Tag: ಹೂಸು

  • ವಿಶ್ವದಲ್ಲೇ ಫಸ್ಟ್‌ – ಹಸುಗಳ ತೇಗು, ಹೂಸಿಗೂ ತೆರಿಗೆ ವಿಧಿಸಿದ ನ್ಯೂಜಿಲೆಂಡ್‌!

    ವಿಶ್ವದಲ್ಲೇ ಫಸ್ಟ್‌ – ಹಸುಗಳ ತೇಗು, ಹೂಸಿಗೂ ತೆರಿಗೆ ವಿಧಿಸಿದ ನ್ಯೂಜಿಲೆಂಡ್‌!

    ಕ್ರೈಸ್ಟ್‌ ಚರ್ಚ್: ಹಸುಗಳು ತೇಗಿದರೆ(Burps) ಹಾಗೂ ಹೂಸು(Farts) ಬಿಟ್ಟರೆ ನ್ಯೂಜಿಲೆಂಡ್‌(New Zealand) ರೈತರು ಇನ್ನು ಮುಂದೆ ತೆರಿಗೆ(Tax) ಪಾವತಿಸಬೇಕು.

    ಹೌದು. ವಿಶ್ವದಲ್ಲೇ ಮೊದಲ ಬಾರಿಗೆ ನ್ಯೂಜಿಲೆಂಡ್‌ ಸರ್ಕಾರ ಹಸುಗಳು ತೇಗಿದರೆ ಹಾಗೂ ಹೂಸು ಬಿಟ್ಟರೆ ಅವುಗಳನ್ನು ಸಾಕಿದ ರೈತರ ಮೇಲೆ ತೆರಿಗೆ ವಿಧಿಸಲು ಮುಂದಾಗಿದೆ.

    ಕೃಷಿ(Agriculture) ಉದ್ಯಮದಿಂದ ಏರುತ್ತಿರುವ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ನಿಯಂತ್ರಿಸಲು ಸರ್ಕಾರ ಹೊಸ ಹವಾಮಾನ ಬದಲಾವಣೆ ಪ್ರಸ್ತಾವನೆ ಸಲ್ಲಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಹಿಂದಿಯಲ್ಲಿ ಕಾಂತಾರ ಸಿನಿಮಾಗೆ 2500 ಥಿಯೇಟರ್ : ಬೆಚ್ಚಿಬಿತ್ತು ಬಾಲಿವುಡ್

    ನ್ಯೂಜಿಲೆಂಡ್‌ನಲ್ಲಿ ಭಾರೀ ಪ್ರಮಾಣದಲ್ಲಿ ಹೈನೋದ್ಯಮ ನಡೆಯುತ್ತಿದೆ. ದನದ ಮೂತ್ರದಲ್ಲಿ ನೈಟ್ರಸ್ ಆಕ್ಸೈಡ್ ಇದ್ದರೆ ಹಸುವಿನ ಹೂಸಿನಲ್ಲಿ ಮೀಥೇನ್ ಅನಿಲ ಇದೆ. ಇದರಿಂದಾಗಿ ಹಸಿರು ಮನೆ ಪರಿಣಾಮ ಹೆಚ್ಚಾಗುತ್ತದೆ ಎನ್ನುವುದು ನ್ಯೂಜಿಲೆಂಡ್‌ ಸರ್ಕಾರದ ವಾದ.

    ಮಿತಿಮೀರಿದ ಹೈನುಗಾರಿಕೆ ನಿಯಂತ್ರಿಸಿ ಇಂಗಾಲಕ್ಕೆ ಕಡಿವಾಣ ಹಾಕುವ ಉದ್ದೇಶವನ್ನು ಸರ್ಕಾರ ಹೊಂದಿದೆ. ತೆರಿಗೆಯಿಂದ ಸಂಗ್ರಹವಾದ ಹಣವನ್ನು ಹವಾಮಾನ ಸ್ನೇಹಿ ತಂತ್ರಗಳನ್ನು ಅಳವಡಿಸಿಕೊಳ್ಳುವ ರೈತರಿಗೆ ಸಂಶೋಧನೆ, ಹೊಸ ತಂತ್ರಜ್ಞಾನಗಳು ಮತ್ತು ಸಬ್ಸಿಡಿಗಳಿಗೆ ಧನಸಹಾಯ ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

    ನ್ಯೂಜಿಲೆಂಡ್‌ ಆರ್ಥಿಕತೆಗೆ ಹೈನುಗಾರಿಗೆ ಕೊಡುಗೆ ದೊಡ್ಡದು. ಕೇವಲ 50 ಲಕ್ಷ ಜನಸಂಖ್ಯೆ ಇರುವ ದೇಶದಲ್ಲಿ 1 ಕೋಟಿ ಡೈರಿ ಹಸುಗಳಿದ್ದರೆ 2.6 ಕೋಟಿ ಕುರಿಗಳಿವೆ.

    2050 ರ ವೇಳೆಗೆ ಕೃಷಿ ಪ್ರಾಣಿಗಳಿಂದ ಮೀಥೇನ್ ಹೊರಸೂಸುವಿಕೆಯ ಪ್ರಮಾಣವನ್ನು ಶೇ.47% ಕ್ಕೆ ತಗ್ಗಿಸಲು ಸರ್ಕಾರ ಈ ಹಿಂದೆ ವಾಗ್ದಾನ ಮಾಡಿತ್ತು. ಸರ್ಕಾರಗಳು ಪ್ರಸ್ತಾಪಿಸಿದ ತೆರಿಗೆ ಅಡಿಯಲ್ಲಿ, ರೈತರು 2025 ರಲ್ಲಿ ತೆರಿಗೆ ಪಾವತಿಸಬೇಕಾಗುತ್ತದೆ. ತೆರಿಗೆ ದರವನ್ನು ಸರ್ಕಾರ ಇನ್ನೂ ನಿಗದಿ ಮಾಡಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಹೂಸು ಮಾರಿ ವಾರಕ್ಕೆ 38 ಲಕ್ಷ ಸಂಪಾದನೆ ಮಾಡ್ತಿದ್ದಾಕೆ ಆಸ್ಪತ್ರೆಗೆ ದಾಖಲು

    ಹೂಸು ಮಾರಿ ವಾರಕ್ಕೆ 38 ಲಕ್ಷ ಸಂಪಾದನೆ ಮಾಡ್ತಿದ್ದಾಕೆ ಆಸ್ಪತ್ರೆಗೆ ದಾಖಲು

    ವಾಷಿಂಗ್ಟನ್: ತನ್ನ ಹೂಸು ಮಾರಾಟ ಮಾಡಿ ಬರೋಬ್ಬರಿ 38 ಲಕ್ಷ ಹಣ ಸಂಪಾದನೆ ಮಾಡುತ್ತಿದ್ದಾಕೆ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾಳೆ.

    31 ವರ್ಷದ ಸ್ಟೆಫನಿ ಮ್ಯಾಟಿಯೋ ಆಸ್ಪತ್ರೆಗೆ ದಾಖಲಾದ ಕಿರುತೆರೆ ಸೆಲೆಬ್ರಿಟಿ. ಈಕೆ ಅಪರಿಚಿತ ವ್ಯಕ್ತಿಗಳಿಗೆ ತನ್ನ ಹೂಸು ಮಾರಾಟ ಮಾಡಿ ವಾರಕ್ಕೆ ಬರೋಬ್ಬರಿ 38 ಲಕ್ಷ ರೂ. ಹಣ ಗಳಿಸುತ್ತಿದ್ದಳು. ಅಚ್ಚರಿಯಾದರೂ ಇದನ್ನು ನೀವು ನಂಬಲೇ ಬೇಕು. ಸದ್ಯ ಸ್ಟೆಫನಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಅವರು, ನಾನು ಅತಿಯಾಗಿ ಗ್ಯಾಸ್ ಬಿಡುತ್ತಿದ್ದ ಕಾರಣ ಇದೀಗ ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ. ಈ ಹಿನ್ನೆಲೆಯಲ್ಲಿ ನಾನು ಹೂಸು ಬಿಡುವ ಕೆಲಸಕ್ಕೆ ನಿವೃತ್ತಿ ಘೋಷಿಸಿದ್ದೇನೆ. ನನಗೆ ಸ್ಟ್ರೋಕ್ ಆಗಿರಬಹುದು. ಇವು ನನ್ನ ಅಂತಿಮ ಕ್ಷಣಗಳು ಎಂದು ಭಾವಿಸಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಹೂಸಿನ ದುರ್ವಾಸನೆಯನ್ನು ಸುವಾಸನೆಯಾಗಿ ಮಾಡೋ ಮಾತ್ರೆ ಮಾರುಕಟ್ಟೆಗೆ ಎಂಟ್ರಿ

    ತನ್ನ ಮೇಲಿದ್ದ ಬೇಡಿಕೆ ಉಳಿಸಿಕೊಳ್ಳಲು ಸ್ಟೆಫನಿ ವಾರಕ್ಕೆ ಸುಮಾರು 50 ಜಾರ್‍ಗಳಷ್ಟು ಹೂಸನ್ನು ಸಂಗ್ರಹಿಸಿದ್ದರು. ಅಲ್ಲದೆ ಹೆಚ್ಚು ಗ್ಯಾಸ್ ಗಾಗಿ ಒಂದು ದಿನದಲ್ಲಿ 3 ಪ್ರೋಟೀನ್ ಶೇಕ್‍ಗಳು ಮತ್ತು ಕಪ್ಪು ಬೀನ್ ಸೂಪ್‍ನ ಬೃಹತ್ ಬೌಲ್ ಸೇವಿಸಿದ್ದಾರೆ. ಉಸಿರಾಡಲು ನನಗೆ ತುಂಬಾ ಕಷ್ಟಕರವಾಗಿತ್ತು. ನನಗೆ ಆಗಾಗ ಎದೆನೋವು ಕೂಡ ಕಾಣಿಸುತ್ತಿತ್ತು. ನನಗೆ ಹೃದಯಾಘಾತದ ಅನುಭವಾಯಿತು. ಹೀಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸ್ನೇಹಿತರ ಬಳಿ ಕೇಳಿಕೊಂಡೆ ಎಂದಿದ್ದಾರೆ.

    ಒಟ್ಟನಲ್ಲಿ ಸ್ಟೆಫನಿ ಎದೆಯಲ್ಲಿ ತೀವ್ರವಾದ ನೋವು ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ತುರ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೃದಯಾಘಾತ ಅಥವಾ ಪಾಶ್ರ್ವವಾಯು ಇದೆ ಎಂದು ಆಕೆ ಭಾವಿಸಿದ್ದು, ಯಾವುದೇ ಕ್ಷಣದಲ್ಲಿ ನಾನು ಸಾಯಬಹುದು ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಜೋರಾಗಿ ಹೂಸು ಬಿಟ್ಟು 43 ಸಾವಿರ ದಂಡ ತೆತ್ತ!

    ಸದ್ಯ ವೈದ್ಯರು ಸ್ಟೆಫನಿ ರಕ್ತ ಪರೀಕ್ಷೆ ಮತ್ತು ಇಸಿಜಿ ನಡೆಸಿದ್ದಾರೆ. ಬೀನ್ಸ್, ಮೊಟ್ಟೆಗಳು ಮತ್ತು ಬಾಳೆಹಣ್ಣಿನ ಪ್ರೋಟೀನ್ ಶೇಕ್ ಸೇರಿದಂತೆ ಅತಿಯಾಗಿ ಆಹಾರ ಸೇವಿಸಿದ ಪರಿಣಾಮ ಆಕೆಗೆ ಗ್ಯಾಸ್ ರೋಗಲಕ್ಷಣ ಕಾಣಿಸಿದೆ ಎಂದು ಹೇಳಿದ್ದಾರೆ.

  • ಜೋರಾಗಿ ಹೂಸು ಬಿಟ್ಟು 43 ಸಾವಿರ ದಂಡ ತೆತ್ತ!

    ಜೋರಾಗಿ ಹೂಸು ಬಿಟ್ಟು 43 ಸಾವಿರ ದಂಡ ತೆತ್ತ!

    ವಿಯೆನ್ನಾ: ಜೋರಾಗಿ ಹೂಸು ಬಿಟ್ಟ ವ್ಯಕ್ತಿಯೊಬ್ಬ 43 ಸಾವಿರ ರೂ. ದಂಡ ಕಟ್ಟಿದ ಪ್ರಸಂಗವೊಂದು ಆಸ್ಪ್ರಿಯಾ ದೇಶದ ವಿಯೆನ್ನಾದಲ್ಲಿ ನಡೆದಿದೆ.

    ವಿಯೆನ್ನಾ ಪೊಲೀಸರು ಈ ತಿಂಗಳ ಆರಂಭದಲ್ಲಿ ನಾಕಾಬಂದಿ ವೇಳೆ ತಪಾಸಣೆ ನಡೆಸಿದ್ದರು. ಆಗ ಅಲ್ಲಿಗೆ ಬಂದಿದ್ದ ವ್ಯಕ್ತಿಯೊಬ್ಬ ಜೋರಾಗಿ ಹೂಸು ಬಿಟ್ಟಿದ್ದಾನೆ. ಪರಿಣಾಮ ವಾಸನೆ ತಡೆಯಲಾರದೇ ಕೋಪಗೊಂಡ ಪೊಲೀಸರು 500 ಯುರೋ (43 ಸಾವಿರ ರೂ.)  ದಂಡ ವಿಧಿಸಿದ್ದಾರೆ. ಇದನ್ನೂ ಓದಿ: ಹೂಸಿನ ದುರ್ವಾಸನೆಯನ್ನು ಸುವಾಸನೆಯಾಗಿ ಮಾಡೋ ಮಾತ್ರೆ ಮಾರುಕಟ್ಟೆಗೆ ಎಂಟ್ರಿ

    ವ್ಯಕ್ತಿಯು ಉದ್ದೇಶಪೂರ್ವಕವಾಗಿ ಹೂಸು ಬಿಟ್ಟಿದ್ದಾನೆ. ಹೀಗಾಗಿ ದಂಡ ಹಾಕಲಾಗಿದೆ ಎಂದು ವಿಯೆನ್ನಾ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರವಾಗಿ ಕಿಡಿಕಾರಿರುವ ವ್ಯಕ್ತಿಯು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರ ಹಾಕಿದ್ದಾನೆ. ಆದರೆ ಕೆಲ ನೆಟ್ಟಿಗರು ವ್ಯಕ್ತಿಯ ಪರಿಸ್ಥಿತಿಯನ್ನು ಕಂಡು ನಕ್ಕು ತಮ್ಮದೆ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಹೂಸು ವಾಸನೆ ತಾಳಲಾರದೆ ಕಲಾಪ ಮುಂದೂಡಿಕೆ

    ವ್ಯಕ್ತಿಯ ಆರೋಪಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿರುವ ವಿಯೆನ್ನಾ ಪೊಲೀಸರು, ವ್ಯಕ್ತಿ ಉದ್ದೇಶಪೂರ್ವಕವಾಗಿ ಅಸಭ್ಯವಾಗಿ ವರ್ತಿಸಿದ್ದಾನೆ. ಒಂದು ವೇಳೆ ದಂಡದ ಹಣವನ್ನು ವಾಪಸ್ ಪಡೆಬೇಕಿದ್ದರೆ ಕೋರ್ಟ್ ನಲ್ಲಿ ಪ್ರಶ್ನಿಸಿಕೊಳ್ಳಲಿ ಎಂದು ಹೇಳಿದ್ದಾರೆ.

  • ಹೂಸು ವಾಸನೆ ತಾಳಲಾರದೆ ಕಲಾಪ ಮುಂದೂಡಿಕೆ

    ಹೂಸು ವಾಸನೆ ತಾಳಲಾರದೆ ಕಲಾಪ ಮುಂದೂಡಿಕೆ

    ಕೀನ್ಯಾ: ಹೂಸು ವಾಸನೆ ತಾಳಲಾರದೆ ಕಲಾಪ ಮುಂದೂಡಿದ ವಿಚಿತ್ರ ಪ್ರಸಂಗವೊಂದು ಕಿನ್ಯಾದಲ್ಲಿ ನಡೆದಿದೆ.

    ಕೀನ್ಯಾದ ಹೇಮಾ ಬೇ ಕೌಂಟಿ ಅಸೆಂಬ್ಲಿಯಲ್ಲಿ ಬುಧವಾರ ಕಲಾಪ ನಡೆದಿತ್ತು. ಈ ವೇಳೆ ಸದಸ್ಯರೊಬ್ಬರು ಹೂಸು ಬಿಟ್ಟಿದ್ದರಿಂದ ಭಾರೀ ದುರ್ವಾಸನೆ ಉಂಟಾಗಿತ್ತು. ಪರಿಣಾಮ ಕಲಾಪದಲ್ಲಿದ್ದ ಸದಸ್ಯರು ಹಾಗೂ ಸಿಬ್ಬಂದಿ ಪರದಾಡುವಂತಾಗಿತ್ತು.  ಇದನ್ನೂ ಓದಿ: ಹೂಸಿನ ದುರ್ವಾಸನೆಯನ್ನು ಸುವಾಸನೆಯಾಗಿ ಮಾಡೋ ಮಾತ್ರೆ ಮಾರುಕಟ್ಟೆಗೆ ಎಂಟ್ರಿ

    ಅಸೆಂಬ್ಲಿಯಲ್ಲಿ ದುರ್ವಾಸನೆ ಹರಡುತ್ತಿದ್ದಂತೆ ಅಸಮಾಧಾನ ಹೊರ ಹಾಕಿದ ಸ್ಪೀಕರ್ ಎಡ್ವಿನ್ ಕಾಕಾಚ್ ಅವರು, ನಮ್ಮ ಸದಸ್ಯದಲ್ಲಿ ಒಬ್ಬರು ಹೂಸು ಬಿಟ್ಟಿದ್ದಾರೆ. ಅವರು ಯಾರು ಅಂತ ನನಗೆ ಗೊತ್ತಿದೆ ಎಂದು ಹೇಳಿದರು.

    ತಕ್ಷಣವೇ ಆರೋಪ ಎದುರಿಸಿದ ಸದಸ್ಯರೊಬ್ಬರು ಎದ್ದು ನಿಂತು, ನಾನು ಹೂಸು ಬಿಟ್ಟಿಲ್ಲ. ಸಹೋದ್ಯೋಗಿಗಳ ಮುಂದೆ ಅಂತಹ ಕೆಟ್ಟ ಕೆಲಸ ಮಾಡುವವನು ನಾನಲ್ಲ ಎಂದು ಸ್ಪಷ್ಟನೆ ನೀಡಿದರು.

    ಸ್ಪೀಕರ್ ಎಡ್ವಿನ್ ಕಾಕಾಚ್ ಅವರು ಸಿಬ್ಬಂದಿಯನ್ನು ಕರೆದು ಏರ್ ಫ್ರೆಶನರ್, ವೆನಿಲ್ಲಾ ಅಥವಾ ಸ್ಟ್ರಾಬೆರಿ ಸುಗಂಧವನ್ನು ತಂದು ರೂಮ್‍ಗೆ ಸ್ಪೇಪ್ರೆ ಮಾಡಿ ಎಂದು ಸೂಚನೆ ನೀಡಿದರು. ಇದೇ ವೇಳೆ, ಇಂತಹ ದುರ್ವಾಸನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿ, ಸದನವನ್ನು ಕೆಲ ಸಮಯ ಮುಂದೂದರು ಎಂದು ವರದಿಯಾಗಿದೆ.

    ಹೂಸು ವಾಸನೆಗೆ ಕಲಾಪ ಮುಂದೂಡಿದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆ ಕಿನ್ಯಾ ಸಂಸತ್‍ಗೆ ಮಹಿಳಾ ಸದಸ್ಯರೊಬ್ಬರು ಮಗುವನ್ನು ಹೊತ್ತುಕೊಂಡು ಬಂದಿದ್ದರು. ಮಗುವನ್ನು ನೋಡಿದ ಸ್ಪೀಕರ್ ಅವರು ಮಗುವನ್ನು ಎತ್ತಿಕೊಂಡು ಕಲಾಪದಿಂದ ಹೊರ ಹೋಗುವಂತೆ ಸೂಚನೆ ನೀಡಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು.