Tag: ಹೆಚ್‌ಎಸ್‌ಆರ್ ಲೇಔಟ್

  • ಮದುವೆಯಾಗೋದಾಗಿ ನಂಬಿಸಿ ಸೆಕ್ಸ್ – ಮತಾಂತರಕ್ಕೆ ಒಪ್ಪದ್ದಕ್ಕೆ ಹಿಂದೂ ಯುವತಿಗೆ ವಂಚಿಸಿದ್ದವ ಅರೆಸ್ಟ್

    ಮದುವೆಯಾಗೋದಾಗಿ ನಂಬಿಸಿ ಸೆಕ್ಸ್ – ಮತಾಂತರಕ್ಕೆ ಒಪ್ಪದ್ದಕ್ಕೆ ಹಿಂದೂ ಯುವತಿಗೆ ವಂಚಿಸಿದ್ದವ ಅರೆಸ್ಟ್

    – ದೈಹಿಕ ಸಂಪರ್ಕ ಬೆಳೆಸಿ, ವರಸೆ ಬದಲಿಸಿ ಮುಸ್ಲಿಂ ಯುವತಿ ಜೊತೆ ಎಂಗೇಜ್‌ಮೆಂಟ್ ಆಗಿದ್ದ ಆರೋಪಿ

    ಬೆಂಗಳೂರು: ಮದುವೆಯಾಗ್ತೀನಿ ಎಂದು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಬಳಿಕ ಮತಾಂತರಕ್ಕೆ ಒಪ್ಪದ್ದಕ್ಕೆ ಹಿಂದೂ ಯುವತಿಗೆ ವಂಚಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಮೊಹಮ್ಮದ್ ಇಶಾಕ್ ಬಂಧಿತ ಆರೋಪಿಯಾಗಿದ್ದು, ಹಿಂದೂ ಯುವತಿ ಜೊತೆ ದೈಹಿಕ ಸಂಪರ್ಕ ಬೆಳೆಸಿ, ವರಸೆ ಬದಲಿಸಿ ಮುಸ್ಲಿಂ ಯುವತಿ ಜೊತೆ ಎಂಗೇಜ್‌ಮೆಂಟ್ ಆಗಿದ್ದ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಮಹಾರಾಷ್ಟ್ರ ವೈದ್ಯೆ ಆತ್ಮಹತ್ಯೆ ಕೇಸ್ – 5 ತಿಂಗಳಿಂದ ಮಾನಸಿಕವಾಗಿ ಕಿರುಕುಳ ನೀಡಿದ್ದ ಟೆಕ್ಕಿ ಅರೆಸ್ಟ್

    ಆರೋಪಿ ವಿರುದ್ಧ ಸಂತ್ರಸ್ತ ಯುವತಿ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ದೂರು ದಾಖಲಿಸಿದ್ದರು. ಕೃತ್ಯ ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದರಿಂದ ಪೊಲೀಸರು ಪ್ರಕರಣವನ್ನು ವರ್ಗಾಯಿಸಿದ್ದರು. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಂತ್ರಸ್ತ ಯುವತಿಯನ್ನು ಆರೋಪಿ ಇಶಾಕ್ ಪ್ರೀತಿಸಿ, ಮದುವೆಯಾಗೋದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಬಳಿಕ ಆರೋಪಿ ಹಾಗೂ ಆತನ ಭಾವ ಸೇರಿಕೊಂಡು ಯುವತಿಯನ್ನು ಮತಾಂತರ ಆಗುವಂತೆ ಒತ್ತಡ ಹೇರಿದ್ದರು. ಆದರೆ ಯುವತಿ ಒಪ್ಪದ್ದಕ್ಕೆ ವರಸೆ ಬದಲಿ ಮುಸ್ಲಿಂ ಯುವತಿಯ ಜೊತೆ ಎಂಗೇಜ್‌ಮೆಂಟ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಯುವತಿಯ ದೂರಿನಲ್ಲೇನಿದೆ?
    ಸಂತ್ರಸ್ತ ಯುವತಿ ಹಾಗೂ ಆರೋಪಿ ಇಶಾಕ್ 2024ರ ಅ.17ರಂದು ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದರು. ಅಲ್ಲಿಂದ ಸ್ನೇಹ ಬೆಳೆದು, ಪ್ರೀತಿ ಶುರುವಾಗಿತ್ತು. ಮೆಸೇಜ್‌ನಿಂದಲೇ ಯುವತಿಯನ್ನು ಮೋಡಿ ಮಾಡಿದ್ದ. ಬಳಿಕ ಅ.30ರಂದು ಥಣಿಸಂದ್ರದ ಮಾಲ್‌ನಲ್ಲಿ ಇಬ್ಬರು ಮೊದಲ ಬಾರಿ ಭೇಟಿಯಾಗಿದ್ದರು. ಭೇಟಿ ವೇಳೆ ಮನೆಯವರ ಜೊತೆ ಮಾತನಾಡಿ ಮದುವೆ ಆಗ್ತೀನಿ ಅಂತ ನಂಬಿಸಿದ್ದ.

    ಭೇಟಿಯಾದ ದಿನವೇ ದಾಸರಹಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿ, ಯುವತಿಯನ್ನು ಕರೆದುಕೊಂಡು ಹೋಗಿದ್ದ. ಮದುವೆ ಆಗ್ತೀನಿ ನಂಬಿಸಿ ಹಲವು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದ. ಅದಾದ ಸ್ವಲ್ಪ ದಿನಗಳ ನಂತರ ಆತನಿಗೆ ಬೇರೆ ಬೇರೆ ಹುಡುಗಿಯರ ಸಹವಾಸ ಇರೋದು ಯುವತಿಗೆ ತಿಳಿದು, ಆತನಿಗೆ ಪ್ರಶ್ನೆ ಮಾಡಿದ್ದಳು. ಇದೆಲ್ಲ ಆದ ನಂತರ 2025ರ ಸೆ.14ರಂದು ಆರೋಪಿ ಇಶಾಕ್ ಮುಸ್ಲಿಂ ಯುವತಿ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ. ವಿಷಯ ತಿಳಿದ ಯುವತಿ ಆತನನ್ನು ಪ್ರಶ್ನೆ ಮಾಡಿದಾಗ, ನಿನ್ನ ದಾರಿ ನೀನು ನೋಡ್ಕೋ ಎಂದು ಹೇಳಿದ್ದ ಅಂತ ಯುವತಿನಲ್ಲಿ ದೂರಿನಲ್ಲಿ ಉಲ್ಲೇಖಿಸಿದ್ದರು.

    ಕಳೆದ ಮೂರು ತಿಂಗಳಿನಿಂದ ಇಶಾಕ್ ನನ್ನ ಅವೈಡ್ ಮಾಡ್ತಿದ್ದ. ಅದಾದ ಬಳಿಕ ಅವನಿಗೆ ಎಂಗೇಜ್‌ಮೆಂಟ್ ಆಗಿರೋ ವಿಷಯ ತಿಳಿಯಿತು. ನಾನು ಆತ್ಮಹತ್ಯೆಗೂ ಯತ್ನಿಸಿದೆ. ಆಗ ಆತನ ಪೋಷಕರು ಕರೆ ಮಾಡಿ, ಅವನನ್ನು ಮದುವೆಯಾಗಬೇಕು ಅಂದ್ರೆ ಮುಸ್ಲಿಂಗೆ ಮತಾಂತರ ಆಗಬೇಕು ಎಂದು ಕಂಡೀಷನ್ ಹಾಕಿದ್ದರು. ಅವನು ಯಾವಾಗಲೂ ಬೇರೆ ಯುವತಿಯರ ಜೊತೆ ಚಾಟ್ ಮಾಡ್ತಿದ್ದ. ಒಂದು ವರ್ಷದಿಂದ ನನ್ನ ಜೊತೆ ಸುತ್ತಾಡಿದ್ದ ಎಲ್ಲಾ ರೀತಿಯಲ್ಲಿ ಮೂವ್ ಆಗಿದ್ದು, ಈಗ ನನಗೆ ಮೋಸ ಮಾಡಿದ್ದಾನೆ ಎಂದು ಯುವತಿ ನೋವನ್ನು ಹೇಳಿಕೊಂಡಿದ್ದಳು.ಇದನ್ನೂ ಓದಿ: ಮಧ್ಯಪ್ರದೇಶ | ಆಸ್ಟ್ರೇಲಿಯಾದ ಇಬ್ಬರು ಮಹಿಳಾ ಕ್ರಿಕೆಟಿಗರಿಗೆ ಲೈಂಗಿಕ ಕಿರುಕುಳ – ಆರೋಪಿ ಅರೆಸ್ಟ್‌

  • ಪ್ರೀತಿಸಿ, ಮದುವೆಯಾಗ್ತೀನಿ ಅಂತ ನಂಬಿಸಿ ಸೆಕ್ಸ್ – ಹಿಂದೂ ಹುಡುಗಿಗೆ ವಂಚಿಸಿ ಮುಸ್ಲಿಂ ಯುವತಿ ಜೊತೆ ಎಂಗೇಜ್

    ಪ್ರೀತಿಸಿ, ಮದುವೆಯಾಗ್ತೀನಿ ಅಂತ ನಂಬಿಸಿ ಸೆಕ್ಸ್ – ಹಿಂದೂ ಹುಡುಗಿಗೆ ವಂಚಿಸಿ ಮುಸ್ಲಿಂ ಯುವತಿ ಜೊತೆ ಎಂಗೇಜ್

    – ಮೊದಲ ಭೇಟಿಯಲ್ಲೇ ಮೋಡಿ ಮಾಡಿ ಲವ್ವರ್‌ನ ರೂಮ್‌ಗೆ ಕರೆದುಕೊಂಡು ಹೋಗಿದ್ದ ವಂಚಕ

    ಬೆಂಗಳೂರು: ಪ್ರೀತಿಸಿ, ಮದುವೆಯಾಗ್ತೀನಿ ಎಂದು ನಂಬಿಸಿ ಹಿಂದೂ ಯುವತಿ ಜೊತೆ ದೈಹಿಕ ಸಂಪರ್ಕ ಬೆಳೆಸಿ, ಬಳಿಕ ಮುಸ್ಲಿಂ ಯುವತಿ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಆರೋಪಿಯನ್ನು ಮೊಹಮದ್ ಇಶಾಕ್ ಎಂದು ಗುರುತಿಸಲಾಗಿದ್ದು, ಈತನ ವಿರುದ್ಧ ಸಂತ್ರಸ್ತ ಯುವತಿ ಹೆಚ್‌ಎಸ್‌ಆರ್ (HSR Layout) ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಇದನ್ನೂ ಓದಿ: ಬಿಗ್‌ ಬಾಸ್‌ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ದೂರು ದಾಖಲು

    ಸಂತ್ರಸ್ತ ಯುವತಿ ಹಾಗೂ ಆರೋಪಿ ಇಶಾಕ್ 2024ರ ಅ.17ರಂದು ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದರು. ಅಲ್ಲಿಂದ ಸ್ನೇಹ ಬೆಳೆದು, ಪ್ರೀತಿ ಶುರುವಾಗಿತ್ತು. ಮೆಸೇಜ್‌ನಿಂದಲೇ ಯುವತಿಯನ್ನು ಮೋಡಿ ಮಾಡಿದ್ದ. ಬಳಿಕ ಅ.30ರಂದು ಥಣಿಸಂದ್ರದ ಮಾಲ್‌ನಲ್ಲಿ ಇಬ್ಬರು ಮೊದಲ ಬಾರಿ ಭೇಟಿಯಾಗಿದ್ದರು. ಭೇಟಿ ವೇಳೆ ಮನೆಯವರ ಜೊತೆ ಮಾತನಾಡಿ ಮದುವೆ ಆಗ್ತೀನಿ ಅಂತ ನಂಬಿಸಿದ್ದ.

    ಭೇಟಿಯಾದ ದಿನವೇ ದಾಸರಹಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿ, ಯುವತಿಯನ್ನು ಕರೆದುಕೊಂಡು ಹೋಗಿದ್ದ. ಮದುವೆ ಆಗ್ತೀನಿ ನಂಬಿಸಿ ಹಲವು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದ. ಅದಾದ ಸ್ವಲ್ಪ ದಿನಗಳ ನಂತರ ಆತನಿಗೆ ಬೇರೆ ಬೇರೆ ಹುಡುಗಿಯರ ಸಹವಾಸ ಇರೋದು ಯುವತಿಗೆ ತಿಳಿದು, ಆತನಿಗೆ ಪ್ರಶ್ನೆ ಮಾಡಿದ್ದಳು. ಇದೆಲ್ಲ ಆದ ನಂತರ 2025ರ ಸೆ.14ರಂದು ಆರೋಪಿ ಇಶಾಕ್ ಮುಸ್ಲಿಂ ಯುವತಿ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ. ವಿಷಯ ತಿಳಿದ ಯುವತಿ ಆತನನ್ನು ಪ್ರಶ್ನೆ ಮಾಡಿದಾಗ, ನಿನ್ನ ದಾರಿ ನೀನು ನೋಡ್ಕೋ ಎಂದು ಹೇಳಿದ್ದ ಅಂತ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಕಳೆದ ಮೂರು ತಿಂಗಳಿನಿಂದ ಇಶಾಕ್ ನನ್ನ ಅವೈಡ್ ಮಾಡ್ತಿದ್ದ. ಅದಾದ ಬಳಿಕ ಅವನಿಗೆ ಎಂಗೇಜ್‌ಮೆಂಟ್ ಆಗಿರೋ ವಿಷಯ ತಿಳಿಯಿತು. ನಾನು ಆತ್ಮಹತ್ಯೆಗೂ ಯತ್ನಿಸಿದೆ. ಆಗ ಆತನ ಪೋಷಕರು ಕರೆ ಮಾಡಿ, ಅವನನ್ನು ಮದುವೆಯಾಗಬೇಕು ಅಂದ್ರೆ ಮುಸ್ಲಿಂಗೆ ಮತಾಂತರ ಆಗಬೇಕು ಎಂದು ಕಂಡೀಷನ್ ಹಾಕಿದ್ದರು. ಅವನು ಯಾವಾಗಲೂ ಬೇರೆ ಯುವತಿಯರ ಜೊತೆ ಚಾಟ್ ಮಾಡ್ತಿದ್ದ. ಒಂದು ವರ್ಷದಿಂದ ನನ್ನ ಜೊತೆ ಸುತ್ತಾಡಿದ್ದ ಎಲ್ಲಾ ರೀತಿಯಲ್ಲಿ ಮೂವ್ ಆಗಿದ್ದು, ಈಗ ನನಗೆ ಮೋಸ ಮಾಡಿದ್ದಾನೆ ಎಂದು ಯುವತಿ ನೋವು ತೋಡಿಕೊಂಡಿದ್ದಾಳೆ.

    ಸದ್ಯ ಈ ಸಂಬಂಧ ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ವಾಪಸ್ – ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ

  • ಕಾಲ್‌ಸೆಂಟರ್ ಹೆಸರಲ್ಲಿ ಡಿಜಿಟಲ್ ಅರೆಸ್ಟ್ – ಹೊರರಾಜ್ಯದವರನ್ನೇ ಟಾರ್ಗೆಟ್ ಮಾಡ್ತಿದ್ದ 16 ಜನರ ಗ್ಯಾಂಗ್ ಬಂಧನ

    ಕಾಲ್‌ಸೆಂಟರ್ ಹೆಸರಲ್ಲಿ ಡಿಜಿಟಲ್ ಅರೆಸ್ಟ್ – ಹೊರರಾಜ್ಯದವರನ್ನೇ ಟಾರ್ಗೆಟ್ ಮಾಡ್ತಿದ್ದ 16 ಜನರ ಗ್ಯಾಂಗ್ ಬಂಧನ

    ಬೆಂಗಳೂರು: ಕಾಲ್‌ಸೆಂಟರ್ (Call Center) ಹೆಸರಲ್ಲಿ ಡಿಜಿಟಲ್ ಅರೆಸ್ಟ್ (Digital Arrest) ಮಾಡಿ ಜನರಿಗೆ ವಂಚಿಸುತ್ತಿದ್ದ ಅಡ್ಡೆ ಮೇಲೆ ಹೆಚ್‌ಎಸ್‌ಆರ್ ಲೇಔಟ್ (HSR Layout) ಪೊಲೀಸರು ದಾಳಿ ನಡೆಸಿ, 16 ಜನರ ಗ್ಯಾಂಗ್‌ವೊಂದನ್ನು ಬಂಧಿಸಿದ್ದಾರೆ.

    ಹೌದು, ಇತ್ತೀಚಿನ ದಿನಗಳಲ್ಲಿ ಇಡಿ, ಸಿಸಿಬಿ, ಸಿಬಿಐ, ಜಡ್ಜ್‌ಗಳ ಹೆಸರಲ್ಲಿ ವಿವಿಧ ಕಾರಣಗಳನ್ನ ನೀಡಿ ಜನರಿಗೆ ಬೆದರಿಸಿ ಕೋಟ್ಯಂತರ ರೂಪಾಯಿ ವಂಚಿಸಿ ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದರು. ಆದರೆ ಇದೀಗ ಗ್ಯಾಂಗ್‌ವೊಂದು ಬೆಂಗಳೂರಿನಲ್ಲಿ ಕಾಲ್‌ಸೆಂಟರ್ ರೀತಿಯಲ್ಲಿ ಎರಡು ಫ್ಲೋರ್‌ನಲ್ಲಿ ವ್ಯವಸ್ಥಿತವಾಗಿ ಕೆಲಸಗಾರರನ್ನು ಸಂಬಳ ಕೊಟ್ಟು ಡಿಜಿಟಲ್ ಅರೆಸ್ಟ್ ಮಾಡಿ, ಜನರ ಬಳಿ ಸುಲಿಗೆ ಮಾಡಿರೋದು ಬೆಳಕಿಗೆ ಬಂದಿದೆ.ಇದನ್ನೂ ಓದಿ: ಡಿಕೆಶಿಗೆ ಹಾಸನಾಂಬೆ ಮಹಾಪ್ರಸಾದ – ಪೂಜೆ ವೇಳೆ ಬಲಗಡೆ ಹೂವು ವರ ನೀಡಿದ ದೇವಿ

    ಬಂಧಿತರನ್ನ ವಿಚಾರಣೆ ಮಾಡಿದಾಗ ಮೋಸಹೋದವರು ಬಹುತೇಕ ದೆಹಲಿ ಸೇರಿದಂತೆ ಹೊರರಾಜ್ಯದವರು ಎಂದು ತಿಳಿದುಬಂದಿದೆ. ಹೀಗಾಗಿ ಪೊಲೀಸರು ಮೋಸ ಹೋದವರನ್ನ ಸಂಪರ್ಕಿಸಿ, ಅವರಿಂದ ದೂರು ದಾಖಲಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ.

    ಇನ್ನೂ ದುಪ್ಪಟ್ಟು ಹಣದಾಸೆಗಾಗಿ ಯಾವುದೇ ಕಾರಾರು ಬರೆಸಿಕೊಳ್ಳದೆ ಮಾಲೀಕ ಎರಡು ಫ್ಲೋರ್‌ಗಳನ್ನು ಬಾಡಿಗೆ ಕೊಟ್ಟಿರುವುದು ಕಂಡುಬಂದಿದೆ. ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಅರೆಸ್ಟ್ ಮಾಡುತ್ತಿದ್ದಂತೆ ವಿಷಯ ತಿಳಿದು ಮಾಲೀಕರು ತಲೆಮರಿಸಿಕೊಂಡಿದ್ದಾರೆ. ಸದ್ಯ ಮಾಲೀಕರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇತ್ತ ಪೂರ್ವ ವಿಭಾಗದ ಜಂಟಿ ಪೊಲೀಸ್ ಆಯುಕ್ತರ ನೇತೃತ್ವದ ವಿಶೇಷ ತಂಡ ಮುಂಬೈಯಲ್ಲಿ ವಂಚಕರಿಗಾಗಿ ಹುಡಕಾಟ ನಡೆಸುತ್ತಿದ್ದಾರೆ.ಇದನ್ನೂ ಓದಿ:ಕೇರಳ ಶೈಲಿಯ ಫಿಶ್ ಫ್ರೈ ಸವಿದರೆ ಮತ್ತೆ ಮತ್ತೆ ಅದೇ ಬೇಕು ಅಂತೀರ

  • ಡಿಜಿಟಲ್ ಅರೆಸ್ಟ್ ಎಂದು ಬೆದರಿಸಿ ಲಕ್ಷ ಲಕ್ಷ ವಸೂಲಿ – ಡೆತ್‌ನೋಟ್ ಬರೆದಿಟ್ಟು ಬೆಸ್ಕಾಂ ಸಿಬ್ಬಂದಿ ಆತ್ಮಹತ್ಯೆ

    ಡಿಜಿಟಲ್ ಅರೆಸ್ಟ್ ಎಂದು ಬೆದರಿಸಿ ಲಕ್ಷ ಲಕ್ಷ ವಸೂಲಿ – ಡೆತ್‌ನೋಟ್ ಬರೆದಿಟ್ಟು ಬೆಸ್ಕಾಂ ಸಿಬ್ಬಂದಿ ಆತ್ಮಹತ್ಯೆ

    ರಾಮನಗರ: ಡಿಜಿಟಲ್ ಅರೆಸ್ಟ್ (Digital Arrest) ಎಂದು ಬೆದರಿಕೆ ಹಾಕಿ ಲಕ್ಷ ಲಕ್ಷ ಹಣ ದೋಚಿದ್ದಲ್ಲದೇ, ಮತ್ತೆ ಹಣ ಕೊಡುವಂತೆ ಬೆದರಿಕೆ ಹಾಕಿದ ಹಿನ್ನೆಲೆ ಬೆಸ್ಕಾಂ (BESCOM) ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಪಟ್ಟಣ (Channapatna) ತಾಲೂಕಿನ ಕೆಲಗೆರೆ ಗ್ರಾಮದಲ್ಲಿ ನಡೆದಿದೆ. ಸೈಬರ್ ವಂಚಕರ ಕಿರುಕುಳದ ಬಗ್ಗೆ ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ನೇಣಿಗೆ ಶರಣಾಗಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ.

    ಬೆಸ್ಕಾಂ ಸಿಬ್ಬಂದಿ 42 ವರ್ಷದ ಕುಮಾರ್ ಸೈಬರ್ ವಂಚಕರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಲ್ಲದೇ ಕುಮಾರ್ ಡೆತ್‌ನೋಟ್‌ನಲ್ಲಿ ಡಿಜಿಟಲ್ ಅರೆಸ್ಟ್ ಕಿರುಕುಳದ ಬಗ್ಗೆ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ ದಂಪತಿಗೆ ಹೆಣ್ಣು ಮಗು ಜನನ

    ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಬೆಸ್ಕಾಂ ಹೊರಗುತ್ತಿಗೆ ನೌಕರರನಾಗಿ ಕುಮಾರ್ ಕೆಲಸ ಮಾಡುತ್ತಿದ್ದರು. ವಿಕ್ರಮ್ ಗೋಸ್ವಾಮಿ ಎಂಬಾತ ವೀಡಿಯೋ ಕಾಲ್ ಮಾಡಿ ತಾನು ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ನೀವು ಡಿಜಿಟಲ್ ಅರೆಸ್ಟ್ ಆಗಿದ್ದೀರಿ ಎಂದು ಬೆದರಿಸಿದ್ದ. ಕೇಸ್‌ನಿಂದ ಕೈಬಿಡಲು ಅಕೌಂಟ್‌ಗೆ ಹಣ ಹಾಕು ಎಂದು ಬೆದರಿಸಿದ್ದ. ಸುಮಾರು 11 ಲಕ್ಷ ಹಣವನ್ನ ತನ್ನ ಅಕೌಂಟ್‌ಗೆ ಹಾಕಿಸಿಕೊಂಡಿದ್ದ. ಆದರೆ ಮತ್ತೆ ಹಣ ನೀಡುವಂತೆ ಬೆದರಿಸಿದ್ದ. ಕಿರುಕುಳಕ್ಕೆ ಬೇಸತ್ತ ಕುಮಾರ್ ಡೆತ್‌ನೋಟ್ ಬರೆದು ನೇಣಿಗೆ ಶರಣಾಗಿದ್ದಾರೆ. ಡೆತ್‌ನೋಟ್‌ನಲ್ಲಿ ತನ್ನ ಅನಾರೋಗ್ಯದ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಬೇಕರಿ, ದಿನಸಿ ಅಂಗಡಿಗಳಿಗೆ ಲಕ್ಷ ಲಕ್ಷ ಟ್ಯಾಕ್ಸ್‌ – ಬಂದ್‌ ಎಚ್ಚರಿಕೆ ಕೊಟ್ಟ ಮಾಲೀಕರು

    ಡೆತ್‌ನೋಟ್‌ನಲ್ಲಿ ಏನಿದೆ?
    ವಿಕ್ರಂ ಗೋಸ್ವಾಮಿ, ಸಿಬಿಐ ಅಂತ ನನಗೆ 8109931663ರ ನಂಬರ್‌ನಿಂದ ಫೋನ್ ಮಾಡಿ ನಿನ್ನ ಮೇಲೆ ಅರೆಸ್ಟ್ ವಾರೆಂಟ್ ಇದೆ ಎಂದು ಹೆದರಿಸಿ ನನ್ನ ಅಕೌಂಟಿಗೆ 1,95,000 ರೂ. ಹಾಕು ಎಂದು ಅಕೌಂಟ್ ನಂಬರ್ ಕಳುಹಿಸಿದ್ದು, ನಾನು ಭಯಪಟ್ಟು ಹಣವನ್ನು ಹಾಕಿದೆ. ನಂತರ ಮತ್ತೆ ಫೋನ್ ಮಾಡಿ ಆ ಅಕೌಂಟ್‌ಗೆ ಹಾಕು, ಈ ಅಕೌಂಟ್‌ಗೆ ಹಾಕು ಎಂದು ನನ್ನಿಂದ ಸುಮಾರು 11 ಲಕ್ಷ ಹಾಕಿಸಿಕೊಂಡಿರುತ್ತಾರೆ. ನಂತರ ನನ್ನ ಪರ್ಸನಲ್ ನಂಬರ್ ಹಾಗೂ ವಾಟ್ಸಪ್ ನಂಬರ್‌ಗೆ 9752140613 ಹಾಗೂ 9812177540ರ ನಂಬರಿಗೆ 2,75,000 ರೂ. ಕಳುಹಿಸು ಎಂದು ಕಾಡಿಸುತ್ತಿದ್ದಾರೆ. ಆದ ಕಾರಣ ನನ್ನ ಸಾವನ್ನ ನಾನೇ ತಂದುಕೊಂಡಿದ್ದೇನೆ ಎಂದು ಬರೆಯಲಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಹತ್ಯೆ

    ಘಟನೆ ಸಂಬಂಧ ಚನ್ನಪಟ್ಟಣ ತಾಲೂಕಿನ ಎಂ.ಕೆ.ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡೆತ್‌ನೋಟ್ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಸದ್ಯ ಈ ಪ್ರಕರಣ ಸೈಬರ್ ಪೊಲೀಸ್ ಠಾಣೆಗೆ ವರ್ಗಾವಣೆ ಆಗಿದೆ. ಇದನ್ನೂ ಓದಿ: ವಾಕಿಂಗ್ ವೇಳೆ ಕಾರು ಡಿಕ್ಕಿ – ಮ್ಯಾರಥಾನ್ ಓಟಗಾರ ಶತಾಯುಷಿ ಫೌಜಾ ಸಿಂಗ್ ಸಾವು

  • HSR ಲೇಔಟ್ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ ಕೇಸ್‌ – 555 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

    HSR ಲೇಔಟ್ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ ಕೇಸ್‌ – 555 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

    ಬೆಂಗಳೂರು: ಹೆಚ್‌ಎಸ್‌ಆರ್ ಲೇಔಟ್ (HSR Layout) ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್‌ಎಸ್‌ಆರ್ ಲೇಔಟ್ ಪೊಲೀಸರು (HSR Layout Police)ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

    ಆರೋಪಿ ಮುಖೇಶ್ವರನ್ ವಿರುದ್ಧ 555 ಪುಟಗಳ ದೋಷಾರೋಪ ಪಟ್ಟಿಯನ್ನು 39 ಎಸಿಜೆಎಂ ಕೋರ್ಟ್ ಸಲ್ಲಿಸಿದ್ದಾರೆ. ಒಟ್ಟು 86 ಸಾಕ್ಷಿಗಳು, ಸಿಆರ್‌ಪಿಸಿ 164 ಅಡಿಯಲ್ಲಿ 4 ಜನರ ಹೇಳಿಕೆ, ಮೂವರು ಪ್ರತ್ಯಕ್ಷದರ್ಶಿಗಳ ಹೇಳಿಕೆ ಕೂಡ ಚಾರ್ಜ್ ಶೀಟ್‌ನಲ್ಲಿ ದಾಖಲಿಸಲಾಗಿದೆ. ಇದನ್ನೂ ಓದಿ: ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮಿಸ್ಸಿಂಗ್; ನಾಪತ್ತೆ ಹಿಂದಿದ್ಯಾ ಮಹಿಳೆ ಕೈವಾಡ? ಬ್ಲ್ಯಾಕ್‌ಮೇಲ್‌ಗೆ ಬಲಿಯಾದ್ರಾ?

    ಏನಿದು ಕೇಸ್‌?
    ಕಳೆದ ಆಗಸ್ಟ್‌ 17ರಂದು ರಾತ್ರಿ ಪಬ್‌ಗೆ ಬಂದಿದ್ದ ಯುವತಿ ಬೈಕ್‌ನಲ್ಲಿ ಡ್ರಾಪ್ ಪಡೆದಿದ್ದಳು. ಈ ವೇಳೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಆರೋಪಿ ಮುಖೇಶ್ವರನ್‌ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂದು ಯುವತಿ ದೂರು ಹೆಚ್‌ಎಸ್‌ಆರ್‌ ಲೇಔಟ್‌ ಪೊಲೀಸರಿಗೆ ದೂರು ನೀಡಿದ್ದರು. ಯುವತಿ ನೀಡಿದ ದೂರಿನ ಮೇರೆಗೆ ಮುಖೇಶ್ವರನ್‌ ವಿರುದ್ಧ ಬಿಎನ್‌ಎಸ್ 64, 117(2) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ರ‍್ಯಾಗಿಂಗ್ ಆರೋಪ – 10 ವೈದ್ಯರು ಸೇರಿ 59 ಮಂದಿ ಸಸ್ಪೆಂಡ್‌!

    ಆರೋಪಿಯು ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿದ್ದ ಎಂದು ಹೇಳಲಾಗಿದೆ. ಬೆಂಗಳೂರು ನಗರ ಪೊಲೀಸ್‌ ಆಯುಕ್ತ ದಯಾನಂದ್‌ ಸಹ ಹೆಚ್‌ಎಸ್‌ಆರ್‌ ಲೇಔಟ್‌ ಠಾಣೆಗೆ ಭೇಟಿ ನೀಡಿ ಕೃತ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ತಮಿಳುನಾಡು ಮೂಲದ ಮುಖೇಶ್ವರನ್ ಆಡುಗೋಡಿಯ ಚಂದ್ರಪ್ಪನಗರದಲ್ಲಿ ವಾಸವಾಗಿದ್ದ. ಬೈಕ್ ನಂಬರ್ ಅಧರಿಸಿ ಆರೋಪಿಯನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ಜಾತಿ ಗಣತಿ ವರದಿ ಕ್ಯಾಬಿನೆಟ್‌ನಲ್ಲಿ ಚರ್ಚೆಯಾಗಲಿ ಆಮೇಲೆ ನೋಡೋಣ – ಪರಮೇಶ್ವರ್

  • ತಂದೆಯ ಕಾರು ಹರಿದು ಪುಟ್ಟ ಕಂದಮ್ಮ ದುರ್ಮರಣ

    ತಂದೆಯ ಕಾರು ಹರಿದು ಪುಟ್ಟ ಕಂದಮ್ಮ ದುರ್ಮರಣ

    ಬೆಂಗಳೂರು: ಆಕಸ್ಮಿಕವಾಗಿ ತಂದೆಯಿಂದಲೇ ಕಾರು (Car) ಹರಿದು ಮಗು (Child) ಸಾವನ್ನಪ್ಪಿರೋ ಘಟನೆ ಹೆಚ್‌ಎಸ್‌ಆರ್ ಲೇಔಟ್‌ನ (HSR Layout) ಆಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಒಂದೂವರೆ ವರ್ಷದ ಶೈಜಾ ಜನ್ನತ್ ಮೃತ ಕಂದಮ್ಮ. ಏಪ್ರಿಲ್ 21ರ ರಾತ್ರಿ 11:30ಕ್ಕೆ ಘಟನೆ ನಡೆದಿದೆ. ಸಂಬಂಧಿಗಳ ಮದುವೆಗೆ ಎಂದು ಚನ್ನಪಟ್ಟಣಕ್ಕೆ ಹೋಗಿದ್ದ ಕುಟುಂಬ ವಾಪಸ್ ಆಗಿತ್ತು. ಕಾರಿನಿಂದ ಇಳಿದು ಎಲ್ಲರೂ ಮನೆ ಒಳಗೆ ಹೋಗಿದ್ದರು. ಮಗುವಿನ ತಂದೆ ಕಾರಿನಿಂದ ಲಗೇಜ್ ತೆಗೆದು ಮನೆಯೊಳಗೆ ಇಡುತ್ತಿದ್ದರು. ಈ ವೇಳೆ ಮಗು ತಂದೆಯ ಹತ್ತಿರ ಓಡಿ ಬಂದಿದೆ. ಇದನ್ನೂ ಓದಿ: ಜಮ್ಮು ಕಾಶ್ಮೀರದ ರಜೌರಿಯಲ್ಲಿ ಉಗ್ರರ ಅಟ್ಟಹಾಸ – ಗುಂಡಿನ ದಾಳಿಗೆ ಓರ್ವ ಬಲಿ

    ಕಾರಿನಲ್ಲಿದ್ದ ಲಗೇಜ್ ಮನೆಯೊಳಗೆ ಇಡುತ್ತಿದ್ದಾಗ ಮಗು ಕಾರಿನ ಡೋರ್ ಬಳಿಯೇ ನಿಂತಿತ್ತು. ಆದರೆ ಇದನ್ನು ತಂದೆ ಗಮನಿಸಿರಲಿಲ್ಲ. ಲಗೇಜ್ ತೆಗೆದು ಕಾರು ಚಾಲನೆ ಮಾಡಿದ ಸಂದರ್ಭ ಆಕಸ್ಮಿಕವಾಗಿ ಕಾರು ಮಗು ಮೇಲೆ ಹರಿದಿದೆ. ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಮದುವೆ ಮಂಟಪಕ್ಕೆ ನುಗ್ಗಿ ವಧುವನ್ನು ಎಳೆದೊಯ್ಯಲು ಯತ್ನಿಸಿದ ಆಕೆಯ ಕುಟುಂಬ!

    ಈ ಕುರಿತು ಹೆಚ್‌ಎಸ್‌ಆರ್ ಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ತೈವಾನ್​ನಲ್ಲಿ 24 ಗಂಟೆಯೊಳಗೆ 80ಕ್ಕೂ ಹೆಚ್ಚು ಬಾರಿ ಕಂಪಿಸಿದ ಭೂಮಿ!