Tag: ಹೂಸ್ಟನ್

  • ಭೂಮಿಗೆ ಮರಳಿದ ಶುಕ್ಲಾಗೆ ಪತ್ನಿ, ಪುತ್ರನಿಂದ ಅಪ್ಪುಗೆಯ ಸ್ವಾಗತ

    ಭೂಮಿಗೆ ಮರಳಿದ ಶುಕ್ಲಾಗೆ ಪತ್ನಿ, ಪುತ್ರನಿಂದ ಅಪ್ಪುಗೆಯ ಸ್ವಾಗತ

    ನ್ಯೂಯಾರ್ಕ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ISS) ಯಶಸ್ವಿಯಾಗಿ ತಲುಪಿ ಇತಿಹಾಸ ಸೃಷ್ಟಿಸಿ ಭೂಮಿಗೆ ಮರಳಿರುವ ಶುಭಾಂಶು ಶುಕ್ಲಾ (Shubanshu Shukla) ಅವರನ್ನು ಪತ್ನಿ ಹಾಗೂ ಪುತ್ರ ಅಪ್ಪುಗೆಯ ಮೂಲಕ ಸ್ವಾಗತ ಕೋರಿದ್ದಾರೆ.

    18 ದಿನಗಳ ಬಾಹ್ಯಾಕಾಶ ವಾಸದ ನಂತರ ಟೆಕ್ಸಾಸ್‌ನ (Texas) ಹೂಸ್ಟನ್‌ನಲ್ಲಿ (Houston) ಶುಭಾಂಶು ಶುಕ್ಲಾ ಅವರು ತಮ್ಮ ಪತ್ನಿ ಕಾಮ್ನಾ (Kamna) ಹಾಗೂ ಪುತ್ರ ಕಿಯಾಶ್ (Kiyas) ಅವರನ್ನು ಭೇಟಿಯಾದರು. ಎರಡು ತಿಂಗಳ ಬಳಿಕ ಶುಕ್ಲಾ ಅವರು ತಮ್ಮ ಕುಟುಂಬಸ್ಥರನ್ನು ಭೇಟಿಯಾಗಿದ್ದು, ಈ ಕುರಿತು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಕಿರಣ್ ರಾಜ್‌ಗೆ ನಾಯಕಿಯಾದ ಉಡಾಳ ಹುಡುಗಿ ಹೃತಿಕಾ

    ಪೋಸ್ಟ್‌ನಲ್ಲಿ, ಇಷ್ಟು ದಿನಗಳ ಬಳಿಕ ಭೂಮಿಗೆ ಹಿಂತಿರುಗಿ ನನ್ನ ಕುಟುಂಬವನ್ನು ಬಿಗಿದಪ್ಪಿಕೊಂಡಿದ್ದು, ನನ್ನ ಮನೆಯನ್ನೇ ನೋಡಿದಂತೆ ಭಾಸವಾಯಿತು. ಬಾಹ್ಯಾಕಾಶದಲ್ಲಿನ ಹಾರಾಟ ಎಷ್ಟು ಅದ್ಭುತವೋ, ಹಾಗೆಯೇ ಬಹಳ ದಿನಗಳ ನಂತರ ನಮ್ಮ ಪ್ರೀತಿ ಪಾತ್ರರನ್ನು ನೋಡುವುದು ಅಷ್ಟೇ ಅದ್ಭುತ. ಬಹುದಿನಗಳ ಬಳಿಕ ನಿಮ್ಮ ಪ್ರೀತಿಪಾತ್ರರನ್ನು ನೋಡಿದಾಗಲೇ ಅವರು ನಿಮಗೆಷ್ಟು ಮುಖ್ಯ ಎನ್ನುವುದು ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ.

    ಸೋಮವಾರ (ಜು.14) ಭಾರತೀಯ ಕಾಲಮಾನ ಮಧ್ಯಾಹ್ನ 2:30ಕ್ಕೆ ಡ್ರ್ಯಾಗನ್‌ ಕ್ಯಾಪ್ಸುಲ್ ಪ್ರವೇಶಿಸಿ, ಸಂಜೆ 4:35ಕ್ಕೆ ಅನ್‌ಡಾಕಿಂಗ್ (ಬೇರ್ಪಡಿಸುವಿಕೆ) ಪ್ರಕ್ರಿಯೆ ಯಶಸ್ವಿಯಾಗಿತ್ತು. ಒಟ್ಟು 22.5 ಗಂಟೆಗಳ ಪ್ರಯಾಣ ಬಳಿಕ ಮಂಗಳವಾರ (ಜು.15) ) ಭಾರತೀಯ ಕಾಲಮಾನ ಮಧ್ಯಾಹ್ನ 3ಕ್ಕೆ ಪೆಸಿಫಿಕ್ ಮಹಾಸಾಗರದ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ 4 ಪ್ಯಾರಾಚೂಟ್‌ಗಳು ಕ್ಯಾಪ್ಸುಲ್ ವೇಗವನ್ನು ತಗ್ಗಿಸಿತ್ತು. ಯಶಸ್ವಿ ಸ್ಪ್ಯಾಷ್‌ ಡೌನ್ ಬಳಿಕ ಸುರಕ್ಷಿತವಾಗಿ ಶುಭಾಂಶು ಶುಕ್ಲಾ ಹಾಗೂ ಇನ್ನುಳಿದ ಮೂವರು ಗಗನಯಾತ್ರಿಗಳು ಭೂಮಿಗೆ ಬಂದಿಳಿದಿದ್ದಾರೆ.

     

    View this post on Instagram

     

    A post shared by Shubhanshu Shukla (@gagan.shux)

    ನಾಲ್ವರು ಗಗನಯಾತ್ರಿಗಳು ಭೂಮಿಗೆ ಮರಳುವ ಮುನ್ನ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಭಾವನಾತ್ಮಕ ಬೀಳ್ಕೊಡುಗೆ ಸಿಕ್ಕಿತು. ಶುಭಾಂಶು ಶುಕ್ಲಾ ಸಾರೇ ಜಹಾನ್ ಸೆ ಅಚ್ಚಾ ಎಂದು ಬಾಹ್ಯಾಕಾಶದಲ್ಲಿ ಭಾರತವನ್ನು ಭಾವನಾತ್ಮಕವಾಗಿ ಹೊಗಳಿದರು. ಈ ವೇಳೆ ರಾಕೇಶ್ ಶರ್ಮಾ 41 ವರ್ಷಗಳ ಹಿಂದೆ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಸಮಯವನ್ನು ನೆನಪಿಸಿಕೊಂಡು, ಅಲ್ಲಿಂದ ಭಾರತ ಹೇಗೆ ಕಾಣುತ್ತದೆ ಎಂದು ವಿವರಿಸಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಭಾರತದ ಧ್ವಜ ಹಾರಿಸುವ ಮೂಲಕ ಭಾರತಕ್ಕೆ ಹೆಮ್ಮೆ ತಂದ ಶುಭಾಂಶು ಶುಕ್ಲಾ ಸ್ವಾಗತಿಸಲು ಭಾರತೀಯರು ಉತ್ಸುಕರಾಗಿದ್ದಾರೆ.ಇದನ್ನೂ ಓದಿ: Uttara Kannada | ಮೊಬೈಲ್ ನೋಡಬೇಡ ಎಂದಿದ್ದಕ್ಕೆ 13ರ ಬಾಲಕ ಆತ್ಮಹತ್ಯೆ

  • ಅಮೆರಿಕದ ಹೂಸ್ಟನ್‌ನಲ್ಲಿ ಗುಂಡಿನ ದಾಳಿ – 6 ಮಂದಿ ದುರ್ಮರಣ

    ಅಮೆರಿಕದ ಹೂಸ್ಟನ್‌ನಲ್ಲಿ ಗುಂಡಿನ ದಾಳಿ – 6 ಮಂದಿ ದುರ್ಮರಣ

    ವಾಷಿಂಗ್ಟನ್: ಭಾನುವಾರ ಅಮೆರಿಕದ ಹೂಸ್ಟನ್‌ನಲ್ಲಿರುವ ಡೆಟ್ರಾಯಿಟ್ ನಗರದಲ್ಲಿ 2 ಪ್ರತ್ಯೇಕ ಗುಂಡಿನ ದಾಳಿಗಳಲ್ಲಿ 6 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

    ಮೊದಲ ಘಟನೆಯಲ್ಲಿ ಒಟ್ಟು ನಾಲ್ವರ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಅದರಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 3 ಮಂದಿ ಮೃತಪಟ್ಟಿದ್ದಾರೆ. ನಾಲ್ಕನೇ ವ್ಯಕ್ತಿ ಸದ್ಯ ಬದುಕುಳಿದಿದ್ದು, ಆತನಿಗೆ ತೀವ್ರವಾದ ಗಾಯಗಳಾಗಿವೆ ಎಂದು ವರದಿಗಳು ತಿಳಿಸಿವೆ.

    ಘಟನೆಯ ಬಳಿಕ ಡೆಟ್ರಾಯಿಟ್ ನಗರದಲ್ಲಿ ಪೊಲೀಸರು ನಾಲ್ವರ ಮೇಲೆ ಗುಂಡು ಹಾರಿಸಿದ ಆರೋಪದ ಮೇಲೆ ಶಂಕಿತ ವ್ಯಕ್ತಿಯನ್ನು ಬಂಧಿಸಲು ಶೋಧ ಕಾರ್ಯ ಆರಂಭಿಸಿದ್ದಾರೆ. ಶಂಕಿತ ವ್ಯಕ್ತಿಯ ಬಗ್ಗೆ ತಿಳಿದವರು ಮಾಹಿತಿ ನೀಡಬೇಕೆಂದು ಸ್ಥಳೀಯರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆರೋಪಿ ಮತ್ತೆ ಗುಂಡಿನ ದಾಳಿ ನಡೆಸಲು ಪ್ರಯತ್ನಿಸುವ ಸಾಧ್ಯತೆ ಇರುವುದರಿಂದ ಪ್ರದೇಶದಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ. ಇದನ್ನೂ ಓದಿ: ಆದಾಯಕ್ಕಾಗಿ ಕಮ್ಯುನಿಸ್ಟ್ ಸರ್ಕಾರ ಹಿಂದೂ ದೇಗುಲವನ್ನು ವಶಪಡಿಸಿಕೊಳ್ತಿದೆ: ಸುಪ್ರಿಂಕೋರ್ಟ್ ಮಾಜಿ ಜಡ್ಜ್ ವೀಡಿಯೋ ವೈರಲ್

    ಇನ್ನೊಂದು ಘಟನೆಯಲ್ಲಿ ಬಂದೂಕುಧಾರಿಗಳು ಸ್ಥಳೀಯ ಮನೆಗಳಿಗೆ ಬೆಂಕಿ ಹಚ್ಚಿದ್ದು, ನಿವಾಸಿಗಳು ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳಲು ಮನೆಯಿಂದ ಹೊರ ಬಂದ ಸಂದರ್ಭದಲ್ಲಿ ಗುಂಡು ಹಾರಿಸಿ ಮೂವರನ್ನು ಕೊಂದಿದ್ದಾರೆ ಎಂದು ವರದಿಯಾಗಿದೆ. ಬಳಿಕ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.

    ಈ ನಡುವೆ ರಾಜಧಾನಿ ವಾಷಿಂಗ್ಟನ್‌ನಲ್ಲೂ ಎನ್‌ಎಫ್‌ಎಲ್ ಫುಟ್‌ಬಾಲ್ ಆಟಗಾರನ ಮೇಲೆ ಗುಂಡು ಹಾರಿಸಿರುವುದಾಗಿ ವರದಿಗಳು ತಿಳಿಸಿವೆ. ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಮಠದಲ್ಲಿಲ್ಲ ಮುರುಘಾ ಶ್ರೀಗಳು- ಮೌನಕ್ಕೆ ಜಾರಿದ ಭಕ್ತರು

    Live Tv
    [brid partner=56869869 player=32851 video=960834 autoplay=true]

  • 13 ವರ್ಷದ ಬಾಲಕ ಟ್ರಕ್ ಓಡಿಸುತ್ತಾ ವ್ಯಾನ್‍ಗೆ ಡಿಕ್ಕಿ – 9 ಮಂದಿ ಬಲಿ, ಹೊತ್ತಿ ಉರಿದ ವಾಹನ

    13 ವರ್ಷದ ಬಾಲಕ ಟ್ರಕ್ ಓಡಿಸುತ್ತಾ ವ್ಯಾನ್‍ಗೆ ಡಿಕ್ಕಿ – 9 ಮಂದಿ ಬಲಿ, ಹೊತ್ತಿ ಉರಿದ ವಾಹನ

    ಹೂಸ್ಟನ್: 13 ವರ್ಷದ ಬಾಲಕನೊಬ್ಬ ಪಿಕಪ್ ಟ್ರಕ್ ಓಡಿಸುತ್ತ ವ್ಯಾನ್‍ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಒಂಬತ್ತು ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಪಶ್ಚಿಮ ಟೆಕ್ಸಾಸ್‍ನಲ್ಲಿ ನಡೆದಿದೆ.

    ನ್ಯೂ ಮೆಕ್ಸಿಕೋ ಮೂಲದ ಯೂನಿವರ್ಸಿಟಿ ಆಫ್ ಸೌತ್‍ವೆಸ್ಟ್ ಗಾಲ್ಫ್ ತಂಡದ ಆರು ಸದಸ್ಯರು ತಮ್ಮ ಶಿಕ್ಷಕರೊಂದಿಗೆ ವ್ಯಾನ್‍ನಲ್ಲಿ ರಾತ್ರಿ ತಮ್ಮ ಮನೆಗಳಿಗೆ ಹೋಗುತ್ತಿದ್ದರು. ಅದೇ ರಸ್ತೆಯಲ್ಲಿ 13 ವರ್ಷದ ಬಾಲಕ ತನ್ನ ತಂದೆಯೊಂದಿಗೆ ಟ್ರಕ್ ಓಡಿಸುತ್ತ ವೇಗವಾಗಿ ಬಂದಿದ್ದಾನೆ. ನಿಯಂತ್ರಣ ಸಿಗದೇ ವ್ಯಾನ್‍ಗೆ ಬಾಲಕ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ವ್ಯಾನ್‍ನಲ್ಲಿದ್ದ ಸುಮಾರು 9 ಜನರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಉಕ್ರೇನಿಯನ್ನರು ಕೆನಡಾದಲ್ಲಿ 3 ವರ್ಷ ಉಳಿಯಬಹುದು

    13-Year-Old Drove Truck In Texas Collision That Killed 9, Federal Officials Say

    ಟೆಕ್ಸಾಸ್‍ನ ಆಂಡ್ರ್ಯೂಸ್ ಬಳಿ ಸಂಭವಿಸಿದ ಈ ಅಪಘಾತದಲ್ಲಿ ಪಿಕಪ್ ಟ್ರಕ್‍ನಲ್ಲಿ ಸವಾರಿ ಮಾಡುತ್ತಿದ್ದ 13 ವರ್ಷದ ಹುಡುಗ ಮತ್ತು ಅವನ 38 ವರ್ಷದ ತಂದೆ ಕೂಡ ಸಾವನ್ನಪ್ಪಿದ್ದಾರೆ.

    ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ ಉಪಾಧ್ಯಕ್ಷ ಬ್ರೂಸ್ ಲ್ಯಾಂಡ್ಸ್‍ಬರ್ಗ್ ಈ ಕುರಿತು ಮಾಹಿತಿ ನೀಡಿದ್ದು, ಅಪಘಾತದ ಸಮಯದಲ್ಲಿ ಅಪ್ರಾಪ್ತ ವಯಸ್ಕನು ಪಿಕಪ್ ಟ್ರಕ್‍ನ ಚಕ್ರದ ಹಿಂದೆ ಸಿಕ್ಕಿಕೊಂಡಿದ್ದ. ಅಲ್ಲದೇ 13 ವರ್ಷದ ಬಾಲಕ ಟೆಕ್ಸಾಸ್ ಕಾನೂನನ್ನು ಉಲ್ಲಂಘಿಸುತ್ತಿದ್ದನು. ಟೆಕ್ಸಾಸ್ ನಿವಾಸಿಯು 15 ವರ್ಷ ಕಳೆದ ಮೇಲೆ ಪರವಾನಗಿಯನ್ನು ಪಡೆಯಬಹುದು. 21 ವರ್ಷಕ್ಕಿಂತ ಮೇಲ್ಪಟ್ಟ ನಂತರ ವಾಹನ ಚಾಲನೆ ಮಾಡಲು ಅನುವು ಮಾಡಿಕೊಡಲಾಗುತ್ತೆ. ಆದರೆ 13 ವರ್ಷದ ಬಾಲಕ ಕಾನೂನನ್ನು ಉಲ್ಲಂಘಿಸುತ್ತಿದ್ದಾನೆ ಎಂದು ವಿವರಿಸಿದರು.

    ವರದಿಗಳ ಪ್ರಕಾರ ಎರಡೂ ವಾಹನಗಳು ಹೆಚ್ಚು ವೇಗವಾಗಿ ಬರುತ್ತಿದ್ದು, ನಿಯಂತ್ರಣ ಸಿಗದೇ ಈ ಭಾರೀ ಅಪಘಾತ ನಡೆದಿದೆ. ಘಟನೆಯಲ್ಲಿ 9 ಜನರು ಸಾವನ್ನಪ್ಪಿದ್ದು, ಇಬ್ಬರು ವಿದ್ಯಾರ್ಥಿಗಳು, ಇಬ್ಬರೂ ಕೆನಡಿಯನ್ನರು ಗಂಭೀರ ಸ್ಥಿತಿಯಲ್ಲಿ ಇದ್ದಾರೆ. ಪ್ರಸ್ತುತ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ. ಇದನ್ನೂ ಓದಿ: ಮೊದಲ ದಿನವೇ 30 ಕೋಟಿ ಕಲೆಕ್ಷನ್ – 100 ಕೋಟಿ ಕ್ಲಬ್ ಸೇರುತ್ತಾ ಜೇಮ್ಸ್..?

  • ಮೋದಿ ಸರಳತೆಗೆ ನೆಟ್ಟಿಗರು ಫಿದಾ- ವಿಡಿಯೋ ವೈರಲ್

    ಮೋದಿ ಸರಳತೆಗೆ ನೆಟ್ಟಿಗರು ಫಿದಾ- ವಿಡಿಯೋ ವೈರಲ್

    ಹ್ಯೂಸ್ಟನ್‍: ಪ್ರಧಾನಿ ನರೇಂದ್ರ ಮೋದಿ ಅಮೆರಿಕದಲ್ಲಿ ನಡೆಯುತ್ತಿರುವ ಬಹು ನಿರೀಕ್ಷಿತ ‘ಹೌಡಿ ಮೋದಿ’ ಕಾರ್ಯಕ್ರಮಕ್ಕೆ ತೆರಳಿದ್ದು, ಅಲ್ಲಿಯೂ ಸಹ ಸರಳತೆಯ ಮೂಲಕ ಜನರ ಹೃದಯವನ್ನು ಗೆದ್ದಿದ್ದಾರೆ.

    ಅಮೆರಿಕದ ಹ್ಯೂಸ್ಟನ್‍ನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ವಿಮಾನ ನಿಲ್ದಾಣದಲ್ಲಿ ಮೋದಿಯವರನ್ನು ಸ್ವಾಗತಿಸಲು ಭಾರತೀಯರು ಹಾಗೂ ಯುಎಸ್‍ನ ಗಣ್ಯರು ಆಗಮಿಸಿದ್ದರು. ಸ್ವಾಗತ ಕೋರುವ ವೇಳೆ ಪುಷ್ಪ ಗುಚ್ಛವನ್ನು ನೀಡಿದ್ದಾರೆ. ಈ ವೇಳೆ ಕೆಲ ಹೂವುಗಳು ಕೆಳಗೆ ಬಿದ್ದಿವೆ. ಆಗ ಪ್ರಧಾನಿ ನರೇಂದ್ರ ಮೋದಿ ತಾವೇ ಎತ್ತಿಕೊಂಡು ತಮ್ಮ ಭದ್ರತಾ ಸಿಬ್ಬಂದಿಗೆ ನೀಡುವ ಮೂಲಕ ಸರಳತೆಯನ್ನು ಮೆರೆದಿದ್ದಾರೆ.

    ಪ್ರತಿಷ್ಠಿತ ಹೌಡಿ ಮೋದಿ ಕಾರ್ಯಕ್ರಮಕ್ಕೆ ಸ್ವಾಗತಿಸಲು ವಾಣಿಜ್ಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ನಿರ್ದೇಶಕ ಕ್ರಿಸ್ಟೋಫರ್ ಓಲ್ಸನ್, ಭಾರತದ ಯುಎಸ್ ರಾಯಭಾರಿ ಕೆನ್ನೆತ್ ಜಸ್ಟರ್ ಮತ್ತು ಅಮೆರಿಕದ ಭಾರತೀಯ ರಾಯಭಾರಿ ಹರ್ಷ್ ವರ್ಧನ್ ಶ್ರೀಂಗ್ಲಾ ಅವರು ಆಗಮಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ಬರಮಾಡಿಕೊಂಡರು.

    ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿಮಾನದಿಂದ ಹೊರಗೆ ಬರುತ್ತಿದ್ದಂತೆ ಅಧಿಕಾರಿಗಳತ್ತ ನಡೆದು ಅವರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು. ಆಗ ಅವರಿಗೆ ಅಧಿಕಾರಿಗಳು ಹಾಗೂ ಗಣ್ಯರು ಪುಷ್ಪ ಗುಚ್ಛವನ್ನು ನೀಡುತ್ತಾರೆ. ಆಗ ಕೆಲವು ಹೂವುಗಳು ಕಾರ್ಪೆಟ್ ಮೇಲೆ ಬೀಳುತ್ತವೆ. ತಕ್ಷಣವೇ ಅವುಗಳನ್ನು ಎತ್ತಿಕೊಂಡು ಪ್ರಧಾನಿ ಮೋದಿ ತಮ್ಮ ಭದ್ರತಾ ಸಿಬ್ಬಂದಿಗೆ ನೀಡುತ್ತಾರೆ. ಈ ಮೂಲಕ ಸಣ್ಣ ವಿಷಯಗಳಿಗೂ ಪ್ರಧಾನಿ ಮೋದಿ ಗೌರವ ಕೊಡುತ್ತಾರೆ, ಚಿತ್ತ ಹರಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಈ ವಿಡಿಯೋವನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಳಗೆ ಬಿದ್ದ ಹೂವನ್ನು ಸ್ವಯಂ ಪ್ರೇರಿತವಾಗಿ ಮೇಲೆತ್ತಿ ಅದನ್ನು ತಮ್ಮ ಭದ್ರತಾ ಸಿಬ್ಬಂದಿಗೆ ನೀಡುತ್ತಾರೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಸರಳತೆ ಹಾಗೂ ಸೂಕ್ಷ್ಮತೆಯನ್ನು ತೋರಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

    ಶುಭವಾಗಲಿ ನರೇಂದ್ರ ಮೋದಿ ಜೀ, ನೀವು ಎಚ್ಚರಿಕೆಯಿಂದ ಗಮಿನಿಸಿದ್ದೀರಿ, ಪುಷ್ಪಗುಚ್ಛದಿಂದ ಬಿದ್ದ ಹೂವನ್ನು ಎತ್ತಿಕೊಂಡಿದ್ದೀರಿ. ಈ ಮೂಲಕ ನೀರು ಸಣ್ಣ ವಿಷಯಗಳನ್ನೂ ಗಮನಿಸುತ್ತೀರಿ, ಅಲ್ಲದೆ ಅದನ್ನು ಎತ್ತಿ ಕೊಡುವ ಮೂಲಕ ಸರಳತೆಯನ್ನು ಮೆರೆದಿದ್ದೀರಿ. ಇದು ಮಹಾನ್ ನಾಯಕನ ಸರಳತೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪ್ರಧಾನಿ ಮೋದಿಯವರು ಒಂದು ವಾರದವರೆಗೆ ಅಮೆರಿಕ ಪ್ರವಾಸಕ್ಕೆ ತೆರಳಿದ್ದು, ಎರಡನೇ ಬಾರಿ ಗೆದ್ದ ನಂತರ ಇದು ಮೊದಲ ಭೇಟಿಯಾಗಿದೆ. ಇಂದು ಸಂಜೆ ಹ್ಯೂಸ್ಟನ್‍ನಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುತ್ತಿರುವ ‘ಹೌಡಿ ಮೋದಿ’ ಕಾರ್ಯಕ್ರಮಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮೋದಿ ವೇದಿಕೆ ಹಂಚಿಕೊಳ್ಳಲಿದ್ದಾರೆ.