಿನ್ನೆಲೆಯಲ್ಲಿ ಎಚ್‍ಡಿಕೆ ಭಾಷಣ ನಿಲ್ಲಿಸಿದರು. ಆಜಾನ್ ಮುಗಿದ ಎರಡು ನಿಮಿಷದ ಬಳಿಕ ಎಚ್‍ಡಿಕೆ ಜೆಡಿಎಸ್ ಅಭ್ಯರ್ಥಿ ವೆಂಕಟೇಶ್ ಪರ ಪ್ರಚಾರ ಭಾಷಣ ಮಾಡಿದರು.

  • ಕುಮಾರಸ್ವಾಮಿ ಕನಸು ಕಾಣಲಿ ತಪ್ಪೇನಿಲ್ಲ, ಹಾಕಿರೋದು ಮಾತ್ರ 50 ರಿಂದ 60 ಸೀಟ್-ಡಿಕೆಶಿ ವ್ಯಂಗ್ಯ

    ಕುಮಾರಸ್ವಾಮಿ ಕನಸು ಕಾಣಲಿ ತಪ್ಪೇನಿಲ್ಲ, ಹಾಕಿರೋದು ಮಾತ್ರ 50 ರಿಂದ 60 ಸೀಟ್-ಡಿಕೆಶಿ ವ್ಯಂಗ್ಯ

    ಹಾಸನ/ರಾಮನಗರ: ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಕನಸು ಕಾಣೋದರಲ್ಲಿ ತಪ್ಪೇನಿಲ್ಲ. ಆದ್ರೆ ಚುನಾವಣೆ ಹಾಕಿರೋದು 50 ರಿಂದ 60 ಸೀಟ್ ಮಾತ್ರ ಅಂತಾ ಇಂಧನ ಸಚಿವ ಡಿ.ಕೆ.ಶಿವಕುಮಾರ್ ವ್ಯಂಗ್ಯ ಮಾಡಿದ್ದಾರೆ.

    ಹಾಸನ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ 50 ರಿಂದ 60 ಸ್ವಂತ ಅಭ್ಯರ್ಥಿಗಳನ್ನು ಮಾತ್ರ ಕಣ್ಕಕೀಳಿಸಿದೆ. ಇನ್ನು ಉಳಿದಂತೆ ಕಾಂಗ್ರೆಸ್ ಹಾಗು ಬಿಜೆಪಿ ಟಿಕೆಟ್ ವಂಚಿತ ನಾಯಕರಿಗೆ ಜೆಡಿಎಸ್ ಟಿಕೆಟ್ ನೀಡಿದೆ. ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿ ಹಾಕಬೇಕೆಂದು ಹಾಕಿದೆ. ಮಾತಿಗೋಸ್ಕರ ನಾನು ರೈತನ ಮಗ, ಮಣ್ಣಿನ ಮಗ ಅಂತಾ ಹೇಳಿ ಕೊಳ್ಳಬಾರದು. ರಾಜ್ಯದ ರೈತರಿಗಾಗಿ ಕೆಲಸ ಮಾಡಬೇಕು. ಕಳೆದ 5 ವರ್ಷಗಳಲ್ಲಿ ಕಾಂಗ್ರೆಸ್ ಹಲವು ರೈತಪರ ಯೋಜನೆಗಳನ್ನು ಜಾರಿಗೆ ತಂದಿದೆ ಅಂತಾ ಹೇಳಿದ್ರು.

    ಇತ್ತ ರಾಮನಗರದ ಚನ್ನಪಟ್ಟಣದಲ್ಲಿ ಅಮಿತ್ ಶಾ ಜೊತೆಗೆ ಹೆಚ್‍ಡಿಕೆ ಒಂದೇ ವಿಮಾನದಲ್ಲಿ ಪ್ರಯಾಣಿಸಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಅಮಿತ್ ಶಾ ಜೊತೆಗಿರುವ ದಾಖಲೆಗಳಿದ್ರೆ ಬಿಡುಗಡೆ ಮಾಡಲಿ. ಅವರಿಗೆ ಜವಬ್ದಾರಿ ಏನಾದ್ರೂ ಇದ್ರೆ ಈ ರೀತಿ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಲಿ. ಅಲ್ಲದೇ ಅಮಿತ್ ಶಾ ಭೇಟಿ ಮಾಡಲು ನನಗೆ ಏನು ಸಂಬಂಧ ಅವರೇನೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾ ಪ್ರವಾಸ ಮಾಡೋಕೆ ಅವರ ಜೊತೆಗೆ ವಿಮಾನದಲ್ಲಿ ಎಲ್ಲಿಗೆ ಹೋಗಲು ಸಾಧ್ಯ ಎಂದು ಪ್ರಶ್ನಿಸಿದ್ರು. ಅಲ್ಲದೇ ಹೀಗೆ ಹೇಳಿದ್ರೆ ಸಿಎಂ ಕುಡಿದು ಮಾತನಾಡುತ್ತಿದ್ದಾರೆ ಅಂತಾ ಜನ ಕಾಮೆಂಟ್ಸ್ ಮಾಡ್ತಾರೆ ಎಂದು ಕಿಡಿಕಾರಿದ್ರು.

  • ರಾಹುಲ್ ಗಾಂಧಿಗೆ ಪೊಲಿಟಿಕಲ್ ಮೆಚ್ಯೂರಿಟಿ ಇಲ್ಲ, ಯಾರೋ ಬರೆದುಕೊಟ್ಟಿದ್ದನ್ನ ಓದ್ತಾರೆ: ಹೆಚ್‍ಡಿಕೆ

    ರಾಹುಲ್ ಗಾಂಧಿಗೆ ಪೊಲಿಟಿಕಲ್ ಮೆಚ್ಯೂರಿಟಿ ಇಲ್ಲ, ಯಾರೋ ಬರೆದುಕೊಟ್ಟಿದ್ದನ್ನ ಓದ್ತಾರೆ: ಹೆಚ್‍ಡಿಕೆ

    ಮೈಸೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪೊಲಿಟಿಕಲ್ ಮೆಚ್ಯೂರಿಟಿ ಇಲ್ಲ. ಯಾರೋ ಬರೆದುಕೊಟ್ಟಿದ್ದನ್ನು ಬಂದು ಓದಿ ಹೋಗ್ತಾರೆ ಅಂತಾ ಜೆಡಿಎಸ್ ರಾಜ್ಯಾಧ್ಯಕ್ಷ ಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ಮೈಸೂರು ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, ಮುಂದಿನ ಸರ್ಕಾರ ಯಾರದು ಬರುತ್ತೆ ಅಂತಾ ನಮಗೂ ಮತ್ತು ನಿಮಗೂ ಗೊತ್ತಿಲ್ಲ. ಚುನಾವಣೆಗಾಗಿ ಸಿಎಂ ಈಗಾಗಲೇ ಬಹಳಷ್ಟು ಟೆಂಡರ್‍ದಾರರಿಂದ ಹಣ ಸಂಗ್ರಹಿಸಿದ್ದಾರೆ. ಒಂದು ವೇಳೆ ಅವರೇ ಅಧಿಕಾರಕ್ಕೆ ಬಂದರೂ ನಿರ್ವಹಣೆ ಮಾಡದಷ್ಟೂ ಆಡಳಿತ ವ್ಯವಸ್ಥೆಯನ್ನು ಕೆಡಿಸಿದ್ದಾರೆ. ಯಾರೇ ಅಧಿಕಾರಕ್ಕೆ ಬಂದರೂ ಆಡಳಿತ ನಡೆಸುವುದಕ್ಕೆ ಆಗದಷ್ಟು ವ್ಯವಸ್ಥೆ ಕೆಟ್ಟಿದೆ ಅಂತಾ ಆರೋಪಿಸಿದ್ರು.

    ಸಿದ್ದರಾಮಯ್ಯ ಅವರದು ನುಡಿದಂತೆ ನಡೆದ ಸರ್ಕಾರ ಅಲ್ಲ, ಕಾಂಗ್ರೆಸ್‍ನದ್ದು ನುಡಿದಂತೆ ನಡೆಯದ ಸರ್ಕಾರ. ಆಡಳಿತವಾಧಿಯಲ್ಲಿ ಎಷ್ಟು ಲೂಟಿ ಮಾಡಬೇಕೆಂದು ಪ್ಲಾನ್ ಮಾಡಿದ್ರೂ ಅಷ್ಟು ಹಣವನ್ನು ದೋಚಿದ್ದಾರೆ ಅಂತಾ ಕೈ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು.

  • ಸಿದ್ದರಾಮಯ್ಯರಿಗೆ ಬನಶಂಕರಿ ಆಶೀರ್ವಾದ ದಕ್ಕಲ್ಲ ಅಂದ್ರು ಹೆಚ್‍ಡಿಕೆ

    ಸಿದ್ದರಾಮಯ್ಯರಿಗೆ ಬನಶಂಕರಿ ಆಶೀರ್ವಾದ ದಕ್ಕಲ್ಲ ಅಂದ್ರು ಹೆಚ್‍ಡಿಕೆ

    ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಆಶೀರ್ವಾದ ಸಿಕ್ಕಿಲ್ಲ. ಆದ್ದರಿಂದ ಬನಶಂಕರಿ ದೇವಿಯ ಆಶೀರ್ವಾದ ಪಡೆಯಲು ಬರುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಲೇವಡಿ ಮಾಡಿದರು.

    ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಬನಶಂಕರಿ ಆಶೀರ್ವಾದ ಪಡೆಯೋಕೆ ಬರುತ್ತಿದ್ದಾರೆ. ಆದರೆ ಬನಶಂಕರಿ ದೇವಿ ಆಶೀರ್ವಾದ ಕೂಡ ಸಿದ್ದರಾಮಯ್ಯಗೆ ದಕ್ಕೋದಿಲ್ಲ. ಬಾದಾಮಿ ಮತ್ತು ಚಾಮುಂಡೇಶ್ವರಿ ಎರಡು ಕ್ಷೇತ್ರದಲ್ಲಿ ಸಿಎಂಗೆ ಸೋಲು ಖಚಿತ ಎಂದರು.

    ಬಿಎಸ್ ವೈ ಮತ್ತು ಸಿದ್ದರಾಮಯ್ಯ ಮುಂದಿನ ಸಿಎಂ ನಾನೇ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳುತ್ತಿದ್ದಾರೆ. ನಾನು ಸಿಎಂ ಆಗುತ್ತೇನೆ ಎಂದು ಎಲ್ಲೂ ಹೇಳಿಲ್ಲ. ನಿಮ್ಮ ಸಮಸ್ಯೆಗೆ ಸ್ಪಂದಿಸಲು ನನ್ನ ಸಿಎಂ ಮಾಡಿ ಜನರ ಮುಂದೆ ಮನವಿ ಮಾಡಿದ್ದೇನೆ. ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದೇನೆ ಎಂದರು.

    ನಮ್ಮ ಅಭ್ಯರ್ಥಿ ಹನುಮಂತ ಮಾವಿನಮರದ ಜನಸಾಮಾನ್ಯರ ಮನಸ್ಸಿನಲ್ಲಿದ್ದಾರೆ ಎಂದ ಹೆಚ್ ಡಿ ಕೆ, ಕಾಂಗ್ರೆಸ್, ಬಿಜೆಪಿಯಲ್ಲಿ ಯಾರೆ ಬಂದರೂ ನಮ್ಮ ಅಭ್ಯರ್ಥಿ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನು ಬಾದಾಮಿ ಜೆಡಿಎಸ್ ಅಭ್ಯರ್ಥಿ ಹನುಮಂತ ಮಾವಿನಮರದ ಕೆಂಪಯ್ಯ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಹೆಚ್‍ಡಿಕೆ, ನಮ್ಮ ಅಭ್ಯರ್ಥಿ ಕೆಂಪಯ್ಯ ಜೊತೆ ಸಂಪರ್ಕ ಹೊಂದಿಲ್ಲ. ಹಾಗೇನಾದರೂ ಸಂಪರ್ಕ ಹೊಂದಿದ್ದೆ ಆದರೆ ಅದು ಸಿದ್ದರಾಮಯ್ಯನವರನ್ನು ಮುಗಿಸೋದಕ್ಕೆ ಕೆಂಪಯ್ಯ ಮಾಡಿದ ಪ್ಲಾನ್ ಆಗಿರಬಹುದು. ಕೆಂಪಯ್ಯ ಬಹಳ ಜನರ ಕಥೆ ಮುಗಿಸಿದ್ದಾರೆ ಎಂದು ಖಾರವಾಗಿ ನುಡಿದ್ರು.

  • ಅವರಪ್ಪನ ಮೇಲೆ ಆಣೆ ಹಾಕಲ್ಲ ಅಂತಾರೆ, ನಮ್ಮಪ್ಪನಾಣೆ ಜೆಡಿಎಸ್ ಅಧಿಕಾರಕ್ಕೆ ಬರಲ್ಲ: ಜಮೀರ್ ಅಹಮದ್

    ಅವರಪ್ಪನ ಮೇಲೆ ಆಣೆ ಹಾಕಲ್ಲ ಅಂತಾರೆ, ನಮ್ಮಪ್ಪನಾಣೆ ಜೆಡಿಎಸ್ ಅಧಿಕಾರಕ್ಕೆ ಬರಲ್ಲ: ಜಮೀರ್ ಅಹಮದ್

    ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ಅವರ ತಂದೆ ಮೇಲೆ ಆಣೆ ಹಾಕದೆ, ನಮ್ಮ ತಂದೆ ಮೇಲೆ ಯಾಕೆ ಆಣೆ ಮಾಡ್ತಾರೆ ಅಂತಾ ಹೆಚ್.ಡಿ.ಕುಮಾರಸ್ವಾಮಿ ಹೇಳ್ತಾರೆ. ತಗೊಳ್ಳಿ ಇಂದು ನಮ್ಮಪ್ಪಾಣೆ ಈ ಬಾರಿ ಕರ್ನಾಟಕದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲ್ಲ ಅಂತಾ ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದ ಜಮೀರ್ ಅಹಮದ್ ಭವಿಷ್ಯ ನುಡಿದಿದ್ದಾರೆ.

    ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಜಮೀರ್ ಅಹಮದ್, ಜೆಡಿಎಸ್ ಪಕ್ಷ ಸೆಕ್ಯೂಲರ್ ಅಲ್ಲವೇ ಅಲ್ಲ. ಕುಮಾರಸ್ವಾಮಿ ಅವರಲ್ಲಿ ಶೇ.10 ರಷ್ಟು ಜಾತ್ಯಾತೀತ ಅಂಶಗಳಿಲ್ಲ. ಈ ಚುನಾವಣೆಯಲ್ಲಿ ಏನಾದ್ರೂ ಜೆಡಿಎಸ್ 115 ಸೀಟ್ ಬಂದ್ರೆ, ನಮ್ಮ ತಾಯಾಣೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುವುದರ ಜೊತೆಗೆ ರಾಜ್ಯ ಬಿಟ್ಟು ಹೋಗ್ತೇನೆ ಅಂತ ಹೇಳಿದ್ದಾರೆ.

    ನಾವು ಈ ಬಾರಿ 20 ರಿಂದ 30 ಕ್ಷೇತಗಳಲ್ಲಿ ಗೆಲವು ಸಾಧಿಸುತ್ತೇವೆ ಎಂಬುವುದು ಕುಮಾರಸ್ವಾಮಿ ಅವರಿಗೂ ಗೊತ್ತಿದೆ. ಸಿದ್ದರಾಮಯ್ಯ ಯಾವಾಗಲೂ ಹುಲಿ. ಅವರಿಗೆ ಹಿಂದೆ ಹೋಗುವುದು ಗೊತ್ತಿಲ್ಲ. ಭಯ ಬಂದಿರೋದು ಕುಮಾರಸ್ವಾಮಿ ಅವರಿಗೆ, ಹೀಗಾಗಿ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ ಅಂತಾ ವ್ಯಂಗ್ಯ ಮಾಡಿದರು.