Tag: ಹುಳ

  • ಆರ್ಡರ್ ಮಾಡಿದ್ದ ಆಹಾರದಲ್ಲಿ ಹುಳಗಳು – ರೆಸ್ಟೋರೆಂಟ್ ವಿರುದ್ಧ ಮಹಿಳೆ ದೂರು

    ಆರ್ಡರ್ ಮಾಡಿದ್ದ ಆಹಾರದಲ್ಲಿ ಹುಳಗಳು – ರೆಸ್ಟೋರೆಂಟ್ ವಿರುದ್ಧ ಮಹಿಳೆ ದೂರು

    ಚೆನ್ನೈ: ಜನಪ್ರಿಯ ರೆಸ್ಟೋರೆಂಟ್‍ನಲ್ಲಿ ಆರ್ಡರ್ ಮಾಡಿದ್ದ ಊಟದಲ್ಲಿ ಹುಳುಗಳು ಕಂಡು ಬಂದಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ರೆಸ್ಟೋರೆಂಟ್ ವಿರುದ್ಧ ದೂರು ದಾಖಲಿಸಿದ್ದಾರೆ.

    ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ಮಹಿಳೆಯನ್ನು ಅಶೋಕ್ ನಗರದ ನಿವಾಸಿ ರಾಣಿ ಎಂದು ಗುರುತಿಸಲಾಗಿದೆ. ಮಹಿಳೆ ತಮ್ಮ ಮಗನೊಂದಿಗೆ ಮಾಲ್‍ಗೆ ಹೋಗಿದ್ದರು. ಈ ವೇಳೆ ಮಾಲ್‍ನಲ್ಲಿದ್ದ ‘ನಮ್ಮ ವಿದ್ಯಾ ಎಂಬ ಹೆಸರಿನ ರೆಸ್ಟೋರೆಂಟ್‍ಗೆ ತೆರಳಿದರು. ಅಲ್ಲಿ ಮಗನ ಇಚ್ಛೆಯಂತೆ ಚೋಲಾ ಪೂರಿ ಆರ್ಡರ್ ಮಾಡಿದರು. ಆದರೆ ಊಟ ಬಂದ ನಂತರ ಆಹಾರದಲ್ಲಿ ಹುಳು ಹರಿದಾಡುತ್ತಿರುವುದನ್ನು ಗಮನಿಸಿ ಕಿರುಚಾಡಿದ್ದಾರೆ.

     

    ವಸಂತ ಭವನ ರೆಸ್ಟೊರೆಂಟ್ ಚೆನ್ನೈನ ಕೊಯಾಂಬೆಡು ಪ್ರದೇಶದಲ್ಲಿರುವ ಫೇಮಸ್ ಸಸ್ಯಾಹಾರಿ ರೆಸ್ಟೋರೆಂಟ್ ಆಗಿದ್ದು, ಈ ಬಗ್ಗೆ ಮಹಿಳೆ ಆಹಾರ ಸುರಕ್ಷತಾ ಇಲಾಖೆಗೆ ದೂರು ನೀಡಿದ್ದಾರೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: Exclusive: ಮುಖಕ್ಕೆ ಮಾಸ್ಕ್ ಧರಿಸಿ ಕಲ್ಲು ಹೊಡೆಯಿರಿ – ಶಿವಮೊಗ್ಗ ಗಲಾಟೆಯ ಪ್ಲ್ಯಾನ್ ವೀಡಿಯೋ ಔಟ್

    ಇದೀಗ ಆಹಾರ ಸುರಕ್ಷತಾ ಅಧಿಕಾರಿಗಳು ರೆಸ್ಟೋರೆಂಟ್ ಮತ್ತು ಕಿಚನ್ ಕೆಲಸದ ಮೇಲೆ ತಾತ್ಕಾಲಿಕವಾಗಿ ನಿಷೇಧವನ್ನು ವಿಧಿಸಿದ್ದಾರೆ ಮತ್ತು ಆಹಾರ ಸುರಕ್ಷತಾ ಕಾಯ್ದೆಗೆ ಅನುಗುಣವಾಗಿ ಅದರ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.  ಇದನ್ನೂ ಓದಿ: ನಾನು ನಿತೀಶ್ ಕುಮಾರ್‌ಗೆ ಬೆಂಬಲ ನೀಡುತ್ತೇನೆ: ಪ್ರಶಾಂತ್ ಕಿಶೋರ್

    ಕಳೆದ ತಿಂಗಳು ದೆಹಲಿಯ ಜನಪ್ರಿಯ ಉಪಾಹಾರ ಗೃಹದ ಊಟವೊಂದರಲ್ಲಿ ಹಲ್ಲಿ ಪತ್ತೆಯಾಗಿತ್ತು. ಕೆಫೆಗೆ ಭೇಟಿ ನೀಡಿದ ವ್ಯಕ್ತಿಯೊಬ್ಬರು ತಮ್ಮ ಇನ್‍ಸ್ಟಾಗ್ರಾಮ್ ಹ್ಯಾಂಡಲ್‍ನಲ್ಲಿ ಈ ಘಟನೆಯನ್ನು ಪೋಸ್ಟ್ ಮಾಡಿಕೊಳ್ಳುವ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಚಿಕನ್ ಕಬಾಬ್, ಲೆಗ್ ಪೀಸ್‌ನಲ್ಲಿ ಹುಳ! – ಮಹಿಳೆ ಆಸ್ಪತ್ರೆಗೆ, ಹೋಟೆಲ್‌ಗೆ ಬೀಗ

    ಚಿಕನ್ ಕಬಾಬ್, ಲೆಗ್ ಪೀಸ್‌ನಲ್ಲಿ ಹುಳ! – ಮಹಿಳೆ ಆಸ್ಪತ್ರೆಗೆ, ಹೋಟೆಲ್‌ಗೆ ಬೀಗ

    ಕೋಲಾರ: ಚಿಕನ್ ಎಂದರೆ ಸಾಕಷ್ಟು ಜನರಿಗೆ ಅಚ್ಚು ಮೆಚ್ಚು. ಅದರಲ್ಲೂ ಚಿಕನ್ ಲೆಗ್ ಪೀಸ್ ಎಂದರೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದರೆ ಚಿಕನ್ ಪ್ರಿಯರೇ ಇನ್ಮುಂದೆ ರೆಸ್ಟೋರೆಂಟ್ ಅಥವಾ ಹೋಟೆಲ್‌ನಿಂದ ತಮ್ಮ ಅಚ್ಚುಮೆಚ್ಚಿನ ಚಿಕನ್ ಖರೀದಿ ಮಾಡಿದ್ರೆ ತಿನ್ನುವ ಮುನ್ನ ಹುಷಾರ್ ಆಗಿರಿ.

    ಒಂದೆಡೆ ರೆಸ್ಟೋರೆಂಟ್ ಮಾಲೀಕರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದು, ಮತ್ತೊಂದೆಡೆ ಹೋಟೆಲ್‌ಗೆ ಬೀಗ ಮುದ್ರೆ ಹಾಕುತ್ತಿರುವ ಆಹಾರ ನಿರೀಕ್ಷಕ ಅಧಿಕಾರಿಗಳು. ಇನ್ನೂ ಒಂದೆಡೆ ಚಿಕನ್ ಸೇವಿಸಿ ಆಸ್ಪತ್ರೆ ಪಾಲಾಗಿರುವ ಮಹಿಳೆ. ಇದೆಲ್ಲಾ ನಡೆದಿರುವುದು ಕೋಲಾರದ ಕೆಜಿಎಫ್ ನಗರದ ಪಿಚರ್ಡ್ ರಸ್ತೆಯಲ್ಲಿ. ಹೌದು, ಚಿಕನ್ ಲೆಗ್ ಪೀಸ್‌ನಲ್ಲಿ ಹುಳ ಪತ್ತೆಯಾದ ಘಟನೆ ಕೋಲಾರದಲ್ಲಿ ನಡೆದಿದೆ. ಅದೇ ಲೆಗ್ ಪೀಸ್ ಸೇವಿಸಿದ ಮಹಿಳೆ ಅಸ್ವಸ್ಥರಾಗಿ, ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಪಿಚರ್ಡ್ ರಸ್ತೆಯಲ್ಲಿರುವ ಇಖ್ರಾ ಹೋಟೆಲ್‌ನಲ್ಲಿ ಗುರುವಾರ ಕೆಜಿಎಫ್ ನಗರದ ವಿನೋದ್, ಮನೆಗೆ ಚಿಕನ್ ಲೆಗ್ ಪೀಸ್ ಪಾರ್ಸೆಲ್ ತೆಗೆದುಕೊಂಡು ಹೋಗಿದ್ದರು. ಮನೆಯಲ್ಲಿ ಮಕ್ಕಳ ಜೊತೆ ಚಿಕನ್ ತಿನ್ನುತ್ತಿದ್ದಾಗ ಲೆಗ್ ಪೀಸ್‌ನಲ್ಲಿ ಹುಳ ಇರುವುದು ಪತ್ತೆಯಾಗಿದೆ. ಇದನ್ನು ತಿಂದ ವಿನೋದ್ ತಾಯಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾತ್ರಿಯಿಂದ ವಾಂತಿ, ಭೇದಿ ಶುರುವಾಗಿದ್ದು, ಕೂಡಲೆ ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ ಸರ್ಕಾರ ನೀಡುತ್ತಿದ್ದ ಶೂ & ಸಾಕ್ಸ್ ಈ ವರ್ಷ ಸಿಗೋದು ಡೌಟ್ 

    ಹಾಳಾದ ಹಾಗೂ ಸುರಕ್ಷಿತವಲ್ಲದ ಚಿಕನ್ ಲೆಗ್ ಪೀಸ್ ನೀಡಿದ ಹಿನ್ನೆಲೆ ಇಖ್ರಾ ಹೋಟೆಲ್ ಸಿಬ್ಬಂದಿಗೆ ಸ್ಥಳೀಯರು ಗ್ರಹಚಾರ ಬಿಡಿಸಿದ್ದಾರೆ. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಅಧಿಕಾರಿಗಳು ಹೊಟೆಲ್‌ಗೆ ತೆರಳಿ ಪರಿಶೀಲನೆ ನಡೆಸಿದಾಗ ಹೋಟೆಲ್‌ನಲ್ಲಿದ್ದ ಎಲ್ಲಾ ಚಿಕನ್‌ನಲ್ಲಿಯೂ ಹುಳ ಪತ್ತೆಯಾಗಿದೆ. ಬಳಿಕ ಗ್ರಾಹಕ ವಿನೋದ್ ಹೋಟೆಲ್ ಮಾಲೀಕರನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದು, ಹೋಟೆಲ್‌ನಲ್ಲಿದ್ದ ಮತ್ತಷ್ಟು ಚಿಕನ್ ಪೀಸ್‌ನಲ್ಲೂ ಹುಳ ಪತ್ತೆಯಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಮೊದಲಿಗೆ ಸಂಬಂಧಪಟ್ಟ ಆಹಾರ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದು, ಪ್ರಯೋಜನವಾಗಿರಲಿಲ್ಲ. ಬಳಿಕ ಕೆಲ ಯುವಕರು ನಗರಸಭೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ದೂರು ಸಲ್ಲಿಸಿದ್ದರು. ಆದರೂ ಪ್ರಯೋಜನವಾಗಿರಲಿಲ್ಲ. ಬಳಿಕ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ ಹಿನ್ನೆಲೆ, ಸ್ಥಳಕ್ಕೆ ಆಗಮಿಸಿದ ನಗರಸಭೆ ಆಹಾರ ನಿರೀಕ್ಷಕರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಳಪೆ ಗುಣಮಟ್ಟದ ಆಹಾರ ಹಾಗೂ ಹುಳ ಇರುವುದು ಕಂಡು ಬಂದ ಹಿನ್ನೆಲೆ ಹೋಟೆಲ್‌ಗೆ ಬೀಗ ಮುದ್ರೆಯನ್ನು ಹಾಕಿದ್ದಾರೆ. ಅಲ್ಲದೇ ನಗರಲ್ಲಿರುವ ಎಲ್ಲಾ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳ ಮೇಲೆ ಹೆಚ್ಚಿನ ನಿಗಾ ಇಡುವುದಾಗಿ ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಸಾವಿರಕ್ಕೂ ಅಧಿಕ ಕೇಸ್ – ಆರು ಸಾವಿರ ಗಡಿದಾಟಿದ ರಾಜ್ಯದ ಸಕ್ರಿಯ ಪ್ರಕರಣ

    ಒಟ್ಟಿನಲ್ಲಿ ತಮಗಿಷ್ಟ ಎಂದು ಚಿಕನ್ ತಿನ್ನಬೇಕಾದರೆ ಇನ್ನುಮುಂದೆ ಗುಣಮಟ್ಟ ಪರಿಶೀಲನೆ ಮಾಡಲೇಬೇಕು. ಯಾಮಾರಿ ಎಲ್ಲೆಂದರಲ್ಲಿ ಆಹಾರ ಸೇವನೆ ಮಾಡಿದರೆ, ಅನಾರೋಗ್ಯದ ಜೊತೆಗೆ ಹುಳಗಳು ಫ್ರೀಯಾಗಿ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

    Live Tv

  • ಅನ್ನಭಾಗ್ಯವಲ್ಲ ಹುಳು ಭಾಗ್ಯ – ನ್ಯಾಯಬೆಲೆ ಅಂಗಡಿಯ ಕಳಪೆ ಅಕ್ಕಿ ವಿಡಿಯೋ ವೈರಲ್

    ಅನ್ನಭಾಗ್ಯವಲ್ಲ ಹುಳು ಭಾಗ್ಯ – ನ್ಯಾಯಬೆಲೆ ಅಂಗಡಿಯ ಕಳಪೆ ಅಕ್ಕಿ ವಿಡಿಯೋ ವೈರಲ್

    ಚಾಮರಾಜನಗರ: ಅನ್ನಭಾಗ್ಯ ಯೋಜನೆಯಡಿ ವಿತರಣೆಯಾಗಿರುವ ತೀರಾ ಕಳಪೆ ಗುಣಮಟ್ಟದ ಅಕ್ಕಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಜಿಲ್ಲೆಯ ಹನೂರು ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಲ್ಲಿಪಲ್ಯಂ ಗ್ರಾಮದ ನ್ಯಾಯಬೆಲೆ ಅಂಗಡಿಗೆ ವಿತರಣೆಯಾಗಿರುವ ಅಕ್ಕಿ ವಿಡಿಯೋ ಇದಾಗಿದ್ದು, ವಿಡಿಯೋದಲ್ಲಿ ಯುವಕನೋರ್ವ ಹುಳು ತಿಂದು ಕಪ್ಪು ಬಣ್ಣಕ್ಕೆ ತಿರುಗಿ, ಬೂದಿಯಂತಾದ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಯ ತೂಕದ ಯಂತ್ರದ ಮೇಲೆ ಇಟ್ಟು ತೋರಿಸುತ್ತಿರುವು ಸೆರೆಯಾಗಿದೆ. ತೀರಾ ಕಳಪೆ ಮಟ್ಟದ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸುತ್ತಿರುವುದಕ್ಕೆ ಸಿಟ್ಟಿಗೆದ್ದು ಯುವಕ ಈ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.

    ಅನ್ನಭಾಗ್ಯದ ಅಕ್ಕಿ ಹೋಗಿ ಹುಳುಭ್ಯಾಗದ ಅಕ್ಕಿ ತಿನ್ನಲು ಅಸಾಧ್ಯವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಯುವಕ ಕಿಡಿಕಾರಿದ್ದಾನೆ. ಬಡವರಿಗೆ ಸಹಾಯವಾಗಲಿ ಎಂದು ಅನ್ನಭಾಗ್ಯ ಯೋಜನೆ ಕಾರ್ಯರೂಪಕ್ಕೆ ಬಂತು. ಆದರೆ ಯೋಜನೆ ಹೆಸರಲ್ಲಿ ಈ ರೀತಿ ಕಳಪೆ ಮಟ್ಟದ ಅಕ್ಕಿ ಕೊಟ್ಟರೆ ಜನರು ಹೇಗೆ ಜೀವನ ನಡೆಸಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಎಲ್ಲೆಡೆ ಸಖತ್ ವೈರಲ್ ಆಗಿರುವ ವಿಡಿಯೋ ನೋಡಿ ಅನೇಕರು ಸರ್ಕಾರ ಹಾಗೂ ಅಧಿಕಾರಿಗಳ ಮೇಲೆ ಕೆಂಡಕಾರಿದ್ದಾರೆ. ಅವರು ನಿರ್ಲಕ್ಷ್ಯ ತೋರಿ ಕ್ರಮ ತೆಗೆದುಕೊಳ್ಳದಿದ್ದಕ್ಕೆ ಈ ಪರಿಸ್ಥಿತಿ ಬಂದಿದೆ ಎಂದು ಹರಿಹಾಯ್ದಿದ್ದಾರೆ. ಇನ್ನಾದರೂ ಸ್ಥಳೀಯ ಶಾಸಕ ಆರ್. ನರೇಂದ್ರ ಮತ್ತು ಅಧಿಕಾರಿಗಳು ಇತ್ತ ಗಮನ ಹರಿಸಿ, ಗುಣಮಟ್ಟದ ಅಕ್ಕಿ ಜನರಿಗೆ ನೀಡಲು ಮುಂದಾಗಬೇಕಿದೆ.

  • ಇಂದಿರಾ ಕ್ಯಾಂಟೀನ್‍ನಲ್ಲಿ ತಯಾರಾದ ಕೇಸರಿಬಾತ್‍ನಲ್ಲಿ ಹುಳ ಪತ್ತೆ

    ಇಂದಿರಾ ಕ್ಯಾಂಟೀನ್‍ನಲ್ಲಿ ತಯಾರಾದ ಕೇಸರಿಬಾತ್‍ನಲ್ಲಿ ಹುಳ ಪತ್ತೆ

    ವಿಜಯಪುರ: ನಗರದಲ್ಲಿ ನೂತನವಾಗಿ ಪ್ರಾರಂಭವಾಗಿದ್ದ ಇಂದಿರಾ ಕ್ಯಾಂಟೀನ್‍ನಲ್ಲಿ ಉಪಹಾರಗಳ ಜೊತೆ ಕೀಟಗಳು ಫ್ರೀ ಎಂಬಂತೆ ಕೇಸರಿಬಾತ್‍ನಲ್ಲಿ ಹುಳ ಪತ್ತೆಯಾಗಿದೆ.

    ಸೋಲಾಪುರ ರಸ್ತೆಯ ಸರ್ಕಾರಿ ಐಟಿಐ ಕಾಲೇಜಿನಲ್ಲಿರುವ ಇಂದಿರಾ ಕ್ಯಾಂಟೀನ್ ಕೇಸರಿಬಾತ್‍ನಲ್ಲಿ ಹುಳ ಪತ್ತೆಯಾಗಿದೆ. ಗ್ರಾಹಕರೊಬ್ಬರು ಬೆಳಗ್ಗೆ ಇಂದಿರಾ ಕ್ಯಾಂಟೀನ್‍ನಲ್ಲಿ ಕೇಸರಿಬಾತ್ ತಿನ್ನುತ್ತಿದ್ದ ವೇಳೆ ಹುಳ ಪತ್ತೆಯಾಗಿದೆ. ಉಪಹಾರದಲ್ಲಿ ಹುಳುಗಳನ್ನು ಕಂಡು ಅದನ್ನು ತಿನ್ನುತ್ತಿದ್ದ ಗ್ರಾಹಕ ಕಂಗಾಲಾಗಿದ್ದಾನೆ.

    ಶನಿವಾರ ತಾನೇ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಇಂದಿರಾ ಕ್ಯಾಂಟೀನ್‍ಗೆ ಚಾಲನೆ ನೀಡಲಾಗಿತ್ತು. ಪ್ರಾರಂಭವಾದ ಒಂದೇ ದಿನಕ್ಕೆ ಇಂತಾ ದುಸ್ಥಿತಿ ಬಂದಿರುವುದನ್ನು ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವ್ಯಕ್ತಿ ಕಣ್ಣಿನಿಂದ 15 ಸೆ.ಮೀ ಉದ್ದದ ಹುಳ ತೆಗೆದ ವೈದ್ಯರು

    ವ್ಯಕ್ತಿ ಕಣ್ಣಿನಿಂದ 15 ಸೆ.ಮೀ ಉದ್ದದ ಹುಳ ತೆಗೆದ ವೈದ್ಯರು

    ಉಡುಪಿ: 60 ವರ್ಷದ ವ್ಯಕ್ತಿಯೊಬ್ಬರ ಕಣ್ಣಿನಿಂದ 15 ಸೆ.ಮೀ ಉದ್ದದ ಹುಳವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರಗೆ ತೆಗೆಯಲಾಗಿದೆ.

    ಹಲವು ದಿನಗಳಿಂದ ಬಲಗಣ್ಣಿನ ನೋವಿನಿಂದ ಬಳಲುತ್ತಿದ್ದ ವ್ಯಕ್ತಿ, ಕುಂದಾಪುರದ ನ್ಯೂ ಮೆಡಿಕಲ್ ಸೆಂಟರಿನ ನೇತ್ರ ತಜ್ಞರಾದ ಡಾ. ಶ್ರೀಕಾಂತ್ ಶೆಟ್ಟಿಯವರನ್ನು ಸಂಪರ್ಕಿಸಿದ್ದಾರೆ. ವೈದ್ಯರು ಕಣ್ಣಿನ ತಪಾಸಣೆ ಮಾಡಿದಾಗ ಬಲಗಣ್ಣಿನ ಒಳಗೆ ಜೀವಂತವಾಗಿ ಹರಿದಾಡುತ್ತಿರುವ ಹುಳವನ್ನು ಪತ್ತೆಹಚ್ಚಿದ್ದಾರೆ.

    ಕಣ್ಣಿನ ಒಳಗಿರುವ ಹುಳವನ್ನು ಔಷಧಿಗಳ ಮೂಲಕ ಸಾಯಿಸಿ ತೆಗೆದರೆ ಕಣ್ಣಿನ ಒಳಗೆ ಊತ ಬಂದು ದೃಷ್ಟಿಗೆ ತೊಂದರೆ ಆಗುವ ಸಾಧ್ಯತೆ ಇತ್ತು. ಆ ಹುಳವನ್ನು ಒಂದು ಬದಿಗೆ ಬರುವಂತೆ ಮಾಡಿ ನಂತರ ಶಸ್ತ್ರ ಚಿಕಿತ್ಸೆಯ ಮೂಲಕ ಜೀವಂತ ಹುಳವನ್ನು ತೆಗೆದಿದ್ದಾರೆ.

    ಈ ಹುಳು ವುಚೆರಿಯಾ ಬ್ಯಾನ್ಕ್ರಾಫ್ಟಿ ಎನ್ನುವ ಜಾತಿಯದಾಗಿದ್ದು, ಇದು ಸೊಳ್ಳೆಗಳ ಮೂಲಕ ಹರಡುತ್ತದೆ ಎನ್ನಲಾಗಿದೆ. ಸೊಳ್ಳೆಗಳು ಕಚ್ಚಿದಾಗ ಇದರ ಲಾರ್ವಾಗಳು ರಕ್ತದಲ್ಲಿ ಸೇರಿ ಅಲ್ಲೇ ಬೆಳೆದು ಮೊಟ್ಟೆಯನ್ನಿಡುತ್ತವೆ. ಅಪರೂಪಕ್ಕೆ ಈ ಮೊಟ್ಟೆಗಳು ಕಣ್ಣಿನಲ್ಲಿ ಸೇರಿ ಅಲ್ಲೇ ಬೆಳೆದು ಹುಳುವಾಗಿ ಪರಿವರ್ತನೆ ಆಗುವ ಸಾಧ್ಯತೆಗಳಿವೆ. ಹುಳ ತೆಗೆದ ನಂತರ ರೋಗಿಯು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹುಳು ತುಂಬಿದ ನೀರನ್ನೇ ಕುಡಿಯುವ ದುಸ್ಥಿತಿ ಯಾದಗಿರಿಯ ಜೋಗಂಡಭಾವಿ ಗ್ರಾಮಸ್ಥರದ್ದು!

    ಹುಳು ತುಂಬಿದ ನೀರನ್ನೇ ಕುಡಿಯುವ ದುಸ್ಥಿತಿ ಯಾದಗಿರಿಯ ಜೋಗಂಡಭಾವಿ ಗ್ರಾಮಸ್ಥರದ್ದು!

    ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಜೋಗಂಡಭಾವಿ ಗ್ರಾಮಸ್ಥರಿಗೆ ಹುಳುಗಳಿಂದಲೇ ಆವೃತವಾಗಿರುವ ನೀರಿನ್ನೇ ಕುಡಿಯುವಂತಹ ದುಸ್ಥಿತಿ ಎದುರಾಗಿದೆ.

    ಈ ಗ್ರಾಮದಲ್ಲಿರುವುದು ಒಂದೇ ಬಾವಿ. ಈ ಬಾವಿಯಿಂದ ನೀರಿನ ಟ್ಯಾಂಕ್ ಮೂಲಕ ನೀರು ಪೂರೈಸಲಾಗುತ್ತೆ. ಸರ್ಕಾರ ಕೋಟಿ ಕೋಟಿ ರೂಪಾಯಿ ಕುಡಿಯುವ ನೀರು ಯೋಜನೆಗೆ ಅನುದಾನ ಬಿಡುಗಡೆ ಮಾಡಿದ್ರೂ ಕಿಂಚಿತ್ತು ಪ್ರಯೋಜನವಾಗಿಲ್ಲ.

     

    ಜೋಗಂಡಭಾವಿ ಗ್ರಾಮದಲ್ಲಿ ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆಯಿದೆ. ಆದ್ರೂ ಜಿಲ್ಲಾಪಂಚಾಯತ್ ಹಾಗೂ ಸಂಬಂಧಪಟ್ಟ ಅಧಿಕಾರಿಳು ಶುದ್ಧ ಕುಡಿಯುವ ನೀರು ಪೂರೈಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ.

    ಇನ್ನು ಈ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಕೊಳವೆ ಬಾವಿ ಮಂಜೂರಾದ್ರೂ ಕಾರ್ಯರೂಪಕ್ಕೆ ಬಂದಿಲ್ಲ. ಕುಡಿಯುವ ನೀರಿನ ಸಮಸ್ಯೆ ಎದರಿಸುವ ಗ್ರಾಮಸ್ಥರು ಗ್ರಾಮಪಂಚಾಯತ್ ಮುಂದೆ ಪ್ರತಿಭಟಿಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಒಟ್ಟಿನಲ್ಲಿ ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಗೊಂಡು ಜೋಗಂಡಭಾವಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ ಕೆಲಸ ಮಾಡಬೇಕಾಗಿದೆ.

  • ಟೊಮೆಟೋ ಸಾಸ್ ಅಂದ್ರೆ ಇಷ್ಟನಾ? ಹಾಗಿದ್ರೆ ನೀವು ಈ ಸುದ್ದಿ ಓದ್ಲೇಬೇಕು

    ಟೊಮೆಟೋ ಸಾಸ್ ಅಂದ್ರೆ ಇಷ್ಟನಾ? ಹಾಗಿದ್ರೆ ನೀವು ಈ ಸುದ್ದಿ ಓದ್ಲೇಬೇಕು

    ತುಮಕೂರು: ಹೋಟೆಲ್, ರೆಸ್ಟೋರೆಂಟ್‍ಗೆ ಹೋದಾಗ ಅಲ್ಲಿ ಕೊಡೋ ಸಾಸ್ ಬಳಸೋ ಮುನ್ನ ಸ್ವಲ್ಪ ಎಚ್ಚರ ವಹಿಸಿ. ಯಾಕಂದ್ರೆ ನಾಲಗೆಗೆ ಟೇಸ್ಟಿ ಆಗಿರೋ ಸಾಸ್‍ನಲ್ಲಿ ಹುಳಗಳದ್ದೇ ರಾಶಿ ಕಂಡುಬಂದಿದೆ.

    ಸಾಸ್ ತುಂಬಿಸಿಟ್ಟಿದ್ದ ಕಂಟೈನರ್ ಗಳಲ್ಲಿ ಹುಳ-ಹುಪ್ಪಟ್ಟೆಗಳ ರಾಶಿ ಕಂಡಿದೆ. ಹುಳಗಳಿರುವ ಈ ಸಾಸನ್ನೇ ಬಾಟಲ್‍ಗಳಲ್ಲಿ ತುಂಬಿ ಸಪ್ಲೈ ಮಾಡ್ತಾರೆ. ಈ ಸಾಸನ್ನೇ ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ಬಾಯಿ ಚಪ್ಪರಿಸೋಕೆ ಕೊಡ್ತಾರೆ. ಇನ್ನು ಸಾಸ್ ರೆಡಿ ಮಾಡೋ ಜಾಗ ನೋಡಿದ್ರೆ ಊಟ ಮಾಡೋಕೂ ಮನಸ್ಸಾಗಲ್ಲ.

    ಇಂಥದ್ದೊಂದು ಸಾಸ್ ತಯಾರಾಗ್ತಿರೋದು ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ತುಮಕೂರಿನ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ. ಇಲ್ಲಿ ರಂಜಿತಾ ಎಂಟರ್ ಪ್ರೈಸಸ್ ಕಂಪನಿ ಗುಡ್ ಅಂಡ್ ಫ್ರೆಶ್ ಅನ್ನೋ ಹೆಸರಲ್ಲಿ ಸಾಸ್ ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದೆ. ಟೊಮೆಟೋ ಬಳಸುವುದರ ಬದಲು ಮೈದಾ ಹಿಟ್ಟು, ಕೆಂಪು ಬಣ್ಣ ಸೇರಿಸಿ ಸಾಸ್ ರೆಡಿ ಮಾಡ್ತಾರೆ.

    ಹಗಲು ಹೊತ್ತಲ್ಲಿ ಫ್ಯಾಕ್ಟರಿ ಓಪನ್ ಮಾಡಿದ್ರೆ ಬಣ್ಣ ಬಯಲಾಗುತ್ತೆ ಅಂತಾ ರಾತ್ರಿ ಹೊತ್ತು ಸಾಸ್ ರೆಡಿ ಮಾಡಿ ಬಾಟಲ್‍ಗೆ ತುಂಬಿಸ್ತಾರೆ. ಫ್ಯಾಕ್ಟರಿಯ ಒಳಗೆ ಹೋಗಿ ನೋಡಿದ್ರೆ ಸಾಸ್ ತುಂಬಿದ್ದ ಕಂಟೈನರ್‍ಗಳಲ್ಲಿ ಹುಳುಗಳದ್ದೇ ರಾಶಿ ಕಂಡುಬಂದಿದೆ.

     

  • ಊಟದಲ್ಲಿ ಇಲಿ ತ್ಯಾಜ್ಯ, ನುಸಿ, ಹುಳ- ಹುಬ್ಬಳ್ಳಿಯಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಪ್ರತಿಭಟನೆ

    ಊಟದಲ್ಲಿ ಇಲಿ ತ್ಯಾಜ್ಯ, ನುಸಿ, ಹುಳ- ಹುಬ್ಬಳ್ಳಿಯಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಪ್ರತಿಭಟನೆ

    ಹುಬ್ಬಳ್ಳಿ: ಇಲ್ಲಿನ ಬಿಸಿಎಮ್ ಹಾಸ್ಟೆಲ್ ನಲ್ಲಿ ಗುಣಮಟ್ಟದ ಆಹಾರ ನೀಡುತ್ತಿಲ್ಲವೆಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

    ಹುಬ್ಬಳ್ಳಿಯ ವಿದ್ಯಾನಗರದಲ್ಲಿರೋ ಬಿಸಿಎಮ್ ಹಾಸ್ಟೆಲ್ ನಲ್ಲಿ ನೀಡ್ತಾಯಿರೋ ಊಟದಲ್ಲಿ ಇಲಿಯ ತ್ಯಾಜ್ಯ, ನುಸಿ, ಹುಳುಗಳು ಬರ್ತಾಯಿದ್ದು, ಈ ಊಟ ಮಾಡಿದ ವಿದ್ಯಾರ್ಥಿಗಳು ಅನಾರೋಗ್ಯದಿಂದ ಬಳಲಿದ್ದಾರೆ. ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ವಸತಿ ನಿಲಯದಲ್ಲಿದ್ದು, ಕಳಪೆ ಗುಣಮಟ್ಟದ ಆಹಾರ ನೀಡ್ತಾಯಿರೋ ಬಗ್ಗೆ ಮೇಲ್ವಿಚಾರಕರ ಗಮನಕ್ಕೆ ತಂದ್ರೂ ಪ್ರಯೋಜನವಾಗಿಲ್ಲ ಅಂತ ವಿದ್ಯಾರ್ಥಿಗಳು ದೂರಿದ್ದಾರೆ.

    ಇನ್ನು ಒಂದು ಹೊತ್ತಿಗೆ ಕೇವಲ ಎರಡು ಚಪಾತಿ ನೀಡುತ್ತಾರೆ. ಆದ್ರೆ ಅದು ನಮಗೆ ಸಾಕಾಗಲ್ಲಾ, ಒಂದು ಚಪಾತಿ ಹೆಚ್ಚಿಗೆ ಕೇಳಿದ್ರೂ ವಾರ್ಡನ್ ಬಾಯಿಂದ ಇಲ್ಲ ಸಲ್ಲದ ಬೈಗುಳಗಳನ್ನು ಕೇಳಬೇಕು ಎಂದು ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಹೀಗಾಗಿ ಕಳೆದ ಮೂರು ದಿನಗಳಿಂದ ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಊಟ ಮಾಡದೆ ಹೋರಾಟ ಮಾಡುತ್ತಿದ್ದಾರೆ. ಹಾಸ್ಟೆಲ್ ವಾರ್ಡನ್ ಹಾಗೂ ಸಿಬ್ಬಂದಿಗಳು ಸಹ ಕಿರುಕುಳ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

  • ವಿಡಿಯೋ: ಚಿಕನ್ ತಿನ್ನುವ ಮೊದಲು ಈ ಸುದ್ದಿ ಓದಿ!

    ವಿಡಿಯೋ: ಚಿಕನ್ ತಿನ್ನುವ ಮೊದಲು ಈ ಸುದ್ದಿ ಓದಿ!

    ಮೈಸೂರು: ನೀವು ಚಿಕನ್ ಪ್ರೀಯರೇ? ಹಾಗಾದರೆ ನೀವು ಈ ಸುದ್ದಿಯನ್ನು ತಪ್ಪದೆ ನೋಡಬೇಕು. ಮಾಂಸದ ಅಂಗಡಿಯಿಂದ ಅದರಲ್ಲೂ ಬ್ರ್ಯಾಂಡ್ ಇರುವ ಮಾಂಸದ ಅಂಗಡಿಯಿಂದ ತಂದ ಮಾಂಸವನ್ನು ಸರಿಯಾಗಿ ಗಮನಿಸದೆ ಇದ್ದರೆ ನಿಮ್ಮ ಕಥೆ ಮುಗಿಯಿತು.

    ಮಾಂಸದ ಜೊತೆಗೆ ಹುಳದ ಮಾಂಸವು ನಿಮ್ಮ ಹೊಟ್ಟೆ ಸೇರುತ್ತೆ. ಹಸಿ ಮಾಂಸದಲ್ಲಿ ಹುಳ ಕಂಡು ಗ್ರಾಹಕಿಯೊಬ್ಬರು ಬೆರಗಾಗಿಬಿಟ್ಟಿದ್ದಾರೆ. ಹುಳಗಳ ಸಮೇತ ಚಿಕನ್ ಅಂಗಡಿಗೆ ಬಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಮೈಸೂರಿನ ಟಿಕೆ ಲೇಔಟ್‍ನ ವಿಜಯ್ ಚಿಕನ್ ಸ್ಟಾಲ್‍ನಲ್ಲಿ ಮಹಿಳೆಗೆ ಇಂತಹ ಹುಳ ಇರುವ ಮಾಂಸ ನೀಡಲಾಗಿದೆ.

    ಈ ಘಟನೆಯಿಂದ ಎಚ್ಚೆತ್ತು ಚಿಕನ್ ಅಂಗಡಿ ನೌಕರರು ಗ್ರಾಹಕರಲ್ಲಿ ಕ್ಷಮೆಯಾಚಿಸಿದ್ದಾರೆ. ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಈ ವಿಚಾರವನ್ನು ಆಹಾರ ಇಲಾಖೆ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಗ್ರಾಹಕಿ ತಿಳಿಸಿದ್ದಾರೆ.

    https://youtu.be/LSNq-8EfMtQ