Tag: ಹುಬ್ಬಳ್ಳಿ

  • ವಿದ್ಯುತ್ ಕಂಬದಲ್ಲೇ ಜೀವಬಿಟ್ಟ ಲೈನ್‍ಮ್ಯಾನ್- ಗುತ್ತಿಗೆದಾರನಿಗೆ ಸ್ಥಳೀಯರಿಂದ ಥಳಿತ

    ವಿದ್ಯುತ್ ಕಂಬದಲ್ಲೇ ಜೀವಬಿಟ್ಟ ಲೈನ್‍ಮ್ಯಾನ್- ಗುತ್ತಿಗೆದಾರನಿಗೆ ಸ್ಥಳೀಯರಿಂದ ಥಳಿತ

    ಹುಬ್ಬಳ್ಳಿ: ವಿದ್ಯುತ್ ತಂತಿ ತಗುಲಿ ಲೈನ್ ಮ್ಯಾನ್ ಕಂಬದಲ್ಲಿಯೇ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿನ ಭಾಷಲ್ ಮಿಶನ್ ಶಾಲೆಯ ಬಳಿ ನಡೆದಿದೆ.

    ಮೃತ ವ್ಯಕ್ತಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕು ಮೂಲದ ಶಂಕರಗೌಡ ಎಂದು ತಿಳಿದುಬಂದಿದೆ. ಕಳೆದ ಒಂದು ವರ್ಷದಿಂದ ಶಂಕರಗೌಡ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಇಂದು ಮಧ್ಯಾಹ್ನ ವಿದ್ಯುತ್ ಸಮಸ್ಯೆ ಆಗಿದ್ದ ಕಾರಣ ವಿದ್ಯುತ್ ಕಂಬ ಏರಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಹರಿದು ಕಂಬದಲ್ಲೇ ಸಾವನಪ್ಪಿದ್ದಾರೆ.

    ನಂತರ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಸರಬರಾಜು ನಿಲ್ಲಿಸಿ ಮೃತದೇಹವನ್ನು ಕೆಳಗಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಉಪನಗರ ಪೊಲಿಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

    ಶಂಕರ್ ಕಳೆದ ಹಲವು ವರ್ಷಗಳಿಂದ ಕಾಂಟ್ರಾಕ್ಟರ್ ಬಳಿ ಕೆಲಸ ಮಾಡಿಕೊಂಡಿದ್ದರು. ಮುಂಜಾಗ್ರತಾ ಕ್ರಮವಿಲ್ಲದೇ ಕಾಂಟ್ರಾಕ್ಟರ್ ತಾಜುದ್ದೀನ್ ಯುವಕನನ್ನ ಕಂಬ ಏರಿಸಿದ್ದಾರೆಂದು ಆಕ್ರೋಶಗೊಂಡ ಸ್ಥಳೀಯರು ತಾಜುದ್ದೀನ್‍ಗೆ ಥಳಿಸಿದ್ರು. ಪೊಲೀಸರ ನಡುವೆಯೇ ಎಳೆದಾಡಿಕೊಂಡು ಕಾಂಟ್ರಾಕ್ಟರ್ ಮೇಲೆ ಹಲ್ಲೆ ಮಾಡಿದ್ರು. ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ರು.

  • ಯುವತಿಯನ್ನ ಗರ್ಭಿಣಿಯನ್ನಾಗಿಸಿ ಕೈ ಕೊಟ್ಟ ಪ್ರೇಮಿಯ ಬಂಧನ

    ಯುವತಿಯನ್ನ ಗರ್ಭಿಣಿಯನ್ನಾಗಿಸಿ ಕೈ ಕೊಟ್ಟ ಪ್ರೇಮಿಯ ಬಂಧನ

    ಹುಬ್ಬಳ್ಳಿ: ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಗರ್ಭಿಣಿ ಮಾಡಿ ಕೈ ಕೊಟ್ಟ ಯುವಕನನ್ನು ಧಾರವಾಡ ಜಿಲ್ಲೆಯ ಕಲಘಟಗಿ ಪೊಲೀಸರು ಬಂಧಿಸಿದ್ದಾರೆ.

    22 ವರ್ಷದ ಸೋಮನಿಂಗ ಭಡಂಗಿ ಬಂಧಿತ ಯುವಕ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ನಂದಿ ಗ್ರಾಮದ ನಿವಾಸಿಯಾಗಿರೋ ಸೋಮನಿಂಗ ಕಲಘಟಗಿ ತಾಲೂಕಿನ ಸಂಗಮೇಶ್ವರ ಗ್ರಾಮದ 20 ವರ್ಷದ ಯುವತಿಗೆ ಮೋಸ ಮಾಡಿದ್ದಾನೆ.

    ಈತ ಆರು ತಿಂಗಳು ಹಿಂದೆ ಸಂಗಮೇಶ್ವರ ಗ್ರಾಮದ ಅಯ್ಯಪ್ಪ ಸ್ವಾಮಿ ಜಾತ್ರೆಗೆಂದು ಬಂದಾಗ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ಯುವತಿಯ ಜೊತೆ ಸ್ನೇಹ ಬೆಳೆಸಿ, ಪ್ರೀತಿಸಿ, ಮದುವೆಯಾಗುವದಾಗಿ ನಂಬಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಸದ್ಯ ಯುವತಿ 5 ತಿಂಗಳು ಗರ್ಭಿಣಿಯಾಗಿದ್ದು, ವಿಷಯ ತಿಳಿದ ಬಳಿಕ ಸೋಮಲಿಂಗ ಪರಾರಿಯಾಗಿದ್ದ.

    ಸದ್ಯ ಯುವತಿಗೆ ವಂಚನೆಗೈದ ಪ್ರಿಯಕರನ ವಿರುದ್ಧ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಊಟ ಮುಗಿಸಿ ಮನೆಗೆ ಹೊರಟಿದ್ದ ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ

    ಊಟ ಮುಗಿಸಿ ಮನೆಗೆ ಹೊರಟಿದ್ದ ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ

    ಹುಬ್ಬಳ್ಳಿ: ನಗರದ ಕೇಶವಾಪುರದ ಶಾಂತಿನಗರ ಚರ್ಚ್ ಬಳಿ ಸ್ನೇಹಿತರ ಜೊತೆ ಊಟ ಮಾಡಿ ಮನಗೆ ತೆರಳುವಾಗ ಬಿಜೆಪಿ ರಾಜ್ಯ ಸ್ಲಮ್ ಮೋರ್ಚಾ ಕಾರ್ಯದರ್ಶಿ ಲಕ್ಷ್ಮಣ್ ಕೊರಪಾಟಿ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.

    ಲಕ್ಷ್ಮಣ್ ಕೊರಪಾಟಿ ತಮ್ಮ ಬೈಕ್ ನಲ್ಲಿ ಮನೆಗೆ ತೆರಳುವಾಗ ಬೈಕ್‍ನಲ್ಲಿ ಅವರನ್ನು ಹಿಂಬಾಲಿಸಿಕೊಂಡು ಬಂದ ಮೂವರು ದುಷ್ಕರ್ಮಿಗಳು ಮಚ್ಚು ಲಾಂಗ್ ಮತ್ತು ಹಾಕಿ ಸ್ಟಿಕ್ ನಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಸ್ಥಳೀಯರು ಲಕ್ಷ್ಮಣ್ ಕೊರಪಾಟಿ ಅವರ ಸಹಾಯಕ್ಕೆ ಬಂದ್ದಿದ್ದಾರೆ. ಕೂಡಲೇ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

    ನಾನು ಕಳೆದ 22 ವರ್ಷಗಳಿಂದ ಭಾರತೀಯ ಜನತಾ ಪಾರ್ಟಿಯಲ್ಲಿ ಗುರುತಿಸಿಕೊಂಡಿದ್ದೇನೆ. ನನ್ನ ಅಭಿವೃದ್ಧಿಯನ್ನು ಸಹಿಸದ ವಿರೋಧಿಗಳು ನನ್ನ ಮೇಲೆ ದಾಳಿ ನಡೆಸಿರಬಹುದು. ಇದರಲ್ಲಿ ರಾಜಕೀಯ ಷಡ್ಯಂತ್ರ ಅಡಗಿದೆ. ಹಲ್ಲೆ ಮಾಡಿದ ದುಷ್ಕರ್ಮಿಗಳೆಲ್ಲಾ ಯುವಕರೇ, ಆದ್ರೆ ಅವರು ಯಾರೆಂಬುದು ನನಗೆ ಗೊತ್ತಿಲ್ಲ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ದಾಳಿಯ ನಂತರ ನಾನು ಬದುಕಿ ಬಂದಿರುವುದೇ ಒಂದು ಪವಾಡವಾಗಿದೆ ಎಂದು ಹಲ್ಲೆಗೊಳಗಾದ ಲಕ್ಷ್ಮಣ್ ಹೇಳಿದ್ದಾರೆ.

    ಘಟನೆಯಲ್ಲಿ ಗಾಯಗೊಂಡ ಲಕ್ಷ್ಮಣ್ ಅವರನ್ನು ನಗರದ ಕಿಮ್ಸ್ ಗೆ ದಾಖಲು ಮಾಡಲಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಆಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಗನ ಮೇಲೆ ಹಲ್ಲೆ ತಡೆಯಲು ಬಂದು ಅಪ್ಪನೇ ಹೆಣವಾದ್ರು- ಹುಬ್ಬಳ್ಳಿಯಲ್ಲೊಂದು ಘೋರ ಘಟನೆ

    ಮಗನ ಮೇಲೆ ಹಲ್ಲೆ ತಡೆಯಲು ಬಂದು ಅಪ್ಪನೇ ಹೆಣವಾದ್ರು- ಹುಬ್ಬಳ್ಳಿಯಲ್ಲೊಂದು ಘೋರ ಘಟನೆ

    ಹುಬ್ಬಳ್ಳಿ: ಬೈಕ್ ಕಳ್ಳತನ ಮಾಡಿದ್ದ ಮಗನ ಮೇಲೆ ಹಲ್ಲೆ ಮಾಡುವಾಗ ಅಡ್ಡ ಬಂದ ತಂದೆಯ ಕೊಲೆಯಾಗಿರುವ ಘಟನೆ ಹುಬ್ಬಳ್ಳಿಯ ಕೆಬಿ ನಗರದಲ್ಲಿ ನಡೆದಿದೆ.

    ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಾರ್ ಚಾಲಕನಾಗಿ ಕೆಲಸ ಮಾಡುತಿದ್ದ 45 ವರ್ಷದ ತಿರುಪತಿ ಅವರ ಮಗ ಶ್ರೀನಿವಾಸ ಬೈಕ್‍ವೊಂದನ್ನು ಕಳ್ಳತನ ಮಾಡಿದ್ದ. ಇದೇ ಕಾರಣಕ್ಕೆ ಬೈಕ್ ಮಾಲೀಕ ಮತ್ತು ಆತನ ಸ್ನೇಹಿತರು ಸೇರಿ ಶ್ರೀನಿವಾಸನ ಮನೆಗೆ ಬಂದು ಹಲ್ಲೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗುತ್ತಿದೆ.

    ಈ ವೇಳೆ ಅಲ್ಲೆ ಇದ್ದ ತಂದೆ ಮಗನನ್ನು ಬಿಡಿಸಲು ಬಂದಾಗ ದುಷ್ಕರ್ಮಿಗಳು ಶ್ರೀನಿವಾಸನ ತಂದೆ ತಿರುಪತಿ ಅವರ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಕೂಡಲೇ ತಿರುಪತಿ ಅವರನ್ನು ಕಿಮ್ಸ್ ಗೆ ದಾಖಲು ಮಾಡಿದ್ದಾರೆ. ಆದ್ರೆ ಚಿಕಿತ್ಸೆ ಫಲಿಸದೆ ತಿರುಪತಿ ಸಾವಿಗೀಡಾಗಿದ್ದಾರೆ.

    ಈ ಸಂಬಂಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

  • ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ 16 ವರ್ಷದ ಮಗನನ್ನೇ ಕೊಂದ ಪಾಪಿ ತಂದೆ!

    ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ 16 ವರ್ಷದ ಮಗನನ್ನೇ ಕೊಂದ ಪಾಪಿ ತಂದೆ!

    ಹುಬ್ಬಳ್ಳಿ: ತಂದೆಯೊಬ್ಬ ತನ್ನ 16 ವರ್ಷದ ಮಗನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ, ಕೊನೆಗೆ ತಾನು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹುಬ್ಬಳ್ಳಿ-ಗದಗ ರಸ್ತೆಯ ಒಂಟಿ ಹನುಮಂತ ದೇವಸ್ಥಾನದ ಹಿಂಭಾಗದಲ್ಲಿ ನಡೆದಿದೆ.

    16 ವರ್ಷದ ವಿನಯ್ ರೆಡ್ಡಿ ತಂದೆಯಿಂದಲೇ ಕೊಲೆಯಾದ ಮಗ. ರೈಲ್ವೆ ನೌಕರನಾಗಿರುವ 56 ವರ್ಷದ ವಿಠ್ಠಲ್ ರೆಡ್ಡಿ ಮಗನನ್ನೇ ಕೊಲೆಗೈದ ಪಾಪಿ ತಂದೆ. ವಿನಯ್ ಹತ್ತನೇ ತರಗತಿ ಓದುತ್ತಿದ್ದನು. ಇತ್ತೀಚಿಗೆ ಅಪ್ಪ-ಮಗನ ನಡುವೆ ಗಲಾಟೆಗಳು ನಡೆಯುತ್ತಿದ್ದವು.

    ಇದನ್ನೂ ಓದಿ: 16 ವರ್ಷದ ಮಗಳನ್ನು ಗುಂಡಿಟ್ಟು ಕೊಂದ ತಂದೆ-ಕಾರಣ ಕೇಳಿದ್ರೆ ಒಂದ್ ಕ್ಷಣ ಶಾಕ್ ಆಗ್ತೀರಾ…!!

    ಭಾನುವಾರ ಸಂಜೆ ಮಗನನ್ನು ಗದಗ ರಸ್ತೆಯ ಒಂಟಿ ಹನುಮಂತ ದೇವಸ್ಥಾನದ ಹಿಂದೆ ಕರೆದುಕೊಂಡು ಹೋಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಮಗ ಸತ್ತ ಬಳಿಕ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ತೀವ್ರ ಅಸ್ವಸ್ಥಗೊಂಡಿದ್ದ ವಿಠ್ಠಲ್ ರೆಡ್ಡಿಯನ್ನು ರೈಲ್ವೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಈ ಸಂಬಂಧ ನಗರದ ಕೇಶವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಸ್ಟ್ರೇಲಿಯಾದಲ್ಲಿ ಕನ್ನಡ ಡಿಂಡಿಮ- ಎತ್ತರದ ಪಿರಮಿಡ್ ಏರಿದ ಹುಬ್ಬಳ್ಳಿಯ ನಂದಿತಾ

    ಆಸ್ಟ್ರೇಲಿಯಾದಲ್ಲಿ ಕನ್ನಡ ಡಿಂಡಿಮ- ಎತ್ತರದ ಪಿರಮಿಡ್ ಏರಿದ ಹುಬ್ಬಳ್ಳಿಯ ನಂದಿತಾ

    ಹುಬ್ಬಳ್ಳಿ: ಸಾಧಿಸುವ ಛಲವೊಂದಿದ್ರೆ ಏನ್ ಬೇಕಾದ್ರೂ ಸಾಧಿಸಿ ತೋರಿಸಬಹುದು. ಅದ್ರಲ್ಲೂ ಹೆಣ್ಣು ಮಗಳು ಮನಸ್ಸು ಮಾಡಿದ್ರೆ ಯಾವ ಕ್ಷೇತ್ರದಲ್ಲಾದ್ರೂ ಸಾಧಿಸಿ ತೋರಿಸಬಹುದು. ಅದಕ್ಕೆ ಹುಬ್ಬಳ್ಳಿಯ ನಂದಿತಾ ನಾಗನ ಗೌಡರ್ ಸಾಕ್ಷಿ.

    ಹೌದು. ಹುಬ್ಬಳ್ಳಿಯ ನಂದಿತಾ ನಾಗಗೌಡರ್ ಈ ಹಿಂದೆ ಮೌಂಟ್ ಎವರೆಸ್ಟ್ ಶಿಖರ ಏರಿ ಸಾಧನೆ ಮಾಡಿದ್ದರು. ಇದೀಗ ಆಸ್ಟ್ರೇಲಿಯಾದ ಅತ್ಯಂತ ಎತ್ತರದ ಕರ್ ಸ್ಟೆಂಝ್ ಪಿರಮಿಡ್ ಏರಿ ಸಾಧನೆ ಮಾಡಿದ್ದಾರೆ. 4888 ಮೀಟರ್ ಎತ್ತರದ ಕಾರ್ ಸ್ಟೆಂಝ್ ಏರುವ ಮೂಲಕ ಈ ಪಿರಮಿಡ್ ಏರಿದ ಮೊದಲ ಕನ್ನಡತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

    ಸತತ 25 ದಿನಗಳ ಕಾಲ ಕರ್ ಸ್ಟೆಂಝ್ ಏರುವ ಈ ರೋಚಕ ಕ್ಷಣಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಕಳೆದ ವರ್ಷ ಹಿಮಾಲಯ ಪರ್ವತ ಏರಿದ್ದ ನಂದಿತಾ ಈ ಬಾರಿ ಆಸ್ಟ್ರೇಲಿಯಾದ ಪಿರಮಿಡ್ ಏರುವ ಮೂಲಕ ಮತ್ತೊಂದು ಸಾಧನೆ ಮಾಡಿದ್ದಾರೆ. ಅಲ್ಲದೇ ಮುಂದಿನ ವರ್ಷ ಅಂಟಾರ್ಟಿಕಾ ಖಂಡದ ಪರ್ವತ ಏರುವ ಗುರಿ ಹೊಂದಿದ್ದಾರಂತೆ. ಒಟ್ಟಿನಲ್ಲಿ ಸಾಹಸ ಪ್ರವೃತ್ತಿ ಮೈಗೂಡಿಸಿಕೊಂಡಿರುವ ನಂದಿತಾ ನಾಡಿನ ಕೀರ್ತಿಯನ್ನ ವಿಶ್ವಮಟ್ಟದಲ್ಲಿ ಬೆಳಗಿದ್ದಾರೆ.

     

  • ಲಿಂಗಾಯತ ಪ್ರತ್ಯೇಕ ಧರ್ಮವಾಗಲು ಸಂಪೂರ್ಣ ಬೆಂಬಲ: ಬಸವರಾಜ ಹೊರಟ್ಟಿ

    ಲಿಂಗಾಯತ ಪ್ರತ್ಯೇಕ ಧರ್ಮವಾಗಲು ಸಂಪೂರ್ಣ ಬೆಂಬಲ: ಬಸವರಾಜ ಹೊರಟ್ಟಿ

    ಹುಬ್ಬಳ್ಳಿ: ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕು. ಅದಕ್ಕೆ ನನ್ನ ಬೆಂಬಲವಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿ ಕಾಲಘಟ್ಟಕ್ಕೆ ಅನುಗುಣವಾಗಿ ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕು. ವೀರಶೈವ ಪದದ ಅರ್ಥ ನನಗೆ ಗೊತ್ತಿಲ್ಲ, ಗೊತ್ತಿರುವ ಭೀಮಣ್ಣ ಖಂಡ್ರೆ, ಶಾಮನೂರ ಶಿವಶಂಕ್ರಪ್ಪ ಇದರ ಅರ್ಥ ಹೇಳಲಿ ಎಂದು ವ್ಯಂಗ್ಯವಾಡಿದರು.

    ಸ್ವಾಮಿಗಳು ಈ ಕುರಿತು ಮಾತನಾಡುವುದನ್ನು ನಿಲ್ಲಿಸಲಿ. ಲಿಂಗಾಯತ ಪ್ರತ್ಯೇಕ ಧರ್ಮವಾದ್ರೆ ಧಾರ್ಮಿಕ ಅಲ್ಪಸಂಖ್ಯಾತ ಮನ್ನಣೆ ದೊರೆಯಲಿದೆ. ಇದರಿಂದ ಸಮಾಜದ ಕೆಳ ಸ್ಥರದ ಜನರಿಗೆ ಅನುಕೂಲವಾಗಲಿದೆ. ಹೀಗಾಗಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ವಿರೋಧ ಬೇಡ ಎಂದರು.

  • ಧಾರವಾಡ: ಆಯ ತಪ್ಪಿ ಆಳವಾದ ಗುಂಡಿಗೆ ಬಿದ್ದ ಬೈಕ್ ಸವಾರ

    ಧಾರವಾಡ: ಆಯ ತಪ್ಪಿ ಆಳವಾದ ಗುಂಡಿಗೆ ಬಿದ್ದ ಬೈಕ್ ಸವಾರ

    ಧಾರವಾಡ: ಹುಬ್ಬಳ್ಳಿ ಧಾರವಾಡ ಅವಳಿನಗರ ಮಧ್ಯೆ ಬಿಆರ್‍ಟಿಸಿಎಸ್ ಕಾಮಗಾರಿ ವಿಳಂಬದ ಹಿನ್ನೆಲೆಯಲ್ಲಿ ಬೈಕ್ ಸವಾರರೊಬ್ಬರು ಆಯ ತಪ್ಪಿ ಆಳವಾದ ಗುಂಡಿಯೊಳಗೆ ಬಿದ್ದಿರುವ ಘಟನೆ ನಡೆದಿದೆ.

    ಹುಬ್ಬಳ್ಳಿ ಧಾರವಾಡ ಮಧ್ಯೆ ಇರುವ ಸನಾ ಕಾಲೇಜ್ ಎದುರಿನಲ್ಲಿ ಬಿಆರ್‍ಟಿಎಸ್ ಕಾಮಗಾರಿ ನಡೆಯುತ್ತಿದ್ದು, ಮಾರ್ಗ ಮಧ್ಯೆ ಫ್ಲೈ ಓವರ್ ಮಾಡುವ ಸಲುವಾಗಿ ಆಳವಾದ ಗುಂಡಿ ತೋಡಲಾಗಿದೆ.ಆಯ ತಪ್ಪಿ ಬೈಕ್ ಸವಾರರೊಬ್ಬರು ಬೈಕ್ ಸಮೇತ ಈ ಗುಂಡಿಯಲ್ಲಿ ಬಿದ್ದಿದ್ದಾರೆ.

    ಬೈಕ್ ಸವಾರನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ದುಬೈನಲ್ಲಿರೋ ಮಂಗ್ಳೂರು ಮೂಲದ ವ್ಯಕ್ತಿ ವಿರುದ್ಧ ರಹೀಂ ಉಚ್ಚಿಲ್ ದೂರು

    ದುಬೈನಲ್ಲಿರೋ ಮಂಗ್ಳೂರು ಮೂಲದ ವ್ಯಕ್ತಿ ವಿರುದ್ಧ ರಹೀಂ ಉಚ್ಚಿಲ್ ದೂರು

    ಹುಬ್ಬಳ್ಳಿ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಗಲಭೆ ತಣ್ಣಗಾಗುವ ಮೊದಲೇ ಫೇಸ್‍ಬುಕ್ ಪೋಸ್ಟ್ ಒಂದು ವೈರಲ್ ಆಗಿ ವಿವಾದದ ಹೊಗೆ ಎಬ್ಬಿಸಿದೆ.

    ಬಿಜೆಪಿಯ ಅಲ್ಪ ಸಂಖ್ಯಾಂತರ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಹೀಂ ಉಚ್ಚಿಲ್ ಅವರ ಫೇಸ್‍ಬುಕ್ ಪೋಸ್ಟ್ ಬಳಸಿ ಅವಹೇಳನ ಮಾಡಲಾಗಿದೆ. ದುಬೈನಲ್ಲಿರೋ ಮಂಗಳೂರು ಮೂಲದ ವಿಲಿಯಂ ಪಿಂಟೋ ಈ ಪೋಸ್ಟ್ ಮಾಡಿದ್ದು, ರಹೀಂ ಉಚ್ಚಿಲ್ ಅವರು ಹುಬ್ಬಳ್ಳಿಯ ಪ್ರಸಿದ್ಧ ಸಿದ್ಧಾರೂಢ ಮಠಕ್ಕೆ ಭೇಟಿ ಕೊಟ್ಟ ಫೋಟೋ ಹಾಕಿದ್ದಾನೆ.

     

    ಜೊತೆಗೆ ಸಿದ್ಧಾರೂಢ ಮಠಕ್ಕೆ ಹೊಸದಾಗಿ ಪ್ರಧಾನ ಅರ್ಚಕರ ನೇಮಕ ಆಗಿದೆ ಎಂದು ಪೋಸ್ಟ್ ಮಾಡಿದ್ದಾನೆ. ಹೀಗಾಗಿ ವಿಲಿಯಂ ಪಿಂಟೊ ವಿರುದ್ಧ ರಹೀಂ ಉಚ್ಚಿಲ್ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮೂವರ ಮೇಲೆ ಮಾರಣಾಂತಿಕ ಹಲ್ಲೆ

    ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮೂವರ ಮೇಲೆ ಮಾರಣಾಂತಿಕ ಹಲ್ಲೆ

    ಧಾರವಾಡ: ಆಸ್ತಿವಿವಾದದ ಹಿನ್ನೆಲೆಯಲ್ಲಿ ಮೂವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಶಾಂತಿ ನಗರದಲ್ಲಿ ನಡೆದಿದೆ.

    ಯಲ್ಲವ್ವ ನಾಯ್ಕರ್, ಭಾರತಿ ಪತಂಗಿ, ಪ್ರದೀಪ್ ಪತಂಗಿ ಎಂಬವರು ಗಂಭೀರವಾಗಿ ಗಾಯಗೊಂಡರು. ಈಗ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುಷ್ಕರ್ಮಿಗಳು ಹೆಲ್ಮೆಟ್ ಹಾಕಿಕೊಂಡು ಬೈಕ್ ನಲ್ಲಿ ಬಂದು ಹಲ್ಲೆ ಮಾಡಿದ್ದಾರೆ. ಯಲ್ಲವ್ವಾ ನಾಯ್ಕರ್ ಮತ್ತು ಮಗಳು ಭಾರತಿ ಪಂತಂಗಿ ಮೂಲತಃ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಕಗವಾಡ ಗ್ರಾಮದ ನಿವಾಸಿಗಳಾಗಿದ್ದು, ಕೆಲವು ವರ್ಷಗಳಿಂದ ಹುಬ್ಬಳ್ಳಿಗೆ ಕೆಲಸವನ್ನು ಅರಿಸಿಕೊಂಡು ಬಂದಿದ್ದರು.

    ಆದ್ರೆ ಯಲ್ಲವ್ವಾರ ಪತಿಗೆ ಇಬ್ಬರು ಹೆಂಡತಿಯರು. ಯಲ್ಲವ್ವಾ ಪತಿ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದು ಹೀಗಾಗಿ ಯಲ್ಲವ್ವಾ ಪತಿಯ ಹೆಸರಲ್ಲಿ ಇದ್ದ 14 ಎಕರೆ ಜಮೀನು ವಿವಾದ ಸವದತ್ತಿ ಕೋರ್ಟ್ ನಲ್ಲಿತ್ತು. ಕಾರಣ ಸವದತ್ತಿ ಕೋರ್ಟ್ ಕೆಲ ದಿನಗಳ ಹಿಂದೆ ಆದೇಶ ನೀಡಿದ್ದು ಯಲ್ಲವ್ವಾರಿಗೆ ನ್ಯಾಯಾಲಯ ಹೆಚ್ಚಿನ ಭಾಗವನ್ನು ನೀಡಿ ಆದೇಶ ಮಾಡಿತ್ತು. ಇದನ್ನು ಸಹಿಸದ ಯಲ್ಲವ್ವಾರಂಡನ ಮೊದಲ ಪತ್ನಿಯ ಮಗ ಈ ಕೃತ್ಯ ಮಾಡಿರುವುದಾಗಿ ಗಾಯಾಳುಗಳು ಆರೋಪಿಸಿದ್ದಾರೆ.

    ಈ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.