Tag: ಹೆಚ್‌ಡಿಕುಮಾರಸ್ವಾಮಿ

  • ಕುಮಾರಣ್ಣ ರಾಜ್ಯಕ್ಕೆ ಬೇಕೆಂದು ನಮ್ಮ ಶಾಸಕರು, ಮುಖಂಡರ ಕೂಗಾಗಿದೆ: ನಿಖಿಲ್

    ಕುಮಾರಣ್ಣ ರಾಜ್ಯಕ್ಕೆ ಬೇಕೆಂದು ನಮ್ಮ ಶಾಸಕರು, ಮುಖಂಡರ ಕೂಗಾಗಿದೆ: ನಿಖಿಲ್

    – ನನ್ನ ಸ್ಪರ್ಧೆಗೆ ತೆರೆ ಬಿದ್ದಿದೆ

    ಮಂಡ್ಯ: ಕುಮಾರಣ್ಣ ರಾಜ್ಯಕ್ಕೆ ಬೇಕು ಅಂತಾ ನಮ್ಮ ಶಾಸಕರು ಮತ್ತು ಮುಖಂಡರ ಕೂಗಾಗಿದೆ ಎಂದು ಜೆಡಿಎಸ್ (JDS) ಯುವನಾಯಕ ನಿಖಿಲ್ ಕುಮಾರಸ್ವಾಮಿ  (Nikhil Kumaraswamy) ತಿಳಿಸಿದ್ದಾರೆ.

    ಪಾಂಡವಪುರದಲ್ಲಿ (Pandavapura) ಸುದ್ದುಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ (Kumaraswamy)  ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದರ ಬಗ್ಗೆ ಮಾತನಾಡಿದ್ದಾರೆ. ಕುಮಾರಣ್ಣ ಅವರಿಗೆ ಹಲವು ಲೋಕಸಭಾ ಕ್ಷೇತ್ರದಲ್ಲಿ ಒತ್ತಾಯ ಇದೆ. ಎಲ್ಲಿ ಅಂತಾ ಅವರು ಸ್ಪರ್ಧೆ ಮಾಡ್ತಾರೆ. ಕುಮಾರಣ್ಣ ನಮ್ಮ ರಾಜ್ಯಕ್ಕೆ ಬೇಕು. ಅವರು ಲೋಕಸಭಾ ಸ್ಪರ್ಧೆ ಮಾಡೋದು ಬಿಡೋದು ಮುಂದೆ ಗೊತ್ತಾಗುತ್ತೆ. ಅವರ ಸ್ಪರ್ಧೆ ಬಗ್ಗೆ ನನಗೆ ಗೊತ್ತಿಲ್ಲ. ಅದು ಪಕ್ಷದ ವರಿಷ್ಠರ ತೀರ್ಮಾನ. ಅವರು ನಮ್ಮ ರಾಜ್ಯಕ್ಕೆ ಬೇಕು ಅಂತಾ ಶಾಸಕರು ಮುಖಂಡರ ಕೂಗಾಗಿದೆ ಎಂದು ಸುಳಿವು ನೀಡಿದ್ದಾರೆ. ಇದನ್ನೂ ಓದಿ: ಕುಟುಂಬ ಸಮೇತರಾಗಿ ಅಯೋಧ್ಯೆ ರಾಮಲಲ್ಲಾನ ದರ್ಶನ ಪಡೆದ ದೆಹಲಿ ಸಿಎಂ

    ಕೆಲವರು ಕುಮಾರಣ್ಣ ಕೇಂದ್ರಕ್ಕೆ ಹೋಗಲಿ ಅಂತಾರೆ. ಕೆಲವರು ರಾಜ್ಯದಲ್ಲಿ ಉಳಿದುಕೊಳ್ಳಲಿ ಅಂತಾರೆ. ಅಂತಿಮವಾಗಿ ಏನ್ ಆಗುತ್ತೆ ಎನ್ನೋದು ಕಾದು ನೋಡೋಣ. ನನ್ನ ಸ್ಪರ್ಧೆಗೆ ತೆರೆ ಬಿದ್ದಿದೆ. ಏನೇ ಕೇಳಿದ್ರು ಇದೇ ಉತ್ತರ. 2019ರ ಸೋಲಿನ ಬಗ್ಗೆ ಚಿಂತಿಸಿ ಫಲ ಏನು ಇಲ್ಲ. ಮುಂದೆ ಆಗುವುದರ ಬಗ್ಗೆ ಯೋಚನೆ ಮಾಡಬೇಕು ಅಷ್ಟೇ. ನಾನು ಪಾಸಿಟಿವ್ ಡೈರಕ್ಷನ್ ಅಲ್ಲಿ ಹೋಗಬೇಕೆಂಬ ಮನಸ್ಥಿತಿಯಲ್ಲಿ ಇದ್ದೀನಿ. ಕಳೆದು ಹೋಗಿರುವ ವಿಚಾರದ ಬಗ್ಗೆ ನಾನು ಪ್ರಾಮುಖ್ಯತೆ ಕೊಡುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಇಡಿ, ಸಿಬಿಐ ಮೂಲಕ ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ: ಡಿಕೆಶಿ

    ಸುಮಲತಾ ಬಗ್ಗೆ ಮಾತನಾಡಿ, ಬಿಜೆಪಿ ಸುಮಲತಾ ಅವರ ಟಿಕೆಟ್ ಕೇಳಲು ಅಧಿಕಾರ ಇದೆ ಕೇಳ್ತಾರೆ. ಅಂತಿಮವಾಗಿ ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ. ಮೈತ್ರಿ ಬಗ್ಗೆ ಮಾತನಾಡುವವರ ಬಗ್ಗೆ ಅಮಿತ್ ಶಾ ಅವರು ಬಿಜೆಪಿ ನಾಯಕರಿಗೆ ಸಂದೇಶ ನೀಡಿದ್ದಾರೆ. ನಮ್ಮ ಪಕ್ಷದಲ್ಲಿ ಮೈತ್ರಿ ಬಗ್ಗೆ ಗೊಂದಲ ಇಲ್ಲ. ನಮ್ಮಲ್ಲಿ ಯಾರು ಅಪಸ್ವರದ ಮಾತನ್ನು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಗೃಹ ಇಲಾಖೆ ಕಾರ್ಯದರ್ಶಿಗೆ ನಿಂದನೆ- ದೆಹಲಿ ಪೊಲೀಸರಿಂದ ಆರೋಪಿ ಬಂಧನ

    ಡಿ.ಸಿ.ತಮ್ಮಣ್ಣ, ಪುಟ್ಟರಾಜು, ಸುರೇಶ್‌ಗೌಡ ಎಲ್ಲರೂ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಲಿ, ಅರ್ಹರಿದ್ದಾರೆ. ಪಕ್ಷದ ವರಿಷ್ಠರು ಕೇಂದ್ರದ ನಾಯಕರು ತೀರ್ಮಾನ ಮಾಡ್ತಾರೆ. 28 ಕ್ಷೇತ್ರಗಳ ಪಟ್ಟಿ ಒಂದೇ ಬಾರಿ ಬಿಡುಗೆಯಾಗುತ್ತೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅಪಘಾತದಿಂದ ಯುವಕನ ಸಾವಿಗೆ ನಾನೇ ಕಾರಣ ಎಂದು ಆತ್ಮಹತ್ಯೆಗೆ ಶರಣಾದ!

  • ರಾಜ್ಯದಲ್ಲಿ ವಾಲ್ಮೀಕಿ ವಿಶ್ವವಿದ್ಯಾಲಯ ಆಗಲೇಬೇಕು: ಜಿ.ಪರಮೇಶ್ವರ್

    ರಾಜ್ಯದಲ್ಲಿ ವಾಲ್ಮೀಕಿ ವಿಶ್ವವಿದ್ಯಾಲಯ ಆಗಲೇಬೇಕು: ಜಿ.ಪರಮೇಶ್ವರ್

    ದಾವಣಗೆರೆ: ರಾಜ್ಯದಲ್ಲಿ ವಾಲ್ಮೀಕಿ (Valmiki) ವಿಶ್ವವಿದ್ಯಾಲಯ ಆಗಲೇಬೇಕು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ (G.Parameshwar) ಹೇಳಿದ್ದಾರೆ.

    ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಮಾಡುವುದರ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದಲ್ಲಿ ವರ್ಣಾಶ್ರಮ ಪದ್ದತಿ ಇದೆ. ದೇಶದಲ್ಲಿ ಸಮಾನತೆ ಪ್ರತಿಪಾದನೆ ಮಾಡಿದ್ರು. ಆದರೆ ಜಾತಿ ವ್ಯವಸ್ಥೆ ಮಾತ್ರ ಜೀವಂತವಾಗಿದೆ. ವಾಲ್ಮೀಕಿ ಸಮಾಜ ದೇಶದಲ್ಲಿ ದೊಡ್ಡ ಸಮಾಜವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ವಿವಿಧ ಪಕ್ಷಗಳ ಸಂಸದರ ಜೊತೆ ಸಂಸತ್‌ನ ಕ್ಯಾಂಟೀನ್‌ನಲ್ಲಿ ಊಟ ಸವಿದ ಮೋದಿ

    ಆಂಧ್ರಪ್ರದೇಶ ಮತ್ತು ಪಂಜಾಬ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಲ್ಮೀಕಿ ಸಮಾಜ ಇದೆ. ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಮಾಡುವ ವಿಚಾರದಲ್ಲಿ ಆಗಿನ ಸಿಎಂ ಕುಮಾರಸ್ವಾಮಿ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದಿಸಲಿಲ್ಲ. ರಾಜ್ಯದಲ್ಲಿ ವಾಲ್ಮೀಕಿ ವಿಶ್ವವಿದ್ಯಾಲಯ ಆಗಲೇಬೇಕು. ವಾಲ್ಮೀಕಿ ಸಮಾಜಕ್ಕೆ ಅಲ್ಲ ರಾಜ್ಯಕ್ಕೆ ವಾಲ್ಮೀಕಿ ವಿವಿ ಸ್ಥಾಪನೆಗೆ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು. ಸಿಎಂ ಸಿದ್ದರಾಮಯ್ಯ ಈ ಕೆಲಸ ಮಾಡದೇ ಇದ್ರೆ, ಯಾರು ಕೂಡಾ ಮಾಡಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಟ್ರಾಫಿಕ್ ಫೈನ್ 50,000 ಇದ್ರೆ ಮನೆ ಬಾಗಿಲಿಗೆ ಬರಲಿದ್ದಾರೆ ಪೊಲೀಸರು ಹುಷಾರ್!

    ರಾಮನ ಸಂಬಂಧವೇ ಇಲ್ಲದವರಿಗೆ ಎನೇನೋ ಮಾಡುತ್ತಿದ್ದಾರೆ. ವಾಲ್ಮೀಕಿಗೆ ಸಂಬಂಧ ಇಲ್ಲದವರು ಏನೇನೊ ಮಾಡ್ತಾ ಇದ್ದಾರೆ. ನಮಗೆ ವಾಲ್ಮೀಕಿಗೆ ಸಂಬಂಧ ಇದೆ. ಈ ಕಾರಣಕ್ಕೆ ವಾಲ್ಮೀಕಿ ವಿವಿ ಸ್ಥಾಪನೆ ಆಗಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೊಡಗಲ್ಲಿ ಹಿಂದೂ ಒಬ್ಬ ಮುಸ್ಲಿಂನ್ನು ಹತ್ಯೆಗೈದಾಗ ಗಲಾಟೆ ಆಗ್ಲಿಲ್ಲ, ಹಿಂದೂವೇ ಹತ್ಯೆಯಾಗಿದ್ರೆ ಬೆಂಕಿ ಹಚ್ಚಿರೋರು: ದಿನೇಶ್ ಗುಂಡೂರಾವ್

  • ಕೇಂದ್ರವನ್ನು ರಾಜ್ಯ ಸರ್ಕಾರದವರು ದೂರುವುದು ಸರಿಯಲ್ಲ, ಅಗತ್ಯವಿದ್ದಾಗಲೆಲ್ಲ ನೆರವು ನೀಡಿದೆ: ಪ್ರಜ್ವಲ್ ರೇವಣ್ಣ

    ಕೇಂದ್ರವನ್ನು ರಾಜ್ಯ ಸರ್ಕಾರದವರು ದೂರುವುದು ಸರಿಯಲ್ಲ, ಅಗತ್ಯವಿದ್ದಾಗಲೆಲ್ಲ ನೆರವು ನೀಡಿದೆ: ಪ್ರಜ್ವಲ್ ರೇವಣ್ಣ

    ಹಾಸನ: ಕೇಂದ್ರ ಸರ್ಕಾರವನ್ನು ರಾಜ್ಯ ಸರ್ಕಾರದವರು (State Government) ದೂರುವುದು ಸರಿಯಲ್ಲ. ಅಗತ್ಯ ಇದ್ದಾಗಲೆಲ್ಲ ನೆರವು ನೀಡಿದೆ ಎಂದು ಕಾಂಗ್ರೆಸ್ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ  (Prajwal Revanna) ಕಿಡಿಕಾರಿದ್ದಾರೆ.

    ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ (Congress) ಪ್ರತಿಭಟನೆ ಕುರಿತು ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಗಿದ್ದರೆ ಜನರ ತೆರಿಗೆ ಹಣವನ್ನು ಇವರ ಉಚಿತ ಗ್ಯಾರಂಟಿಗೆ ಬಳಸಿದ್ದಾರೆ. ಮುಂದೆ ತೆರಿಗೆ ಪಾವತಿದಾರರು ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಹೋರಾಟ ಮಾಡಿದರೆ ಏನು ಮಾಡೋದು ಎಂದು ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರ ಅಗತ್ಯ ಇದ್ದಾಗಲೆಲ್ಲ ನೆರವು ನೀಡಿದೆ. ಕೇಂದ್ರದಿಂದ ಅನುದಾನ ಬಂದೇ ಇಲ್ಲ ಎಂಬ ಭಾವನೆ ಮೂಡಿಸುವುದು ತಪ್ಪು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಮ್ಮ ಹಕ್ಕು ಕೇಳಲು ದೆಹಲಿಯಲ್ಲಿ ಪ್ರತಿಭಟನೆ: ಸತೀಶ್ ಜಾರಕಿಹೊಳಿ

    ದಕ್ಷಿಣ ಭಾರತ ಪ್ರತ್ಯೇಕವಾಗಬೇಕು ಎಂಬ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹೇಳಿಕೆಯನ್ನು ಖಂಡಿಸಿ, ದೇಶ ಒಡೆಯುವ ಹೇಳಿಕೆ ಯಾರೂ ಕೊಡಬಾರದು. ಭಾರತ ಒಂದಾಗಿರುತ್ತದೆ. ಭಾರತೀಯರು ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಇದೆ. ಈ ರೀತಿಯ ಹೇಳಿಕೆ ಅವರಿಗೆ ಶೋಭೆ ತರಲ್ಲ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:  ಯಡಿಯೂರಪ್ಪರಿಂದ ಭಾರತ್ ಬ್ರ್ಯಾಂಡ್ ಅಕ್ಕಿ ವಿತರಣೆಗೆ ಚಾಲನೆ

    ಹೆಚ್.ಡಿ.ಕುಮಾರಸ್ವಾಮಿ ಕೇಸರಿ ಶಾಲು ಧರಿಸಿದ್ದಕ್ಕೆ ಮಾಜಿ ಪ್ರಧಾನಿ ದೇವೇಗೌಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಕೇಸರಿ ಶಾಲು ಎಂದರೆ ಬಿಜೆಪಿ ಎಂದು ಯಾಕೆ ಭಾವಿಸಬೇಕು? ದೇಗುಲ ಉದ್ಘಾಟನೆ ವೇಳೆ ನಮ್ಮ ಕಾರ್ಯಕರ್ತರೇ ಕೇಸರಿ ಶಾಲು ಹಾಕಿರುತ್ತಾರೆ. ಅದು ಧಾರ್ಮಿಕ ಸಂಕೇತ ಅಷ್ಟೆ. ಕೇಸರಿ ಶಾಲು ಹಾಕಿರೋರು ಬಿಜೆಪಿ ಕಾರ್ಯಕರ್ತರು ಎನ್ನೋಕೆ ಆಗುತ್ತಾ. ಮಂಡ್ಯ ಪ್ರತಿಭಟನೆ ವೇಳೆ ಕುಮಾರಸ್ವಾಮಿಗೆ ಯಾರೋ ಕಾರ್ಯಕರ್ತ ಬಂದು ಕೇಸರಿ ಶಾಲು ಹಾಕಿದ್ದರು. ಇದಕ್ಕೆ ತಪ್ಪಾಗಿ ತಿಳಿಯುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಸವದಿ ಹುಟ್ಟುಹಬ್ಬದ ಫ್ಲೆಕ್ಸ್‌ನಲ್ಲಿ ಕೈ ಚಿಹ್ನೆ ಮಾಯ!

    ಹಾಸನ ರೈಲ್ವೆ ಮೇಲ್ಸೇತುವೆ ಕಾಮಗಾರಿ ಬಗ್ಗೆ ಮಾತನಾಡಿ, ಹಾಸನ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ರಾಜ್ಯ ಸರ್ಕಾರ ಹಣ ಕೊಡಲ್ಲ ಅಂತ ಹೇಳಿದೆ. ಆ ನಂತರ ಕೇಂದ್ರದ ಬಳಿ ಹೋಗಿದ್ದೇವೆ. ಮತ್ತೆರಡು ಮಾರ್ಗದ ಮೇಲ್ಸೇತುವೆಗಾಗಿ ಕೇಂದ್ರ ಸರ್ಕಾರದಲ್ಲಿ 48 ಕೋಟಿ ಅನುಮೋದನೆಗೆ ಹೋಗಿದೆ ಎಂದು ಹೇಳಿದರು. ಅದೇನು ಬಿಬಿಎಂಪಿ ಕೆಲಸ ಕೆಟ್ಟೋಯ್ತಾ, ಅದೇ ಚರಂಡಿಗೆ ಅದೇ ಕಲ್ಲು ಹಾಕೋಕೆ. ಹಣ ಕೊಡಿ ಎಂಬ ನಮ್ಮ ಮನವಿಗೆ, ಪತ್ರ ವ್ಯವಹಾರಕ್ಕೆ ನಾವು ಹಣ ಕೊಡಲು ಆಗಲ್ಲ ಎಂದು ಕಠಿಣವಾಗಿಯೇ ಉತ್ತರ ನೀಡಿದ್ದಾರೆ. ಸಹಕಾರವನ್ನೂ ಸಹ ಕೊಡಲ್ಲ ಎಂದಿದ್ದಾರೆ. ಅಲ್ಲಿಗೆ ಅದು ಮುಗಿದಿದೆ. ನಮಗೆ ರಾಜ್ಯ ಸರ್ಕಾರದಿಂದ ರೈಲ್ವೆ ಮೇಲ್ಸೇತುವೆಗೆ ಸಹಕಾರ ಬೇಕಾಗಿಲ್ಲ. ಮೂರು ಸಾರಿ ಕೊಡಲ್ಲ ಎಂದ ಮೇಲೆ ಬೇಡ ಎಂದು ನೇರವಾಗಿ ಹೇಳಿದ್ದಾರೆ. ಇದನ್ನೂ ಓದಿ: ಅಕ್ರಮ ಪಟಾಕಿ ಕಾರ್ಖಾನೆ ಸ್ಫೋಟ – 11 ಮಂದಿ ದುರ್ಮರಣ, 60 ಮಂದಿಗೆ ಗಾಯ

  • ಲೋಕಸಭೆಗೆ ಅಲ್ಲ, ರಾಜ್ಯಸಭೆಗೆ ದೆಹಲಿಯಲ್ಲಿ ವಿ.ಸೋಮಣ್ಣ ಲಾಬಿ!

    ಲೋಕಸಭೆಗೆ ಅಲ್ಲ, ರಾಜ್ಯಸಭೆಗೆ ದೆಹಲಿಯಲ್ಲಿ ವಿ.ಸೋಮಣ್ಣ ಲಾಬಿ!

    ನವದೆಹಲಿ: ರಾಜ್ಯಸಭೆ ಚುನಾವಣೆ ಘೋಷಣೆ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಲಾಬಿ ಶುರುವಾಗಿದ್ದು ಮಾಜಿ ಸಚಿವ ವಿ.ಸೋಮಣ್ಣ (v.Somanna)  ವರಿಷ್ಠರ ಭೇಟಿಗೆ ಪ್ರಯತ್ನ ಆರಂಭಿಸಿದ್ದಾರೆ. ಭಾನುವಾರವ ರಾತ್ರಿಯೇ ದೆಹಲಿಗೆ ಆಗಮಿಸಿರುವ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೇರಿದಂತೆ ಪ್ರಮುಖ ನಾಯಕರ ಭೇಟಿಗೆ ಪ್ರಯತ್ನಿಸುತ್ತಿದ್ದಾರೆ.

    ರಾಜ್ಯದ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಮೂರು ಸ್ಥಾನ ಕಾಂಗ್ರೆಸ್‌ಗೆ (Congress) ಲಭ್ಯವಾಗಲಿದೆ. ಉಳಿದ ಬಾಕಿ ಒಂದು ಸ್ಥಾನ ಆಯ್ಕೆ ಮಾಡಿಕೊಳ್ಳಲು ಬಿಜೆಪಿಗೆ (BJP) ಅವಕಾಶವಿರುತ್ತದೆ. ಈ ಹಿನ್ನಲೆಯಲ್ಲಿ ದೆಹಲಿಯಲ್ಲಿ ಠಿಕಾಣಿ ಹೂಡಿರುವ ಅವರು ಲೋಕಸಭೆ ಬದಲಿಗೆ ರಾಜ್ಯಸಭೆಗೆ ತಮ್ಮ ಹೆಸರು ಘೋಷಿಸುವಂತೆ ವರಿಷ್ಠರಿಗೆ ಮನವಿ ಮಾಡುತ್ತಿದ್ದಾರೆ. ಇದನ್ನೂ ಓದಿ:  ವಿಶ್ವಾಸಮತ ಗೆದ್ದ ಜಾರ್ಖಂಡ್‌ ನೂತನ ಸಿಎಂ ಚಂಪೈ ಸೊರೇನ್‌

    ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ವರಿಷ್ಠರಿಗೆ ನನ್ನ ಭಾವನೆ ವ್ಯಕ್ತಪಡಿಸಿದ್ದೇನೆ. ಯಾರಿಗೆ ಅವಕಾಶ ಕೊಡುತ್ತಾರೆ ಗೊತ್ತಿಲ್ಲ. ಒಂದು ವೇಳೆ ಕೊಟ್ಟರೆ ಒಳ್ಳೆ ರೀತಿಯಲ್ಲಿ ಕೆಲಸ ಮಾಡುತ್ತೇನೆ. ಕೊಡಲಿಲ್ಲ ಅಂದರೆ ಯಾವುದೇ ಬೇಸರ ಇಲ್ಲ ಎಂದಿದ್ದಾರೆ. ತುಮಕೂರು ಕ್ಷೇತ್ರಕ್ಕೆ ನಾನು ಸ್ಪರ್ಧಿಸಬೇಕು ಎನ್ನುವುದು ಹಾಲಿ ಸಂಸದ ಬಸವರಾಜು ಅವರ ಅಭಿಲಾಷೆ. ಸ್ಥಳೀಯ ನಾಯಕರೂ ಸಹ ಬೆಂಬಲ ನೀಡುತ್ತಿದ್ದಾರೆ. ಅಂತಿಮವಾಗಿ ಎಲ್ಲವೂ ಹೈಕಮಾಂಡ್ ನಿರ್ಧರ ಮಾಡಲಿದೆ. ಕೊಟ್ಟರೆ ಜವಾಬ್ದಾರಿ ನಿಭಾಯಿಸುತ್ತೇನೆ. ಇಲ್ಲ ಅಂದರೆ ಪಕ್ಷದ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನನ್ನ ರಾಮನನ್ನು ಬಿಜೆಪಿಗೆ ಬಿಟ್ಟುಕೊಡಲ್ಲ – ಶಶಿ ತರೂರ್‌

    ಮಾಜಿ ಸಿಎಂ ಹೆಚ್‌ಡಿ.ಕುಮಾರಸ್ವಾಮಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಪಕ್ಷ ಬೇರೆ ಇರಬಹುದು. ಆದರೆ ನಾವು ಮೊದಲಿನಿಂದ ಪರಿಚಯ. ಮೊನ್ನೆ ಅವರ ತೋಟದ ಮನೆಯಲ್ಲಿ ಭೇಟಿ ಆಗಿದ್ದೇನೆ. ಅವರು 2 ಬಾರಿ ಮುಖ್ಯಮಂತ್ರಿಯಾದವರು. ಹೀಗಾಗಿ ಸಹಜವಾಗಿ ಮಾತಾಡಿದ್ದೇವೆ ಅಷ್ಟೇ. ನಾವು ಹಿಂದು ಹಿಂಗೇ ಮಾತಾಡೋಕೆ ದೇವೇಗೌಡರು ಕಾರಣ. ಅವರ ಒಡನಾಟ ಮತ್ತು ಅವರು ಕೊಟ್ಟಿರುವ ಅನುಭವ ಮಹತ್ವ ಎಂದು ಮಾಜಿ ಪ್ರಧಾನಿ ದೇವೇಗೌಡರನ್ನು ಸೋಮಣ್ಣ ಹೋಗಳಿದ್ದಾರೆ. ಇದನ್ನೂ ಓದಿ: ಹಸಿವು ಎಂದು ಬೆಕ್ಕಿನ ಹಸಿಮಾಂಸ ತಿಂದ ಭೂಪ!

    ಸುಧಾರಕರ್‌ಗೆ ಚಿಕ್ಕಬಳ್ಳಾಪುರದಿಂದ ಭರವಸೆ ನೀಡಿದ್ದಾರಾ ಇಲ್ವಾ ಗೊತ್ತಿಲ್ಲ. ಅದರ ಮಾಹಿತಿ ಇಲ್ಲ ಮತ್ತು ಆ ಬಗ್ಗೆ ಮಾತನಾಡುವುದಿಲ್ಲ. ಸುಮಲತಾ ಸ್ಪರ್ಧಿಸುವುದರ ಬಗ್ಗೆ ಹೈಕಮಾಂಡ್ ನಿರ್ಧರ ಮಾಡಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಮಥುರಾದಲ್ಲಿ ಕೃಷ್ಣ ದೇವಸ್ಥಾನ ಕೆಡವಿ ಮಸೀದಿ ನಿರ್ಮಾಣ – ಭಾರತೀಯ ಪುರಾತತ್ವ ಇಲಾಖೆ

  • ಕನಕಪುರದಲ್ಲಿ ನಾನು ಅಭ್ಯರ್ಥಿಯಲ್ಲ: ಡಿಕೆ ಶಿವಕುಮಾರ್

    ಕನಕಪುರದಲ್ಲಿ ನಾನು ಅಭ್ಯರ್ಥಿಯಲ್ಲ: ಡಿಕೆ ಶಿವಕುಮಾರ್

    ಬೆಂಗಳೂರು: ಕನಕಪುರದಲ್ಲಿ (Kanakapura) ನಾನು ಅಭ್ಯರ್ಥಿ ಅಲ್ಲ. ಇಲ್ಲಿ ಪ್ರತಿಯೊಂದು ಮನೆಯವರೂ ಅಭ್ಯರ್ಥಿಗಳೇ. 40 ವರ್ಷಗಳಿಂದ ನನ್ನನ್ನು ಸಾಕಿದ್ದಾರೆ. 8 ಚುನಾವಣೆಗಳಲ್ಲಿ (Election) ನನಗೆ ಮತಗಳನ್ನು ನೀಡಿದ್ದಾರೆ. ಪ್ರತಿಯೊಂದು ಮನೆಯವರೂ ಅಭ್ಯರ್ಥಿಗಳಾಗಿದ್ದು, ಅವರೇ ಚುನಾವಣೆಯನ್ನು ಮಾಡುತ್ತಾರೆ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಹೇಳಿದ್ದಾರೆ.

    ನಾಮಪತ್ರ (Nomination Papers) ಸಲ್ಲಿಕೆಗೆ ಇನ್ನೆರಡು ದಿನ ಬಾಕಿಯಿದೆ. ಕಾಂಗ್ರೆಸ್ (Congress) ಅಂತಿಮ ಪಟ್ಟಿ ರಿಲೀಸ್ ಕುರಿತು ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಐದು ಬೆರಳಿದೆ. ಹಾಗಾಗಿ ನಾವು ಐದು ಪಟ್ಟಿ ರಿಲೀಸ್ ಮಾಡುತ್ತೇವೆ. ಬುಧವಾರ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ. ಉಳಿದ ಎಂಟು ಕ್ಷೇತ್ರಕ್ಕೂ ಅಂದೇ ಘೋಷಣೆಯಾಗುತ್ತದೆ. ನಾನು ಹುಟ್ಟಿರೋದೆ ಅಮವಾಸ್ಯೆಯಲ್ಲಿ. ದಿನೇಶ್ ಗುಂಡೂರಾವ್ ಹಾಗೂ ರಾಮಕೃಷ್ಣ ಹೆಗಡೆ ಹುಟ್ಟಿದ್ದೂ ಅವಮಾಸ್ಯೆಯಂದೇ. ನಾಮಪತ್ರ ಸಲ್ಲಿಸಲು ಅದೆಲ್ಲಾ ನಮಗೆ ಮ್ಯಾಟರ್ ಆಗಲ್ಲ ಎಂದರು. ಇದನ್ನೂ ಓದಿ: ಕೃಷ್ಣನೂರು ಉಡುಪಿಗೆ ಯಾರು ಅಧಿಪತಿ? ಅಖಾಡ ಹೇಗಿದೆ? ಬಲಾಬಲ ಏನು? 

    ಪುಲಕೇಶಿನಗರದಲ್ಲಿ (Pulakeshinagar) ಟಿಕೆಟ್ ಕೊಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪುಲಕೇಶಿನಗರದಲ್ಲಿ ಹೊಸ ಮುಖಕ್ಕೆ ಪ್ರಾಮುಖ್ಯತೆ ಕೊಡುತ್ತೇವೆ. ಕನಕಪುರದಲ್ಲಿ ಆರ್.ಅಶೋಕ್ (R.Ashok) ನಾಮಪತ್ರ ಸಲ್ಲಿಸಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದರು. ಇದನ್ನೂ ಓದಿ: ಯುವ ಕಾಂಗ್ರೆಸ್ ಮುಖ್ಯಸ್ಥ ಬಿವಿ ಶ್ರೀನಿವಾಸ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ – ರಾಹುಲ್ ವಿರುದ್ಧವು ಕಿಡಿಕಾರಿದ ಯುವ ನಾಯಕಿ 

    ಅನಿಲ್ ಲಾಡ್ (Anil Lad) ಪಕ್ಷ ಬಿಡುವ ವಿಚಾರವಾಗಿ ಮಾತನಾಡಿದ ಅವರು, ಗಾಳಿ, ನೀರು, ಬೆಳಕು, ಸೂರ್ಯ ಉದಯಿಸುವುದು ಹಾಗೂ ಕತ್ತಲಾಗುವುದು, ರಾಜಕಾರಣಿಗಳು ಪಕ್ಷ ಬದಲಿಸುವುದು ಎಲ್ಲಾ ಇದ್ದೇ ಇರುತ್ತದೆ. ಇದನ್ನು ಯಾರೂ ತಡೆಯಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ರಾಜ್ಯಕ್ಕೆ ಬರಲಿದ್ದಾರೆ ಮೋದಿ, ಯೋಗಿ – ಬಿಜೆಪಿ ತಾರಾ ಪ್ರಚಾರಕರ ಪಟ್ಟಿಯಲ್ಲಿ ಯಾರಿದ್ದಾರೆ? 

    ಮಂಡ್ಯದಲ್ಲಿ ಕುಮಾರಸ್ವಾಮಿ (H.D.Kumaraswamy) ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾರೇ ಸ್ಪರ್ಧೆ ಮಾಡಿದರೂ ನಾವು ಈಗಾಗಲೇ ನಮ್ಮ ಅಭ್ಯರ್ಥಿಗೆ ಬಿ ಫಾರಂ ಕೊಟ್ಟಿದ್ದೇವೆ. ಅವರೇ ಸ್ಪರ್ಧೆ ಮಾಡಲಿದ್ದಾರೆ. ಕುಮಾರಸ್ವಾಮಿ ಎದುರು ಅಭ್ಯರ್ಥಿ ಬದಲಾವಣೆ ಊಹಾಪೋಹ. ಈಗಿರುವ ಅಭ್ಯರ್ಥಿಯೇ ಮುಂದುವರೆಯಲಿದ್ದಾರೆ. ಅಲ್ಲದೇ ಚಿಕ್ಕಮಗಳೂರಿನಲ್ಲಿ (Chikkamagaluru) ಬಿಜೆಪಿಯವರೇ (BJP) ಹೆಚ್‌.ಡಿ.ತಮ್ಮಯ್ಯನವರಿಗೆ (H.D.Thammaiah) ಟಿಕೆಟ್ ಕೊಡಬೇಕು ಎಂದು ಒತ್ತಾಯ ಮಾಡಿದರು. ಅವರೆಲ್ಲರ ಒತ್ತಾಯದ ಮೇರೆಗೆ ತಮ್ಮಯ್ಯನವರಿಗೆ ಟಿಕೆಟ್ ನೀಡಲಾಗಿದೆ ಎಂದರು. ಇದನ್ನೂ ಓದಿ: ಟಿವಿಯವರು ಮುಖ, ಲೋಗೋ ತೋರ್ಸೋವರ್ಗೂ ಕೆಳಗಿಳಿಯಲ್ಲ – ಟಿಕೆಟ್ ಸಿಗದ್ದಕ್ಕೆ ಟವರ್ ಏರಿ ವೀಡಿಯೋ ಮಾಡಿದ ಬಿಜೆಪಿ ಕಾರ್ಯಕರ್ತ