ಅಂಜನಾದ್ರಿ ಬೆಟ್ಟದ ಆಂಜನೇಯನ ದರ್ಶನ ಪಡೆಯಲು ಯುವಕನೊಬ್ಬ ಸ್ನೇಹಿತರೊಂದಿಗೆ ತೆರಳಿದ್ದ. ಇನ್ನೇನು ಬೆಟ್ಟ ಹತ್ತುವುದು ಮುಗಿದಿದೆ ಎಂದು ಬೆಟ್ಟದ ಅಂತ್ಯ ಭಾಗಕ್ಕೆ ಹೋಗಿದ್ದಾನೆ. ಈ ವೇಳೆ ಏಕಾಏಕಿ ಸುಸ್ತು ಕಾಣಿಸಿಕೊಂಡು, ಅಸ್ವಸ್ಥನಾಗಿದ್ದ. ಕೂಡಲೇ ಅಂಬುಲೆನ್ಸ್‌ಗೆ ಕರೆ ಮಾಡಿದ್ದು, ಗಂಗಾವತಿ ವಾಹನ ಸಿಬ್ಬಂದಿ ಅಂಬುಲೆನ್ಸ್ನಲ್ಲಿ ಆಕ್ಸಿಜನ್ ಕೊರತೆಯಿದೆ ಎಂದು ತಿಳಿಸಿದ್ದಾನೆ.
ನಂತರ ಅಂಜನಾದ್ರಿ ದೇವಸ್ಥಾನದ ಸಿಬ್ಬಂದಿ ಆನೆಗುಂದಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದ ಅಂಬುಲೆನ್ಸ್‌ಗೆ ಕರೆ ಮಾಡಿ, ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಅಲ್ಲಿನ ಸಿಬ್ಬಂದಿ ಯುವಕನನ್ನು ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ಕರೆದೊಯ್ಯುವಂತೆ ಶಿಫಾರಸ್ಸು ಮಾಡಿದ್ದಾರೆ.
ಬೆಂಗಳೂರು: ಆರೋಗ್ಯದ (Health) ಬಗ್ಗೆ ಕಾಳಜಿ ವಹಿಸದೇ ಸಂಸ್ಥೆಗಾಗಿ ದುಡಿಯುತ್ತಿರುವ ಬಹುತೇಕ ಬಿಎಂಟಿಸಿ ಡ್ರೈವರ್ ಗಳ ಹೃದಯ ಅಪಾಯದಲ್ಲಿಯಂತೆ. ಜಯದೇವ ಆಸ್ಪತ್ರೆ (Jayadeva Hospital) ವೈದ್ಯರ ವರದಿಯಲ್ಲಿ ಈ ಅಘಾತಕಾರಿ ಅಂಶ ಬಯಲಾಗಿದೆ.
ಹೌದು. ಬಸ್‍ಗಳ ಕೊರತೆ, ಓವರ್ ಟೈಂ ಡ್ಯೂಟಿ, ಹಬ್ಬದ ದಿನವೂ ಕೆಲಸ, ಸದಾ ಕಿರಿಕಿರಿ, ಒತ್ತಡ. ಇದು ಬಿಎಂಟಿಸಿ (BMTC) ಚಾಲಕರು ಹಾಗೂ ನಿರ್ವಹಕರ ನಿತ್ಯದ ಗೋಳು. ಶಕ್ತಿ ಯೋಜನೆ ಜಾರಿಯಾದ ನಂತರ ಈ ಸಮಸ್ಯೆ ದುಪ್ಪಟ್ಟಾಗಿದೆ. ಬಸ್‍ಗಳ ಶಾರ್ಟೇಜ್ ನಡುವೆ ಬಿಎಂಟಿಸಿ ಜನರಿಗಾಗಿ ಇರುವ ಬಸ್‍ನಲ್ಲಿಯೇ ಹೆಚ್ಚುವರಿ ಟ್ರಿಪ್ ಮಾಡಿಸ್ತಿದೆ.
ಇದು ಚಾಲಕರ ಜೀವಕ್ಕೆ ಆಪತ್ತು ಎದುರಾಗುವ ಆತಂಕ ಮೂಡಿಸಿದೆ. ಈ ಎಲ್ಲಾ ಒತ್ತಡಗಳಿಂದ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಚಾಲಕರು ಹೃದ್ರೋಗದ ಅಪಾಯದಲ್ಲಿದ್ದಾರೆ. ಬಿಎಂಟಿಸಿ (BMTC) ಚಾಲಕರ ಪೈಕಿ 40-50% ರಷ್ಟು ಜನ ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂಬುದು ಜಯದೇವ ಆಸ್ಪತ್ರೆ ನಡೆಸಿದ ಆರೋಗ್ಯ ತಪಾಸಣೆಯಿಂದ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕೋವಿಡ್‌ನಿಂದ ಹೆಚ್ಚುತ್ತಿದ್ಯಾ ಹೃದಯಾಘಾತ?- ಹೃದ್ರೋಗ ತಜ್ಞರು ಹೇಳೋದು ಏನು?
ಜಯದೇವ ಆಸ್ಪತ್ರೆಯಲ್ಲಿ ಕಳೆದ 12 ತಿಂಗಳಿನಲ್ಲಿ 8200 ಬಿಎಂಟಿಸಿ ಚಾಲಕರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ವೈದ್ಯರಿಂದ ಸಮಗ್ರ ಪರೀಕ್ಷೆ ನಡೆದಿದೆ. ಚಾಲಕರ ಪರೀಕ್ಷಿಸಲು 2022ರ ಆಗಸ್ಟ್‍ನಲ್ಲಿ ಬಿಎಂಟಿಸಿ ಜೊತೆ ಒಪ್ಪಂದಕ್ಕೆ ಜಯದೇವ ಸಂಸ್ಥೆ ಸಹಿ ಹಾಕಿತ್ತು. ಅದರಂತೆ ಚಾಲಕರ ಬ್ಲಡ್ ಟೆಸ್ಟ್, ಹೃದಯದ ಒತ್ತಡ ಪರೀಕ್ಷೆ, ಇಸಿಜಿ, ಇಕೋ ಟೆಸ್ಟ್ ಸೇರಿ ಸಂಪೂರ್ಣ ಆರೋಗ್ಯ ಪರೀಕ್ಷೆ ನಡೆಸಿತ್ತು. ತಪಾಸಣೆಗೆ ಒಳಗಾದ 40% ರಷ್ಟು ಚಾಲಕರಿಗೆ ಮಧುಹೇಹ ಇರೋದು ಪತ್ತೆಯಾಗಿದೆ.
ಚಾಲಕರು ಒವರ್ ಟೈಂ ಡ್ಯೂಟಿ ಮಾಡ್ತಾರೆ. ಸರಿಯಾದ ಸಮಯಕ್ಕೆ ಸಮರ್ಪಕ ಆಹಾರ ಸೇವಿಸುವುದಿಲ್ಲ. ವ್ಯಾಯಾಮದ ಕೊರತೆ ಮತ್ತು 10 ಗಂಟೆಗೂ ಹೆಚ್ಚು ಸಮಯ ಕುಳಿತುಕೊಳ್ಳುವುದರಿಂದ ಹೆಚ್ಚು ಆಯಾಸಕ್ಕೆ ಒಳಗಾಗಿದ್ದಾರೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳಿಗೆ ಅವರನ್ನು ಕಾಡುತ್ತಿವೆಯಂತೆ. ಅಲ್ಲದೇ 5% ರಷ್ಟು ಮಂದಿಗೆ ಈಗಾಗಲೇ ಹೃದಯ ಸಂಬಂಧಿ ಕಾಯಿಲೆ ಇರುವುದು ಕಂಡು ಬಂದಿದೆಯಂತೆ. ಇನ್ನೂ ಇದೇ ರೀತಿಯ ಆರೋಗ್ಯ ತಪಾಸಣೆಗಳನ್ನು ಸದ್ಯದಲ್ಲೇ ಕರ್ನಾಟಕ ಕೆಎಸ್‍ಆರ್ ಟಿಸಿ ಮತ್ತು ಪೊಲೀಸ್ ಸಿಬ್ಬಂದಿಗೂ ವಿಸ್ತರಿಸಲು ಪ್ರಸ್ತಾಪಿಸಲಾಗಿದೆ.
ಒಟ್ಟಾರೆ ಇತ್ತಿಚಿನ ದಿನದಲ್ಲಿ ಹಠಾತ್ ಹೃದಯಘಾತದಿಂದ ಸಾವನ್ನಪ್ಪಿತ್ತಿರುವವರ ಸಂಖ್ಯೆ ಅಧಿಕವಾಗಿದೆ. ಅಲ್ಲದೆ ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಸಿಬ್ಬಂದಿ ಕೂಡ ಹಾರ್ಟ್ ಅಟ್ಯಾಕ್ ನಿಂದ ಸತ್ತಿದ್ದಾರೆ. ಹೀಗಾಗಿ ಸದಾ ಜನರ ಸೇವೆಗೆ ದುಡಿಯುತ್ತಿರುವ ಇವರು ಹೃದಯದ ಬಗ್ಗೆ ಕಾಳಜಿ ವಹಿಸೋದು ಅಗತ್ಯ ಎಂದು ತಜ್ಞರು ಹೇಳುತ್ತಿದ್ದಾರೆ.
ಬೆಂಗಳೂರು: ಗ್ರಾಮೀಣ ಪ್ರದೇಶದ ಜನರ ಆರೋಗ್ಯ ರಕ್ಷಣೆಗೆ ಆರೋಗ್ಯ ಇಲಾಖೆಯಿಂದಲೇ ಉಚಿತ ಆರೋಗ್ಯ ಶಿಬಿರಗಳನ್ನ ರಾಜ್ಯದಾದ್ಯಂತ ನಡೆಸಲು ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದರು. ಬೆಂಗಳೂರಿನಲ್ಲಿ ಇಂದು ಗಾಂಧಿನಗರ ಬೃಹತ್ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದ್ದಾರೆ.
ಗಾಂಧಿನಗರದಲ್ಲಿ ಆರೋಗ್ಯ ಇಲಾಖೆ (Health Department) ಹಮ್ಮಿಕೊಂಡಿದ್ದ ಉಚಿತ ಅರೋಗ್ಯ ಶಿಬಿರಲ್ಲಿ ಏರ್ಪಡಿಸಿದ್ದ ಆರೋಗ್ಯ ಸೇವೆಗಳನ್ನ ವೀಕ್ಷಿಸಿದ ಸಚಿವರು, ಇಲಾಖೆ ಹಾಗೂ ವೈದ್ಯರು, ಸಿಬ್ಬಂದಿಯವರ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ರೀತಿಯ ಶಿಬಿರಗಳು, ಆರೋಗ್ಯ ಸೇವೆಗಳು ರಾಜ್ಯದ ಹಳ್ಳಿಗಾಡಿನ ಜನರಿಗೂ ತಲುಪಬೇಕು. ಈ ನಿಟ್ಟಿನಲ್ಲಿ ರಾಜ್ಯದ ಜಿಲ್ಲೆಗಳು ಹಾಗೂ ತಾಲೂಕು ಮಟ್ಟಕ್ಕೂ ಉಚಿತ ಆರೋಗ್ಯ ಶಿಬಿರಗಳನ್ನ ಕೊಂಡೊಯ್ಯುವಂತೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು. ಇದನ್ನೂ ಓದಿ: ಕಾವೇರಿ, ಮಹದಾಯಿ ವಿಚಾರವಾಗಿ ಆಗಸ್ಟ್ 23ರಂದು ಸರ್ವಪಕ್ಷ ಸಭೆ: ಡಿಕೆಶಿ
ಮುಂಜಾಗೃತವಾಗಿ ಕಾಯಿಲೆಗಳನ್ನ ತಡೆಗಟ್ಟುವುದು ಬಹುಮುಖ್ಯ. ಜನರ ಜೀವನ ಶೈಲಿ ಬದಲಾದಂತೆ, ಇವತ್ತಿನ ದಿನಮಾನಗಳಲ್ಲಿ ಬಿ.ಪಿ, ಶೂಗರ್, ಕ್ಯಾನ್ಸರ್, ಕಿಡ್ನಿ ಸಮಸ್ಯೆಯ ಕಾಯಿಲೆಗಳು ಜನರನ್ನ ಕಾಡುತ್ತಿವೆ. ಈ ಕಾಯಿಲೆಗಳನ್ನ ಮೊದಲೇ ಪತ್ತೆ ಹಚ್ಚಿದರೇ, ಚಿಕಿತ್ಸೆ ಮೂಲಕ ಆರಂಭದಲ್ಲೇ ಗುಣಪಡಿಸಬಹುದು. ಹೀಗಾಗಿ ಉಚಿತ ಆರೋಗ್ಯ ಶಿಬಿರಗಳು ಹೆಚ್ವು ಅವಶ್ಯಕವಾಗಿದ್ದು, ಜನಸಾಮಾನ್ಯರಿಗೆ ಹೆಚ್ವು ಸದುಪಯೋಗವಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.
ಹೃದಯಘಾತ ತಡೆಯಲು ಪುನೀತ್ ಹೆಸರಲ್ಲಿ ಅಪ್ಪು ಯೋಜನೆ
ಹಠಾತ್ ಹೃದಯಘಾತ ತಡೆಯುವ ನಿಟ್ಟಿನಲ್ಲಿ ಪುನೀತ್ ರಾಜಕುಮಾರ್ (Puneeth Rajkumar) ಹೆಸರಲ್ಲಿ ಹೊಸ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇದೇ ವೇಳೆ ತಿಳಿಸಿದರು. ಹೃದಯಘಾತಕ್ಕೆ ಬ್ರೇಕ್ ಹಾಕಲು ಆರೋಗ್ಯ ಇಲಾಖೆ ಯೋಜನೆಗೆ ಮುಂದಾಗಿದೆ. ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಅಪ್ಪು ಯೋಜನೆ ಜಾರಿಗೆ ತರುತ್ತಿದ್ದೇವೆ ಎಂದಿದ್ದಾರೆ.
ಮೊದಲ ಹಂತದಲ್ಲಿ ಜಯದೇವ ಆಸ್ಪತ್ರೆಯನ್ನ ಈ ಯೋಜನೆಗೆ ಹಬ್ ಮಾಡಲಾಗಿದೆ. ಕೇವಲ ಆಸ್ಪತ್ರೆ ಮಾತ್ರವಲ್ಲ ಸಾರ್ವಜನಿಕ ಸ್ಥಳಗಳಲ್ಲಿಯೂ Automated External Defibrillators (AED )ಅಳವಡಿಕೆ ಮಾಡಲಾಗುತ್ತೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾಲ್, ಏರಪೋರ್ಟ್ ಹಾಗೂ ಸಾರ್ವಜನಿಕ ಪ್ರದೇಶದಲ್ಲಿ AED ಅಳವಡಿಕೆ ಮಾಡುತ್ತೇವೆ.
ಸಾರ್ವಜನಿಕ ಸ್ಥಳಗಳಲ್ಲಿ ಹೃದಯ ಸಂಬಂಧಿ ಸಮಸ್ಯೆ ಕಂಡು ಬಂದರೆ, ಸ್ಥಳದಲ್ಲಿಯೇ ತುರ್ತು ಚಿಕಿತ್ಸೆ ನೀಡಲಾಗುತ್ತೆ. ಗೋಲ್ಡನ್ ಟೈಮ್ ನಲ್ಲಿ ಟ್ರೀಟ್ ಮೆಂಟ್ ಬಳಿಕ ಆಸ್ಪತ್ರೆಗೆ ಶೀಫ್ಟ್ ಮಾಡಬಹುದು. ರೋಗಿಯನ್ನ ಉಳಿಸಲು ನೀಡಬೇಕಾದ ಪ್ರಾಥಮಿಕ ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ.
ಹೃದಯಘಾತದ ಸಮಯದಲ್ಲಿ ಆಸ್ಪತ್ರೆಗೆ ಶಿಫ್ಟ್ ವೇಳೆಯಲ್ಲಿಯೇ ಡೆತ್ ಆಗ್ತೀವೆ. ಅಲ್ಲದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿಯೇ ಹೃದಯಾಘಾತ ತಪ್ಪಿಸಲು ಮೆಡಿಸಿನ್ ಗಳನ್ನ ಪೂರೈಸಲಾಗುವುದು. ಯಾರಿಗೆ ಹೃದಘಾತದ ಸೂಚನೆ ಬಂದರೆ ತಕ್ಷಣ ಸಂಬಂಧಿಸಿದ ಔಷಧಿ ನೀಡಿ, ಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗೆ ಮೇಲ್ಮಟ್ಟದ ಆಸ್ಪತ್ರೆಗೆ ರವಾನಿಸಲಾಗುವುದು. ಎರಡು ವಾರಗಳಲ್ಲಿ ಈ ಬಗ್ಗೆ ಟೆಂಡರ್ ಕರೆದು ಯೋಜನೆ ಜಾರಿಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬಳಿಕ ಮಾತನಾಡಿದ ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ಗಾಂಧಿನಗರ ಆರೋಗ್ಯ ಶಿಬಿರ ಮುಂದಿನ ದಿನಗಳಲ್ಲಿ ಆರೋಗ್ಯ ಇಲಾಖೆ ಹಮ್ಮಿಕೊಳ್ಳುವ ಉಚಿತ ಆರೋಗ್ಯ ಶಿಬಿರಗಳಿಗೆ ಒಂದು ಮುನ್ನಿಡಿಯಾಗಿದೆ. ಬೃಹತ್ ಗಾಂಧಿನಗರ ಆರೋಗ್ಯ ಶಿಬಿರಲ್ಲಿ ಎಲ್ಲ ರೀತಿಯ ಆರೋಗ್ಯ ಸೇವೆಗಳನ್ನ ಸುವ್ಯವಸ್ಥಿತವಾಗಿ ಆಯೋಜಿಸಲಾಗಿದೆ. ಬಿ.ಪಿ, ಶೂಗರ್, ಕಣ್ಣಿನ ತಪಾಸಣೆ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿದ್ದರೂ ಇ.ಸಿ.ಜಿ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದೇ ಸೂರಿನಡಿ ಆರೋಗ್ಯ ಇಲಾಖೆಯ ಎಲ್ಲ ಚಿಕಿತ್ಸೆಗಳು ಶಿಬಿರದ ಮುಖಾಂತರ ಜನರ ಬಳಿಗೆ ಕೊಂಡುಯ್ಯುವ ನಿಟ್ಟಿನಲ್ಲಿ ಗಾಂಧಿನಗರ ಆರೋಗ್ಯ ಶಿಬಿರ ಮುನ್ನುಡಿ ಬರೆದಿದೆ ಎಂದು ಆಯುಕ್ತ ರಂದೀಪ್ ಅಭಿಪ್ರಾಯ ವ್ಯಕ್ತಪಡಿಸಿದರು.
ಆರೋಗ್ಯ ಶಿಬಿರಕ್ಕೆ ಗಾಂಧಿ ನಗರ ಜನರ ದಂಡು
ಸಾವಿರಾರು ಸಂಖ್ಯೆಯಲ್ಲಿ ಜನರು ಆರೋಗ್ಯ ಶಿಬಿರಕ್ಕೆ ಭೇಟಿ ನೀಡಿ ತಪಾಸಣೆ, ಉಚಿತ ಚಿಕಿತ್ಸೆಯ ಲಾಭ ಪಡೆದರು. ಶಿಬಿರದಲ್ಲಿ ಪ್ರಾಥಮಿಕ ಆರೋಗ್ಯ ತಪಾಸಣೆಯಿಂದ ಹಿಡಿದು, ಸ್ತ್ರೀ ರೋಗ ಸಮಸ್ಯೆ, ಮಕ್ಕಳ ಆರೋಗ್ಯ, ಕಿಲು ಮತ್ತು ಮೂಳೆ ಚಿಕಿತ್ಸೆ, ನರ ಸಮಸ್ಯೆ, ಹೃದಯ ಚಿಕಿತ್ಸೆ, ಚರ್ಮದ ಸಮಸ್ಯೆ, ಬಾಯಿ, ಸ್ತನ, ಗರ್ಭಕಂಠದ ಕ್ಯಾನ್ಸರ್, ಕಣ್ಣು, ಹಲ್ಲು, ಕಿಡ್ನಿ ಚಿಕಿತ್ಸೆಗಳನ್ನ ಉಚಿತವಾಗಿ ನೀಡಲಾಯಿತು. ಅಲ್ಲದೇ ಆಯುಷ್ ಇಲಾಖೆಯ ಆರೋಗ್ಯ ಸೇವೆಗಳು ಸೇರಿದಂತೆ ಮನೋ ವೈದ್ಯಕೀಯ ಚಿಕಿತ್ಸೆಯನ್ನ ಕೂಡ ಜನರ ಬಳಿಗೆ ತರಲಾಗಿತ್ತು. ಅತ್ಯಾದುನಿಕ ಆರೋಗ್ಯ ಸೇವೆಗಳ ಕುರಿತಂತೆ ಮಾಹಿತಿ, ಮೊಬೈಲ್ ಹೆಲ್ತ್ ಕೇರ್, ಬಸ್ ಗಳಲ್ಲಿ ಆರೋಗ್ಯ ಸೇವೆಗಳು ಲಭ್ಯವಿದ್ದವು. 16 ಕೌಂಟರ್, 10 ಫಾರ್ಮಸಿ ಸೆಂಟರ್ ಗಳಲ್ಲಿ 100 ಕ್ಕೂ ಹೆಚ್ವು ತಜ್ಞ ವೈದ್ಯರು ಸಾರ್ವಜನಿಕರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಿದರು. 3 ಕೋಟಿ ಮೌಲ್ಯದ ಔಷಧಿಗಳನ್ನ ಜನರಿಗಾಗಿ ಉಚಿತ ಆರೋಗ್ಯ ಶಿಬಿರದಲ್ಲಿ ಕಲ್ಪಿಸಲಾಗಿತ್ತು. ವೈದ್ಯರು ಸೇರಿದಂತೆ ಸರಿಸುಮಾರು 700 ಆರೋಗ್ಯ ಸಿಬ್ಬಂದಿಗಳು ಶಿಬಿರದಲ್ಲಿ ಕಾರ್ಯನಿರ್ವಹಿಸಿದರು. ಇದನ್ನೂ ಓದಿ: ತಮಿಳುನಾಡಿಗೆ ನೀರು ಬಿಡುಗಡೆ – ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ 106 ಅಡಿಗೆ ಕುಸಿತ
ಹೈದರಾಬಾದ್: ಯುವಕನೊಬ್ಬ ಸಂಬಂಧಿಕರ ಮದುವೆಯಲ್ಲಿ (Wedding) ನೃತ್ಯ (Dance) ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ತೆಲಂಗಾಣದಲ್ಲಿ (Telangana) ನಡೆದಿದೆ.
ಮಹಾರಾಷ್ಟ್ರ ಮೂಲದ ಮುತ್ಯಂ (19) ಮೃತ ಯುವಕ. ತೆಲಂಗಾಣದ ನಿರ್ಮಲ್ ಜಿಲ್ಲೆಯ ಪಾರ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮುತ್ಯುಂ ಸಂಬಂಧಿಕರ ವಿವಾಹ ಆರತಕ್ಷತೆಯಲ್ಲಿ ನೃತ್ಯ ಮಾಡುತ್ತಿದ್ದ.
ಈ ವೇಳೆ ಆತ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಪ್ರಜ್ಞೆ ತಪ್ಪಿದ್ದಾನೆ. ತಕ್ಷಣ ಮದುವೆಯಲ್ಲಿ ನೆರೆದಿದ್ದ ಅತಿಥಿಗಳು ಮುತ್ಯಂನನ್ನು ಭೈಂಸಾ ಏರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗ ಮಧ್ಯೆಯೇ ಮುತ್ಯುಂ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಇದನ್ನೂ ಓದಿ:ಬಿಎಸ್‍ವೈಗೆ ಹೈಕಮಾಂಡ್ ಬಹುಪರಾಕ್ – ಸಕ್ಸಸ್ ಆಗುತ್ತಾ ನಮೋ ಗೇಮ್‍ಪ್ಲಾನ್?
ಜಗತ್ತಿನಾದ್ಯಂತ ಜೇಮ್ಸ್ ಕ್ಯಾಮರಾನ್ ನಿರ್ದೇಶನದ ‘ಅವತಾರ್ : ದಿ ವೇ ಆಫ್ ವಾಟರ್’ ಸಿನಿಮಾ ರಿಲೀಸ್ ಆಗಿದೆ. ಬಿಡುಗಡೆಗೊಂಡು ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕೂಡ ಕಾಣುತ್ತಿದೆ. ಪ್ರೇಕ್ಷಕರು ಭರ್ಜರಿಯಾಗಿಯೇ ಈ ಸಿನಿಮಾವನ್ನು ಸ್ವೀಕರಿಸುತ್ತಿದ್ದಾರೆ. ಈ ನಡುವೆ ಅಹಿತಕರ ಘಟನೆಯೊಂದು ನಡೆದಿದೆ. ಸಿನಿಮಾ ನೋಡುತ್ತಲೇ ಹೃದಯಾಘಾತವಾಗಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.
ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪೆದ್ದಪುರಂನಲ್ಲಿ ಸಹೋದರ ರಾಜು ಜೊತೆ ಲಕ್ಷ್ಮಿರೆಡ್ಡಿ ಶ್ರೀನು ಎಂಬಾತ ಬಂದಿದ್ದ. ಸಿನಿಮಾ ನೋಡುತ್ತಾ, ಮೈಮರೆತಿದ್ದ ಈ ವೇಳೆ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ ಕೂಡ ಆಗಿದೆ. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ. ತೀವ್ರ ರಕ್ತದೊತ್ತಡದ ನಂತರ ಹೃದಯಾಘಾತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ‘ಕೋಟಿಗೊಬ್ಬ’ ಕ್ಯಾಲೆಂಡರ್ ರಿಲೀಸ್: 20 ಕಲಾವಿದರ ಕುಂಚದಲ್ಲಿ ಮೂಡಿಬಂದ ವಿಷ್ಣುವರ್ಧನ್
ಅವತಾರ್ ಸಿನಿಮಾ ನೋಡುವ ವೇಳೆಯಲ್ಲಿ ಈ ರೀತಿಯ ಘಟನೆಗಳು ಹಿಂದೆಯೇ ನಡೆದಿವೆ. ಅವತಾರ್ ಮೊದಲ ಭಾಗ ಬಂದಾಗ ತೈವಾನ್ ನಲ್ಲಿಯೂ ವ್ಯಕ್ತಿಯೊಬ್ಬನಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದ. ಇದು ಕೇವಲ ಕಾಕತಾಳೀಯವಾದರೂ, ಪ್ರೇಕ್ಷಕರಲ್ಲಿ ಒಂದು ರೀತಿಯಲ್ಲಿ ಭಯ ಹುಟ್ಟಿಸಿದ್ದು ಸುಳ್ಳು. ಕಳೆದ ಎರಡು ದಿನಗಳ ಹಿಂದೆಯಷ್ಟೇ ಅವತಾರ್ ಸಿನಿಮಾ ರಿಲೀಸ್ ಆಗಿದ್ದು, ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
Live Tv
[brid partner=56869869 player=32851 video=960834 autoplay=true]
ಶ್ರೀನಗರ: ಪಾರ್ವತಿಯ(Goddess Parvati) ವೇಷ ಧರಿಸಿ ಹುಡುಗಿಯಂತೆ ನರ್ತಿಸುತ್ತಿದ್ದ 20 ವರ್ಷದ ಹುಡುಗನೊಬ್ಬ ಹೃದಯಾಘಾತದಿಂದ ವೇದಿಕೆಯಲ್ಲೇ(Stage) ಕುಸಿದು ಸಾವನ್ನಪ್ಪಿದ ಘಟನೆ ಜಮ್ಮುವಿನಲ್ಲಿ ನಡೆದಿದೆ.
ಜಮ್ಮು ಮತ್ತು ಕಾಶ್ಮೀರದ(Jammu and Kashmir) ಬಿಷ್ನಾಹ್ ಪ್ರದೇಶದಲ್ಲಿ ಯೋಗೇಶ್ ಗುಪ್ತಾ ನರ್ತಕಿಯ ವೇಷ ಧರಿಸಿ ಪ್ರದರ್ಶನ ನೀಡುತ್ತಿದ್ದ. ಈ ವೇಳೆ ಹೃದಯಾಘಾತವಾಗಿ(Heart Attack) ಅಲ್ಲೇ ಕುಸಿದು ಬಿದ್ದಿದ್ದಾರೆ. ಘಟನೆಗೆ ಸಂಬಂಧಿಸಿ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
20 year old Jammu girl dies of heart attack while performing on stage. Could CPR have saved her ? Did lack of public awareness lead to her death? pic.twitter.com/w7lMoHGC4a
ವೀಡಿಯೋದಲ್ಲಿ ಏನಿದೆ?: ವೈರಲ್ ವೀಡಿಯೋದಲ್ಲಿ ಪಾರ್ವತಿ ವೇಷ ಧರಿಸಿ ಯೋಗೇಶ್ ಗುಪ್ತಾ ನೃತ್ಯ ಮಾಡುತ್ತಿದ್ದ. ಅಲ್ಲಿ ನೆರೆದಿದ್ದ ಜನರೆಲ್ಲರೂ ಆ ನೃತ್ಯವನ್ನು ಆಹ್ಲಾದಿಸುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಆತ ಕುಸಿದು ಅಲ್ಲಿಯೇ ಬೀಳುತ್ತಾನೆ. ಅದಾದ ಬಳಿಕವೂ ಕೆಲ ಸೆಕೆಂಡಿನ ನಂತರ ಕೆಲವು ಸ್ಟೇಪ್‍ಗಳನ್ನು ಮಾಡುತ್ತಾನೆ. ಆ ಬಳಿಕ ಆತ ಅಲ್ಲಿಂದ ಏಳುವುದೇ ಇಲ್ಲ. ಇದನ್ನೂ ಓದಿ: ರಾಜಪಥ್‍ನಿಂದ ಕರ್ತವ್ಯ ಪಥವಾಗಿ ಬದಲಾದ ದೆಹಲಿ ಐಕಾನಿಕ್ ರಸ್ತೆ ಹೇಗೆ ಅಭಿವೃದ್ಧಿಯಾಗಿದೆ ಗೊತ್ತಾ?
#BREAKING
Yogesh Gupta, who was playing the role of Mother Parvati in #Jammu, suddenly had a cardiac arrest and then died in a few moments. He was just 20 years Old.
Its #Shocking
ಆದರೆ ದುರಂತವೆಂದರೆ ಕೆಲಕಾಲ ಅಲ್ಲಿ ನೆರೆದಿದ್ದ ಪ್ರೇಕ್ಷಕರು ಆತ ಇನ್ನೂ ಪ್ರದರ್ಶನವನ್ನೇ ನೀಡುತ್ತಿದ್ದಾನೆ ಎಂದು ಕೊಳ್ಳುತ್ತಾರೆ. ಆದರೆ ಕೆಲ ನಿಮಿಷಗಳಾದರೂ ಆತ ಏಳದಿದ್ದಾಗ ಅಲ್ಲಿದ್ದ ಶಿವನ ವೇಷವನ್ನು ಧರಿಸಿದ ಯೋಗೇಶ್ ಬಳಿ ಹೋಗಿ ಪರೀಕ್ಷೆ ನಡೆಸುತ್ತಾನೆ. ಆದರೂ ಆತನಿಗೆ ಎಚ್ಚರವಾಗಿಲ್ಲವೆಂದು ಅಲ್ಲಿದ್ದ ಸಿಬ್ಬಂದಿಯನ್ನು ಕರೆಯುತ್ತಾನೆ. ತಕ್ಷಣ ಯೋಗೇಶನನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಯೋಗೇಶ್ ಗುಪ್ತಾ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದರು. ಇದನ್ನೂ ಓದಿ: ಉಗ್ರ ಯಾಕೂಬ್ ಮೆಮನ್ ಸಮಾಧಿ ಸೌಂದರ್ಯೀಕರಣ – ಉದ್ಧವ್ ವಿರುದ್ಧ ಬಿಜೆಪಿ ಕಿಡಿ
Live Tv
[brid partner=56869869 player=32851 video=960834 autoplay=true]
ಮಂಡ್ಯ: ಕಾಲೇಜಿಗೆ ಸೇರುವ ವಿಚಾರದಲ್ಲಿ ತಂದೆಯೊಂದಿಗೆ ಮುನಿಸಿಕೊಂಡ ಮಗಳು ಕೊನೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಮಗಳ ಸಾವಿನಿಂದ ನೊಂದ ತಂದೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದಲ್ಲಿ ಜರುಗಿದೆ.
ತಳಗವಾದಿ ಗ್ರಾಮದ ಬಾಂಧವ್ಯ (17) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ ರಾಜು (65) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಾಲೇಜಿಗೆ ಸೇರುವ ವಿಚಾರದಲ್ಲಿ ಬಾಂಧವ್ಯ ತನ್ನ ತಂದೆ ರಾಜು ಅವರ ಜೊತೆಗೆ ಮುನಿಸಿಕೊಂಡಿದ್ದಳು. ಇದಾದ ಬಳಿಕ ಇಂದು ಬಾಂಧವ್ಯ ಬೆಳಗಿನ ಜಾವ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನು ನೋಡಿದ ರಾಜು ಅವರು ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ವಿಶ್ವನಾಥ್ ದ್ರಾಕ್ಷಿ ಹುಳಿ ಎನ್ನುವ ನರಿ ಜಾಯಮಾನಕ್ಕೆ ಸೇರಿದವರು: ಹೆಚ್‍ಡಿಕೆ
ಮಗಳು ನೇಣಿಗೆ ಶರಣಾಗಿ ಸಾವನ್ನಪ್ಪಿರುವುದನ್ನು ನೋಡಿ ನೊಂದ ರಾಜು ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಇದೀಗ ಒಂದೇ ಮನೆಯಲ್ಲಿ ಸಣ್ಣ ವಿಷಯಕ್ಕೆ ಮುನಿಸಿಕೊಂಡ ಎರಡು ಜೀವ ಬಲಿಯಾಗಿದೆ. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.
ಬ್ಯೂನಸ್ ಐರಿಸ್: ಅರ್ಜೆಂಟೀನಾದ ಫುಟ್‍ಬಾಲ್ ದಂತಕಥೆ ಡಿಯಾಗೋ ಮರಡೋನಾ ಅವರು ಇಂದು ನಿಧನವಾಗಿದ್ದಾರೆ.
ನಿನ್ನೆ ತಾನೇ ತನ್ನ 60 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಡಿಯಾಗೋ ಮರಡೋನಾ ಇಂದು ಹೃದಯಘಾತದಿಂದ ತಮ್ಮ ನಿವಾಸದಲ್ಲೇ ಸಾವನ್ನಪ್ಪಿದ್ದಾರೆ. ಡಿಯಾಗೋ ಮರಡೋನಾ ಅವರು ಮೂರು ವಾರದ ಹಿಂದೆಯಷ್ಟೆ ಮೆದುಳಿನಲ್ಲಿ ರಕ್ತಹೆಪ್ಪುಗಟ್ಟಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು.
ಅರ್ಜೆಂಟೀನಾದ ಫುಟ್‍ಬಾಲ್ ಇತಿಹಾಸದಲ್ಲಿ ತನ್ನದೇ ಆದ ದಾಖಲೆಗಳನ್ನು ನಿರ್ಮಿಸಿರುವ ಡಿಯಾಗೋ ಮರಡೋನಾ ವಿಶ್ವದದ್ಯಾಂತ ಅಭಿಮಾನಿಗಳನ್ನು ಹೊಂದಿದ್ದರು. ಜೊತೆಗೆ ಡ್ರಗ್ಸ್ ಮತ್ತು ಮದ್ಯವೆಸನಿಯಾಗಿದ್ದರು.
ಕೋಲಾರ: ವಿಶ್ವ ವಿಖ್ಯಾತಿ ಪಡೆದ ಜಿಲ್ಲೆಯ ಕೋಟಿಶಿವಲಿಂಗ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ಸಾಂಭ ಶಿವಮೂರ್ತಿ(74) ಸ್ವಾಮೀಜಿ ಶುಕ್ರವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ದೈವಾಧೀನರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ನಿಶ್ಯಕ್ತಿಯಿಂದ ಬಳಲುತ್ತಿದ್ದ ಶ್ರೀಗಳಿಗೆ ಗುರುವಾರ ಹೃದಯಾಘಾತ ಸಂಭವಿಸಿತ್ತು. ಕೂಡಲೇ ಅವರನ್ನು ಬೆಂಗಳೂರಿನ ಮಹಾವೀರ್ ಜೈನ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಕೋಲಾರ ಕೆಜಿಎಫ್ ತಾಲೂಕಿನ ಬೇತಮಂಗಲ ಹೋಬಳಿಯ ಕಮ್ಮಸಂದ್ರದಲ್ಲಿ ಇಂದು ಲಕ್ಷಾಂತರ ಭಕ್ತರ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಹೀಗಾಗಿ ರಾಜ್ಯ ಅಲ್ಲದೇ ಹೊರ ರಾಜ್ಯಗಳಿಂದಲೂ ಅಪಾರ ಭಕ್ತರು ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಬೆಮೆಲ್ ಉದ್ಯೋಗ ತೊರೆದು 1979 ರಲ್ಲಿ ಆಧ್ಯಾತ್ಮದತ್ತ ಮುಖ ಮಾಡಿದ್ದ ಶ್ರೀಗಳು ಕೋಲಾರದಲ್ಲಿ ಕೋಟಿ ಶಿವಲಿಂಗಗಳ ಸ್ಥಾಪನೆಗೆ ಮುಂದಾಗಿ, ವಿಶ್ವದಲ್ಲೇ ಎತ್ತರದ 108 ಅಡಿ ಲಿಂಗ ಸ್ಥಾಪನೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಂದಿನಿಂದ ಗೋಪಲಾಪ್ಪನವರ ಸಾಂಭಶಿವ ಮೂರ್ತಿಗಳಾಗಿ ಪ್ರಪಂಚ ಪ್ರಸಿದ್ಧಿ ಪಡೆದು ಪ್ರತಿನಿತ್ಯ ಸಾವಿರಾರು ಭಕ್ತರು, ಪ್ರವಾಸಿಗರ ಆಕರ್ಷಣೀಯ ಆಧ್ಯಾತ್ಮ ಕ್ಷೇತ್ರವನ್ನಾಗಿ ಮಾಡಿದ್ದರು.
ಸಾಮೀಜಿಯವರು 1947 ಆಗಸ್ಟ್ 23 ರಂದು ಜನಿಸಿದ್ದು, ಪತ್ನಿ ರುಕ್ಮಿಣಿ, ಮಗ ಶಿವ ಪ್ರಸಾದ್, ಮಗಳು ಅನುರಾಧರನ್ನ ಅಗಲಿದ್ದಾರೆ. ಕೋಟಿಶಿವಲಿಂಗ ಕ್ಷೇತ್ರದ ಮುಕ್ತಿ ಮಂದಿರದಲ್ಲಿ ಸಂಜೆ 5 ಗಂಟೆ ಸುಮಾರಿಗೆ ಅಂತ್ಯಸಂಸ್ಕಾರ ನಡೆಸಲು ಕುಟುಂಬ ವರ್ಗ ನಿರ್ಧರಿಸಿದ್ದು, ಬಲಿಜ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ಮಗ ಶಿವಪ್ರಸಾದ್ ನೆರವೇರಿಸಲಿದ್ದಾರೆ.
ಮೈಸೂರು: ಹೃದಯಾಘಾತಗೊಂಡ ಕಾರ್ಮಿಕರೊಬ್ಬರಿಗೆ ಆಂಬುಲೆನ್ಸ್ ಸಿಗದ ಕಾರಣ ಮಾರ್ಗಮಧ್ಯೆ ಮೃತ ಪಟ್ಟ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಸಂಗರಶೆಟ್ಟಿ ಗ್ರಾಮದಲ್ಲಿ ನಡೆದಿದೆ.
ಮೃತ ಪಟ್ಟ ಕಾರ್ಮಿಕ ಗಾಂಧಿ(55) ಆಂಧ್ರಪ್ರದೇಶದ ನಿವಾಸಿಯಾಗಿದ್ದು, ಮೈಸೂರಿಗೆ ತಂಬಾಕು ಕೃಷಿ ಕೆಲಸಕ್ಕಾಗಿ ಬಂದಿದ್ದರು. ಗ್ರಾಮದ ಚಂದ್ರು ಅವರ ಬಳಿ ತಂಬಾಕು ಎಲೆಗಳನ್ನು ಮುರಿದು ಕ್ಯೂರಿಂಗ್ ಮಾಡುವ ಕೆಲಸ ಮಾಡುತ್ತಿದ್ದರು. ಎಂದಿನಂತೆ ಮುಂಜಾನೆ ಎಲೆಗಳನ್ನು ಮುರಿಯುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಚಂದ್ರು ತನ್ನ ಬೈಕಿನಲ್ಲಿ ಕೂರಿಸಿಕೊಂಡು ಬೆಟ್ಟದಪುರದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ.
ಹೆಚ್ಚಿನ ಚಿಕಿತ್ಸೆಗಾಗಿ ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಸೂಚನೆ ನೀಡಿದ್ದು ತಕ್ಷಣವೇ ಚಂದ್ರು ಆಂಬುಲೆನ್ಸ್ ಸಿಬ್ಬಂದಿಗೆ ಸಂಪರ್ಕಿಸಿದ್ದಾರೆ. ಆಂಬುಲೆನ್ಸ್ ಸಿಗದ ಕಾರಣ ಚಂದ್ರು ತನ್ನ ಬೈಕಿನಲ್ಲಿ ಕೂರಿಸಿಕೊಂಡು ಪಿರಿಯಾಪಟ್ಟಣಕ್ಕೆ ಬರುತ್ತಿದ್ದಾಗ ಪಟ್ಟಣದ ಕ್ರೀಡಾಂಗಣ ಬಳಿ ಮತ್ತೊಮ್ಮೆ ತೀವ್ರ ಹೃದಯಾಘಾತಗೊಂಡು ಕಾರ್ಮಿಕ ಮಾರ್ಗಮಧ್ಯೆ ಮೃತ ಪಟ್ಟಿದ್ದಾರೆ.
ಈ ಘಟನೆ ಸಂಭವಿಸಿದ ನಂತರ ಪಿರಿಯಾಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.