Tag: ಹೃದಯಾಘಾತ

  • ಮಣ್ಣಲ್ಲಿ ಮಣ್ಣಾದ ಹಾಸ್ಯ ಮಾಂತ್ರಿಕ ರಾಜು ತಾಳಿಕೋಟೆ – ಪಾರ್ಥಿವ ಶರೀರದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಸಹ ಕಲಾವಿದರು

    ಮಣ್ಣಲ್ಲಿ ಮಣ್ಣಾದ ಹಾಸ್ಯ ಮಾಂತ್ರಿಕ ರಾಜು ತಾಳಿಕೋಟೆ – ಪಾರ್ಥಿವ ಶರೀರದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಸಹ ಕಲಾವಿದರು

    – ನಗುವಿನ ನಶೆ ಬಿತ್ತಿ ಹೋದ `ಕಲಿಯುಗದ ಕುಡುಕ’

    ನಗುವಿನ ನಶೆಯಲ್ಲಿ ತೇಲಿಸಿ, ನಮ್ಮನ್ನು ನಕ್ಕು ನಗಿಸುತ್ತಿದ್ದ ಕಲಿಯುಗದ ಕುಡುಕ ಎಂದೇ ಖ್ಯಾತಿ ಗಳಿಸಿದ್ದ ವಿಜಯಪುರದ ರಾಜು ತಾಳಿಕೋಟೆ ಮಿಂಚಿ ಮರೆಯಾಗಿದ್ದಾರೆ. ನಿನ್ನ ಹಠಾತ್ತನೆ ಸಂಭವಿಸಿದ ಹೃದಯಾಘಾತದಿಂದ ಸಾವನಪ್ಪಿದ್ದು ಇಡೀ ಹಾಸ್ಯ ರಂಗಕ್ಕೆ ಬರಸಿಡಿಲು ಬಡಿದಂತಾಗಿದೆ. ಇಡೀ ಚಿತ್ರರಂಗ ಸೇರಿ, ವೃತ್ತಿ ರಂಗ ಭೂಮಿ ಇವರಿಗೆ ಅಂತಿಮ ನಮನ ಸಲ್ಲಿಸಲಾಯಿತು.

    ರಂಗನಾಯಕ ಡಾ. ರಾಜು ತಾಳಿಕೋಟೆ ಇನ್ನಿಲ್ಲ ಎಂಬುದು ಇಡೀ ನಾಟಕರಂಗಕ್ಕೆ ಬರಸಿಡಿಲು ಬಡಿದಂತಾಗಿದೆ. ʻಕಲಿಯುಗದ ಕುಡುಕʼನೇಎಂದೇ ಖ್ಯಾತಿಗಳಿಸಿದ್ದ ಹಿರಿಯ ನಟ, ನಿರ್ದೇಶಕ ಡಾ. ರಾಜು ತಾಳಿಕೋಟೆ ಬದುಕಿನ ನಾಟಕಕ್ಕೆ ವಿದಾಯ ಹೇಳಿದ್ದಾರೆ. ವಿಶಿಷ್ಟ ಶೈಲಿಯ ಮಾತುಗಾರ ರಾಜು ನಿನ್ನೆ ಹೃದಯಘಾತದಿಮದ ನಿಧನರಾಗಿದ್ದರೆ. ನಿನ್ನೆ ಶೈನ್ ಶೆಟ್ಟಿ ನಟನೆಯ ಶಂಕರಾಭರಣ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿ ಸಂಜೆ ವಿಶ್ರಾಂತಿ ಪಡೆಯುವ ವೇಳೆ ಹಠತ್‌ನೆ ಹೃದಯಾಘಾತ ಸಂಭವಿಸಿ ಕೊನೆ ಉಸಿರೆಳೆದಿದ್ದಾರೆ.

    ರಾಜು ತಾಳಿಕೋಟೆ ಜೀವನವೇ ಒಂದು ಅಚ್ಚರಿಯ ಬದುಕು. ಬಹಳ ಸರಳ ಸಹಜವಾಗಿ ಬದುಕಿದ್ದ ರಾಜುಕೋಟೆಯ ನಿಜ ನಾಮ ರಾಜೇಸಾಬ್ ಮುಕ್ತಂ ಸಾಬ್ ಯಂಕಂಚಿ. ಮುಕ್ತಂ ಮತ್ತು ಮೆಹಬೂಬ್ ದಂಪತಿಯ ಪುತ್ರ. ಇಸ್ಲಾಂ ಧರ್ಮದವರಾದರೂ, ರಾಜು ಎಂದೇ ಪ್ರಖ್ಯಾತಿ ಪಡೆದಿದ್ದರು. ಇದೀಗ ಇಬ್ಬರು ಪತ್ನಿಯರು, ಐವರು ಮಕ್ಕಳನ್ನು ತ್ಯಜಿಸಿ ಹೊರಟಿದ್ದಾರೆ.

    ಪಾರ್ಥಿವ ಶರೀರದ ಮುಂದೆ ಬಿಕ್ಕಳಿಸಿದ ಸಹ ಕಲಾವಿದರು
    ಯುವ ಪೀಳಿಗೆಗೆ ನಾಟಕದ ಅಭಿರುಚಿ ಹೆಚ್ಚಿಸಲು ಸ್ವತಃ ರಂಗಮಂದಿರವನ್ನು ಕಟ್ಟಿದವರು. ಧಾರವಾಡದ ರಂಗಾಯಣದ ನಿರ್ದೇಶಕರಾಗಿದ್ದ ರಾಜು ತಾಳಿಕೋಟೆ ಇಡೀ ರಾಜ್ಯಾದ್ಯಂತ ಸುತ್ತಿ ಹೊಸ ತಂಡವನ್ನ ರಚಿಸಿ ನಾಟಕ ಅಭಿನಯ ಮಾಡಿಸುತ್ತಿದ್ದವರು. ಇವರು ಕೇವಲ ರಂಗಭೂಮಿ ಅಷ್ಟೇ ಅಲ್ಲದೆ ಸಿನಿಮಾ ರಂಗದಲ್ಲೂ ಅಭಿಮಯಿಸಿ ಸೈ ಎನಿಸಿಕೊಂಡಿದ್ದವರು. (ಸಿನಿಮಾ ಡೈಲಾಗ್ ಪ್ಲೋ) ಇವರ ನಟನೆಗೆ ಹಾಸ್ಯ ರತ್ನಾಕರ, ಹಾಸ್ಯ ಸಾಮ್ರಾಟ, ಕಾಮಿಡ್ ಕಿಂಗ್, ಕೆಸೇಟ್ ಕಿಂಗ್ ಎಂಬೆಲ್ಲಾ ಬಿರುದುಗಳನ್ನು ಮುಡಿಗೇರಿಸಿಕೊಂಡಿದ್ದವರು.

    ಸಂಜು ಬಸಯ್ಯ ಕಣ್ಣೀರು
    ಇನ್ನು ಹಾಸ್ಯನಟ, ರಂಗಾಯಣ ನಿರ್ದೆಶಕ ರಾಜು ತಾಳಿಕೋಟಿಯ ಪಾರ್ಥಿವ ಶರೀರವನ್ನು ಧಾರವಾಡ ರಂಗಾಯಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ರಾಜು ತಾಳಿಕೋಟೆ ಅಂತಿಮ ದರ್ಶನವನ್ನು ಧಾರವಾಡ ಜಿಲ್ಲಾಧಿಕಾರಿ, ಸಿಇಓ ಸೇರಿ ಅನೇಕ ಕಲಾವಿದರು ಅಂತಿಮ ದರ್ಶನ ಪಡೆದುಕೊಂಡರು. ಇನ್ನು ಪಾರ್ಥಿವ ಶರೀರದ ಎದುರು ಕಾಮಿಡಿ ಕಿಲಾಡಿ ಖ್ಯಾತಿಯ ಸಂಜು ಬಿಕ್ಕಿ ಬಿಕ್ಕಿ ಕಣ್ಣಿರು ಹಾಕಿದರು.

    ಇನ್ನು ತಾಳಿಕೋಟೆಯ ಧಾರವಾಡದಿಂದ ವಿಜಯಪುರಕ್ಕೆ ಕೊಂಡೋಯ್ದು ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಗ್ರಾಂದಲ್ಲಿರುವ ಅವರ ತೋಟದಲ್ಲಿ ಅಂತ್ಯಕ್ರಿಯೆ ನಡೆಯಿತು. ಅಂತ್ಯಕ್ರಿಯೆ ವೇಳೆ ಮೃತ ಕುಟುಂಬಸ್ಥರ ಕಣ್ಣೀರು ಮುಗಿಲು ಮುಟ್ಟಿತ್ತು.

    ಒಟ್ಟಾರೆ ಇಡೀ ಕನ್ನಡ ಚಿತ್ರರಂಗವನ್ನು ಮತ್ತು ರಂಗಭೂಮಿಯನ್ನು ನಗುವಿನ ನಶೆಯಲ್ಲಿ ತೇಲಿಸುತ್ತಿದ್ದ ರಾಜೂ ತಾಳಿಕೋಟೆಯ ಸಾವು ನಿಜಕ್ಕೂ ಬರಸಿಡಿಲು ಬಡಿದಂತಾಗಿದೆ. ರಂಗಭೂಮಿಗೆ ಇವರ ಸಾವು ತುಂಬಲಾರದ ನಷ್ಟವಾಗಿದೆ.

  • Kolar | ಮತದಾನದ ವೇಳೆ ಹೃದಯಾಘಾತ – ವೃದ್ಧ ಸಾವು

    Kolar | ಮತದಾನದ ವೇಳೆ ಹೃದಯಾಘಾತ – ವೃದ್ಧ ಸಾವು

    ಕೋಲಾರ: ಮತದಾನದ (Voting) ವೇಳೆ ಹೃದಯಾಘಾತಕ್ಕೊಳಗಾಗಿ (Heart Attack) ವೃದ್ಧ ಸಾವನ್ನಪ್ಪಿದ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

    ಬಂಗಾರಪೇಟೆ ಟಿಎಪಿಸಿಎಂಎಸ್ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ವೇಳೆ ಘಟನೆ ನಡೆದಿದೆ. ಬಂಗಾರಪೇಟೆ ತಾಲೂಕಿನ ಕಣಿಂಬೆಲೆ ಹೂಗಳ ಸೀನಪ್ಪ (86) ಹೃದಯಾಘಾತದಿಂದ ಮೃತಪಟ್ಟ ವೃದ್ಧ. ಬಿ ವರ್ಗದ 8ರ ಪೈಕಿ ಎರಡು ಮತದಾನ ಮಾಡಿದ್ದ ಸೀನಪ್ಪ, ಇನ್ನೂ 6 ಮತ ಮಾಡಲು ಪಕ್ಕದ ಮತಗಟ್ಟೆಗೆ ತೆರಳಿದ್ದ ವೇಳೆ ಮತಗಟ್ಟೆ ಬಳಿಯೇ ಹೃದಯಾಘಾತವಾಗಿದೆ. ಇದನ್ನೂ ಓದಿ: ಸರ್ಕಾರಿ ಸ್ಥಳಗಳು, ಮುಜರಾಯಿ ದೇವಸ್ಥಾನಗಳಲ್ಲಿ ಆರ್‌ಎಸ್‌ಎಸ್‌ ಎಲ್ಲಾ ಚಟುವಟಿಕೆ ಬ್ಯಾನ್‌?

    ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಮಾದರಿ ಕನ್ನಡ ಶಾಲೆಯಲ್ಲಿ ಮತದಾನ ಮಾಡುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಸೀನಪ್ಪ ಮೃತಪಟ್ಟಿದ್ದಾರೆ. ಸೀನಪ್ಪ ಸಿಪಿಐ ಅಂಜನಪ್ಪ ಸೇರಿ ಮೂವರು ಮಕ್ಕಳನ್ನ ಅಗಲಿದ್ದಾರೆ. ಇದನ್ನೂ ಓದಿ: ಆಪರೇಷನ್‌ ಬ್ಲೂ ಸ್ಟಾರ್‌ ತಪ್ಪು, ಅದಕ್ಕೆ ಇಂದಿರಾ ಗಾಂಧಿ ಪ್ರಾಣವನ್ನೇ ಪಣಕ್ಕಿಟ್ಟರು: ಪಿ.ಚಿದಂಬರಂ

  • ದಾವಣಗೆರೆ | ಜಾತಿಗಣತಿ ಸಮೀಕ್ಷೆಗೆ ತೆರಳಿದ್ದ ಶಿಕ್ಷಕನಿಗೆ ಹೃದಯಾಘಾತ

    ದಾವಣಗೆರೆ | ಜಾತಿಗಣತಿ ಸಮೀಕ್ಷೆಗೆ ತೆರಳಿದ್ದ ಶಿಕ್ಷಕನಿಗೆ ಹೃದಯಾಘಾತ

    ದಾವಣಗೆರೆ: ಜಾತಿ ಸಮೀಕ್ಷೆಗೆ ತೆರಳಿದ್ದ ವೇಳೆ ಶಿಕ್ಷಕನಿಗೆ ಹೃದಯಾಘಾತ ಆಗಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

    ದಾವಣಗೆರೆ ತಾಲ್ಲೂಕಿನ ಹಳೆಕಡ್ಲೆಬಾಳು ಶಾಲೆಯ ಶಿಕ್ಷಕ ಪ್ರಕಾಶ್ ನಾಯಕ್ (44) ಅವರು ಸಮೀಕ್ಷೆ ಮಾಡುತ್ತಿದ್ದಾಗಲೇ ಹೃದಯಾಘಾತ ಸಂಭವಿಸಿದೆ.

    ತಕ್ಷಣ ಸ್ಥಳೀಯರ ಸಹಾಯದಿಂದ ಅವರನ್ನ ನಗರದ ಹೈಟೆಕ್‌ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಬಳಿಕ ಸ್ಟೆಂಟ್ ಹಾಕಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

    ಸ್ಥಳೀಯರ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಶಿಕ್ಷಕ ಪ್ರಕಾಶ್ ನಾಯಕ್ ಪಾರಾಗಿದ್ದಾರೆ. ಘಟನೆ ತಿಳಿದ ದಾವಣಗೆರೆ ಡಿಸಿ ಗಂಗಾಧರ ಸ್ವಾಮಿ ದೂರವಾಣಿ ಕರೆ ಮಾಡಿ ಪ್ರಕಾಶ್ ನಾಯಕ್‌ಗೆ ಧೈರ್ಯ ತುಂಬಿದ್ದಾರೆ.

  • ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನೂ ಹೃದಯಾಘಾತದಿಂದ ಸಾವು

    ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನೂ ಹೃದಯಾಘಾತದಿಂದ ಸಾವು

    ಬೆಳಗಾವಿ: ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣ ಹೃದಯಾಘಾತದಿಂದ (Heartattack) ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಗೋಕಾಕ (Gokaka) ತಾಲೂಕಿನ ಕಪರಟ್ಟಿ ಗ್ರಾಮದಲ್ಲಿ ನಡೆದಿದೆ.

    ತಮ್ಮ ಸತೀಶ್ ಬಾಗನ್ನವರ (16), ಅಣ್ಣ ಬಸವರಾಜ್ ಬಾಗನ್ನವರ (24) ಮೃತ ದುರ್ದೈವಿಗಳು. 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸತೀಶ್ ಶನಿವಾರ ಮುಂಜಾನೆ ಅನಾರೋಗ್ಯದಿಂದ ಮೃತಪಟ್ಟಿದ್ದ. ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣ ಬಸವರಾಜ್ ಅಲ್ಲೇ ಕುಸಿದು ಬಿದ್ದಿದ್ದ. ಆತನನ್ನು ಆಸ್ಪತ್ರೆಗೆ ಕೊಂಡೊಯ್ಯುವ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಅಮೆರಿಕದಲ್ಲಿ ಹೈದರಾಬಾದ್ ಮೂಲದ ದಂತ ವೈದ್ಯನ ಗುಂಡಿಕ್ಕಿ ಹತ್ಯೆ

    ತುಂಬು ಗರ್ಭಿಣಿಯಾಗಿದ್ದ ಬಸವರಾಜ್ ಪತ್ನಿ ಪವಿತ್ರಾ, ಪತಿಯ ಸಾವಿನ ಸುದ್ದಿ ತಿಳಿದು ಕುಸಿದ್ದಿದ್ದರು. ತಕ್ಷಣವೇ ಆಕೆಯನ್ನು ಗೋಕಾಕ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಅದೃಷ್ಟವಶಾತ್ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಬಸವರಾಜ ಬಾಗನ್ನವರ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ. ಇದೀಗ ಮನೆಗೆ ಆಧಾರವಾಗಿದ್ದ ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

  • Bannerghatta | ಸಫಾರಿಗೆ ತೆರಳಿದ್ದ ಪ್ರವಾಸಿಗ ಹೃದಯಾಘಾತಕ್ಕೆ ಬಲಿ

    Bannerghatta | ಸಫಾರಿಗೆ ತೆರಳಿದ್ದ ಪ್ರವಾಸಿಗ ಹೃದಯಾಘಾತಕ್ಕೆ ಬಲಿ

    ಆನೇಕಲ್: ಸಫಾರಿಗೆ (Safari) ಹೋಗಿದ್ದ ಪ್ರವಾಸಿಗ (Tourist) ಹೃದಯಾಘಾತಕ್ಕೆ (Heart Attack) ಬಲಿಯಾಗಿರುವ ಘಟನೆ ಬೆಂಗಳೂರು (Bengaluru) ಹೊರವಲಯ ಬನ್ನೇರುಘಟ್ಟ (Bannerghatta) ಜೈವಿಕ ಉದ್ಯಾನವನದಲ್ಲಿ ನಡೆದಿದೆ.

    ಬೆಂಗಳೂರಿನ ನಾಗರಬಾವಿಯ ನಿವಾಸಿ ನಂಜಪ್ಪ (45) ಮೃತ ವ್ಯಕ್ತಿ. ಶನಿವಾರ ಸಫಾರಿಗೆ ಬಂದಿದ್ದ ವೇಳೆ ಘಟನೆ ನಡೆದಿದೆ. ಪತ್ನಿ ಇಬ್ಬರು ಮಕ್ಕಳೊಂದಿಗೆ ಸಫಾರಿ ವೀಕ್ಷಣೆ ಬಂದಿದ್ದ ವೇಳೆ ನಂಜಪ್ಪ ಸಫಾರಿ ಬಸ್ಸಿನಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಇದನ್ನೂ ಓದಿ: ಮಾನವ ಕಳ್ಳಸಾಗಣಿಕೆ ಮಾಡಿದ್ದೀಯಾ ಅಂತ ಮಹಿಳಾ ವಿಜ್ಞಾನಿಗೆ ಬೆದರಿಸಿ ಲಕ್ಷ ಲಕ್ಷ ಪೀಕಿದ ಸೈಬರ್ ವಂಚಕ

    ಝೂ ಅಂಬುಲೆನ್ಸ್ ಮೂಲಕ ನಂಜಪ್ಪರನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಂಜಪ್ಪ ಮೃತಪಟ್ಟಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಮನ್ ಕೀ ಬಾತ್‌ನಲ್ಲಿ ಅಕ್ಷರ ಮಾಂತ್ರಿಕ ಎಸ್‌.ಎಲ್‌ ಭೈರಪ್ಪರನ್ನ ನೆನೆದ ಮೋದಿ

  • ಕೋಲಾರ | ರಜೆಯ ಮೇಲೆ ಊರಿಗೆ ಬಂದಿದ್ದ ಯೋಧ ಹೃದಯಾಘಾತಕ್ಕೆ ಬಲಿ

    ಕೋಲಾರ | ರಜೆಯ ಮೇಲೆ ಊರಿಗೆ ಬಂದಿದ್ದ ಯೋಧ ಹೃದಯಾಘಾತಕ್ಕೆ ಬಲಿ

    ಕೋಲಾರ: ರಜೆಯ ಮೇಲೆ ಊರಿಗೆ ಬಂದಿದ್ದ ಯೋಧರೊಬ್ಬರು (Soldier)  ಹೃದಯಾಘಾತಕ್ಕೆ (Heartattack) ಬಲಿಯಾಗಿರುವ ಘಟನೆ ಕೋಲಾರ (Kolar) ಜಿಲ್ಲೆಯ ಮುಳಬಾಗಿಲು ತಾಲೂಕು ಆಚಂಪಲ್ಲಿ ಗ್ರಾಮದಲ್ಲಿ ನಡೆದಿದೆ.

    ಮುನಿ ನಾರಾಯಣ ಹೃದಯಾಘಾತದಿಂದ ಸಾವನ್ನಪ್ಪಿದ ಯೋಧ. ಬರ್ಮಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಮುನಿ ನಾರಾಯಣ ಅವರು ಕಳೆದ ಎರಡು ತಿಂಗಳ ಹಿಂದೆ ರಜೆಯ ಮೇಲೆ ಊರಿಗೆ ಬಂದಿದ್ದರು. ಇದನ್ನೂ ಓದಿ: 75 ಮಂದಿ ಪ್ರಯಾಣಿಕರಿದ್ದ BMTC ಬಸ್‌ನಲ್ಲಿ ಭಾರೀ ಬೆಂಕಿ – ಬಸ್‌ ಸುಟ್ಟು ಕರಕಲು

    ರಾತ್ರಿ ಮಲಗಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಇಂದು ಸ್ವಗ್ರಾಮ ಆಚಂಪಲ್ಲಿ ಗ್ರಾಮದಲ್ಲಿ ಮುನಿ ನಾರಾಯಣ ಅವರ ಅಂತ್ಯಸಂಸ್ಕಾರ ನಡೆಯಲಿದೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಯಾದಗಿರಿ | ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನೂ ಹೃದಯಾಘಾತಕ್ಕೆ ಬಲಿ

    ಯಾದಗಿರಿ | ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನೂ ಹೃದಯಾಘಾತಕ್ಕೆ ಬಲಿ

    ಯಾದಗಿರಿ: ಹೃದಯಾಘಾತಕ್ಕೆ ಬಲಿಯಾಗಿದ್ದ ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನೂ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಯಾದಗಿರಿ (Yadagiri) ಜಿಲ್ಲೆಯ ಸುರಪುರ (Surpur) ತಾಲೂಕಿನ ಕೆಂಭಾವಿಯಲ್ಲಿ (Kembhavi) ನಡೆದಿದೆ.ಇದನ್ನೂ ಓದಿ: ಅತ್ಯಾಚಾರ ಆರೋಪದಲ್ಲಿ ಬಂಧನ; ಪೊಲೀಸರ ಮೇಲೆ ಗುಂಡು ಹಾರಿಸಿ ಆಪ್ ಶಾಸಕ ಪರಾರಿ

    ತಮ್ಮ ಇರ್ಫಾನ್ ಪೇಶಮಾಮ್ (38) ಹಾಗೂ ಅಣ್ಣ ಶಮಶುದ್ದೀನ್ ಪೇಶಮಾಮ್ (42) ಮೃತರು.

    ಮಂಗಳವಾರ (ಸೆ.2) ಬೆಳಿಗ್ಗೆ ತಮ್ಮ ಇರ್ಫಾನ್ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದ. ಈ ಸುದ್ದಿ ತಿಳಿದ ಅಣ್ಣ ಶಮಶುದ್ದೀನ್ ಗಾಬರಿಯಲ್ಲಿಯೇ ತಮ್ಮನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ. ಈ ವೇಳೆ ಮಾರ್ಗಮಧ್ಯದಲ್ಲಿಯೇ ಅಣ್ಣನೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ನನ್ನಮ್ಮನಿಗೆ ಮಾತ್ರ ಅಲ್ಲ, ಭಾರತೀಯ ತಾಯಂದಿರಿಗೆ ಮಾಡಿದ ಅವಮಾನ – ಪ್ರತಿಪಕ್ಷಗಳಿಗೆ ಮೋದಿ ತಿರುಗೇಟು

  • ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುತ್ತಿರುವಾಗಲೇ ಹೃದಯಾಘಾತ – ವ್ಯಕ್ತಿ ಸಾವು

    ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುತ್ತಿರುವಾಗಲೇ ಹೃದಯಾಘಾತ – ವ್ಯಕ್ತಿ ಸಾವು

    ಚಿಕ್ಕಬಳ್ಳಾಪುರ: ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ಕುಸಿದು ಬಿದ್ದು ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬೋಧಗೂರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ 40 ವರ್ಷದ ಲಕ್ಷ್ಮಿಪತಿ ಮೃತ ವ್ಯಕ್ತಿ. ಅಂದಹಾಗೆ ಗ್ರಾಮದಲ್ಲಿ ಗಣೇಶ ವಿಸರ್ಜನೆ ವೇಳೆ ನಾಗವಲ್ಲಿ ಹಾಡಿಗೆ ನೃತ್ಯ ಮಾಡುತ್ತಿದ್ದ ಲಕ್ಷ್ಮಿಪತಿ ಏಕಾಏಕಿ ಕುಸಿದುಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಸೋಮವಾರ ಮೈಸೂರಿಗೆ ರಾಷ್ಟ್ರಪತಿ ಮುರ್ಮು – ಅರಮನೆಗೆ ಭೇಟಿ, ಚಾಮುಂಡಿ ಬೆಟ್ಟದಲ್ಲೂ ವಿಶೇಷ ಪೂಜೆ

    ಕೃಷಿ ಕೆಲಸ ಮಾಡಿಕೊಂಡಿದ್ದ ಲಕ್ಷ್ಮಿಪತಿ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ನಾಳೆ ಎನ್‌ಐಎ ತನಿಖೆಗೆ ಆಗ್ರಹಿಸಿ ಬಿಜೆಪಿಯಿಂದ ಧರ್ಮಸ್ಥಳ ಚಲೋ, ಜಾಗೃತಿ ಸಮಾವೇಶ

  • ಹೆಲ್ಪರ್‌ಗೆ ಬಸ್ ‌ಚಾಲನೆ ಮಾಡಲು ಕೊಟ್ಟು ಸ್ವಲ್ಪ ಹೊತ್ತಲ್ಲೇ ಚಾಲಕ ಸಾವು

    ಹೆಲ್ಪರ್‌ಗೆ ಬಸ್ ‌ಚಾಲನೆ ಮಾಡಲು ಕೊಟ್ಟು ಸ್ವಲ್ಪ ಹೊತ್ತಲ್ಲೇ ಚಾಲಕ ಸಾವು

    ಜೈಪುರ: ಸಹಾಯಕನಿಗೆ ಬಸ್‌ ಚಾಲನೆ ಮಾಡುವುದಕ್ಕೆ ಕೊಟ್ಟು ಸ್ವಲ್ಪ ಹೊತ್ತಲ್ಲೇ ಚಾಲಕ ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ಇಂದೋರ್‌ನಿಂದ ರಾಜಸ್ಥಾನ ಕಡೆಗೆ ಬಸ್ ಚಲಾಯಿಸುತ್ತಿದ್ದ ಚಾಲಕನಿಗೆ ಅನಾರೋಗ್ಯ ಅನಿಸಿದೆ. ತಕ್ಷಣ ಬಸ್‌ ಓಡಿಸುವಂತೆ ಸಹ ಚಾಲಕನಿಗೆ ನೀಡಿದ್ದಾರೆ. ಚಾಲಕ ಸತೀಶ್ ರಾವ್ ಮೃತಪಟ್ಟಿದ್ದಾರೆ.

    ಬಸ್‌ ಚಲಾಯಿಸುತ್ತಿದ್ದಾಗ ರಾವ್‌ಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಆಸ್ಪತ್ರೆ ತಲುಪುವ ಮೊದಲೇ ಚಲಿಸುತ್ತಿದ್ದ ಬಸ್ಸಿನಲ್ಲೇ ಮೂರ್ಛೆ ಹೋಗಿ ಸಾವನ್ನಪ್ಪಿದ್ದಾರೆ. ರಾಜಸ್ಥಾನದ ಪಾಲಿಯಿಂದ ವರದಿಯಾದ ಈ ಘಟನೆ ಕ್ಯಾಮೆರಾದಲ್ಲಿ ದಾಖಲಾಗಿದೆ.

    ಸತೀಶ್‌ ರಾವ್‌ ಇಂದೋರ್‌ನಿಂದ ಜೋಧ್‌ಪುರಕ್ಕೆ ಖಾಸಗಿ ಬಸ್‌ ಚಲಾಯಿಸುತ್ತಿದ್ದರು. ಮಾರ್ಗಮಧ್ಯೆ ಅವರಿಗೆ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಆಗ ಬಸ್‌ ಅನ್ನು ಸಹಾಯಕನಿಗೆ ಚಲಾಯಿಸುವಂತೆ ನೀಡುತ್ತಾರೆ. ಕೆಲಹೊತ್ತಲ್ಲೇ ಚಾಲಕ ರಾವ್‌ ಕುಸಿದು ಬೀಳುತ್ತಾರೆ. ಅವರನ್ನು ಹತ್ತಿರದ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಗುತ್ತದೆ. ಆದರೆ, ಅಷ್ಟರಲ್ಲಾಗಲೇ ಚಾಲಕ ಮೃತಪಟ್ಟಿದ್ದಾರೆ.

    ಚಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ವೈದ್ಯರು ದೃಢಪಡಿಸಿದ್ದಾರೆ. ವಿಷಯ ತಿಳಿದ ನಂತರ, ಮರಣೋತ್ತರ ಪರೀಕ್ಷೆಗೆ ಕುಟುಂಬದವರು ನಿರಾಕರಿಸಿದ್ದಾರೆ.

  • ಹಬ್ಬಕ್ಕೆ ಬಟ್ಟೆ ಖರೀದಿಸುತ್ತಿದ್ದಾಗ ಕುಸಿದು ಬಿದ್ದು 17ರ ವಿದ್ಯಾರ್ಥಿ ಸಾವು

    ಹಬ್ಬಕ್ಕೆ ಬಟ್ಟೆ ಖರೀದಿಸುತ್ತಿದ್ದಾಗ ಕುಸಿದು ಬಿದ್ದು 17ರ ವಿದ್ಯಾರ್ಥಿ ಸಾವು

    ಮಂಡ್ಯ: ತಂದೆ-ತಾಯಿ ಜೊತೆ ಹಬ್ಬಕ್ಕೆ ಬಟ್ಟೆ ಖರೀದಿಸುತ್ತಿದ್ದಾಗ ಪ್ರಥಮ ಪಿಯುಸಿ ವಿದ್ಯಾರ್ಥಿಯೋರ್ವ ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಮದ್ದೂರು (Maddur) ತಾಲೂಕಿನಲ್ಲಿ ನಡೆದಿದೆ.

    ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಡಿ.ಮಲ್ಲಿಗೆರೆ ಗ್ರಾಮದ ಚಿರಾಗ್ (17) ಮೃತ ವಿದ್ಯಾರ್ಥಿ. ಬೆಂಗಳೂರು ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ.ಇದನ್ನೂ ಓದಿ: ಮಾರುತಿ ಸುಜುಕಿಯ ಮೊದಲ ಇವಿ ವಾಹನ ಇ-ವಿಟಾರ ರಫ್ತಿಗೆ ಪ್ರಧಾನಿ ಮೋದಿ ಚಾಲನೆ

    ಸೋಮವಾರ (ಆ.25) ಸಂಜೆ ಚಿರಾಗ್ ಹಬ್ಬಕ್ಕೆ ಬಟ್ಟೆ ಖರೀದಿಸಲು ತಂದೆ-ತಾಯಿ ಜೊತೆ ಹೋಗಿದ್ದ. ಈ ವೇಳೆ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾನೆ.