Tag: ಹೃತಿಕ್ ರೋಷನ್

  • ಹೋಮ್ ಕ್ವಾರೆಂಟೈನ್ ಮಧ್ಯೆ ಹುಟ್ಟುಹಬ್ಬ ಹೇಗೆ ಆಚರಿಸಬೇಕೆಂದು ತಿಳಿಸಿದ ಹೃತಿಕ್

    ಹೋಮ್ ಕ್ವಾರೆಂಟೈನ್ ಮಧ್ಯೆ ಹುಟ್ಟುಹಬ್ಬ ಹೇಗೆ ಆಚರಿಸಬೇಕೆಂದು ತಿಳಿಸಿದ ಹೃತಿಕ್

    ಮುಂಬೈ: ವಿಚ್ಛೇದಿತ ದಂಪತಿಯನ್ನು ಕೊರೊನಾ ವೈರಸ್ ಒಂದು ಮಾಡಿದ್ದು, ಇತ್ತೀಚೆಗಷ್ಟೇ ಮಾಜಿ ಪತ್ನಿ ಸುಸ್ಸೇನ್ ಖಾನ್ ಖಾನ್ ಅವರು ನಟ ಹೃತಿಕ್ ರೋಷನ್ ಅವರ ಮನೆಗೆ ಆಗಮಿಸಿದ್ದಾರೆ. ಇಬ್ಬರೂ ಮಕ್ಕಳೊಂದಿಗೆ ಸಮಯ ಕಳೆಯುತ್ತಿದ್ದಾರೆ. ಈ ಕ್ಷಣವನ್ನು ಹೃತಿಕ್ ರೋಷನ್ ಅವರು ಭಾವುಕರಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದೀಗ ಮತ್ತೊಂದು ಸಂತಸ ಕ್ಷಣವನ್ನು ಹಂಚಿಕೊಂಡಿದ್ದಾರೆ.

    ಹೋಮ್ ಕ್ವಾರೈಂಟೇನ್ ಹಿನ್ನೆಲೆ ಹೃತಿಕ್ ದಂಪತಿ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದು, ಕುಟುಂಬದೊಂದಿಗಿನ ಕ್ಷಣವನ್ನು ಆನಂದಿಸುತ್ತಿದ್ದಾರೆ. ಇದೀಗ ಮಗನ ಹುಟ್ಟುಹಬ್ಬದ ಸಂಭ್ರದ ಕ್ಷಣವನ್ನು ಸಹ ಹಂಚಿಕೊಂಡಿದ್ದು, ಕೊರೊನಾ ವೈರಸ್ ಗೊಂದಲದ ಮಧ್ಯೆ ಹುಟ್ಟುಹಬ್ಬವನ್ನು ಹೇಗೆ ಆಚರಿಸಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

    ಈ ಕುರಿತ ವಿಡಿಯೋವನ್ನು ಹೃತಿಕ್ ರೋಷನ್ ಅವರು ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಮಾರ್ಚ್ 28ರಂದು ಹ್ರಿಹಾನ್‍ನ ಹುಟ್ಟುಹಬ್ಬ, ಸಣ್ಣ ಹೊಂದಾಣಿಕೆ, ಸಲಿಗೆ ಹಾಗೂ ತಂತ್ರಜ್ಞಾನಕ್ಕೆ ಧನ್ಯವಾದ. ಗಾಡ್ ಬ್ಲೆಸ್ ಅವರ್ ಚಿಲ್ಡ್ರನ್. ಉತ್ತಮ ದಿನಗಳು ಕಾದಿವೆ. ಲವ್ ಟು ಆಲ್ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಹ್ಯಾಪಿ ಬರ್ತ್ ಡೇ, ಹ್ರಿಹಾನ್‍ರಿಟನ್ರ್ಸ್‍ಫೋರ್ಟೀನ್, ಗಿವ್‍ಟೈಮ್‍ಟುಥೀಲ್ಡರ್ಸ್ ಎಂಬ ಹ್ಯಾಷ್ ಟ್ಯಾಗ್ ಹಾಕಿದ್ದಾರೆ.

    ಸುಸ್ಸೇನ್ ಸಹ ಈ ಕುರಿತು ಪೋಸ್ಟ್ ಮಾಡಿದ್ದು, ಟು ಮೈ ಸನ್… ನಾವು ಎಲ್ಲಿಗೆ ಹೋಗುತ್ತೇವೆ ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ನಾನು ಹೇಳಲು ಬಯಸುತ್ತೇನೆ, ನೀನು ನಿನ್ನ ದಾರಿಯಲ್ಲಿದ್ದೀಯಾ. ಅತ್ಯುತ್ತಮವಾದುದು ಅಲ್ಲಿದೆ. ಸನ್ ಶೈನ್‍ನ ನನ್ನ ಕಿರಣಕ್ಕೆ 14ನೇ ಹುಟ್ಟುಹಬ್ಬದ ಶುಭಾಶಯ. ಇಂದು, ನಾಳೆ ಎಂದೆಂದಿಗೂ ನೀನು ನನ್ನ ಅಂತರಂಗದ ಆಳದಲ್ಲಿ ಇರುತ್ತೀಯಾ ಎಂದು ಬರೆದುಕೊಂಡಿದ್ದಾರೆ.

    ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ಪತ್ನಿ ಸುಸ್ಸೇನ್ ಖಾನ್ ದಂಪತಿ ಈಗಾಗಲೇ ವಿಚ್ಛೇದನ ಪಡೆದು ವರ್ಷಗಳೇ ಕಳೆದಿದೆ. ಆದರೆ ಈಗ ಕೊರೊನಾ ವೈರಸ್ ಭೀತಿಯಿಂದ ಮತ್ತೆ ದಂಪತಿ ಒಂದಾಗಿದ್ದಾರೆ. ವಿಚ್ಛೇದನ ಪಡೆದಿದ್ದರೂ ಹೃತಿಕ್, ಸುಸ್ಸೇನ್ ತಮ್ಮ ಮಕ್ಕಳು ರೇಹಾನ್ ಮತ್ತು ರಿದಾನ್ ಪಾಲಿಗೆ ಈಗಲೂ ತಂದೆ-ತಾಯಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳಿಗೋಸ್ಕರ ಈ ದಂಪತಿ ಒಂದಾಗಿದ್ದಾರೆ. ಸದ್ಯ ಕ್ವಾರೆಂಟೈನ್ ಸಮಯವನ್ನು ಕಳೆಯಲು ಹೃತಿಕ್ ತಮ್ಮ ಜುಹು ಮನೆಗೆ ಮಕ್ಕಳ ಜೊತೆ ಶಿಫ್ಟ್ ಆಗಿದ್ದು, ಅವರಿಗೆ ಸುಸ್ಸೇನ್ ಕೂಡ ಸಾಥ್ ನೀಡುತ್ತಿದ್ದಾರೆ.

    ದೇಶವು ಲಾಕ್‍ಡೌನ್‍ನಲ್ಲಿ ಇರೋದನ್ನ ರೂಢಿ ಮಾಡಿಕೊಳ್ಳುತ್ತಿರುವ ಸಮಯದಲ್ಲಿ ಮಕ್ಕಳು ನಮ್ಮಿಂದ ದೂರವಿದ್ದರೆ ಹೆತ್ತವರಿಗೆ ಸಹಿಸೋದಿಕ್ಕೆ ಆಗೋದಿಲ್ಲ. ಇಂದು ದೇಶ ಎದುರಿಸುತ್ತಿರುವ ಪರಿಸ್ಥಿತಿಯನ್ನು ನಿಭಾಯಿಸಲು ಇಡೀ ವಿಶ್ವ ಸಾಮಾಜಿಕ ಅಂತರ ಹಾಗೂ ಲಾಕ್‍ಡೌನ್ ವಿಚಾರದಲ್ಲಿ ಒಗ್ಗಟ್ಟು ತೋರುತ್ತಿರುವುದನ್ನು ನೋಡಿದರೆ ಹೃದಯತುಂಬಿ ಬರುತ್ತದೆ. ನನ್ನ ಮಾಜಿ ಪತ್ನಿ ಸುಸ್ಸೇನ್ ಮಕ್ಕಳಿಗೋಸ್ಕರ ತಾತ್ಕಾಲಿಕವಾಗಿ ನನ್ನ ಮನೆಗೆ ಬಂದಿದ್ದಾಳೆ. ಇದರಿಂದ ಮಕ್ಕಳಿಗೆ ಅಪ್ಪ-ಅಮ್ಮನ ಪ್ರೀತಿ ಎರಡೂ ಸಿಗುತ್ತಿದೆ. ನನ್ನನ್ನು ಅರ್ಥಮಾಡಿಕೊಂಡಿದ್ದಕ್ಕೆ, ಪ್ರೋತ್ಸಾಹ ನೀಡಿದ್ದಕ್ಕೆ ಸುಸ್ಸೇನ್‍ಗೆ ಧನ್ಯವಾದ ಎಂದು ಈ ಹಿಂದಿನ ಪೋಸ್ಟ್ ನಲ್ಲಿ ಹೃತಿಕ್ ಬರೆದುಕೊಂಡು ಫೋಟೋ ಹಂಚಿಕೊಂಡಿದ್ದರು.

    17 ವರ್ಷಗಳ ಕಾಲ ವೈವಾಹಿಕ ಜೀವನ ನಡೆಸಿದ ಹೃತಿಕ್, ಸುಸ್ಸೇನ್ 2014ರಲ್ಲಿ ವಿಚ್ಛೇದನ ಪಡೆದು ದೂರವಾಗಿದ್ದರು. ವಿಚ್ಛೇದನ ಪಡೆದು ಆರು ವರ್ಷಗಳು ಕಳೆಯುತ್ತಿದೆ. ಆದರೂ ಸಹ ಹೃತಿಕ್, ಸುಸ್ಸೇನ್ ಒಳ್ಳೆಯ ಸ್ನೇಹಿತರಾಗಿ, ಮಕ್ಕಳಿಗಾಗಿ ಪೋಷಕರ ಕರ್ತವ್ಯವನ್ನು ಒಟ್ಟಾಗಿ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಮಕ್ಕಳ ಜೊತೆ ವಿದೇಶ ಪ್ರವಾಸಕ್ಕೆ ದಂಪತಿ ಹೋಗುತ್ತಾರೆ, ಜೊತೆಗೆ ಡಿನ್ನರ್, ಶಾಪಿಂಗ್ ಮಾಡುತ್ತಿದ್ದಾರೆ.

  • ವಿಚ್ಛೇದಿತ ಹೃತಿಕ್ ರೋಷನ್, ಸುಸ್ಸೇನ್‍ರನ್ನು ಒಂದು ಮಾಡಿದ ಕೊರೊನಾ

    ವಿಚ್ಛೇದಿತ ಹೃತಿಕ್ ರೋಷನ್, ಸುಸ್ಸೇನ್‍ರನ್ನು ಒಂದು ಮಾಡಿದ ಕೊರೊನಾ

    ಮುಂಬೈ: ಬಾಲಿವುಡ್ ನಟಿ ಹೃತಿಕ್ ರೋಷನ್ ಮತ್ತು ಪತ್ನಿ ಸುಸ್ಸೇನ್ ಖಾನ್ ದಂಪತಿ ಈಗಾಗಲೇ ವಿಚ್ಛೇದನ ಪಡೆದು ವರ್ಷಗಳೇ ಕಳೆದಿದೆ. ಆದರೆ ಈಗ ಕೊರೊನಾ ವೈರಸ್ ಭೀತಿಯಿಂದ ಮತ್ತೆ ದಂಪತಿ ಒಂದಾಗಿದ್ದಾರೆ.

    ವಿಚ್ಛೇದನ ಪಡೆದಿದ್ದರೂ ಹೃತಿಕ್, ಸುಸ್ಸೇನ್ ತಮ್ಮ ಮಕ್ಕಳು ರೇಹಾನ್ ಮತ್ತು ರಿದಾನ್ ಪಾಲಿಗೆ ಈಗಲೂ ತಂದೆ-ತಾಯಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳಿಗೋಸ್ಕರ ಈ ದಂಪತಿ ಒಂದಾಗಿದ್ದಾರೆ. ಸದ್ಯ ಕ್ವಾರೆಂಟೈನ್ ಸಮಯವನ್ನು ಕಳೆಯಲು ಹೃತಿಕ್ ತಮ್ಮ ಜುಹು ಮನೆಗೆ ಮಕ್ಕಳು ಜೊತೆ ಶಿಫ್ಟ್ ಆಗಿದ್ದು, ಅವರಿಗೆ ಸುಸ್ಸೇನ್ ಕೂಡ ಸಾಥ್ ನೀಡುತ್ತಿದ್ದಾರೆ.

    ಕೊರೊನಾ ವೈರಸ್ ಸೋಂಕಿನಿಂದ ದೂರವಿರಲು ಮನೆಯಲ್ಲಿ ಇರುವುದು ಅನಿವಾರ್ಯವಾಗಿದೆ. ಸದ್ಯ ಸುಸ್ಸೇನ್ ಹಾಗೂ ಮಕ್ಕಳ ಜೊತೆ ತಮ್ಮ ಕ್ವಾರೆಂಟೈನ್ ಸಮಯ ಕಳೆಯುತ್ತಿರುವ ಹೃತಿಕ್ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡು ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

    ಪೋಸ್ಟ್ ನಲ್ಲಿ ದೇಶವು ಲಾಕ್‍ಡೌನ್‍ನಲ್ಲಿ ಇರೋದನ್ನ ರೂಢಿ ಮಾಡಿಕೊಳ್ಳುತ್ತಿರುವ ಸಮಯದಲ್ಲಿ ಮಕ್ಕಳು ನಮ್ಮಿಂದ ದೂರವಿದ್ದರೆ ಹೆತ್ತವರಿಗೆ ಸಹಿಸೋದಿಕ್ಕೆ ಆಗೋದಿಲ್ಲ. ಇಂದು ದೇಶ ಎದುರಿಸುತ್ತಿರುವ ಪರಿಸ್ಥಿತಿಯನ್ನು ನಿಭಾಯಿಸಲು ಇಡೀ ವಿಶ್ವ ಸಾಮಾಜಿಕ ಅಂತರ ಹಾಗೂ ಲಾಕ್‍ಡೌನ್ ವಿಚಾರದಲ್ಲಿ ಒಗ್ಗಟ್ಟು ತೋರುತ್ತಿರುವುದನ್ನು ನೋಡಿದರೆ ಹೃದಯತುಂಬಿ ಬರುತ್ತದೆ. ನನ್ನ ಮಾಜಿ ಪತ್ನಿ ಸುಸ್ಸೇನ್ ಮಕ್ಕಳಿಗೋಸ್ಕರ ತಾತ್ಕಾಲಿಕವಾಗಿ ನನ್ನ ಮನೆಗೆ ಬಂದಿದ್ದಾಳೆ. ಇದರಿಂದ ಮಕ್ಕಳಿಗೆ ಅಪ್ಪ-ಅಮ್ಮನ ಪ್ರೀತಿ ಎರಡೂ ಸಿಗುತ್ತಿದೆ. ನನ್ನನ್ನು ಅರ್ಥಮಾಡಿಕೊಂಡಿದ್ದಕ್ಕೆ, ಪ್ರೋತ್ಸಾಹ ನೀಡಿದ್ದಕ್ಕೆ ಸುಸ್ಸೇನ್‍ಗೆ ಧನ್ಯವಾದ ಎಂದು ಬರೆದು ಸುಸ್ಸೇನ್ ಫೋಟೋವನ್ನು ಹೃತಿಕ್ ಹಂಚಿಕೊಂಡಿದ್ದಾರೆ.

    17 ವರ್ಷಗಳ ಕಾಲ ವೈವಾಹಿಕ ಜೀವನ ನಡೆಸಿದ ಹೃತಿಕ್, ಸುಸ್ಸೇನ್ 2014ರಲ್ಲಿ ವಿಚ್ಛೇದನ ಪಡೆದು ದೂರವಾಗಿದ್ದರು. ವಿಚ್ಛೇದನ ಪಡೆದು ಆರು ವರ್ಷಗಳು ಕಳೆಯುತ್ತಿದೆ. ಆದರೂ ಸಹ ಹೃತಿಕ್, ಸುಸ್ಸೇನ್ ಒಳ್ಳೆಯ ಸ್ನೇಹಿತರಾಗಿ, ಮಕ್ಕಳಿಗಾಗಿ ಪೋಷಕರ ಕರ್ತವ್ಯವನ್ನು ಒಂದಾಗಿ ನಿರ್ವಹಿಸುತ್ತಿದ್ದಾರೆ.

    ಹೃತಿಕ್, ಸುಸ್ಸೇನ್ ವಿಚ್ಛೇದನ ಪಡೆದಿದ್ದರೂ ಮಕ್ಕಳಿಗಾಗಿ ತಂದೆ-ತಾಯಿಯಾಗಿ ತಮ್ಮ ಜವಾಬ್ದಾರಿಗಳನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಹೀಗಾಗಿ ಮಕ್ಕಳ ಜೊತೆ ವಿದೇಶ ಪ್ರವಾಸಕ್ಕೆ ದಂಪತಿ ಹೋಗುತ್ತಾರೆ, ಜೊತೆಗೆ ಡಿನ್ನರ್, ಶಾಪಿಂಗ್ ಮಾಡುತ್ತಾರೆ.

    https://www.instagram.com/p/B-JlJZvH0bC/

    ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಮಹತ್ವರ ಘೋಷಣೆಯನ್ನು ಮಾಡಿದ್ದರು. ಮಾರ್ಚ್ 25ರಿಂದ ಏಪ್ರಿಲ್ 14ರವರೆಗೆ 21 ದಿನಗಳ ಕಾಲ ಇಡೀ ದೇಶವನ್ನು ಲಾಕ್‍ಡೌನ್ ಮಾಡಲಾಗಿದೆ. ಈ 21 ದಿನ ಎಲ್ಲರೂ ಮನೆಯಲ್ಲಿಯೇ ಇರಬೇಕು. ಯಾರೂ ಹೊರಗೆ ಬರಬಾರದು ಎಂದು ಮೋದಿ ಅವರು ಸೂಚಿಸಿದ್ದರು.

  • ಪತ್ನಿ ಜೊತೆ ಒಂದೇ ಸಿನ್ಮಾ 10 ಬಾರಿ ನೋಡಿದೆ: ಸುದೀಪ್

    ಪತ್ನಿ ಜೊತೆ ಒಂದೇ ಸಿನ್ಮಾ 10 ಬಾರಿ ನೋಡಿದೆ: ಸುದೀಪ್

    ಮುಂಬೈ: ಒಂದೇ ಸಿನಿಮಾವನ್ನು ಪತ್ನಿ ಜೊತೆ ಹತ್ತು ಬಾರಿ ನೋಡಿದ್ದೇನೆ ಎಂದು ಕಿಚ್ಚ ಸುದೀಪ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

    ಸ್ಯಾಂಡಲ್‍ವುಡ್ ಮಾಣಿಕ್ಯ ಸುದೀಪ್ ಅಭಿನಯದ ದಬಾಂಗ್-3 ಸಿನಿಮಾ ಬಿಡುಗಡೆಗೆ ಸಿದ್ಧಗೊಂಡಿದ್ದು, ಚಿತ್ರತಂಡ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದೆ. ಈ ಮಧ್ಯೆ ಸುದೀಪ್ ಸಂದರ್ಶನದಲ್ಲಿ ಅಭಿಮಾನಿಯ ಪ್ರಶ್ನೆಗೆ ಉತ್ತರಿಸುತ್ತಾ, ನನ್ನ ಪತ್ನಿಯಿಂದಾಗಿ ಹೃತಿಕ್ ರೋಷನ್ ಅಭಿನಯದ ‘ಕಹೋ ನಾ ಪ್ಯಾರ್ ಹೈ’ ಸಿನಿಮಾವನ್ನು ಚಿತ್ರಮಂದಿರದಲ್ಲಿ 10-11 ಬಾರಿ ನೋಡಿದ್ದೇನೆ. ಯಾಕಂದರೆ, ನೀನು ನನ್ನನ್ನು ಸಿನಿಮಾ ನೋಡಲು ಕರೆದುಕೊಂಡು ಹೋಗದಿದ್ದರೆ ನಾನು ಬೇರೆಯವರ ಜೊತೆ ಹೋಗುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಳು. ಹೀಗಾಗಿ ಪ್ರತೀ ಬಾರಿ ಅವಳ ಜೊತೆ ಚಿತ್ರಮಂದಿರಕ್ಕೆ ಹೋಗಿ ಕುಳಿತು, ಚಿತ್ರ ನೋಡಿ ವಾಪಸ್ ಬರುತ್ತಿದ್ದೆ ಎಂದು ತಮ್ಮ ಹಳೆಯ ನೆನಪನ್ನು ಮೆಲುಕು ಹಾಕಿಕೊಂಡರು.

    ಮೊದಲ ಬಾರಿ ಸಿನಿಮಾ ನೋಡಿದಾಗ ಹೃತಿಕ್ ರೋಷನ್ ನಟನೆ, ಡ್ಯಾನ್ಸ್, ಸ್ಟೈಲ್ ಎಲ್ಲವೂ ನನಗೆ ಇಷ್ಟವಾಗಿತ್ತು. ಆ ನಂತರ ನಾನು ಯಾರನ್ನೂ ಅಷ್ಟೊಂದಾಗಿ ದ್ವೇಷಿಸಿಲ್ಲ. ಸಿನಿಮಾದಲ್ಲಿ ಹೃತಿಕ್ ಡ್ಯಾನ್ಸ್ ಮಾಡುತ್ತಿದ್ದಾಗ, ಇಲ್ಲಿ ಪತ್ನಿ ನನ್ನ ಕೈಯನ್ನು ಚಿವುಟುತ್ತಿದ್ದಳು. ಇದರಿಂದ ಕೋಪಗೊಳ್ಳುತ್ತಿದ್ದೆ. ಯಾಕಂದರೆ ನಾನೂ ಒಬ್ಬ ನಟ. ಅಷ್ಟರಮಟ್ಟಿಗೆ ಆಕೆ ಹೃತಿಕ್ ಅಭಿಮಾನಿಯಾಗಿದ್ದಾಳೆ ಎಂದು ನಕ್ಕುಬಿಟ್ಟರು. ಹೀಗಾಗಿ ಕಹೋನಾ ಪ್ಯಾರ್ ಹೈ ಚಿತ್ರ ನನ್ನ ಜೀವನದ ಪುಸ್ತಕದಲ್ಲಿ ಒಂದು ಪುಟ ಇದ್ದಂತೆ. ಹಾಗೆಯೇ ಆ ಚಿತ್ರದ ಯಶಸ್ಸಿಗೆ ನಮ್ಮ ಕೊಡುಗೆಯೂ ತುಂಬಾ ಇದೆ ಎಂದು ಹೇಳಿ ನಸುನಕ್ಕರು.

    ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಹೃತಿಕ್ ಜೊತೆ ನಟಿಸುತ್ತೇನೆ. ಇದೂವರೆಗೂ ಹೃತಿಕ್ ಅವರನ್ನ ಭೇಟಿಯಾಗಿಲ್ಲ ಎಂದು ತಿಳಿಸಿದರು.

    ರಣ್‍ವೀರ್ ಸಿಂಗ್ ಜೊತೆ ವಿಲನ್ ಆಗಿ ನಟಿಸ್ತೀರಾ ಎಂದು ಅಭಿಮಾನಿಯೊಬ್ಬರು ಕೇಳಿದರು. ಸಿಂಬಾ ಸಿನಿಮಾ ಚಿತ್ರೀಕರಣ ವೇಳೆ ರಣ್‍ವೀರ್ ಸಿಂಗ್ ಅವರನ್ನು ಒಮ್ಮೆ ಭೇಟಿಯಾಗಿದ್ದೆ. ಅಂದು ಪೈಲ್ವಾನ್ ಚಿತ್ರೀಕರಣ ನಡೆಯುತ್ತಿತ್ತು. ನನ್ನನ್ನು ವಿಲನ್ ಆಗಿಯೇ ನೋಡಲು ಅವರು ಇಷ್ಟಪಡುತ್ತಾರೆ ಅನ್ನಿಸುತ್ತದೆ ಎಂದರು.

  • ಬಹುದಿನಗಳ ಬಳಿಕ ಸಿನ್ಮಾ ಒಪ್ಪಿಕೊಂಡ ಕೊಹ್ಲಿ ಮಡದಿ

    ಬಹುದಿನಗಳ ಬಳಿಕ ಸಿನ್ಮಾ ಒಪ್ಪಿಕೊಂಡ ಕೊಹ್ಲಿ ಮಡದಿ

    ಮುಂಬೈ: ಝೀರೋ ಸಿನಿಮಾ ಬಳಿಕ ಕ್ರಿಕೆಟ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಡದಿ ಅನುಷ್ಕಾ ಶರ್ಮಾ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ. ರೋಹಿತ್ ಶರ್ಮಾ ಮತ್ತು ಫರ್ಹಾ ಖಾನ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರಲಿದ್ದು, ಹೃತಿಕ್ ರೋಷನ್ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ.

    ಮದುವೆ ಬಳಿಕ ಅನುಷ್ಕಾ ಶರ್ಮಾ ನಟನೆಯ ಸಿನಿಮಾಗಳು ಒಂದರ ನಂತರ ಒಂದರಂತೆ ಬಿಡುಗಡೆಗೊಂಡವು. 2018 ಡಿಸೆಂಬರ್ ನಲ್ಲಿ ತೆರೆಕಂಡ ಝೀರೋ ಚಿತ್ರದ ಬಳಿಕ ಅನುಷ್ಕಾ ಶರ್ಮಾ ಚಿತ್ರರಂಗದಿಂದ ದೂರ ಉಳಿದುಕೊಂಡು ಖಾಸಗಿ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಸಾಂಸರಿಕ ಜೀವನದಲ್ಲಿ ಬ್ಯುಸಿಯಾಗಿರುವ ಅನುಷ್ಕಾ ಶರ್ಮಾ ಬಣ್ಣದ ಲೋಕದಿಂದ ಹಿಂದೆ ಸರಿಯಲಿದ್ದಾರೆ ಎಂಬ ಮಾತುಗಳು ಈ ಹಿಂದೆ ಬಲವಾಗಿ ಕೇಳಿ ಬಂದಿದ್ದವು.

    ಸಿನ್ಮಾದಿಂದ ದೂರ ಉಳಿಯುವ ಸುದ್ದಿಗೆ ಸಾಕ್ಷಿ ಎಂಬಂತೆ ಅನುಷ್ಕಾ ಹೇಳಿಕೆಯೊಂದು ಅಭಿಮಾನಿಗಳಿಗೆ ಅಚ್ಚರಿಯನ್ನು ನೀಡಿತ್ತು. ಖಾಸಗಿ ಸಂದರ್ಶನದಲ್ಲಿ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿ, ನನ್ನದೇ ಆದ ಹೆಜ್ಜೆ ಗುರುತು ಮೂಡಿಸಿದ್ದೇನೆ. ಡಿಜಿಟಲ್ ವೇದಿಕೆಯಲ್ಲಿ ಏನಾದ್ರೂ ಮಾಡಬೇಕೆಂದು ಪ್ಲಾನ್ ಮಾಡಿಕೊಂಡಿದ್ದೇನೆ ಎಂದು ಅನುಷ್ಕಾ ಶರ್ಮಾ ಹೇಳಿದ್ದರು. ಅನುಷ್ಕಾ ಹೇಳಿಕೆ ಬೆನ್ನಲ್ಲೇ ಸಿನಿಮಾದಿಂದ ದೂರವಾಗುತ್ತಿದ್ದಾರೆ ಎಂಬ ಅಭಿಮಾನಿಗಳ ಊಹೆ ಬಲವಾಗಿತ್ತು. ಇದೀಗ ರೋಹಿತ್ ಶರ್ಮಾ ಮತ್ತು ಫರ್ಹಾ ಖಾನ್ ಜಂಟಿ ನಿರ್ಮಾಣದ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ.

    ಹೃತಿಕ್ ರೋಷನ್ ನಟನೆ ಸಿನಿಮಾ ‘ವಾರ್’ ಸತತವಾಗಿ ಬಾಕ್ಸ್ ಆಫೀಸ್ ದೋಚುತ್ತಿದೆ. ಸಿನಿಮಾದಲ್ಲಿ ಹೃತಿಕ್ ಗೆ ಶಿಷ್ಯನಾಗಿ ಟೈಗರ್ ಶ್ರಾಫ್ ನಟಿಸಿದ್ದಾರೆ. ಸಿನಿಮಾದಲ್ಲಿ ಗುರು-ಶಿಷ್ಯನ ನಡುವೆ ಸಾಹಸಮಯ ದೃಶ್ಯಗಳು ನೋಡುಗರನ್ನು ಕುರ್ಚಿಯ ತುತ್ತ ತುದಿಗೆ ತಂದು ಕೂರಿಸುತ್ತದೆ. ಇಷ್ಟು ಮಾತ್ರವಲ್ಲದೇ ಹೃತಿಕ್ ಮತ್ತು ಟೈಗರ್ ಸಿಕ್ಸ್ ಪ್ಯಾಕ್ ಹುಡುಗಿಯರು ಫಿದಾ ಆಗಿ ತಮ್ಮ ನೆಚ್ಚಿನ ನಟನಿಗೆ ಸಾಲು ಸಾಲು ಬೇಡಿಕೆಗಳನ್ನು ಇಡುತ್ತಿದ್ದಾರೆ.

    ಅನುಷ್ಕಾ ಮತ್ತು ಹೃತಿಕ್ ಜೊತೆಯಾಗಿ ನಟಿಸುತ್ತಿರುವ ಸಿನಿಮಾ ಚಿತ್ರೀಕರಣ 2020ರಿಂದ ಆರಂಭಗೊಳ್ಳಲಿದ್ದು, 2021ಕ್ಕೆ ತೆರೆಕಾಣಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಮೊದಲು ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ ಎನ್ನಲಾಗಿತ್ತು.

  • ಹೃತಿಕ್‍ಗೆ ಟಕ್ಕರ್ ಕೊಡ್ತಾರಾ ಟೈಗರ್!

    ಹೃತಿಕ್‍ಗೆ ಟಕ್ಕರ್ ಕೊಡ್ತಾರಾ ಟೈಗರ್!

    ಮುಂಬೈ: ಬಾಲಿವುಡ್ ಮೋಸ್ಟ್ ಮೇಲ್ ಸೆಕ್ಸಿ ಸ್ಟಾರ್ ಗಳು ಒಂದೇ ಚಿತ್ರದಲ್ಲಿ ಒಂದಾಗುತ್ತಿದ್ದಾರೆ. ತಮ್ಮ ನೃತ್ಯ, ಕಟ್ಟು ಮಸ್ತಿನ ದೇಹದ ಮೂಲಕವೇ ಗುರುತಿಸಿಕೊಂಡಿರುವ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

    ಈ ಹಿಂದೆ ಟೈಗರ್ ತಾವು ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಈಗ ತಮ್ಮ ಡ್ಯಾನ್ಸಿಂಗ್ ಗುರು ಎಂದು ಕರೆದುಕೊಳ್ಳುವ ಹೃತಿಕ್ ರೋಷನ್ ಜೊತೆ ತೆರೆ ಹಂಚಿಕೊಳ್ಳುತ್ತಿರೋದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

    ಹೃತಿಕ್ ರೋಷನ್ ಸಿನಿಮಾ ಸೆಟ್ಟೇರಿದ್ರೆ ಯಾವ ರೀತಿ ಡ್ಯಾನ್ಸ್ ಮಾಡಲಿದ್ದಾರೆ ಎಂಬ ಕುತೂಹಲ ಹುಟ್ಟು ಹಾಕುತ್ತದೆ. ಅದೇ ರೀತಿ ಟೈಗರ್ ಶ್ರಾಫ್ ಸಹ ಡ್ಯಾನ್ಸ್ ಮತ್ತು ಆ್ಯಕ್ಷನ್ ಸೀನ್ ಗಳಿಂದ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇಬ್ಬರು ಸಹ ಸಿಕ್ಸ್ ಪ್ಯಾಕ್ ಹೊಂದಿದ್ದು, ನೋಡಲು ಕಟ್ಟುಮಸ್ತಾಗಿದ್ದಾರೆ. ಹಾಗಾಗಿ ಯಶ್ ಬ್ಯಾನರ್‍ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ ಬಹು ನಿರೀಕ್ಷೆಯನ್ನು ಮೂಡಿಸಿದೆ.

    ಹೃತಿಕ್ ರೋಷನ್ ರನ್ನು ಗುರುವಿನ ರೂಪದಲ್ಲಿ ಕಾಣುವ ಟೈಗರ್ ಸಿನಿಮಾದಲ್ಲಿಯೂ ಗುರು-ಶಿಷ್ಯನ ಪಾತ್ರದಲ್ಲಿ ನಟಿಸಲಿದ್ದಾರೆ. ತೊಂದರೆಯಲ್ಲಿ ಸಿಲುಕಿಕೊಳ್ಳುವನ ಶಿಷ್ಯನ ಪಾತ್ರದಲ್ಲಿ ಟೈಗರ್ ನಟಿಸಿದ್ರೆ, ರಕ್ಷಿಸುವ ಗುರುವಾಗಿ ಹೃತಿಕ್ ರೋಷನ್ ನಟಿಸಲಿದ್ದಾರೆ. ಹೃತಿಕ್ ಗೆ ಜೊತೆಯಾಗಿ ಬೇಫಿಕ್ರೆ ಬೆಡಗಿ ವಾಣಿ ಕಪೂರ್ ನಟಿಸಲಿದ್ದಾರೆ. ವಾಣಿ ಮತ್ತು ಹೃತಿಕ್ ಮಧ್ಯೆ ರೊಮ್ಯಾನ್ಸ್ ಸೀನ್ ಗಳಿವೆ ಎಂದು ಹೇಳಲಾಗುತ್ತಿದೆ.

    ಎರಡು ದಿನಗಳ ಹಿಂದೆ ಟೈಗರ್ ಇನ್ ಸ್ಟಾಗ್ರಾಂನಲ್ಲಿ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ಜಿಮ್ ನಲ್ಲಿ ವರ್ಕೌಟ್ ಮಾಡುವ ಇದಾಗಿದ್ದು, ಸೂಪರ್ ಹೀರೋ ಜೊತೆ ನಟಿಸುತ್ತಿದ್ದು, ಅದಕ್ಕಾಗಿ ದೇಹವನ್ನು ಮತ್ತಷ್ಟು ಹುರಿಗೊಳಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಚಿತ್ರ ಅಗಸ್ಟ್ ತಿಂಗಳ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭಿಸಲಿದೆ ಎಂದು ವರದಿಯಾಗಿದೆ.

    https://www.instagram.com/p/BlNAJF4AnRj/?hl=en&taken-by=tigerjackieshroff

  • ಹೃತಿಕ್ ರೋಷನ್ ಡ್ರೀಮ್ ಹೌಸ್ ಹೇಗಿದೆ ಗೊತ್ತಾ?

    ಹೃತಿಕ್ ರೋಷನ್ ಡ್ರೀಮ್ ಹೌಸ್ ಹೇಗಿದೆ ಗೊತ್ತಾ?

    ಮುಂಬೈ: ಬಾಲಿವುಡ್ ಸ್ಮಾರ್ಟ್ ಆ್ಯಂಡ್ ಸ್ಟೈಲಿಶ್ ನಟ ಹೃತಿಕ್ ರೋಷನ್ ತಮ್ಮ ಮನೆಯನ್ನ ಡ್ರೀಮ್‍ಹೌಸ್‍ನಂತೆ ವಿನ್ಯಾಸಗೊಳಿಸಿದ್ದಾರೆ. ಈ ಮನೆಯಲ್ಲಿ ಮಕ್ಕಳಿಗಾಗಿಯೇ ಕೆಲವೊಂದು ವಿನ್ಯಾಸ ಮಾಡಲಾಗಿದೆ.

    ಪತ್ನಿ ಸುಝೇನ್ ಖಾನ್‍ರೊಂದಿಗೆ ವಿಚ್ಛೇದನವಾದ ಬಳಿಕ ಮುಂಬೈನ ಜೂಹು ಬೀಚ್‍ನಲ್ಲಿ ಹೃತಿಕ್ 3000 ಚದರ ಅಡಿ ವಿಸ್ತಾರವುಳ್ಳ ಫ್ಲ್ಯಾಟ್ ಖರೀದಿಸಿದ್ದಾರೆ. ಫ್ಲ್ಯಾಟ್ ಬಾಲ್ಕನಿಯಿಂದ ಸಮುದ್ರ ಕಡಲ ಕಿನಾರೆ ಕಾಣುತ್ತದೆ. ಹೃತಿಕ್ ಮಕ್ಕಳಿಗೆ ಇಷ್ಟವೆನಿಸುವಂತೆ ಮನೆಯ ವಸ್ತು ಚಿತ್ರಣವನ್ನು ಚೇಂಜ್ ಮಾಡಿದ್ದಾರೆ. ಈ ಫ್ಲ್ಯಾಟ್ ನಲ್ಲಿ ಒಟ್ಟು ನಾಲ್ಕು ಕೋಣೆಗಳಿದ್ದು, ಪ್ರತಿಯೊಂದು ಕೋಣೆಯೂ ವಿಭಿನ್ನವಾಗಿದೆ.

    ಹೃತಿಕ್ ಮನೆಯ ವರಾಂಡದಲ್ಲಿ ಆರಾಮದಾಯಕ ಸೋಫಾಗಳನ್ನು ಇರಿಸಿದ್ದಾರೆ. ಮಧ್ಯದಲ್ಲಿ ನೀಲಿ ಬಣ್ಣದ ಕಾರ್ಪೆಟ್, ಮೇಜಿನ ಮೇಲೆ ಕೃತಕ ಕಲಾಕೃತಿಗಳನ್ನು ಇರಿಸಿದ್ದಾರೆ. ಇನ್ನು ಲಿವಿಂಗ್ ರೂಮಿನಲ್ಲಿ ಮಕ್ಕಳೊಂದಿಗಿನ ತಮ್ಮ ಸುಂದರ ಫೋಟೋಗಳನ್ನು ಗೋಡೆಯ ಮೇಲೆ ಅಂಟಿಸಿದ್ದಾರೆ. ಈ ನಾಲ್ಕು ಕೋಣೆಗಳಲ್ಲಿ ಒಂದನ್ನು ತಮ್ಮ ಆಫೀಸ್ ರೂಮ್ ಜೊತೆಗೆ ಮಕ್ಕಳ ಸ್ಟಡಿ ರೂಮ್ ಸಹ ಮಾಡಿಕೊಂಡಿದ್ದಾರೆ.

    ಮಕ್ಕಳಿಗೆ ಓದುವುದರ ಜೊತೆಗೆ ಆಟ ಆಡಲು ಬಿಲಿಯಡ್ರ್ಸ ಗೇಮ್‍ನ ಟೇಬಲ್ ಇರಿಸಿದ್ದಾರೆ. ಒಂದು ಗೋಡೆಯಲ್ಲಂತೂ world map ಚಿತ್ರವನ್ನೇ ಕಾಣಬಹುದಾಗಿದೆ. ಇದರ ಜೊತೆಗೆ ಮಕ್ಕಳಿಗೆ ಆಕರ್ಷಣೆಯಾಗುವಂತಹ ಕಲರ್ ಬಳಸಿ, ಗೋಡೆಯ ಮೇಲೆ ಪೇಂಟ್ ಮಾಡಿಸಿದ್ದಾರೆ.

     

    https://www.instagram.com/p/BVtej42hqAS/?taken-by=hrithikroshan

    https://www.instagram.com/p/BVJm97uBXge/?taken-by=hrithikroshan

    https://www.instagram.com/p/BVUuEXGBlZj/?taken-by=hrithikroshan

    https://www.instagram.com/p/BVCzb3yhZ7l/?taken-by=hrithikroshan

    https://www.instagram.com/p/BWMpDAchhZm/?taken-by=hrithikroshan

    https://www.instagram.com/p/BOtuSCIBlOc/?taken-by=hrithikroshan

  • ಹೃತಿಕ್ ರೋಷನ್ ಬುದುಕಿನಲ್ಲಿ ಮತ್ತೆ ಕಂಗನಾ ರಣಾವತ್-ಕಾರಣ ಕೇಳಿದರೆ ಬೆಚ್ಚಿ ಬೀಳ್ತೀರ!

    ಹೃತಿಕ್ ರೋಷನ್ ಬುದುಕಿನಲ್ಲಿ ಮತ್ತೆ ಕಂಗನಾ ರಣಾವತ್-ಕಾರಣ ಕೇಳಿದರೆ ಬೆಚ್ಚಿ ಬೀಳ್ತೀರ!

    ಮುಂಬೈ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಮತ್ತೊಮ್ಮೆ ಹೃತಿಕ್ ರೋಷನ್ ಜೀವನದಲ್ಲಿ ಆಗಮಿಸಿದ್ದು, ಕೂಡಲೇ ತಮ್ಮ ನಡುವಿನ ಸಂಬಂಧದ ಬಗ್ಗೆ ಹಲವು ಸಾಕ್ಷಿಗಳನ್ನು ಬಹಿರಂಗ ಮಾಡಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

    ಈ ಹಿಂದೆ ಕಂಗನಾ ಮತ್ತು ಹೃತಿಕ್ ನಡುವೆ ಲವ್ ಇದೆ ಎಂಬ ಸುದ್ದಿಯೊಂದು ಹೊರ ಬಿದ್ದಿತ್ತು. ಆದರೆ ಹೃತಿಕ್ ಮಾತ್ರ ಸರಾಸಾಗಟವಾಗಿ ತಳ್ಳಿ ಹಾಕಿದ್ದರು. ಇವರಿಬ್ಬರ ನಡುವಿನ ಲವ್ ಮೆಸೇಜ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದುಂಟು. ಈ ಸಂಬಂಧ ಹೃತಿಕ್ ನ್ಯಾಯಾಲಯದ ಮೊರೆ ಸಹ ಹೋಗಿದ್ದಾರೆ. ಹೀಗಾಗಿ ಇಷ್ಟು ದಿನ ಸುಮ್ಮನಾಗಿದ್ದ ಕಂಗನಾ ಕೋರ್ಟ್ ಗೆ ಸೂಕ್ತ ಸಾಕ್ಷಿಗಳನ್ನು ನೀಡಲು ರೆಡಿಯಾಗಿದ್ದಾರೆ.

    ಇವರಿಬ್ಬರ ಸಂಬಂಧದ ನಡುವಿನ ಸುದ್ದಿ ವೈರಲ್ ಆಗುತ್ತಿದ್ದಂತೆ ಬಾಲಿವುಡ್ ಕಂಗನಾರಿಗೆ ಬುದ್ಧಿ ಭ್ರಮಣೆಗೆ ಒಳಗಾಗಿದ್ದಾರೆ ಎಂದು ಮಾತನಾಡಿಕೊಳ್ಳಲು ಆರಂಭಿಸಿದ್ದರು. ಅಂದಿನ ಹೃತಿಕ್ ವಿರುದ್ಧ ಪ್ರತೀಕಾರವನ್ನು ತೀರಿಸಿಕೊಳ್ಳಲು ಕಂಗನಾ ಸನ್ನದ್ಧರಾಗಿದ್ದಾರೆ.

    ಕೆಲವು ದಿನಗಳ ಹಿಂದೆ ಖಾಸಗಿ ಚಾನೆಲ್ ಸಂದರ್ಶನದಲ್ಲಿ ಹೃತಿಕ್ ನನ್ನೊಂದಿಗೆ ಭಾವನಾತ್ಮಕವಾಗಿ ಆಟವಾಡಿದ್ದಕ್ಕೆ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಖಡಕ್ ಆಗಿ ಹೇಳಿದ್ದರು. ಕಂಗನಾ ಎಲ್ಲವನ್ನೂ ಮರೆತಿದಿದ್ದಾರೆ ಎಂದು ತಿಳಿದಿದ್ದ ಹೃತಿಕ್ ಗೆ ಮಾತ್ರ ಈ ಸುದ್ದಿ ಶಾಕ್ ನೀಡಿದೆ ಎನ್ನಲಾಗಿದೆ.

    ಹೃತಿಕ್ ಮತ್ತು ಕಂಗನಾ ನಡುವಿನ ಕೆಲವು ಮೇಸಜ್ ಗಳು ಇಲ್ಲಿವೆ.

  • ರೋಗ್ ನಾಯಕಿ ಆಂಜೆಲಾ ಸುಳ್ಳು ಹೇಳ್ತಿದ್ದಾರೆ ಎಂದ ಹೃತಿಕ್

    ರೋಗ್ ನಾಯಕಿ ಆಂಜೆಲಾ ಸುಳ್ಳು ಹೇಳ್ತಿದ್ದಾರೆ ಎಂದ ಹೃತಿಕ್

    ಮುಂಬೈ: ರೋಗ್ ಚಿತ್ರದ ನಾಯಕಿ ಆಂಜೆಲಾ ಕ್ರಿಸ್ಲಿಂಕಿ ಸುಳ್ಳು ಹೇಳ್ತಿದ್ದಾರೆಂದು ಬಾಲಿವುಡ್ ನಟ ಹೃತಿಕ್ ರೋಷನ್ ಟ್ವೀಟ್ ಮಾಡಿದ್ದಾರೆ.

    ಇತ್ತೀಚೆಗಷ್ಟೆ ಬಿಡುಗಡೆಯಾದ ರೋಗ್ ಚಿತ್ರದಲ್ಲಿ ಅಭಿನಯಿಸಿದ್ದ ಆಂಜೆಲಾ ಕ್ರಿಸ್ಲಿಂಕಿ ಈ ಹಿಂದೆ ಹೃತಿಕ್ ರೋಷನ್ ಜೊತೆ ಜಾಹಿರಾತೊಂದರಲ್ಲಿ ಕಾಣಿಸಿಕೊಂಡಿದ್ರು. ಇತ್ತೀಚೆಗೆ ಪತ್ರಿಕೆಯೊಂದರ ಸಂದರ್ಶನದಲ್ಲಿ ಆಂಜೆಲಾ, ಹೃತಿಕ್ ಅವರೊಂದಿಗಿನ ಬಾಂಧವ್ಯದ ಬಗ್ಗೆ ಹೇಳಿಕೊಂಡಿದ್ರು.

    ಆಂಜೆಲಾ ಹೇಳಿದ ಮಾತುಗಳನ್ನ ಕೇಳಿದ್ರೆ ಆಕೆ ಹಾಗೂ ಹೃತಿಕ್ ನಡುವೆ ವಿಶೇಷ ಬಾಂಧವ್ಯವಿದೆ ಎಂಬಂತಿದ್ದು, ಆಕೆಯನ್ನು ಕೈಟ್ಸ್ ಚಿತ್ರದ ನಾಯಕಿ ಬಾರ್ಬಾರಾ ಮೋರಿಯೊಂದಿಗೆ ಹೋಲಿಸಿ ಲೇಖನ ಪ್ರಕಟವಾಗಿತ್ತು. ಈ ಹಿಂದೆ ಬಾರ್ಬಾರಾ ಹಾಗೂ ಹೃತಿಕ್ ಮಧ್ಯೆ ಕುಚ್‍ಕುಚ್ ಇದೆ ಎಂಬ ವಂದಂತಿಗಳು ಹರಿದಾಡಿತ್ತು.

    ಇಂದು ಬೆಳಿಗ್ಗೆ ಪತ್ರಿಕೆ ಓದಿದ ಹೃತಿಕ್, ಅದರ ಸ್ಕ್ರೀನ್‍ಶಾಟ್ ತೆಗೆದು ಮೈ ಡಿಯರ್ ಲೇಡಿ, ಯಾರಮ್ಮಾ ನೀನು? ಯಾಕೆ ಸುಳ್ಳು ಹೇಳ್ತಿದ್ಯಾ ಅಂತ ಟ್ವೀಟ್ ಮಾಡಿದ್ದಾರೆ.

    ಸಂದರ್ಶನದಲ್ಲಿ ಆಂಜೆಲಾ ಹೇಳಿದ್ದೇನು?: ಹೃತಿಕ್ ರೋಷನ್ ಜೊತೆ ಮೊದಲ ಬಾರಿಗೆ ಜಾಹಿರಾತೊಂದಕ್ಕಾಗಿ ಕೆಲಸ ಮಾಡುವಾಗ ನನಗೆ ಅವರ ಮೇಲೆ ಕ್ರಶ್ ಆಗಿತ್ತು. ಅವರು ಕೆಲಸದಲ್ಲಿ ನನಗೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದರು. ನನಗೆ ನಟನೆಯ ಬಗ್ಗೆ ಟಿಪ್ಸ್ ನೀಡುತ್ತಿದ್ದರು. ನಾನು ಹೃತಿಕ್ ಅವರಲ್ಲಿ ಒಬ್ಬ ಗುರು ಹಾಗೂ ಗೆಳೆಯನನ್ನು ಕಂಡುಕೊಂಡಿದ್ದೇನೆ ಅಂತ ಹೇಳಿದ್ದಾರೆ.

    ಅವರು ನನ್ನನ್ನು ಮರೆತುಬಿಟ್ಟಿರ್ತಾರೆ ಅಂತ ಅಂದುಕೊಂಡಿದ್ದೆ. ಅವರೊಬ್ಬ ಸ್ಟಾರ್, ಸಾಕಷ್ಟು ಮಾಡೆಲ್‍ಗಳ ಜೊತೆ ಜಾಹಿರಾತು ಚಿತ್ರೀಕರಣ ಮಾಡಿರ್ತಾರೆ. ಆದ್ರೆ ಅವರು ನನಗೆ ಕರೆ ಮಾಡಿ ನಮ್ಮ ಎಲ್ಲಾ ಸಂಭಾಷಣೆಯನ್ನೂ ನೆನಪಿಸಿಕೊಂಡ್ರು. ನಮ್ಮ ತಂದೆ ಸ್ಪೇನ್‍ನ ವೆಲೆಂಸಿಯಾದವರು ಎಂಬುದನ್ನೂ ನೆನಪಿಟ್ಟಿದ್ದರು. ಅಲ್ಲದೆ ನನ್ನ ಕಣ್ಣಿನ ಬಣ್ಣ ಒರಿಜಿನಲ್ಲಾ? ಅಂತ ತಮಾಷೆ ಮಾಡಿದ್ರು. ನಾನು ದಕ್ಷಿಣದಲ್ಲಿ ಚಿತ್ರವೊಂದನ್ನು ಒಪ್ಪಿಕೊಂಡಾಗ ಅದರ ನಿರ್ದೇಶಕರ ಬಗ್ಗೆ ವಿಚಾರಿಸಿ ನಾನು ಈ ಸಿನಿಮಾದಿಂದ ದೊಡ್ಡ ಮಟ್ಟಕ್ಕೆ ಹೋಗ್ತೀನಿ ಎಂದಿದ್ದರು. ನಾನು ಅವರನ್ನು ಗುರುವಿನಂತೆ ನೋಡ್ತೀನಿ. ನನ್ನ ರೋಗ್ ಸಿನಿಮಾದ ಟ್ರೇಲರ್ ಮತ್ತು ಫಸ್ಟ್ ಲುಕ್ ಅವರಿಗೆ ತೋರಿಸಿದ್ದೆ. ಅವರು ಅದನ್ನು ತುಂಬಾ ಇಷ್ಟಪಟ್ಟಿದ್ದರು ಎಂದೆಲ್ಲಾ ಆಂಜೆಲಾ ಸಂದರ್ಶನದಲ್ಲಿ ಹೇಳಿದ್ದಾರೆ.

    ಆಂಜೆಲಾ ಈವರೆಗೆ ದಕ್ಷಿಣದಲ್ಲಿ ಜ್ಯೋತಿ ಲಕ್ಷ್ಮೀ, ಸೈಜ್ ಝೀರೋ ಮತ್ತು ಕನ್ನಡದ ರೋಗ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.