Tag: ಹುಬ್ಬಳ್ಳಿ

  • ಬಾಲಕಿ ಕೊಲೆ ಕೇಸ್ | ಆರೋಪಿ ಮೇಲೆ ಕಟ್ಟಿನಿಟ್ಟಿನ ಕ್ರಮ ಆಗಬೇಕು – ಪ್ರಹ್ಲಾದ್ ಜೋಶಿ

    ಬಾಲಕಿ ಕೊಲೆ ಕೇಸ್ | ಆರೋಪಿ ಮೇಲೆ ಕಟ್ಟಿನಿಟ್ಟಿನ ಕ್ರಮ ಆಗಬೇಕು – ಪ್ರಹ್ಲಾದ್ ಜೋಶಿ

    ಹುಬ್ಬಳ್ಳಿ/ಧಾರವಾಡ: 5 ವರ್ಷದ ಬಾಲಕಿ ಮೇಲೆ ಆತ್ಯಾಚಾರಕ್ಕೆ ಯತ್ನಿಸಿ, ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೇಲೆ ಕಟ್ಟಿನಿಟ್ಟಿನ ಕ್ರಮ ಆಗಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಪ್ರತಿಕ್ರಿಯಿಸಿದ್ದಾರೆ.

    ಧಾರವಾಡದಲ್ಲಿ (Dharwad) ಮಾತನಾಡಿದ ಅವರು, ಈ ಘಟನೆ ಈಗಷ್ಟೇ ನನ್ನ ಗಮನಕ್ಕೆ ಬಂದಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇದರಲ್ಲಿ ನಾನು ರಾಜಕೀಯ ಮಾತನಾಡುವುದಿಲ್ಲ. ಆದರೆ, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಆಗಬೇಕು. ಎಲ್ಲ ರೀತಿಯ ಮುಂಜಾಗ್ರತೆ ತೆಗೆದುಕೊಳ್ಳಬೇಕು. ಪೊಲೀಸರು ಕೂಡಲೇ ಕಾರ್ಯ ಪ್ರವೃತ್ತರಾಗಬೇಕು. ಈ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದರು.ಇದನ್ನೂ ಓದಿ: ನನ್ನ ಮೇಲಿನ ಗುತ್ತಿಗೆದಾರರ ಎರಡೂ ಆರೋಪಗಳು ನಿರಾಧಾರ – ರವಿ ಬೋಸರಾಜು

    ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಡೆದಿದೆ. ಬಿಹಾರ್ ಮೂಲದ ಸೈಕೋಪಾತ್ ಈ ಕೃತ್ಯ ಎಸಗಿದ್ದಾನೆ. ಘಟನೆಯನ್ನು ತೀವ್ರವಾಗಿ ಖಂಡಿಸಿದ ಸ್ಥಳೀಯರು ಪೊಲೀಸ್ ಠಾಣೆ ಎದುರು ಜಮಾಯಿಸಿ ಆಕ್ರೋಶ ಹೊರಹಾಕಿದರು.

    ಆರೋಪಿಯನ್ನು ಗಲ್ಲಿಗೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಬಾಲಕಿ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಯಾವ ಒತ್ತಡಕ್ಕೂ ಮಣಿಯದೆ ಜಾತಿಗಣತಿ ಜಾರಿ ಮಾಡಬೇಕು: ಪ್ರಣವಾನಂದ ಸ್ವಾಮೀಜಿ

  • ಬಿಜೆಪಿಯವ್ರು ಮನೆ ನೀಡಿರುವುದು ಸಾಬೀತು ಮಾಡಿದ್ರೆ ರಾಜೀನಾಮೆ ನೀಡುತ್ತೇನೆ: ಜಮೀರ್ ಸವಾಲ್

    ಬಿಜೆಪಿಯವ್ರು ಮನೆ ನೀಡಿರುವುದು ಸಾಬೀತು ಮಾಡಿದ್ರೆ ರಾಜೀನಾಮೆ ನೀಡುತ್ತೇನೆ: ಜಮೀರ್ ಸವಾಲ್

    ಹುಬ್ಬಳ್ಳಿ: ಬಿಜೆಪಿ ತಮ್ಮ ಅವಧಿಯಲ್ಲಿ ಒಂದೇ ಒಂದು ಮನೆ ನೀಡಿರುವುದು ಸಾಬೀತು ಮಾಡಿದ್ರೆ, ನಾನು ನಾಳೆಯೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್‌ (Zameer Ahmed Khan) ಬಿಜೆಪಿಯವರಿಗೆ ಸವಾಲ್ ಹಾಕಿದರು.

    ಹುಬ್ಬಳ್ಳಿ (Hubballi) ಮಂಟರು ರಸ್ತೆಯ ಹೊಸ ಯಲ್ಲಾಪುರ ಓಣಿಯಲ್ಲಿ ಸ್ಲಂ ಬೋರ್ಡ್‌ನಿಂದ ನಿರ್ಮಾಣವಾದ ಮನೆಗಳ ವೀಕ್ಷಣೆ ಬಳಿಕ ಮಾತನಾಡಿದ ಅವರು, ಈ ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಮನೆಗಳನ್ನು ಮಂಜೂರು ಮಾಡಲಾಗಿತ್ತು. ಬಳಿಕ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರ ಮತ್ತು ಬಿಜೆಪಿ ಸರ್ಕಾರದಲ್ಲಿ ಮನೆಗಳ ಯಾವುದೇ ಅಭಿವೃದ್ಧಿ ಆಗಿಲ್ಲ. ಬಿಜೆಪಿ ಸರ್ಕಾರ ತಮ್ಮ ಅವಧಿಯಲ್ಲಿ ಒಂದೇ ಒಂದು ಮನೆ ಮಂಜೂರು ಮಾಡಿಲ್ಲ. ಈ ಹಿಂದೆ ನಾವೇ ಮಂಜೂರು ಮಾಡಿರುವ ಮನೆ ನಿರ್ಮಾಣ ಮಾಡಲು 8 ವರ್ಷ ಬೇಕಾಯಿತು ಎಂದು ಕಿಡಿಕಾರಿದರು. ಇದನ್ನೂ ಓದಿ: ಈಗಿನ ರಾಜಕೀಯದಲ್ಲಿ ಸಿದ್ಧಾಂತ ಎಂಬುದು ಉಳಿದಿಲ್ಲ: ದೇಶಪಾಂಡೆ ಬೇಸರ

    ಮುಂದಿನ ತಿಂಗಳು ರಾಜ್ಯ ವ್ಯಾಪ್ತಿಯಲ್ಲಿ ಒಟ್ಟು 42 ಸಾವಿರ ಮನೆಗಳನ್ನು ನೀಡುತ್ತಿದ್ದೇವೆ. ಹುಬ್ಬಳ್ಳಿ ಒಂದಕ್ಕೆ ಒಂದು ಸಾವಿರಕ್ಕೂ ಅಧಿಕ ಮನೆ ನೀಡುತ್ತಿದ್ದೇವೆ. ಸಿಎಂ ಸಿದ್ದರಾಮಯ್ಯ ಹಾಗೂ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಈ ತಿಂಗಳ ಅಂತ್ಯದಲ್ಲಿ ಹುಬ್ಬಳ್ಳಿಯಲ್ಲಿ ದೊಡ್ಡ ಕಾರ್ಯಕ್ರಮ ಮಾಡುತ್ತೇವೆ ಎಂದರು. ಇದನ್ನೂ ಓದಿ: ಹುಬ್ಬಳ್ಳಿ | ಸೈಕೋಪಾತ್‌ನಿಂದ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ

    ಸ್ಲಂ ಬೋರ್ಡ್‌ನಿಂದ ನಿರ್ಮಾಣವಾದ ಮನೆಗಳ ವೀಕ್ಷಿಸಿದ ಸಚಿವ ಜಮೀರ್ ಅಹ್ಮದ್ ಅವರಿಗೆ ಶಾಸಕ ಪ್ರಸಾದ್ ಅಬ್ಬಯ್ಯ, ಎನ್.ಹೆಚ್.ಕೋನರೆಡ್ಡಿ ಸಾಥ್ ನೀಡಿದರು.

  • ಹುಬ್ಬಳ್ಳಿ | ಸೈಕೋಪಾತ್‌ನಿಂದ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ

    ಹುಬ್ಬಳ್ಳಿ | ಸೈಕೋಪಾತ್‌ನಿಂದ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ

    – ಬಾಲಕಿ ಹತ್ಯೆ ಖಂಡಿಸಿ ಪೋಷಕರು ಸಾರ್ವಜನಿಕರಿಂದ ಪ್ರತಿಭಟನೆ, ಭುಗಿಲೆದ್ದ ಆಕ್ರೋಶ

    ಹುಬ್ಬಳ್ಳಿ: ಸೈಕೋಪಾತ್‌ (Psychopath) ಒಬ್ಬ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ (Hubballi) ಅಶೋಕನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಬಿಹಾರ (Bihar) ಮೂಲದ ಸೈಕೋಪಾತ್‌ ಬಾಲಕಿಯನ್ನ ಶೆಡ್‌ಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ಚೀರಾಟ ಕೇಳಿ ಅಲ್ಲೇ ಇದ್ದ ಸ್ಥಳೀಯರು ಶೆಡ್‌ನತ್ತ ಬಂದಿದ್ದಾರೆ. ಜನ ಬರುತ್ತಿರುವುದನ್ನು ಕಂಡ ಸೈಕೋಪಾತ್‌ ಭಯದಿಂದ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿ, ಎಸ್ಕೇಪ್‌ ಆಗಿದ್ದಾನೆ. ಇದನ್ನೂ ಓದಿ: ಮತಾಂತರಕ್ಕೆ ಒಪ್ಪದ ಪತ್ನಿ, ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ – 9 ಜನರ ವಿರುದ್ಧ ಎಫ್‍ಐಆರ್

    ಬಾಲಕಿ ಹತ್ಯೆ ಖಂಡಿಸಿ ಠಾಣೆ ಮುಂದೆ ಪ್ರತಿಭಟನೆ:
    ಇನ್ನೂ 5 ವರ್ಷದ ಬಾಲಕಿ ಹತ್ಯೆ ಖಂಡಿಸಿ, ಆಕ್ರೋಶಗೊಂಡಿರುವ ಬಾಲಕಿ ಪೋಷಕರು ಹಾಗೂ ಸ್ಥಳೀಯರು ಅಶೋಕನಗರ ಠಾಣೆ (Ashok Nagar Police Station) ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ. ಈ ಬೆನ್ನಲ್ಲೇ ಸ್ಥಳಕ್ಕಾಗಮಿಸಿರುವ ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌ ಪರಿಸ್ಥಿತಿ ನಿಯಂತ್ರಿಸಲು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪತ್ನಿ ಆತ್ಮಹತ್ಯೆ; ಹಳೇ ಲವರ್ ಜೊತೆಗಿದ್ದ ಅಕ್ರಮ ಸಂಬಂಧದ ಬಗ್ಗೆ ಒಪ್ಪಿಕೊಂಡ ಟೆಕ್ಕಿ ಪತಿ

    ಬಾಲಕಿ ಕೊಲೆ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿರುವ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, ಬಾಲಕಿ ಪೋಷಕರು ಕೊಪ್ಪಳ ಮೂಲದವರಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದರು. ತಂದೆ ಪೇಯಿಂಟಿಂಗ್‌ ಕೆಲಸ, ತಾಯಿ ಮನೆಗೆಲಸ ಮಾಡಿಕೊಂಡಿದ್ದರು. ಸದ್ಯಕ್ಕೆ ಆರೋಪಿ ಹಿನ್ನೆಲೆ ತಿಳಿದುಬಂದಿಲ್ಲ, ಬಾಲಕಿಯ ಮೇಲೆ ದೌಜನ್ಯದ ಬಗ್ಗೆ ಪರಿಶೀಲನೆ ನಡೆದಿದೆ. ಆರೋಪಿ ಬಾಲಕಿ ಜೊತೆ ಯಾವ ವರ್ತನೆ ಮಾಡಿದ್ದಾನೆಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಖಳನಟ ಶೇಷಗಿರಿ ಬಸವರಾಜು ವಿರುದ್ಧ ರೇಪ್ ಆರೋಪ ಪ್ರಕರಣ‌; ಬಿ-ರಿಪೋರ್ಟ್ ಸಲ್ಲಿಕೆ

    ಇಂದು ಬೆಳಗ್ಗೆ ತಾಯಿ ಮನೆಗೆಲಸಕ್ಕೆ ಹೋಗುವಾಗ ಮಗುವನ್ನೂ ಕರೆದುಕೊಂಡು ಹೋಗಿದ್ದರು. ತಾಯಿ ಮನೆಯೊಳಗೆ ಕೆಲಸ ಮಾಡುವ ಸಮಯದಲ್ಲಿ ಯುವಕನೋರ್ವ ಮಗುವನ್ನು ಎತ್ತಿಕೊಂಡು ಹೋಗಿದ್ದಾನೆ. ಪಾಳು ಬಿದ್ದ ಕೋಣೆಯಲ್ಲಿ ಮಗುವಿನ ಶವ ಪತ್ತೆಯಾಗಿದೆ. ಆರೋಪಿಯ ಹಿನ್ನೆಲೆ ಇನ್ನು ಗೊತ್ತಾಗಿಲ್ಲ. ರೇಪ್ ಬಗ್ಗೆ ಇನ್ನೂ ಮಾಹಿತಿ ಇಲ್ಲ, ವೈದ್ಯಕೀಯ ತಪಾಸಣೆ ನಂತರ ಅತ್ಯಾಚಾರದ ಬಗ್ಗೆ ತಿಳಿಯಲಿದೆ. ಈ ಬಗ್ಗೆ ಕುಟುಂಬಸ್ಥರಿಂದ ದೂರು ಪಡೆದು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

  • ಕುಲಗೋಡ ಆಂಜನೇಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಪ್ರಹ್ಲಾದ್ ಜೋಶಿ

    ಕುಲಗೋಡ ಆಂಜನೇಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಪ್ರಹ್ಲಾದ್ ಜೋಶಿ

    – ರಥ ಎಳೆದು ಲೋಕ ಕಲ್ಯಾಣಕ್ಕೆ ಪ್ರಾರ್ಥಿಸಿದ ಕೇಂದ್ರ ಸಚಿವ

    ಹುಬ್ಬಳ್ಳಿ: ಹನುಮ ಜಯಂತಿ ಪ್ರಯುಕ್ತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರು ಬೆಳಗಾವಿ (Belagavi) ಜಿಲ್ಲೆಯ ಕುಲಗೋಡ ಗ್ರಾಮದ ಪ್ರಸಿದ್ಧ ಶ್ರೀ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.

    ಶನಿವಾರ ಮುಂಜಾನೆಯೇ ತಮ್ಮ ಮನೆದೇವರಾದ ಕುಲಗೋಡ ಶ್ರೀ ಹನುಮ ಮಂದಿರಕ್ಕೆ ಕುಟುಂಬ ಸಮೇತ ತೆರಳಿದ್ದ ಸಚಿವರು, ರಾಮಧೂತ ಹನುಮನನ್ನು ಸ್ತುತಿಸುತ್ತಾ ಭಕ್ತಿ ಸಮರ್ಪಿಸಿದರು. ಇದನ್ನೂ ಓದಿ: ಸರ್ಕಾರದ ವಿರುದ್ಧದ 60% ಕಮಿಷನ್ ಆರೋಪ ಸೇರಿಸಿ ಎಸ್‌ಐಟಿ ತನಿಖೆ ನಡೆಸಲಿ: ಬೊಮ್ಮಾಯಿ

    ಪ್ರಹ್ಲಾದ್ ಜೋಶಿಯವರು ದೇಗುಲದ ಪ್ರಾಂಗಣದಲ್ಲಿ ಶ್ರೀ ಆಂಜನೇಯ ದೇವರ ಅಲಂಕೃತ ರಥವನ್ನೆಳೆದು ಲೋಕ ಕಲ್ಯಾಣಕ್ಕೆ ಪ್ರಾರ್ಥಿಸಿದರು. ಸಹೋದರ ಗೋವಿಂದ ಜೋಶಿ ಮತ್ತು ಕುಟುಂಬದ ಸದಸ್ಯರೂ ಈ ವಿಶೇಷ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: IPL 2025 | ಗುಜರಾತ್‌ಗೆ ಮಾರ್ಕ್ರಮ್‌, ಪೂರನ್‌ ಪಂಚ್‌ – ಲಕ್ನೋಗೆ 6 ವಿಕೆಟ್‌ಗಳ ಸೂಪರ್‌ ಜಯ

  • ಭ್ರಷ್ಟ ಕುಟುಂಬದ ಮಾತು ಕೇಳಿ ನನ್ನನ್ನ ಉಚ್ಚಾಟನೆ ಮಾಡಲಾಗಿದೆ: ಯತ್ನಾಳ್ ನಿಗಿನಿಗಿ ಕೆಂಡ

    ಭ್ರಷ್ಟ ಕುಟುಂಬದ ಮಾತು ಕೇಳಿ ನನ್ನನ್ನ ಉಚ್ಚಾಟನೆ ಮಾಡಲಾಗಿದೆ: ಯತ್ನಾಳ್ ನಿಗಿನಿಗಿ ಕೆಂಡ

    – ಪ್ರಹ್ಲಾದ್ ಜೋಶಿಯನ್ನ ಸೋಲಿಸಲು ಬಿಎಸ್‌ವೈ ಚೇಲಾಗಳನ್ನ ರೆಡಿ ಮಾಡಿದ್ದಾರೆ; ಹೊಸ ಬಾಂಬ್

    ಹುಬ್ಬಳ್ಳಿ: ಭ್ರಷ್ಟ ಕುಟುಂಬದ ಮಾತು ಕೇಳಿ ನನ್ನನ್ನ ಉಚ್ಚಾಟನೆ ಮಾಡಲಾಗಿದೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basanagouda Patil Yatnal) ಆರೋಪಿಸಿದರು.

    ಹುಬ್ಬಳ್ಳಿಯ(Hubballi) ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನೇನು ಭ್ರಷ್ಟಾಚಾರ ಮಾಡಿಲ್ಲ, ಅಡ್ಡ ಮತದಾನ ಮಾಡಿಲ್ಲ. ಎಲ್ಲಾ ಸಮುದಾಯದ ಯುವಕರು ರಸ್ತೆಗೆ ಬಂದು ನನ್ನ ಪರವಾಗಿ ಧ್ವನಿ ಎತ್ತುತ್ತಿದ್ದಾರೆ. ಹಿಂದುತ್ವದ ಪರವಾಗಿ ಮಾತನಾಡುತ್ತಿರುವವನ್ನು ತುಳಿಯುತ್ತಿದ್ದಾರೆ ಎಂಬ ಭಾವನೆ ಜನರಲ್ಲಿದೆ. ನನ್ನ ಪರವಾಗಿ ಮಾತನಾಡಿ, ಹೋರಾಟ ಮಾಡಿ ಎಂದು ನಾನು ಯಾರಿಗೂ ಹೇಳಿಲ್ಲ. ಇಡೀ ಹಿಂದು ಸಮಾಜ ನನ್ನ ಪರವಾಗಿ ಹೋರಾಟ ಮಾಡುತ್ತಿದೆ ಎಂದರು. ಇದನ್ನೂ ಓದಿ: ಅಯ್ಯೋ ವಿಧಿಯೇ… ಕಾಲೇಜಿನಲ್ಲಿ ವಿದಾಯ ಭಾಷಣ ಮಾಡುತ್ತಲೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು

    ಈ ಹಿಂದೆ ಯಡಿಯೂರಪ್ಪನವರನ್ನ(B S Yediyurappa) ಮತ್ತು ಸಿದ್ದರಾಮಯ್ಯನವರನ್ನ(Siddaramaiah) ಹೊರಗಡೆ ಹಾಕಿದಾಗ ಇಷ್ಟು ದೊಡ್ಡಮಟ್ಟದ ಹೋರಾಟ ಮಾಡಿಲ್ಲ. ಇಂದು ಸ್ವಯಂಪ್ರೇರಿತವಾಗಿ ಜನರು ಹೋರಾಟ ಮಾಡುತ್ತಿದ್ದಾರೆ. ನಾವು ಯಾರಿಗೂ ದುಡ್ಡು ಕೊಟ್ಟು ಹೋರಾಟ ಮಾಡಲು ಹೇಳಿಲ್ಲ. ಹಿಂದೂ ಯುವಕರ ಕೊಲೆಯಾದ ಸಮಯದಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡಿದ್ದೇನೆ. ನಾನು ಕೂಡಲಸಂಗಮದ ಶ್ರೀಗಳಿಗೆ ಹೋರಾಟ ಮಾಡಿ ಎಂದು ಹೇಳಿಲ್ಲ ಎಂದು ಹೇಳಿದರು.

    ಮೋಹನ್ ಲಿಂಬಿಕಾಯಿ ಯಡಿಯೂರಪ್ಪನ ಚೇಲಾ
    ಮೀಸಲಾತಿಗಾಗಿ ಪಾದಯಾತ್ರೆ ಆರಂಭ ಮಾಡಿದಾಗ ನಾನೇ ಅದಕ್ಕೆ ಚಾಲನೆ ನೀಡಿದ್ದೆ. ಶನಿವಾರ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ಮಾಡಿದ ಮಹಾನಾಯಕ ನಮ್ಮ ಸ್ವಾಮೀಜಿಗಳಿಗೆ ಹೋರಾಟ ಕೈ ಬಿಡಲು ಆಮಿಷ ತೋರಿಸಿದ್ದರು. ಸಮಾಜದ ವ್ಯಕ್ತಿಗಳಿಗೆ ಅನ್ಯಾಯ ಆದಾಗ ಸ್ವಾಮೀಜಿ ಹೋರಾಟ ಮಾಡಿದ್ದಾರೆ. ಪರೋಕ್ಷವಾಗಿ ಪಂಚಮಸಾಲಿ ಮುಖಂಡರಾದ ಮೋಹನ್ ಲಿಂಬಿಕಾಯಿ, ನೀಲಕಂಠ ಶೆಟ್ಟಿ, ಪ್ರಭಣ್ಣ ಹುಣಸಿಕಟ್ಟಿ ಮೇಲೆ ಹರಿಹಾಯ್ದ ಅವರು, ಮೋಹನ್ ಲಿಂಬಿಕಾಯಿ ಯಡಿಯೂರಪ್ಪನ ಚೇಲಾ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಹುಬ್ಬಳ್ಳಿ | ಭೀಕರ ರಸ್ತೆ ಅಪಘಾತ – ಮೂವರು ಮಹಿಳೆಯರು ಸ್ಥಳದಲ್ಲೇ ಸಾವು

    ಪಂಚಮಸಾಲಿ ಹೋರಾಟದ ಸಮಯದಲ್ಲಿ ಸುವರ್ಣಸೌಧದ ಮುಂದೆ ಲಾಠಿ ಚಾರ್ಜ್ ಮಾಡಲಾಗಿದೆ. ಬಿಜೆಪಿ ಸರ್ಕಾರ 2ಡಿ ಮೀಸಲಾತಿ ನೀಡಿತ್ತು. ಈಗಿನ ಸರ್ಕಾರ ಮೀಸಲಾತಿ ಜಾರಿ ಮಾಡಲು ಆಸಕ್ತಿ ತೋರುತ್ತಿಲ್ಲ. ಮುಸ್ಲಿಂ ಮೀಸಲಾತಿ ನೀಡಲು ಸಿದ್ದರಾಮಯ್ಯ ಸರ್ಕಾರ ಮುಂದಾಗುತ್ತಿದೆ. ಆದರೆ ರೈತಾಪಿ ವರ್ಗ ಅತೀ ಹೆಚ್ಚು ಇರುವ ಪಂಚಮಸಾಲಿ ಸಮುದಾಯಕ್ಕೆ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಸರ್ಕಾರಕ್ಕೆ ಬುದ್ಧಿ ಕಲಿಸುವ ಕಾರ್ಯ ಆಗಬೇಕು
    ಮಾನವೀಯತೆ ಬಿಟ್ಟು ಪಂಚಮಸಾಲಿ ಸಮುದಾಯದ ಹೋರಾಟದ ಸಮಯದಲ್ಲಿ ಹಿಗ್ಗಾಮುಗ್ಗಾ ಹೊಡೆದು ಚಿತ್ರಹಿಂಸೆ ನೀಡಲಾಗಿದೆ. ಲಾಠಿ ಚಾರ್ಜ್ ಗೈಡ್‌ಲೈನ್ಸ್ ಬಿಟ್ಟು, ಮಾನವ ಹಕ್ಕು ಉಲ್ಲಂಘನೆ ಮಾಡಿ ಪಂಚಮಸಾಲಿ ಸಮುದಾಯದ ಮೇಲೆ ಹಲ್ಲೆ ಮಾಡಲಾಗಿದೆ. ಈ ಸರ್ಕಾರಕ್ಕೆ ಹಿಂದೂಗಳ ಮೇಲೆ ಎಷ್ಟು ದ್ವೇಷಯಿದೆ. ಅಮಾನುಷವಾಗಿ ಈ ಲಾಠಿ ಚಾರ್ಜ್ ಮಾಡಲಾಗಿದೆ. ಹೈಕೋರ್ಟ್ ಸೂಚನೆಯನ್ನು ಸ್ವಾಗತ ಮಾಡುತ್ತೇನೆ. ಸರ್ಕಾರಕ್ಕೆ ಬುದ್ಧಿ ಕಲಿಸುವ ಕಾರ್ಯ ಆಗಬೇಕು ಎಂದರು. ಇದನ್ನೂ ಓದಿ: ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಸಿನಿಮಾ ಕೊಟ್ಟಿದ್ದ ರಶ್ಮಿಕಾಗೆ ಶುರುವಾಯ್ತಾ ಬ್ಯಾಡ್ ಟೈಮ್?

    ವಿಜಯೇಂದ್ರನ ಹಗರಣಕ್ಕೆ ಯಡಿಯೂಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ರು
    ಯಡಿಯೂರಪ್ಪನವರನ್ನ ಮುಖ್ಯಮಂತ್ರಿ ಸ್ಥಾನದಿಂದ ಹೈಕಮಾಂಡ್ ಕೆಳಗೆ ಇಳಿಸಿದ್ದು ಏಕೆಂದರೆ ಅವರು ಮಾಡಿದ ಭ್ರಷ್ಟಾಚಾರ, ಚೆಕ್ ಮೂಲಕ ಲಂಚ ತೆಗೆದುಕೊಂಡಿದ್ದೆ ರಾಜೀನಾಮೆಗೆ ಕಾರಣ. ಅವರ ಸುಪುತ್ರ ವಿಜಯೇಂದ್ರ(B Y Vijayendra) ಮಾಡಿದ ಹಗರಣದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ನನ್ನನ್ನ ನೀವು ಹೊರಗಡೆ ಹಾಕಿರಬಹುದು. ರಾಜ್ಯದಲ್ಲಿ ಇವತ್ತು ಹಿಂದುತ್ವದ ನಾಯಕ ಬೇಕು ಎಂದು ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಭಗವಾಧ್ವಜದ ಮೇಲೆ ಚುನಾವಣೆ ಎದುರಿಸ್ತೇನೆ, ಮುಸ್ಲಿಂ ಮತಗಳು ಬೇಕಿಲ್ಲ: ಯತ್ನಾಳ್‌ ಲೇವಡಿ

    ಎಲ್ಲಾ ಸಮಾಜ ನ್ಯಾಯಕ್ಕಾಗಿ ಸದನದಲ್ಲಿ ಹೋರಾಟ ಮಾಡಿದವನು ನಾನು. ಕೂಡಲಸಂಗಮ ಸ್ವಾಮೀಜಿಗಳು ಬಹಳಷ್ಟು ನಿಸ್ವಾರ್ಥರಾಗಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕೊಡಲು ಸಂವಿಧಾನದಲ್ಲಿ ಅವಕಾಶ ಇಲ್ಲ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಹೋರಾಟವನ್ನ ನಮ್ಮ ಸ್ವಾಮೀಜಿಗಳು ಮುಂದುವರೆಸುತ್ತಾರೆ. ಸಮಾಜದ ಹೋರಾಟದಿಂದ ಮಂತ್ರಿ ಸ್ಥಾನವನ್ನ ತಪ್ಪಿಸಿಕೊಂಡವನು ನಾನು ಎಂಬುದು ಎಲ್ಲರಿಗೂ ಗೊತ್ತು. ಪ್ರಬಣ್ಣ ಹುಣಸಿಕಟ್ಟಿ ಶನಿವಾರ ಸ್ವಾಮೀಜಿಗಳ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಪ್ರಹ್ಲಾದ್ ಜೋಶಿ(Prahlad Joshi) ಮತ್ತು ಅರವಿಂದ್ ಬೆಲ್ಲದ್ ಅವರನ್ನ ಸೋಲಿಸಲು ಇಲ್ಲೊಬ್ಬ ನ್ಯಾಯವಾದಿಯನ್ನ ಯಡಿಯೂರಪ್ಪ ರೆಡಿ ಮಾಡಿದ್ದಾರೆ. ಪ್ರತಿಯೊಬ್ಬರನ್ನ ಸೋಲಿಸಲು ಒಬ್ಬೊಬ್ಬ ಚೇಲಾಗಳನ್ನ ಯಡಿಯೂರಪ್ಪ ಸಿದ್ಧ ಮಾಡಿ ಇಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

  • ಹುಬ್ಬಳ್ಳಿ | ಭೀಕರ ರಸ್ತೆ ಅಪಘಾತ – ಮೂವರು ಮಹಿಳೆಯರು ಸ್ಥಳದಲ್ಲೇ ಸಾವು

    ಹುಬ್ಬಳ್ಳಿ | ಭೀಕರ ರಸ್ತೆ ಅಪಘಾತ – ಮೂವರು ಮಹಿಳೆಯರು ಸ್ಥಳದಲ್ಲೇ ಸಾವು

    ಹುಬ್ಬಳ್ಳಿ: ಕಾರೊಂದು ರಸ್ತೆ ಬದಿಯ ಡಿವೈಡರ್‌ಗೆ ಡಿಕ್ಕಿ ಹೊಡೆತದ ಪರಿಣಾಮ ಕಾರಿನಲ್ಲಿದ್ದ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯ(Hubballi) ನೂಲ್ವಿ ಕ್ರಾಸ್‌ನಲ್ಲಿ ನಡೆದಿದೆ.

    ವರೂರು(Varur) ಗ್ರಾಮದಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಕ್ವಿಡ್ ಕಾರು ವೇಗವಾಗಿ ಬಂದು ರಸ್ತೆ ಬದಿಯ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಖಾಲಿ ಸೈಟಿನಲ್ಲಿ ಕಸ ಬೀಳುತ್ತೋ ಇಲ್ವೋ, ಬಿಬಿಎಂಪಿ ಸೆಸ್ ಮಾತ್ರ ಬೀಳುತ್ತೆ: ಆರ್. ಅಶೋಕ್

    ಮೃತರು ಹುಬ್ಬಳ್ಳಿಯ ಲಿಂಗರಾಜ ನಗರದ ನಿವಾಸಿಗಳು ಎಂಬ ಮಾಹಿತಿ ದೊರೆತಿದ್ದು, ಗಾಯಳುಗಳನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಸಿನಿಮಾ ಕೊಟ್ಟಿದ್ದ ರಶ್ಮಿಕಾಗೆ ಶುರುವಾಯ್ತಾ ಬ್ಯಾಡ್ ಟೈಮ್?

  • ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಭಗವಾಧ್ವಜದ ಮೇಲೆ ಚುನಾವಣೆ ಎದುರಿಸ್ತೇನೆ, ಮುಸ್ಲಿಂ ಮತಗಳು ಬೇಕಿಲ್ಲ: ಯತ್ನಾಳ್‌ ಲೇವಡಿ

    ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಭಗವಾಧ್ವಜದ ಮೇಲೆ ಚುನಾವಣೆ ಎದುರಿಸ್ತೇನೆ, ಮುಸ್ಲಿಂ ಮತಗಳು ಬೇಕಿಲ್ಲ: ಯತ್ನಾಳ್‌ ಲೇವಡಿ

    – ವಿಜಯೇಂದ್ರಗೆ ಧಮ್‌ ಇದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಅಂತ ಸವಾಲ್‌

    ಹುಬ್ಬಳ್ಳಿ: ಬಿಜೆಪಿಯಿಂದ ಉಚ್ಛಾಟನೆಗೊಂಡ ಬಳಿಕ ಇದೇ ಮೊದಲಬಾರಿಗೆ ಹುಬ್ಬಳ್ಳಿಗೆ ಭೇಟಿ ನೀಡಿದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಮತ್ತೆ ಬಿ.ಎಸ್‌ ಯಡಿಯೂರಪ್ಪ ಹಾಗೂ ಬಿ.ವೈ ವಿಜಯೇಂದ್ರ (BY Vijayendra) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಹುಬ್ಬಳ್ಳಿಯಲ್ಲಿ (Hubballi) ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಜಯೇಂದ್ರನಿಗೆ ಧಮ್ ಇದ್ದರೇ ಶಾಸಕ ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಲಿ. ಶಿಕಾರಿಪುರಕ್ಕೆ ಅವನು ರಾಜೀನಾಮೆ ನೀಡಲಿ, ನಾನು ನನ್ನ ಕ್ಷೇತ್ರಕ್ಕೆ ರಾಜೀನಾಮೆ ನೀಡುವೆ. ನಾನು ಭಗವಾಧ್ವಜದ ಮೇಲೆ ಚುನಾವಣೆ ಎದುರಿಸುವೆ. ನನಗೆ ಮುಸ್ಲಿಂ ಮತಗಳು (Muslims Vote) ಬೇಕಿಲ್ಲ, ಅವನಿಗೆ ಆ ಧಮ್ ಇದೇಯಾ..? ಅಂತ ಸವಾಲ್‌ ಹಾಕಿದರು. ಇದನ್ನೂ ಓದಿ: ಈ ಸರ್ಕಾರ ಪೋಸ್ಟ್‌ ಮಾರ್ಟಂಗೂ ದರ ವಿಧಿಸಿಬಿಟ್ರೆ ಸಾಯೋದಕ್ಕೂ ಜನ ಹಿಂಜರೀತಾರೆ – ಸಿ.ಟಿ ರವಿ ಲೇವಡಿ

    ವಿಜಯೇಂದ್ರ ಇನ್ನೊಬ್ಬರ ಭಿಕ್ಷೆ ಮೇಲೆ ಶಾಸಕನಾದವನು, ಈ ಬಗ್ಗೆ ಡಿ.ಕೆ.ಶಿವಕುಮಾರ್ ಅವರೇ ಬಹಿರಂಗವಾಗಿ ಹೇಳಿದ್ದಾರೆ. ಕುಟುಂಬ ರಾಜಕಾರಣದಿಂದ ಬಿಜೆಪಿ ಮುಕ್ತವಾದಾಗ, ನಾನೂ ಮರಳಿ ಪಕ್ಷಕ್ಕೆ ಸೇರುವೆ. ಯಡಿಯೂರಪ್ಪ ಕುಟುಂಬದಿಂದ ಬಿಜೆಪಿ ಮುಕ್ತ ಆದ ಮೇಲೆ ಪಕ್ಷಕ್ಕೆ ಹೋಗ್ತೀನಿ. ನಾನು ಒಳ್ಳೆಯವನೇ ಆದ್ರೆ ದುಷ್ಟರಿಗೆ ದುಷ್ಟ ಎಂದು ಎಚ್ಚರಿಕೆ ನೀಡಿದರು.

    ಮುಂದುವರಿದು.. ವಿಜಯೇಂದ್ರ ನಿನಗೆ ಧಮ್ ಇದ್ರೆ ನನಗೆ ನೇರವಾಗಿ ಮಾತಾಡು. ಹಂದಿಗಳ ಕಡೆ ಮಾತಾಡಸಬೇಡ, ಹಂದಿಗಳು ಹೊರಗೆ ಇರಬೇಕು, ಮನೆ ಒಳಗೆ ಕರಕೋಬಾರದು. ಸ್ವಾಮಿಯಾಗಿ (ಜಂಗಮ) ಎಸ್‌ಸಿ ಸರ್ಟಿಫಿಕೇಟ್ ತಗೊಂಡಿದಾನೆ ನಾಚಿಕೆ ಆಗಲ್ವಾ? ಅಂತ ಹೆಸರು ಹೇಳದೇ ರೇಣುಕಾಚಾರ್ಯ ಕೆಂಡಾಮಂಡಲವಾದರು. ಇದನ್ನೂ ಓದಿ: ನಾಳೆಯಿಂದ ಬಿಜೆಪಿಯಿಂದ ಜನಾಕ್ರೋಶ ಯಾತ್ರೆ – ಮೈಸೂರಿನಲ್ಲಿ ಜೋಶಿ ಚಾಲನೆ; ಸರ್ಕಾರದ ವೈಫಲ್ಯ ವಿರುದ್ಧ ಕಹಳೆ

    ಅಲ್ಲದೇ ಪಂಚಮಸಾಲಿ ಟ್ರಸ್ಟ್ ಪ್ರಭಣ್ಣ ಲಫಂಗ.. ಬದ್ಮಾಷ್. ಮಠದ ಆಸ್ತಿಯನ್ನು ಹೊಡೆದಿದ್ದಾರೆ. ಕೂಡಲ ಸಂಗಮದ ಆಸ್ತಿಯನ್ನು ತನ್ನ ಕುಟುಂಬದ ಆಸ್ತಿ ಮಾಡಿಕೊಂಡಿದ್ದಾನೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹಿಂದೆ ಡೀಸೆಲ್ ದರ ಏರಿಕೆ ಆದಾಗ ಯಾಕೆ ಲಾರಿ ಮಾಲೀಕರು ಮುಷ್ಕರ ಮಾಡಲಿಲ್ಲ? – ಡಿಕೆಶಿ

  • ಮಹಿಳೆಯರು ಬ್ಯಾಗ್‌ನಲ್ಲಿ ತ್ರಿಶೂಲ ಇಟ್ಕೊಳ್ಳಿ: ಮುತಾಲಿಕ್ ಪ್ರಚೋದನಕಾರಿ ಹೇಳಿಕೆ

    ಮಹಿಳೆಯರು ಬ್ಯಾಗ್‌ನಲ್ಲಿ ತ್ರಿಶೂಲ ಇಟ್ಕೊಳ್ಳಿ: ಮುತಾಲಿಕ್ ಪ್ರಚೋದನಕಾರಿ ಹೇಳಿಕೆ

    – ನೇಹಾ ಹತ್ಯೆಯಾದ ದಿನ ಮಹಿಳೆಯರಿಗೆ ತ್ರಿಶೂಲ ದೀಕ್ಷೆ ಕೊಡ್ತೀವಿ: ಶ್ರೀರಾಮಸೇನೆ ನಾಯಕ

    ಹುಬ್ಬಳ್ಳಿ: ಮಹಿಳೆಯರು ಬ್ಯಾಗ್‌ನಲ್ಲಿ ತ್ರಿಶೂಲ ಇಟ್ಟುಕೊಳ್ಳಿ. ಅತ್ಯಾಚಾರಿಗಳು, ಕೊಲೆಗಡುಕರು, ಲವ್ ಜಿಹಾದ್ ಮಾಡುವವರಿಗೆ ತ್ರಿಶೂಲದಿಂದ ಚುಚ್ಚಿ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

    ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನೇಹಾ ಹಿರೇಮಠ ಹತ್ಯೆಯಾಗಿ ಏ.18 ಕ್ಕೆ ಒಂದು ವರ್ಷ ಆಗುತ್ತೆ. ಅಂದು ಶ್ರೀರಾಮಸೇನೆ ಒಂದು ಸಾವಿರ ಮಹಿಳೆಯರಿಗೆ ತ್ರಿಶೂಲ ದೀಕ್ಷೆ ನೀಡಲಿದೆ. ಮಹಿಳೆಯರು ತಮ್ಮ ಬ್ಯಾಗ್‌ನಲ್ಲಿ ಈ ತ್ರಿಶೂಲ ಇಟ್ಟುಕೊಳ್ಳಲಿ. ಇಂತಹವರು ಯಾರಾದ್ರು ಬಂದ್ರೆ ಚುಚ್ಚಿ. ಅತ್ಯಾಚಾರಿಗಳು, ಕೊಲೆಗಡುಕರು, ಲವ್ ಜಿಹಾದ್ ಮಾಡುವವರಿಗೆ ಚುಚ್ಚಿ. ಕಾಂಗ್ರೆಸ್ ಮಹಿಳೆಯರ ರಕ್ಷಣೆ ಮಾಡಲ್ಲ. ಕಾಂಗ್ರೆಸ್ ಇರೋದು ಮುಸ್ಲಿಮರ ರಕ್ಷಣೆಗಾಗಿ, ಅವರ ವೋಟ್‌ಗಾಗಿ ಜೊಲ್ಲು ಸುರಿಸುತ್ತಾರೆ ಎಂದು ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.

    ಅನ್ಯಕೋಮಿನ ಯುವಕನ ಟಾರ್ಚರ್‌ನಿಂದ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರುವ ಯುವತಿಯನ್ನು ಮುತಾಲಿಕ್ ಭೇಟಿಯಾದರು. ಯುವತಿ ಆರೋಗ್ಯದ ಬಗ್ಗೆ ವಿಚಾರಿಸಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಕಳೆದ ಎರಡು ದಿನಗಳ ಹಿಂದೆ ಅನ್ಯಕೋಮಿನ ಯುವಕ ಸಿರಾಜ್ ಯುವತಿಗೆ ಟಾರ್ಚರ್ ನೀಡುತ್ತಿದ್ದ. ಧಾರವಾಡ ಜಿಲ್ಲೆಯ ಕುಂದಗೋಳ ನಿವಾಸಿ ಯುವತಿಗೆ ಟಾರ್ಚರ್ ನೀಡಿದ್ದ. ಖಾಸಗಿ ಫೋಟೊ ಇಟ್ಕೊಂಡು ಬ್ಲಾö್ಯಕ್‌ಮೇಲ್ ಮಾಡಿದ್ದ. ಇದರಿಂದ ಮನನೊಂದು ಯುವತಿ ಆತ್ಮಹತ್ಯೆಗೆ ಯತ್ನಸಿದ್ದಳು. ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬAಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಇಡೀ ದೇಶದಲ್ಲಿ ಹಿಂದುತ್ವದ ಹೆಸರಿನಲ್ಲಿ ಇರುವುದು ಬಿಜೆಪಿ ಪಕ್ಷ ಒಂದೆ. ಆದರೆ ಕರ್ನಾಟಕದಲ್ಲಿ ಹಿಂದುತ್ವ, ಹಿಂದೂ ಸಂಘಟನೆಗಳನ್ನು ಸರಿಯಾಗಿ ಗಮನಿಸಿಲ್ಲ. ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲಿನ ಕೇಸ್ ವಾಪಸಾತಿ ಮಾಡಿಲ್ಲ. ಬಿಜೆಪಿ ಆಡಳಿತದಲ್ಲೇ ಹಿಂದೂ ಸಂಘಟನೆ ಮುಖ್ಯಸ್ಥರ ಕೊಲೆಯಾಯಿತು. ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಬಿಜೆಪಿ ನೆಲಕ್ಕೆ ಬಿದ್ದಿದೆ. ಯತ್ನಾಳ್ ಅವರು ಹಿಂದೂ ಪಕ್ಷ ಕಟ್ಟುವುದಕ್ಕಿಂತ ಬಿಜೆಪಿಯನ್ನೇ ಪ್ರಬಲ ಹಿಂದೂಪಕ್ಷ ಮಾಡೋದು ಒಳ್ಳೆಯದು. ಯತ್ನಾಳ್‌ರನ್ನು ವಾಪಸಾತಿ ಮಾಡಲೇಬೇಕು. ರಾಜ್ಯ ಬಿಜೆಪಿಯಲ್ಲಿ ಭ್ರಷ್ಟಾಚಾರ ರಹಿತ, ವಂಶದ ರಹಿತ ಆಡಳಿತ ನಡೆಸುವ ಪ್ರಕ್ರಿಯೆ ಮಾಡಬೇಕು. ರಾಜ್ಯದಲ್ಲಿ ಮುಂದೆ ಬಿಜೆಪಿ ಒಳ್ಳೆಯ ಭವಿಷ್ಯಯಿದೆ ಎಂದು ತಿಳಿಸಿದ್ದಾರೆ.

    ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ ಸ್ವಾಗತಿಸಿದ ಮುತಾಲಿಕ್, ವಕ್ಫ್ ಬೋರ್ಡ್ ಹೆಸರಿನಲ್ಲಿ ಸರ್ಕಾರಿ ಜಾಗ, ರೈತರ, ಮಠಮಾನ್ಯಗಳ, ದಲಿತರ ಜಾಗ, ಎಂಎಲ್‌ಎ, ಎಂಪಿಗಳ ಜಾಗವನ್ನು ಅತಿಕ್ರಮಣ ಮಾಡಿ ವಕ್ಫ್ ಬೋರ್ಡ್ ಲೂಟಿ ಮಾಡುತ್ತಿತ್ತು. ಇದರ ವಿರುದ್ಧ ಬಿಲ್ ಪಾಸ್ ಮಾಡಿರುವ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಅಭಿನಂದನೆ. ಇದನ್ನು ವಿರೋಧ ಮಾಡುತ್ತಿರುವವರು ದೇಶದ್ರೋಹಿಗಳು. ಬರೀ ವೋಟ್‌ಬ್ಯಾಂಕ್, ಅಧಿಕಾರ ಒಂದೇ ಅಲ್ಲ. ದೇಶ, ಜನ ಇದ್ದಾರೆ. ಆದರೆ ಲೂಟಿಕೋರರ ಪರವಾಗಿ ನಿಲ್ಲತ್ತಾರೆ ಕನಿಷ್ಠ ಪ್ರಜ್ಞೆ ಇಲ್ವ. ಸಂವಿಧಾನದ ಮೀರಿ ಕಾಂಗ್ರೆಸ್ ಕಾನೂನು ತಂದಿದೆ. ಅವರಿಗೆ ನಾಚಿಕೆ ಆಗಬೇಕು. ಸಂವಿಧಾನದ ಧಿಕ್ಕರಿಸಿ ವಕ್ಫ್ ಬೋರ್ಡ್ಗೆ ಪವರ್ ನೀಡಿದ್ದರು ಎಂದು ಟೀಕಿಸಿದ್ದಾರೆ.

    ಕಾಂಗ್ರೆಸ್‌ನವರು ನೀತಿಗೆಟ್ಟವರು, ನೀಚ ಕಾಂಗ್ರೆಸ್ಸಿಗರು. ವಕ್ಫ್ ಬೋರ್ಡ್ ಕೆಲ ಮೌಲ್ವಿಗಳು ವ್ಯವಸ್ಥಿತವಾಗಿ ತಮ್ಮ ಸ್ವಾರ್ಥಕ್ಕೆ ಬಳಕೆ ಮಾಡುತ್ತಿದ್ದರು. ಮಲ್ಲಿಕಾರ್ಜುನ ಖರ್ಗೆ ವಕ್ಫ್ ಬೋರ್ಡ್ ಹೆಸರಿನಲ್ಲಿ ನೂರಾರು ಎಕರೆ ಲೂಟಿ ಮಾಡಿರುವ ಆರೋಪ ಹೊರಬಂದಿದೆ. ಅನ್ವರ್ ಮಾನ್ಪಡಿ ವರದಿಯಲ್ಲಿ ದಾಖಲೆ ಸಮೇತ ಇದೆ ಇದಕ್ಕೆಲ್ಲಾ ಕರ್ನಾಟಕ ಬಿಜೆಪಿ ಕಾರಣ. ಕರ್ನಾಟಕ ಬಿಜೆಪಿಯವರು ಅನ್ವರ್ ಮಾನ್ಪಡಿ ವರದಿಯನ್ನು ತಮ್ಮ ಕುರ್ಚಿ ಬುಡದಲ್ಲಿ ಇಟ್ಟುಕೊಂಡು ಈಗ ವಕ್ಫ್ ಬೋರ್ಡ್ ಬಗ್ಗೆ ಮಾತನಾಡುತ್ತಾರೆ. ಕರ್ನಾಟಕ ಬಿಜೆಪಿಗೆ ನಾಚಿಕೆ ಆಗಬೇಕು. ಎಷ್ಟು ರೀತಿಯ ಡೀಲಿಂಗ್, ವ್ಯವಹಾರ ಆಗಿದೆ. ಕರ್ನಾಟಕ ಬಿಜೆಪಿಗೆ ವಕ್ಫ್ ಬೋರ್ಡ್ ಬಿಲ್ ಬಗ್ಗೆ ಮಾತನಾಡಬೇಡಿ. ಓವೈಸಿ ಮತ್ತು ಮುಸ್ಲಿಂ ಎಂಪಿಗಿಂತ ಹಿಂದೂ ಎಂಪಿಗಳು ವಿರೋಧ ಮಾಡಿದರು. ಇವರಿಗೆ ಮಾನ, ಮರ್ಯಾದೆ ಇದೆಯಾ? ಮೋದಿಯವರು ತೆಗೆದುಕೊಂಡ ಕ್ರಮ ಅತ್ಯಂತ ಶ್ರೇಷ್ಠವಾಗಿದೆ ಎಂದು ತಿಳಿಸಿದ್ದಾರೆ.

  • ಪ್ರೀತಿ ನಿರಾಕರಿಸಿದ್ದಕ್ಕೆ ಅನ್ಯಕೋಮಿನ ಯುವಕನಿಂದ ಯುವತಿಗೆ ಟಾರ್ಚರ್, ಕೊಲೆ ಯತ್ನ

    ಪ್ರೀತಿ ನಿರಾಕರಿಸಿದ್ದಕ್ಕೆ ಅನ್ಯಕೋಮಿನ ಯುವಕನಿಂದ ಯುವತಿಗೆ ಟಾರ್ಚರ್, ಕೊಲೆ ಯತ್ನ

    – ನೇಹಾ ಹಿರೇಮಠ ಪ್ರಕರಣಕ್ಕೆ ವರ್ಷ ತುಂಬುತ್ತಲೇ ಅದೇ ರೀತಿಯ ಮತ್ತೊಂದು ಘಟನೆ

    ಹುಬ್ಬಳ್ಳಿ: ನೇಹಾ ಹಿರೇಮಠ (Neha Hiremath) ಪ್ರಕರಣಕ್ಕೆ ವರ್ಷ ತುಂಬುತ್ತಲೇ ಅದೇ ರೀತಿಯ ಘಟನೆಯೊಂದು ಹುಬ್ಬಳ್ಳಿಯ (Hubballi) ವಿದ್ಯಾನಗರದಲ್ಲಿ (Vidya Nagar) ನಡೆದಿದ್ದು, ಪ್ರೀತಿ ನಿರಾಕರಿಸಿದ್ದಕ್ಕೆ ಅನ್ಯಧರ್ಮೀಯ ಯುವಕನೊಬ್ಬ ಯುವತಿಗೆ ಟಾರ್ಚರ್ ನೀಡಿ, ಕೊಲೆಗೆ ಯತ್ನಿಸಿದ್ದಾನೆ. ಇದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನುವ ವಿಚಾರ ಬೆಳಕಿಗೆ ಬಂದಿದೆ.

    ಸಂತ್ರಸ್ತೆ ಹಾಗೂ ಸಿರಾಜ್ ಒಂದೇ ಪಟ್ಟಣದ ನಿವಾಸಿಗಳು. ಸದ್ಯ ಸಂತ್ರಸ್ತೆ ಪ್ಯಾರಾ ಮೆಡಿಕಲ್ ಕೋರ್ಸ್ನಲ್ಲಿ ಓದುತ್ತಿದ್ದಾಳೆ. ಮೊದಲಿನಿಂದಲೂ ಸಂತ್ರಸ್ತೆಗೆ ಸಿರಾಜ್‌ನ ಪರಿಚಯವಿತ್ತು. ಪ್ರೀತಿಸುವಂತೆ ಸಂತ್ರಸ್ತೆಗೆ ಒತ್ತಾಯ ಮಾಡಿದ್ದು, ಬಳಿಕ ಟಾರ್ಚರ್ ಕೂಡ ನೀಡಿದ್ದ. ಅಲ್ಲದೇ ಸಂತ್ರಸ್ತೆಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.ಇದನ್ನೂ ಓದಿ:ಪ್ರತಿದಿನ ಕಿರುಕುಳ ಕೊಡ್ತಿದ್ಲು, ನಾನೇ ದೌರ್ಜನ್ಯಕ್ಕೆ ಒಳಗಾಗಿದ್ದೇನೆ – ಪತ್ನಿಯ ಕೊಲೆ ರಹಸ್ಯ ಬಿಚ್ಚಿಟ್ಟ ಟೆಕ್ಕಿ ಪತಿ!

    ರಂಜಾನ್ ಹಬ್ಬದಂದು ಸಿರಾಜ್ ಹುಬ್ಬಳ್ಳಿಯಲ್ಲಿ ಸಂತ್ರಸ್ತೆ ಓದುತ್ತಿದ್ದ ಕಾಲೇಜಿಗೆ ತೆರಳಿ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇದೆಲ್ಲದರಿಂದ ತ್ರೀವವಾಗಿ ಮನನೊಂದ ಸಂತ್ರಸ್ತೆ ಕಾಲೇಜಿನ ಹಾಸ್ಟೆಲ್‌ನಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸದ್ಯ ಕೆಎಂಸಿ ಆಸ್ಪತ್ರೆಯಲ್ಲಿ ಸಂತ್ರಸ್ತೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಗಳ ಈ ಪರಿಸ್ಥಿತಿಯನ್ನು ನೆನೆದು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದು, ಸಿರಾಜ್ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇನ್ನೂ ಇದು ಅನ್ಯಧರ್ಮೀಯ ಯುವಕನಿಂದ ಲವ್ ಜಿಹಾದ್, ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ.

    ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಕಿಮ್ಸ್ ಆಸ್ಪತ್ರೆಗೆ ಭೇಟಿ ಸಂತ್ರಸ್ತೆಯ ಆರೋಗ್ಯ ವಿಚಾರಿಸಿ, ಪ್ರಕರಣದ ಕುರಿತು ಮಾಹಿತಿ ಪಡೆದಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಗಳವಾರ ರಾತ್ರಿಯೇ ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ (Vidya Nagar Police Station) ಪ್ರಕರಣ ದಾಖಲಾಗಿದೆ. ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದ್ದು, ನೇಹಾ ಹಿರೇಮಠ ಪ್ರಕರಣದ ನಂತರ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ, ಪಾಲಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಹೀಗಾಗಿ ಜನರು ಪೊಲೀಸ್ ಇಲಾಖೆಯ ಜೊತೆ ಸಹಕಾರ ನೀಡದರೆ ಮುಂದೆ ಈ ರೀತಿ ಘಟನೆ ನಡೆಯದಂತೆ ಸಕಾಲದಲ್ಲಿ ತಡೆಗಟ್ಟಲು ಸಹಾಯವಾಗುತ್ತದೆ ಎಂದು ಮನವಿ ಮಾಡಿದ್ದಾರೆ.ಇದನ್ನೂ ಓದಿ:ಉಕ್ರೇನ್‌ ಮಹಿಳೆಯರನ್ನ ರೇಪ್‌ ಮಾಡುವಂತೆ ಒತ್ತಾಯಿಸುತ್ತಿದ್ದ ರಷ್ಯಾ ಸೈನಿಕನ ಪತ್ನಿಗೆ ಕಠಿಣ ಜೈಲು ಶಿಕ್ಷೆ

  • ರಂಜಾನ್ ವೇಳೆ ಸಂಘ ಪರಿವಾರದ ವಿರುದ್ಧ ವಿವಾದಿತ ಪೋಸ್ಟರ್ ಪ್ರದರ್ಶನ – ಎಸ್‌ಡಿಪಿಐ ಮುಖಂಡನ ಬಂಧನ

    ರಂಜಾನ್ ವೇಳೆ ಸಂಘ ಪರಿವಾರದ ವಿರುದ್ಧ ವಿವಾದಿತ ಪೋಸ್ಟರ್ ಪ್ರದರ್ಶನ – ಎಸ್‌ಡಿಪಿಐ ಮುಖಂಡನ ಬಂಧನ

    ಹುಬ್ಬಳ್ಳಿ: ರಂಜಾನ್ (Ramzan) ಪ್ರಾರ್ಥನೆ ವೇಳೆ ಸಂಘ ಪಾರಿವಾರದ ವಿರುದ್ಧ ಅವಹೇಳನಕಾರಿ ಪ್ಲೇ ಕಾರ್ಡ್ ಪ್ರದರ್ಶಿಸಿದ್ದ ಪ್ರಕರಣದಲ್ಲಿ ಎಸ್‌ಡಿಪಿಐ ಮುಖಂಡನನ್ನು (SDPI Leader) ಪೊಲೀಸರು ಬಂಧಿಸಿದ್ದಾರೆ.

    ಎಸ್‌ಡಿಪಿಐ ಮುಖಂಡ ಅಬ್ದುಲ್ ಗಪ್ಪುರ್ ಕುರಹಟ್ಟಿ ಬಂಧಿತ ಆರೋಪಿ. ಇದನ್ನೂ ಓದಿ: Hubballi | ರಂಜಾನ್ ಆಚರಣೆ ವೇಳೆ ಎಸ್‌ಡಿಪಿಐನಿಂದ ವಿವಾದಿತ ಪೋಸ್ಟರ್‌ಗಳ ಪ್ರದರ್ಶನ

    ಪ್ರಾರ್ಥನೆ ವೇಳೆ ಎಸ್‌ಡಿಪಿಐ ಕಾರ್ಯಕರ್ತರು ಸಂಘ ಪರಿವಾರಗಳ ವಿರುದ್ಧ ಪ್ಲೇ ಕಾರ್ಡ್ ತೋರಿಸಿದ್ದರು. ಇದರಿಂದ ಆಕ್ರೋಶಗೊಂಡು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಉಪನಗರ ಪೊಲೀಸ್ ಠಾಣೆಯಲ್ಲಿ ಎಸ್‌ಡಿಪಿಐ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿದ್ದರು. ಇದನ್ನೂ ಓದಿ: ಮಹಿಳೆ ಅನುಮಾನಾಸ್ಪದ ಸಾವು – ಪತಿಯ ಅಕ್ರಮ ಸಂಬಂಧದಿಂದ ಕೊಲೆ ಆರೋಪ

    ದೂರಿನ ಅನ್ವಯ ಅಬ್ದುಲ್ ಗಪ್ಪುರ್ ಕುರಹಟ್ಟಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಎಫ್‌ಐಆರ್ ದಾಖಲಾಗುತ್ತಿದ್ದಂತೆ ಅಬ್ದುಲ್ ಗಪ್ಪುರ್‌ನನ್ನು ಬಂಧಿಸಿದ ಪೊಲೀಸರು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಭೂಕಂಪವಾಗಿದ್ರೂ ಸೈಟ್ ಫೈಲ್ ಕದಿಯಲು ಯತ್ನಿಸಿದ ಚೀನಿಯರು – ನಾಲ್ವರು ಅರೆಸ್ಟ್

    ಪೊಲೀಸರು ಅಬ್ದುಲ್ ಗಪ್ಪುರ್ ಮೊಬೈಲ್ ಫೋನ್ ಸಹ ವಶಕ್ಕೆ ಪಡೆದಿದ್ದಾರೆ. ಆರೋಪಿಗೆ ಕೋರ್ಟ್ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.