Tag: ಹೃತಿಕ್ ರೋಷನ್

  • ಗರ್ಲ್‌ಫ್ರೆಂಡ್ ಸಬಾ ಜೊತೆ ವಾಸಿಸಲು ದುಬಾರಿ ಮನೆ ಖರೀದಿಸಿದ ಹೃತಿಕ್ ರೋಷನ್

    ಗರ್ಲ್‌ಫ್ರೆಂಡ್ ಸಬಾ ಜೊತೆ ವಾಸಿಸಲು ದುಬಾರಿ ಮನೆ ಖರೀದಿಸಿದ ಹೃತಿಕ್ ರೋಷನ್

    ಬಾಲಿವುಡ್ ನಟ ಹೃತಿಕ್ ರೋಷನ್ (Hrithik Roshan) ಸದ್ಯ ‘ಫೈಟರ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಿಂತ ತಮ್ಮ ಗರ್ಲ್‌ಫ್ರೆಂಡ್ ಸಬಾ ವಿಷ್ಯವಾಗಿಯೇ ಹೆಚ್ಚೆಚ್ಚು ಸುದ್ದಿಯಾಗುತ್ತಿದ್ದಾರೆ. ಗೆಳತಿ ಸಬಾ (Saba) ಜೊತೆ ವಾಸಿಸಲು ಮದುವೆಗೂ ಮುನ್ನವೇ ಐಷಾರಾಮಿ ಅಪಾರ್ಟ್‌ಮೆಂಟ್‌ವೊಂದನ್ನ ಖರೀದಿಸಿದ್ದಾರೆ.

    ಹೃತಿಕ್ ರೋಷನ್ ಅವರು ಸುಸೇನ್ ಖಾನ್‌ಗೆ 2014ರಲ್ಲಿ ಡಿವೋರ್ಸ್ ನೀಡಿದ್ದರು. ನಂತರ ಸಬಾ ಆಜಾದ್ ಜೊತೆ ಡೇಟಿಂಗ್‌ನಲ್ಲಿದ್ದಾರೆ. ಈಗಾಗಲೇ ಇಬ್ಬರು ಲಿವಿನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಪ್ರೇಯಸಿ ಸಬಾಗೆ ಹೃತಿಕ್ ದುಬಾರಿ ಮನೆ ಉಡುಗೊರೆಯಾಗಿ ನೀಡಿದ್ದಾರೆ.

    ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಇಬ್ಬರೂ ಒಟ್ಟಿಗೆ ಇರಲು ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರಂತೆ. ಇಬ್ಬರೂ ಇದೀಗ ಹೊಸ ಮನೆಗೆ ಸದ್ಯದಲ್ಲೇ ಶಿಫ್ಟ್ ಆಗುತ್ತಿದ್ದಾರೆ ಎನ್ನಲಾಗಿದೆ. ಮುಂಬೈನ ಜುಹು – ವರ್ಸೋವ ರಸ್ತೆಯಲ್ಲಿ ಹೃತಿಕ್ ಮತ್ತು ಸಬಾ ಹೊಸ ಮನೆ ಇದ್ದು 3 ಫ್ಲೋರ್ ಇರುವ ಅಪಾರ್ಟ್‌ಮೆಂಟ್ ಇದಾಗಿದೆ. ಬರೋಬ್ಬರಿ 100 ಕೋಟಿ ರೂಪಾಯಿಗೆ ಈ ಹೊಸ ಮನೆ ಖರೀದಿ ಮಾಡಿದ್ದಾರೆ. ಹೊಸ ಮನೆ ಸಮುದ್ರದ ಅದ್ಭುತ ನೋಟವನ್ನು ಹೊಂದಿದ್ದು 15 ಮತ್ತು 16ನೇ ಫ್ಲೋರ್ ಡ್ಯುಪ್ಲೆಕ್ಸ್ ಹಾಗೂ ಮತ್ತೊಂದು ಫ್ಲೋರ್ ಇದೆಯಂತೆ. ಇಬ್ಬರೂ ಒಟ್ಟಿಗೆ ವಾಸಿಸಲು ನಿರ್ಧರಿಸಿರುವುದು ನೋಡಿದ್ರೆ ಸದ್ಯದಲ್ಲೇ ಮದುವೆ ಆಗಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದನ್ನೂ ಓದಿ:ಜನಾರ್ದನ್ ರೆಡ್ಡಿಗೂ ‘ಆದಿಕೇಶವ’ ಸಿನಿಮಾ ಕಥೆಗೂ ಸಂಬಂಧ ಇದೆಯಾ?

    ಹೃತಿಕ್ ರೋಷನ್ ಕುಟುಂಬದ ಜೊತೆ ಸಬಾಗೆ ಒಳ್ಳೆಯ ಒಡನಾಟವಿದೆ. ಇಬ್ಬರ ಪ್ರೀತಿಗೆ ಕುಟುಂಬದ ಕಡೆಯಿಂದ ಕೂಡ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ವರ್ಷದ ಕೊನೆಯಲ್ಲಿ ಮದುವೆಯಾದರು ಅಚ್ಚರಿಪಡಬೇಕಿಲ್ಲ.

  • ‘ಫೈಟರ್’ ಚಿತ್ರದಲ್ಲಿ ನಟಿಸಲು ಹೃತಿಕ್- ದೀಪಿಕಾ ಪಡುಕೋಣೆ ಪಡೆದ ಸಂಭಾವನೆ ಎಷ್ಟು?

    ‘ಫೈಟರ್’ ಚಿತ್ರದಲ್ಲಿ ನಟಿಸಲು ಹೃತಿಕ್- ದೀಪಿಕಾ ಪಡುಕೋಣೆ ಪಡೆದ ಸಂಭಾವನೆ ಎಷ್ಟು?

    ‘ಪಠಾಣ್’ (Pathaan) ಸೂಪರ್ ಸಕ್ಸಸ್ ನಂತರ ದೀಪಿಕಾ ಪಡುಕೋಣೆ ‘ಫೈಟರ್’ (Fighter) ಸಿನಿಮಾದಲ್ಲಿ ಹೃತಿಕ್ ಜೊತೆ ತೆರೆಹಂಚಿಕೊಳ್ತಿದ್ದಾರೆ. ಹೀಗಿರುವಾಗ ಚಿತ್ರತಂಡ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಕಲಾವಿದರ ಸಂಭಾವನೆಯಿಂದ ಚಿತ್ರದ ಬಜೆಟ್ ಮಿತಿ ಮಿರುತ್ತಿದೆ ಎಂದು ಸಿನಿಮಾ ವಿಶ್ಲೇಷಕ ಕಮಾಲ್ ಆರ್. ಖಾನ್ ಟ್ವೀಟ್ ಮಾಡಿದ್ದಾರೆ.

    ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ‘ಪಠಾಣ್’ಗೆ ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡ್ತಿದ್ದಾರೆ. ಹೃತಿಕ್-ದೀಪಿಕಾ ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಹಾಗಾಗಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಸ್ಟಾರ್ ಕಲಾವಿದರ ದುಬಾರಿ ಸಂಭಾವನೆ ವಿಷ್ಯವಾಗಿ ಫೈಟರ್ ಸುದ್ದಿಯಲ್ಲಿದೆ. ಇದನ್ನೂ ಓದಿ:ಬಜರಂಗದಳ ನಿಷೇಧ: ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ ನಟಿ ರಮ್ಯಾ

    ಹೃತಿಕ್ ರೋಷನ್ (Hrithik Roshan) ನಟನೆಯ ‘ಫೈಟರ್’ ಸಿನಿಮಾದ ಬಜೆಟ್ 350 ಕೋಟಿ ರೂಪಾಯಿ ತಲುಪಿದೆ. ಇದನ್ನು ಮರಳಿ ಪಡೆಯುವುದು ಬಹುತೇಕ ಅಸಾಧ್ಯ. ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು 40 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಹೃತಿಕ್ ರೋಷನ್ ಸಂಭಾವನೆ 85 ಕೋಟಿ ರೂಪಾಯಿ, ದೀಪಿಕಾ ಪಡುಕೋಣೆ ಸಂಭಾವನೆ 20 ಕೋಟಿ ರೂಪಾಯಿ. ಇನ್ನುಳಿದ ಕಲಾವಿದರಿಗೆ 15 ಕೋಟಿ ರೂಪಾಯಿ ನೀಡಲಾಗುತ್ತಿದೆ. ಅಂದರೆ, ಸಂಭಾವನೆ ಮೊತ್ತವೇ 160 ಕೋಟಿ ರೂಪಾಯಿ ತಲುಪಲಿದೆ’ ಎಂದು ಕಮಾಲ್ ಆರ್.ಖಾನ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಈ ಚಿತ್ರದ ಬಜೆಜ್ ಕೈ ಮೀರಿ ಹೋಗಿದೆ ಎಂದಿದ್ದಾರೆ. ಈ ಸಂಭಾವನೆ ವಿಚಾರ ಅದೆಷ್ಟರ ಮಟ್ಟಿಗೆ ನಿಜಾ ಎಂಬುದನ್ನ ಚಿತ್ರತಂಡವೇ ಸ್ಪಷ್ಟಪಡಿಸಬೇಕಿದೆ.

    ಗಲ್ಲಾಪೆಟ್ಟಿಗೆಯಲ್ಲಿ ಪಠಾಣ್ ಕೋಟಿ ಕೋಟಿ ಲೂಟಿ ಮಾಡಿರೋದ್ರಿಂದ ಸಹಜವಾಗಿ ಸಿದ್ಧಾರ್ಥ್ ಆನಂದ್ ನಿರ್ದೇಶನದ ಫೈಟರ್ ಮೇಲೆ ನಿರೀಕ್ಷೆ ಡಬಲ್ ಆಗಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಕಲಾವಿದರ ಸಂಭಾವನೆ ಮೀರಿ ಕಲೆಕ್ಷನ್ ಮಾಡುವ ‘ಫೈಟರ್’ ದಾಖಲೆ ಬರೆಯುತ್ತಾ ಎಂದು ಕಾದುನೋಡಬೇಕಿದೆ.

  • ಗರ್ಲ್‌ಫ್ರೆಂಡ್ ಜೊತೆಗಿನ ಫೋಟೋ ಹಂಚಿಕೊಂಡ ಹೃತಿಕ್ ರೋಷನ್

    ಗರ್ಲ್‌ಫ್ರೆಂಡ್ ಜೊತೆಗಿನ ಫೋಟೋ ಹಂಚಿಕೊಂಡ ಹೃತಿಕ್ ರೋಷನ್

    ಬಾಲಿವುಡ್ (Bollywood) ನಟ ಹೃತಿಕ್ ರೋಷನ್ (Hrithik Roshan) ಸದ್ಯ ತಮ್ಮ ಸಿನಿಮಾಗಿಂತ ಗರ್ಲ್‌ಫ್ರೆಂಡ್ ಸಬಾ ಆಜಾದ್ (Saba Azad) ಜೊತೆಗಿನ ರಿಲೇಷನ್‌ಶಿಪ್ ವಿಚಾರವಾಗಿಯೇ ಸುದ್ದಿ ಮಾಡ್ತಿದ್ದಾರೆ. ಇದೀಗ ಸಬಾ ಜೊತೆಗಿನ ಹೊಸ ಫೋಟೋಶೂಟ್ ಅನ್ನು ಹೃತಿಕ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    ಹೃತಿಕ್- ಸಬಾ ಸಾಕಷ್ಟು ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದಾರೆ. ಮೊದಲ ಪತ್ನಿ ಜೊತೆ ಡಿವೋರ್ಸ್ ಆದ ಮೇಲೆ ಸಬಾ ಜೊತೆ ಹೃತಿಕ್ ಎಂಗೇಜ್ ಆಗಿದ್ದಾರೆ. ಈ ವರ್ಷವೇ ಸಬಾ-ಹೃತಿಕ್ ವೈವಾಹಿಕ ಬದುಕಿಗೆ ಕಾಲಿಡಲಿದ್ದಾರೆ ಎಂಬ ಸುದ್ದಿಯೂ ಇದೆ.

     

    View this post on Instagram

     

    A post shared by Hrithik Roshan (@hrithikroshan)

    ಇತ್ತೀಚಿನ ನೀತಾ ಮುಕೇಶ್ ಅಂಬಾನಿ ಅವರ ಖಾಸಗಿ ಕಾರ್ಯಕ್ರಮದಲ್ಲಿ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಈವೆಂಟ್‌ಗೆ ಹೃತಿಕ್ ಜೋಡಿ ಕೂಡ ಎಂಟ್ರಿ ಕೊಟ್ಟಿದ್ದರು. ಈ ವೇಳೆ ಕ್ಲಿಕ್ಕಿಸಿದ ಫೋಟೋವನ್ನ ಸಾಮಾಜಿಕ ಜಾಲಾತಾಣದಲ್ಲಿ ನಟ ಶೇರ್ ಮಾಡಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ನಟಿ ಸಬಾ ಕೆಂಪು ಬಣ್ಣದ ಉಡುಗೆಯಲ್ಲಿ ಮಿಂಚಿದ್ರೆ, ಹೃತಿಕ್ ಕಪ್ಪು ಧಿರಿಸಿನಲ್ಲಿ ಹ್ಯಾಡ್‌ಸಮ್ ಆಗಿ ಕಾಣಿಸಿಕೊಂಡಿದ್ದಾರೆ.

  • ಹೃತಿಕ್ ರೋಷನ್- ಸಬಾ ಆಜಾದ್ ಮದುವೆ ನಿಜಾನಾ? ರಾಕೇಶ್ ರೋಷನ್ ಸ್ಪಷ್ಟನೆ

    ಹೃತಿಕ್ ರೋಷನ್- ಸಬಾ ಆಜಾದ್ ಮದುವೆ ನಿಜಾನಾ? ರಾಕೇಶ್ ರೋಷನ್ ಸ್ಪಷ್ಟನೆ

    ಚಿತ್ರರಂಗದಲ್ಲಿ ಗಟ್ಟಿಮೆಳದ ಸೌಂಡ್ ಜೋರಾಗಿದೆ. ಅಥಿಯಾ ಶೆಟ್ಟಿ-ರಾಹುಲ್, ಸಿದ್ ಮತ್ತು ಕಿಯಾರಾ ಜೋಡಿ ನಂತರ ಹೃತಿಕ್ ರೋಷನ್ (Hrithik Roshan) ಮತ್ತು ಸಬಾ (Saba Azad) ಮದುವೆ (Wedding) ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿತ್ತು. ಇದೀಗ ಹೃತಿಕ್- ಸಬಾ ಮದುವೆಯಾಗುತ್ತಿರೋದು ನಿಜಾನಾ ಎಂಬುದರ ಬಗ್ಗೆ ಹೃತಿಕ್ ತಂದೆ (Father) ರಾಕೇಶ್ ರೋಷನ್ (Rakesh Roshan) ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ನನ್ನ ಮತ್ತು ಮಕ್ಕಳನ್ನು ಬೀದಿಗೆ ತಳ್ಳಿದ: ನವಾಜುದ್ದೀನ್ ವಿರುದ್ಧ ಪತ್ನಿ ಕಣ್ಣೀರು

    ಬಾಲಿವುಡ್‌ನ (Bollywood) ಟಾಪ್ ನಟ ಹೃತಿಕ್ ರೋಷನ್ ಇದೀಗ ಸಿನಿಮಾಗಿಂತ ಸಬಾ ಜೊತೆಗಿನ ಡೇಟಿಂಗ್ ವಿಚಾರವಾಗಿಯೇ ಸಖತ್ ಸುದ್ದಿಯಲ್ಲಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಲಿಪ್ ಕಿಸ್ ಮಾಡುತ್ತಾ, ಮುಂಬೈ ಬೀದಿಗಳಲ್ಲಿ ಕೈ ಕೈ ಹಿಡಿದು ಸುತ್ತಾಡುತ್ತಿದ್ದಾರೆ. ಬಿಟೌನ್ ಪಾರ್ಟಿಗಳಿಗೆ ಸಬಾ ಜೊತೆನೇ ಹೃತಿಕ್ ವಿಸಿಟ್ ಮಾಡ್ತಿದ್ದಾರೆ. ತನ್ನ ಗೆಳತಿ ಎಂದೇ ಹೃತಿಕ್ ಸ್ನೇಹಿತರ ಬಳಿ ಪರಿಚಯಿಸುತ್ತಿದ್ದಾರೆ.

    ಮಾಜಿ ಪತ್ನಿ ಸುಸಾನ್ ಖಾನ್ (Sussane Khan) ಜೊತೆ ಡಿವೋರ್ಸ್ (Divorce) ಬಳಿಕ ಸಬಾ ಆಜಾದ್ (Saba Azad) ಜೊತೆ ಸಾಕಷ್ಟು ಸಮಯದಿಂದ ಹೃತಿಕ್ ರೋಷನ್ ಡೇಟಿಂಗ್ ಮಾಡ್ತಿರೋದು ಗುಟ್ಟಾಗಿ ಉಳಿದಿಲ್ಲ. ಹಾಗಾಗಿ ಸೋಷಿಯಲ್ ಮೀಡಿಯಾದಲ್ಲಿ ಹೃತಿಕ್-ಸಬಾ ಮದುವೆ ಬಗ್ಗೆ ಚರ್ಚೆಯಾಗಿತ್ತು. ಈ ವರ್ಷ ನವೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಹೃತಿಕ್ ತಂದೆ ನಿರ್ದೇಶಕ ರಾಕೇಶ್ ರೋಷನ್ ಸ್ಪಷ್ಟನೆ ನೀಡಿದ್ದಾರೆ.

    ಇವರಿಬ್ಬರ ಮದುವೆ ಬಗ್ಗೆ ಎಲ್ಲಾ ಮಾಧ್ಯಮಗಳಲ್ಲಿ ನ್ಯೂಸ್ ಆಗುತ್ತಿದ್ದಂತೆ ಹೃತಿಕ್ ತಂದೆಗೆ ಶುಭಾಶಯಗಳನ್ನ ತಿಳಿಸುತ್ತಿದ್ದಂತೆ ಈ ಮದುವೆಯ ಕುರಿತು ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್ ಕೌತುಕದ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಪುತ್ರ ಹೃತಿಕ್ ರೋಷನ್ ಮತ್ತು ಸಾಬಾ ಆಜಾದ್ ಅವರ ವಿವಾಹದ ಕುರಿತು ಮಾತನಾಡಿರುವ ಅವರು, ನಮ್ಮ ಕುಟುಂಬದಲ್ಲಿ ಯಾವುದೇ ಮದುವೆಯ ಬಗ್ಗೆ ತಮಗೆ ತಿಳಿದಿಲ್ಲ ಎಂದಿದ್ದಾರೆ. ನಾನು ಮದುವೆ ಬಗ್ಗೆ ಇನ್ನೂ ಏನೂ ಕೇಳಿಲ್ಲ. ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಪರಸ್ಪರ ಅರ್ಥಮಾಡಿಕೊಳ್ಳಲು ಮತ್ತು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ಬಿಟ್ಟು ನಮ್ಮ ಕುಟುಂಬದಲ್ಲಿ ಯಾವುದೇ ಮದುವೆಗಳ ಬಗ್ಗೆಯೂ ನನಗೆ ಗೊತ್ತಿಲ್ಲ ಎಂದಿದ್ದಾರೆ. ಈ ಮೂಲಕ ತಮ್ಮ ಮಗನ ಮದುವೆಯ ಸುದ್ದಿ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.

  • ಹೃತಿಕ್ ರೋಷನ್- ಸಬಾ ಮದುವೆ ಬಗ್ಗೆ ಇಲ್ಲಿದೆ ಬಿಗ್ ಅಪ್‌ಡೇಟ್

    ಹೃತಿಕ್ ರೋಷನ್- ಸಬಾ ಮದುವೆ ಬಗ್ಗೆ ಇಲ್ಲಿದೆ ಬಿಗ್ ಅಪ್‌ಡೇಟ್

    ಬಾಲಿವುಡ್ (Bollywood) ನಟ ಹೃತಿಕ್ ರೋಷನ್ (Hrithik Roshan) ಮತ್ತು ಸಬಾ ಅಜಾದ್ (Saba Azad) ಲವ್ ವಿಚಾರ ಇದೀಗ ಗುಟ್ಟಾಗಿಯೇನು ಉಳಿದಿಲ್ಲ. ಇತ್ತೀಚಿಗೆ ಸಾರ್ವಜನಿಕ ಸ್ಥಳದಲ್ಲಿ ಸಬಾ- ಹೃತಿಕ್ ಇಬ್ಬರು ಲಿಪ್ ಕಿಸ್ ಮಾಡಿ ಅಚ್ಚರಿ ಮೂಡಿಸಿದ್ದರು. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಈ ಬೆನ್ನಲ್ಲೇ ಹೃತಿಕ್- ಸಬಾ ಬಗ್ಗೆ ಹೊಸ ಸುದ್ದಿಯೊಂದು ಕೇಳಿ ಬರುತ್ತಿದೆ.

    ನಟ ಹೃತಿಕ್ ರೋಷನ್ ತಮ್ಮ ಮೊದಲ ಪತ್ನಿಗೆ ಡಿವೋರ್ಸ್ ಕೊಟ್ಟ ಮೇಲೆ ಸಬಾ ಜೊತೆ ಡೇಟಿಂಗ್ ಮಾಡ್ತಿದ್ದಾರೆ. ಮುಂಬೈ ಮಹಾನಗರಿಯಲ್ಲಿ ಕೈ ಕೈ ಹಿಡಿದು ಓಡಾಡುತ್ತಿದ್ದಾರೆ. ಬಿಟೌನ್ ಸ್ಟಾರ್ ಪಾರ್ಟಿಗಳಿಗೂ ಜೊತೆಯಾಗಿ ಹೋಗುತ್ತಿದ್ದಾರೆ. ಹೀಗಿರುವಾಗ ಹೃತಿಕ್ ಮದುವೆ (Wedding) ಬಗ್ಗೆ ಗುಡ್ ನ್ಯೂಸ್ ಸಿಕ್ಕಿದೆ. ಇದನ್ನೂ ಓದಿ: ನಟ ಗೋಪಿಚಂದ್‌ಗೆ ಸ್ಯಾಂಡಲ್‌ವುಡ್‌ ನಿರ್ದೇಶಕ ಎ.ಹರ್ಷ ಆ್ಯಕ್ಷನ್ ಕಟ್

    ಈ ವರ್ಷ ನವೆಂಬರ್‌ನಲ್ಲಿ ಹೃತಿಕ್ ರೋಷನ್- ಸಬಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಟ್ವೀಟ್ ವೈರಲ್ ಆಗಿದೆ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಈ ಮದುವೆ ಸುದ್ದಿ ನಿಜಾನಾ ಎಂಬುದನ್ನ ಹೃತಿಕ್-ಸಬಾ ಇಬ್ಬರು ಸ್ಪಷ್ಟನೆ ನೀಡಿಲ್ಲ.

    ಹೃತಿಕ್ ರೋಷನ್ ಸದ್ಯ ʻಫೈಟರ್ʼ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ತೆರೆಯ ಮೇಲೆ ರೊಮ್ಯಾನ್ಸ್ ಮಾಡಲು ಈ ಜೋಡಿ ರೆಡಿಯಾಗಿದೆ.

  • ಮಾಜಿ ಫ್ರೆಂಡ್ ಗೆ ನಟನೆ ಬರಲ್ಲ: ವಿವಾದದ ಕಿಡಿ ಹೊತ್ತಿಸಿದ ಕಂಗನಾ ರಣಾವತ್

    ಮಾಜಿ ಫ್ರೆಂಡ್ ಗೆ ನಟನೆ ಬರಲ್ಲ: ವಿವಾದದ ಕಿಡಿ ಹೊತ್ತಿಸಿದ ಕಂಗನಾ ರಣಾವತ್

    ಬಾಲಿವುಡ್ ಹೆಸರಾಂತ ನಟ ಹೃತಿಕ್ ರೋಷನ್ (Hrithik Roshan) ಮತ್ತು ನಟಿ ಕಂಗನಾ ರಣಾವತ್ (Kangana Ranaut) ಡೇಟಿಂಗ್ ವಿಚಾರ ಗುಟ್ಟಾಗೇನೂ ಉಳಿದಿರಲಿಲ್ಲ. ಇಬ್ಬರೂ ಪರಸ್ಪರ ಅರ್ಥ ಮಾಡಿಕೊಂಡು ಡೇಟಿಂಗ್ ಮಾಡುತ್ತಿದ್ದಾರೆ ಎಂಬೆಲ್ಲ ಸುದ್ದಿ ಬಿಟೌನ್ ನಲ್ಲಿ ಕೇಳಿ ಬಂದಿತ್ತು. ಇಬ್ಬರೂ ಹೊಸ ಬದುಕು ಕಟ್ಟಿಕೊಳ್ಳಲಿದ್ದಾರೆ ಎನ್ನುವಲ್ಲಿಗೆ ಅವರ ಫ್ರೆಂಡ್ ಶಿಪ್ ವಿಸ್ತರಿಸಿತ್ತು. ಆದರೆ, ಈ ಜೋಡಿ ಅದನ್ನು ಮುಂದುವರೆಸಲಿಲ್ಲ. ಬ್ರೇಕ್ ಅಪ್ ಎಂದು ಹೇಳುವ ಮೂಲಕ ದೂರ ದೂರವಾದರು.

    ಇಬ್ಬರೂ ದೂರವಾದ ನಂತರ ಕಂಗನಾ ಸುಮ್ಮನೆ ಕೂರಲಿಲ್ಲ. ಹೃತಿಕ್ ಬಗ್ಗೆ ಪರೋಕ್ಷ ಮತ್ತು ಪ್ರತ್ಯೆಕ್ಷವಾಗಿಯೇ ಹಲವು ಆರೋಪಗಳನ್ನು ಮಾಡಿದರು. ಹೃತಿಕ್ ಬಗ್ಗೆ ಸಲ್ಲದ ಮಾತುಗಳನ್ನೂ ಆಡಿದರು. ಹೀಗಾಗಿ ಫ್ರೆಂಡ್ ಶಿಪ್ ಶಾಶ್ವತವಾಗಿ ಮುರಿದು ಬಿತ್ತು. ಹಲವು ದಿನಗಳ ನಂತರ ಮತ್ತೆ ಹೃತಿಕ್ ಬಗ್ಗೆ ಕಂಗನಾ ಮಾತನಾಡಿದ್ದಾರೆ. ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಅವರು ಟಾಂಗ್ ನೀಡುವಂತೆ ಉತ್ತರಿಸಿದ್ದಾರೆ. ಇದನ್ನೂ ಓದಿ: 150 ಕೋಟಿ ಮೌಲ್ಯದ ಹೊಸ ಮನೆಯನ್ನು ಪೋಷಕರಿಗೆ ಗಿಫ್ಟ್ ನೀಡಿದ ಧನುಷ್

    ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಅಭಿಮಾನಿಗಳ ಜೊತೆ ಸಂವಾದಿಸುತ್ತಲೇ ಇರುತ್ತಾರೆ ಕಂಗನಾ. ಅಭಿಮಾನಿಗಳು ಕೇಳಿದ ಪ್ರಶ್ನೆಗೆ ತಮ್ಮದೇ ಆದ ರೀತಿಯಲ್ಲಿ ಅವರು ಉತ್ತರಿಸುತ್ತಾರೆ. ಈ ಬಾರಿ ಅಭಿಮಾನಿಯೊಬ್ಬ ಕೇಳಿದ್ದ ಪ್ರಶ್ನೆಗೆ ವಿಚಿತ್ರ ಹಾಗೂ ವಿವಾದ (Controversy) ಎನ್ನುವ ರೀತಿಯಲ್ಲಿ ಅವರು ಉತ್ತರಿಸಿದ್ದಾರೆ. ಈ ಉತ್ತರ ಹೃತಿಕ್ ಅಭಿಮಾನಿಗಳನ್ನು ಕೆಣಕಿದೆ.

    ಅಭಿಮಾನಿಯೊಬ್ಬರು ‘ನಿಮಗೆ ಹೃತಿಕ್ ರೋಷನ್ ಮತ್ತು ದಿಲ್ಜಿತ್ ದೋಸಾಂಜ್ ಇವರಿಬ್ಬರಲ್ಲಿ ಯಾರು ಇಷ್ಟ, ಯಾರು ಉತ್ತಮ ನಟ’ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ವಿಭಿನ್ನವಾದ ರೀತಿಯಲ್ಲಿ ಉತ್ತರಿಸಿರುವ ಕಂಗನಾ, ‘ಒಬ್ಬರೇ ಕೇವಲ ಆ್ಯಕ್ಷನ್ ಮಾಡ್ತಾರೆ, ಮತ್ತೊಬ್ಬರು ವಿಡಿಯೋ ಸಾಂಗ್ ನಲ್ಲೇ ಕಳೆದು ಹೋಗಿದ್ದಾರೆ. ಇವರಲ್ಲಿ ಒಬ್ಬರನ್ನು ನಾನು ನಟಿಸಿದ್ದೇನೆ ನೋಡಿಲ್ಲ. ನೀವು ನೋಡಿದ್ದರೆ ತಿಳಿಸಿ’ ಎಂದು ಪರೋಕ್ಷವಾಗಿ ಹೃತಿಕ್ ಗೆ ಟಾಂಗ್ ಕೊಟ್ಟಿದ್ದಾರೆ ಕಂಗನಾ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • `ಕಾಂತಾರ’ ನೋಡಿ ತುಂಬಾ ಕಲಿತೆ: ರಿಷಬ್ ಚಿತ್ರಕ್ಕೆ ಹೃತಿಕ್ ರೋಷನ್ ಮೆಚ್ಚುಗೆ

    `ಕಾಂತಾರ’ ನೋಡಿ ತುಂಬಾ ಕಲಿತೆ: ರಿಷಬ್ ಚಿತ್ರಕ್ಕೆ ಹೃತಿಕ್ ರೋಷನ್ ಮೆಚ್ಚುಗೆ

    ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ಕ್ರಿಯೆಟ್ ಮಾಡಿದ `ಕಾಂತಾರ’ (Kantara Film) ಸಿನಿಮಾವನ್ನು ಸಿನಿ ಪ್ರೇಕ್ಷಕರು, ಪರಭಾಷೆಯ ತಾರೆಯರು ಹಾಡಿ ಹೊಗಳುತ್ತಿದ್ದಾರೆ. ಈ ಬೆನ್ನಲ್ಲೇ ಬಾಲಿವುಡ್ (Bollywood) ಸೂಪರ್ ಸ್ಟಾರ್ ಹೃತಿಕ್ ರೋಷನ್ (Hrithik Roshan), ರಿಷಬ್ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಅವರಿಗೆ `ಕಾಂತಾರ’ ಕ್ಲೈಮ್ಯಾಕ್ಸ್ ಸಖತ್ ಇಷ್ಟವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ರಿಷಬ್ (Rishab Shetty) ನಟನೆ, ನಿರ್ದೇಶನದ `ಕಾಂತಾರ’ ಸಿನಿಮಾ ಹವಾ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ. ಒಟಿಟಿಯಲ್ಲಿ ಕೂಡ ಸಿನಿಮಾ ಸಂಚಲನ ಮೂಡಿಸುತ್ತಿದೆ. ಇದೀಗ `ಕಾಂತಾರ’ ಚಿತ್ರವನ್ನು ಬಿಟೌನ್ ಸ್ಟಾರ್ ಹೃತಿಕ್ ರೋಷನ್ ನೋಡಿ ಭೇಷ್ ಎಂದಿದ್ದಾರೆ. ಸಿನಿಮಾ ಬಗೆಗಿನ ಭಾವನೆಯನ್ನ ನಟ ಖುಷಿಯಿಂದ ಹೇಳಿಕೊಂಡಿದ್ದಾರೆ.

    `ಕಾಂತಾರ’ ಸಿನಿಮಾವನ್ನು ನೋಡಿ ಸಾಕಷ್ಟು ವಿಷಯ ಕಲಿತುಕೊಂಡೆ. ರಿಷಬ್ ಶೆಟ್ಟಿ ಅವರಿಂದಾಗಿ ಈ ಸಿನಿಮಾ ಅಸಾಧಾರಣ ಎನಿಸಿಕೊಂಡಿದೆ. ನಿರೂಪಣೆ, ನಟನೆ ಮತ್ತು ನಿರ್ದೇಶನ ಅತ್ಯುತ್ತಮವಾಗಿದೆ. ಕ್ಲೈಮ್ಯಾಕ್ಸ್‌ನಲ್ಲಿ ಕಂಡ ಬದಲಾವಣೆಯಿಂದ ನನಗೆ ರೋಮಾಂಚನ ಆಯಿತು. ಇಡೀ ತಂಡಕ್ಕೆ ನನ್ನ ಗೌರವ ಮತ್ತು ಅಭಿನಂದನೆಗಳು’ ಎಂದು ಹೃತಿಕ್ ರೋಷನ್ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ರಿಷಬ್ ತಂಡದ ವಿಭಿನ್ನ ಪ್ರಯತ್ನವನ್ನ ಹಾಡಿ ಹೊಗಳಿದ್ದಾರೆ. ಹೃತಿಕ್‌ ರೋಷನ್‌ಗೆ ಪ್ರತಿಯುತ್ತರವಾಗಿ ರಿಷಬ್ ಕೂಡ ಧನ್ಯವಾದಗಳು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಸಿನಿಮಾ ಫಸ್ಟ್ ಲುಕ್ ರಿಲೀಸ್

    ಇನ್ನೂ `ಕಾಂತಾರ 2′ ಮಾಡಲು ಪಂಜುರ್ಲಿ ದೈವ ಅನುಮತಿ ನೀಡಿದೆ. ಈ ಸುದ್ದಿ ಕೇಳಿ, ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ರಿಷಬ್ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೃತಿಕ್ ರೋಷನ್ ಸಹೋದರಿ, ಬರ್ತ್‌ಡೇ ಪಾರ್ಟಿಯಲ್ಲಿ ಸಬಾ ಆಜಾದ್

    ಹೃತಿಕ್ ರೋಷನ್ ಸಹೋದರಿ, ಬರ್ತ್‌ಡೇ ಪಾರ್ಟಿಯಲ್ಲಿ ಸಬಾ ಆಜಾದ್

    ಬಾಲಿವುಡ್‌ನ(Bollywood) ಸೂಪರ್ ಸ್ಟಾರ್ ಹೃತಿಕ್ ರೋಷನ್(Hrithik Roshan), ಸಬಾ ಆಜಾದ್ ಜೊತೆಗಿನ ಡೇಟಿಂಗ್ ವಿಚಾರವಾಗಿ ಸದ್ದು ಮಾಡುತ್ತಿರುತ್ತಾರೆ. ಇದೀಗ ಹೃತಿಕ್ ಸಹೋದರಿಯ ಬರ್ತ್‌ಡೇ ಪಾರ್ಟಿಯಲ್ಲಿ ಸಬಾ ಕಾಣಿಸಿಕೊಂಡಿದ್ದಾರೆ. ಹೃತಿಕ್ ಸಹೋದರಿಗೆ ಶುಭ ಹಾರೈಸಿದ್ದಾರೆ.

    ಮೊದಲ ಪತ್ನಿ ಸುಸನ್ನೆ ಖಾನ್ ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಮೇಲೆ ಸಬಾ ಆಜಾದ್(Saba Azad) ಜೊತೆ ಹೃತಿಕ್ ರೋಷನ್ ಡೇಟಿಂಗ್‌ನಲ್ಲಿದ್ದಾರೆ. ಇದೀಗ ಹೃತಿಕ್ ಸಹೋದರ ಸಂಬಂಧಿ ಪಶ್ಮಿನಾ ರೋಷನ್ ಬರ್ತ್‌ಡೇ ಪಾರ್ಟಿಯಲ್ಲಿ ಸಭಾ ಭಾಗಿದ್ದಾರೆ. ಈ ಫೋಟೋ ಮತ್ತು ವಿಡಿಯೋ ಇದೀಗ ಸದ್ದು ಮಾಡುತ್ತಿದೆ.

     

    View this post on Instagram

     

    A post shared by Pashmina Roshan (@pashminaroshan)

    ಹೃತಿಕ್ ರೋಷನ್ ಮತ್ತು ಸಬಾ ಅವರ ರಿಲೇಷನ್‌ಶಿಪ್ ವಿಚಾರ ಎಲ್ಲೂ ಅಧಿಕೃತವಾಗಿ ಹೇಳದೇ ಇದ್ದರೂ ಪ್ರತಿ ಸಮಾರಂಭದಲ್ಲೂ ಕೂಡ ಒಟ್ಟಿಗೆ ಹೈಲೈಟ್ ಆಗುತ್ತಿದ್ದಾರೆ. ಹೃತಿಕ್ ಕುಟುಂಬದ ಜೊತೆಗೂ ಸಬಾಗೆ ಒಳ್ಳೆಯ ಒಡನಾಟವಿದೆ. ಇದನ್ನೂ ಓದಿ:ಸಾನಿಯಾ, ಮಲಿಕ್ ದಾಂಪತ್ಯ ಜೀವನ ಅಂತ್ಯ? – ಹುಳಿ ಹಿಂಡಿದ ಸ್ಟಾರ್ ನಟಿ

    ಇನ್ನೂ ದೀಪಿಕಾ ಪಡುಕೋಣೆ ಜೊತೆ `ಫೈಟರ್’ ಚಿತ್ರದ ಮೂಲಕ ಹೃತಿಕ್ ರೋಷನ್ ತೆರೆಯ ಮೇಲೆ ಮಿಂಚಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾಯ್ಕಟ್‍ಗೆ ಕರೆ ಬೆನ್ನಲ್ಲೇ ಕ್ಷಮೆಯಾಚಿಸಿದ Zomato

    ಬಾಯ್ಕಟ್‍ಗೆ ಕರೆ ಬೆನ್ನಲ್ಲೇ ಕ್ಷಮೆಯಾಚಿಸಿದ Zomato

    ನವದೆಹಲಿ: ಫುಡ್ ಡೆಲಿವರಿ ಆ್ಯಪ್ ಝೊಮ್ಯಾಟೋ ಜಾಹೀರಾತಿನಲ್ಲಿ ಬಾಲಿವುಡ್ ನಟ ಹೃತಿಕ್ ರೋಷನ್ ಹಿಂದೂ ದೇವರಿಗೆ ಅಪಮಾನ ಮಾಡಿದ್ದಾರೆ ಎಂದು ಹಿಂದೂ ಸಂಘಟನೆಗಳು ಝೊಮ್ಯಾಟೋ ಬಾಯ್ಕಟ್‍ಗೆ ಕರೆ ನೀಡಿದ ಬೆನ್ನಲ್ಲೇ ಝೊಮ್ಯಾಟೋ ಕ್ಷಮೆಯಾಚಿಸಿದೆ.

    ಝೊಮ್ಯಾಟೋ ತನ್ನ ಜಾಹೀರಾತಿನಲ್ಲಿ ಹೃತಿಕ್ ರೋಷನ್, ಉಜ್ಜೈನಿಯಲ್ಲಿನ ಭಗವಾನ್ ಮಹಾಕಾಳೇಶ್ವರನ ಉಲ್ಲೇಖ ಮಾಡಿ, ‘ಪ್ಲೇಟ್ ಇಷ್ಟವಾಯಿತೇ, ನೀವು ಉಜ್ಜೈನಿಯಲ್ಲಿದ್ದರೆ, ಮಹಾಕಾಳೇಶ್ವರನಿಂದ ತರಿಸಿದರೆ ಆಯಿತು’ ಎಂದು ಹೇಳಿದ್ದರು. ಇದು ಹಿಂದೂ ದೇವರು ಮಹಾಕಾಳೇಶ್ವರನಿಗೆ ಅಪಮಾನ ಎಂದು ಹಿಂದೂ ಸಂಘಟನೆಗಳಿಂದ ಝೊಮ್ಯಾಟೋ ಬಹಿಷ್ಕಾರಕ್ಕೆ ಕರೆ ನೀಡಲಾಗಿತ್ತು. ಇದನ್ನೂ ಓದಿ: ಹಿಂದೂ ದೇವರಿಗೆ ಜಾಹೀರಾತಿನಲ್ಲಿ ಅಪಮಾನ – Zomato ಬಾಯ್ಕಟ್‍ಗೆ ಕರೆ

    ಯಾವ ಸಂಸ್ಥೆಯು ಮಾಂಸಹಾರಿ ಭೋಜನವನ್ನು ಸಹ ವಿತರಿಸುವುದೋ, ಅವರು ಮಹಾಕಾಲೇಶ್ವರರ ಹೆಸರಿನಲ್ಲಿ ಜಾಹೀರಾತು ತಯಾರಿಸಿ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದಾರೆ. ಆದ್ದರಿಂದ ಈ ಜಾಹೀರಾತನ್ನು ತಯಾರಿಸಿದ ಝೊಮ್ಯಾಟೋ ಹಿಂದೂಗಳಲ್ಲಿ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಹಿಂದೂ ಸಂಘಟನೆಗಳ ಆಗ್ರಹವಾಗಿತ್ತು. ವಿವಾದದ ಬೆನ್ನಲ್ಲೇ ಕೂಡಲೇ ಎಚ್ಚೆತ್ತ ಝೊಮ್ಯಾಟೋ ಪತ್ರದ ಮೂಲಕ ಕ್ಷಮೆಯಾಚಿಸಿದೆ. ಇದನ್ನೂ ಓದಿ: ಸಂಸತ್ತಿನ ಒಳಗಡೆ ಫೋಟೋ ಇರುವಾಗ ಸರ್ಕಲ್‍ಗೆ ಸಾವರ್ಕರ್ ಹೆಸರು ಇಟ್ಟರೆ ತಪ್ಪೇನು – ಭರತ್ ಶೆಟ್ಟಿ ಪ್ರಶ್ನೆ

    Live Tv
    [brid partner=56869869 player=32851 video=960834 autoplay=true]

  • ಹಿಂದೂ ದೇವರಿಗೆ ಜಾಹೀರಾತಿನಲ್ಲಿ ಅಪಮಾನ – Zomato ಬಾಯ್ಕಟ್‍ಗೆ ಕರೆ

    ಹಿಂದೂ ದೇವರಿಗೆ ಜಾಹೀರಾತಿನಲ್ಲಿ ಅಪಮಾನ – Zomato ಬಾಯ್ಕಟ್‍ಗೆ ಕರೆ

    ನವದೆಹಲಿ: ಫುಡ್ ಡೆಲಿವರಿ ಆ್ಯಪ್ ಝೊಮ್ಯಾಟೋ ಜಾಹೀರಾತಿನಲ್ಲಿ ಬಾಲಿವುಡ್ ನಟ ಹೃತಿಕ್ ರೋಷನ್ ಹಿಂದೂ ದೇವರಿಗೆ ಅಪಮಾನ ಮಾಡಿದ್ದಾರೆ ಎಂದು ಹಿಂದೂ ಸಂಘಟನೆಗಳು ಝೊಮ್ಯಾಟೋ ಬಾಯ್ಕಟ್‍ಗೆ ಕರೆ ನೀಡಿವೆ.

    ಝೊಮ್ಯಾಟೋ ತನ್ನ ಜಾಹೀರಾತಿನಲ್ಲಿ ಹೃತಿಕ್ ರೋಷನ್, ಉಜ್ಜೈನಿಯಲ್ಲಿನ ಭಗವಾನ್ ಮಹಾಕಾಲೇಶ್ವರನ ಉಲ್ಲೇಖ ಮಾಡಿ, ‘ಪ್ಲೇಟ್ ಇಷ್ಟವಾಯಿತೇ, ನೀವು ಉಜ್ಜೈನಿಯಲ್ಲಿದ್ದರೆ, ಮಹಾಕಾಳೇಶ್ವರನಿಂದ ತರಿಸಿದರೆ ಆಯಿತುʼ ಎಂದು ಹೇಳಿದ್ದಾರೆ. ಇದು ಹಿಂದೂ ದೇವರು ಮಹಾಕಾಳೇಶ್ವರನಿಗೆ ಅಪಮಾನ ಎಂದು ಹಿಂದೂ ಸಂಘಟನೆಗಳ ಆರೋಪವಾಗಿದೆ. ಇದನ್ನೂ ಓದಿ: 100 ಲೋನ್ ಆ್ಯಪ್‍ಗಳಿಂದ 500 ಕೋಟಿ ರೂ. ವ್ಯವಹಾರ – ಗ್ರಾಹಕರ ಮಾಹಿತಿ ಚೀನಾಗೆ ರವಾನಿಸಿದ ಗ್ಯಾಂಗ್ ಅರೆಸ್ಟ್

    ಯಾವ ಸಂಸ್ಥೆಯು ಮಾಂಸಹಾರಿ ಭೋಜನವನ್ನು ಸಹ ವಿತರಿಸುವುದೋ, ಅವರು ಮಹಾಕಾಳೇಶ್ವರನ ಹೆಸರಿನಲ್ಲಿ ಜಾಹೀರಾತು ತಯಾರಿಸಿ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದಾರೆ. ಆದ್ದರಿಂದ ಈ ಜಾಹೀರಾತನ್ನು ತಯಾರಿಸಿದ ಝೊಮ್ಯಾಟೋ ಹಿಂದೂಗಳಲ್ಲಿ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ. ಅಲ್ಲದೇ ಝೊಮ್ಯಾಟೋ ಬಹಿಷ್ಕಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕರೆ ಕೊಡಲಾಗಿದೆ. ಇದನ್ನೂ ಓದಿ: ಮದುವೆ ಮನೆಯಲ್ಲಿ ವಿಷಪೂರಿತ ಆಹಾರ ಸೇವಿಸಿ 17 ಮಂದಿ ಅಸ್ವಸ್ಥ

    Live Tv
    [brid partner=56869869 player=32851 video=960834 autoplay=true]