Tag: ಹುಬ್ಬಳ್ಳಿ

  • ಗುಜರಾತ್ ಸಿಎಂ ಹುಬ್ಬಳ್ಳಿಗೆ ಬಂದಾಗ ವಿಮಾನ ನಿಲ್ದಾಣದಲ್ಲಿ ಭದ್ರತಾ ವೈಫಲ್ಯ

    ಗುಜರಾತ್ ಸಿಎಂ ಹುಬ್ಬಳ್ಳಿಗೆ ಬಂದಾಗ ವಿಮಾನ ನಿಲ್ದಾಣದಲ್ಲಿ ಭದ್ರತಾ ವೈಫಲ್ಯ

    ಹುಬ್ಬಳ್ಳಿ: ಗುಜರಾತ್ ಸಿಎಂ ವಿಜಯ್ ರೂಪಾನಿ ಬಂದ ವೇಳೆ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಭದ್ರತಾ ವೈಫಲ್ಯವಾಗಿದೆ. ಪೈಲೆಟ್‍ವೊಬ್ಬರು ವಿಮಾನ ನಿಲ್ದಾಣದಲ್ಲೇ ಧೂಮಪಾನ ಮಾಡಿದ್ದಾರೆ.

    ಸ್ಫೋಟಕ ವಸ್ತುಗಳು ಏರ್ ಪೋರ್ಟ್ ನಲ್ಲಿ ನಿಷೇಧವಿದ್ರೂ ವಿಶೇಷ ವಿಮಾನದ ಪೈಲೆಟ್ ರಾಜಾರೋಷವಾಗಿ ಸಿಗರೇಟ್ ಸೇವನೆ ಮಾಡಿದ್ದಾರೆ. ಪೊಲೀಸರು ಇದನ್ನ ಕಂಡೂ ಕಾಣದಂತೆ ಇದ್ದರು.

    ಅಲ್ಲದೆ ಗುಜರಾತ್ ಮುಖ್ಯಮಂತ್ರಿಯನ್ನು ಸ್ವಾಗತಿಸಲು ಎಲ್ಲ ಮುಖಂಡರಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಬಿಜೆಪಿ ಮುಖಂಡರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಮೇಯರ್, ವಿಧಾನ ಪರಿಷತ್ ಸದಸ್ಯರಿಗಷ್ಟೇ ಒಳಗೆ ಪ್ರವೇಶ ನೀಡಿಲಾಗಿತ್ತು. ಇದರಿಂದ ಕೆರಳಿದ ಬಿಜೆಪಿ ಮುಖಂಡರಾದ ಉಮೇಶ ಜೋಷಿ, ಜಯತೀರ್ಥ ಕಟ್ಟಿ ಹಾಗೂ ಈರಣ್ಣ ಜಡಿ ಏರುದನಿಯಲ್ಲಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ರು. ಕೂಡಲೇ ಬಿಜೆಪಿ ಪ್ರಭಾರಿ ಮಹೇಶ ತೆಂಗಿನಕಾಯಿ ಮಧ್ಯಪ್ರವೇಶಿಸಿದ್ರು. ಎಸಿಪಿ ದಾವೂದ್ ವಿರುದ್ಧ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ರು.

    ವಿಶೇಷ ವಿಮಾನದಲ್ಲಿ ಬಂದಿಳಿದ ವಿಜಯ ರೂಪಾನಿ ಹುಬ್ಬಳ್ಳಿಯ ಏರ್‍ಪೋರ್ಟ್‍ನಲ್ಲಿ ವರದಿಗಾರರೊಂದಿಗೆ ಮಾತನಾಡಿ, ಈ ಸಾರಿಯೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಗುಜರಾತ್ ಚುನಾವಣೆ ಎದುರಿಸುತ್ತೇವೆ. 150 ಕ್ಕಿಂತಲೂ ಹೆಚ್ಚಿನ ಸ್ಥಾನ ಮೂಲಕ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತೇವೆ. ಗುಜರಾತ್‍ನಲ್ಲಿ ಸರ್ಕಾರದ ವಿರೋಧಿ ಅಲೆಯಿಲ್ಲ. ಮೋದಿಯವರನ್ನು 3 ಬಾರಿ ಸಿಎಂ ಮಾಡಿರೋದು ಗುಜರಾತ್ ಜನತೆ. ಈ ಸಾರಿಯೂ ಅತೀ ಹೆಚ್ಚಿನ ಮತಗಳನ್ನು ಬಿಜೆಪಿಗೆ ಗುಜರಾತ್ ಜನತೆ ನೀಡ್ತಾರೆ. ಪಟೇಲ್ ಸಮುದಾಯದ ಯುವ ಮುಖಂಡ ಹಾರ್ದಿಕ್ ಪಟೇಲ್ ಮೀಸಲಾತಿ ವಿಚಾರ ಬಿಜೆಪಿಗೆ ಹಿನ್ನೆಡೆಯಾಗೋದಿಲ್ಲ. ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಬಗ್ಗೆ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳುತ್ತೆ ಅಂದ್ರು.

    ಹಾವೇರಿಯಲ್ಲಿ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲು ರೂಪಾನಿ ಹುಬ್ಬಳ್ಳಿಯಿಂದ ರಸ್ತೆ ಮಾರ್ಗದ ಮೂಲಕ ಹಾವೇರಿಗೆ ಪ್ರಯಾಣ ಬೆಳೆಸಿದ್ರು.

  • ಹುಬ್ಬಳಿಯಿಂದ ಬೆಂಗ್ಳೂರಿಗೆ ಬರ್ತಿದ್ದ ರೈಲಿನ ಎಂಜಿನ್‍ನಲ್ಲಿ ಕಾಣಿಸಿಕೊಂಡ ಬೆಂಕಿ- ಪ್ರಯಾಣಿಕರು ಪಾರು

    ಹುಬ್ಬಳಿಯಿಂದ ಬೆಂಗ್ಳೂರಿಗೆ ಬರ್ತಿದ್ದ ರೈಲಿನ ಎಂಜಿನ್‍ನಲ್ಲಿ ಕಾಣಿಸಿಕೊಂಡ ಬೆಂಕಿ- ಪ್ರಯಾಣಿಕರು ಪಾರು

    ಬೆಂಗಳೂರು: ರೈಲಿನ ಎಂಜಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಪ್ರಯಾಣಿಕರಲ್ಲಿ ಕೆಲಕಾಲ ಆತಂಕ ಮೂಡಿಸಿದ ಘಟನೆ ನಡೆದಿದೆ.

    ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುತಿದ್ದ ಪ್ಯಾಸೆಂಜರ್ ಟ್ರೇನ್ ಎಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದೊಡ್ಡಬೆಲೆ ರೈಲು ನಿಲ್ದಾಣದ ಬಳಿ ನಡೆದಿದೆ. ಹುಬ್ಬಳ್ಳಿ ಪ್ಯಾಸೆಂಜರ್ ಕೆಜೆಎಂ14025 ಸಂಖ್ಯೆಯ ರೈಲಿನ ಎಂಜಿನ್ ಇದಾಗಿದೆ.

    ತಕ್ಷಣ ರೈಲ್ವೆ ಸಿಬ್ಬಂದಿ ರೈಲಿನ ಬೋಗಿಗಳಿಂದ ಎಂಜಿನ್ ಬೇರ್ಪಡಿಸಿದ್ದಾರೆ. ಸ್ಥಳಕ್ಕೆ ನೆಲಮಂಗಲ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ.

    ಎಂಜಿನ್ ಹೀಟಾಗಿ ಬೆಂಕಿ ಹೊತ್ತಿಕೊಂಡಿರೋ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅದೃಷ್ಟವಶಾತ್ ರೈಲಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ನಂತರ ಬೇರೆ ಎಂಜಿನ್ ಮೂಲಕ ಪ್ರಯಾಣಿಕರನ್ನ ರವಾನಿಸಲಾಗಿದೆ.

    https://www.youtube.com/watch?v=Dx1wNxoHSEk

     

  • ಹುಬ್ಬಳ್ಳಿ: ಬೀದಿನಾಯಿಗಳ ದಾಳಿ- 2 ವರ್ಷದ ಬಾಲಕಿ ಆಸ್ಪತ್ರೆ ಪಾಲು

    ಹುಬ್ಬಳ್ಳಿ: ಬೀದಿನಾಯಿಗಳ ದಾಳಿ- 2 ವರ್ಷದ ಬಾಲಕಿ ಆಸ್ಪತ್ರೆ ಪಾಲು

    ಹುಬ್ಬಳ್ಳಿ: ಬೀದಿನಾಯಿಗಳ ಹಿಂಡು ಪುಟ್ಟ ಬಾಲಕಿಯನ್ನು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಹಳೇ ಹುಬ್ಬಳ್ಳಿಯ ಆನಂದ ನಗರದ ಮಿಲನ ಕಾಲೋನಿಯಲ್ಲಿ ನಡೆದಿದೆ.

    2 ವರ್ಷದ ಸನಾ ಕೌಸರ್ ರಾಯಭಾಗ ಗಂಭೀರವಾಗಿ ಗಾಯಗೊಂಡಿರುವ ಬಾಲಕಿ. ಮನೆಯ ಮುಂದೆ ಆಟವಾಡುತ್ತಿರುವಾಗ ನಾಯಿಗಳ ಹಿಂಡು ಬಾಲಕಿಯ ಮೇಲೆ ದಾಳಿ ನಡೆಸಿದ್ದು, ಬಾಲಕಿಯ ಮುಖ, ಕೈ-ಕಾಲುಗನ್ನು ಕಚ್ಚಿ ಗಂಭೀರವಾಗಿ ಗಾಯಗೊಳಿಸಿವೆ. ತೀವ್ರವಾಗಿ ಗಾಯಗೊಂಡ ಬಾಲಕಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

    ಪದೇ ಪದೇ ಬೀದಿ ನಾಯಿಗಳು ಸಾಕಷ್ಟು ಮಕ್ಕಳಿಗೆ ಕಚ್ಚಿ ಗಾಯಗೊಳಿಸಿವೆ. ಬೀದಿ ನಾಯಿಗಳನ್ನು ಹಿಡಿಯುವಂತೆ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದ್ರೆ ಇದುವರೆಗೂ ನಾಯಿಗಳನ್ನು ಹಿಡಿಯುವ ಕೆಲಸವನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಮಾಡಿಲ್ಲ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

  • ಚಳಿ-ಮಳೆಯಲ್ಲಿ ಗರ್ಭಿಣಿಯರಿಗೆ ನೆಲವೇ ಹಾಸಿಗೆ: ಹುಬ್ಬಳ್ಳಿ ಕಿಮ್ಸ್ ನಲ್ಲೂ ತಪ್ಪಿಲ್ಲ ವನವಾಸ

    ಚಳಿ-ಮಳೆಯಲ್ಲಿ ಗರ್ಭಿಣಿಯರಿಗೆ ನೆಲವೇ ಹಾಸಿಗೆ: ಹುಬ್ಬಳ್ಳಿ ಕಿಮ್ಸ್ ನಲ್ಲೂ ತಪ್ಪಿಲ್ಲ ವನವಾಸ

    ಹುಬ್ಬಳ್ಳಿ: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಕರ್ಮಕಾಂಡಕ್ಕೆ ಕೊನೆಯೇ ಇಲ್ಲದಂತಾಗಿದೆ. ಈಗ ಅದರ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ.

    ಆಸ್ಪತ್ರೆಗೆ ಬರೋ ಗರ್ಭಿಣಿಯರು ನೆಲದ ಮೇಲೆ ಮಲಗೋ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸೂತಿ ಮತ್ತು ಹೆರಿಗೆ ವಿಭಾಗದಲ್ಲಿ ಅಗತ್ಯ ಹಾಸಿಗೆ ಮತ್ತು ಆಸನ ವ್ಯವಸ್ಥೆ ಇಲ್ಲದೇ ಇರೋ ಕಾರಣ ಗರ್ಭಿಣಿಯರು ನೆಲದಲ್ಲೇ ಮಲಗುತ್ತಿದ್ದಾರೆ.

    ಈ ಆಸ್ಪತ್ರೆಗೆ ಪ್ರತಿದಿನ 100ಕ್ಕಿಂತ ಹೆಚ್ಚು ಗರ್ಭಿಣಿಯರು ಬರ್ತಾರೆ. ಹೀಗಿದ್ದ ಮೇಲೂ ಆಸ್ಪತ್ರೆ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಈ ಹಿಂದೆ ಒಂದೇ ಸ್ಟ್ರೆಚರ್‍ನಲ್ಲಿ ನಾಲ್ವರು ಗರ್ಭಿಣಿಯರನ್ನು ಕೂರಿಸಿಕೊಂಡು ಹೋಗಿದ್ದು ಸುದ್ದಿಯಾಗಿತ್ತು.

     

  • ಸೋಮವಾರದ ಕರ್ನಾಟಕ ಬಂದ್ ಯಶಸ್ವಿಯಾಗಲ್ಲ: ಸಿಎಂ

    ಸೋಮವಾರದ ಕರ್ನಾಟಕ ಬಂದ್ ಯಶಸ್ವಿಯಾಗಲ್ಲ: ಸಿಎಂ

    ಹುಬ್ಬಳ್ಳಿ: ಸೋಮವಾರ ನಡೆಯುವ ಕರ್ನಾಟಕ ಬಂದ್ ಯಶಸ್ವಿಯಾಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಮಾಧ್ಯಮಗಳು ಕಳಸಾ ಬಂಡೂರಿ, ಮಹದಾಯಿ ಯೋಜನೆ ಜಾರಿ ವಿಚಾರ ಮತ್ತು ಬಯಲು ಸೀಮೆ ಕುಡಿಯುವ ನೀರು ಸೇರಿದಂತೆ ಇತರ ಬೇಡಿಕೆ ಈಡೇರಿಸಿ ನಾಳೆ ಕನ್ನಡಪರ ಸಂಘಟನೆಗಳು ನಡೆಸುವ ಬಂದ್ ಕರೆ ನೀಡಿದ ಬಗ್ಗೆ ಪ್ರಶ್ನಿಸಿದ್ದಕ್ಕೆ ಈ ಬಂದ್ ಯಶಸ್ವಿಯಾಗುವುದಿಲ್ಲ ಎಂದು  ಸಿಎಂ ಉತ್ತರಿಸಿದರು.

    ಅಮಿತ್ ಶಾ ವಿರುದ್ಧ ಗರಂ: ಗಾಂಧೀಜಿಯವರನ್ನು ಚತುರ ವರ್ತಕ ಎಂದು ಕರೆದಿರುವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ವಿರುದ್ಧ ಗರಂ ಆದ ಸಿಎಂ ಸಿದ್ದರಾಮಯ್ಯ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಹೋರಾಟ ನಡೆಸಿದ ಗಾಂಧೀಜಿಯ ಬಗ್ಗೆ ಅವರಿಗೆ ಗೊತ್ತಿಲ್ವಾ? ಇಡೀ ರಾಷ್ಟ್ರಕ್ಕೆ ಅವಮಾನ ಆಗುವ ರೀತಿಯಲ್ಲಿ ಮಾತನಾಡಿದ್ದಾರೆ. ಗಾಂಧೀಜಿಯವರ ಬಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ ಅಮಿತ್ ಶಾ ಹೇಳಿಕೆಯನ್ನು ಖಂಡಿಸುತ್ತೇನೆ ಎಂದರು.

    ನಮ್ಮಲ್ಲಿ ಅವಕಾಶವಿದೆ: ಗೋಹತ್ಯೆ ನಿಷೇಧ ಕಾನೂನು ಜಾರಿ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಅವರು ಗೋಹತ್ಯೆ ಆಯಾ ಆಯಾ ರಾಜ್ಯಕ್ಕೆ ಸಂಬಂಧಪಟ್ಟಿರುತ್ತದೆ. ವಯಸ್ಸಾದ ಗೋವುಗಳನ್ನು ಯಾರು ಸಾಕುತ್ತಾರೆ, ವಯಸ್ಸಾದ ಗೋವುಗಳ ಹತ್ಯೆಗೆ ನಮ್ಮಲ್ಲಿ ಅವಕಾಶವಿದೆ ಎಂದು ಹೇಳಿದರು.

    ಜಿಎಸ್‍ಟಿ ಯಾವ ಯಾವ ಆಹಾರ ಧಾನ್ಯಗಳ ಮೇಲೆ ಹಾಕಲಾಗುತ್ತದೆ ನೋಡಬೇಕು. ಇದು ಎಷ್ಟರ ಮಟ್ಟಿಗೆ ಜನ ಸ್ವೀಕರಿಸುತ್ತಾರೆ ಎಂಬುದನ್ನು ನೋಡಬೇಕು ಎಂದು ತಿಳಿಸಿದರು.

    ಇದನ್ನೂ ಓದಿ: ಕರ್ನಾಟಕ ಬಂದ್: ಸೋಮವಾರ ಏನಿರುತ್ತೆ? ಏನ್ ಇರಲ್ಲ ಇಲ್ಲಿದೆ ಪೂರ್ಣ ಮಾಹಿತಿ

  • ವಿಡಿಯೋ: ಗಾಹಕರ ಸೋಗಿನಲ್ಲಿ ಬಂದ ಕಳ್ಳ ದುಬಾರಿ ಬೆಲೆಯ ಫೋನ್ ಕದ್ದು ಪರಾರಿ

    ವಿಡಿಯೋ: ಗಾಹಕರ ಸೋಗಿನಲ್ಲಿ ಬಂದ ಕಳ್ಳ ದುಬಾರಿ ಬೆಲೆಯ ಫೋನ್ ಕದ್ದು ಪರಾರಿ

    ಹುಬ್ಬಳ್ಳಿ: ಗ್ರಾಹಕರ ಸೋಗಿನಲ್ಲಿ ಬರುವ ಕಳ್ಳರು ಕ್ಷಣಾರ್ಧದಲ್ಲಿ ಅಂಗಡಿಯಲ್ಲಿರುವ ವಸ್ತುಗಳನ್ನ ಎಗರಿಸಿ ಬಿಡುತ್ತಾರೆ. ಅದನ್ನು ತೋರಿಸಿ ಇದನ್ನು ತೋರಿಸಿ ಎಂದು ಕೇಳುತ್ತಾ ರೆಪ್ಪೆ ಮಿಟಕಿಸುವಷ್ಟರಲ್ಲಿ ತಮ್ಮ ಕೈಚಳಕ ತೋರಿಸುತ್ತಾರೆ. ಇಂಥದೊಂದು ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.

    ನಗರದ ಮೂರು ಸಾವಿರ ಮಠದ ಬಳಿ ಇರುವ ಶ್ರೀಸಾಯಿ ಪ್ಲೈವುಡ್ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ಪ್ಲೈವುಡ್‍ಗಳನ್ನು ವಿಚಾರಿಸಿ ಮತ್ತೆ ಬೇರೆ ಕ್ವಾಲಿಟಿ ತೋರಿಸುವಂತೆ ಹೇಳಿದ್ದಾನೆ. ಈ ಸಮಯದಲ್ಲಿ ಅಂಗಡಿ ಮಾಲೀಕ ಸುರೇಶ್ ಇನ್ನಷ್ಟು ಬೇರೆ ಪ್ಲೈವುಡ್‍ಗಳನ್ನು ತರಲು ಒಳಗಡೆ ಹೋಗಿದ್ದಾರೆ. ಈ ಸಮಯವನ್ನೇ ಕಾಯುತ್ತಿದ್ದ ವ್ಯಾಪಾರದ ಸೋಗಿನಲ್ಲಿ ಬಂದಿದ್ದ ಕಳ್ಳ ಕೌಂಟರ್‍ನಲ್ಲಿದ್ದ ದುಬಾರಿ ಬೆಲೆಯ ಮೊಬೈಲ್ ಫೋನನ್ನು ಕದ್ದು ಪರಾರಿಯಾಗಿದ್ದಾನೆ.

    ಅಷ್ಟರಲ್ಲಿ ಅಂಗಡಿ ಮಲೀಕ ಸುರೇಶ ಬೇರೆ ಕ್ವಾಲಿಟಿ ಪ್ಲೈವುಡ್ ತಂದಿದ್ದರು. ಆತ ಇಲ್ಲದಿರುವುದನ್ನು ನೋಡಿ, ಬೇರೆ ಗ್ರಾಹಕರತ್ತ ಗಮನ ಹರಿಸಿ ವ್ಯಾಪಾರದಲ್ಲಿ ತೊಡಗಿದ್ದಾರೆ. ಕೆಲ ಸಮಯದ ನಂತರ ಮೊಬೈಲ್ ಫೋನ್ ನೋಡಿದಾಗ ಫೋನ್ ಇಲ್ಲದಿರುವುದು ಕಂಡುಬಂದಿದೆ. ಕೂಡಲೇ ಸಿಸಿಟಿವಿ ನೋಡಿದಾಗ ಕೆಲ ನಿಮಿಷದ ಹಿಂದೆ ಬಂದ ಯುವಕ ಕಳ್ಳತನ ಮಾಡಿಕೊಂಡು ಹೋಗಿದ್ದು ಗೊತ್ತಾಗಿದೆ. ಕೂಡಲೇ ಉಪನಗರ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.

    https://youtu.be/L_A0e7ANQs4

  • ಹೈಸ್ಕೂಲ್ ಆವರಣದಲ್ಲಿ ಮನುಷ್ಯರ ತಲೆ ಬುರುಡೆ, ಮೂಳೆಗಳ ರಾಶಿ ಪತ್ತೆ: ಸಾರ್ವಜನಿಕರಲ್ಲಿ ಆತಂಕ

    ಹೈಸ್ಕೂಲ್ ಆವರಣದಲ್ಲಿ ಮನುಷ್ಯರ ತಲೆ ಬುರುಡೆ, ಮೂಳೆಗಳ ರಾಶಿ ಪತ್ತೆ: ಸಾರ್ವಜನಿಕರಲ್ಲಿ ಆತಂಕ

    ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮನುಷ್ಯರ ಬುರುಡೆ, ಮೂಳೆಗಳ ರಾಶಿ ಪತ್ತೆಯಾಗಿದೆ. ನಗರದ ಮೂರು ಸಾವಿರ ಮಠದ ಸಾವಿತ್ರಿ ಶೆಟ್ಟಿ ಹೈಸ್ಕೂಲ್ ಆವರಣದಲ್ಲಿ ಮೂಳೆ, ಬುರುಡೆ ರಾಶಿ ಸಿಕ್ಕಿದೆ.

    ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಣ್ಣಿಗೇರಿ ಪಟ್ಟಣದಲಿ ಆರು ವರ್ಷಗಳ ಹಿಂದೆ ಸುಮಾರು 600 ತಲೆಬುರುಡೆಗಳು ಪತ್ತೆಯಾಗಿದ್ದವು. ಇವುಗಳ ಇತಿಹಾಸ ತಿಳಿಯುವ ಸಲುವಾಗಿ ನಡೆಸಲಾಗಿದ್ದ ಕಾರ್ಬನ್ ಪರೀಕ್ಷೆಯಲ್ಲಿ ಇವು 638 ವರ್ಷಗಳಷ್ಟು ಹಳೆಯದ್ದು ಅನ್ನೋ ಮಾಹಿತಿ ಲಭ್ಯವಾಗಿತ್ತು.

    ಸದ್ಯ ಬುರುಡೆ ಮತ್ತು ಮೂಳೆ ಸಿಕ್ಕಿರುವ ಪ್ರೌಢಾಶಾಲೆಯ ಏರಿಯಾದಲ್ಲಿ ಆತಂಕದ ವಾತಾವರಣ ಉಂಟಾಗಿದೆ.

  • ಚಾಕಲೇಟ್ ಆಸೆ ತೋರಿಸಿ ಅಪ್ತಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನ- ಕಾಮುಕ ಅರೆಸ್ಟ್

    ಚಾಕಲೇಟ್ ಆಸೆ ತೋರಿಸಿ ಅಪ್ತಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನ- ಕಾಮುಕ ಅರೆಸ್ಟ್

    ಹುಬ್ಬಳ್ಳಿ: ಅಜ್ಜಿಯ ಜೊತೆ ನಾಯಿ ಕಡಿತಕ್ಕೆ ಔಷಧಿ ಪಡೆಯಲು ಬಂದಿದ್ದ ಅಪ್ರಾಪ್ತ ಬಾಲಕಿಯನ್ನು ಕಾಮುಕನೊಬ್ಬ ಚಾಕಲೇಟ್ ಆಸೆ ತೋರಿಸಿ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಹುಬ್ಬಳ್ಳಿಯ ಗ್ಲಾಸ್ ಹೌಸ್ ನಲ್ಲಿ ನಡೆದಿದೆ.

    ಗಣೇಶ ನಾಗಪ್ಪ ಸುತ್ತಗಟ್ಟಿ (28) ಕಾಮುಕ ಆರೋಪಿಯಾಗಿದ್ದು, ಇದೀಗ ಪೊಲೀಸರು ಬಂಧಿಸಿದ್ದಾರೆ.

    ನಡೆದಿದ್ದೇನು?: ಧಾರವಾಡ ತಾಲೂಕಿನ ಗ್ರಾಮವೊಂದರಿಂದ ಅಜ್ಜಿ ತನ್ನ ಮೊಮ್ಮಗಳೊಂದಿಗೆ ಬಂಡಿವಾಡ ಅಗಸಗಿಗೆ ಆಗಮಿಸಿದ್ದರು. ಔಷಧಿಯನ್ನು ಪಡೆದುಕೊಂಡ ಅಜ್ಜಿ ಮೊಮ್ಮಗಳನ್ನು ಕರೆದುಕೊಂಡು ಗ್ರಾಮಕ್ಕೆ ತೆರಳಲು ಹಳೇ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಬಸ್ ನಿಲ್ದಾಣದ ಮುಂದಿರುವ ಕಾಮತ್ ಹೊಟೆಲ್ ನಲ್ಲಿ ತಿಂಡಿಯನ್ನು ತರಲೆಂದು ಅಜ್ಜಿ ಬಾಲಕಿಯನ್ನು ಹೊರಗಡೆ ನಿಲ್ಲಿಸಿ ಹೋಗಿದ್ದರು. ಇದೇ ಸಮಯವನ್ನು ಕಾದಿದ್ದ ಕಾಮುಕ ಬಾಲಕಿಗೆ ಚಾಕಲೇಟ್ ಕೊಡಿಸುವ ಅಮಿಷವೊಡ್ಡಿ ಕರೆದುಕೊಂಡು ಇಂದಿರಾ ಗ್ಲಾಸ್ ಹೌಸ್ ನ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

    ಇತ್ತ ಹೊಟೆಲ್ ಬಳಿ ನಿಲ್ಲಿಸಿದ ಮೊಮ್ಮಗಳು ಕಾಣದಾದಾಗ ಅಜ್ಜಿ ಉಪನಗರ ಪೊಲೀಸ್ ಠಾಣೆಗೆ ತೆರಳಿ ಮೊಮ್ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದಾರೆ. ಪೆÇಲೀಸರ ಚುರುಕಿನ ಕಾರ್ಯಚರಣೆಯಿಂದ ಕಾಮುಕನನ್ನು ಇಂದಿರಾ ಗಾಜಿನ ಮನೆಯ ನಿರ್ಜನ ಪ್ರದೇಶದಲ್ಲಿ ಬಂಧಿಸಿದ್ದಾರೆ.

    ಸದ್ಯ ಗಾಯಗೊಂಡಿದ್ದ ಅಪ್ರಾಪ್ತ ಬಾಲಕಿಯನ್ನು ಕಿಮ್ಸ್ ಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

  • ಸಂಪಿಗೆ ಬಿದ್ದು 18 ತಿಂಗಳ ಮಗು ಸಾವು: ಪೋಷಕರಿಂದ ಮಗನ ಕಣ್ಣು ದಾನ

    ಸಂಪಿಗೆ ಬಿದ್ದು 18 ತಿಂಗಳ ಮಗು ಸಾವು: ಪೋಷಕರಿಂದ ಮಗನ ಕಣ್ಣು ದಾನ

    ಹುಬ್ಬಳ್ಳಿ: 18 ತಿಂಗಳ ಮಗುವೊಂದು ಆಟವಾಡಲು ಹೋಗಿ ನೀರಿನ ಸಂಪಿನಲ್ಲಿ ಬಿದ್ದು ಸಾವನ್ನಪ್ಪಿರೋ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ನಗರದ ಘಂಟಿಕೇರಿ ನಿವಾಸಿಗಳಾದ ರಾಘವೇಂದ್ರ ಹಾಗೂ ರೂಪಾ ಕಟ್ಟಿಮನಿ ಎಂಬುವರ ನಿಶಾನ್ ನೀರಿನ ಸಂಪಿಗೆ ಬಿದ್ದು ಮೃತಪಟ್ಟಿದ್ದಾನೆ. ಆ ಮಗು ಸಾವನ್ನಪ್ಪಿದ ದುಃಖದಲ್ಲಿಯೂ ಕೂಡ ನೇತ್ರದಾನ ಮಾಡಿ ತಂದೆ ತಾಯಿಗಳು ಮಾನವೀಯತೆ ಮೆರೆದಿದ್ದಾರೆ.

    ಗುರುವಾರ ಸಂಜೆ ನೀರು ಬಂದ ಹಿನ್ನೆಲೆಯಲ್ಲಿ ಮನೆಮಂದಿಯಲ್ಲ ನೀರು ತುಂಬುವ ಕೆಲಸದಲ್ಲಿ ಮಗ್ನರಾಗಿದ್ದರು. ಆ ವೇಳೆ ನಿಶಾನ್ ಆಟವಾಡುತ್ತಾ ಮನೆ ಮುಂದೆ ಇರೋ ನೀರಿನ ಸಂಪಿಗೆ ಬಿದ್ದಿದ್ದಾನೆ.

    ಕುಟುಂಬಸ್ಥರು ಎಲ್ಲಾ ಕಡೇ ಹುಡುಕಾಡಿದರೂ ನಿಶಾನ್ ಪತ್ತೆಯಾಗಿರಲಿಲ್ಲ. ಹೀಗಾಗಿ ಅನುಮಾನಗೊಂಡು ಸಂಪ್ ನೋಡಿದಾಗ ಮಗುವನ್ನು ಕಂಡಿದ್ದಾರೆ. ಕೂಡಲೇ ಮಗುವನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರೂ ಅಷ್ಟರಲ್ಲೇ ನಿಶಾನ್ ಪ್ರಾಣ ಪಕ್ಷಿ ಹೋಗಿತ್ತು.

  • ಐಸ್ ಕ್ರೀಂ ಕೊಡಿಸೋ ನೆಪದಲ್ಲಿ 5ರ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕತ್ತು ಕೊಯ್ದ!

    ಐಸ್ ಕ್ರೀಂ ಕೊಡಿಸೋ ನೆಪದಲ್ಲಿ 5ರ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕತ್ತು ಕೊಯ್ದ!

    ಹುಬ್ಬಳ್ಳಿ: ವ್ಯಕ್ತಿಯೊಬ್ಬ ಐಸಕ್ರೀಮ್ ಕೊಡಿಸುವ ನೆಪದಲ್ಲಿ ಐದು ವರುಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದ ಅಮಾನವೀಯ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹಳೇ ಹುಬ್ಬಳ್ಳಿಯ ಆನಂದನಗರದ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. 56 ವರ್ಷದ ನಾಗಪ್ಪ ಪೂಜಾರ್ ಮನೆಯ ಮುಂದೆ ನಿಂತಿದ್ದ ಬಾಲಕಿಯನ್ನು ನೋಡಿ ಅವಳಿಗೆ ಐಸ್ ಕ್ರೀಮ್ ಕೋಡಿಸುವುದಾಗಿ ಹೇಳಿದ್ದಾನೆ. ಇದನ್ನು ನಂಬಿದ ಬಾಲಕಿ ಅವನೊಂದಿಗೆ ಹೋಗಿದ್ದಾಳೆ. ಬಳಿಕ ಮಗುವನ್ನು ಗೋಕುಲ ರಸ್ತೆಯ ಬಂಜಾರ ಕಾಲೋನಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದ ನಾಗಪ್ಪ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

    ಬಲಾತ್ಕಾರ ಯತ್ನದ ನಂತರ ಬಾಲಕಿಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ನಂತರ ಬಾಲಕಿಯನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾನೆ. ರಕ್ತದ ಮಡುವಿನಲ್ಲಿ ಅಳುತ್ತಾ ಬಿದ್ದಿರುವುದನ್ನು ನೋಡಿದ ಸಾರ್ವಜನಿಕರು ಕೂಡಲೇ ಬಾಲಕಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಇತ್ತ ಮಗು ಕಾಣೆಯಾದ ಬಗ್ಗೆ ಪೋಷಕರಿಂದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಐಸ್ ಕ್ರೀಮ್ ಕೊಡಿಸುವುದಾಗಿ ಅಮಾಯಕ ಬಾಲಕಿಗೆ ಆಮಿಷ ಒಡ್ಡಿ ಹೀನ ಕೃತ್ಯವೆಸಗಿದ ನಾಗಪ್ಪ ಪೂಜಾರ್‍ನನ್ನು ಹಳೇ ಹುಬ್ಬಳ್ಳಿಯ ಪೊಲೀಸರು ಬಂಧಿಸಿದ್ದಾರೆ.