Tag: ಹೆಚ್‌ಡಿ ತಮ್ಮಯ್ಯ

  • ಸಿದ್ದು ನಂತರ ರಾಜ್ಯದಲ್ಲಿ ಅಂತಹ ನಾಯಕನಿದ್ರೆ ಅದು ಸತೀಶ್ ಜಾರಕಿಹೊಳಿ ಮಾತ್ರ: ಹೆಚ್.ಡಿ.ತಮ್ಮಯ್ಯ

    ಸಿದ್ದು ನಂತರ ರಾಜ್ಯದಲ್ಲಿ ಅಂತಹ ನಾಯಕನಿದ್ರೆ ಅದು ಸತೀಶ್ ಜಾರಕಿಹೊಳಿ ಮಾತ್ರ: ಹೆಚ್.ಡಿ.ತಮ್ಮಯ್ಯ

    ಚಿಕ್ಕಮಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ನಂತರ ರಾಜ್ಯ ಕಾಂಗ್ರೆಸ್ (Congress) ಪಕ್ಷದಲ್ಲಿ ಅಂತಹ ನಾಯಕರು ಯಾರಾದರೂ ಇದ್ದರೆ ಅದು ಸತೀಶ್ ಜಾರಕಿಹೊಳಿಯವರು ಮಾತ್ರ ಎಂದು ಚಿಕ್ಕಮಗಳೂರು ಕಾಂಗ್ರೆಸ್ ಶಾಸಕ ಹೆಚ್.ಡಿ.ತಮ್ಮಯ್ಯ, (HD Tammaiah) ಸತೀಶ್ ಜಾರಕಿಹೊಳಿ (Satish Jarkoholi) ಪರ ಬ್ಯಾಟಿಂಗ್ ಮಾಡಿದರು.

    ಜಿಲ್ಲೆಯ ತರೀಕೆರೆ (Tarikere) ತಾಲ್ಲೂಕಿನಲ್ಲಿ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದರು. ರಾಜ್ಯದಲ್ಲಿ ದಲಿತ ಸಿಎಂ ಕೂಗು, ಸಿಎಂ ಬದಲಾವಣೆ, ರಾಜೀನಾಮೆ, ನಾಯಕರ ಪ್ರತ್ಯೇಕ ಸಭೆ, ಡಿನ್ನರ್, ಮೀಟಿಂಗ್ ಹೆಚ್ಚಾಗುತ್ತಿರುವ ಹಿನ್ನೆಲೆ ಬಹಿರಂಗ ವೇದಿಕೆಯಲ್ಲಿ ಸತೀಶ್ ಜಾರಕಿಹೊಳಿ ಪರ ಹೇಳಿಕೆ ನೀಡಿದರು.ಇದನ್ನೂ ಓದಿ: ಮೆಟ್ರೋ ರೈಲು ಪ್ರಯಾಣ ದರ ಹೆಚ್ಚಿಸಬೇಡಿ: ಸಿಎಂಗೆ ಪತ್ರ ಬರೆದ ಮುಖ್ಯಮಂತ್ರಿ ಚಂದ್ರು

    ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹೊರತುಪಡಿಸಿದರೆ ಸತೀಶ್ ಜಾರಕಿಹೊಳಿಯವರೇ ಭವಿಷ್ಯದ ನಾಯಕರು. ಸತೀಶ್ ಜಾರಕಿಹೊಳಿಯವರ ರೀತಿ ಸರಳ-ಸಜ್ಜನ ಮನುಷ್ಯ ಮತ್ತೊಬ್ಬರಿಲ್ಲ. ಸಿದ್ದು ನಂತರ ರಾಜ್ಯ ಕಾಂಗ್ರೆಸ್ (Congress) ಪಕ್ಷದಲ್ಲಿ ಅಂತಹ ನಾಯಕನಿದ್ದರೆ ಅದು ಸತೀಶ್ ಜಾರಕಿಹೊಳಿಯವರೇ ಎಂದರು.

    ಒಂದು ಕಡೆ ಡಿಕೆಶಿ ಸಿಎಂ ಕನಸು ಕಾಣುತ್ತಿದ್ದಾರೆ. ಇನ್ನೊಂದು ಕಡೆ ಸತೀಶ್ ಜಾರಕಿಹೊಳಿಯವರ ಹೆಸರು ಮುನ್ನೆಲೆಯಲ್ಲಿದೆ. ಈ ಮಧ್ಯೆ ತೆರೆಮರೆಯಲ್ಲಿ ಖರ್ಗೆ-ಪರಮೇಶ್ವರ್ ಕಸರತ್ತಿನ ವದಂತಿಗಳು ಜೋರಾಗಿವೆ.

    ಸಿಎಂ ರಾಜೀನಾಮೆ ನೀಡುತ್ತಾರೆ ಎನ್ನುವ ರಾಜ್ಯ ವಿಪಕ್ಷ ನಾಯಕರ ಹೇಳಿಕೆಗಳ ನಡುವೆ ದಲಿತ ಸಿಎಂ ಕೂಗು ಹೆಚ್ಚಾಗುತ್ತಿದೆ. ರಾಜ್ಯ ಕಾಂಗ್ರೆಸ್ ನಾಯಕರ ದೆಹಲಿ ಭೇಟಿ ಇದೆಲ್ಲವೂ ಇನ್ನಷ್ಟು ಕೂತುಹಲ ಮೂಡಿಸುತ್ತಿದೆ. ಜೊತೆಗೆ ಮಂಗಳವಾರ ಸತೀಶ್ ಜಾರಕಿಹೊಳಿ ಸಿಎಂ ಆಪ್ತ ಮಹದೇವಪ್ಪ ಅವರನ್ನು ಭೇಟಿಯಾಗಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು.ಇದನ್ನೂ ಓದಿ: ಮೋದಿ ಬದಲಾವಣೆಗೆ ಆರ್‌ಎಸ್‌ಎಸ್‌ ಸಭೆ: ಸಂತೋಷ್ ಲಾಡ್

  • ಬೈಕಿನಲ್ಲೇ ಹಳ್ಳಿ-ಹಳ್ಳಿ ಸುತ್ತಿ ಹೆಚ್‌ಡಿ ತಮ್ಮಯ್ಯ ಮತದಾರರಿಗೆ ಧನ್ಯವಾದ

    ಬೈಕಿನಲ್ಲೇ ಹಳ್ಳಿ-ಹಳ್ಳಿ ಸುತ್ತಿ ಹೆಚ್‌ಡಿ ತಮ್ಮಯ್ಯ ಮತದಾರರಿಗೆ ಧನ್ಯವಾದ

    ಚಿಕ್ಕಮಗಳೂರು: ಚುನಾವಣೆಯಲ್ಲಿ (Election) ಗೆದ್ದು ಶಾಸಕರಾದ ಹಿನ್ನೆಲೆ ಚಿಕ್ಕಮಗಳೂರು (Chikkamagaluru) ಶಾಸಕ ಹೆಚ್‌ಡಿ ತಮ್ಮಯ್ಯ (H.D.Thammaiah) ತಮ್ಮ ಬೈಕಿನಲ್ಲಿ ತಾಲೂಕಿನ ಹಳ್ಳಿ- ಹಳ್ಳಿಗಳನ್ನು ಸುತ್ತಿ ಮತದಾರರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದಾರೆ.

    ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಪಕ್ಷದ ಹೆಚ್‌ಡಿ ತಮ್ಮಯ್ಯ ಮತ್ತು ಬಿಜೆಪಿಯಿಂದ (BJP) ಸ್ಪರ್ಧಿಸಿದ್ದ ಸಿಟಿ ರವಿಯವರ (C.T.Ravi) ನಡುವೆ ಭಾರೀ ಪೈಪೋಟಿ ನಡೆದಿತ್ತು. ಕೊನೆಗೆ 5,000 ಮತಗಳ ಅಂತರದಲ್ಲಿ ಸಿಟಿ ರವಿಯವರನ್ನು ಮಣಿಸಿ ತಮ್ಮಯ್ಯ ಮೊದಲ ಬಾರಿಗೆ ಗೆಲುವನ್ನು ಸಾಧಿಸಿದ್ದಾರೆ. ಈ ಹಿನ್ನೆಲೆ ಹಳ್ಳಿ – ಹಳ್ಳಿಗಳನ್ನು ಸುತ್ತಿ ತನಗೆ ಮತ ಹಾಕಿ ಗೆಲ್ಲಿಸಿದ ಮತದಾರರಿಗೆ ಧನ್ಯವಾದ ತಿಳಿಸುವ ಕಾರ್ಯವನ್ನು ತಮ್ಮಯ್ಯ ಮಾಡುತ್ತಿದ್ದಾರೆ. ಇದನ್ನೂ ಓದಿ: ನೀರಿನ ಕ್ಯಾನಿನಲ್ಲೇ ಮದ್ಯ- ಎಣ್ಣೆ ಏಟಿನಲ್ಲೇ ನೂತನ ಸಚಿವರನ್ನು ಸ್ವಾಗತಿಸಿದ ಕಾರ್ಯಕರ್ತರು

    ಕಾಂಗ್ರೆಸ್ ಸೇರಿದ 2 ತಿಂಗಳಿಗೆ ಟಿಕೆಟ್ ತಂದು ಮೊದಲ ಬಾರಿ ಗೆದ್ದ ತಮ್ಮಯ್ಯ ತನ್ನ ಬೈಕಿನಲ್ಲಿ ವಿಲೇಜ್ ರೌಂಡ್ಸ್ ಹೊಡೆಯುತ್ತಿದ್ದಾರೆ. ಇವರಿಗೆ ತಾಲೂಕಿನ ಹಳ್ಳಿಗಳ ಯುವಕರು ಸಾಥ್ ನೀಡುತ್ತಿದ್ದಾರೆ. ಇದನ್ನೂ ಓದಿ: ಕರೆಂಟ್ ಬಿಲ್ ಕೇಳಲು ಬಂದ್ರೆ ನನ್ನನ್ನು ಕರೆಯಿರಿ: ಸುರೇಶ್ ಗೌಡ

  • ಜಾತಿ ರಾಜಕಾರಣಕ್ಕೆ ಮಾನ್ಯತೆಯಿಲ್ಲ, ನೀತಿ ರಾಜಕಾರಣಕ್ಕೆ ಬೆಲೆ: ಸಿ.ಟಿ.ರವಿ

    ಜಾತಿ ರಾಜಕಾರಣಕ್ಕೆ ಮಾನ್ಯತೆಯಿಲ್ಲ, ನೀತಿ ರಾಜಕಾರಣಕ್ಕೆ ಬೆಲೆ: ಸಿ.ಟಿ.ರವಿ

    ಚಿಕ್ಕಮಗಳೂರು: ಚಿಕ್ಕಮಗಳೂರು (Chikkamagaluru) ವಿಧಾನಸಭಾ ಕ್ಷೇತ್ರದಲ್ಲಿ ಜಾತಿ ರಾಜಕಾರಣಕ್ಕೆ ಮಾನ್ಯತೆ ಇಲ್ಲ. ಇಲ್ಲಿ ಈವರೆಗೆ ಗೆದ್ದಿರುವುದು ನೀತಿ ರಾಜಕಾರಣವೇ ಎಂದು ಬಿಜೆಪಿ (BJP) ಅಭ್ಯರ್ಥಿ ಶಾಸಕ ಸಿ.ಟಿ.ರವಿ (C.T.Ravi) ಹೇಳಿದ್ದಾರೆ.

    ನಗರದ ಪ್ರೆಸ್ ಕ್ಲಬ್‌ನಲ್ಲಿ (Press Club) ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ (Election) ಕೆಲವರು ಜಾತಿ ಹೆಸರಲ್ಲಿ ನನ್ನ ವಿರುದ್ಧ ಎತ್ತಿಕಟ್ಟುವ ಯತ್ನ ಮಾಡುತ್ತಿದ್ದಾರೆ. ಅದು ಫಲಿಸುವುದಿಲ್ಲ. ಇಲ್ಲಿ ಈವರೆಗೆ ಅಭಿವೃದ್ಧಿ ಪರ ಹಾಗೂ ಸಿದ್ಧಾಂತಕ್ಕೆ ಬದ್ಧವಾದ ರಾಜಕಾರಣ ಮಾಡಿದ್ದೇನೆ. ಜಾತಿ ಮತ್ತು ಪಕ್ಷ ಕೇಳದೆ ನನ್ನ ಕೈಯಲ್ಲಾದ ಒಳ್ಳೆಯ ಕೆಲಸ ಮಾಡಿದ್ದೇನೆ. ಈಗಿನ ವಾತಾವರಣದಲ್ಲಿ ಜಿಲ್ಲೆಯಲ್ಲಿ ಐದಕ್ಕೆ ಐದೂ ಕ್ಷೇತ್ರದಲ್ಲೂ ಬಿಜೆಪಿ ಉತ್ತಮ ಅಂತರದಿಂದಲೇ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: 10 ಸಾವಿರ ಮನೆಗಳಲ್ಲಿ ಭಿಕ್ಷೆ ಬೇಡಿ ನಾಮಪತ್ರ ಸಲ್ಲಿಕೆ – ನಾಣ್ಯ ಎಣಿಸಿ ಸುಸ್ತಾದ ಅಧಿಕಾರಿಗಳು 

    ಸಣ್ಣ ಜಾತಿ ಮತ್ತು ಜನಾಂಗಗಳಿಗೂ ರಾಜಕೀಯ ಹಾಗೂ ಸಾಮಾಜಿಕವಾಗಿ ಆದ್ಯತೆ ಕೊಡುವ ಕೆಲಸ ನಮ್ಮ ಕ್ಷೇತ್ರದಲ್ಲಿ ಮಾಡಿದ್ದೇವೆ. ನಿಗಮ ಮಂಡಳಿಗಳಿಗೆ ನೇಮಕಾತಿ ಸಂದರ್ಭದಲ್ಲಿ ಇದೇ ಮಾದರಿಯನ್ನು ಅನುಸರಿಸುವಂತೆ ನಾವು ರಾಜ್ಯ ನಾಯಕರಿಗೆ ತಿಳಿಸಿದ್ದೇವೆ. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಸ್ಥಾನವನ್ನು ಪರಿಶಿಷ್ಟರಿಗೆ ಒದಗಿಸಿಕೊಡುವ ಕೆಲಸವನ್ನು ನಗರಸಭೆ ಹಾಗೂ ಎಪಿಎಂಸಿಗಳಲ್ಲಿ ಮಾಡಿ ತೋರಿಸಿದ್ದೇವೆ ಎಂದರು. ಇದನ್ನೂ ಓದಿ: ಮತ್ತೊಂದು ವಿಕೆಟ್ ಪತನ – ಆಯನೂರು ಮಂಜುನಾಥ್ ಬಿಜೆಪಿಗೆ ಗುಡ್ ಬೈ

    ನಾನು ಶಾಸಕನಾಗಿದ್ದ ಅವಧಿಯಲ್ಲಿ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ-ಸಾಧನೆಗೆ ಸಂಬಂಧಿಸಿದ ರಿಪೋರ್ಟ್ ಕಾರ್ಡನ್ನು ಕ್ಷೇತ್ರದ 55 ಸಾವಿರ ಮನೆಗಳಿಗೆ ತಲುಪಿಸಿದ್ದೇನೆ. ಯಾವುದೇ ಲೋಪ, ಅಭಿವೃದ್ಧಿ ಮತ್ತು ವೈಯಕ್ತಿಕ ನಡವಳಿಕೆ ಕಾರಣಕ್ಕೆ ಸಿ.ಟಿ.ರವಿಗೆ ಮತ ಹಾಕುವುದಿಲ್ಲ ಎಂದು ಹೇಳಲು ಸಾಧ್ಯವೇ ಇಲ್ಲದ ರೀತಿ ನಡೆದುಕೊಂಡಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಬೊಮ್ಮಾಯಿ ಪರ ಕಿಚ್ಚ ಸುದೀಪ್ ಕ್ಯಾಂಪೇನ್ – ಶಿಗ್ಗಾಂವಿ ಕ್ಷೇತ್ರದಲ್ಲಿ ಇಂದು ಮಿಂಚಿನ ಸಂಚಾರ 

    ಈ ಬಾರಿ ಚುನಾವಣೆಯಲ್ಲಿ 1 ಲಕ್ಷ ಮತಗಳನ್ನು ಗಳಿಸುವ ಗುರಿ ಇದೆ. ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಭೇಟಿ ನೀಡಿ ಪ್ರಚಾರ ನಡೆಸಿದ್ದೇವೆ. ನಮ್ಮ ಗುರಿ ಸಾಧಿಸಲಿದ್ದೇವೆ ಎನ್ನುವ ವಿಶ್ವಾಸವಿದೆ. ಎಲ್ಲಾ ಪಕ್ಷದ ಅಭ್ಯರ್ಥಿಗಳು ಅಂತಿಮವಾದ ನಂತರ ಎಷ್ಟು ಅಂತರದಲ್ಲಿ ಗೆಲ್ಲುತ್ತೇವೆ ಎನ್ನುವುದನ್ನು ಹೇಳುತ್ತೇವೆ ಎಂದರು. ಇದನ್ನೂ ಓದಿ: ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷನ ಬರ್ಬರ ಹತ್ಯೆ 

    ನಾಮಪತ್ರ (Nomination Papers) ಸಲ್ಲಿಕೆ ವೇಳೆ ಕಾರ್ಯಕರ್ತರು ಸಿ.ಟಿ.ರವಿ ಮುಂದಿನ ಮುಖ್ಯಮಂತ್ರಿ ಎಂದು ಕೂಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಕಾರ್ಯಕರ್ತರ ಅಪೇಕ್ಷೆ. ನಾನು ಪಕ್ಷದ ಕಟ್ಟಾಳು. ಪಕ್ಷ ಏನು ಹೇಳುತ್ತದೆ ಅದನ್ನು ಕೇಳುವವನು ಎಂದರು. ಇದನ್ನೂ ಓದಿ: ಎನ್‌ಸಿಪಿ ಲೋಗೋ ತೆಗೆದ ಅಜಿತ್‌ ಪವಾರ್‌ – ಮಹಾ ಬಿಜೆಪಿ ಜತೆ ಮೈತ್ರಿಗೆ 40 ಶಾಸಕರ ಸಮ್ಮತಿ? 

    ಹೆಚ್.ಡಿ.ತಮ್ಮಯ್ಯ (H.D.Thammaiah) ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿರುವ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಅಂದರೆ 2008ರಲ್ಲಿ ತಮ್ಮಯ್ಯ ಬಿಜೆಪಿಗೆ ಬಂದವರು. ಪಕ್ಷ ಅವರಿಗೆ ಎಲ್ಲಾ ರೀತಿಯ ಸ್ಥಾನಮಾನ ನೀಡಿತ್ತು. ಈಗ ಹೆಚ್ಚಿನ ಆಸೆ ಇಟ್ಟುಕೊಂಡು ಕಾಂಗ್ರೆಸ್‌ಗೆ (Congress) ಹೋಗಿದ್ದಾರೆ. ಅದು ರಾಜಕೀಯ ಸೈದ್ಧಾಂತಿಕ ಬದ್ಧತೆ ಇರುವ ರಾಜಕಾರಣವಲ್ಲ ಎಂದು ಹೇಳಿದರು. ಇದನ್ನೂ ಓದಿ: ಕೈ ಅಭ್ಯರ್ಥಿಯ ಬಿ ಫಾರಂಗೆ ತಡೆ – ಪದ್ಮನಾಭನಗರದಲ್ಲಿ ಅಶೋಕ್‌ ವಿರುದ್ಧ ಡಿಕೆ ಸುರೇಶ್‌ ಕಣಕ್ಕೆ?

  • ತಮ್ಮಯ್ಯ ವಿರುದ್ಧ ತಣ್ಣಗಾಗದ ಆಕ್ರೋಶ – ಕಾಫಿನಾಡಲ್ಲಿ ನಿಂತಿಲ್ಲ ಬಂಡಾಯದ ಕೂಗು

    ತಮ್ಮಯ್ಯ ವಿರುದ್ಧ ತಣ್ಣಗಾಗದ ಆಕ್ರೋಶ – ಕಾಫಿನಾಡಲ್ಲಿ ನಿಂತಿಲ್ಲ ಬಂಡಾಯದ ಕೂಗು

    ಚಿಕ್ಕಮಗಳೂರು: ಬಿಜೆಪಿಯಿಂದ (BJP) ಕಾಂಗ್ರೆಸ್ (Congress) ಸೇರಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (Ct Ravi) ಆಪ್ತ ಹೆಚ್‌ಡಿ ತಮ್ಮಯ್ಯನ (HD Thammaiah) ವಿರುದ್ಧ ಕಾಂಗ್ರೆಸ್ ಕೋಟೆಯಲ್ಲಿ ಅಸಮಾಧಾನದ ಹೊಗೆ ಮುಂದುವರಿದಿದೆ. ಹೆಚ್‌ಡಿ ತಮ್ಮಯ್ಯಗೆ ಟಿಕೆಟ್ ಬೇಡವೇ ಬೇಡ ಎಂದು ಮೂಲ ಕಾಂಗ್ರೆಸ್ಸಿಗರು ತಮ್ಮಯ್ಯ ಹಾಗೂ ಪಕ್ಷದ ವರಿಷ್ಠರ ವಿರುದ್ಧ ಕಿಡಿ ಕಾರುತ್ತಿದ್ದಾರೆ.

    ಶನಿವಾರ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ಸೇರಿದ ಮೂಲ ಕಾಂಗ್ರೆಸ್ ಮುಖಂಡರು ತಮ್ಮಯ್ಯಗೆ ಟಿಕೆಟ್ ಬೇಡವೇ ಬೇಡ ಎಂದು ಆಗ್ರಹಿಸಿದ್ದರು. ಈಗಾಗಲೇ ಕಳೆದ 2-3 ದಶಕಗಳಿಂದ ಪಕ್ಷಕ್ಕಾಗಿ ದುಡಿದ 6 ಜನ ಟಿಕೆಟ್‌ಗಾಗಿ ಅರ್ಜಿ ಹಾಕಿದ್ದಾರೆ. ಅವರಲ್ಲಿ ಒಬ್ಬರಿಗೆ ಟಿಕೆಟ್ ನೀಡಬೇಕೆಂದು ಮೂಲ ಕಾಂಗ್ರೆಸ್ಸಿಗರು ನಿರ್ಣಯಕ್ಕೆ ಬಂದಿದ್ದರು. ಆದರೆ ಈ ವೇಳೆ ಕಾರ್ಯಕರ್ತರ ಮಧ್ಯೆ ಮಾತಿಗೆ ಮಾತು ಬೆಳೆದು ಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು. ಕಾಂಗ್ರೆಸ್ ಕೆಪಿಸಿಸಿ ಸಂಯೋಜಕ ಪವನ್ ಮೇಲೆ ಕಾಂಗ್ರೆಸ್ ಕಾರ್ಯಕರ್ತರೇ ಹಲ್ಲೆ ಮಾಡಿದ್ದರು.

    ತಮ್ಮಯ್ಯ ವಿರುದ್ಧದ ಅಸಮಾಧಾನದ ಹೊಗೆ ಇನ್ನು ಕೂಡಾ ಮುಂದುವರಿದಿದೆ. ಭಾನುವಾರ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸಖರಾಯಪಟ್ಟಣದಲ್ಲಿ ಬಹಿರಂಗ ಸಭೆ ಸೇರಿರುವ 6 ಜನ ಟಿಕೆಟ್ ಆಕಾಂಕ್ಷಿಗಳು ಮತ್ತೆ ತಮ್ಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಅವರಿಗೆ ತಾಲೂಕಿನ ರಾಜಕೀಯ ಸ್ಥಿತಿಗತಿಯ ಬಗ್ಗೆ ಚರ್ಚೆ ಮಾಡಲು ತೀರ್ಮಾನಿಸಿದ್ದಾರೆ. 6 ಜನ ಆಕಾಂಕ್ಷಿಗಳು ಕೂಡಾ ತಮ್ಮಯ್ಯ ವಿರುದ್ಧ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರೇಣುಕಾಚಾರ್ಯಗೆ ಶಾಕ್ – ನೀತಿ ಸಂಹಿತೆ ಉಲ್ಲಂಘನೆ ಕೇಸ್?

    ಇತ್ತೀಚೆಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹತ್ತಾರು ಮುಖಂಡರು ನೂರಾರು ಕಾರ್ಯಕರ್ತರನ್ನು ಜೊತೆಗೆ ಕರೆತಂದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಆದರೆ ಹೆಚ್‌ಡಿ ತಮ್ಮಯ್ಯ ಏಕಾಂಗಿಯಾಗಿ ಒಬ್ಬರೇ ಒಬ್ಬರು ಬಂದು ಪಕ್ಷ ಸೇರಿ, ಈಗ ಟಿಕೆಟ್ ಕೇಳುತ್ತಿದ್ದಾರೆ. ಅದರ ಅರ್ಥ ಏನೆಂದರೆ ಅವರು ಬಿಜೆಪಿಯ ಏಜೆಂಟ್. ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದಕ್ಕೆ ಅವರು ಬಿಜೆಪಿ ಸೇರಿದ್ದಾರೆ ಎಂದು ತಮ್ಮಯ್ಯ ಅವರ ವಿರುದ್ಧ ಕಿಡಿ ಕಾರಿದ್ದಾರೆ. ಹೀಗಾಗಿ ಅರ್ಜಿ ಹಾಕಿರುವ 6 ಜನರನ್ನು ಬಿಟ್ಟು ಬೇರೆ ಯಾರಿಗೆ ಟಿಕೆಟ್ ನೀಡಿದರು ಚಿಕ್ಕಮಗಳೂರು ರಾಜಕೀಯ ಬೇರೆ ರೀತಿ ಇರುತ್ತದೆ ಎಂದು ವರಿಷ್ಠರಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯನವರನ್ನು ಸೋಲಿಸಲು ಯಾವ ಲೀಡರ್‌ಗಳಿಂದಲೂ ಸಾಧ್ಯವಿಲ್ಲ, ಜನರೇ ಸೋಲಿಸಬೇಕು: ಸತೀಶ್ ಜಾರಕಿಹೊಳಿ

  • ಸೈದ್ಧಾಂತಿಕ ನೆಲೆಗಟ್ಟಿನಲ್ಲಿರೋರು ಬಿಜೆಪಿಯಲ್ಲಿರ್ತಾರೆ, ವೈಯಕ್ತಿಕ ಲಾಭ ನಷ್ಟ ನೋಡೋರು ಹೋಗ್ತಾರೆ: ಸಿಟಿ ರವಿ

    ಸೈದ್ಧಾಂತಿಕ ನೆಲೆಗಟ್ಟಿನಲ್ಲಿರೋರು ಬಿಜೆಪಿಯಲ್ಲಿರ್ತಾರೆ, ವೈಯಕ್ತಿಕ ಲಾಭ ನಷ್ಟ ನೋಡೋರು ಹೋಗ್ತಾರೆ: ಸಿಟಿ ರವಿ

    ಕಾರವಾರ: ವೈಯಕ್ತಿಕ ನೆಲೆಗಟ್ಟಿನಲ್ಲಿರುವವರು ಬಿಜೆಪಿಯಲ್ಲಿ (BJP) ಇರುತ್ತಾರೆ. ವೈಯಕ್ತಿಕ ಲಾಭ ಮತ್ತು ನಷ್ಟ ನೋಡುವವರು ಬಿಜೆಪಿ ಬಿಟ್ಟು ಹೋಗುತ್ತಾರೆ ಎಂದು ಬಿಜೆಪಿ ಕಾರ್ಯಾದರ್ಶಿ ಸಿಟಿ ರವಿ (CT Ravi) ತಮ್ಮ ಆಪ್ತ ಹೆಚ್‌ಡಿ ತಮ್ಮಯ್ಯ (HD Tammaiah) ಕಾಂಗ್ರೆಸ್ (Congress)  ಸೇರ್ಪಡೆಯಾಗಿರುವುದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

    ಕಾರವಾರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಮುಗಿಸಬೇಕು ಎಂಬುದು ಮೊದಲ ಪ್ರಯತ್ನ ಅಲ್ಲ, ಎಲ್ಲಾ ಸಂದರ್ಭದಲ್ಲಿ ಎಲ್ಲಾ ಸಮುದಾಯದ ಜನ ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆ. ಕಳೆದ ಬಾರಿ 25,314 ಲೀಡ್‌ನಲ್ಲಿ ಗೆಲ್ಲಿಸಿದ್ದಾರೆ. ಈ ಸಲ ನಮ್ಮ ಕಾರ್ಯಕರ್ತರು ಸಂಕಲ್ಪ ಮಾಡಿದ್ದಾರೆ, 1 ಲಕ್ಷ ಮತಗಳನ್ನು ಮೀರುತ್ತೇವೆ ಎಂದಿದ್ದಾರೆ ಎಂದರು.

    ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಇರುವವರು ಬಿಜೆಪಿಯಲ್ಲಿ ಇರುತ್ತಾರೆ. ವೈಯಕ್ತಿಕ ಲಾಭ ನಷ್ಟ ಲೆಕ್ಕಾಚಾರ ಹಾಕುವವರು, ಹೋಗುವವರು ಹೋಗುತ್ತಾರೆ. ನಾನು ಅವರ ಬಗ್ಗೆ ಏನೂ ಹೇಳಲು ಬಯಸುವುದಿಲ್ಲ. ಲಿಂಗಾಯತರು ಸೇರಿದಂತೆ ಎಲ್ಲಾ ಸಮುದಾಯಗಳು ಅತಿ ಹೆಚ್ಚು ಬೆಂಬಲಿಸುವ ಪಕ್ಷ ಬಿಜೆಪಿ. ಅವರು ಯಾವುದೇ ಸಂದರ್ಭದಲ್ಲಿ ಕೈ ಬಿಟ್ಟಿಲ್ಲ. ಮುಂದೆಯೂ ನಮ್ಮನ್ನು ಯಾರೂ ಬಿಟ್ಟುಕೊಡುವುದಿಲ್ಲ ಎಂದರು. ಇದನ್ನೂ ಓದಿ: ಸಿಟಿ ರವಿ ಆಪ್ತ ಹೆಚ್‌ಡಿ ತಮ್ಮಯ್ಯ ಕಾಂಗ್ರೆಸ್ ಸೇರ್ಪಡೆ

    ಸಿಟಿ ರವಿ ಅವರ ಆಪ್ತ ಹಾಗೂ ಬಿಜೆಪಿಯ ಲಿಂಗಾಯತ ಮುಖಂಡರಾಗಿದ್ದ ಹೆಚ್‌ಡಿ ತಿಮ್ಮಯ್ಯ ಅವರು ಭಾನುವಾರ ತಮ್ಮ 300ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ: ನಾನು ಮಂಡ್ಯ ಉಸ್ತುವಾರಿ ತೆಗೆದುಕೊಳ್ಳುವುದಿಲ್ಲ: ನಾರಾಯಣ ಗೌಡ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿಟಿ ರವಿ ಆಪ್ತ ಹೆಚ್‌ಡಿ ತಮ್ಮಯ್ಯ ಕಾಂಗ್ರೆಸ್ ಸೇರ್ಪಡೆ

    ಸಿಟಿ ರವಿ ಆಪ್ತ ಹೆಚ್‌ಡಿ ತಮ್ಮಯ್ಯ ಕಾಂಗ್ರೆಸ್ ಸೇರ್ಪಡೆ

    ಚಿಕ್ಕಮಗಳೂರು/ಬೆಂಗಳೂರು: ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ಅವರ ಆಪ್ತ ಹೆಚ್‌ಡಿ ತಮ್ಮಯ್ಯ (HD Tammaiah) ಕಾಂಗ್ರೆಸ್‌ಗೆ (Congress) ಸೇರ್ಪಡೆಯಾಗಿದ್ದಾರೆ. ಆಪ್ತನನ್ನೇ ಆಪರೇಷನ್ ಮಾಡಿ ರವಿ ವಿರುದ್ಧ ಚುನಾವಣೆಗೆ ಇಳಿಸಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ.

    ತಮ್ಮಯ್ಯ ಅವರು ಮಾಜಿ ಸಿಎಂ ಯಡಿಯೂರಪ್ಪ ಅವರ ಆಪ್ತರೂ ಆಗಿದ್ದು, ಚಿಕ್ಕಮಗಳೂರು ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿದ್ದಾರೆ. ಇದೀಗ ಕಾಂಗ್ರೆಸ್ ಚಿಕ್ಕಮಗಳೂರಿನಲ್ಲಿ ತಮಗೆ ಪ್ರಬಲ ಅಭ್ಯರ್ಥಿ ಇಲ್ಲ ಎಂಬ ಕಾರಣಕ್ಕೆ ನಿರಾತಂಕದಲ್ಲಿರುವ ಸಿಟಿ ರವಿಗೆ ಶಾಕ್ ಕೊಡಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ.

    ಭಾನುವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಹೆಚ್‌ಡಿ ತಮ್ಮಯ್ಯ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ತಮ್ಮಯ್ಯ ಜೊತೆ 300ಕ್ಕೂ ಹೆಚ್ಚು ಬೆಂಬಲಿಗರು ಡಿಕೆ ಶಿವಕುಮಾರ್ ಹಾಗೂ ಬಿಎಲ್ ಶಂಕರ್ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.

    ಕಾಂಗ್ರೆಸ್ ಸೇರ್ಪಡೆ ಬಳಿಕ ಮಾತನಾಡಿರುವ ತಮ್ಮಯ್ಯ, ನಾನು ಕಾಂಗ್ರೆಸ್ ಪಕ್ಷಕ್ಕೆ ಮರುಸೇರ್ಪಡೆ ಆಗುತ್ತಿದ್ದೇನೆ. ಬಿಜೆಪಿಯಲ್ಲಿ 17-18 ವರ್ಷಗಳ ಕಾಲ ಇದ್ದೆ. ಈಗ ಕಾಂಗ್ರೆಸ್ ಪಕ್ಷಕ್ಕೆ ಸಂತೋಷದಿಂದ ಸೇರಿದ್ದೇನೆ. ಡಿಕೆಶಿ ಅಧ್ಯಕ್ಷರಾದ ಮೇಲೆ ಇಡೀ ರಾಜ್ಯದಲ್ಲಿ ಒಂದು ಸಂಚಲನ ಮೂಡಿದೆ. ಸಿದ್ದರಾಮಯ್ಯ ಕೂಡಾ ಹಲವು ಜನಪರ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಇವರಿಬ್ಬರ ನೇತೃತ್ವ ಒಪ್ಪಿ ತುಂಬಾ ಜನರು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಡಿಕೆಶಿ ಭೇಟಿಯಾದ ಜೆಡಿಎಸ್‌ ಶಾಸಕ ಶಿವಲಿಂಗೇಗೌಡ – ಕಾಂಗ್ರೆಸ್‌ ಸೇರಲು ಸಿದ್ಧತೆ

    ನಾವು ಯಾವುದೇ ಒತ್ತಡ ಇಲ್ಲದೇ ಕಾಂಗ್ರೆಸ್ ಸೇರಿದ್ದೇವೆ. ಚುನಾವಣೆಯಲ್ಲಿ ಯಾವ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೂ, ಒಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ ಅನ್ನು ಗೆಲ್ಲಿಸುತ್ತೇವೆ. ಈಗಾಗಲೇ ಪಕ್ಷದಿಂದ ಸರ್ವೆ ಕೂಡಾ ಮಾಡಿಸುತ್ತಿದ್ದಾರೆ. ಸರ್ವೆಯಲ್ಲಿ ಗೆಲ್ಲುವಂತವರಿಗೆ ಯಾರಿಗೇ ಕೊಟ್ಟರೂ ಒಟ್ಟಾಗಿ ಕೆಲಸ ಮಾಡಿ ಎದುರಾಳಿ ಯಾರೇ ಆಗಿದ್ದರೂ ಎದೆಗುಂದದೆ ಕಾಂಗ್ರೆಸ್ ಅನ್ನು ಗೆಲ್ಲಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಭಿನ್ನಮತ ಸ್ಫೋಟ – ಬಿಜೆಪಿಗೆ ಮಾಜಿ ಶಾಸಕ ಕಿರಣ್ ಕುಮಾರ್ ಗುಡ್‌ಬೈ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k