Tag: ಹುರಿಗಡಲೆ ಪೇಡಾ

  • ನಿಮ್ಮ ಮನೆಯಲ್ಲಿ ದಸರಾ ಹಬ್ಬದ ಸಂಭ್ರಮ ಹೆಚ್ಚಿಸಲು ಮಾಡಿ ಹುರಿಗಡಲೆ ಪೇಡಾ

    ನಿಮ್ಮ ಮನೆಯಲ್ಲಿ ದಸರಾ ಹಬ್ಬದ ಸಂಭ್ರಮ ಹೆಚ್ಚಿಸಲು ಮಾಡಿ ಹುರಿಗಡಲೆ ಪೇಡಾ

    ಬ್ಬದ ದಿನ ಸಿಹಿಯಾದ ಅಡುಗೆ ತುಂಬಾ ಸ್ಪೆಷಲ್ ಆಗಿರುತ್ತದೆ. ಮನೆ-ಮನೆಗಳಲ್ಲಿ ಒಂದೊಂದು ರೀತಿಯ ಭಕ್ಷ್ಯ-ಭೋಜ್ಯಗಳನ್ನು ತಯಾರಿಸಲಾಗುತ್ತದೆ. ದಸರಾ ಹಬ್ಬಕ್ಕೆ ಎಷ್ಟು ಪ್ರಾಮುಖ್ಯತೆಯನ್ನು ನೀಡುತ್ತೇವೆಯೋ ಅಷ್ಟೇ ಹಬ್ಬದ ದಿನ ಭಕ್ಷ್ಯ-ಭೋಜ್ಯಗಳಿಗೆ ಮಾನ್ಯತೆಯನ್ನು ನೀಡಿತ್ತೇವೆ. 9 ದಿನ ಆಚರಿಸುವ ಈ ವಿಶೇಷ ಹಬ್ಬಕ್ಕೆಂದು ವಿವಿಧ ಸಿಹಿತಿಂಡಿಗಳನ್ನು ಮಾಡುತ್ತೇವೆ. ನಾವು ಇಂದು ಹುರಿಗಡಲೆ ಪೇಡಾ ಮಾಡುವ ವಿಧಾನವನ್ನು ನೋಡೋಣ.

    ಬೇಕಾಗುವ ಪದಾರ್ಥಗಳು:
    * ಹುರಿಗಡಲೆ ಪುಡಿ- ಅರ್ಧಬಟ್ಟಲು
    * ಕೇಸರಿ- ಸ್ವಲ್ಪ
    * ಹಾಲು- 1 ಕಪ್
    * ತುಪ್ಪ- ಅರ್ಧ ಕಪ್
    * ಸಕ್ಕರೆ ಪುಡಿ- 1ಕಪ್
    * ಏಲಕ್ಕಿ ಪುಡಿ-ಅರ್ಧ ಚಮಚ

    ಮಾಡುವ ವಿಧಾನ:
    * ಮೊದಲಿಗೆ ಸಣ್ಣ ಪಾತ್ರೆಗೆ ತುಪ್ಪ, ಸಕ್ಕರೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಪೇಸ್ಟ್ ರೀತಿ ತಯಾರಿಸಿಕೊಳ್ಳಬೇಕು.
    * ನಂತರ ಇದಕ್ಕೆ ಹುರಿಗಡಲೆ ಪುಡಿ, ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಇದನ್ನೂ ಓದಿ: ನವರಾತ್ರಿ ಸ್ಪೆಷಲ್ ತುಪ್ಪದ ಜಿಲೇಬಿ ಮಾಡೋದು ಹೇಗೆ?

    * ನಂತರ ಹಾಲಿಗೆ ಕೇಸರಿ ದಳಗಳನ್ನು ಹಾಕಿಟ್ಟುಕೊಳ್ಳಬೇಕು.
    * ಈಗ ಕೇಸರಿದಳದಲ್ಲಿ ನೆನೆದ ಹಾಲನ್ನು ಸ್ವಲ್ಪ ಸ್ವಲ್ಪವೇ ಹುರಿಗಡಲೆಗೆ ಹಾಕಿ ಮೃದುವಾಗಿ ಹಿಟ್ಟನ್ನು ಮಿಶ್ರಣ ಮಾಡಿಕೊಳ್ಳಬೇಕು. ದನ್ನೂ ಓದಿ: ಹಬ್ಬಕ್ಕೆ ಮಾಡಲು ಮರೆಯದಿರಿ ಸಿಹಿಯಾದ ಬಾಸುಂದಿ

    * ನಂತರ ಹಿಟ್ಟಿಗೆ ಸ್ವಲ್ಪ ತುಪ್ಪವನ್ನು ಹಾಕಿ ನಿಮಗೆ ಬೇಕಾದ ಆಕಾರಕ್ಕೆ ಮಾಡಿಕೊಂಡು, ಡ್ರೈಫ್ರೂಟ್ಸ್‌ನಿಂದ ಅಲಂಕರಿಸಿದರೆ ರುಚಿಕರವಾದ ಹುರಿಗಡಲೆ ಪೇಡಾ ಸವಿಯಲು ಸಿದ್ಧವಾಗುತ್ತದೆ.

    Live Tv
    [brid partner=56869869 player=32851 video=960834 autoplay=true]