Tag: ಹೂವು ಬೆಳೆಗಾರರು

  • ಹೂವು ಬೆಳೆಗಾರರಿಗೆ ಮಾತ್ರ ಪರಿಹಾರ!- ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟನೆ

    ಹೂವು ಬೆಳೆಗಾರರಿಗೆ ಮಾತ್ರ ಪರಿಹಾರ!- ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟನೆ

    ಮಡಿಕೇರಿ: ರೈತರಿಗೆ ಬಡ್ಡಿ ರಹಿತ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.

    ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಈಗಾಗಲೇ ಬಡ್ಡಿ ರಹಿತ ಸಾಲ ಮರುಪಾವತಿ ಅವಧಿ ಮುಗಿದು ಹೋಗಿದೆ. ಆದರೆ ಲಾಕ್‍ಡೌನ್ ಕಾರಣ ರೈತರಿಗೆ ಅನುಕೂಲ ಆಗಬೇಕೆಂಬ ದೃಷ್ಠಿಯಿಂದ ಅವಧಿ ವಿಸ್ತರಿಸಲಾಗಿದೆ. ಸಾಲ ಮಾಡಿರುವ ರೈತರಿಗೆ ಯಾವುದೇ ಕಾರಣಕ್ಕೂ ಬ್ಯಾಂಕ್‍ಗಳು ಕಿರುಕುಳ ನೀಡಬಾರದು ಎಂದರು.

    ಲಾಕ್ ಡೌನ್ ಸಂದರ್ಭದಲ್ಲಿ ತರಕಾರಿ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ ಎನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಮುಖ್ಯಮಂತ್ರಿಗಳು ಹೂವು ಬೆಳೆಗಾರರ ಸಮೀಕ್ಷೆ ಮಾಡಿ ಅವರಿಗೆ ಪರಿಹಾರ ನೀಡಲು ಚಿಂತಿಸಿದ್ದಾರೆ. ಇಂದು ವಿಶ್ವವೇ ಕೋವಿಡ್ ಸಮಸ್ಯೆಯಲ್ಲಿರುವುದರಿಂದ ಯಾವುದೇ ಕಾರ್ಯಕ್ರಮಗಳು, ಸಮಾರಂಭಗಳು ಇಲ್ಲ. ಹೀಗಾಗಿ ತರಕಾರಿ ಬೆಳೆಗಾರರು ಸರ್ಕಾರದೊಂದಿಗೆ ಕೈ ಜೋಡಿಸಿ ಸಹಕಾರ ನೀಡಬೇಕು ಎಂದರು.

    ಮಳೆಗಾಲ ಆರಂಭವಾಗುತ್ತಿದ್ದು, ಸರ್ಕಾರವೂ ರೈತರಿಗೆ ಬಿತ್ತನೆ ಬೀಜ ಗೊಬ್ಬರ ಸೇರಿದಂತೆ ಎಲ್ಲವನ್ನೂ ಪೂರೈಸಲು ಸಿದ್ಧವಿದೆ. ಅಲ್ಲದೆ ರೈತರಿಗೆ ಕಿಸಾನ್ ಕಾರ್ಡ್ ಕೊಡಲು ಸಿದ್ಧತೆ ನಡೆಸಿದ್ದು ಅದರಲ್ಲಿ ರೈತರ ಎಲ್ಲಾ ಮಾಹಿತಿಯೂ ಇರಲಿದೆ. ಇದರಿಂದ ರೈತರಿಗೆ ಎಲ್ಲಾ ಸೌಲಭ್ಯ ಒದಗಿಸಲು ಅನುಕೂಲವಾಗಲಿದೆ ಎಂದಿದ್ದಾರೆ. ಇದಕ್ಕೂ ಮೊದಲು ಮಡಿಕೇರಿಯಲ್ಲಿ ಕೃಷಿ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ರೈತ ಮುಖಂಡರೊಂದಿಗೆ ಸಭೆ ನಡೆಸಿ, ಜಿಲ್ಲೆಯ ರೈತರ ಸಮಸ್ಯೆಗಳನ್ನು ಆಲಿಸಿದ್ರು. ಜಿಲ್ಲೆಯ ರೈತರಿಗೆ ಅಗತ್ಯವಿರುವ ಕೃಷಿ ಪರಿಕರಗಳು, ಸಬ್ಸಿಡಿ ಸಹಾಯಗಳ ಕುರಿತು ಚರ್ಚಿಸಿದರು.