Tag: ಹೃತಿಕ್ ರೋಷನ್

  • `ಕ್ರಿಶ್-4′ ಹೃತಿಕ್‌ಗೆ ನಾಯಕಿಯಾಗ್ತಾರಾ ಶ್ರೀವಲ್ಲಿ?

    `ಕ್ರಿಶ್-4′ ಹೃತಿಕ್‌ಗೆ ನಾಯಕಿಯಾಗ್ತಾರಾ ಶ್ರೀವಲ್ಲಿ?

    ಭಾರತೀಯ ಚಿತ್ರರಂಗದಲ್ಲಿ ಸದ್ಯ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ನಟಿ ರಶ್ಮಿಕಾ ಮಂದಣ್ಣಗೆ (Rashmika Mandanna) ಮತ್ತೆ ಬಾಲಿವುಡ್‌ನಿಂದ ಅವಕಾಶವೊಂದು ಅರಸಿ ಬಂದಿದೆ. ಸಲ್ಮಾನ್‌ಖಾನ್ ಜೊತೆ ನಟಿಸಿದ ಸಿಕಂದರ್ ಸಿನಿಮಾ ಮಕಾಡೆ ಮಲಗಿದ್ರೂ ಅವರಿಗೆ ಬಾಲಿವುಡ್‌ನಲ್ಲಿ ಅವಕಾಶಗಳು ಕಮ್ಮಿಯಾಗಿಲ್ಲ. ಅನಿಮಲ್ ಹಾಗೂ ಛಾವಾ ಸಿನಿಮಾದ ಬಿಗ್ ಸಕ್ಸಸ್ ರಶ್ಮಿಕಾಗೆ ಮತ್ತೊಂದು ಅವಕಾಶ ಕಲ್ಪಿಸಿದೆ.

    ರಶ್ಮಿಕಾ ಮಂದಣ್ಣ ನಟಿಸಿದ ದಕ್ಷಿಣ ಭಾರತದ ಪುಷ್ಪ ಹಾಗೂ ಪುಷ್ಪ-2 ಸಿನಿಮಾದ ಬ್ಲಾಕ್‌ಬಸ್ಟರ್ ಹಿಟ್ ಇತಿಹಾಸ ಸೇರಿದೆ. ಸದ್ಯ ಬಾಲಿವುಡ್‌ನಲ್ಲಿ ಕ್ರಿಶ್-4 ಸಿನಿಮಾದ ಸ್ಟಾರ್‌ಕ್ಯಾಸ್ಟ್ ಆಯ್ಕೆ ನಡೆಯುತ್ತಿದೆ. ಸಿನಿಮಾದ ನಾಯಕರಾಗಿ ಹೃತಿಕ್‌ ರೋಷನ್ (Hrithik Roshan) ಇದ್ರೆ ನಾಯಕಿಯಾಗಿ ರಶ್ಮಿಕಾಗೆ ಮಣೆಹಾಕುತ್ತಿದೆಯಂತೆ ಚಿತ್ರತಂಡ. ಅಂದಹಾಗೆ ಕ್ರಿಶ್-4 ಸಿನಿಮಾವನ್ನ ಗ್ರೀಕ್‌ಗಾಡ್ ಹೃತಿಕ್ ರೋಷನ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ.

    ಕ್ರಿಶ್ ಸರಣಿಗಳನ್ನ ಹೃತಿಕ್ ರೋಷನ್ ಅವರ ತಂದೆ ರಾಕೇಶ್ ರೋಷನ್ ನಿರ್ದೇಶನ ಮಾಡಿದ್ದರು. ಈ ಬಾರಿ ನಿರ್ದೇಶನದ ಜವಾಬ್ದಾರಿ ಕೂಡಾ ಹೃತಿಕ್ ರೋಷನ್ ಮೇಲೆ ಬಿದ್ದಿದೆ. ಪುಷ್ಪ ಸಿನಿಮಾ ಮೂಲಕ ಶ್ರೀವಲ್ಲಿಯಾಗಿ ಖ್ಯಾತಿ ಪಡೆದಿರೋ ರಶ್ಮಿಕಾ ಬಾಲಿವುಡ್‌ನಲ್ಲೂ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕ್ರಿಶ್, ಕ್ರಿಶ್-3 ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ ನಟಿಸಿದ್ದರು. ಸದ್ಯ ಪ್ರಿಯಾಂಕ ಚೋಪ್ರಾ ಹಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ರಶ್ಮಿಕಾ ಅವರನ್ನ ಆಯ್ಕೆ ಮಾಡಿಕೊಳ್ಳಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ ಎನ್ನಲಾಗ್ತಿದೆ.

  • ಹೃತಿಕ್ ನಟನೆಯ ಜೊತೆಗೆ ನಿರ್ದೇಶನ ಕ್ರಿಶ್-4 ಹೇಗಿರಲಿದೆ ಗೊತ್ತಾ..?

    ಹೃತಿಕ್ ನಟನೆಯ ಜೊತೆಗೆ ನಿರ್ದೇಶನ ಕ್ರಿಶ್-4 ಹೇಗಿರಲಿದೆ ಗೊತ್ತಾ..?

    ಕ್ರಿಶ್ ಸರಣಿಯ ಸಿನಿಮಾದಲ್ಲಿ ನಟ ಹೃತಿಕ್ ರೋಷನ್ (Hrithik Roshan) ನಟಿಸುತ್ತಾ ಬಂದಿದ್ದಾರೆ. ಅವರ ತಂದೆ ರಾಕೇಶ್ ರೋಷನ್ (Rakesh Roshan) ಸಿನಿಮಾಗೆ ನಿರ್ದೇಶನವನ್ನ ಮಾಡುತ್ತಿದ್ದರು. ಈ ಬಾರಿ ಸಿನಿಮಾದ ನಿರ್ದೇಶನದ ಜವಾಬ್ದಾರಿಯನ್ನ ಕೂಡಾ ನಟ ಹೃತಿಕ್ ರೋಷನ್ ನಿಭಾಯಿಸಲಿದ್ದಾರಂತೆ. ಇದಕ್ಕಾಗಿ ಭರ್ಜರಿಯಾಗಿ ತಯಾರಿಗಳು ನಡೆಯುತ್ತಿವೆ. ಈ ಸಿನಿಮಾ ಈ ವರ್ಷದಲ್ಲಿ ಪ್ರಾರಂಭವಾಗಿ 2027ರಲ್ಲಿ ತೆರೆಗೆ ಬರುವ ಪ್ರಯತ್ನಗಳು ನಡೆಯುತ್ತಿವೆಯಂತೆ.

    3 ಸಿರೀಸ್ ಸಿನಿಮಾಗಳ ನಿರ್ದೇಶನ ಮಾಡಿದ ರಾಕೇಶ್ ರೋಷನ್ ಆರೋಗ್ಯ ಸರಿಯಿಲ್ಲ. ಹೀಗಾಗಿ ಕ್ರಿಶ -4 (Krrish 4) ಸಿನಿಮಾದ ಜವಾಬ್ದಾರಿಯನ್ನ ಗ್ರೀಕ್ ಗಾಡ್ ಹೃತಿಕ್ ರೋಷನ್ ತೆಗೆದುಕೊಂಡಿದ್ದಾರೆ. ಇನ್ನು ಹೃತಿಕ್ ರೋಷನ್ ತಮ್ಮ ತಂದೆಯ ಜೊತೆ ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಂದೆಯನ್ನ ಮೀರಿಸುವಂತಹ ನಿರ್ದೇಶಕರಾಗುವ ಯಾವ ಸಂದೇವೂ ಇಲ್ಲ ಎನ್ನುವ ಮಾತುಗಳು ಬಾಲಿವುಡ್‍ನಲ್ಲಿ ಕೇಳಿ ಬರುತ್ತಿವೆ. ಇದನ್ನೂ ಓದಿ: ಸೂಪರ್ ಹಿಟ್ ಅವರಾಪನ್ ಚಿತ್ರದ ಸಿಕ್ವೇಲ್ – ಇಮ್ರಾನ್ ಹಶ್ಮಿಗೆ ದಿಶಾ ಪಟಾನಿ ನಾಯಕಿ

    ಹೃತಿಕ್ ರೋಷನ್ ತಂದೆ ರಾಕೇಶ್ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಸಿನಿಮಾದ ಪ್ಲ್ಯಾನ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಸಿನಿಮಾ ಶೂಟಿಂಗ್, ನಿರ್ದೇಶನಕ್ಕೆ ಹೃತಿಕ್ ಮಾಡಿಕೊಳ್ಳುತ್ತಿರುವ ತಯಾರಿ ಬಗ್ಗೆ ಮನಬಿಚ್ಚಿ ಮಾತಾಡಿದ್ದರು. ಸದ್ಯ ವಾರ್-2 ಸಿನಿಮಾ ರಿಲೀಸ್ ಆಗಿದ್ದು, ಇದೀಗ ಹೃತಿಕ್ ರೋಷನ್ ನಿರ್ದೇಶನಕ್ಕೆ ಕೈಹಾಕಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹುಕೋಟಿ ವೆಚ್ಚದಲ್ಲಿ ಸಿನಿಮಾ ತಯಾರಾಗುವ ಬಗ್ಗೆ ರಾಕೇಶ್ ರೋಷನ್ ಹೇಳಿದ್ದಾರೆ. ಇದನ್ನೂ ಓದಿ: ಕಾಂತಾರ ಚಾಪ್ಟರ್ 1 – ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ ಬಿಡುಗಡೆಗೆ ಸಿದ್ಧ

  • ಬಾಲಿವುಡ್‌ನಲ್ಲೂ ಜೂ.ಎನ್‌ಟಿಆರ್‌ಗೆ ಸೋಲು

    ಬಾಲಿವುಡ್‌ನಲ್ಲೂ ಜೂ.ಎನ್‌ಟಿಆರ್‌ಗೆ ಸೋಲು

    ಟಾಲಿವುಡ್‌ನ ಎಂಗ್ ಟೈಗರ್ ಎಂತಲೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ನಟ ಜೂ.ಎನ್‌ಟಿಆರ್ ಆರ್‌ಆರ್‌ಆರ್ ಸಿನಿಮಾದ ನಂತರ ದೇವರ ಸಿನಿಮಾದಲ್ಲಿ ನಟಿಸಿದ್ದರು. ದೇವರ ಸಿನಿಮಾ ಅಂದುಕೊಟ್ಟ ಮಟ್ಟಿಗೆ ಹಿಟ್ ಆಗಲಿಲ್ಲ. ಜೂ.ಎನ್‌ಟಿಆರ್ ಅಭಿಮಾನಿಗಳಿಗೆ ಇದರಿಂದ ನಿರಾಸೆ ಉಂಟಾಗಿತ್ತು. ಇದೀಗ ಮತ್ತೊಮ್ಮೆ ತಾರಕ್‌ಗೆ ಹಿನ್ನಡೆಯಾಗಿದೆ. ಜೂ.ಎನ್‌ಟಿಆರ್ ದೇವರ ಸಿನಿಮಾ ಬಳಿಕ ಬಾಲಿವುಡ್‌ನ ವಾರ್-2 ಸಿನಿಮಾದಲ್ಲಿ ನಟಿಸಿದ್ದರು. ವಾರ್-2 ಸಿನಿಮಾ ಕೂಡಾ ಬಂಡವಾಳ ಹೂಡಿದ ನಿರ್ಮಾಪಕನಿಗೆ ಸಂಕಷ್ಟ ತಂದೊಡ್ಡಿದೆ.

    ಹೃತಿಕ್ ರೋಷನ್ ಹಾಗೂ ಜೂ.ಎನ್‌ಟಿಆರ್ ನಟಿಸಿದ ವಾರ್-2 ಸಿನಿಮಾ ಇದೇ ಆ.14ಕ್ಕೆ ತೆರೆಕಂಡಿತ್ತು. ತೆರೆಕಂಡು ಒಂದು ವಾರವಾದರೂ ಸಿನಿಮಾ 200 ಕೋಟಿ ಗಳಿಕೆ ಕಂಡಿಲ್ಲ. 150 ಕೋಟಿ ಕಲೆಹಾಕುವಲ್ಲಿ ಸಿನಿಮಾ ತೆವಳುತ್ತ ಸಾಗುತ್ತಿದೆ. ಯಶ್‌ರಾಜ್ ಫಿಲಂಸ್ ಸಂಸ್ಥೆ ನಿರ್ಮಾಣ ಮಾಡಿದ್ದ ವಾರ್-2 ಕಲೆಕ್ಷನ್ ಸಿಂಗಲ್ ನಂಬರ್‌ಗೆ ಬಂದು ನಿಂತಿದೆ.‌ ಇದನ್ನೂ ಓದಿ: ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಸಿನಿಮಾ `45’ ರಿಲೀಸ್ ಡೇಟ್ ಫಿಕ್ಸ್

    ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತೆರೆಗೆ ಬಂದಿದ್ದ ದೇವರ ಸಿನಿಮಾ ಕೂಡಾ ಸೋತು ಸುಣ್ಣವಾಗಿತ್ತು. ಈ ವರ್ಷ ತೆರೆಕಂಡ ವಾರ್-2 ಕೂಡ ತಾರಕ್‌ಗೆ ಸಕ್ಸಸ್ ತಂದುಕೊಟ್ಟಿಲ್ಲ. ಒಂದು ಕಡೆ ವಾರ್-2 ಸಿನಿಮಾ ರಿಲೀಸ್ ಆದ ದಿನವೇ ರಜನಿಕಾಂತ್ ನಟನೆಯ ಕೂಲಿ ಸಿನಿಮಾ ಕೂಡ ತೆರೆಗೆ ಬಂದಿತ್ತು. ಇದು ಸಿನಿಮಾದ ಕಲೆಕ್ಷನ್‌ಗೆ ಮುಳುವಾಯ್ತು ಎಂದು ಕೆಲವರ ಅಭಿಪ್ರಾಯವಾದ್ರೆ, ಇನ್ನು ಕೆಲವರು ಸಿನಿಮಾ ಚೆನ್ನಾಗಿಲ್ಲ ಎಂದು ನೇರವಾಗಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗಿಳಿದ ತಾರಕ್‌ಗೆ ಸೋಲಿನ ಪಟ್ಟ ಸಿಕ್ಕಿದೆ.

  • ಅಮೆರಿಕದಲ್ಲಿ ವಾರ್-2 ಚಿತ್ರಕ್ಕೆ ಭಾರೀ  ಡಿಮ್ಯಾಂಡ್

    ಅಮೆರಿಕದಲ್ಲಿ ವಾರ್-2 ಚಿತ್ರಕ್ಕೆ ಭಾರೀ ಡಿಮ್ಯಾಂಡ್

    ಹೃತಿಕ್ ರೋಷನ್ (Hrithik Roshan), ಜೂ.ಎನ್‌ಟಿಆರ್ (Jr NTR) ಹಾಗೂ ಕಿಯಾರ ಅಡ್ವಾಣಿ (Kiara Advani) ಮುಖ್ಯ ಪಾತ್ರದಲ್ಲಿ ನಟಿಸಿರುವ ಹೈ-ವೊಲ್ಟೇಜ್ ವಾರ್-2 (War 2) ಸಿನಿಮಾ ಇದೇ ಆಗಸ್ಟ್‌ 14ರಂದು ವಿಶ್ವದಾದ್ಯಂತ ತೆರೆಗೆ ಬರಲು ರೆಡಿಯಾಗಿದೆ. ಈ ಸಿನಿಮಾ ಆಗಸ್ಟ್‌ 13 ರಂದು ಉತ್ತರ ಅಮೆರಿಕದಲ್ಲಿ ಪ್ರೀಮಿಯರ್ ಆಗಲಿವೆ. ಹೀಗಾಗಿ ಸಿನಿಮಾಗೆ ಈಗಿನಿಂದಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು, ಬರೋಬ್ಬರಿ 80 ಸಾವಿರ ಡಾಲರ್  ಟಿಕೆಟ್ ಬುಕ್ಕಿಂಗ್ ಆಗಿದೆ. ಇದನ್ನೂ ಓದಿ: ಕನ್ನಡ, ತೆಲುಗಿನಲ್ಲಿ ಏಕಕಾಲದಲ್ಲಿ ಚಿತ್ರೀಕರಣವಾಗಲಿದೆ ರಿಷಬ್ ಶೆಟ್ಟಿ ಹೊಸ ಚಿತ್ರ

    ಅಯಾನ್ ಮುಖರ್ಜಿ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ವಾರ್-2 ಟೀಸರ್ ಹಾಗೂ ಟ್ರೇಲರ್ ಮೂಲಕವೇ ಗಮನಸೆಳೆದಿದೆ. ಅಮೆರಿಕದಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಓಪನ್ ಆದ ಕೆಲವೇ ಗಂಟೆಗಳಲ್ಲಿ ಸಿನಿಮಾ 80 ಸಾವಿರ ಡಾಲರ್ ಟಿಕೆಟ್ ಬುಕ್ಕಿಂಗ್ ಆಗಿರೋದು ಸಿನಿಮಾ ಮೇಲಿನ ಕ್ರೇಜ್ ನ ಮತ್ತಷ್ಟು ಹೆಚ್ಚಿಸಿದೆ. ಜೂ.ಎನ್ ಟಿಆರ್ ಹಾಗೂ ಹೃತಿಕ್ ರೋಶನ್ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ತಿರುವ ಸಿನಿಮಾ ಇದಾಗಿದ್ದು, ಸಹಜವಾಗಿಯೇ ಸಿನಿಮಾ ಮೇಲೆ ನಿರೀಕ್ಷೆಗಳಿವೆ.

     

    ವಾರ್ – 2 ಸಿನಿಮಾ ಅಮೆರಿಕ ಹಾಗೂ ಕೆನಡಾದಲ್ಲಿ ಅತಿಹೆಚ್ಚು ಸ್ಕ್ರೀನ್ ಗಳನ್ನ ಪಡೆದುಕೊಂಡಿದೆ. ಅಲ್ಲದೇ ಸಿನಿಮಾ ರಿಲೀಸ್ ಗೆ ಎರಡು ವಾರ ಬಾಕಿ ಇರುವಾಗಲೇ ಬೇಡಿಕೆ ಹೆಚ್ಚಾಗಿದೆ. ವಾರ್ ಮೊದಲ ಭಾಗ ತೆರೆಕಂಡು ಪ್ರೇಕ್ಷಕರ ಮನಸೊರೆ ಮಾಡಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಮೊತ್ತವನ್ನೇ ಕಲೆ ಹಾಕಿತ್ತು. ಹೀಗಾಗಿ ಸಿನಿಮಾ ತೆರೆಗೆ ಬರೋದನ್ನೇ ಅಭಿಮಾನಿ ಬಳಗ ಕಾಯುತ್ತಿದೆ.

  • ವಾರ್-2 ಟ್ರೇಲರ್‌ ರಿಲೀಸ್‌ಗೆ ಮುಹೂರ್ತ ಫಿಕ್ಸ್

    ವಾರ್-2 ಟ್ರೇಲರ್‌ ರಿಲೀಸ್‌ಗೆ ಮುಹೂರ್ತ ಫಿಕ್ಸ್

    ಹುನಿರೀಕ್ಷಿತ ವಾರ್-2 (War-2) ಸಿನಿಮಾ ಟೀಸರ್‌ನಿಂದಲೇ (Teaser) ಕುತೂಹಲವನ್ನು ಹುಟ್ಟಿಸಿದೆ. ಆಗಸ್ಟ್‌ 14 ರಂದು ವಿಶ್ವದಾದ್ಯಂತ ತೆರೆಗೆ ಬರಲಿರುವ ಈ ಸಿನಿಮಾದ ಟ್ರೇಲರ್‌ ನೋಡುವ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಮೂಡಿದೆ. ಆ ಬಗ್ಗೆ ಯಶ್ ರಾಜ್ ಫಿಲಂಸ್ ದಿನಾಂಕ ಘೋಷಣೆ ಮಾಡಿದೆ. ಇದೇ ಜುಲೈ 25ರಂದು ಚಿತ್ರದ ಟ್ರೇಲರ್‌ ರಿಲೀಸ್ ಮಾಡಲು ಮುಹೂರ್ತ ಫಿಕ್ಸ್ ಮಾಡಿದೆ ನಿರ್ಮಾಣ ಸಂಸ್ಥೆ.

    ಜೂ.ಎನ್‌ಟಿಆರ್ (Jr NTR) ಹಾಗೂ ಹೃತಿಕ್ ರೋಷನ್ (Hrithik Roshan) ಇಂಡಸ್ಟ್ರಿಗೆ ಬಂದು 25 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಸಿನಿಮಾದ ಟ್ರೇಲರ್‌ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್‌ ಮಾಡಿದೆ. ಈ ಹಿಂದೆ ಜೂ.ಎನ್‌ಟಿಆರ್ ಅವರ ಹುಟ್ಟುಹಬ್ಬದ ದಿನ ಚಿತ್ರದ ಟೀಸರ್ ರಿಲೀಸ್ ಆಗಿತ್ತು. ಇದೀಗ ಜುಲೈ 25ಕ್ಕೆ ಟ್ರೇಲರ್‌ ರಿಲೀಸ್ ಆಗಲಿದೆ. ಇದನ್ನೂ ಓದಿ: ಪೆದ್ದಿ ಚಿತ್ರಕ್ಕಾಗಿ ದೇಹ ಹುರಿಗೊಳಿಸಿದ ರಾಮ್ ಚರಣ್ : ಮತ್ತೆ ಶೂಟಿಂಗ್ ಶುರು

     

    ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ ಅಯಾನ್ ಮುಖರ್ಜಿ. ವಿಶೇಷ ಅಂದ್ರೆ ಜೂ.ಎನ್‌ಟಿಆರ್ ಮೊದಲ ಬಾರಿಗೆ ಹಿಂದಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಹೀಗಾಗಿ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಈ ಮೊದಲು ವಾರ್ ಸಿನಿಮಾದಲ್ಲಿ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ಅಭಿನಯಿಸಿದ್ದರು.

  • ಜೂ.ಎನ್‌ಟಿಆರ್ ಕೈಯಲ್ಲಿ `ಗಾಡ್ ಆಫ್ ವಾರ್ ಮುರುಗ’ ಬುಕ್ ಯಾಕೆ?

    ಜೂ.ಎನ್‌ಟಿಆರ್ ಕೈಯಲ್ಲಿ `ಗಾಡ್ ಆಫ್ ವಾರ್ ಮುರುಗ’ ಬುಕ್ ಯಾಕೆ?

    ಟಾಲಿವುಡ್‌ನ (Tollywood) ನಟ ಜೂ.ಎನ್‌ಟಿಆರ್ (Jr NTR)  ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಒಪ್ಪಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ ಮೊದಲ ಸಿನಿಮಾ ಹೃತಿಕ್ ರೋಷನ್ ಜೊತೆ ವಾರ್-2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗ್ಲೇ ಮುಂಬೈಗೆ ತೆರಳಿ ವಾರ್-2 ಸಿನಿಮಾದ ಶೂಟಿಂಗ್ ಅನ್ನ ಕಂಪ್ಲೀಟ್ ಮಾಡಿಕೊಟ್ಟಿದ್ದಾರೆ. ಬಳಿಕ ಈಗ ಮೈಥಾಲಾಜಿಕಲ್ ಸಿನಿಮಾ ಮಾಡುವ ಕಡೆ ಎನ್‌ಟಿಆರ್ ಗಮನ ಹರಿಸಿದ್ದಾರೆ ಎನ್ನಲಾಗ್ತಿದೆ.

    ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡಲು ತಯಾರಿ ಮಾಡಿಕೊಂಡ ಪೌರಾಣಿಕ ಕಥೆಯಾಧಾರಿತ ಸಿನಿಮಾಗೆ ಜೂ.ಎನ್‌ಟಿಆರ್ ನಾಯಕ. ಈ ಮೊದ್ಲು ಈ ಸಿನಿಮಾದ ಕಥೆಯನ್ನ ಅಲ್ಲು ಅರ್ಜುನ್‌ಗೆ ಸಿದ್ಧ ಮಾಡಿಕೊಂಡಿದ್ದ ನಿರ್ದೇಶಕ, ಬದಲಾಯಿಸಿ ಜೂ.ಎನ್‌ಟಿಆರ್‌ಗೆ ಈ ಸಿನಿಮಾವನ್ನ ನಿರ್ದೇಶನ ಮಾಡುವ ತಯಾರಿ ಮಾಡಿಕೊಂಡಿದ್ದಾರೆ.

    ಈ ಸಿನಿಮಾಗೂ ಇತ್ತೀಚೆಗೆ ಜೂ.ಎನ್‌ಟಿಆರ್ ಕೈಯಲ್ಲಿ ಹಿಡಿದ ಬುಕ್‌ಗೂ ತಾಳೆಯಾಗುತ್ತಿದೆ. ಇಷ್ಟೂ ದಿನವಿದ್ದ ಊಹಾಪೋಹಗಳು ನಿಜವಾಗುತ್ತಿವೆ. ಜೂ.ಎನ್‌ಟಿಆರ್ ಮೈಥಾಲಾಜಿಕಲ್ ಸಿನಿಮಾ (Mythological Film) ಮಾಡೋದು 100% ಗ್ಯಾರಂಟಿ. ಹೌದು, ಇತ್ತೀಚೆಗೆ ಜೂ.ಎನ್‌ಟಿಆರ್ ಮುಂಬೈ ಏರ್‌ಪೋರ್ಟ್‌ನಲ್ಲಿ `ಮುರುಗ: ದಿ ಲಾರ್ಡ್ ಆಫ್ ವಾರ್, ದಿ ಗಾಡ್ ಆಫ್ ವಿಸ್‌ಡಮ್’ ಎಂಬ ಪುಸ್ತಕವನ್ನ ಕೈಯಲ್ಲಿ ಹಿಡಿದುಕೊಂಡಿದ್ದಾರೆ.

    ಜೂ.ಎನ್‌ಟಿಆರ್ ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಇಬ್ಬರ ಕಾಂಬಿನೇಷನ್‌ನ ಸಿನಿಮಾ ಗಾಡ್ ಆಫ್ ಮುರುಗ ಕುರಿತಾಗಿಯೇ ಇರುತ್ತಾ ಅನ್ನೋ ಪ್ರಶ್ನೆಗಳು ಉದ್ಭವವಾಗಿವೆ. ಇವೆಲ್ಲ ಪ್ರಶ್ನೆಗಳಿಗೆ, ಊಹಾಪೋಹಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಿದೆ.

  • ಹೃತಿಕ್ ರೋಷನ್‌ಗೆ ಪೃಥ್ವಿರಾಜ್ ಸುಕುಮಾರನ್ ಆ್ಯಕ್ಷನ್ ಕಟ್?

    ಹೃತಿಕ್ ರೋಷನ್‌ಗೆ ಪೃಥ್ವಿರಾಜ್ ಸುಕುಮಾರನ್ ಆ್ಯಕ್ಷನ್ ಕಟ್?

    ಬಾಲಿವುಡ್ ನಟ ಹೃತಿಕ್ ರೋಷನ್ (Hrithik Roshan) ಅವರಿಗೆ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ:ಕನ್ನಡ ಭಾಷೆ ಬಗ್ಗೆ ವಿವಾದಾತ್ಮಕ ಹೇಳಿಕೆ; ನೀವು ಕ್ಷಮೆ ಕೇಳಿದ್ರೆ ಕ್ಷಮಾ ಹಾಸನ್ ಆಗ್ತೀರಿ: ಹಂಸಲೇಖ

    ಕಾಂತಾರ, ಕೆಜಿಎಫ್ 2 ಸಿನಿಮಾ ನಿರ್ಮಿಸಿದ್ದ ಕನ್ನಡದ ಖ್ಯಾತ ಸಂಸ್ಥೆ ಹೊಂಬಾಳೆ ಫಿಲಂಸ್ (Hombale Films) ಜೊತೆ ಹೃತಿಕ್ ರೋಷನ್ ಕೈಜೋಡಿಸಿದ್ದಾರೆ. ಹೃತಿಕ್ ನಟಿಸಿರುವ ಈ ಚಿತ್ರಕ್ಕೆ ನಟ ಕಮ್ ನಿರ್ದೇಶಕ ಪೃಥ್ವಿರಾಜ್ (Prithviraj Sukumaran) ಅವರು ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದೆ. ತೆರೆಮರೆಯಲ್ಲಿ ಇದಕ್ಕಾಗಿ ಸಿದ್ಧತೆ ನಡೆಯುತ್ತಿದೆ ಎನ್ನಲಾಗಿದೆ. ಈಗಾಗಲೇ ಹೃತಿಕ್ ಜೊತೆ ಸಿನಿಮಾ ಮಾಡುವ ಬಗ್ಗೆ ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಘೋಷಿಸಿದೆ. ಅದರಂತೆ ಪೃಥ್ವಿರಾಜ್ ಈ ಸಿನಿಮಾಗೆ ನಿರ್ದೇಶನ ಮಾಡ್ತಾರಾ ಎಂದು ನಿರ್ಮಾಣ ಸಂಸ್ಥೆಯೇ ಅಫಿಷಿಯಲ್ ಆಗಿ ತಿಳಿಸಬೇಕಿದೆ. ಇದನ್ನೂ ಓದಿ:ಗೆಳೆಯನ ಜೊತೆ ರಂಜನಿ ರಾಘವನ್ ಲಾಂಗ್ ಡ್ರೈವ್

     

    View this post on Instagram

     

    A post shared by Hombale Films (@hombalefilms)

    ಹೊಂಬಾಳೆ ಸಂಸ್ಥೆಯ ‘ಸಲಾರ್’ ಸಿನಿಮಾದಲ್ಲಿ ಪೃಥ್ವಿರಾಜ್ ನಟಿಸಿದ್ದರು. ಈ ನಿರ್ಮಾಣ ಸಂಸ್ಥೆಯೊಂದಿಗೆ ನಟ ಉತ್ತಮ ಒಡನಾಟ ಹೊಂದಿದ್ದಾರೆ. ಹೀಗಾಗಿ ಹೃತಿಕ್‌ಗೆ ಪೃಥ್ವಿರಾಜ್ ನಿರ್ದೇಶನ ಮಾಡ್ತಾರೆ ಎಂದು ಸುದ್ದಿ ಹಬ್ಬಿದೆ.

    ಸದ್ಯ ಹೃತಿಕ್ ರೋಷನ್ ಅವರು ‘ವಾರ್-2’ ಸಿನಿಮಾ ರಿಲೀಸ್‌ಗೆ ಎದುರು ನೋಡ್ತಿದ್ದಾರೆ. ಆ.14ರಂದು ಸಿನಿಮಾ ರಿಲೀಸ್ ಆಗಲಿದೆ. ಆ ನಂತರ ಹೊಂಬಾಳೆ ಸಂಸ್ಥೆಯ ಸಿನಿಮಾದ ಶೂಟಿಂಗ್‌ನಲ್ಲಿ ಅವರು ಭಾಗಿಯಾಗಲಿದ್ದಾರೆ.

  • ಹೃತಿಕ್ ರೋಷನ್ ಜೊತೆ ಸಿನಿಮಾ- ‘ಹೊಂಬಾಳೆ ಫಿಲಂಸ್’ನಿಂದ ಗುಡ್ ನ್ಯೂಸ್

    ಹೃತಿಕ್ ರೋಷನ್ ಜೊತೆ ಸಿನಿಮಾ- ‘ಹೊಂಬಾಳೆ ಫಿಲಂಸ್’ನಿಂದ ಗುಡ್ ನ್ಯೂಸ್

    ಕಾಂತಾರ (Kantara), ಕೆಜಿಎಫ್ 2, ಸಲಾರ್ ಸಿನಿಮಾಗಳನ್ನು ನಿರ್ಮಿಸಿದ್ದ ಹೊಂಬಾಳೆ ಸಂಸ್ಥೆ ಕಡೆಯಿಂದ ಈಗ ಗುಡ್ ನ್ಯೂಸ್ ಸಿಕ್ಕಿದೆ. ಬಾಲಿವುಡ್‌ನ ಖ್ಯಾತ ನಟ ಹೃತಿಕ್ ರೋಷನ್ ಜೊತೆ ಸಿನಿಮಾ ಮಾಡೋದಾಗಿ ಹೊಂಬಾಳೆ ಫಿಲಂಸ್ ಘೋಷಿಸಿದೆ. ಇದನ್ನೂ ಓದಿ:ಸೋಷಿಯಲ್ ಮೀಡಿಯಾದಿಂದ ದೀಪಿಕಾ ದಾಸ್ ದಿಢೀರ್ ಬ್ರೇಕ್- ಫ್ಯಾನ್ಸ್‌ಗೆ ಶಾಕ್

    ಹೃತಿಕ್ ಅವರನ್ನು ಗ್ರೀಕ್ ಗಾಢ್ ಎಂದು ಕರೆಯುತ್ತಾರೆ. ಅವರು ಅನೇಕರ ಮನಗೆದ್ದಿದ್ದಾರೆ. ಹೃತಿಕ್ ರೋಷನ್ ಅವರು ಹೊಂಬಾಳೆ ಫಿಲಂಸ್ (Hombale Films) ಜೊತೆ ಕೈಜೋಡಿಸಿದ್ದಾರೆ. ನಾವು ಅವರನ್ನು ಸ್ವಾಗತಿಸಲು ಹೆಮ್ಮೆಪಡುತ್ತೇವೆ ಎಂದು ಹೊಂಬಾಳೆ ಸಂಸ್ಥೆ ಅನೌನ್ಸ್ ಮಾಡಿದೆ. ಸದ್ಯದಲ್ಲೇ ಈ ಚಿತ್ರದ ನಿರ್ದೇಶಕರ ಕುರಿತು ಹೆಚ್ಚಿನ ಮಾಹಿತಿಯನ್ನು ನಿರ್ಮಾಣ ಸಂಸ್ಥೆ ತಿಳಿಸಲಿದೆ. ಇದನ್ನೂ ಓದಿ:ಕಮಲ್ ಹಾಸನ್ ಕ್ಷಮೆ ಕೇಳದೇ ಹೋದ್ರೆ ಬ್ಯಾನ್ ಮಾಡಬೇಕು: ಶಿವರಾಜ್ ತಂಗಡಗಿ

    ರಾಜಕುಮಾರ, ಯುವರತ್ನ, ಕೆಜಿಎಫ್, ಕಾಂತಾರ ಮತ್ತು ಬಘೀರಾದಂತಹ ಯಶಸ್ವಿ ಚಿತ್ರಗಳ ಮೂಲಕ ಕರ್ನಾಟಕದಲ್ಲಿ ಭದ್ರ ನೆಲೆ ಕಂಡುಕೊಂಡಿರುವ ಹೊಂಬಾಳೆ ಫಿಲಂಸ್, ಯಾವಾಗಲೂ ಮೌಲ್ಯಯುತ ಕಥೆಗಳನ್ನು ಹೇಳುವಲ್ಲಿ ಮತ್ತು ಉತ್ತಮ ಮನರಂಜನೆ ನೀಡುವಲ್ಲಿ ಬದ್ಧವಾಗಿದೆ. ಈಗ ಹೃತಿಕ್ ರೋಷನ್ ಅವರಂತಹ ಪ್ರತಿಭಾವಂತ ನಟರೊಂದಿಗೆ ಕೈಜೋಡಿಸಿದ್ದು, ದೇಶದ ಗಡಿಗಳನ್ನು ಮೀರಿ ಪ್ರಪಂಚದಾದ್ಯಂತ ಕಥೆಗಳನ್ನು ತಲುಪಿಸುವತ್ತ ಹೊಸ ಹೆಜ್ಜೆ ಇಟ್ಟಿದೆ.

  • War 2 Teaser: ಹೃತಿಕ್ ರೋಷನ್ ಮುಂದೆ ವಿಲನ್ ಆಗಿ ಅಬ್ಬರಿಸಿ ಬೊಬ್ಬಿರಿದ ಜ್ಯೂ.ಎನ್‌ಟಿಆರ್

    War 2 Teaser: ಹೃತಿಕ್ ರೋಷನ್ ಮುಂದೆ ವಿಲನ್ ಆಗಿ ಅಬ್ಬರಿಸಿ ಬೊಬ್ಬಿರಿದ ಜ್ಯೂ.ಎನ್‌ಟಿಆರ್

    ತೆಲುಗಿನ ಸ್ಟಾರ್ ನಟ ಜ್ಯೂ.ಎನ್‌ಟಿಆರ್‌ಗೆ (Jr.NTR) ಇಂದು (ಮೇ 20) ಹುಟ್ಟುಹಬ್ಬದ ಹಿನ್ನೆಲೆ ‘ವಾರ್ 2’ (War 2) ಟೀಸರ್ ರಿಲೀಸ್ ಮಾಡಲಾಗಿದೆ. ಹೃತಿಕ್ ರೋಷನ್ (Hrithik Roshan) ಮುಂದೆ ಖಡಕ್ ವಿಲನ್ ಆಗಿ ತಾರಕ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇದನ್ನೂ ಓದಿ:ಲಿಫ್ಟ್‌ನಲ್ಲಿ ಹಠ ಹಿಡಿದು ದರ್ಶನ್ ನಂಬರ್ ಪಡೆದ ಪವಿತ್ರಾಗೌಡ

    ‘ವಾರ್ 2’ ಟೀಸರ್‌ನಲ್ಲಿ ಹೃತಿಕ್ ಮುಂದೆ ಜ್ಯೂ.ಎನ್‌ಟಿಆರ್ ಅಬ್ಬರಿಸಿದ್ದಾರೆ. ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿ ನನ್ನ ಕಣ್ಣುಗಳ ಯಾವತ್ತಿನಿಂದಲೋ ನಿನ್ನನ್ನು ಹುಡುಕಾಡುತ್ತಿದೆ ಎನ್ನುತ್ತಾ ತಾರಕ್ ಡೈಲಾಗ್ ಶುರುವಾಗಿದೆ. ನಿನಗೆ ನನ್ನ ಬಗ್ಗೆ ಗೊತ್ತಿಲ್ಲ. ಈಗ ಗೊತ್ತಾಗುತ್ತದೆ, ಗೆಟ್ ರೆಡಿ ಫಾರ್ ವಾರ್ ಎಂದು ತಾರಕ್ ಡೈಲಾಗ್ ಹೊಡೆದಿದ್ದಾರೆ. ಹೃತಿಕ್ ಮತ್ತು ತಾರಕ್ ಜುಗಲ್‌ಬಂದಿ ಮಸ್ತ್ ಆಗಿದೆ. ಇಬ್ಬರೂ ಪೈಪೋಟಿಯಲ್ಲಿ ಫೈಟಿಂಗ್ ಮಾಡಿದಂತಿದೆ. ಅಷ್ಟರ ಮಟ್ಟಿಗೆ ಆ್ಯಕ್ಷನ್ ಸೀಕ್ವೆನ್ಸ್ ಟೀಸರ್‌ನಲ್ಲಿ ತೋರಿಸಲಾಗಿದೆ. ಈ ಚಿತ್ರದ ಟೀಸರ್ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇದನ್ನೂ ಓದಿ:ವಿಚಾರಣೆ ಮುಗಿಸಿ ದರ್ಶನ್‌ ಕೈ ಹಿಡಿದುಕೊಂಡು ಹೊರ ಬಂದ ಪವಿತ್ರಾ ಗೌಡ

    ಗ್ಲ್ಯಾಮರ್‌ ಗೊಂಬೆಯಾಗಿ ಕಿಯಾರಾ ಅಡ್ವಾಣಿ (Kiara Adavni) ನಟಿಸಿದ್ದು, ಬಿಕಿನಿಯಲ್ಲಿ ಮಿಂಚಿದ್ದಾರೆ. ರಾ ಏಜೆಂಟ್ ಆಗಿರೋ ಹೃತಿಕ್‌ಗೆ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರವನ್ನು 150 ದಿನಗಳ ಕಾಲ 6 ದೇಶಗಳಲ್ಲಿ ‘ವಾರ್ 2’ ಶೂಟಿಂಗ್ ಮಾಡಲಾಗಿದೆ.

    ಯಶ್ ರಾಜ್ ಫಿಲ್ಮ್ ನಿರ್ಮಾಣದ ಈ ಸಿನಿಮಾವನ್ನು ‘ಬ್ರಹ್ಮಾಸ್ತ್ರ’ ಡೈರೆಕ್ಟರ್ ಅಯಾನ್ ಮುಖರ್ಜಿ ನಿರ್ದೇಶನ ಮಾಡಿದ್ದಾರೆ. ಆ.14ರಂದು ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ವಾರ್ 2 ರಿಲೀಸ್ ಆಗಲಿದೆ.

  • ಮತ್ತೆ ಹೃತಿಕ್ ರೋಷನ್‌ಗೆ ಜೊತೆಯಾದ ಪ್ರಿಯಾಂಕಾ ಚೋಪ್ರಾ

    ಮತ್ತೆ ಹೃತಿಕ್ ರೋಷನ್‌ಗೆ ಜೊತೆಯಾದ ಪ್ರಿಯಾಂಕಾ ಚೋಪ್ರಾ

    ಬಾಲಿವುಡ್ ನಟ ಹೃತಿಕ್ ರೋಷನ್ ‘ಕ್ರಿಶ್ 4’ (Krrish 4) ಸಿನಿಮಾ ಮೂಲಕ ಮೊದಲ ಬಾರಿಗೆ ನಿರ್ದೇಶನಕ್ಕಿಳಿದಿದ್ದಾರೆ. ಈ ಚಿತ್ರಕ್ಕಾಗಿ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ. ಇದರ ನಡುವೆ ಚಿತ್ರದ ಬಗ್ಗೆ ಕ್ರೇಜಿ ಅಪ್‌ಡೇಟ್‌ವೊಂದು ಸಿಕ್ಕಿದೆ. ಹೃತಿಕ್ ರೋಷನ್‌ಗೆ ನಾಯಕಿಯಾಗಿ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ (Priyanka Chopra) ಕಾಣಿಸಿಕೊಳ್ಳಲಿದ್ದಾರೆ.

    ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಿದ್ದ ನಟಿ ಬಾಲಿವುಡ್ ಸಿನಿಮಾದಲ್ಲಿ ಯಾವಾಗ ನಟಿಸ್ತಾರೆ ಎಂಬುದನ್ನು ಎದುರು ನೋಡುತ್ತಿದ್ದ ಫ್ಯಾನ್ಸ್‌ಗೆ ಸಿಹಿಸುದ್ದಿ ಸಿಕ್ಕಿದೆ. ‘ಕ್ರಿಶ್ 4’ನಲ್ಲಿ ಮುಖ್ಯ ಪಾತ್ರದಲ್ಲಿ ಹೃತಿಕ್ (Hrithik Roshan) ಜೊತೆ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಳ್ಳಲಿದ್ದಾರೆ. ಸೂಪರ್ ಹೀರೋ ಕಾನ್ಸೆಪ್ಟ್‌ನ ಈ ಸಿನಿಮಾ ಈಗಾಗಲೇ 3 ಸಿರೀಸ್‌ನಲ್ಲಿ ಸಕ್ಸಸ್ ಕಂಡಿದೆ. ‘ಕ್ರಿಶ್ 4’ ಸಿನಿಮಾ ಹೇಗಿರಲಿದೆ ಅನ್ನೋ ಕ್ಯೂರಿಯಾಸಿಟಿ ಫ್ಯಾನ್ಸ್‌ಗೆ ಜಾಸ್ತಿಯಾಗಿದೆ. ಇದನ್ನೂ ಓದಿ: ‘ಅಯ್ಯನ ಮನೆ’ ಕಥೆ ಹೇಳಲು ಬಂದ ‘ದಿಯಾ’ ನಟಿ- ರಮೇಶ್ ಇಂದಿರಾ ಆ್ಯಕ್ಷನ್ ಕಟ್

    ಈ ಹಿಂದೆ ‘ಕ್ರಿಶ್’ ಹಾಗೂ ‘ಕ್ರಿಶ್ 3’ ಸರಣಿಯಲ್ಲಿ ಹೃತಿಕ್‌ಗೆ ಜೊತೆಯಾಗಿ ಪ್ರಿಯಾಂಕಾ ನಟಿಸಿದ್ದರು. ಈಗ ಹಲವು ವರ್ಷಗಳ ಬಳಿಕ ಮತ್ತೆ ‘ಕ್ರಿಶ್ 4’ಗೆ ನಟಿ ಸಾಥ್ ನೀಡುತ್ತಿದ್ದಾರೆ. ಇದನ್ನೂ ಓದಿ:ಚಂದನ್ ಶೆಟ್ಟಿ ಜೊತೆಗಿನ ‘ಮುದ್ದು ರಾಕ್ಷಸಿ’ ಶೂಟಿಂಗ್ ಮುಗಿಸಿದ ನಿವೇದಿತಾ ಗೌಡ

    ಸದ್ಯ ರಾಜಮೌಳಿ ನಿರ್ದೇಶನದ ಹಾಗೂ ಮಹೇಶ್ ಬಾಬು ನಟನೆಯ ಹೊಸ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿ ಅವರು 30 ಕೋಟಿ ರೂ. ಸಂಭಾವನೆ ಚಾರ್ಜ್ ಮಾಡಿದ್ದಾರೆ.