Tag: ಹೃದಯ ಕಸಿ

  • ಹಂದಿ ಹೃದಯ ಕಸಿಗೊಳಗಾಗಿದ್ದ ವಿಶ್ವದ 2ನೇ ವ್ಯಕ್ತಿ 40 ದಿನಗಳ ನಂತರ ಸಾವು

    ಹಂದಿ ಹೃದಯ ಕಸಿಗೊಳಗಾಗಿದ್ದ ವಿಶ್ವದ 2ನೇ ವ್ಯಕ್ತಿ 40 ದಿನಗಳ ನಂತರ ಸಾವು

    ವಾಷಿಂಗ್ಟನ್: ವಿಶ್ವದಲ್ಲೇ 2ನೇ ಬಾರಿಗೆ ಪ್ರಾಯೋಗಿಕವಾಗಿ ಹಂದಿಯ ಹೃದಯದ ಕಸಿಗೊಳಗಾಗಿದ್ದ (Heart Transplant) ಅಮೆರಿಕದ ವ್ಯಕ್ತಿ 40 ದಿನಗಳ ಬಳಿಕ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

    ಲಾರೆನ್ಸ್ ಫೌಸೆಟ್ (58) ಹಂದಿಯ ಹೃದಯವನ್ನು (Pig Heart) ಕಸಿಯಾಗಿ ಪಡೆದಿದ್ದ ವಿಶ್ವದ 2ನೇ ವ್ಯಕ್ತಿಯಾಗಿದ್ದಾರೆ. ಸೆಪ್ಟೆಂಬರ್ 20 ರಂದು ಹೃದಯಾಘಾತದಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಫೌಸೆಟ್‌ಗೆ ಕೊನೆಯ ಆಯ್ಕೆಯಾಗಿ ಹಂದಿಯ ಹೃದಯವನ್ನು ಕಸಿ ಮಾಡಲಾಗಿತ್ತು.

    ಮೇರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ಪ್ರಕಾರ, ಫೌಸೆಟ್‌ಗೆ ಹೃದಯ ಕಸಿ ಮಾಡಿದ ಬಳಿಕ 1 ತಿಂಗಳು ಆರೋಗ್ಯವಾಗಿದ್ದರು. ಆದರೆ ನಂತರದ ದಿನಗಳಲ್ಲಿ ಹೃದಯ ಸರಿಯಾಗಿ ಸ್ಪಂದಿಸದ ಲಕ್ಷಣಗಳು ತೋರಿಸಲಾರಂಭಿಸಿದೆ. ಶಸ್ತ್ರಚಿಕಿತ್ಸೆಯ ನಂತರ ಅವರು ಸುಮಾರು 6 ವಾರಗಳ ಕಾಲ ಬದುಕಿದ್ದರು. ಫೌಸೆಟ್ ಸೋಮವಾರ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.

    ಫೌಸೆಟ್ ತನ್ನ ಶಸ್ತ್ರಚಿಕಿತ್ಸೆಯ ಬಳಿಕ ಅವರ ಆರೋಗ್ಯದಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿತ್ತು. ಅವರು ಎದ್ದು ಕುಳಿತುಕೊಳ್ಳುತ್ತಿದ್ದರು. ಆರಾಮಾಗಿ ಓಡಾಡುತ್ತಿದ್ದರು ಮಾತ್ರವಲ್ಲದೇ ತಮ್ಮ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುತ್ತಿದ್ದರು. ಅವರಿಗೆ ಮಾಡಲಾಗಿದ್ದ ಶಸ್ತ್ರಚಿಕಿತ್ಸೆಯೇನೋ ಯಶಸ್ವಿಯಾಗಿತ್ತು. ಆದರೆ ಬಳಿಕ ಮನುಷ್ಯನ ದೇಹಕ್ಕೆ ಹಂದಿಯ ಹೃದಯ ಹೊಂದಿಕೊಳ್ಳುವುದು ಕಷ್ಟವಾಗತೊಡಗಿತು. ವೈದ್ಯಕೀಯ ತಂಡದ ಸತತ ಪ್ರಯತ್ನಗಳ ಹೊರತಾಗಿಯೂ, ಫೌಸೆಟ್ ಅಂತಿಮವಾಗಿ ಅಕ್ಟೋಬರ್ 30 ರಂದು ಸಾವನ್ನಪ್ಪಿದರು ಎಂದು ಆಸ್ಪತ್ರೆ ತಿಳಿಸಿದೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ – ಜೆಟ್ ಏರ್‌ವೇಸ್‌ನ 538 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

    ಫೌಸೆಟ್ ಅವರು ನೌಕಾಪಡೆಯ ಅನುಭವಿ ಮತ್ತು ರಾಷ್ಟ್ರೀಯ ಆರೋಗ್ಯ ಸಂಸ್ಥೆಯಲ್ಲಿ ನಿವೃತ್ತ ಲ್ಯಾಬ್ ತಂತ್ರಜ್ಞರಾಗಿದ್ದರು. ಈ ಬಗ್ಗೆ ಮಾತನಾಡಿರುವ ಫೌಸೆಟ್ ಅವರ ಪತ್ನಿ ಆನ್, ಅವರು ನಮ್ಮೊಂದಿಗೆ ಕಳೆಯಲು ಇದ್ದ ಸಮಯ ಕಡಿಮೆಯಿತ್ತು ಎಂಬುದನ್ನು ತಿಳಿದಿದ್ದರು. ಅವರು ನಮ್ಮೊಂದಿಗಿರಲು ಇದು ಕೊನೆಯ ಅವಕಾಶವಾಗಿತ್ತು. ಅವರು ಇಷ್ಟು ದಿನ ಬದುಕಿ ಉಳಿಯುತ್ತಾರೆ ಎಂದು ಊಹಿಸಿರಲಿಲ್ಲ ಎಂದು ತಿಳಿಸಿದ್ದಾರೆ.

    ಕಳೆದ ವರ್ಷ ಮೇರಿಲ್ಯಾಂಡ್ ತಂಡ ವಿಶ್ವದಲ್ಲೇ ಮೊದಲ ಬಾರಿಗೆ ಡೇವಿಡ್ ಬೆನೆಟ್ ಎಂಬವರಿಗೆ ಹಂದಿಯ ಹೃದಯವನ್ನು ಕಸಿ ಮಾಡಿತ್ತು. ಆದರೆ ಕಸಿ ಮಾಡಿದ 2 ತಿಂಗಳ ನಂತರ ಅವರು ನಿಧನರಾದರು. 57 ವರ್ಷದ ಬೆನೆಟ್ 2022ರ ಜನವರಿ 7 ರಂದು ಕಸಿ ಮಾಡಿಸಿಕೊಂಡಿದ್ದರು. ನಂತರ ಅದೇ ವರ್ಷ ಮಾರ್ಚ್ 8 ರಂದು ಸಾವನ್ನಪ್ಪಿದರು. ಇದನ್ನೂ ಓದಿ: ಬೆಂಗ್ಳೂರಲ್ಲಿ 3 ದಿನ ಆತಂಕ ಮೂಡಿಸಿ ಕೊನೆಗೂ ಸೆರೆ ಸಿಕ್ಕ ಚಿರತೆ ಸಾವು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೋವಿಡ್‌ ಲಸಿಕೆ ಪಡೆದಿಲ್ಲ – ರೋಗಿಗೆ ಹೃದಯ ಕಸಿ ಮಾಡಲ್ಲ ಎಂದ ವೈದ್ಯರು!

    ಕೋವಿಡ್‌ ಲಸಿಕೆ ಪಡೆದಿಲ್ಲ – ರೋಗಿಗೆ ಹೃದಯ ಕಸಿ ಮಾಡಲ್ಲ ಎಂದ ವೈದ್ಯರು!

    ವಾಷಿಂಗ್ಟನ್‌: ರೋಗಿಯೊಬ್ಬ ಕೋವಿಡ್‌-19 ಲಸಿಕೆ ಹಾಕಿಸಿಕೊಂಡಿಲ್ಲ ಎಂಬ ಕಾರಣಕ್ಕೆ ಆತನಿಗೆ ಶಸ್ತ್ರ ಚಿಕಿತ್ಸೆ ಮಾಡಿ ಹೃದಯ ಕಸಿ ಮಾಡಲು ಅಮೆರಿಕದ ಬೋಸ್ಟನ್‌ ಆಸ್ಪತ್ರೆ ವೈದ್ಯರು ನಿರಾಕರಿಸಿರುವ ಪ್ರಸಂಗ ನಡೆದಿದೆ.

    ಅಂಗಾಂಗ ಕಸಿಗೆ ಒಳಗಾಗುವವರಿಗೆ ಕೊರೊನಾ ವೈರಸ್‌ ವಿರುದ್ಧದ ಲಸಿಕೆ ಅಗತ್ಯವಿದೆ ಎಂದು ಬ್ರಿಗಮ್‌ ಮತ್ತು ಮಹಿಳಾ ಆಸ್ಪತ್ರೆಯ ವಕ್ತಾರರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಶೀಘ್ರವೇ 50 ದೇಶಗಳಲ್ಲಿ ಲಭ್ಯವಾಗಲಿದೆ ಡಿಸ್ನಿ ಪ್ಲಸ್

    31 ವರ್ಷ ವಯಸ್ಸಿನ ನನ್ನ ಪುತ್ರ ಸಾವಿನ ಅಂಚಿನಲ್ಲಿದ್ದಾನೆ. ಆತನಿಗೆ ಆದಷ್ಟು ಬೇಗ ಹೃದಯ ಕಸಿ ಆಗಬೇಕಿದೆ. ಆದರೆ ಆತ ಲಸಿಕೆ ಪಡೆದುಕೊಂಡಿಲ್ಲ ಎಂದು ವೈದ್ಯರು ನಿರಾಕರಿಸುತ್ತಿದ್ದಾರೆ. ಇದು ಅವರ ಮೂಲಭೂತ ತತ್ವಗಳಿಗೆ ವಿರುದ್ಧವಾಗಿದೆ ಎಂದು ರೋಗಿಯ ತಂದೆ ಡೇವಿಡ್‌ ಫರ್ಗುಸನ್‌ ಅಳಲು ತೋಡಿಕೊಂಡಿದ್ದಾರೆ.

    ಕಸಿಗೆ ಒಳಗಾಗುವ ರೋಗಿಗಳಿಗೆ ಶಸ್ತ್ರ ಚಿಕಿತ್ಸೆಯಾಗಿ ನಡೆಸಲು ಹಾಗೂ ರೋಗಿ ಬದುಕುಳಿಯುವುದನ್ನು ಹೆಚ್ಚು ದೃಢಪಡಿಸಲು ಈಗಿನ ಸಂದರ್ಭದಲ್ಲಿ ಪ್ರತಿಕಾಯದ ಅಗತ್ಯತೆ ಇದೆ. ಯಾವುದೇ ಕಸಿ ನಂತರ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆ ಕಡಿತಗೊಳ್ಳುತ್ತದೆ. ಆಗ ಕೋವಿಡ್‌ ಅಂತಹ ರೋಗಿಗಳನ್ನು ಕೊಲ್ಲಬಹುದು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮಿಲ್ಕಿ ವೇಯಲ್ಲಿ 18 ನಿಮಿಷಗಳಿಗೊಮ್ಮೆ ಸ್ಫೋಟವಾಗುವ ವಸ್ತು ಪತ್ತೆ

    ಅಂಗಗಳು ವಿರಳವಾಗಿವೆ. ಕೋವಿಡ್‌ ಲಸಿಕೆ ಪಡೆದವರಿಗೆ ಕಸಿ ಮಾಡಿದರೆ, ಶಸ್ತ್ರ ಚಿಕಿತ್ಸೆ ನಂತರ ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತದೆ. ಕಸಿ ನಂತರ ಬದುಕುಳಿಯುವ ಸಾಧ್ಯತೆ ಕಡಿಮೆ ಇರುವವರಿಗೆ ಶಸ್ತ್ರ ಚಿಕಿತ್ಸೆ ಮಾಡುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

    ನನ್ನ ಮಗನನ್ನು ಬೇರೆ ಆಸ್ಪತ್ರೆಗೆ ಸೇರಿಸಲು ಯೋಜಿಸಿದ್ದೇನೆ. ಆದರೆ ಸಮಯ ಮೀರುತ್ತಿದೆ ಎಂದು ರೋಗಿಯ ತಂದೆ ಸಮಸ್ಯೆ ಹೇಳಿಕೊಂಡಿದ್ದಾರೆ. ಅಮೆರಿಕದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಈವರೆಗೆ ಶೇ.62 ಮಂದಿ ಮಾತ್ರ ಲಸಿಕೆ ಎರಡೂ ಡೋಸ್‌ ಪಡೆದುಕೊಂಡಿದ್ದಾರೆ.

  • ಸಾವಿನಲ್ಲೂ ಸಾರ್ಥಕತೆ: ಮೆದುಳು ನಿಷ್ಕ್ರಿಯಗೊಂಡ ಯುವಕನ ಹೃದಯ ಬಾಲಕಿಗೆ ಕಸಿ

    ಸಾವಿನಲ್ಲೂ ಸಾರ್ಥಕತೆ: ಮೆದುಳು ನಿಷ್ಕ್ರಿಯಗೊಂಡ ಯುವಕನ ಹೃದಯ ಬಾಲಕಿಗೆ ಕಸಿ

    ಬೆಂಗಳೂರು: ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ್ದ ಯುವಕನ ಹೃದಯವನ್ನು ಪೋಷಕರು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಯುವಕನ ಹೃದಯವನ್ನು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಗೆ ನಾರಾಯಣ ಹೃದಯಾಲಯ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಕಸಿ ಮಾಡಿದ್ದಾರೆ.

    ರಸ್ತೆ ಅಪಘಾತದಲ್ಲಿ 23 ವರ್ಷದ ಯುವಕ ಪುರುಷೋತ್ತಮ್ ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದ, ಆತನ ಹೃದಯವನ್ನು ಬೆಂಗಳೂರಿನ ಜೆಪಿ ನಗರದ ಆಸ್ಟರ್ ಆಸ್ಪತ್ರೆಯಿಂದ ನಾರಾಯಣ ಹೃದಯಾಲಕ್ಕೆ ಅಂಬ್ಯುಲೆನ್ಸ್ ಮೂಲಕ ಯಶಸ್ವಿಯಾಗಿ ರವಾನೆ ಮಾಡಲಾಗಿದೆ.

    ಕಳೆದ ಮೂರು ತಿಂಗಳಿನಿಂದ ಕೊಪ್ಪಳ ಮೂಲದ ಗಂಗಾವತಿಯ ಬಾನುಲೇಖ ಎಂಬ 11 ವರ್ಷದ ಬಾಲಕಿ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಳು. ಬೊಮ್ಮಸಂದ್ರ ಬಳಿಯ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಬಾನುಲೇಖ ಚಿಕಿತ್ಸೆ ಪಡೆಯುತ್ತಿದ್ದಳು.

    ಬಾಲಕಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಹೃದಯ ಕಸಿ ಮಾಡುವ ಬಗ್ಗೆ ವೈದ್ಯರ ತಂಡದ ಜೊತೆ ಚರ್ಚಿಸಿದ್ದರು. ಬಾಲಕಿಯ ಹೃದಯಕ್ಕೆ ಸರಿಹೊಂದುವ ಹೃದಯಕ್ಕಾಗಿ ಕಳೆದ 3 ತಿಂಗಳಿನಿಂದ ವೈದ್ಯರು ಕಾಯುತ್ತಿದ್ದರು. ನಿನ್ನೆ ಸಂಜೆ ಬೈಕ್ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ್ದ ಯುವಕನ ಪೋಷಕರು ಅಂಗಾಂಗಗಳ ದಾನ ಮಾಡಲು ನಿರ್ಧರಿಸಿದ್ದರು.

    ಯುವಕನಿಂದ ಪಡೆದ ಹೃದಯವನ್ನು ಜೆಪಿ ನಗರದ ಆಸ್ಟರ್ ಆಸ್ಪತ್ರೆಯಿಂದ 25 ನಿಮಿಷದಲ್ಲಿ 31 ಕಿಲೋಮೀಟರ್ ದೂರದ ನಾರಾಯಣ ಹೃದಯಾಲಯ ಆಸ್ಪತ್ರೆಗೆ ತಲುಪಿಸಲಾಗಿತ್ತು. ಸದ್ಯ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಗೆ ‘ಹೃದಯ ಕಸಿ’ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

  • ಹೆಬ್ಬಾಳ ಆಸ್ಟರ್ ಸಿಎಂಸಿ ಆಸ್ಪತ್ರೆಯಿಂದ ಬಿಜಿಎಸ್ ಆಸ್ಪತ್ರೆಗೆ ಜೀವಂತ ಹೃದಯ ರವಾನೆ

    ಹೆಬ್ಬಾಳ ಆಸ್ಟರ್ ಸಿಎಂಸಿ ಆಸ್ಪತ್ರೆಯಿಂದ ಬಿಜಿಎಸ್ ಆಸ್ಪತ್ರೆಗೆ ಜೀವಂತ ಹೃದಯ ರವಾನೆ

    ಬೆಂಗಳೂರು: ಹೆಬ್ಬಾಳದ ಆಸ್ಟರ್ ಸಿಎಂಸಿ ಆಸ್ಪತ್ರೆಯಿಂದ ಬೆಂಗಳೂರಿನ ಬಿಜಿಎಸ್ ಹೃದಯ ಕೇಂದ್ರಕ್ಕೆ ಜೀವಂತ ಹೃದಯ ಯಶಸ್ವಿಯಾಗಿ ರವಾನೆಯಾಗಿದೆ. ಹೃದಯ ಸಾಗಿಸಲು ಗ್ರೀನ್ ಕಾರಿಡರ್ ವ್ಯವಸ್ಥೆ ನಿರ್ಮಿಸಲಾಗಿತ್ತು. ಇದರಿಂದ ಸುಮಾರು 36 ಕಿ.ಮೀ ದೂರವನ್ನು 26 ನಿಮಿಷದಲ್ಲಿ ಅಂಬುಲೆನ್ಸ್ ಕ್ರಮಿಸಿದೆ.

    ಬೆಳಗ್ಗೆ 9:56ಕ್ಕೆ ಹೆಬ್ಬಾಳದ ಸಿಎಂಸಿ ಆಸ್ಪತ್ರೆಯಿಂದ ಹೊರಟ ಅಂಬುಲೆನ್ಸ್ ಮೇಖ್ರಿ ಸರ್ಕಲ್, ಸುಮ್ಮನಹಳ್ಳಿ, ಕೆಂಗೇರಿ ಮಾರ್ಗದ ಮೂಲಕ 10:28ಕ್ಕೆ ಸರಿಯಾಗಿ ಹೃದಯ ಕೇಂದ್ರ ತಲುಪಿತು ಎಂದು ಬಿಜಿಎಸ್ ಹೃದಯ ಕೇಂದ್ರದ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

    ಮೈಸೂರು ಮೂಲದ ರೋಗಿಗೆ ಲಘು ಹೃದಯಾಘಾತವಾಗಿತ್ತು. ಹೃದಯ ಕಸಿ ಮಾಡಲು ಬಿಜಿಎಸ್ ಹೃದಯ ಕೇಂದ್ರದ ವೈದ್ಯರು ನಿರ್ಧರಿಸಿದ್ದರು. ಹೀಗಾಗಿ ರೋಗಿಯ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅವರಿಗೆ ಹೃದಯ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಬಿಜಿಎಸ್ ಹೃದಯ ಕೇಂದ್ರದ ವೈದ್ಯರಾದ ಭಾಸ್ಕರ್ ನೇತೃತ್ವದ ತಂಡ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದೆ.

  • ಸಾವಿನಲ್ಲೂ ಇನ್ನೊಂದು ಜೀವಕ್ಕೆ ಆಸರೆಯಾದ 2 ವರ್ಷ ಪುಟ್ಟ ಹೃದಯ!

    ಸಾವಿನಲ್ಲೂ ಇನ್ನೊಂದು ಜೀವಕ್ಕೆ ಆಸರೆಯಾದ 2 ವರ್ಷ ಪುಟ್ಟ ಹೃದಯ!

    ಚೆನ್ನೈ: ಎರಡು ವರ್ಷದ ಪುಟ್ಟ ಬಾಲಕ ಇನ್ನೋರ್ವ ಪುಟ್ಟ ಬಾಲಕನಿಗೆ ಹೃದಯದಾನ ಮಾಡಿ ತನ್ನ ಸಾವಿನಲ್ಲೂ ಇನ್ನೊಂದು ಜೀವಕ್ಕೆ ಆಸರೆಯಾಗಿ ಸಾರ್ಥಕತೆ ಮೆರೆದಿದ್ದಾನೆ.

    ಎರಡು ವರ್ಷದ ಬಾಲಕನಿಗೆ ಹೃದಯ ಕಸಿ ಮಾಡುವ ಮೂಲಕ ಚೆನ್ನೈನ ಫೋರ್ಟಿಸ್ ಮಲರ್ ಆಸ್ಪತ್ರೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಜೊತೆಗೆ ಈ ಬಾಲಕನಿಗೆ ಹೃದಯದಾನ ಮಾಡಿದ ಬಾಲಕ ಭಾರತದ ಅತಿ ಕಿರಿಯ ಹೃದಯ ದಾನಿ ಎಂಬ ಖ್ಯಾತಿಗೂ ಪಾತ್ರನಾಗಿದ್ದಾನೆ.

    ಚೆನ್ನೈನ ಫೋರ್ಟಿಸ್ ಮಲರ್ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿದ್ದು, 2 ವರ್ಷದ ಬಾಲಕನಿಗೆ ಅಷ್ಟೇ ವರ್ಷದ ಬಾಲಕನ ಹೃದಯವನ್ನು ಕಸಿ ಮಾಡಲಾಗಿದೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕನ ಜೀವ ಉಳಿಸಲು ಹೃದಯ ಕಸಿ ಮಾಡಲೇಬೇಕಾಗಿತ್ತು. ಈ ವೇಳೆ ಫೆ.10 ರಂದು ಮೆದುಳು ಹಾನಿಗೆ ಒಳಗಾಗಿದ್ದ ಮುಂಬೈನ ಎರಡು ವರ್ಷದ ಬಾಲಕನ ಹೃದಯವನ್ನು ಏರ್ ಲಿಫ್ಟ್ ಮೂಲಕ ತಂದು ಶಸ್ತ್ರಚಿಕಿತ್ಸೆ ಮಾಡಿ ವೈದ್ಯರು ಒಂದು ಪುಟ್ಟ ಜೀವಕ್ಕೆ ಪುನರ್ಜನ್ಮ ನೀಡಿದ್ದಾರೆ.

    ಕಾರ್ಡಿಕ್ ಸೈನ್ಸಸ್, ಫೋರ್ಟಿಸ್ ಮಲಾರ್ ಆಸ್ಪತ್ರೆಯ ನಿರ್ದೇಶಕ ಡಾ.ಆರ್.ಆರ್. ಬಾಲಕೃಷ್ಣನ್ ಮತ್ತು ಡಿಪಾಟ್ರ್ಮೆಂಟ್ ಮುಖ್ಯಸ್ಥ ಡಾ. ಸುರೇಶ್ ರಾವ್ ಕೆ.ಜಿ., ಕ್ರಿಟಿಕಲ್ ಕೇರ್ ಮತ್ತು ಕಾರ್ಡಿಯಾಕ್ ಅನಸ್ತೇಶಿಯ ನೇತೃತ್ವದ ವೈದ್ಯರ ತಂಡವು ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ. ಅಲ್ಲದೇ ಶಿಶುವೈದ್ಯ ಹೃದಯ ರೋಗಿಗಳ ಚಿಕಿತ್ಸೆಯಲ್ಲಿ ಈ ಶಸ್ತ್ರಚಿಕಿತ್ಸೆ ಮತ್ತೊಂದು ಮೈಲಿಗಲ್ಲು ಎಂದರೆ ತಪ್ಪಾಗಲಾರದು ಎಂದು ವೈದ್ಯರು ಬಣ್ಣಿಸಿದ್ದಾರೆ.

    ಈ ಮುಂಬೈ ಬಾಲಕನ ಹೃದಯ ಮಾತ್ರವಲ್ಲದೇ ಇತರೇ ಅಂಗಾಂಗಗಳನ್ನು ಕೂಡ ಪೋಷಕರು ದಾನ ಮಾಡಿದ್ದಾರೆ. ಈ ಮೂಲಕ ಒಟ್ಟು ಆರು ಜೀವಕ್ಕೆ ಈ ಬಾಲಕ ಪುನರ್ಜನ್ಮ ನೀಡಿ, ತಾನೂ ಭೂಮಿ ಮೇಲೆ ಇಲ್ಲದಿದ್ದರೂ ಇನ್ನೊಂದು ಜೀವಕ್ಕೆ ಆಧಾರವಾಗಿ ಜೀವನಕ್ಕೆ ಬೆಳಕಾಗಿದ್ದಾನೆ.

  • ವಿಡಿಯೋ: ತನ್ನ ಹಳೇ ಹೃದಯವನ್ನ ಕಣ್ಣಿರಿಡುತ್ತಾ ಮಣ್ಣು ಮಾಡಿದ ಮಹಿಳೆ!

    ವಿಡಿಯೋ: ತನ್ನ ಹಳೇ ಹೃದಯವನ್ನ ಕಣ್ಣಿರಿಡುತ್ತಾ ಮಣ್ಣು ಮಾಡಿದ ಮಹಿಳೆ!

    ಜೆರುಸಲೇಂ: ಕಲಾವಿದೆಯೊಬ್ಬರು ಹೃದಯಾಘಾತದಿಂದ ಬಳಲಿ, ಸರ್ಜರಿ ಮಾಡಿಸಿಕೊಂಡ ನಂತರ ತನ್ನದೇ ಹಳೇ ಹೃದಯವನ್ನ ನಡುಗುವ ಕೈಯಲ್ಲಿ ಕಣ್ಣೀರಿಡುತ್ತಾ ಮಣ್ಣು ಮಾಡೋ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

    ಮೂರು ತಿಂಗಳ ಹಿಂದಷ್ಟೇ ಶರೋನ್ ಫಿಡೆಲ್‍ಗೆ ಹೃದಯ ಕಸಿ ಮಾಡಲಾಗಿತ್ತು. ಕಾರ್ ಅಪಘಾತವೊಂದರಲ್ಲಿ ಮೃತಪಟ್ಟ 16 ವರ್ಷದ ವ್ಯಕ್ತಿಯ ಹೃದಯವನ್ನು ಶರೋನ್‍ಗೆ ಜೋಡಿಸಲಾಗಿತ್ತು. ಇಸ್ರೇಲ್ ಮೂಲದವಾರದ 46 ವರ್ಷದ ಶರೋನ್, ತನ್ನ ಹಳೇ ಹೃದಯವನ್ನ ಮಣ್ಣು ತೋಡಿ ಹೂಳುವ ವಿಡಿಯೋವನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ.

    ಬಕೆಟ್‍ನಿಂದ ಹೃದಯವನ್ನ ತೆಗೆಯೋವಾಗ ಆಕೆಯ ಕೈಗಳು ನಡುಗೋದನ್ನ ಕಾಣಬಹುದು. ಎರಡು ಮೂರು ಬಾರಿ ಹೃದಯವನ್ನ ತೆಗೆದುಕೊಳ್ಳಲು ಹಿಂಜರಿದು ಕೊನೆಗೆ ಆಕೆ ಅದನ್ನ ಕೈಯಲ್ಲಿ ಹಿಡಿದು ಮಣ್ಣಿನಲ್ಲಿ ಇಟ್ಟಿದ್ದಾರೆ. ಈ ವಿಡಿಯೋದ ಜೊತೆಗೆ, ನನ್ನ ಪ್ರಾಣವನ್ನು ಉಳಿಸಿದ ವ್ಯಕ್ತಿಗೆ ಧನ್ಯವಾದ ಎಂದು ಶರೋನ್ ಬರೆದಿದ್ದಾರೆ. ಕೊನೆಗೆ ತನ್ನ ವಿಗ್ ತೆಗೆದು ತನ್ನದೇ ಹೃದಯದ ಸಮಾಧಿ ಬಳಿ ಮಂಡಿಯೂರಿ ಕುಳಿತು ಅಳೋದನ್ನ ಕಾಣಬಹುದು.

    ಇಸ್ರೇಲಿ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿರೋ ಶರೋನ್, ಈ ವಿಡಿಯೋದಲ್ಲಿ ಇರೋದೆಲ್ಲವೂ ಸತ್ಯ. ಹೃದಯವನ್ನ ಮಣ್ಣಿಗೆ ಹಾಕುವಾಗ ನಾನು ನಡುಗುತ್ತಿದೆ. ನನ್ನದೇ ಅಂಗವನ್ನ ಮುಟ್ಟಲು, ಮೇಲೆತ್ತಲು ನನಗೆ ತುಂಬಾ ಭಯವಾಗಿತ್ತು. ಆದ್ದರಿಂದಲೇ ನನ್ನ ಕೈ ನಡುಗುತ್ತಿತ್ತು ಎಂದು ಹೇಳಿದ್ದಾರೆ.

    https://www.youtube.com/watch?v=V8ZJlFiK8bw