Tag: ಹುಬ್ಬಳ್ಳಿ

  • ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಲಾರಿ

    ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಲಾರಿ

    ಧಾರವಾಡ: ಹತ್ತಿ ಚೀಲಗಳನ್ನು ಹೊತ್ತೊಯ್ಯುತ್ತಿದ್ದ ಲಾರಿವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆಗಿರುವ ಘಟನೆ ಹುಬ್ಬಳ್ಳಿಯ ಬೆಂಗಳೂರು ಪೂನಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ಹುಬ್ಬಳ್ಳಿಯ ನೇಕಾರ ನಗರದ ಬಳಿ ಲಾರಿ ಪಲ್ಟಿ ಆಗಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಯ ಸಂಭವಿಸಿಲ್ಲ. ತಮಿಳುನಾಡು ಮೂಲದ ಲಾರಿ ಇದಾಗಿದ್ದು, ಕಾರವಾರದಿಂದ ಗಬ್ಬೂರು ಮಾರ್ಗವಾಗಿ ತಮಿಳುನಾಡಿಗೆ ತೆರಳುತ್ತಿತ್ತು. ಆದರೆ ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಬೃಹತ್ ಲಾರಿ ಪಲ್ಟಿಯಾಗಿದೆ.

     

    ಅಪಘತದ ಬಳಿಕ ಸ್ಥಳದಲ್ಲಿಯೇ ಲಾರಿ ಬಿಟ್ಟು ಲಾರಿ ಚಾಲಕ ಹಾಗೂ ಸಹಾಯಕ ಪರಾರಿಯಾಗಿದ್ದಾರೆ. ಕಾರಣ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ದಟ್ಟನೆ ಹೆಚ್ಚಾಗಿತ್ತು. ಬಳಿಕ ಸ್ಥಳಕ್ಕೆ ದಕ್ಷಿಣ ಸಂಚಾರಿ ಪೊಲೀಸರಿಂದ ಭೇಟಿ ನೀಡಿ ಸಂಚಾರ ನಿಯಂತ್ರಣ ಸುಗಮಗೊಳಿಸಿದ್ದಾರೆ.

  • ಕೆರೆಗೆ ಉರುಳಿ ಬಿದ್ದ ಖಾಸಗಿ ಬಸ್- 30ಕ್ಕೂ ಹೆಚ್ಚು ಜನರಿಗೆ ಗಾಯ

    ಕೆರೆಗೆ ಉರುಳಿ ಬಿದ್ದ ಖಾಸಗಿ ಬಸ್- 30ಕ್ಕೂ ಹೆಚ್ಚು ಜನರಿಗೆ ಗಾಯ

    ಹುಬ್ಬಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್‍ವೊಂದು ಕೆರೆಗೆ ಉರುಳಿ ಬಿದ್ದ ಘಟನೆ ಹುಬ್ಬಳ್ಳಿ ಹೊರವಲಯದ ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ವರೂರ ಕ್ರಾಸ್ ಬಳಿ ನಡೆದಿದೆ.

    ವರೂರ ಕ್ರಾಸ್ ಬಳಿ ಇರುವ ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರ ಫಾರ್ಮ್ ಹೌಸ್‍ನ ಕೆರೆಗೆ ಖಾಸಗಿ ಬಸ್‍ವೊಂದು ಉರುಳಿ ಬಿದ್ದಿದೆ. ಈ ಬಸ್ ಬೆಂಗಳೂರಿನಿಂದ ಮುಂಬೈಗೆ ಹೊರಟಿದ್ದ ವೇಳೆ ಈ ಘಟನೆ ಸಂಭವಿಸಿದೆ.

    ಘಟನೆಯಲ್ಲಿ ಬಸ್ ನಲ್ಲಿದ್ದ ಮೂವತ್ತಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಬಾಲಕನ ಶವ ಪತ್ತೆ

    ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಬಾಲಕನ ಶವ ಪತ್ತೆ

    ಹುಬ್ಬಳ್ಳಿ: ಭಾನುವಾರ ಕಲ್ಲಿನ ಕ್ವಾರಿಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಬಾಲಕನ ಶವ ಎರಡು ದಿನಗಳ ನಂತರ ಪತ್ತೆಯಾಗಿದೆ.

    ಜುಲೈ 2 ರಂದು ಹುಬ್ಬಳ್ಳಿ ತಾಲೂಕಿನ ಪಾಳೆ ಗ್ರಾಮದ ಕಲ್ಲಿನ ಕ್ವಾರಿಯಲ್ಲಿ ಈಜಲು ಬಂದಿದ್ದ 14 ವರ್ಷದ ಬಾಲಕ ವಿದ್ಯಾಸಾಗರ ಹನಮಕ್ಕನವರ್ ನೀರಿನಲ್ಲಿ ಮುಳುಗಿದ್ದ.

    ಆದ್ರೆ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರೂ ಕೂಡ ಎರಡು ದಿನಗಳ ವರೆಗೆ ಮೃತದೇಹ ಪತ್ತೆಯಾಗಿರಲಿಲ್ಲ. ಎರಡು ದಿನಗಳಿಂದಲೂ ಕಾರವಾರ ಸಿಬರ್ಡ್ ನೌಕಾ ನೆಲೆ ಸಿಬ್ಬದಿ, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯಚರಣೆ ನಡೆಸುತ್ತಿದ್ದರು. ಮಂಗಳವಾರ ಬೆಳಗಿನ ಜಾವ ಮತ್ತೆ ಶೋಧ ಕಾರ್ಯ ನಡೆಸಿ ಬಾಲಕನ ಶವ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ತಹಶೀಲ್ದಾರ ಶಶಿಧರ ಮಾಡ್ಯಾಳ, ಹುಬ್ಬಳ್ಳಿ ಗ್ರಾಮಾಂತರ ಠಾಣಾ ಪೊಲೀಸರು, ಜಿಲ್ಲಾಡಳಿತ ಸಿಬ್ಬಂದಿ, ಗ್ರಾಮಸ್ಥರು ಸ್ಥಳದಲ್ಲಿಯೇ ಬೀಡುಬಿಟ್ಟು ಕಾರ್ಯಾಚರಣೆ ನಡೆಸಿದ್ದರು. ಬಾಲಕನ ಶವವನ್ನು ಹೊರತಗೆಯುತ್ತಿದಂತೆ ಸಂಬಂಧಿಗಳು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

  • ಹೈವೇಯಲ್ಲಿದ್ದ ಬಾರ್ ಹೊಲಕ್ಕೆ ಶಿಫ್ಟ್ – ಮಾಲೀಕನ ವಿರುದ್ಧ ಗ್ರಾಮಸ್ಥರಿಂದ ಪ್ರತಿಭಟನೆ

    ಹೈವೇಯಲ್ಲಿದ್ದ ಬಾರ್ ಹೊಲಕ್ಕೆ ಶಿಫ್ಟ್ – ಮಾಲೀಕನ ವಿರುದ್ಧ ಗ್ರಾಮಸ್ಥರಿಂದ ಪ್ರತಿಭಟನೆ

    ಹುಬ್ಬಳ್ಳಿ: ಸುಪ್ರೀಂ ಕೋರ್ಟ್ ಆದೇಶದಂತೆ ಹೆದ್ದಾರಿ ಪಕ್ಕದಲ್ಲಿ ಇರುವ ಬಾರ್‍ಗಳನ್ನು ಸರ್ಕಾರ ಬಂದ್ ಮಾಡಿಸಿದೆ. ಆದ್ರೆ ಅದಕ್ಕೂ ವಾಮ ಮಾರ್ಗ ಕಂಡುಕೊಂಡ ಬಾರ್ ಮಾಲೀಕರು ಹೈವೇ ಪಕ್ಕದಲ್ಲಿ ಇರುವ ಹೊಲದಲ್ಲಿ ಬಾರ್ ಗಳನ್ನು ಓಪನ್ ಮಾಡಿಕೊಂಡಿವೆ.

    ಹುಬ್ಬಳ್ಳಿಯ ಗಿರಣಿ ಚಾಳದ ಪಕ್ಕದಲ್ಲಿ ಇರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವ ಬಹುತೇಕ ಬಾರ್ ಗಳನ್ನು ಅಬಕಾರಿ ಇಲಾಖೆ ಬಂದ್ ಮಾಡಿಸಿತ್ತು. ಆದ್ರೆ ಅದೇ ಬಾರ್ ಮಾಲೀಕರು ಅಕ್ರಮವಾಗಿ ಹೊಲದಲ್ಲಿ ಬಾರ್ ಓಪನ್ ಮಾಡಿದ್ದಾರೆ.

    ಹೀಗಾಗಿ ಹುಬ್ಬಳ್ಳಿಯ ಗಿರಣಿ ಚಾಳ ನಿವಾಸಿಗಳು ಇದರಿಂದ ಬೇಸತ್ತು ಹೊಲದಲ್ಲಿ ತೆರೆದಿದ್ದ ಬಾರ್ ಬಂದ್ ಮಾಡಿಸಿ, ಜಿಲ್ಲಾ ಅಬಕಾರಿ ಕಚೇರಿ ಎದುರು ನೂರಾರು ಜನ ಪ್ರತಿಭಟನೆ ಮಾಡಿದ್ದಾರೆ. ಅಲ್ಲದೆ ಈ ರೀತಿಯಲ್ಲಿ ಬಾರ್ ಗಳನ್ನು ತೆರೆಯಲು ಅನುಮತಿ ನೀಡಬಾರದು ಮತ್ತು ಬಾರ್ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.

  • ಕೆಲಸ ಮಾಡುವಾಗ ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ಮೃತಪಟ್ಟ ಲೈನ್ ಮನ್

    ಕೆಲಸ ಮಾಡುವಾಗ ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ಮೃತಪಟ್ಟ ಲೈನ್ ಮನ್

    ಹುಬ್ಬಳ್ಳಿ: ವಿದ್ಯುತ್ ಕಂಬ ಏರಿ ಕೆಲಸ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ಲೈನ್ ಮನ್ ಮೃತಪಟ್ಟ ಘಟನೆ ಧಾರವಾಡ ಜಿಲ್ಲೆಯ ಕುಂದುಗೋಳ ತಾಲೂಕಿನ ರಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ.

    21 ವರ್ಷದ ಅಲ್ತಾಫ್ ಅಂಗಡಿ ಮೃತ ಲೈನ್ ಮೆನ್. ಅಲ್ತಾಫ್ ಕಳೆದ ಮೂರು ತಿಂಗಳಿನಿಂದ ಹೆಸ್ಕಾಂನಲ್ಲಿ ಗುಡುಗೇರಿ ವಿಭಾಗದ ಲೈನ್ ಮನ್ ಆಗಿ ಕೆಲಸ ಮಾಡುತ್ತಿದ್ದರು. ರಟ್ಟಿಗೇರಿ ಗ್ರಾಮದಲ್ಲಿನ ವಿದ್ಯುತ್ ಸಂಪರ್ಕ ಕೈಕೊಟ್ಟಿದ್ದರಿಂದ ವಿದ್ಯುತ್ ಸಂಪರ್ಕ ದುರಸ್ಥಿ ಮಾಡಲು ಅಲ್ತಾಫ್ ಬಂದಿದ್ದರು.

    ಈ ವೇಳೆ ಕಂಬವನ್ನ ಏರಿ ರಿಪೇರಿ ಮಾಡುವಾಗ ಏಕಾಏಕಿ ವಿದ್ಯುತ್ ಪ್ರವಹಿಸಿದ್ದರಿಂದ ಅಲ್ತಾಫ್ ಸಾವನ್ನಪ್ಪಿದ್ದಾರೆ. 4 ಗಂಟೆಗಳ ಕಾಲ ಅಲ್ತಾಫ್ ಮೃತ ದೇಹ ಕಂಬದಲ್ಲಿಯೇ ನೇತಾಡುತ್ತಿತ್ತು. ವಿಷಯ ತಿಳಿಸಿದ್ರೂ ತಡವಾಗಿ ಬಂದ ಹೆಸ್ಕಾಂ ಅಧಿಕಾರಿಗಳು ಮತ್ತು ಪೊಲೀಸರು ಶವವನ್ನು ತೆರವುಗೊಳಿಸಿದರು. ಈ ಸಂಬಂಧ ಗುಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಈ ಗ್ರಾಮದಲ್ಲಿ ದಲಿತರನ್ನು ಮಾತನಾಡಿಸಿದ್ರೆ 500 ರೂ. ದಂಡ, ದಿನಸಿ ಸಾಮಗ್ರಿ ಕೊಟ್ರೆ 1000 ರೂ. ಫೈನ್

    ಈ ಗ್ರಾಮದಲ್ಲಿ ದಲಿತರನ್ನು ಮಾತನಾಡಿಸಿದ್ರೆ 500 ರೂ. ದಂಡ, ದಿನಸಿ ಸಾಮಗ್ರಿ ಕೊಟ್ರೆ 1000 ರೂ. ಫೈನ್

    ಹುಬ್ಬಳ್ಳಿ: ಧಾರವಾಡ ಜಿಲ್ಲೆ ಕಲಘಟಗಿಯ ದೇವರಕೊಂಡ ಗ್ರಾಮದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ದಲಿತರನ್ನು ಮಾತನಾಡಿಸಿದ್ರೆ 500 ರೂಪಾಯಿ ದಂಡ. ದಲಿತರಿಗೆ ದಿನಸಿ ಸಾಮಾನು ನೀಡಿದ್ರೆ 1 ಸಾವಿರ ದಂಡ. ಬೈಕ್‍ನಲ್ಲಿ ಡ್ರಾಪ್ ಕೊಟ್ರೆ 1500 ರೂಪಾಯಿ ದಂಡ, 21 ನೇ ಶತಮಾನದಲ್ಲೂ ಈ ರೀತಿಯ ವ್ಯವಸ್ಥೆ ಇನ್ನೂ ಉಳಿದುಕೊಂಡಿದೆ.

    ಹತ್ತು ದಿನಗಳ ಹಿಂದೆ ದಲಿತರ ಹಸುವಿನ ಕರು ಮೇಲ್ಜಾತಿಯವರಿಗೆ ಸೇರಿದ ಜಮೀನಿನಲ್ಲಿ ಬೆಳೆದ ಬೆಳೆಯನ್ನ ತಿಂದಿದೆ. ಇದೇ ವಿಷಯಕ್ಕೆ ದಲಿತರು ಮತ್ತು ಮೇಲ್ಜಾತಿಯವರ ಮಧ್ಯೆ ಜಗಳವಾಗಿದೆ. ಹೀಗಾಗಿ ಗ್ರಾಮದ ಹಿರಿಯರೆಲ್ಲ ಸೇರಿ ದಲಿತರಿಗೆ ಬಹಿಷ್ಕಾರ ಹಾಕಿದ್ದಾರೆ.

    ಗ್ರಾಮದಲ್ಲಿ ದಲಿತರ ಮಕ್ಕಳಿಗೆ ಒಂದು ಲೋಟ ನೀರನ್ನೂ ಕೊಡ್ತಿಲ್ಲ. ದಿನಸಿ ಅಂಗಡಿಯಲ್ಲಿ ಒಂದು ಬೆಂಕಿಪೊಟ್ಟಣವನ್ನು ನೀಡ್ತಿಲ್ಲ. ಅಲ್ಲದೆ ದಲಿತರಿಗೆ ಯಾರೂ ಕೂಲಿ ಕೆಲಸ ಸಹ ನೀಡ್ತಿಲ್ಲ. ಹೀಗಾಗಿ ತುತ್ತು ಅನ್ನಕ್ಕೂ ಇಲ್ಲಿನ ದಲಿತರು ಪರದಾಡುವ ಸ್ಥಿತಿ ಎದುರಾಗಿದ್ದು, ಸಾಮೂಹಿಕವಾಗಿ ಅಡುಗೆ ತಯಾರಿಸಿ ಊಟ ಮಾಡ್ತಿದ್ದಾರೆ.

  • ಬಾಲಕನನ್ನು ಮ್ಯಾನಹೋಲ್‍ಗೆ ಇಳಿಸಿ ಕ್ಲೀನ್ ಮಾಡಿಸಿದ್ರು

    ಬಾಲಕನನ್ನು ಮ್ಯಾನಹೋಲ್‍ಗೆ ಇಳಿಸಿ ಕ್ಲೀನ್ ಮಾಡಿಸಿದ್ರು

    ಹುಬ್ಬಳ್ಳಿ: ಮ್ಯಾನಹೋಲ್‍ಗಳಲ್ಲಿ ಕಾರ್ಮಿಕರನ್ನು ಇಳಿಸಿ ಕೆಲಸ ಮಾಡಬಾರದು ಎಂಬ ನಿಯಮ ಇದೆ. ಆದ್ರೆ ಆ ನಿಯಮವನ್ನೇ ಗಾಳಿಗೆ ತೂರಿ ಹುಬ್ಬಳ್ಳಿಯಲ್ಲಿ ಬಾಲಕನೊಬ್ಬನನ್ನು ಮ್ಯಾನಹೋಲ್‍ಗೆ ಇಳಿಸಿ ಕ್ಲೀನ್ ಮಾಡಿಸಿದ ಘಟನೆ ನಡೆದಿದೆ.

    ಹೌದು. ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆ ಬಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿನ ಮ್ಯಾನಹೋಲ್‍ನಲ್ಲಿ ಕಿರಣ್ ಎಂಬ ಹುಡುಗನನ್ನು ಕೆಳಗೆ ಇಳಿಸಿ ಸ್ವಚ್ಛತೆ ಮಾಡಿಸಿದ್ದಾರೆ.

    ಚನ್ನಮ್ಮ ವೃತ್ತದಲ್ಲಿನ ಯುಜಿಡಿ (ಒಳ ಚರಂಡಿ ವ್ಯವಸ್ಥೆ) ತುಂಬಿಕೊಂಡಿದ್ದು, ಇದೇ ವೃತ್ತದಲ್ಲಿ ಸಾರ್ವಜನಿಕ ಶೌಚಾಲಯವೊಂದು ದುರಸ್ತಿಗೊಂಡಿದೆ. ಹೀಗಾಗಿ ಶೌಚಾಲಯ ಗುತ್ತಿಗೆ ಪಡೆದ ಗುತ್ತಿಗೆದಾರ, ಕಿರಣ್‍ನನ್ನು ಮ್ಯಾನ್‍ಹೋಲ್‍ಗೆ ಇಳಿಸಿ ಕ್ಲೀನ್ ಮಾಡಿಸಿದ್ದಾರೆ.

    ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ತವರಲ್ಲೇ ನಡೆದಿದೆ ರಾಜ್ಯದ ಮಾನ ಹೋಗೋ ಘಟನೆ

    ಇನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಬಳಿ ಮ್ಯಾನ್ ಹೋಲ್ ಕ್ಲೀನ್ ಮಾಡಲು ಅತ್ಯಾಧುನಿಕ ಯಂತ್ರಗಳಿದ್ರೂ ಈ ರೀತಿ ಕಾರ್ಮಿಕರನ್ನು ಬಳಸಿ ಕ್ಲೀನ್ ಮಾಡಿಸಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

    ಇದನ್ನೂ ಓದಿ: ಮ್ಯಾನ್‍ಹೋಲ್‍ನಲ್ಲಿ ಉಸಿರುಗಟ್ಟಿ 3 ಕಾರ್ಮಿಕರ ಸಾವು

    https://youtu.be/kcFSaXt6CH8

    https://youtu.be/xkvU06jGuCU

  • ಜಮೀನಿನಲ್ಲೇ ಮರಕ್ಕೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

    ಜಮೀನಿನಲ್ಲೇ ಮರಕ್ಕೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

    ಹುಬ್ಬಳ್ಳಿ: ಸಾಲಬಾಧೆಯಿಂದ ಬೇಸತ್ತು ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಗೋಳ ತಾಲೂಕಿನ ನೆಲಗುಡ್ಡ ಗ್ರಾಮದಲ್ಲಿ ನಡೆದಿದೆ.

    ರಾಯನಗೌಡ ಪಾಟೀಲ್(45) ಎಂಬುವರು ಆರು ಏಕರೆ ಜಮೀನು ಹೊಂದಿದ್ದರು. ಹಾಗಾಗಿ ವಿವಿಧ ಬ್ಯಾಂಕ್‍ಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು. ಅಲ್ಲದೆ ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಜಮೀನಿನಲ್ಲಿ ಬೆಳದ ಬೆಳೆಯೂ ಬಾರದ ಕಾರಣ ಜಮೀನಿನಲ್ಲಿಯೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಸಂಬಂಧ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕ್ಯಾನ್ಸರ್‍ಪೀಡಿತ ಅಜ್ಜಿಗೆ ಆಸ್ಪತ್ರೆಯಲ್ಲಿ ನೋ ಎಂಟ್ರಿ-ಹುಬ್ಬಳ್ಳಿ ಕಿಮ್ಸ್ ನಲ್ಲಿ ಮರೆಯಾಗಿದೆ ಮಾನವೀಯತೆ

    ಕ್ಯಾನ್ಸರ್‍ಪೀಡಿತ ಅಜ್ಜಿಗೆ ಆಸ್ಪತ್ರೆಯಲ್ಲಿ ನೋ ಎಂಟ್ರಿ-ಹುಬ್ಬಳ್ಳಿ ಕಿಮ್ಸ್ ನಲ್ಲಿ ಮರೆಯಾಗಿದೆ ಮಾನವೀಯತೆ

    ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಆಸ್ಪತ್ರೆ ಕಿಮ್ಸ್ ಒಂದಿಲ್ಲೊಂದು ವಿಷಯಕ್ಕೆ ಸುದ್ದಿ ಆಗುತ್ತಿರುತ್ತದೆ. ಇಂದು ಆಸ್ಪತ್ರೆಗೆ ಬಂದ ಕ್ಯಾನ್ಸರ್ ಪೀಡಿತ ರೋಗಿಯನ್ನು ಅಡ್ಮಿಟ್ ಮಾಡಿಕೊಳ್ಳದೆ ಹೊರಹಾಕಿದ್ದಾರೆ.

    ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಕ್ಯಾಡ ಗ್ರಾಮದ ಯಮನವ್ವಾ ಎನ್ನುವ ವಯೋವೃದ್ಧಿ ಕ್ಯಾನ್ಸರ್ ರೋಗದಿಂದ ಬಳುಲುತ್ತಿದ್ದು, ಅವರನ್ನು ಇಂದು ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದ್ರೆ ಕ್ಯಾನ್ಸರ್‍ಗೆ ಚಿಕಿತ್ಸೆ ನೀಡೋ ವೈದ್ಯರು ಇಲ್ಲಾ ನಾಳೆ ಮುಂಜಾನೆ ಬನ್ನಿ ಎಂದು ಅಡ್ಮಿಟ್ ಮಾಡಿಕೊಳ್ಳದೆ ಹೊರಹಾಕಿದ್ದಾರೆ.

    ರೋಗಿಯನ್ನು ಸ್ಟ್ರ್ರಚೆರ್‍ನಲ್ಲಿ ನೀವೇ ತಳ್ಳಿಕೊಂಡು ಹೋಗಿ ದರ್ಪ ಮೆರೆದಿದ್ದಾರೆ. ಹೀಗಾಗಿ ಅಜ್ಜಿಯ ಮಗ ಹಾಗೂ ಗಂಡ ಸ್ಟ್ರಚರ್ ತಾವೇ ತಳ್ಳಕೊಂಡು ಧರ್ಮಶಾಲೆಯವರಿಗೆ ಬಂದಿದ್ದಾರೆ. ಮಾಧ್ಯಮದವರು ಹೋದಾಗ ಕಿಮ್ಸ್ ಅಧಿಕ್ಷಕರಾದ ಡಾ. ಶಿವಪ್ಪ ಎಂಬವರು ಅಜ್ಜಿಯನ್ನು ಕಿಮ್ಸ್ ಆಂಬ್ಯಲೆನ್ಸ್ ಮೂಲಕ ಕಿಮ್ಸ್ ಕಳುಹಿಸಿದ್ದಾರೆ. ಕಿಮ್ಸ್ ಅಧಿಕ್ಷಕರು ತಪ್ಪಿತಸ್ಥರ ಕ್ರಮ ಕೈಗೊಳ್ಳುವ ಭರವಸೆಯನ್ನು ಡಾ.ಶಿವಪ್ಪ ನೀಡಿದ್ದಾರೆ.

     

  • ಪತ್ನಿ ಅಗಲಿಕೆಯಿಂದ ಮನನೊಂದ ಪತಿಯು ವಿಷ ಸೇವಿಸಿ ಆತ್ಮ ಹತ್ಯೆ

    ಪತ್ನಿ ಅಗಲಿಕೆಯಿಂದ ಮನನೊಂದ ಪತಿಯು ವಿಷ ಸೇವಿಸಿ ಆತ್ಮ ಹತ್ಯೆ

    ಹುಬ್ಬಳ್ಳಿ: ಪತ್ನಿ ಅಗಲಿಕೆಯಿಂದ ಮನನೊಂದ ಪತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯ ಕುಸಗಲ್ಲ ರಸ್ತೆಯ ಢಾಬಾ ಒಂದರಲ್ಲಿ ನಡೆದಿದೆ.

    ಕಳೆದ ಎರಡು ತಿಂಗಳ ಹಿಂದೆ ಈತನ ಪತ್ನಿ ವೈಯಕ್ತಿಕ ಕಾರಣಕ್ಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ಅದನ್ನೇ ಮನದಲ್ಲಿಟ್ಟುಕೊಂಡ ಈತ ಆಕೆಯ ಅಗಲಿಕೆಯನ್ನ ತಾಳಲಾರದೇ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ನನ್ನ ಹೆಂಡತಿಯ ಅಂತ್ಯಕ್ರಿಯೆ ನಡೆದ ಸ್ಥಳದಲ್ಲೇ ನನ್ನ ಅಂತ್ಯಕ್ರಿಯೆ ಮಾಡಿ ಎಂದು ಡೆತ್ ನೋಟ್‍ನಲ್ಲಿ ಬರೆದಿಟ್ಟು ವಿಷ ಸೇವಿಸಿದ್ದಾನೆ.

    ಬಹಳ ಹೊತ್ತಾದರೂ ಈತ ಎಚ್ಚರ ಆಗದನ್ನು ಕಂಡ ಹೋಟೆಲ್ ಮಾಲೀಕರು ತಕ್ಷಣ ಪೊಲೀಸರಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಕೇಶ್ವಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪರಿಚಿತನ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.