Tag: ಹುಬ್ಬಳ್ಳಿ

  • ಹುಬ್ಬಳ್ಳಿಯಲ್ಲಿ ಬಂಗಾರ ಸನ್ ಆಫ್ ಬಂಗಾರ ಮನುಷ್ಯ ಚಿತ್ರದ ಚಿತ್ರೀಕರಣ

    ಹುಬ್ಬಳ್ಳಿಯಲ್ಲಿ ಬಂಗಾರ ಸನ್ ಆಫ್ ಬಂಗಾರ ಮನುಷ್ಯ ಚಿತ್ರದ ಚಿತ್ರೀಕರಣ

    – ಸಿದ್ದಾರೂಢ ಮಠಕ್ಕೆ ಭೇಟಿ ನೀಡಿದ ಶಿವಣ್ಣ

    ಹುಬ್ಬಳ್ಳಿ: ನಗರದಲ್ಲಿರುವ ಸಿದ್ದಾರೂಢ ಮಠಕ್ಕೆ ನಟ ಶಿವರಾಜಕುಮಾರ್ ಇಂದು ಭೇಟಿ ನೀಡಿದ್ದಾರೆ. ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಚಿತ್ರದ ಚಿತ್ರೀಕರಣ ವೇಳೆ ಮಠಕ್ಕೆ ಭೇಟಿ ನೀಡಿದ ಶಿವರಾಜ್ ಕುಮಾರ್ ಸಿದ್ದಾರೂಢ ಸ್ವಾಮಿಯ ದರ್ಶನ ಪಡೆದ್ರು.

    ಇದೇ ವೇಳೆ ಮಾತನಾಡಿದ ಅವರು, ನಮ್ಮ ಕುಟುಂಬ ಅಪ್ಪಾಜಿ ಕಾಲದಿಂದಲೂ ಮಠಕ್ಕೆ ಭೇಟಿ ನೀಡುತ್ತಾ ಬಂದಿದೆ. ಆ ಪರಂಪರೆಯನ್ನು ನಾವು ಇಂದು ಮುಂದುವರೆಸುತ್ತಾ ಬಂದಿದ್ದೇವೆ ಅಂದ್ರು.

    ಹುಬ್ಬಳ್ಳಿಯನ್ನೇ ಆಯ್ಕೆ ಮಾಡಿದ್ದು ಯಾಕೆ?
    ಬಂಗಾರ ಸನ್ ಆಫ್ ಬಂಗಾರದ ಮನುಷ್ಯ, ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಬಹನಿರಿಕ್ಷಿತ ಚಿತ್ರ. ಯೋಗಿ ಜಿ ರಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಈ ಚಿತ್ರದ ಚಿತ್ರೀಕರಣ ಬಹತೇಕ ಮುಕ್ತಾಯ ಹಂತ ತಲುಪಿದೆ. ಈಗಾಗಲೇ ಹಲವಾರು ಸುಂದರ ಲೋಕೆಷನ್‍ಗಳಲ್ಲಿ ಚಿತ್ರತಂಡ ಶೂಟಿಂಗ್ ನಡೆಸಿದೆ. ಚಿತ್ರದ ಹಾಡೊಂದರ ಚಿತ್ರೀಕರಣಕ್ಕಾಗಿ ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಯನ್ನು ಆಯ್ಕೆ ಮಾಡಿಕೊಂಡಿದೆ.

    ಇದು ಮೊದಲೇ ರೈತ ಪ್ರಧಾನ ಚಿತ್ರದವಾದ್ದರಿಂದ ಈ ಹಾಡನ್ನ ನಾಡಿನ ಅನ್ನದಾತನಿಗೆ ಚಿತ್ರತಂಡ ಅರ್ಪಿಸುತ್ತಿದೆಯಂತೆ. ಉಳುವಾ ಯೋಗಿ ಉಳಿಮೆ ಬಿಟ್ರೆ ಉಳಿಯೋರು ಯಾರು ಅನ್ನೋ ಸೆಂಟಿಮೆಂಟಲ್ ಸಾಹಿತ್ಯದೊಂದಿಗೆ ಹಾಡು ತಯಾರಾಗಿದೆ. ಹೀಗಾಗಿ ಹಾಡಿಗೆ ತಕ್ಕಂತೆ ಚಿತ್ರತಂಡ ಶೂಟಿಂಗ್ ಸ್ಪಾಟ್ ಗಳನ್ನ ಹುಡುಕಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ಹಾಡಿನ ಚಿತ್ರೀಕರಣ ಮಾಡ್ಬೇಕು ಅಂದುಕೊಂಡು ಚಿತ್ರತಂಡ ಇವತ್ತು ಹುಬ್ಬಳ್ಳಿಗೆ ಆಗಮಿಸಿತ್ತು. ಅದರಂತೆ ಇಲ್ಲಿನ ಇತಿಹಾಸ ಪ್ರಸಿದ್ಧ ಸಿದ್ದಾರೂಢ ಮಠದಲ್ಲಿ ಹಾಡಿನ ಚಿತ್ರೀಕರಣ ನಡೆಯಿತು. ಉರಿಯುವ ಬಿಸಿಲನ್ನು ಲೆಕ್ಕಿಸದೇ ಶಿವಣ್ಣ, ನಿರ್ದೇಶಕರು ಆಕ್ಷನ್ ಕಟ್ ಹೇಳುತ್ತಲೇ ಅಂತಿಮ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

    ಮಠದ ಆವರಣದಲ್ಲಿ ಸುಮಾರು ಮೂರು ತಾಸುಗಳಿಗಿಂತಲೂ ಹೆಚ್ಚು ಹೊತ್ತು ಚಿತ್ರೀಕರಣದ ನಡೆಸಿದ ತಂಡ ಫುಲ್ ಏಂಜಾಯ್ ಮಾಡ್ತು. ಶಿವಣ್ಣರನ್ನು ನೊಡಲು ಜನ ಸಾಗರವೇ ಮಠದ ಆವರಣಕ್ಕೆ ಹರಿದು ಬಂದಿತ್ತು. ಅಷ್ಟೇ ಅಲ್ಲದೇ ಶಿವಣ್ಣ ಚಿತ್ರೀಕರಣದಲ್ಲಿ ತೊಡಗಿದ್ದರೆ ಇತ್ತ ಅಭಿಮಾನಿಗಳು ಶಿಳ್ಳೆ ಚಪ್ಪಾಳೆ ಹೊಡೆಯುವ ಮೂಲಕ ಪ್ರೋತ್ಸಾಹ ನೀಡಿದರು.

    ಬೆಳಿಗ್ಗೆ 11 ಗಂಟೆಯಿಂದಲೇ ಚಿತ್ರೀಕರಣದಲ್ಲಿ ಭಾಗವಹಿಸಿದ ಶಿವಣ್ಣ ಅಭಿಮಾನಿಗಳ ಜೊತೆಗೆ ಸೆಲ್ಫಿಗೂ ಪೋಸ್ ಕೊಟ್ಟರು. ಇನ್ನು ತಮ್ಮ ನೆಚ್ಚಿನ ಕೋರಿಯೋಗ್ರಾಫರ್ ಹರ್ಷ ಶಿವಣ್ಣ ಹಾಡಿನ ನೇತೃತ್ವ ವಹಿಸಿದ್ದರು. ಹರ್ಷ ಜೊತೆಗೆ ನಿರ್ದೇಶಕ ಯೋಗಿ ಕೂಡಾ ಭಾಗವಹಿಸಿ ಶಿವಣ್ಣನಿಗೆ ಸಾಥ್ ನೀಡಿದರು.

    ಚಿತ್ರಿಕರಣದ ಬಳಿಕ ಮಾತನಾಡಿದ ನಿರ್ದೇಶಕ ಯೋಗಿ ಜಿ ರಾಜ್, ಇದು ನನ್ನ ಬಹು ನಿರೀಕ್ಷಿತ ಚಿತ್ರ. ಅಷ್ಟೆ ಅಲ್ಲದೆ ಶಿವಣ್ಣ ಕೂಡ ಅದ್ಭುತವಾಗಿ ಅಭಿನಯಿಸಿದ್ದಾರೆ. ಈಗಾಗಾಲೇ ಚಿತ್ರದ ಚಿತ್ರಿಕರಣ ಮುಗಿದಿದ್ದು ಮುಂದಿನ ತಿಂಗಳು ಬಿಡುಗಡೆ ಮಾಡುವ ಪ್ಲಾನ್‍ನಲ್ಲಿದ್ದೇವೆ ಅಂದ್ರು.

    https://www.youtube.com/watch?v=y7fN3n73fS4

    https://www.youtube.com/watch?v=XODoKti5F0M

     

  • ಹುಬ್ಬಳ್ಳಿ: ಕಾಲುಗಳಿಲ್ಲದ ಕರುವಿಗೆ ಜನ್ಮ ನೀಡಿದ ಹಸು

    ಹುಬ್ಬಳ್ಳಿ: ಕಾಲುಗಳಿಲ್ಲದ ಕರುವಿಗೆ ಜನ್ಮ ನೀಡಿದ ಹಸು

    ಹುಬ್ಬಳ್ಳಿ: ಹಸುವೊಂದು ಕಾಲುಗಳೇ ಇಲ್ಲದ ಕರುವಿಗೆ ಜನ್ಮ ನೀಡುವ ಮೂಲಕ ನೋಡುಗರಲ್ಲಿ ಅಚ್ಚರಿ ಮಾಡಿಸಿದೆ.

    ಹುಬ್ಬಳ್ಳಿ ತಾಲೂಕಿನ ಹಳಿಯಾಳ ಗ್ರಾಮದ ಸೋಮಲಿಂಗಪ್ಪ ಹೂಗಾರ ಎಂಬವರ ಹಸು ಕಾಲುಗಳಿಲ್ಲದ ಕರುವಿಗೆ ಜನ್ಮ ನೀಡಿದೆ. ಇದನ್ನು ನೋಡಿ ಸೋಮಲಿಂಗಪ್ಪ ಅವರಿಗೆ ಅಚ್ಚರಿಯಾಗಿದೆ. ಕರುವಿಗೆ ಕಾಲುಗಳಿಲ್ಲವಾದ್ದರಿಂದ ಇದು ಬದುಕುವುದು ಕಷ್ಟ ಎಂದು ಭಾವಿಸಿದ್ದರು. ಆದರೆ ಕರು ಮಾತ್ರ ಎರಡು ದಿನಗಳಿಂದ ಆರೋಗ್ಯವಾಗಿದೆ. ಕರುವಿನ ಎಲ್ಲಾ ಅಂಗಾಂಗಳು ಚೆನ್ನಾಗಿಯೇ ಕಾರ್ಯನಿರ್ವಹಿಸುತ್ತಿವೆ.

    ಕರುವಿಗೆ ಕಾಲುಗಳು ಇಲ್ಲದಿರುವ ಕಾರಣ ಹಾಲುಣಿಸುವುದು ಸ್ವಲ್ಪ ಕಷ್ಟವಾಗಿದೆ ಎಂದು ಸೋಮಲಿಂಗಪ್ಪ ಹೇಳುತ್ತಾರೆ. ಕರುವಿಗೆ ಅಂಗವೈಕಲ್ಯ ಬಿಟ್ಟರೆ ಮತ್ತೇನೂ ಬದಲಾವಣೆ ಇಲ್ಲ ಎನ್ನಲಾಗಿದೆ. ಕರುವನ್ನು ನೋಡಲು ಹಳಿಯಾಳ ಗ್ರಾಮದ ಸುತ್ತಲಿನ ಜನರು ಸೊಮಲಿಂಗಪ್ಪ ಅವರ ಮನೆಗೆ ಬರುತ್ತಿದ್ದಾರೆ.

  • ವೀಡಿಯೋ: ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಬಾಲಕನನ್ನು ಬಿಟ್ಟು ಮತ್ತೊಬ್ಬ ಬಾಲಕನ ಅಪಹರಣ

    ವೀಡಿಯೋ: ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಬಾಲಕನನ್ನು ಬಿಟ್ಟು ಮತ್ತೊಬ್ಬ ಬಾಲಕನ ಅಪಹರಣ

    ಹುಬ್ಬಳ್ಳಿ: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಬಂದ ಅಪ್ತಾಪ್ತ ಬಾಲಕನನ್ನು ಆಟೋ ಡ್ರೈವರ್ ವೇಷದಲ್ಲಿ ಬಂದ ವ್ಯಕ್ತಿ, ಮತ್ತೊಂದು ಮಗುವನ್ನು ಬಳಸಿ ಅಪಹರಿಸಿಕೊಂಡು ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಮಾರ್ಚ್ 21 ರಂದು ಕಿಮ್ಸ್ ಹೊರರೋಗಿಗಳ ವಿಭಾಗದಲ್ಲಿ ಈ ಘಟನೆ ನಡೆದಿದೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರದ 5 ವರ್ಷದ ಬಾಲಕ ಮೆಹಬೂಬ್ ಸಾಬ್ ಕಣಕೆ ಎಂಬಾತನೇ ಅಪಹರಣಕ್ಕೊಳಗಾಗಿರುವ ಬಾಲಕ.

    ಅನಾರೋಗ್ಯದ ಹಿನ್ನೆಲೆಯಲ್ಲಿ ಬಾಲಕನನ್ನ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದ್ರೆ ಚೀಟಿ ಮಾಡಿಸುವಾಗ ಬಾಲಕ ಆಟವಾಡುತ್ತಾ ಆಸ್ಪತ್ರೆಯಿಂದ ಹೊರಗಡೆ ಬಂದಿದ್ದಾನೆ. ಆಗ ಅಟೋ ಚಾಲಕನ ವೇಷದಲ್ಲಿ ಬಂದ ವ್ಯಕ್ತಿ ಮತ್ತೊಬ್ಬ ಬಾಲಕನನ್ನು ಕರೆತಂದು ಮೆಹಬೂಬ್ ಸಾಬ್‍ನನ್ನು ಅಪಹರಿಸಿದ್ದಾನೆ.

    ಮೊದಲು ಆಟೋ ಚಾಲಕನ ಜೊತೆ ಬಂದ ಬಾಲಕ ಮೆಹಬೂಬ್ ಸಾಬ್ ಜೊತೆಗೆ ಆಟವಾಡಿದ್ದಾನೆ. ಬಳಿಕ ಹೊರ ರೋಗಿಗಳ ವಿಭಾಗದಿಂದ ಮೆಹಬೂಬ್ ಸಾಬ್‍ನ ಕೈ ಹಿಡಿದುಕೊಂಡು ಹೊರಗಡೆ ಕರೆದುಕೊಂಡು ಬಂದಿದ್ದಾನೆ. ಬಳಿಕೆ ಅದೇ ಆಟೋ ಚಾಲಕ ಮಗುವನ್ನು ಕರೆದುಕೊಂಡು ಹೋಗಿದ್ದಾನೆ. ಬಾಲಕ ಮೆಹಬೂಬ್‍ನನ್ನ ಆಟೋ ಚಾಲಕನ ವೇಷಧಾರಿ ಕರೆದುಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ವಿದ್ಯಾನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೆÇಲೀಸರು ಬಾಲಕನಿಗಾಗಿ ಹಡುಕಾಟ ಆರಂಭಿಸಿದ್ದಾರೆ.

    ಈ ಘಟನೆಗೆ ಕಿಮ್ಸ್ ಆಸ್ಪತ್ರೆಯ ಭದ್ರತೆಯ ಕೊರತೆಯೇ ಕಾರಣ ಎಂದು ಆರೋಪಿಸಲಾಗುತ್ತಿದೆ. ಈ ಹಿಂದೆ ಇದೇ ಆಸ್ಪತ್ರೆಯಲ್ಲಿ ನರ್ಸ್ ಸೋಗಿನಲ್ಲಿ ಬಂದ ಮಹಿಳೆಯೊಬ್ಬಳು ನವಜಾತ ಶಿಶುವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಳು. ಇದೀಗ 5 ವರ್ಷದ ಬಾಲಕನನ್ನು ಅಪಹರಿಸಿಕೊಂಡು ಹೋಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    https://www.youtube.com/watch?v=zgFE8ASevDI

  • ಹೆಂಡತಿ ಮೊಬೈಲ್ ಎಂದು ಮಾವನಿಗೆ ಅಶ್ಲೀಲ ವಿಡಿಯೋ ಸೆಂಡ್ ಮಾಡಿದ್ದ ಅಳಿಯ ಅರೆಸ್ಟ್!

    ಹೆಂಡತಿ ಮೊಬೈಲ್ ಎಂದು ಮಾವನಿಗೆ ಅಶ್ಲೀಲ ವಿಡಿಯೋ ಸೆಂಡ್ ಮಾಡಿದ್ದ ಅಳಿಯ ಅರೆಸ್ಟ್!

    ಹುಬ್ಬಳ್ಳಿ: ಹೆಂಡತಿ ಎಂದು ತಿಳಿದು ಮಾವನ ಮೊಬೈಲ್‍ಗೆ ಅಶ್ಲೀಲ ವಿಡಿಯೋ ಸಂದೇಶ ಕಳುಹಿಸುತ್ತಿದ್ದ ಅಳಿಯನನ್ನು ಪೊಲೀಸರು ಬಂಧಿಸಿದ್ದಾರೆ.

    ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ನಿವಾಸಿ ಅರುಣ್ ನಾಯಕ್ ಬಂಧಿತ ಆರೋಪಿ. ಎರಡು ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ನೆಲೆಸಿದ್ದ ಡಾಕ್ಟರ್ ಜೊತೆ ಮದುವೆಯಾಗಿತ್ತು. ಆದರೆ ಮದುವೆ ನಂತರ ಪತ್ನಿ ಗಂಡನ ಮನೆ ತೊರೆದು ಹುಬ್ಬಳ್ಳಿಯ ತವರು ಮನೆಗೆ ಬಂದು ನೆಲೆಸಿದ್ದರು.

    ಕೆಲವು ದಿನಗಳ ಹಿಂದೆ ಪತ್ನಿ ತಮ್ಮ ತಂದೆಯ ಮೊಬೈಲ್‍ನಿಂದ ಪತಿ ಅರುಣ್‍ಗೆ ಕರೆ ಮಾಡಿದ್ದರು. ಅರುಣ್ ಇದುವೇ ತನ್ನ ಪತ್ನಿ ನಂಬರ್ ಎಂದು ತಿಳಿದು ನಿರಂತರವಾಗಿ ಮೊಬೈಲ್‍ಗೆ ಅಶ್ಲೀಲ ವಿಡಿಯೋ, ಚಿತ್ರ ಹಾಗೂ ಸಂದೇಶಗಳನ್ನು ಕಳುಹಿಸಿ ಮಾನಸಿಕ ಹಿಂಸೆ ನೀಡುತ್ತಿದ್ದನು. ಅಳಿಯನ ಕಾಮಾವತಾರ ಕಂಡ ಮಾವ ಮೋಹನ್ ಹೆಗಡೆ ಅಶೋಕ್ ನಗರದ ಪೊಲೀಸ್ ಠಾಣೆ ದೂರು ನೀಡಿದ್ದರು.

    ಕಳೆದ ಒಂದು ವರ್ಷದ ಹಿಂದೆ ವಿಚ್ಚೇದನ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಕೋರ್ಟ್ ವಿಚಾರಣೆಗಾಗಿ ಮಾರ್ಚ್ 19 ಅಂದರೆ ಸೋಮವಾರ ಹುಬ್ಬಳ್ಳಿ ನಗರಕ್ಕೆ ಬಂದಿದ್ದ ಅರುಣ್ ನಾಯಕ್‍ನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

  • ಹೆಂಡತಿ, ಮಗಳ ಮೇಲೆ ಕೊಡಲಿಯಿಂದ ಹಲ್ಲೆಗೈದ ಕ್ರೂರಿ ತಂದೆ!

    ಹೆಂಡತಿ, ಮಗಳ ಮೇಲೆ ಕೊಡಲಿಯಿಂದ ಹಲ್ಲೆಗೈದ ಕ್ರೂರಿ ತಂದೆ!

    ಹುಬ್ಬಳ್ಳಿ: ಇಲ್ಲೊಬ್ಬ ಪತಿರಾಯ ತನ್ನ ಹೆಂಡತಿ ಹಾಗೂ ಕರುಳಿನ ಬಳ್ಳಿಯನ್ನು ಕೊಡಲಿಯಿಂದ ಹೊಡೆದು ಕ್ರೂರತೆ ಪ್ರದರ್ಶನ ಮಾಡಿದ್ದಾನೆ. ತನ್ನ ಒಂದು ವರ್ಷದ ಮಗುವಿನ ತಲೆಗೆ ಕೊಡಲಿಯಿಂದ ಹೊಡೆದು ಮಗು ಮತ್ತು ತಾಯಿ ಇಬ್ಬರು ಆಸ್ಪತ್ರೆ ಸೇರುವಂತೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡ ತಾಯಿ ಹಾಗೂ ಮಗು ಜೀವನ್ಮರಣ ಹೋರಾಟ ಮಾಡುತ್ತಿದ್ದಾರೆ.

    ಹುಬ್ಬಳ್ಳಿ ತಾಲೂಕಿನ ಶೇರೆವಾಡ ಗ್ರಾಮದ ನಿವಾಸಿ ಹನುಮಂತಪ್ಪ ಕೊಪ್ಪದ ಪತ್ನಿ ಹಾಗು ಮಗಳ ಮೇಲೆ ಹಲ್ಲೆ ಮಾಡಿದ ವ್ಯಕ್ತಿ. ಹನುಮಂತಪ್ಪ ನಾಲ್ಕು ವರ್ಷಗಳ ಹಿಂದೆ ಹಾವೇರಿ ಜಿಲ್ಲೆಯ ಬಂಟೂರು ಗ್ರಾಮದ ನಿವಾಸಿ ಅನ್ನಪೂರ್ಣ ಅವರನ್ನು ವಿವಾಹವಾಗಿದ್ದನು. ಇವರಿಗೆ ಮುದ್ದಾದ ಹೆಣ್ಣು ಮಗು ಸಹ ಇದೆ. ಮದುವೆಯ ನಂತರ ಹನುಮಂತಪ್ಪ ಹೆಂಡತಿಯ ಶೀಲ ಶಂಕಿಸಿ ಕಿರುಕುಳ ನೀಡುತ್ತಿದ್ದರು. ಶನಿವಾರ ರಾತ್ರಿ ಕುಡಿದು ಬಂದು ಹೆಂಡತಿ ಹಾಗು ಮಗುವಿನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ.

    ಅನ್ನಪೂರ್ಣ ಅವರ ತಲೆಗೆ ಮತ್ತು ಮಗುವಿನ ಮುಖಕ್ಕೆ ಗಂಭೀರವಾದ ಗಾಯಗಳಾಗಿವೆ. ಗ್ರಾಮಸ್ಥರು ಇಬ್ಬರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆಯ ಬಳಿಕ ಹನುಮಂತಪ್ಪ ನಾಪತ್ತೆಯಾಗಿದ್ದಾನೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹನುಮಂತಪ್ಪನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

     

  • ಬುದ್ಧಿಮಾಂದ್ಯ ಮಕ್ಕಳ ಪಾಲಿನ ಆಶಾಕಿರಣವಾದ್ರು ಹುಬ್ಬಳ್ಳಿಯ ಡಾಕ್ಟರ್!

    ಬುದ್ಧಿಮಾಂದ್ಯ ಮಕ್ಕಳ ಪಾಲಿನ ಆಶಾಕಿರಣವಾದ್ರು ಹುಬ್ಬಳ್ಳಿಯ ಡಾಕ್ಟರ್!

    – ಊಟ, ವಸತಿ ಜೊತೆ ಅಕ್ಷರ ದಾಸೋಹವೂ ಇಲ್ಲೇ!

    ಹುಬ್ಬಳ್ಳಿ: ಇಂದಿನ ಕಾಲದಲ್ಲಿ ನಿಸ್ವಾರ್ಥ ಸೇವೆ ಅನ್ನೋದೇ ವಿರಳವಾಗ್ತಿದೆ. ಆದ್ರೆ ಹುಬ್ಬಳ್ಳಿಯಲ್ಲೊಬ್ಬರು ಕಳೆದ 25 ವರ್ಷಗಳಿಂದ ನೂರಾರು ಬುದ್ಧಿಮಾಂದ್ಯ ಮಕ್ಕಳ ಪಾಲಿಗೆ ಆಶಾಕಿರಣವಾಗಿದ್ದಾರೆ. ಊಟದ ಜೊತೆ ವಸತಿ ಕೊಟ್ಟು ಅಕ್ಷರ ದಾಸೋಹ ಮಾಡ್ತಿದ್ದಾರೆ ಇಂದಿನ ನಮ್ಮ ಪಬ್ಲಿಕ್ ಹೀರೋ.

    ಇಲ್ಲಿರುವ ಮಕ್ಕಳನ್ನು, ದೊಡ್ಡವರನ್ನ ನೋಡಿದ್ರೆ ಎಂಥವರಿಗೂ ನೋವಾಗದೇ ಇರದು. ಒಂದಲ್ಲಾ ಒಂದು ರೀತಿಯಲ್ಲಿ ಹೆತ್ತವರಿಗೆ ಹಾಗೂ ಸಮಾಜಕ್ಕೆ ಬೇಡವಾದವರು. ಇಂಥ ನೂರಾರು ಜನರಿಗೆ ಊಟ, ವಸತಿ ನೀಡಿ ಅಕ್ಷರ ಕಲಿಸುತ್ತಿದ್ದಾರೆ ನಮ್ಮ ಪಬ್ಲಿಕ್ ಹೀರೋ ಡಾಕ್ಟರ್ ಜಗದೀಶ್ ಕೆ ಹಿರೇಮಠ. ಮೂಲತಃ ಹುಬ್ಬಳ್ಳಿ ನಿವಾಸಿಯಾದ ಇವರು ಕಳೆದ 24 ವರ್ಷಗಳ ಹಿಂದೆ ಗೋಪನಕೊಪ್ಪದಲ್ಲಿ ಮನೋವಿಕಾಸ ಎಂಬ ವಿಶೇಷ ಸಂಸ್ಥೆಯನ್ನು ಸ್ಥಾಪನೆ ಮಾಡಿ ಬುದ್ಧಿಮಾಂದ್ಯ ಮಕ್ಕಳ ಪೋಷಣೆ ಮಾಡುತ್ತಿದ್ದಾರೆ.

    28 ವರ್ಷಗಳ ಹಿಂದೆ ಹಿರೇಮಠ್ ಇವರಿಗೆ ಜನಿಸಿದ ಮಗಳು ವೀಣಾ ಬುದ್ಧಿಮಾಂದ್ಯೆ ಆಗಿದ್ದಳು. 5 ವರ್ಷದವಳಿದ್ದಾಗ ಅಕಾಲಿಕ ಮರಣಕ್ಕೆ ತುತ್ತಾದಳು. ಮಗಳ ಅಗಲಿಕೆಯಿಂದ ನೊಂದ ಹಿರೇಮಠ್ ಬುದ್ಧಿಮಾಂದ್ಯ ಮಕ್ಕಳ ಪೋಷಣೆಗೆ ದೃಢ ನಿರ್ಧಾರ ಮಾಡಿದ್ರು. ಕಳೆದ 24 ವರ್ಷಗಳಲ್ಲಿ ಅನೇಕ ಬುದ್ಧಿಮಾಂದ್ಯ ಮಕ್ಕಳು ಇಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಬಡವರ ಮಕ್ಕಳಿಗೆಲ್ಲಾ ಇಲ್ಲಿ ಉಚಿತ ಚಿಕಿತ್ಸೆ ಕೊಡ್ತಾರೆ.

    ಯಾವ ಸ್ವಾರ್ಥವಿಲ್ಲದೇ ಬುದ್ಧಿಮಾಂದ್ಯ ಮಕ್ಕಳ ಭವಿಷ್ಯ ಉಜ್ವಲಗೊಳಿಸುತ್ತಿರುವ ಹಿರೇಮಠ್ ಅವರಿಗೆ ನಮ್ಮದೊಂದು ಸಲಾಂ.

    https://www.youtube.com/watch?v=aU0sBRmVzoE

  • ಕಾರು 4 ಪಲ್ಟಿಯಾದ್ರೂ ಚಾಲಕ ಪ್ರಾಣಾಪಾಯದಿಂದ ಪಾರು!

    ಕಾರು 4 ಪಲ್ಟಿಯಾದ್ರೂ ಚಾಲಕ ಪ್ರಾಣಾಪಾಯದಿಂದ ಪಾರು!

    ಕೊಪ್ಪಳ: ಕಾರು ನಾಲ್ಕು ಪಲ್ಟಿ ಹೊಡೆದರೂ ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ಕೊಪ್ಪಳ ಹೊರವಲಯದ ದದೇಗಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ನಡೆದಿದೆ.

    ಎಲ್.ಜಿ. ರಾಜೇಶ ಪ್ರಾಣಾಪಾಯದಿಂದ ಪಾರಾದ ಚಾಲಕ. ಬಳ್ಳಾರಿಯಿಂದ ಹುಬ್ಬಳ್ಳಿ ಕಡೆ ಹೊರಟಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಘಟನೆಯಿಂದ ಚಾಲಕನಿಗೆ ಸಣ್ಣ-ಪುಟ್ಟ ಗಾಯವೂ ಆಗದೇ ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಅಪಘಾತಕ್ಕೆ ಒಳಗಾದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕೂಡಲೇ ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿ ಚಾಲಕನಿಗೆ ನೀರು ಕೊಟ್ಟು ಧೈರ್ಯ ಹೇಳಿದ್ದಾರೆ. ಕೊಪ್ಪಳ ಗ್ರಾಮೀಣ  ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ ಅಪಘಾತಕ್ಕೆ ನಿಖರ ಕಾರಣ ಏನು ಎಂಬುದು ತನಿಖೆಯಿಂದ ತಿಳಿಯಬೇಕಿದೆ.

  • ಬಾರ್ ಮುಚ್ಚಿಸಿದ ಪೊಲೀಸರಿಗೆ ಅವಾಜ್- ಠಾಣೆಯಲ್ಲೇ ಕನ್ನಡ ಪರ ಮುಖಂಡನ ಗೂಂಡಾಗಿರಿ

    ಬಾರ್ ಮುಚ್ಚಿಸಿದ ಪೊಲೀಸರಿಗೆ ಅವಾಜ್- ಠಾಣೆಯಲ್ಲೇ ಕನ್ನಡ ಪರ ಮುಖಂಡನ ಗೂಂಡಾಗಿರಿ

    ಹುಬ್ಬಳ್ಳಿ: ರಾತ್ರಿ ವೇಳೆ ಅವಧಿ ಮೀರಿ ನಡೆಸುತ್ತಿದ್ದ ಬಾರನ್ನು ಮುಚ್ಚಿಸಿದ ಪೊಲೀಸರಿಗೆ ಕನ್ನಡ ಪರ ಸಂಘಟನೆಯ ಮುಖಂಡನೊಬ್ಬ ಹುಬ್ಬಳ್ಳಿ ನವನಗರದ ಪೊಲೀಸ್ ಠಾಣೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದಲ್ಲದೇ ಜೀವ ಬೆದರಿಕೆ ಹಾಕಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಮಾರ್ಚ್ 5ರ ರಾತ್ರಿ ನಗರದ ಗೋಕುಲ್ ರಸ್ತೆಯ ಅರ್ಬನ್ ಓಯಾಸಿಸ್ ಮಾಲ್‍ನ ಜಂಕ್ಷನ್ ಬಾರ್ ಮತ್ತು ರೆಸ್ಟೋರೆಂಟನ್ನು ಅವಧಿ ಮೀರಿದರೂ ಬಂದ್ ಮಾಡಿರಲಿಲ್ಲ. ಈ ವೇಳೆ ಗಸ್ತಿನಲ್ಲಿದ್ದ ಎಎಸ್‍ಐ ಮೇಲಿನಮನೆ ಅವರು ಬಾರ್‍ನ ವ್ಯವಸ್ಥಾಪಕರನ್ನು ಠಾಣೆಗೆ ಕರೆತಂದಿದ್ದರು. ಅದೇ ಬಾರ್‍ನಲ್ಲಿದ್ದ ಉತ್ತರ ಕರ್ನಾಟಕ ಜನಶಕ್ತಿ ಸೇನಾ ಅಧ್ಯಕ್ಷ ಎಸ್.ಶಂಕರಣ್ಣ ಮತ್ತು ಸಹಚರ ವಿಜಯ್ ಶರ್ಮಾ ಎಂಬವರು ತಮ್ಮ ಸಹಚರರೊಂದಿಗೆ ಠಾಣೆಯ ಮುಂದೆ ಬಂದು ಎಎಸ್‍ಐ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

    ಶಂಕರಣ್ಣ ಹಾಗು ವಿಜಯ್ ಠಾಣೆಯಲ್ಲಿದ್ದ ಇನ್ಸ್ ಪೆಕ್ಟರ್ ಎಸ್.ಆರ್.ನಾಯಕ್ ಎಂಬವರ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಠಾಣೆಗೆ ಬಂದು ಪೆÇಲೀಸ್ ಅಧಿಕಾರಿಗಳಿಗೆ ಅವಾಜ್ ಹಾಕಿದ್ದಲ್ಲದೇ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಿಗೆ ಏಕವಚನದಲ್ಲಿ ಸಂಭೋದಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಯ ಮುಖಂಡ ಶಂಕರಣ್ಣ ಹಾಗು ಅವರ ಸಹಚರ ವಿಜಯ್ ಶರ್ಮಾ ಅವರನ್ನು ಮಾಚ್ 5 ರಂದು ಬಂಧಿಸಲಾಗಿತ್ತು. ಗುರುವಾರದಂದು ಶಂಕರಣ್ಣ ಹಾಗೂ ವಿಜಯ್ ಷರತ್ತು ಬದ್ಧ ಜಾಮೀನು ಪಡೆದು ಹೊರ ಬಂದಿದ್ದಾರೆ.

     

  • ಮಹಿಳೆಯರಿಗೆ ಮಾದರಿಯಾದ್ರು ಹುಬ್ಬಳ್ಳಿಯ ಈ ಮಹಿಳಾ ಬಸ್ ಡ್ರೈವರ್!

    ಮಹಿಳೆಯರಿಗೆ ಮಾದರಿಯಾದ್ರು ಹುಬ್ಬಳ್ಳಿಯ ಈ ಮಹಿಳಾ ಬಸ್ ಡ್ರೈವರ್!

    – ವಾಯವ್ಯ ಸಾರಿಗೆ ಸಂಸ್ಥೆಯ ಮೊದಲ ಮಹಿಳಾ ಬಸ್ ಚಾಲಕಿಯಾಗಿರೋ ಶ್ರೀದೇವಿ

    ಹುಬ್ಬಳ್ಳಿ: ಹೆಣ್ಣು ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಈ ಯುವತಿಯೇ ಸಾಕ್ಷಿ. ಗ್ರಾಮೀಣ ಪ್ರದೇಶದಲ್ಲಿ ಇದ್ದುಕೊಂಡು ಹತ್ತಾರು ಸಮಸ್ಯೆಗಳ ನಡುವೆ ಯಾವುದಕ್ಕೂ ಅಂಜದೆ ಮುಜುಗರವನ್ನು ಮಾಡಿಕೊಳ್ಳದೇ ಕಷ್ಟ ಪಟ್ಟು ಡ್ರೈವಿಂಗ್ ಕಲಿತಿದ್ದಾರೆ.

    ಕಾಲ, ಸಮಾಜ, ಜನಜೀವನ ಹೀಗೆ ಎಲ್ಲವೂ ಬದಲಾದಂತೆ ಮಹಿಳೆಯರು ಕೂಡಾ ಬದಲಾಗಿದ್ದಾರೆ. ಬದಲಾದ ಇಂದಿನ ಜಗತ್ತಿನಲ್ಲಿ ಪುರುಷರಷ್ಟೇ ನಾವು ಸಮಾನರು ಎನ್ನುತ್ತಾ ಎಲ್ಲಾ ಕ್ಷೇತ್ರಗಳಲ್ಲೂ ಪಾರುಪತ್ಯವನ್ನು ಮೆರೆಯುತ್ತಿದ್ದಾರೆ. ಈ ಮಾತಿಗೆ ಸಾಕ್ಷಿ ಬಸ್ ಡ್ರೈವ್ ಮಾಡುತ್ತಿರುವ 28 ವರ್ಷದ ಶ್ರೀದೇವಿ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಯಮನೂರು ಗ್ರಾಮದ ನಿವಾಸಿಯಾಗಿರೋ ಇವರ ತಂದೆ-ತಾಯಿಗೆ ಮೂವರು ಮಕ್ಕಳು. ಅವರಲ್ಲಿ ಕೊನೆಯ ಮಗಳು ಶ್ರೀದೇವಿ. ಇವರ ತಂದೆ-ತಾಯಿಗೆ ಗಂಡು ಮಕ್ಕಳಿಲ್ಲ ಎಂಬ ಕೊರಗು ಸದಾ ಕಾಡುತ್ತಿತ್ತು. ಹೀಗಾಗಿ ಅದನ್ನೇ ಸವಾಲಾಗಿ ಸ್ವೀಕರಿಸಿದ ಶ್ರೀದೇವಿ, ಏನಾದರೂ ಸಾಧನೆ ಮಾಡಬೇಕು ಎಂದು ಬಸ್ ಡ್ರೈವಿಂಗ್ ಕಲಿತರು. ಹಿಂದೆ ಗುರುವಿಲ್ಲವಾದ್ರೂ ಮುಂದೆ ಗುರಿಯನ್ನು ಇಟ್ಟುಕೊಂಡು ಹೊರಟ ಶ್ರೀದೇವಿಗೆ ಖಾಸಗಿ ಸಾರಿಗೆ ಸಂಸ್ಥೆ ಕೂಡ ಒಂದು ಅವಕಾಶ ನೀಡಿತ್ತು. ನಂತರ 6-7 ವರುಷಗಳ ಕಾಲ ಖಾಸಗಿ ಬಸ್ ಸಂಸ್ಥೆಯಲ್ಲಿ ಬಸ್ ಚಾಲನೆ ಮಾಡಿದ್ರು. ಸದ್ಯ ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ ಡ್ರೈವರ್ ಮತ್ತು ನಿರ್ವಾಹಕಿಯಾಗಿ ನೇಮಕಗೊಂಡಿದ್ದಾರೆ.

    ಗ್ರಾಮೀಣ ಪ್ರದೇಶವಾಗಿದ್ದರೂ ಕೂಡಾ ಹತ್ತಾರು ಸಮಸ್ಯೆ, ಮುಜುಗರ, ಸಂಕೋಚ, ಆರಂಭದಲ್ಲಿ ಡ್ರೈವಿಂಗ್ ಕಲಿಸುವವರು ಇಲ್ಲ ಇಂತಹ ಪರಿಸ್ಥಿತಿಯಲ್ಲಿ ನಗರಕ್ಕೆ ಕೈಯಲ್ಲೊಂದು ಬಯೋಡಾಟಾ ಹಿಡಿದುಕೊಂಡು ಬಂದ ಈ ಶ್ರೀದೇವಿಗೆ ಖಾಸಗಿ ಸಂಸ್ಥೆ ಅವಕಾಶವನ್ನು ನೀಡಿತು. ಸಿಕ್ಕ ಅವಕಾಶವನ್ನು ಬಳಸಿಕೊಂಡು ಕಷ್ಟ ಪಟ್ಟು ತರಬೇತಿಯನ್ನು ಪಡೆದುಕೊಂಡ ಶ್ರೀದೇವಿ, ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ ಮೊದಲ ಮಹಿಳಾ ಬಸ್ ಚಾಲಕಿ ಎಂಬ ಕೀರ್ತಿಗೆ ಪಾತ್ರವಾಗಿದ್ದಾರೆ. ಇದೀಗ ಇವರ ಈ ಸಾಧನೆಯನ್ನು ಕಂಡು ಜನ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ನಗರ ಪ್ರದೇಶವೆಂದರೆ ಅಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್, ವಾಹನಗಳ ದಟ್ಟಣೆ ಹೆಚ್ಚಿರುತ್ತದೆ. ಸ್ವಲ್ಪ ಯಾಮಾರಿದರೂ ಸಾಕು ಅಪಘಾತಗಳಾಗುತ್ತವೆ. ಎಷ್ಟೇ ಜಾಗರೂಕತೆಯಿಂದ ಇದ್ದರೂ ಕೂಡಾ ಭಯ ಇದ್ದೇ ಇರುತ್ತದೆ. ಇಂಥಹ ಪರಸ್ಥಿತಿಯಲ್ಲಿ ಶ್ರೀದೇವಿ ಅವರ ಬಸ್ ಚಾಲನೆಯನ್ನು ನೋಡುತ್ತಿದ್ದರೆ ಅಚ್ಚರಿ ಎನಿಸುತ್ತದೆ. ಮಹಿಳೆ ಮನಸ್ಸು ಮಾಡಿದರೆ ಏನಾದರೂ ಮಾಡಬಹುದು ಎಂಬುದನ್ನು ಸಾಧಿಸಿ ತೋರಿಕೊಟ್ಟಿರುವ ಶ್ರೀದೇವಿಯವರು ನಿಜಕ್ಕೂ ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

  • ದರ್ಶನ್ ಟ್ವೀಟ್‍ಗೆ ಕೊನೆಗೂ ಮೌನ ಮುರಿದ ಸುದೀಪ್

    ದರ್ಶನ್ ಟ್ವೀಟ್‍ಗೆ ಕೊನೆಗೂ ಮೌನ ಮುರಿದ ಸುದೀಪ್

    ಹುಬ್ಬಳ್ಳಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್‍ಗೆ ಸಂಬಂಧಿಸಿದಂತೆ ಕೊನೆಗೂ ಅಭಿನಯ ಚಕ್ರವರ್ತಿ ಮೌನ ಮುರಿದಿದ್ದಾರೆ.

    ಹೆಬ್ಬುಲಿ ಚಿತ್ರದ ಪ್ರಚಾರ ಸಂಬಂಧ ಇಂದು ಸುದೀಪ್ ನಗರಕ್ಕೆ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳು ದರ್ಶನ್ ಟ್ವೀಟ್‍ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಕೇಳಿದ್ದಕ್ಕೆ, ‘ಗೀವ್ ರಸ್ಪೆಕ್ಟ್ ಅಂಡ್ ಟೇಕ್ ರೆಸ್ಪೆಕ್ಟ್’ ಎಂದು ಪ್ರತಿಕ್ರಿಯೆ ನೀಡಿದರು.

    ಇದನ್ನೂ ಓದಿ: 20 ದಿನದ ಹಿಂದೆ ಸುದೀಪ್- ದರ್ಶನ್ ಪರಸ್ಪರ ವಿಶ್ ಮಾಡ್ಕೊಂಡಿದ್ರು!

    ನನಗೆ ಮರ್ಯಾದೆ ಕೊಟ್ಟರೆ ನಾನು ಮರ್ಯಾದೆ ನೀಡುತ್ತೇನೆ ಎಂದು ಕೇವಲ 5 ಸೆಕೆಂಡ್‍ನಲ್ಲಿ ಹೇಳಿ ಚಿತ್ರದ ಪ್ರಚಾರಕ್ಕಾಗಿ ಬೆಳಗಾವಿಗೆ ತೆರಳಿದರು.

    ಸೋಮವಾರ ಸುದೀಪ್ ತುಮಕೂರಿಗೆ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳು ಕೇಳಿದ್ದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇವತ್ತು ಒಂದು ವಾಕ್ಯವನ್ನು ಹೇಳಿದ್ದು, ಮುಂದೆ ಈ ವಿಚಾರದ ಬಗ್ಗೆ ಏನು ಪ್ರತಿಕ್ರಿಯೆ ನೀಡಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

    ದುಃಖ ತಂದಿದೆ: ತುಮಕೂರಿನ ಅಭಿಮಾನಿ ಶಿವು ಮೃತಪಟ್ಟಿರುವುದು ನನಗೆ ದುಃಖ ತಂದಿದೆ. ಎಲ್ಲರಂತೆ ನನಗೂ ಅಭಿಮಾನಿಗಳು ಅಂದ್ರೆ ಬಹಳ ಇಷ್ಟ. ಆದರೆ ಆತನ ಸಾವು ನನಗೆ ನೋವು ತಂದಿದೆ. ನನ್ನ ಜೊತೆ ಹಲವು ದಿನಗಳಿಂದಲೂ ಒಟನಾಟ ಇಟ್ಟುಕೊಂಡಿದ್ದ. ನಾನು ಅಲ್ಲೆ ಇದ್ದರೆ ಅವನನ್ನು ಖಂಡಿತಾ ನೋಡಲು ಹೋಗುತ್ತಿದ್ದೆ ಎಂದು ಹೇಳಿದರು.

    ಇದನ್ನೂ ಓದಿ: ಸುದೀಪ್ ಅವರ ಈ ಮಾತಿನಿಂದ ದರ್ಶನ್ ಮನಸ್ಸಿಗೆ ಘಾಸಿ!

    ಇದನ್ನೂ ಓದಿ: ದರ್ಶನ್ ಸುದೀಪ್ ಟ್ವಿಟ್ಟರ್ ಖಾತೆಯಲ್ಲಿ ಭಾನುವಾರ ಏನೇನಾಯ್ತು?

    ಇದನ್ನೂ ಓದಿ:  ದರ್ಶನ್-ಸುದೀಪ್ ವೈಮನಸ್ಸು ಹಿಂದೆ ದೊಡ್ಡ ಕಥೆಯಿದೆ-ಬುಲೆಟ್ ಪ್ರಕಾಶ್

    ಇದನ್ನೂ ಓದಿ: ಇಷ್ಟೆಲ್ಲಾ ಟ್ವೀಟ್ ಮಾಡಿದ್ದು ನಾನೇ, ಖಾತೆ ಹ್ಯಾಕ್ ಆಗಿಲ್ಲ: ದರ್ಶನ್