Tag: ಹೂವಿನ ಬಾಣದಂತೆ

  • ʻಹೂಬಾಣʼದ ವೈರಲ್ ಹುಡ್ಗಿಗೆ ಬಂತು ಸಿನಿಮಾ ಆಫರ್‌

    ʻಹೂಬಾಣʼದ ವೈರಲ್ ಹುಡ್ಗಿಗೆ ಬಂತು ಸಿನಿಮಾ ಆಫರ್‌

    – ಅಪಸ್ವರದಲ್ಲಿ ಹಾಡಿ ತಪ್ಪು ಮಾಡ್ದೆ ಅಂತ ಕಣ್ಣೀರಿಟ್ಟ ಕೆ.ಆರ್‌ ಪೇಟೆ ಹುಡುಗಿ

    ʻಬಿರುಗಾಳಿʼ ಸಿನಿಮಾದ ʻಹೂವಿನ ಬಾಣದಂತೆ… ಯಾರಿಗೂ ಕಾಣದಂತೆ…ʼ ಹಾಡನ್ನ ತನ್ನದೇ ದಾಟಿಯಲ್ಲಿ ಹಾಡಿ ರಾತ್ರೋರಾತ್ರಿ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಕ್ರಿಯೆಟ್‌ ಮಾಡಿದ ಯುವತಿ ನಿತ್ಯಶ್ರೀಗೆ (NithyaShree) ಈಗ ಸಿನಿಮಾ ಆಫರ್‌ ಕೂಡ ಬಂದಿದೆಯಂತೆ.

    ಒಂದಿಬ್ಬರು ನಿರ್ದೇಶಕರು ತಮ್ಮ ಸಿನಿಮಾದಲ್ಲಿ (Cinema) ನಟಿಸುವಂತೆ ಯುವತಿಯನ್ನ ಸಂಪರ್ಕಿಸಿದ್ದಾರಂತೆ. ಆದ್ರೀಗ ʻಒಳ್ಳೆಯ ಹಾಡನ್ನ ಅಪಸ್ವರದಲ್ಲಿ ಹಾಡಿ ತಪ್ಪು ಮಾಡಿಬಿಟ್ಟೆʼ ಅಂತ ಆಕೆಗೆ ಗಿಲ್ಟ್‌ ಕಾಡೋಕೆ ಶುರುವಾಗಿದೆ ಅಂತ ʻಪಬ್ಲಿಕ್ ಟಿವಿʼ ಜೊತೆ ಮಾತನಾಡ್ತಾ ಕಣ್ಣೀರಿಟ್ದಿದ್ದಾಳೆ. ಇದನ್ನೂ ಓದಿ: ಅದೊಂದು ಹಾಡಿನಿಂದ ದಿಢೀರ್ ಫೇಮಸ್ ಆದ ಯುವತಿ – ಇನ್ಸ್ಟಾದಲ್ಲಿ 150 ಇದ್ದ ಫಾಲೋವರ್ಸ್ ಈಗ 40,000 

    ರಾತ್ರೋ ರಾತ್ರಿ ಸ್ಟಾರ್‌ ಆದ ಮಂಡ್ಯದ ಹುಡ್ಗಿ
    ಕಳೆದ ನಾಲ್ಕೈದು ದಿನಗಳಿಂದ ಸೋಷಿಯಲ್‌ ಮೀಡಿಯಾದ ಸೇರಿದಂತೆ ಎಲ್ಲರ ಬಾಯಲ್ಲಿ ‘ಹೂವಿನ ಬಾಣದಂತೆ’ (Hoovina Banadanthe Viral Song) ಹಾಡು ಕೇಳಿಬರುತ್ತಿದೆ. ‘ಬಿರುಗಾಳಿ’ ಚಿತ್ರದ ಈ ಹಾಡು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಯುವಕ, ಯುವತಿಯರಂತೂ ಈ ಹಾಡಿಗೆ ತಮ್ಮದೇ ರೀತಿಯಲ್ಲಿ ಸ್ಟೆಪ್‌ ಹಾಕಿ ರೀಲ್ಸ್‌ ಮಾಡೋಕೆ ಶುರು ಮಾಡಿದ್ದಾರೆ. ಈ ಹಾಡು ಇಷ್ಟೊಂದು ಫೇಮಸ್ ಆಗಲು ಕಾರಣ ಕೆ.ಆರ್‌ ಪೇಟೆ ಯುವತಿ ನಿತ್ಯಾಶ್ರೀ. ಸ್ನೇಹಿತರ ಗುಂಪಿನಲ್ಲಿ ತಮಾಷೆಗೆಂದು ಹಾಡಿದ ‘ಹೂವಿನ ಬಾಣದಂತೆ’ ಹಾಡು ಸದ್ಯ ಎಲ್ಲೆಡೆ ವೈರಲ್ ಆಗಿದೆ. ಇನ್‌ಸ್ಟಾದಲ್ಲಿ ನ್ಸ್ಟಾದಲ್ಲಿ ಮೊದಲು 150 ಮಂದಿ ಫಾಲೋವರ್ಸ್ ಅನ್ನು ಹೊಂದಿದ್ದ ನಿತ್ಯಾಶ್ರೀ ಈ ಹಾಡು ವೈರಲ್ ಆದ ಬಳಿಕ 40 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಅನ್ನು ಹೊಂದಿದ್ದಾಳೆ. ಇದನ್ನೂ ಓದಿ: ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣ – ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸೇರಿ ಮೂವರಿಗೆ ಇಡಿ ಸಮನ್ಸ್

    ನಿತ್ಯಶ್ರೀ ಯಾರು?
    ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮೊಸಳೆಕೊಪ್ಪ ಗ್ರಾಮದ ನಿತ್ಯಾಶ್ರೀ ಪದವಿ ಶಿಕ್ಷಣ ಪಡೆಯಲು ಮೈಸೂರಿನಲ್ಲಿ ನೆಲೆಸಿದ್ದಾಳೆ. ಇದನ್ನೂ ಓದಿ: ಯಶ್ ತಾಯಿ ಪುಷ್ಪ ಅವರಿಗೂ ಈ ವೀಡಿಯೋ ತಲುಪಬೇಕು: ಪೇಮೆಂಟ್ ಆಗಿಲ್ಲ ಅಂತ ಕೊತ್ತಲವಾಡಿ ಸಿನಿಮಾ ಕಲಾವಿದ ಆರೋಪ 

  • ಅದೊಂದು ಹಾಡಿನಿಂದ ದಿಢೀರ್ ಫೇಮಸ್ ಆದ ಯುವತಿ – ಇನ್ಸ್ಟಾದಲ್ಲಿ 150 ಇದ್ದ ಫಾಲೋವರ್ಸ್ ಈಗ 40,000

    ಅದೊಂದು ಹಾಡಿನಿಂದ ದಿಢೀರ್ ಫೇಮಸ್ ಆದ ಯುವತಿ – ಇನ್ಸ್ಟಾದಲ್ಲಿ 150 ಇದ್ದ ಫಾಲೋವರ್ಸ್ ಈಗ 40,000

    ಸೋಶಿಯಲ್ ಮೀಡಿಯಾವೇ (SocialMedia) ಹಾಗೆ, ಜನಸಾಮಾನ್ಯರನ್ನು ರಾತ್ರಿ ಬೆಳಗಾಗುವಷ್ಟರಲ್ಲಿ ಫೇಮಸ್ ಮಾಡಿಬಿಡುತ್ತದೆ. ಕೆಲವರು ರೀಲ್ಸ್ ಸೇರಿದಂತೆ ನಾನಾ ರೀತಿಯ ವೀಡಿಯೋ ಮಾಡಿ ಫೇಮಸ್ ಆಗಲು ನೋಡುತ್ತಾರೆ. ಇನ್ನು ಕೆಲವರು ಒಂದೇ ಒಂದು ವೀಡಿಯೋದಿಂದನೇ ಹವಾ ಸೃಷ್ಟಿಸಿ ಬಿಡುತ್ತಾರೆ. ಇದಕ್ಕೆ ಈ ಹುಡುಗಿಯೇ ಸಾಕ್ಷಿ. ಹೌದು, ಕನ್ನಡ ಸಿನಿಮಾದ ಹಾಡೊಂದನ್ನು ತನ್ನದೇ ಧಾಟಿಯಲ್ಲಿ ಹಾಡಿ ಹುಡುಗಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದಾಳೆ. ಈ ವೀಡಿಯೋಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿವೆ.

    ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲರ ಬಾಯಲ್ಲಿ ‘ಹೂವಿನ ಬಾಣದಂತೆ’ (Hoovina Banadanthe Viral Song) ಹಾಡು ಕೇಳಿಬರುತ್ತಿದೆ. ‘ಬಿರುಗಾಳಿ’ ಚಿತ್ರದ ಈ ಹಾಡು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಹಾಡು ಇಷ್ಟೊಂದು ಫೇಮಸ್ ಆಗಲು ಕಾರಣ ನಿತ್ಯಾಶ್ರೀ ಎಂಬ ಹುಡುಗಿ. ಸ್ನೇಹಿತರ ಗುಂಪಿನಲ್ಲಿ ತಮಾಷೆಗೆಂದು ಹಾಡಿದ ‘ಹೂವಿನ ಬಾಣದಂತೆ’ ಹಾಡು ಸದ್ಯ ಎಲ್ಲೆಡೆ ವೈರಲ್ ಆಗಿದೆ. ಇನ್ಸ್ಟಾದಲ್ಲಿ ಮೊದಲು 150 ಮಂದಿ ಫಾಲೋವರ್ಸ್ ಅನ್ನು ಹೊಂದಿದ್ದ ನಿತ್ಯಾಶ್ರೀ ಈ ಹಾಡು ವೈರಲ್ ಆದ ಬಳಿಕ 40 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಅನ್ನು ಹೊಂದಿದ್ದಾಳೆ.

    ತನ್ನ ಅಕ್ಕಪಕ್ಕದಲ್ಲಿ ನಿಂತಿರುವ ಸ್ನೇಹಿತರು ಈಕೆ ಹಾಡು ಹಾಡುವ ರೀತಿಗೆ ನಕ್ಕಿದ್ದಾರೆ. ಆದರೆ ಈಕೆ ಮಾತ್ರ ಹಾಡು ಹಾಡುವುದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಿಲ್ಲ. ಈ ವೀಡಿಯೋದ ಕೊನೆಗೆ ಎಲ್ಲರೂ ಚಪ್ಪಾಳೆ ತಟ್ಟಿ ಹುರಿದುಂಬಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಭಿನ್ನ ಧಾಟಿಯಲ್ಲಿ ನಿತ್ಯಾಶ್ರೀ ಈ ಹಾಡು ಹಾಡಿದ್ದು, ಒರಿಜಿನಲ್ ಹಾಡೇ ಮರೆತು ಹೋಗುವಂತೆ ಮಾಡಿದ್ದಾಳೆ. ಈ ಮುದ್ದಾದ ಹಾಡಿನ ವಿಡಿಯೋ ಸದ್ಯ ನೆಟ್ಟಿಗರ ಮನಸ್ಸನ್ನು ಗೆದ್ದುಕೊಂಡಿದೆ.

    ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮೊಸಳೆಕೊಪ್ಪ ಗ್ರಾಮದ ನಿತ್ಯಾಶ್ರೀ ಪದವಿ ಶಿಕ್ಷಣ ಪಡೆಯಲು ಮೈಸೂರಿನಲ್ಲಿ ನೆಲೆಸಿದ್ದಾಳೆ. ಇನ್ನು ವೈರಲ್ ಹಾಡಿನ ಬಗ್ಗೆ ಮಾತನಾಡಿದ ನಿತ್ಯಾಶ್ರೀ, ನಾನು ನನ್ನ ಸ್ನೇಹಿತರನ್ನು ಖುಷಿ ಪಡಿಸಲು ಹಾಡಿದ್ದೆ. ಇದು ಇಷ್ಟು ವೈರಲ್ ಆಗತ್ತೆ ಎಂದು ಗೊತ್ತಿರಲಿಲ್ಲ. ತುಂಬಾ ಖುಷಿ ಆಗಿದೆ ಎಂದು ಸಂತೋಷವನ್ನು ವ್ಯಕ್ತಪಡಿಸಿದ್ದಾಳೆ. ನನ್ನ ಗುರುಗಳು ಕೃಷ್ಣಮೂರ್ತಿ ಸರ್ ಹಾಡನ್ನು ರೆಕಾರ್ಡ್ ಮಾಡಿ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ರು. ಅದು ರಾತ್ರೋರಾತ್ರಿ ಸಕ್ಕತ್ ವೈರಲ್ ಆಗಿದೆ. ಎಲ್ಲರೂ ಕೂಡ ನನ್ನ ಗುರುತು ಹಿಡಿತಿದ್ದಾರೆ. ನನ್ನ ಜೊತೆ ಸೆಲ್ಫಿ ಕೇಳಿದ್ದಾರೆ. ನನಗೆ ನಟಿ ಆಗಬೇಕು, ಆ್ಯಕ್ಟಿಂಗ್ ಮಾಡಬೇಕು ಎಂಬ ಆಸೆ ಇದೆ. ಯಶ್ ನನ್ನ ಫೇವರಿಟ್ ನಟ. ಅವರ ಜೊತೆ ಒಂದು ಸೈಡ್ ರೋಲ್ ಮಾಡಬೇಕೆಂಬ ಆಸೆಯಿದೆ ಎಂದು ತನ್ನ ಆಸೆಯನ್ನು ವ್ಯಕ್ತಪಡಿಸಿದ್ದಾಳೆ.

    ಇನ್ನು ಇಷ್ಟು ಮಾತ್ರವಲ್ಲದೇ ಆಕೆಯ ರೀತಿಯೇ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕೂಡ ವೇದಿಕೆಯಲ್ಲಿ ಹಾಡಲು ಪ್ರಯತ್ನಿಸಿದ್ದಾರೆ. ಅಲ್ಲದೇ, ನಿತ್ಯಾಶ್ರೀ ಗಾಯನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ ಮಗು ತುಂಬ ಕ್ಯೂಟ್ ಆಗಿ ಎಲ್ಲ ಕಡೆ ಹಾಡುತ್ತಿದ್ದಾಳೆ. ಅವಳ ವಿಡಿಯೋಗಳು ದಿನಕ್ಕೆ 10 ಸಲ ನನಗೆ ಬರುತ್ತಿವೆ. ಎಲ್ಲೇ ಇದ್ದರೂ ಅವಳಿಗೆ ದೇವರು ಆಶೀರ್ವಾದ ಮಾಡಲಿ. ತುಂಬ ಮುಗ್ಧವಾಗಿದ್ದೀಯ ಕಂದ. ಹಾಗೆಯೇ ಇನೋಸೆಂಟ್ ಆಗಿರು. ಒಳ್ಳೆಯದಾಗಲಿ ಎಂದು ಅರ್ಜುನ್ ಜನ್ಯ ಆಶೀರ್ವಾದ ಮಾಡಿದ್ದಾರೆ.