Tag: ಹೆಚ್ ಡಿ ಕುಮಾರಸ್ವಾಮಿ

  • ಮಗ ನಿಖಿಲ್ ಜೊತೆ ಸಿಂಗಾಪುರಕ್ಕೆ ತೆರಳಿದ ಹೆಚ್‍ಡಿ ಕುಮಾರಸ್ವಾಮಿ!

    ಮಗ ನಿಖಿಲ್ ಜೊತೆ ಸಿಂಗಾಪುರಕ್ಕೆ ತೆರಳಿದ ಹೆಚ್‍ಡಿ ಕುಮಾರಸ್ವಾಮಿ!

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ಮುಗಿದ ಬೆನ್ನಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಸಿಂಗಾಪುರಕ್ಕೆ ತೆರಳಿದ್ದಾರೆ.

    ಮಗ ನಿಖಿಲ್ ಜೊತೆ ಕುಮಾರಸ್ವಾಮಿ ಅವರು ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

    ರಾಜ್ಯ ಚುನಾವಣೆಯ ಹಿನ್ನೆಲೆಯಲ್ಲಿ ಹೆಚ್ ಡಿಕೆ ಅವರು ಅವಿರತವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಹಗಲು, ರಾತ್ರಿ ಎನ್ನದೇ ದಣಿವರಿಯದಂತೆ ಓಡಾಡಿದ್ದರು. ಹೀಗಾಗಿ ಪ್ರಚಾರದ ಕೊನೆ ದಿನಗಳಲ್ಲಿ ಸುಸ್ತಾಗಿದ್ರು. ಹೀಗಾಗಿ ತನ್ನ ಮಗನ ಜೊತೆ ಚಿಕಿತ್ಸೆಗೆಂದು ಸಿಂಗಾಪುರಕ್ಕೆ ತೆರಳಿದ್ದಾರೆ.

    ಅಪ್ಪ- ಮಗ ನಾಳೆ ರಾತ್ರಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • ‘ಜನತಾ ಪ್ರಣಾಳಿಕೆ, ಜನರದ್ದೇ ಆಳ್ವಿಕೆ’ ಅನ್ನೋ ಹೆಸರಿನಲ್ಲಿ ಜೆಡಿಎಸ್ ಪ್ರಣಾಳಿಕೆ ಬಿಡುಗಡೆ

    ‘ಜನತಾ ಪ್ರಣಾಳಿಕೆ, ಜನರದ್ದೇ ಆಳ್ವಿಕೆ’ ಅನ್ನೋ ಹೆಸರಿನಲ್ಲಿ ಜೆಡಿಎಸ್ ಪ್ರಣಾಳಿಕೆ ಬಿಡುಗಡೆ

    ಬೆಂಗಳೂರು: ಕರ್ನಾಟಕದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ಎಲ್ಲ ಪಕ್ಷಗಳು ತಾವು ಗೆದ್ದರೆ ತಮ್ಮ ಮುಂದಿನ ಐದು ವರ್ಷಗಳಲ್ಲಿ ಮಾಡುವ ಕೆಲಸಗಳನ್ನು ಪ್ರಣಾಳಿಕೆಯ ರೂಪದಲ್ಲಿ ನೀಡುತ್ತಿವೆ. ಈಗಾಗಲೇ ರಾಷ್ಟ್ರೀಯ ಪಕ್ಷಗಳು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದವು. ಇಂದು ಪ್ರಾದೇಶಿಕ ಪಕ್ಷ ಜೆಡಿಎಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

    ನಗರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಪಕ್ಷದ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿದ್ರು. ‘ಜನತಾ ಪ್ರಣಾಳಿಕೆ, ಜನರದ್ದೇ ಆಳ್ವಿಕೆ’ ಅನ್ನೋ ಹೆಸರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಚುನಾವಣೆಯಲ್ಲಿ ಗೆದ್ದ ನಂತರವೂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮತ್ತೆ ಪ್ರಾರಂಭಿಸಲಾಗುವುದು ಅಂತಾ ತಿಳಿಸಿದ್ದಾರೆ.

    ಪ್ರಣಾಳಿಕೆಯ ಪ್ರಮುಖಾಂಶಗಳು:
    – ಡಾ.ವಿಷ್ಣುವರ್ಧನ್ ಸ್ಥಳ ವಿವಾದ ಬಗೆಹರಿಸಲು ಒತ್ತು
    – ರೈತರ ರಾಷ್ಟ್ರೀಕೃತ, ಸಹಕಾರಿ ಸಂಘಗಳ ಸಾಲ ಸಂಪೂರ್ಣ ಮನ್ನಾ
    – 65 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ 6 ಸಾವಿರ ಮಾಸಾಶನ
    – ಲೋಕಾಯುಕ್ತ ಬಲವರ್ಧನೆ, ಎಸಿಬಿ ನಿರ್ಮೂಲನೆ
    – ಲೋಕಾಯುಕ್ತಕ್ಕೆ ಪ್ರತ್ಯೇಕ ಪೊಲೀಸ್ ವ್ಯವಸ್ಥೆ
    – ಮಾಗಡಿಯಲ್ಲಿ ಕೆಂಪೇಗೌಡ ವಿವಿ ಸ್ಥಾಪನೆ
    – ಗ್ರಾಮೀಣ ಪ್ರದೇಶ ಯುವಕರಿಗೆ ಮಾಸಿಕ 7-8 ಸಾವಿರ ವೇತನ ನೀಡಿ ಸರ್ಕಾರಿ ಜಮೀನುಗಳಲ್ಲಿ ಅರಣ್ಯ ಬೆಳೆಸುವ ಜವಾಬ್ದಾರಿ
    – ಬಡ ಮಹಿಳೆಯರಿಗೆ 2 ಸಾವಿರ ಕುಟುಂಬ ನಿರ್ವಹಣೆ ವೆಚ್ಚ ನೀಡಿಕೆ
    – ರೈತರ ಸಮಸ್ಯೆ ಆಲಿಸಲು ಪ್ರತಿ ತಿಂಗಳು ವಿಧಾನಸೌಧದಲ್ಲಿ ರೈತರ ಜೊತೆ ಸಂವಾದ
    – ಹೆಣ್ಣು ಮಕ್ಕಳಿಗೆ ಸ್ನಾತಕೋತ್ತರ ಪದವಿವರೆಗೂ ಉಚಿತ ಶಿಕ್ಷಣ
    – ರೇಷ್ಮೆ, ಕಬ್ಬು, ಅಡಿಕೆ ಸೇರಿದಂತೆ ಇನ್ನಿತರ ಬೆಳೆಗಾರರ ಅಭಿವೃದ್ಧಿಗೆ ಯೋಜನೆ
    – ಉದ್ಯೋಗ ತರಬೇತಿ ನೀಡಲು ವಿಶೇಷ ವಿಶ್ವವಿದ್ಯಾಲಯ ಸ್ಥಾಪನೆ
    – ವಕೀಲರ ಸಂಘಕ್ಕೆ 100 ಕೋಟಿ ಬಿಡುಗಡೆ. ವಕೀಲರಿಗೆ 5 ಸಾವಿರ ಸ್ಟೇ ಫಂಡ್
    – ಸರ್ಕಾರಿ ಶಾಲೆಗಳು ಮೇಲ್ದರ್ಜೆಗೆ, ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿಗೆ ಮುಕ್ತಿ