Tag: ಹೃದಯ ಸ್ತಂಬನ

  • ಮದುವೆಯಲ್ಲಿ ಡಾನ್ಸ್‌ ಮಾಡುತ್ತಿದ್ದಾಗಲೇ ಹೃದಯ ಸ್ತಂಭನ – ವೇದಿಕೆಯಲ್ಲೇ ಎಂಬಿಎ ಪದವೀಧರೆ ಸಾವು

    ಮದುವೆಯಲ್ಲಿ ಡಾನ್ಸ್‌ ಮಾಡುತ್ತಿದ್ದಾಗಲೇ ಹೃದಯ ಸ್ತಂಭನ – ವೇದಿಕೆಯಲ್ಲೇ ಎಂಬಿಎ ಪದವೀಧರೆ ಸಾವು

    – 12ನೇ ವಯಸ್ಸಿನಲ್ಲೇ ಆಕೆಯ ಸಹೋದರನೂ ಹೃದಯಾಘಾತದಿಂದಲೇ ಸಾವು

    ಭೋಪಾಲ್‌: ಮದುವೆ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿದ್ದಾಗಲೇ ಹೃದಯಸ್ತಂಭನದಿಂದ (Cardiac Arrest) 23ರ ಯುವತಿಯೊಬ್ಬಳು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ (Madhya Pradesh) ವಿದಿಶಾ ಜಿಲ್ಲೆಯ ರೆಸಾರ್ಟ್‌ನಲ್ಲಿ ನಡೆದಿದೆ.

    ಯುವತಿಯನ್ನು ಇಂದೋರ್ ನಿವಾಸಿ ಪರಿಣಿತಾ ಜೈನ್ ಎಂದು ಗುರುತಿಸಲಾಗಿದ್ದು, ಆಕೆಯ ಸೋದರ ಸಂಬಂಧಿ ಮದುವೆಯಲ್ಲಿ (Wedding) ಪಾಲ್ಗೊಂಡಿದ್ದರು. 200ಕ್ಕೂ ಹೆಚ್ಚು ಗಣ್ಯರು ಉಪಸ್ಥಿತರಿದ್ದರು. ಈ ವೇಳೆ ಪರಿಣಿತಾ ವೇದಿಕೆಯಲ್ಲಿ ಬಾಲಿವುಡ್‌ ಗೀತೆಯೊಂದಕ್ಕೆ ನೃತ್ಯ ಮಾಡುತ್ತಿದ್ದಾಗಲೇ ಹೃದಯ ಸ್ತಂಬನದಿಂದ ಸಾವನ್ನಪ್ಪಿದ್ದಾರೆ. ಆಕೆ ಕುಸಿದು ಬಿದ್ದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿದ ನಂತರ ಘಟನೆ ಬೆಳಕಿಗೆ ಬಂದಿದೆ.

    ಈ ವೇಳೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವೈದ್ಯರು ಆಕೆಗೆ ಸಿಪಿಆರ್ (ಕಾರ್ಡಿಯೋಪಲ್ಮನರಿ ರೆಸಸಿಟೇಶನ್) ನೀಡಲು ಪ್ರಯತ್ನಿಸಿದ್ರು, ಆದ್ರೆ ಪ್ರಯೋಜನವಾಗಲಿಲ್ಲ. ತಕ್ಷಣ ಅಲ್ಲಿಂದ ಖಾಸಗಿ ಅಸ್ಪತ್ರೆಗೆ ಕರೆದೊಯ್ಯಲಾಯಿತು ಅಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ರು. ಇದನ್ನೂ ಓದಿ: ಇಂದಿನಿಂದ ಟಿ.ನರಸೀಪುರದಲ್ಲಿ ದಕ್ಷಿಣ ಭಾರತದ ಏಕೈಕ ಕುಂಭಮೇಳ

    ಎಂಬಿಎ ಪದವೀಧರರಾಗಿದ್ದ ಪರಿಣಿತಾ ತಮ್ಮ ಪೋಷಕರೊಂದಿಗೆ ಇಂದೋರ್‌ನ ದಕ್ಷಿಣ ತುಕೋಗಂಜ್‌ನಲ್ಲಿ ವಾಸಿಸುತ್ತಿದ್ದರು. ಮೂಲಗಳ ಪ್ರಕಾರ, ಆಕೆಯ ಸಹೋದರನೊಬ್ಬ 12ನೇ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ. ಇದನ್ನೂ ಓದಿ:  Aero India 2025 | ವೈಮಾನಿಕ ಪ್ರದರ್ಶನಕ್ಕಿಂದು ಚಾಲನೆ – ರಷ್ಯಾ, ಅಮೆರಿಕ ಸೇರಿ 90 ದೇಶಗಳು ಭಾಗಿ

  • ನೀಲಿ ತಾರೆ ಎಮಿಲಿ ವಿಲ್ಲಿಸ್‌ಗೆ ಹೃದಯ ಸ್ತಂಭನ – ನಟಿ ಸಾವು ಬದುಕಿನ ಮಧ್ಯೆ ಹೋರಾಟ

    ನೀಲಿ ತಾರೆ ಎಮಿಲಿ ವಿಲ್ಲಿಸ್‌ಗೆ ಹೃದಯ ಸ್ತಂಭನ – ನಟಿ ಸಾವು ಬದುಕಿನ ಮಧ್ಯೆ ಹೋರಾಟ

    ವಾಷಿಂಗ್ಟನ್‌: ಕಳೆದ ಒಂದು ತಿಂಗಳಲ್ಲಿ ವಿವಿಧ ಕಾರಣಗಳಿಂದ ಮೂರ್ನಾಲ್ಕು ಮಂದಿ ನೀಲಿ ತಾರೆಯರು ಸಾವನ್ನಪ್ಪಿದ್ದಾರೆ. ಇದೀಗ ಅಮೆರಿಕದ ನೀಲಿ ತಾರೆ ಎಲಿಮಿ ವಿಲ್ಲಿಸ್‌ (Emily Willis) ಹೃದಯ ಸ್ತಂಭನದಿಂದ (Cardiac Arrest) ಕೋಮಾಗೆ ತಲುಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಎಮಿಲಿ ವಿಲ್ಲಿಸ್‌ ಕೋಮಾಗೆ (Coma) ತಲುಪಿದ ಸುದ್ದಿ ಹರಿದಾಡುತ್ತಿದ್ದಂತೆ ಪೋರ್ನ್‌ ಚಿತ್ರರಂಗದಲ್ಲಿ ಭಾರೀ ಚರ್ಚೆಗಳು ಹುಟ್ಟಿಕೊಂಡಿವೆ. ಕಳೆದ ಕೆಲ ದಿನಗಳಲ್ಲಿ ನೀಲಿ ತಾರೆಯರು ವಿವಿಧ ರೀತಿಯ ಅನಾರೋಗ್ಯಗಳಿಗೆ ತುತ್ತಾಗುತ್ತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದೆ. ಕಳೆದ ಒಂದು ತಿಂಗಳಲ್ಲಿ ಸೋಫಿಯಾ ಲಿಯೋನ್‌ (Sophia Leone), ಕಾಗ್ನಿ ಲೀ, ಜೆಸ್ಸಿ ಜೆನ್‌ ಖ್ಯಾತ ನೀಲಿ ತಾರೆಯರು ನಿಧನರಾಗಿದ್ದಾರೆ. ಇದೀಗ ಕೋಮಾ ಸ್ಥಿತಿಗೆ ತಲುಪಿರುವ ಎಮಿಲಿ ವಿಲ್ಲಿಸ್‌ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಇದನ್ನೂ ಓದಿ: 26ನೇ ವಯಸ್ಸಿಗೆ ನೀಲಿ ತಾರೆ ಸೋಫಿಯಾ ಲಿಯೋನ್ ನಿಧನ

    ಎಮಿಲಿ ವಿಲ್ಲಿಸ್‌ ಯಾರು?
    25 ವರ್ಷ ವಯಸ್ಸಿನ ನೀಲಿ ತಾರೆ ಎಮಿಲಿ ವಿಲ್ಲಿಸ್‌ ಸೋಶಿಯಲ್‌ ಮೀಡಿಯಾದಲ್ಲೂ ಅಷ್ಟೇ ಜನಪ್ರಿಯರಾಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ (Instagram) 20 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನ ಹೊಂದಿದ್ದಾರೆ. ಎಮಿಲಿ ಅರ್ಜೆಂಟೀನಾದಲ್ಲಿ ಜನಿಸಿದರೂ ತನ್ನ ಜೀವನದ ಬಹುಪಾಲು ಸಮಯ ಕಳೆದಿದ್ದು ಮಾತ್ರ ಅಮೆರಿಕದಲ್ಲಿ (USA). ಕೆಲ ವರ್ಷಗಳ ಕಾಲ ಪೋರ್ನ್‌ ಚಿತ್ರೋದ್ಯಮದಲ್ಲಿ ಕೆಲಸ ಮಾಡಿದ ಎಮಿಲಿ, ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಪೋರ್ನ್‌ ಚಿತ್ರರಂಗವನ್ನು ತೊರೆದಿದ್ದರು. ಬೇರೆ ಮನರಂಜನಾ ಉದ್ಯಮಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಮುಂದಾಗಿದ್ದರು. ಇದನ್ನೂ ಓದಿ: ದಾನ ಮಾಡಿದ್ರೆ ನನ್ನ ನಗ್ನ ಚಿತ್ರ ಬಹುಮಾನ ಕೊಡ್ತೀನಿ – ಫ್ಯಾನ್ಸ್‌ಗೆ ಬಂಪರ್ ಆಫರ್ ಕೊಟ್ಟ ನೀಲಿ ತಾರೆ

    ಲಘು ಹೃದಯ ಸ್ತಂಭನದಿಂದ ಬಳಲುತ್ತಿದ್ದ ಎಮಿಲಿ ಕಾರ್ಲಿಫೋನಿಯಾದ ಥೌಸಂಡ್‌ ಓಕ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಕೋಮಾಗೆ ಜಾರಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಖ್ಯಾತ ನೀಲಿತಾರೆ ಕೆನಿ ಲಿನ್ ಕಾರ್ಟರ್ ಆತ್ಮಹತ್ಯೆಗೆ ಶರಣು

    ಅತಿಯಾದ ಮಾದಕ ವಸ್ತು ಸೇವನೆ ಕಾರಣವಾ?
    ಕುಟುಂಬಸ್ಥರ ಸಂಶಯದ ಮೇರೆಗೆ ತನಿಖೆ ಆರಂಭಿಸಿದ್ದ ಯುಎಸ್‌ ಪೊಲೀಸರು ಎಮಿಲಿ ವಿಲ್ಲಿಸ್‌ ಈ ಸ್ಥಿತಿಗೆ ಮಾದಕ ವಸ್ತುವಿನ ಮಿತಿಮೀರಿದ ಸೇವೆನೆ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಆದ್ರೆ ಈ ಆರೋಪವನ್ನು ಕುಟುಂಬಸ್ಥರು ತಿರಸ್ಕರಿಸಿದ್ದಾರೆ. ಇದನ್ನೂ ಓದಿ: ನೀಲಿ ಚಿತ್ರಗಳ ತಾರೆ ಬಾಯ್‌ಫ್ರೆಂಡ್ ಜೊತೆ ಶವವಾಗಿ ಪತ್ತೆ