Tag: ಹೆಚ್‌ಪಿ ಸ್ವರೂಪ್

  • ನನಗೆ ಟಿಕೆಟ್ ಸಿಗೋ ವಿಶ್ವಾಸವಿದೆ, ಯಾರಿಗೆ ಸಿಕ್ಕಿದ್ರೂ ಒಟ್ಟಾಗಿ ಕೆಲಸ ಮಾಡ್ತೀವಿ: ಸ್ವರೂಪ್

    ನನಗೆ ಟಿಕೆಟ್ ಸಿಗೋ ವಿಶ್ವಾಸವಿದೆ, ಯಾರಿಗೆ ಸಿಕ್ಕಿದ್ರೂ ಒಟ್ಟಾಗಿ ಕೆಲಸ ಮಾಡ್ತೀವಿ: ಸ್ವರೂಪ್

    ಹಾಸನ: ನಮ್ಮ ನಾಯಕರಾದ ದೇವೇಗೌಡರು, ರೇವಣ್ಣ, ಕುಮಾರಣ್ಣ ಹಾಗೂ ಇಬ್ರಾಹಿಂ ಸಾಹೇಬರು ಸೇರಿ 2ನೇ ಪಟ್ಟಿ ಘೋಷಣೆ ಮಾಡುತ್ತಾರೆ. ಅಂತಿಮವಾಗಿ ಯಾರಿಗೆ ಟಿಕೆಟ್ ನೀಡಿದರೂ ನಾವೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡ್ತೇವೆ ಎಂದು ಟಿಕೆಟ್ ಆಕಾಂಕ್ಷಿ ಹೆಚ್‌ಪಿ ಸ್ವರೂಪ್ ಪ್ರಕಾಶ್ (HP Swaroop) ಹೇಳಿದ್ದಾರೆ.

    ಸೋಮವಾರ ಅಭಿಮಾನಿಗಳೊಂದಿಗೆ ತಮ್ಮ 40ನೇ ಹುಟ್ಟು ಹಬ್ಬ ಆಚರಿಸಿಕೊಂಡು ಮಾತನಾಡಿದ ಅವರು, ಹಾಸನದಲ್ಲಿ (Hassana) ನೂರಕ್ಕೆ ನೂರರಷ್ಟು ಜೆಡಿಎಸ್ (JDS) ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ. ಹಾಸನದಲ್ಲಿ ಈ ಬಾರಿ ಜೆಡಿಎಸ್ ಗೆಲುವು ಶತಸಿದ್ಧ. ಹಿರಿಯರೆಲ್ಲಾ ಸೇರಿ ಅಂತಿಮವಾಗಿ ಯಾರು ಅಭ್ಯರ್ಥಿ ಎಂದು ಘೋಷಣೆ ಮಾಡುತ್ತಾರೋ ಅವರಿಗೆ ನಾವೆಲ್ಲಾ ಕೆಲಸ ಮಾಡುತ್ತೇವೆ ಎಂದು ಹೇಳಿದರು.

    ಕುಮಾರಸ್ವಾಮಿ (HD Kumaraswamy) ಅವರ ಹೇಳಿಕೆಯನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಸಾಮಾನ್ಯ ಕಾರ್ಯಕರ್ತ ಎಂದು ಹೇಳಿದ್ದು, ಯಾರಿಗೆ ಅಂತಿಮವಾಗಿ ಟಿಕೆಟ್ ಕೊಡುತ್ತಾರೆ ನೋಡೋಣ. ಇನ್ನೆರಡು ದಿನಗಳಲ್ಲಿ ಬಹುತೇಕ 2ನೇ ಪಟ್ಟಿ ಬಿಡುಗಡೆ ಆಗುತ್ತದೆ. ಯಾರು ಅಭ್ಯರ್ಥಿ ಎಂದು ಅದರಲ್ಲಿ ಗೊತ್ತಾಗಲಿದೆ ಎಂದು ಹೇಳಿದರು.

    ಖಂಡಿತವಾಗಿಯೂ ನಾನು ಆಕಾಂಕ್ಷಿಯಾಗಿದ್ದು ಟಿಕೆಟ್ ಸಿಗುವ ವಿಶ್ವಾಸವಿದೆ. ಪಕ್ಷದ ಕಾರ್ಯಕರ್ತರು, ಸ್ನೇಹಿತರು ಒಗ್ಗಟ್ಟಿನಿಂದ ಕೆಲಸ ಮಾಡಲು ಕಾತರದಿಂದ ಕಾಯುತ್ತಾ ಇದ್ದೇವೆ. ಚುನಾವಣೆ ಎಂದ ಮೇಲೆ ಎಲ್ಲರನ್ನೂ ಒಗ್ಗೂಡಿಸಿ, ಒಗ್ಗಟ್ಟಿನಿಂದ ಹೋದರೆ ಮಾತ್ರ ಗೆಲುವು ಸಾಧಿಸಲು ಸಾಧ್ಯ. ಇಂದು ಕೂಡಾ ಹಾಸನಕ್ಕೆ ನಮ್ಮ ಪಕ್ಷದಿಂದ ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲಿಸುವ ಕೆಲಸ ಮಾಡಲು ಎಲ್ಲಾ ಕಾರ್ಯಕರ್ತರು ಕಾಯುತ್ತಾ ಇದ್ದಾರೆ ಎಂದು ನುಡಿದರು. ಇದನ್ನೂ ಓದಿ: ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆ ಮಾಡಬೇಕು ಎಂಬುದು ಕಾರ್ಯಕರ್ತರ ಅಪೇಕ್ಷೆ : ಬಿ.ವೈ ರಾಘವೇಂದ್ರ

    ಟಿಕೆಟ್ ವಿಚಾರವಾಗಿ ಯಾರೂ ನನ್ನ ಜೊತೆ ಚರ್ಚೆ ಮಾಡಿಲ್ಲ. ನಾವು ಪ್ರಚಾರ ಮಾಡುತ್ತಾ ಇದ್ದೇವೆ. ಮಾಧ್ಯಮದವರು ಪ್ರಚಾರ ಮಾಡುತ್ತಿದ್ದಾರೆ. ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ಕ್ಷೇತ್ರದಲ್ಲಿ ಓಡಾಡಿದ ನಂತರ ನಗರದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದೇವೆ. ಇಲ್ಲಿ ವಿರುದ್ಧ ಪ್ರಶ್ನೆ ಉದ್ಭವವಾಗಲ್ಲ. ರೇವಣ್ಣ ಸಾಹೇಬರು ಯಾರಿಗೆ ಟಿಕೆಟ್ ಘೋಷಣೆ ಮಾಡಿದರೂ ನಾವೆಲ್ಲಾ ಗೆಲ್ಲಿಸುವ ಕೆಲಸ ಮಾಡುತ್ತೇವೆ ಎಂದರು.

    ಇದಕ್ಕೂ ಮುನ್ನ ಸ್ವರೂಪ್ ತಮ್ಮ ನೂರಾರು ಅಭಿಮಾನಿಗಳಿಂದ ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಹೇಮಾವತಿ ನಗರದಲ್ಲಿರುವ ಸ್ವರೂಪ್ ಅವರ ನಿವಾಸದ ಬಳಿ ಜಮಾಯಿಸಿದ ಅಭಿಮಾನಿಗಳು ಅವರಿಗೆ ಶುಭಾಶಯ ಕೋರಿದರು. ಅಭಿಮಾನಿಗಳು ತಂದಿದ್ದ ಹತ್ತಾರು ಕೇಕ್‌ಗಳನ್ನು ಕತ್ತರಿಸಿ ಎಲ್ಲರಿಗೂ ಸ್ವರೂಪ್ ಸಿಹಿ ತಿನ್ನಿಸಿದರು. ನಂತರ ನೀರುವಾಗಿಲು ಆಂಜನೇಯ ಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ಸಚಿವೆ ಶಶಿಕಲಾ ಜೊಲ್ಲೆಗೆ ಗ್ರಾಮಸ್ಥರಿಂದ ಕ್ಲಾಸ್

  • ಕ್ಲೈಮ್ಯಾಕ್ಸ್ ಹಂತ ತಲುಪಿದ ಹಾಸನ ಟಿಕೆಟ್ ದಂಗಲ್ – ಇಂದು ಹೆಚ್‌ಡಿಕೆ, ರೇವಣ್ಣ ಸಂಧಾನ

    ಕ್ಲೈಮ್ಯಾಕ್ಸ್ ಹಂತ ತಲುಪಿದ ಹಾಸನ ಟಿಕೆಟ್ ದಂಗಲ್ – ಇಂದು ಹೆಚ್‌ಡಿಕೆ, ರೇವಣ್ಣ ಸಂಧಾನ

    ಹಾಸನ: ಹಾಸನ (Hassan) ಟಿಕೆಟ್ ದಂಗಲ್ ಕ್ಲೈಮ್ಯಾಕ್ಸ್ (Climax) ಹಂತಕ್ಕೆ ತಲುಪಿದ್ದು, ಭಾನುವಾರ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು (H.D.Deve Gowda) ಹೆಚ್‌ಡಿ ಕುಮಾರಸ್ವಾಮಿ ಹಾಗೂ ಹೆಚ್‌ಡಿ ರೇವಣ್ಣ ಅವರ ಜೊತೆ ಮಾತನಾಡಿ ಸಂಧಾನ ಮಾಡಲಿದ್ದಾರೆ.

    ಸೋಮವಾರ ಜೆಡಿಎಸ್ (JDS) ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಹೆಚ್‌ಡಿ ರೇವಣ್ಣ (H.D.Revanna) ದಂಪತಿ ಕೊನೆ ಕ್ಷಣದ ಕಸರತ್ತನ್ನು ನಡೆಸುತ್ತಿದ್ದಾರೆ. ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿಯಾಗಿ ಅವರ ಮನವೊಲಿಸುವ ಸಲುವಾಗಿ ರೇವಣ್ಣ ಹಾಗೂ ಅವರ ಪತ್ನಿ ಭವಾನಿ ರೇವಣ್ಣ (Bhavani Revanna) ಭಾನುವಾರ ಬೆಂಗಳೂರಿಗೆ (Bengaluru) ಆಗಮಿಸಲಿದ್ದಾರೆ. ಈ ಮೂಲಕ ಕಟ್ಟ ಕಡೆಯ ಪ್ರಯತ್ನಕ್ಕೆ ರೇವಣ್ಣ ದಂಪತಿ ಮುಂದಾಗಿದ್ದಾರೆ. ಇದನ್ನೂ ಓದಿ: ರಾಜ್ಯ ಬಿಜೆಪಿ ವಿರುದ್ಧ ಹೈಕಮಾಂಡ್ ಗರಂ

    ಸೋಮವಾರ ಎರಡನೇ ಪಟ್ಟಿ ಬಿಡುಗಡೆ ಎಂದು ಕುಮಾರಸ್ವಾಮಿ (H.D.Kumaraswamy) ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ದೇವೇಗೌಡರು ಹೆಚ್‌ಡಿಕೆ ಹಾಗೂ ರೇವಣ್ಣ ಅವರೊಂದಿಗೆ ಮಾತುಕತೆ ನಡೆಸಿ ಸಂಧಾನ ಮಾಡುವ ಸಾಧ್ಯತೆಯಿದೆ. ಇಬ್ಬರೂ ಒಮ್ಮತಕ್ಕೆ ಬಂದಲ್ಲಿ ನಾಳೆ ಹಾಸನ ಟಿಕೆಟ್ ಘೋಷಣೆಯಾಗುವ ಸಾಧ್ಯತೆಯಿದೆ. ರೇವಣ್ಣ ತಮ್ಮ ಪತ್ನಿ ಭವಾನಿಗೆ ಟಿಕೆಟ್ ಕೊಡಿಸುವ ಪ್ರಯತ್ನ ನಡೆಸುತ್ತಿದ್ದರೆ ಇತ್ತ ಕುಮಾರಸ್ವಾಮಿ ಹೆಚ್‌ಪಿ ಸ್ವರೂಪ್ (H.P.Swaroop) ಬೆನ್ನಿಗೆ ನಿಂತಿದ್ದಾರೆ. ಇದನ್ನೂ ಓದಿ: ಮತ್ತೆ ರಾಜ್ಯಕ್ಕೆ ಮೋದಿ – ಕಾಂಗ್ರೆಸ್‌, ಜೆಡಿಎಸ್‌ ಭದ್ರಕೋಟೆಯಲ್ಲೇ ನಡೆಯಲಿದೆ ಸಮಾವೇಶ