Tag: ಹುಬ್ಬಳ್ಳಿ

  • ಜಾತಿ ಗಣತಿಯಲ್ಲಿ ಸಾಕಷ್ಟು ದೋಷಗಳಿವೆ, ಸಮೀಕ್ಷೆ ಮುಂದೂಡಬೇಕು: ವಚನಾನಂದ ಸ್ವಾಮೀಜಿ

    ಜಾತಿ ಗಣತಿಯಲ್ಲಿ ಸಾಕಷ್ಟು ದೋಷಗಳಿವೆ, ಸಮೀಕ್ಷೆ ಮುಂದೂಡಬೇಕು: ವಚನಾನಂದ ಸ್ವಾಮೀಜಿ

    – ಸಮೀಕ್ಷೆ ಮೇಲೆ ಕರ್ನಾಟಕದ ಏಳು ಕೋಟಿ ಜನರ ಭವಿಷ್ಯ

    ಹುಬ್ಬಳ್ಳಿ: ಜಾತಿ ಗಣತಿಯಲ್ಲಿ (Caste Census) ಸಾಕಷ್ಟು ದೋಷಗಳಿವೆ. ಸಮೀಕ್ಷೆ ಮುಂದೂಡಬೇಕು ಅನ್ನೋದು ನಮ್ಮ ನಿಲುವು ಎಂದು ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ (Vachananda Swamiji) ಹೇಳಿದ್ದಾರೆ.

    ಇದೇ 22ರಿಂದ ರಾಜ್ಯದಲ್ಲಿ ಜಾತಿ ಗಣತಿ ಹಿನ್ನೆಲೆ ಮನೆಮನೆಗೆ ತೆರಳಿ ವಚನಾನಂದ ಸ್ವಾಮೀಜಿ ಜಾಗೃತಿ ಮೂಡಿಸುತ್ತಿದ್ದಾರೆ. ಹುಬ್ಬಳ್ಳಿಯ ಲಿಂಗರಾಜ ನಗರದಲ್ಲಿ ಮನೆ ಮನೆಗೆ ತೆರಳಿ ಕರಪತ್ರ ಅಂಟಿಸಿ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಷ್ಟೊಂದು ಅರ್ಜೆಂಟ್‌ನಲ್ಲಿ ಯಾಕೆ ಸಮೀಕ್ಷೆ ಮಾಡುತ್ತಿದ್ದೀರಿ. ಈ ಹಿಂದೆ ನಡೆಸಿದ್ದ ಕಾಂತರಾಜ ಆಯೋಗ ವರದಿ ವೈಜ್ಞಾನಿಕವಾಗಿರಲಿಲ್ಲ. ಇದೇ ಕಾರಣಕ್ಕೆ ಇದೀಗ ಮತ್ತೆ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಲು ಮುಂದಾಗಿದ್ದೀರಿ. ಇದೀಗ ಇದರಲ್ಲಿ ಕೂಡಾ ಹರಿಬರಿ ಯಾಕೆ? ಈ ಸಮೀಕ್ಷೆ ಮೇಲೆ ಕರ್ನಾಟಕದ ಏಳು ಕೋಟಿ ಜನರ ಭವಿಷ್ಯ ಇದೆ. ಹೀಗಾಗಿ ಸರಿಯಾಗಿ ಸಮಾಧಾನವಾಗಿ ಈ ಕೆಲಸ ಮಾಡಬೇಕು ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರು ಹೆಚ್ಚಿದ್ದಾರೆಂದು ತೋರಿಸಲು ಸಿದ್ದರಾಮಯ್ಯ ನಾಟಕ – ಯತ್ನಾಳ್

    ಪಂಚಮಸಾಲಿ ಸಮುದಾಯದಲ್ಲಿ ಯಾವುದೇ ಗೊಂದಲವಿಲ್ಲ. ಗಣತಿಯಲ್ಲಿ ಏನು ಬರೆಸಬೇಕು ಎಂಬ ಗೊಂದಲವಿಲ್ಲ. ನಾವು ಧರ್ಮದ ಕಾಲಂನಲ್ಲಿ ಹಿಂದೂ ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಅಂತ ಬರೆಸಲು ಹೇಳಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಜಾತಿಗಣತಿ ವೇಳೆ ಉಪಜಾತಿಗಳ ಮೊದಲು ಒಕ್ಕಲಿಗ ಎಂದು ಬರೆಸಬೇಕು: ಸಭೆಯಲ್ಲಿ ಒಕ್ಕೊರಲ ಕೂಗು

  • ನೇಪಾಳದಲ್ಲಿ ಸಿಲುಕಿರುವ ಹುಬ್ಬಳ್ಳಿಯ ಐವರು – ಭಾರತಕ್ಕೆ ಮರಳಲಾಗದೇ ಪರದಾಟ

    ನೇಪಾಳದಲ್ಲಿ ಸಿಲುಕಿರುವ ಹುಬ್ಬಳ್ಳಿಯ ಐವರು – ಭಾರತಕ್ಕೆ ಮರಳಲಾಗದೇ ಪರದಾಟ

    ಹುಬ್ಬಳ್ಳಿ: ನೇಪಾಳಕ್ಕೆ (Nepal) ತೀರ್ಥಯಾತ್ರೆಗೆಂದು ತೆರಳಿದ್ದ ಹುಬ್ಬಳ್ಳಿಯ (Hubballi) ಐವರು ಕಠ್ಮಂಡುವಿನಲ್ಲಿ ಸಿಲುಕಿದ್ದು, ಭಾರತಕ್ಕೆ ಸುರಕ್ಷಿತವಾಗಿ ವಾಪಸಾಗಲು ಆಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ.

    ಹುಬ್ಬಳ್ಳಿ ಕೇಶ್ವಪುರದ ಗಾಡಸನ್ ಅಪಾರ್ಟ್ಮೆಂಟ್ ನಿವಾಸಿಗಳು ಆ.31 ರಂದು ಖಾಸಗಿ ಕಂಪನಿಯ ಟೂರ್ ಪ್ಯಾಕೇಜ್ ಮೂಲಕ ಹುಬ್ಬಳ್ಳಿಯಿಂದ ಕೈಲಾಸ ಮಾನಸ ಸರೋವರ ಯಾತ್ರೆಗೆ ಹೋಗಿದ್ದರು. ಬಿಂದುಮಾಧವ ಕುಲಕರ್ಣಿ (70), ಸುಂದರಾ ಕುಲಕರ್ಣಿ (65), ವಿದ್ಯಾ ಜೋಶಿ (65), ನರೇಂದ್ರ ಜೋಶಿ (70) ನೇಪಾಳ ಗಲಭೆಗೂ ಮುನ್ನ ಮಾನಸ ಸರೋವರಕ್ಕೆ ತೆರಳಿದ್ದರು. ಇದನ್ನೂ ಓದಿ: ಪ್ರತಿಭಟನಾಕಾರರಿಂದ ಹೋಟೆಲ್‌ಗೆ ಬೆಂಕಿ – ನೇಪಾಳದಲ್ಲಿ ಭಾರತದ ಮಹಿಳೆ ದುರ್ಮರಣ

    ನರೇಂದ್ರ ಜೋಶಿ ಅವರಿಗೆ ಸರೋವರದ ಸಮೀಪದಲ್ಲಿ ಆಮ್ಲಜನಕದ ಕೊರತೆಯಿಂದ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಯನ್ನು ಮಾನಸ ಸರೋವರದ ಬಳಿಯೇ ಮಾಡಿದ್ದ ಉಳಿದವರು, ಅಲ್ಲಿಂದ ಮರು ಪ್ರಯಾಣ ಬೆಳೆಸಿ ಗಲಭೆಗೂ ಮುನ್ನ ನೇಪಾಳದ ಕಠ್ಮಂಡುಗೆ ತಲುಪಿದ್ದರು.

    ಇದೇ ವೇಳೆ ನೇಪಾಳದಲ್ಲಿ ಉಗ್ರ ಹೋರಾಟ ಆರಂಭವಾಗಿತ್ತು. ಹೀಗಾಗಿ, ನೇಪಾಳದಿಂದ ಹೊರಬರಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇವರಿಗೆ ಸಹಾಯ ಮಾಡಲು ಸತೀಶ್ ಕುಲಕರ್ಣಿ ಪುತ್ರ ಸಚಿನ್ ಕುಲಕರ್ಣಿ ನೇಪಾಳಕ್ಕೆ ತೆರಳಿದ್ದರು. ಇದೀಗ ಸಚಿನ್ ಕುಲಕರ್ಣಿ ಸೇರಿ ಐವರು ನೇಪಾಳದಲ್ಲಿ ಸಿಲುಕಿದ್ದಾರೆ.

    ಸದ್ಯ ಕಠ್ಮಂಡುವಿನ ಖಾಸಗಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದು, ಶನಿವಾರ ಬೆಂಗಳೂರಿಗೆ ಬರಲು ಫ್ಲೈಟ್‌ ಟಿಕೆಟ್ ಬುಕ್ ಮಾಡಲಾಗಿದೆ. ಗುರುವಾರ ಇಡೀ ದಿನ ವಿಮಾನ ನಿಲ್ದಾಣದಲ್ಲಿ ಕಾದರೂ, ಭಾರತಕ್ಕೆ ಮರಳಲು ಯಾವುದೇ ವ್ಯವಸ್ಥೆ ಇರಲಿಲ್ಲ. ಸದ್ಯ ಇಲ್ಲಿ ಕರ್ಪ್ಯೂ ಜಾರಿ ಇರುವುದರಿಂದ ಹೊರಬರಲು ಆಗ್ತಿಲ್ಲ. ಶನಿವಾರ ನಾವೇ ಬೆಂಗಳೂರಿಗೆ ಬರ್ತಿದ್ದೇವೆ ಎಂದು ಸತೀಶ್ ಕುಲಕರ್ಣಿ ಅವರು ಮಾಹಿತಿ ನೀಡಿದ್ದಾರೆ.

  • ಹಣೆಗೆ ಅರಿಶಿಣ, ಕುಂಕುಮವಿಟ್ಟು, ಹೂ ಮುಡಿದು ದಸರಾ ಉದ್ಘಾಟನೆ ಮಾಡೋದಾದ್ರೆ ಬನ್ನಿ: ಪ್ರತಾಪ್ ಸಿಂಹ

    ಹಣೆಗೆ ಅರಿಶಿಣ, ಕುಂಕುಮವಿಟ್ಟು, ಹೂ ಮುಡಿದು ದಸರಾ ಉದ್ಘಾಟನೆ ಮಾಡೋದಾದ್ರೆ ಬನ್ನಿ: ಪ್ರತಾಪ್ ಸಿಂಹ

    – ನನ್ನನ್ನ ಮತಾಂತರ ಮಾಡದೇ ಪ್ರವಾಸಿಗನಾಗಿ ಮೆಕ್ಕಾಗೆ ಕಳುಹಿಸ್ತೀರಾ?
    – ಧರ್ಮಸ್ಥಳದ ವಿರುದ್ಧ ಷಡ್ಯಂತ್ರ; ಹಿಂದೂಗಳೆಲ್ಲ ಒಂದಾಗಿ ಅಂತ ಕರೆ

    ಹುಬ್ಬಳ್ಳಿ: ಬಾನು ಮುಷ್ತಾಕ್ ಅವರೇ ನಿಮ್ಮನ್ನ ಅಲ್ಲಾನೇ ಮಸೀದಿ ಒಳಗೆ ಬಿಟ್ಟಿಲ್ಲ. ಇನ್ನು ಅರಿಶಿಣ ಕುಂಕುವಿಟ್ಟ ತಾಯಿ ಚಾಮುಂಡೇಶ್ವರಿ ನಿಮ್ಮನ್ನು ಕರೆಸಿಕೊಳ್ತಾಳಾ? ಎಂದು ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಟಾಂಗ್ ಕೊಟ್ಟಿದ್ದಾರೆ.

    ಹುಬ್ಬಳ್ಳಿಯ (Hubballi) ಈದ್ಗಾ ಮೈದಾನದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ರಿಗೆ (Banu Mushtaq) ಆಹ್ವಾನ ನೀಡಲಾಗಿದೆ. ಅವರ ಮೇಲೆ ನಮಗೆಲ್ಲ ಗೌರವ ಇದೆ. ಆದರೆ ಹಿಂದೂ ಧಾರ್ಮಿಕ ಶ್ರೇಷ್ಠ ಭಾವನೆಯ ಮುಕುಟವಾಗಿರುವ ದಸರಾ (Dasara) ಉದ್ಘಾಟನೆಯನ್ನು ಅವರ ಕೈಯಲ್ಲಿ ಮಾಡಿಸುವ ಅವಶ್ಯಕತೆ ಇತ್ತಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪಾಟ್ನಾದಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯರ್ತರ ಬಡಿದಾಟ, ಕಲ್ಲು ತೂರಾಟ

    ಅರಿಶಿಣ, ಕುಂಕುಮ, ಹೂವಿಟ್ಟು ದಸರಾ ಉದ್ಘಾಟನೆ ಮಾಡಿ
    ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ಬಾನು ಮುಷ್ತಾಕ್ ಅವರೇ ನಿಮಗೆ ಆತ್ಮಸಾಕ್ಷಿ ಇಲ್ವ? ಅದೇಗೆ ನೀವು ಉದ್ಘಾಟನೆಗೆ ಒಪ್ಪಿಕೊಂಡ್ರಿ? ಬಾನು ಮೇಡಂ ನಿಮ್ಮ ಅಲ್ಲಾನೇ ನಿಮ್ಮನ್ನು ಮಸೀದಿ ಒಳಗೆ ಬಿಟ್ಟಿಲ್ಲ. ಇನ್ನು ನಮ್ಮ ಅರಿಶಿಣ ಕುಂಕುಮವಿಟ್ಟ ಚಾಮುಂಡಿ ನಿಮ್ಮನ್ನು ಬೆಟ್ಟಕ್ಕೆ ಕರೆಸಿಕೊಳ್ಳುತ್ತಾಳಾ? ನೀವು ಸೀರೆಯುಟ್ಟು, ಅರಿಶಿಣ, ಕುಂಕುಮ ಮತ್ತು ಹೂವಿಟ್ಟು ಬಂದು ದಸರಾ ಉದ್ಘಾಟನೆ ಮಾಡಿ ಎಂದಿದ್ದಾರೆ. ಇದನ್ನೂ ಓದಿ: ಸಂವಿಧಾನ ಬದ್ಧವಾಗಿದ್ದರೆ ಯಾರು ಬೇಕಾದ್ರು ದಸರಾ ಉದ್ಘಾಟನೆ ಮಾಡ್ಬಹುದು: ಯು.ಟಿ.ಖಾದರ್

    ನನ್ನನ್ನು ಮತಾಂತರ ಮಾಡದೇ ಮೆಕ್ಕಾಗೆ ಕಳುಹಿಸ್ತೀರಾ?
    ನಾವು ನೆಲ, ಜಲ, ಪರಿಸರದಲ್ಲಿ ದೇವರನ್ನು ಕಾಣುತ್ತೇವೆ. ಇದು ನಮ್ಮ ಧರ್ಮ. ಮರುಭೂಮಿಯ ಮರಳಿನಲ್ಲಿ ಹುಟ್ಟಿದ ಧರ್ಮ ನಮ್ಮದಲ್ಲ. ಬಾನು ಮುಷ್ತಾಕ್ ಅವರೇ ನಿಮಗೆ ನಮ್ಮ ಧರ್ಮದ ಹಬ್ಬವನ್ನು ಉದ್ಘಾಟನೆ ಮಾಡಲು ಮನಸ್ಸಾದ್ರೂ ಹೇಗೆ ಒಪ್ಪುತ್ತೆ? ವಿವಿಧತೆಯಲ್ಲಿ ಏಕತೆ ಬರೀ ಹಿಂದೂಗಳಲ್ಲಿ ಮಾತ್ರ. ಆದರೆ ಮುಸ್ಲಿಂ, ಕ್ರಿಶ್ಚಿಯನ್ನರಲ್ಲಿ ಇದು ಇಲ್ಲ. ನಾವು ಹೆಣ್ಣು ಮಕ್ಕಳಲ್ಲಿ ದೇವಿಯಲ್ಲಿ ಕಾಣುತ್ತೇವೆ. ನಿಮ್ಮ ಧರ್ಮದಲ್ಲಿ ಹೆಣ್ಣನ್ನು ಭೋಗದ ವಸ್ತುವಾಗಿ ಬಳಸಿಕೊಳ್ಳುತ್ತೀರಾ. ನನ್ನನ್ನು ಮತಾಂತರ ಮಾಡದೇ, ಸುನ್ನತ್ ಮಾಡಿಕೊಳ್ಳದೆ ಬರೀ ಪ್ರವಾಸಿಗನಾಗಿ ಮೆಕ್ಕಾಗೆ ಕಳುಹಿಸಿಕೊಡ್ತೀರಾ? ಇಲ್ಲ ಎಂದಾದರೆ ನೀವು ಹೇಗೆ ನಮ್ಮ ಸಂಸ್ಕೃತಿಯನ್ನು ಪಾಲಿಸದೆ ದಸರಾ ಉದ್ಘಾಟನೆಗೆ ಬರ್ತಿರಾ ಎಂದು ಕೇಳಿದ್ದಾರೆ.

    ಧರ್ಮಸ್ಥಳ ಕೇಸ್‌ನಲ್ಲಿ (Dharmasthala Case) ಯಾರೆಲ್ಲ ಇದ್ದಾರೆಂದು ನಿಮಗೆ ಗೊತ್ತಾಗಿದೆ. ಯಾರೋ ಬುರುಡೆ ದಾಸ ಏನೋ ಹೇಳಿದ ಎಂದು ಕನ್ವರ್ಟ್ ಕ್ರಿಶ್ಚಿಯನ್ ಚಿನ್ನಯ್ಯ ಈಗ ಬಾಯಿಬಿಟ್ಟಿದ್ದಾನೆ. ಸಮೀರ್ ತನ್ನ ಧರ್ಮದ ಬಗ್ಗೆ ಮಾತಾಡ್ತಾನಾ? ಮಸೀದಿ, ಮದರಾಸದಲ್ಲಿನ ಅತ್ಯಾಚಾರ, ಅನಾಚಾರದ ಬಗ್ಗೆ ಮಾತಾಡ್ತಾನಾ? ತುಂಡಾಗಿ ಉಳಿದಿರುವ ಹಿಂದೂ ಧರ್ಮ ಭೂಮಿಯನ್ನು ನಾವು ರಕ್ಷಣೆ ಮಾಡಬೇಕಿದೆ. ಗೌಡ, ಲಿಂಗಾಯತ, ಬ್ರಾಹ್ಮಣ, ಮರಾಠ, ಎಸ್ಟಿ, ಎಸ್ಸಿ ಆಗಬೇಡಿ. ಎಲ್ಲರೂ ಜಾತಿ ಎನ್ನುವ ದರಿದ್ರ ಮನಸ್ಥಿತಿಯಿಂದ ಹೊರ ಬಂದು ಹಿಂದೂಗಳಾಗಿ. ಧರ್ಮಸ್ಥಳದ ಅಪಪ್ರಚಾರದ ವಿರುದ್ಧ ಹಿಂದೂಗಳೆಲ್ಲ ಒಂದಾಗಿ ಎಂದು ಕರೆ ನೀಡಿದ್ದಾರೆ.

  • ಹುಬ್ಬಳ್ಳಿ | ಈದ್ಗಾ ಮೈದಾನ ಇನ್ಮುಂದೆ ರಾಣಿ ಚೆನ್ನಮ್ಮ ಮೈದಾನ – ಪಾಲಿಕೆಯಿಂದ ಅಧಿಕೃತ ಘೋಷಣೆ

    ಹುಬ್ಬಳ್ಳಿ | ಈದ್ಗಾ ಮೈದಾನ ಇನ್ಮುಂದೆ ರಾಣಿ ಚೆನ್ನಮ್ಮ ಮೈದಾನ – ಪಾಲಿಕೆಯಿಂದ ಅಧಿಕೃತ ಘೋಷಣೆ

    ಹುಬ್ಬಳ್ಳಿ: ಪ್ರತಿ ಬಾರಿಯೂ ಗಣೇಶೋತ್ಸವದ (Ganesh Chaturthi) ವೇಳೆ ವಿವಾದಕ್ಕೆ ಎಡೆಮಾಡಿಕೊಡುತ್ತಿದ್ದ ಈದ್ಗಾ ಗ್ರೌಂಡ್ (Eidgah Ground) ಅನ್ನು ರಾಣಿ ಚೆನ್ನಮ್ಮ ಮೈದಾನವೆಂದು (Rani Chennamma Ground) ಮಹಾನಗರ ಪಾಲಿಕೆಯ ಉಪಮೇಯರ್ ಸಂತೋಷ ಚೌಹ್ವಾಣ್ ಅಧಿಕೃತವಾಗಿ ಘೋಷಣೆ ಮಾಡಿದರು.

    ಈ ಬಾರಿಯ ಗಣೇಶೋತ್ಸವವು ಈದ್ಗಾ ಮೈದಾನದಲ್ಲಿ ಶಾಂತಿಯುತವಾಗಿ ನಡೆಯಿತು. ಈ ಗಣೇಶೋತ್ಸವದ ಕಾರ್ಯಕ್ರಮದಲ್ಲಿಯೇ ಈದ್ಗಾ ಮೈದಾನಕ್ಕೆ ರಾಣಿ ಚೆನ್ನಮ್ಮ ಮೈದಾನ ಎಂದು ಮರುನಾಮಕರಣ ಮಾಡಲಾಗಿದೆ. ಇದನ್ನೂ ಓದಿ: ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಜಪಾನ್‌ ಪ್ರಮುಖ ಪಾಲುದಾರ: ಮೋದಿ ಬಣ್ಣನೆ

    ಈ ಬಗ್ಗೆ ಮಹಾನಗರ ಪಾಲಿಕೆಯು ಠರಾವು ಪಾಸ್ ಮಾಡಿದೆ. ಈದ್ಗಾ ಮೈದಾನಕ್ಕೆ ರಾಣಿ ಚೆನ್ನಮ್ಮ ಮೈದಾನವೆಂದು ಮರುನಾಮಕರಣ ಮಾಡಿರುವುದು ಹಿಂದೂಪರ ಸಂಘಟನೆಗಳ ಹಾಗೂ ಗಜಾನನ ಉತ್ಸವ ಸಮಿತಿಯವರಲ್ಲಿ ಸಂತಸ ತಂದಿದೆ. ಇದನ್ನೂ ಓದಿ: ಹೆಣ್ಣುಮಕ್ಕಳು ಎಂತಹ ಹೋರಾಟಕ್ಕೂ ತಯಾರಿದ್ದಾರೆ, ಆದ್ರೆ ಅಗತ್ಯವಿಲ್ಲ – ಡಿ.ವೀರೇಂದ್ರ ಹೆಗ್ಗಡೆ

    ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆದ ಗಣೇಶೋತ್ಸವವು ವಿಸರ್ಜನೆಯ ಮೂಲಕ ಸಂಪನ್ನಗೊಂಡಿದೆ. ವಿವಾದದಲ್ಲೇ ಅಂತ್ಯಗೊಳ್ಳುತ್ತಿದ್ದ ಹುಬ್ಬಳ್ಳಿ ಈದ್ಗಾ ಮೈದಾನ ಗಣೇಶೋತ್ಸವ ಈ ಬಾರಿ ಅತ್ಯಂತ ಶಾಂತಿಪ್ರಿಯವಾಗಿ ನಡೆದಿದೆ.

    ಈ ಬಾರಿ ಮುಖ್ಯ ಅತಿಥಿಯಾಗಿ ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ವಿಸರ್ಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಾಸಕ ಮಹೇಶ್ ಟೆಂಗಿನಕಾಯಿ, ಗಜಾನನ ಉತ್ಸವ ಮಹಾಮಂಡಳಿ ಅಧ್ಯಕ್ಷ ಸಂಜೀವ ಬಡಾಸ್ಕರ್ ಸೇರಿದಂತೆ ಹಲವರು ಪ್ರತಾಪ್ ಸಿಂಹಗೆ ಸಾಥ್ ನೀಡಿದರು.

  • ಹುಬ್ಬಳ್ಳಿ-ಜೋಧಪುರ್ ನೇರ ರೈಲು ಸಂಚಾರಕ್ಕೆ ಅಸ್ತು – ಟಿಕೆಟ್ ಬುಕಿಂಗ್ ಆರಂಭ

    ಹುಬ್ಬಳ್ಳಿ-ಜೋಧಪುರ್ ನೇರ ರೈಲು ಸಂಚಾರಕ್ಕೆ ಅಸ್ತು – ಟಿಕೆಟ್ ಬುಕಿಂಗ್ ಆರಂಭ

    -ಸೆಪ್ಟೆಂಬರ್ ತಿಂಗಳಿಂದ ಪ್ರತಿ ವಾರ ವಿಶೇಷ ರೈಲು ಸಂಚಾರ

    ನವದೆಹಲಿ: ಕರ್ನಾಟಕಕ್ಕೆ (Karnataka) ಅನೇಕ ರೈಲ್ವೆ ಯೋಜನೆಗಳ ಕೊಡುಗೆ ನೀಡಿರುವ ಕೇಂದ್ರ ಸರ್ಕಾರ, ಇದೀಗ ಗಣೇಶ ಹಬ್ಬದ ವೇಳೆ ಮತ್ತೊಂದು ವಿಶೇಷ ಕೊಡುಗೆ ನೀಡಿದ್ದು, ಹುಬ್ಬಳ್ಳಿ-ಜೋಧಪುರ್ (Hubli-Jodhpur) ನೇರ ರೈಲು ಸಂಚಾರಕ್ಕೆ ಅಸ್ತು ಎಂದಿದೆ.

    ಹುಬ್ಬಳ್ಳಿ-ಜೋಧಪುರ್ ವಿಶೇಷ ರೈಲು ಸೆಪ್ಟೆಂಬರ್ ತಿಂಗಳಿನಿಂದಲೇ ಸಂಚಾರ ಪ್ರಾರಂಭಿಸಲಿದೆ. ಪ್ರಸ್ತುತ ವಿಶೇಷ ರೈಲಾಗಿರುವ ಇದನ್ನು ಮುಂದಿನ ದಿನಗಳಲ್ಲಿ ನಿಯತಕಾಲಿಕವಾಗಿ ಪರಿವರ್ತನೆಗೊಳಿಸುವ ಬಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಭರವಸೆ ನೀಡಿದ್ದಾರೆಂದು ಸಚಿವ ಪ್ರಹ್ಲಾದ್ ಜೋಶಿ (Prahlad Joshi) ತಿಳಿಸಿದ್ದಾರೆ.ಇದನ್ನೂ ಓದಿ: ನಗರದ ಹಲವೆಡೆ ನಾಳೆ, ನಾಳಿದ್ದು ವಿದ್ಯುತ್ ವ್ಯತ್ಯಯ

    ಹುಬ್ಬಳ್ಳಿ-ಜೋಧಪುರ್ ನೂತನ ರೈಲು (ಸಂಖ್ಯೆ: 07359) ಹುಬ್ಬಳ್ಳಿಯಿಂದ ಸಂಜೆ 7:30ಕ್ಕೆ ತೆರಳಿ BGKT (ಭಗತ ಕಿ ಕೋಟಿ)ಗೆ ಬೆಳಿಗ್ಗೆ 5:30ಕ್ಕೆ ತಲುಪಲಿದೆ. ಸದ್ಯ ಪ್ರತಿ ರವಿವಾರ ಈ ರೈಲು ಸಂಚಾರವಿರಲಿದ್ದು, ಸೆಪ್ಟೆಂಬರ್ 28ರಿಂದ ಸಂಚಾರ ಆರಂಭಿಸಲಿದೆ.

    ಟಿಕೆಟ್ ಬುಕಿಂಗ್ ಶುರು:
    ನೂತನವಾಗಿ ಸಂಚಾರ ಆರಂಭವಾಗುತ್ತಿರುವ ಹುಬ್ಬಳ್ಳಿ-ಜೋಧಪುರ್ ರೈಲ್ವೆ ಸಂಚಾರಕ್ಕೆ ಪ್ರಯಾಣಿಕರಿಂದ ಈಗಾಗಲೇ ಟಿಕೆಟ್ ಬುಕಿಂಗ್ ಸಹ ಶುರುವಾಗಿದೆ. ರೈಲ್ವೆ ಇಲಾಖೆ ಸೆಪ್ಟೆಂಬರ್ 28, ಅಕ್ಟೋಬರ್ 05, ಅಕ್ಟೋಬರ್ 12, ಅಕ್ಟೋಬರ್ 19, ಅಕ್ಟೋಬರ್ 26ರಂದು ಪ್ರಯಾಣಕ್ಕೆ ಮುಂಗಡ ಟಿಕೆಟ್ ಬುಕಿಂಗ್ ಆರಂಭಿಸಿದೆ.

    ಹುಬ್ಬಳ್ಳಿ ಜನರ ಬಹುದಿನದ ಬೇಡಿಕೆ ಈಡೇರಿಕೆ:
    ಹುಬ್ಬಳ್ಳಿ-ಜೋಧಪುರ್ ನೇರ ರೈಲು ಸಂಚಾರಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ಉತ್ತರ ಕರ್ನಾಟಕ ಭಾಗದವರಿಂದ ಅನೇಕ ದಿನಗಳಿಂದಲೂ ಬಹು ಬೇಡಿಕೆಯಿತ್ತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸತತ ಪ್ರಯತ್ನದ ಫಲವಾಗಿ ಇದೀಗ ಸಾಕಾರಗೊಂಡಿದೆ.

    ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು ಸೇರಿದಂತೆ ರಾಜ್ಯಕ್ಕೆ ವಿವಿಧ ರೈಲ್ವೆ ಯೋಜನೆಗಳನ್ನು ತರುವಲ್ಲಿ ಯಶಸ್ವಿಯಾಗಿರುವ ಸಚಿವ ಜೋಶಿ ಅವರು, ಇದೀಗ ಹುಬ್ಬಳ್ಳಿ-ಜೋಧಪುರ್ ವಿಶೇಷ ರೈಲು ಸಂಚಾರ ಆರಂಭಿಸುವಲ್ಲಿ ಸಹ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಗಮನ ಸೆಳೆದು ರೈಲು ಸಂಚಾರವನ್ನು ಸಾಕಾರಗೊಳಿಸುವಲ್ಲಿ ಸಫಲರಾಗಿದ್ದಾರೆ.

    ಬಹುಜನರ ಬೇಡಿಕೆಯಂತೆ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹುಬ್ಬಳ್ಳಿ-ಜೋಧಪುರ್ ರೈಲು ಸಂಚಾರ ಆರಂಭಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಿ, ನಿರಂತರವಾಗಿ ಗಮನ ಸೆಳೆಯುತ್ತಲೇ ಇದ್ದರು. ಜೋಶಿ ಅವರ ಒತ್ತಾಸೆ, ಮನವಿಗೆ ಸ್ಪಂದಿಸಿ ಸಚಿವ ಅಶ್ವಿನಿ ವೈಷ್ಣವ್ ಅವರು ಹುಬ್ಬಳ್ಳಿ-ಜೋಧ್‌ಪುರಕ್ಕೆ ನೇರ ರೈಲು ಸಂಚಾರಕ್ಕೆ ಅನುಮೋದನೆ ನೀಡಿದ್ದಾರೆ.

    ರೈಲ್ವೆ ಸಚಿವರಿಗೆ ಜೋಶಿ ಧನ್ಯವಾದ:
    ತಮ್ಮ ಮನವಿ, ಒತ್ತಾಸೆಗೆ ಸ್ಪಂದಿಸಿ ಉತ್ತರ ಕರ್ನಾಟಕ ಭಾಗದ ಅದರಲ್ಲೂ ವಾಣಿಜ್ಯ ನಗರಿ ಹುಬ್ಬಳ್ಳಿ ರೈಲ್ವೆ ಯೋಜನೆ-ಸೌಲಭ್ಯಗಳಿಗೆ ವಿಶೇಷ ಆಸಕ್ತಿ ತೋರಿ ಅನುಮೋದಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.ಇದನ್ನೂ ಓದಿ: ಹದಗೆಟ್ಟ ಅನಾರೋಗ್ಯ.. ಉಲ್ಬಣಗೊಂಡ ಕ್ಯಾನ್ಸರ್: ಸಹಾಯ ಕೇಳಿ ಕಣ್ಣೀರಿಟ್ಟ KGF ಚಾಚಾ

  • ನನಗೆ ಕನ್ನಡ ಬರಲ್ಲ, ಏನು ಮಾಡ್ತಿಯಾ? – ಪೌರ ಕಾರ್ಮಿಕನೊಂದಿಗೆ ಪ್ರತಿಷ್ಠಿತ ಬಟ್ಟೆ ಅಂಗಡಿ ಸಿಬ್ಬಂದಿಯ ಮೊಂಡುತನ

    ನನಗೆ ಕನ್ನಡ ಬರಲ್ಲ, ಏನು ಮಾಡ್ತಿಯಾ? – ಪೌರ ಕಾರ್ಮಿಕನೊಂದಿಗೆ ಪ್ರತಿಷ್ಠಿತ ಬಟ್ಟೆ ಅಂಗಡಿ ಸಿಬ್ಬಂದಿಯ ಮೊಂಡುತನ

    ಹುಬ್ಬಳ್ಳಿ: ಜಿಲ್ಲೆಯಲ್ಲಿ ಕನ್ನಡ ಗೊತ್ತಿಲ್ಲ ಎನ್ನುವರ ಧಿಮಾಕು ಹೆಚ್ಚಾಗಿದೆ. ನನಗೆ ಕನ್ನಡ ಬರಲ್ಲ. ಏನು ಮಾಡ್ತೀಯಾ ಎಂದು ಮಹಾನಗರ ಪಾಲಿಕೆ ಪೌರ ಕಾರ್ಮಿಕನ ಜೊತೆಗೆ ಪ್ರತಿಷ್ಠಿತ ಬಟ್ಟೆ ಅಂಗಡಿ ಸಿಬ್ಬಂದಿ ಮೊಂಡುತನ ತೋರಿದ್ದಾನೆ.

    ಹುಬ್ಬಳ್ಳಿಯ (Hubballi) ಕೊಪ್ಪಿಕರ ರಸ್ತೆಯಲ್ಲಿ ಪಾಲಿಕೆಯ ಆಟೋ ಟಿಪ್ಪರ್ ಚಾಲಕ ಮತ್ತು ಮಿನಿಸ್ಟರ್ ವೈಟ್ ಬಟ್ಟೆ ಅಂಗಡಿ ಸಿಬ್ಬಂದಿ ಜೊತೆಗೆ ಈ ಗಲಾಟೆ ನಡೆದಿದೆ. ಕಸ ಹಾಕಲು ಬಂದ ಶಾಪ್‌ನ ಸಿಬ್ಬಂದಿ ಬಳಿ ಪೌರ ಕಾರ್ಮಿಕರೊಬ್ಬರು ಕನ್ನಡ ಮಾತನಾಡಲು ಬರಲ್ವ ಎಂದು ಕೇಳಿದ್ದಾನೆ. ಇದನ್ನೂ ಓದಿ: `ಪರಮ್ ಸುಂದರಿ’ ಪ್ರೀಮಿಯರ್‌ನಲ್ಲಿ ಪರಮ ಸುಂದರಿಯಾಗಿ ಮಿಂಚಿದ ಜಾನ್ವಿ

    ಈ ವೇಳೆ ಸಿಬ್ಬಂದಿ ನನಗೆ ಕನ್ನಡ ಬರಲ್ಲ, ಏನು ಮಾಡ್ತೀಯಾ ಎಂದು ಅವಾಜ್ ಹಾಕಿದ್ದಾನೆ. ಹುಬ್ಬಳ್ಳಿಗೆ ಬಂದು ಇಷ್ಟು ವರ್ಷವಾದರೂ ಕನ್ನಡ ಬರಲ್ವ? ಕನ್ನಡದಲ್ಲಿ ಮಾತನಾಡಲು ಬರದಿದ್ದರೇ ಕನ್ನಡದಲ್ಲಿ ಮಾತನಾಡುವವರನ್ನು ಕಸ ಹಾಕಲು ಕಳುಹಿಸಿ ಶಾಪ್ ಸಿಬ್ಬಂದಿಯನ್ನು ಪೌರ ಕಾರ್ಮಿಕರು ತರಾಟೆಗೆ ತೆಗೆದುಕೊಂಡಿದ್ದಾನೆ. ಇದನ್ನೂ ಓದಿ: ಬುರುಡೆ ಗ್ಯಾಂಗ್ ಸಮೀರ್ ಹಿಂದೆ ಎಡಪಂಥೀಯರು, ಮಾವೋವಾದಿ, ಜಿಹಾದಿಗಳಿದ್ದಾರೆ: ಚಕ್ರವರ್ತಿ ಸೂಲಿಬೆಲೆ

    ಬಟ್ಟೆ ಶಾಪ್‌ನ ಮುಂಭಾಗವೇ ಪೌರ ಕಾರ್ಮಿಕ ಹಾಗೂ ಬಟ್ಟೆ ಶಾಪ್‌ನ ಸಿಬ್ಬಂದಿ ನಡುವೆ ಕೆಲಹೊತ್ತು ವಾಗ್ವಾದ ನಡೆದಿದೆ.

  • ಮಟ್ಟಣ್ಣನವರ್ ಯಾಕೆ ನನ್ನನ್ನು ಅಧಿಕಾರಿ ಅಂದ್ರೋ ಗೊತ್ತಿಲ್ಲ: ರೌಡಿಶೀಟರ್ ಮದನ್ ಬುಗಡಿ

    ಮಟ್ಟಣ್ಣನವರ್ ಯಾಕೆ ನನ್ನನ್ನು ಅಧಿಕಾರಿ ಅಂದ್ರೋ ಗೊತ್ತಿಲ್ಲ: ರೌಡಿಶೀಟರ್ ಮದನ್ ಬುಗಡಿ

    ಹುಬ್ಬಳ್ಳಿ: ನಾನು ಮಾನವ ಹಕ್ಕುಗಳ ಆಯೋಗದ ಅಧಿಕಾರಿ ಅಂತ ಹೇಳಿಕೊಂಡಿಲ್ಲ. ಗಿರೀಶ್ ಮಟ್ಟಣ್ಣನವರ್ ಯಾಕೆ ಹಾಗೆ ಹೇಳಿದ್ರು ಎಂದು ಗೊತ್ತಿಲ್ಲ ಎಂದು ರೌಡಿಶೀಟರ್ ಮದನ್ ಬುಗಡಿ (Madan Bugadi) ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ನಾನು ಮಾನವ ಹಕ್ಕುಗಳ ಆಯೋಗದ ಅಧಿಕಾರಿಯಂತ ಹೇಳಿಯೇ ಇಲ್ಲ. ಮಟ್ಟಣ್ಣನವರ್ ಯಾಕೆ ಹೇಳಿದ್ರು ಅಂತಾ ನನಗೆ ಅರ್ಥ ಆಗುತ್ತಿಲ್ಲ. ನನ್ನ ಮೇಲೆ ರೌಡಿಶೀಟರ್ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 8 ವರ್ಷದ ಬಳಿಕ ದೆಹಲಿ ಮೆಟ್ರೋ ದರ ಏರಿಕೆ

    ಈಗ ನಾನು ಅದರಿಂದ ಹೊರಬಂದು ಉತ್ತಮ ಜೀವನ ನಡೆಸುತ್ತಿದ್ದೇನೆ. ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ. ಕಮಿಷನರ್ ಶಶಿಕುಮಾರ್ ಅವರು ರೌಡಿ ಪೆರೇಡ್‌ನಲ್ಲಿ ನನಗೆ ಉತ್ತಮ ಮನುಷ್ಯ ಆಗು ಅಂತ ಕಿವಿ ಮಾತು ಹೇಳಿದ್ದಾರೆ ಅಷ್ಟೇ. ನನಗೂ ಗಿರೀಶ್ ಮಟ್ಟಣ್ಣನವರ್ ಹೇಳಿಕೆಗೂ ಯಾವುದೇ ಸಂಬಂಧ ಇಲ್ಲ. ನಾನು ಮಾನವ ಹಕ್ಕುಗಳ ಆಯೋಗದ ಅಧಿಕಾರಿ ಅಂತ ಹೇಳಿಕೊಂಡಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ವಿರುದ್ಧ ಷಡ್ಯಂತ್ರಕ್ಕೆ ಫಂಡಿಂಗ್‌ ಬರ್ತಿತ್ತು ಅನ್ನೋದು ಸುಳ್ಳು, ಕೂಲಿ ಮಾಡಿದ್ರಷ್ಟೇ ಜೀವನ ನಡೀತಿತ್ತು – ಚಿನ್ನಯ್ಯನ 2ನೇ ಪತ್ನಿ ಕಣ್ಣೀರು

    ಆ.24 ರಂದು ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವಾಗ ತಮ್ಮ ಪಕ್ಕ ನಿಂತಿದ್ದ ಮದನ್ ಬುಗಡಿ ಎಂಬ ವ್ಯಕ್ತಿಯನ್ನು ಮಾನವ ಹಕ್ಕುಗಳ ಆಯೋಗದ ಅಧಿಕಾರಿ ಎಂದು ಗಿರೀಶ್‌ ಮಟ್ಟಣ್ಣನವರ್‌  (Girish Mattannavar) ಪರಿಚಯಿಸಿದ್ದರು. ಇದೀಗ ಮಟ್ಟಣ್ಣನವರ್ ಅವರ ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

  • ರೌಡಿಶೀಟರ್‌ನನ್ನು ಮಾನವ ಹಕ್ಕುಗಳ ಆಯೋಗದ ಅಧಿಕಾರಿ ಅಂತ ಪರಿಚಯಿಸಿದ ಗಿರೀಶ್ ಮಟ್ಟಣ್ಣನವರ್

    ರೌಡಿಶೀಟರ್‌ನನ್ನು ಮಾನವ ಹಕ್ಕುಗಳ ಆಯೋಗದ ಅಧಿಕಾರಿ ಅಂತ ಪರಿಚಯಿಸಿದ ಗಿರೀಶ್ ಮಟ್ಟಣ್ಣನವರ್

    – ಕೊಲೆ, ಸುಲಿಗೆ, ಕೊಲೆ ಯತ್ನ, ದನಗಳ್ಳತನ ಕೇಸ್ ಆರೋಪಿಯಾಗಿರೋ ಮದನ ಬುಗಡಿ

    ಹುಬ್ಬಳ್ಳಿ: ರೌಡಿಶೀಟರ್‌ವೊಬ್ಬನನ್ನು ಮಾನವ ಹಕ್ಕುಗಳ ಅಧಿಕಾರಿ ಎಂದು ಗಿರೀಶ್ ಮಟ್ಟಣ್ಣನವರ್ (Girish Mattannavar) ಪರಿಚಯಿಸಿರುವ ಪ್ರಸಂಗ ನಡೆದಿದೆ.

    ಮಾಧ್ಯಮಗಳಿಗೆ ಹೇಳಿಕೆ ನೀಡುವ ವೇಳೆ ತಮ್ಮ ಪಕ್ಕದಲ್ಲಿ ನಿಂತಿದ್ದ ಮದನ ಬುಗಡಿ ಎಂಬ ವ್ಯಕ್ತಿಯನ್ನು ಮಾನವ ಹಕ್ಕುಗಳ ಆಯೋಗದ ಅಧಿಕಾರಿ ಎಂದು ಮಟ್ಟಣ್ಣನವರ್ ಪರಿಚಯಿಸಿದ್ದಾರೆ. ಆದರೆ, ಆ ವ್ಯಕ್ತಿ ಹುಬ್ಬಳ್ಳಿಯಲ್ಲಿ ಕುಖ್ಯಾತ ರೌಡಿಶೀಟರ್. ಈತ ಹುಬ್ಬಳ್ಳಿ ವಿವಿಧ ಠಾಣೆಗಳಲ್ಲಿ ರೌಡಿಶೀಟರ್ ಆಗಿದ್ದಾನೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣವನ್ನು ಸರ್ಕಾರ ಎನ್‌ಐಎಗೆ ವರ್ಗಾಯಿಸಬೇಕು: ಪ್ರತಾಪ್ ಸಿಂಹ ಆಗ್ರಹ

    ಹಳೇ ಹುಬ್ಬಳ್ಳಿ ಶಿವಶಂಕರ್ ಕಾಲೊನಿಯ ತಾಂಡಾ ನಿವಾಸಿ ಈ ಮದನ ಬುಗಡಿ. ಕೊಲೆ, ಕೊಲೆ ಯತ್ನ, ಸುಲಿಗೆ, ದೊಂಬಿ, ದನಗಳ್ಳತನ ಸೇರಿ ವಿವಿಧ ಪ್ರಕರಣಗಳು ಈತನ ಮೇಲಿವೆ. ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.

    2017ರಲ್ಲಿ ನಡೆದ ದೊಡ್ಡಮನಿ ಎಂಬವರ ಕೊಲೆ ಪ್ರಕರಣದಲ್ಲಿ ಮದನ್ ಬುಗಡಿ ಇದ್ದಾನೆ. ಹೆಣ್ಣಿನ ವಿಷಯದಲ್ಲಿ ದೊಡ್ಮಮನಿ ಎಂಬವರ ಕೊಲೆ ಪ್ರಕರಣದಲ್ಲಿ ಬುಗಡಿ ಭಾಗಿಯಾಗಿದ್ದ. 2017ರ ಪೆಬ್ರುವರಿ 2 ರಂದು ಘಟನೆ ನಡೆದಿತ್ತು. ಇದನ್ನೂ ಓದಿ: ಕೂಲಿಂಗ್ ಗ್ಲಾಸ್ ಧರಿಸಿ ವಿಚಾರಣೆಗೆ ಹಾಜರಾದ ʻಬುರುಡೆʼ ಸಮೀರ್‌ – ವಿಚಾರಣೆ ಶುರು

    ಹುಬ್ಬಳ್ಳಿ ತಾಲೂಕಿನ ಕುಸಗಲ್‌ನಲ್ಲಿ ನಡೆದಿದ್ದ ಪರಶುರಾಮ್ ದೊಡ್ಡಮನಿ ಕೊಲೆ ಪ್ರಕರಣದಲ್ಲಿ ಬುಗಡಿ 2ನೇ ಆರೋಪಿಯಾಗಿದ್ದಾನೆ. ಸಾಕ್ಷಾಧಾರಗಳ ಕೊರತೆಯಿಂದಾಗಿ ಕೊಲೆ ಪ್ರಕರಣದಲ್ಲಿ ಮದನ್ ಬುಗಡಿ ಬಿಡುಗಡೆಯಾಗಿದ್ದಾನೆ. ದನಗಳ ಕಳ್ಳತನ ಮಾಡುವಲ್ಲಿ ಈತ ನಿಸ್ಸೀಮ ಎನ್ನಲಾಗಿದೆ.

    ಸುಲಿಗೆ ದರೋಡೆ ಸೇರಿ ಹಲವಾರು ಪ್ರಕರಣಗಳಲ್ಲಿ ಹುಬ್ಬಳ್ಳಿ ವಿವಿಧ ಠಾಣೆಗಳಲ್ಲಿ ಮದನ್ ಮೇಲೆ ಪ್ರಕರಣಗಳು ದಾಖಲಾಗಿವೆ. ಪ್ರತಿ ರೌಡಿ ಪರೇಡ್‌ನಲ್ಲಿ ರೌಡಿಶೀಟರ್ ಮದನ್ ಬುಗಡಿ ಹಾಜರಾಗುತ್ತಾನೆ. ಕಳೆದ ಡಿಸೆಂಬರ್ 30 ರಂದು ನಡೆದ ರೌಡಿ ಪರೇಡ್ ವೇಳೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಕ್ಲಾಸ್ ತೆಗೆದುಕೊಂಡಿದ್ದರು.

  • ನೇಣು ಬಿಗಿದ ಸ್ಥಿತಿಯಲ್ಲಿ ಪತ್ನಿ ಶವ ಪತ್ತೆ – ಪತಿ ವಿರುದ್ಧ ಕೊಲೆ ಆರೋಪ

    ನೇಣು ಬಿಗಿದ ಸ್ಥಿತಿಯಲ್ಲಿ ಪತ್ನಿ ಶವ ಪತ್ತೆ – ಪತಿ ವಿರುದ್ಧ ಕೊಲೆ ಆರೋಪ

     -13 ವರ್ಷದ ಪ್ರೀತಿ ಮುಚ್ಚಿಟ್ಟು ಮದ್ವೆಯಾಗಿದ್ದ ಪತಿ

    ಹುಬ್ಬಳ್ಳಿ: ಜಿಲ್ಲೆಯ ನಂದಗೋಕುಲ ಬಡಾವಣೆಯಲ್ಲಿ (Nandagokula) ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯೋರ್ವಳ ಶವ ಪತ್ತೆಯಾಗಿದ್ದು, ಕೊಲೆ ಮಾಡಿ ನೇಣಿಗೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ನಂದಗೋಕುಲ ಬಡಾವಣೆಯ ನಿವಾಸಿ ಜಯಶ್ರೀ ಬಡಿಗೇರ್ (31) ಮೃತ ಗೃಹಿಣಿ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶಿವಾನಂದ ಎಂಬುವವರ ಜೊತೆ ಕಳೆದ ಮೇ 21ರಂದು ವಿವಾಹವಾಗಿತ್ತು.ಇದನ್ನೂ ಓದಿ: 7 ದಿನಗಳಲ್ಲಿ ಅಫಿಡವಿಟ್‌ ಸಲ್ಲಿಸಿ ಇಲ್ಲವೇ ದೇಶದ ಕ್ಷಮೆ ಕೇಳಿ: ರಾಹುಲ್‌ಗೆ ಚುನಾವಣಾ ಆಯೋಗ ಡೆಡ್‌ಲೈನ್‌

    ಮದುವೆಗೂ ಮುಂಚೆ ಪತಿ ಶಿವಾನಂದ ಬೇರೆ ಯುವತಿಯನ್ನು ಪ್ರೀತಿಸುತ್ತಿದ್ದ. ತನ್ನ ಹದಿಮೂರು ವರ್ಷಗಳ ಪ್ರೀತಿಯನ್ನು ಮುಚ್ಚಿಟ್ಟು ಶಿವಾನಂದ ಮದುವೆಯಾಗಿದ್ದ. ಈ ಕುರಿತು ಮದುವೆಯಾದ ಬಳಿಕ ಮೃತ ಜಯಶ್ರೀಗೆ ಮಾಹಿತಿ ನೀಡಿದ್ದ. ಈ ವಿಷಯವಾಗಿ ಇಬ್ಬರ ನಡುವೆ ಗಲಾಟೆಯಾಗಿತ್ತು. ಆದರೂ ಕೂಡ ಜಯಶ್ರೀ ಪತಿಯ ಜೊತೆಗೆ ಇರಲು ನಿರ್ಧರಿಸಿದ್ದಳು. ಸಾಯುವ ಮುನ್ನ ರಾತ್ರಿಯೂ ಕೂಡ ಇಬ್ಬರ ನಡುವೆ ಜಗಳವಾಗಿತ್ತು ಎಂದು ತಿಳಿದುಬಂದಿದೆ.

    ಜಯಶ್ರೀಗೆ ಶಿವಾನಂದ ಮಾನಸಿಕ ಕಿರುಕುಳ ನೀಡ್ತಿದ್ದ. ಇದೀಗ ನನ್ನ ಮಗಳನ್ನು ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಹುಬ್ಬಳ್ಳಿಯ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಕೂಲಿ ವೀಕ್ಷಣೆಗಾಗಿ 100 ಕಿ.ಮೀ. ವೇಗದಲ್ಲಿ ಚಾಲನೆ – ಡಿವೈಡರ್‌ಗೆ ಡಿಕ್ಕಿ, ಇಬ್ಬರು ಸಾವು

  • ಮಸೀದಿ ಬಗ್ಗೆ ಈ ರೀತಿ ಆರೋಪ ಬಂದಿದ್ರೆ, ನೀವು ತನಿಖೆಗೆ ಕೊಡ್ತಿದ್ರಾ: ಆರ್.ಅಶೋಕ್

    ಮಸೀದಿ ಬಗ್ಗೆ ಈ ರೀತಿ ಆರೋಪ ಬಂದಿದ್ರೆ, ನೀವು ತನಿಖೆಗೆ ಕೊಡ್ತಿದ್ರಾ: ಆರ್.ಅಶೋಕ್

    – ನಗರ ನಕ್ಸಲರ ಗ್ಯಾಂಗ್ ಧರ್ಮಸ್ಥಳ ಪ್ರಕರಣದ ಹಿಂದಿದೆ; ವಿಪಕ್ಷ ನಾಯಕ

    ಹುಬ್ಬಳ್ಳಿ: ಮಸೀದಿ ಬಗ್ಗೆ ಈ ರೀತಿ ಆರೋಪ ಬಂದಿದ್ರೆ, ನೀವು ತನಿಖೆಗೆ ಕೊಡ್ತಿದ್ರಾ? ಎದೆ ಮುಟ್ಟಿಕೊಂಡು ಹೇಳಿ ಎಂದು ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ಸವಾಲ್ ಹಾಕಿದ್ದಾರೆ.

    ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ (Siddaramaiah) ಸರ್ಕಾರದಲ್ಲಿ ನಕ್ಸಲರು ಕಾಡು ಬಿಟ್ಟು ನಾಡಿಗೆ ಬಂದಿದ್ದಾರೆ. ದಂಡುಪಾಳ್ಯ ರೀತಿ ನಗರ ನಕ್ಸಲರ ಗ್ಯಾಂಗ್ ಧರ್ಮಸ್ಥಳ ಪ್ರಕರಣದ (Dharmasthala Case) ಹಿಂದಿದೆ. ಕಾಂಗ್ರೆಸ್‌ನಲ್ಲಿ ಹಿಂದೂ ವಿರೋಧಿ ಮತ್ತು ಹಿಂದೂ ಪರ ಎಂಬ ಎರಡು ಗ್ಯಾಂಗ್ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದರ್ಶನ್‌ ಕಷ್ಟಪಟ್ಟು ಮೇಲೆ ಬಂದಿದ್ರು, ಆದ್ರೆ ಜೀವನ ಹಾಳು ಮಾಡಿಕೊಂಡ್ರು: ರಮ್ಯಾ ಸಾಫ್ಟ್‌ ಕಾರ್ನರ್‌

    ರಾಜ್ಯದಲ್ಲಿ ಪದೇ ಪದೇ ಹಿಂದೂ ಧರ್ಮಕ್ಕೆ ಅವಮಾನ ಮಾಡೋ ಕೆಲಸ ಆಗುತ್ತಿದೆ. ಜೆಸಿಬಿಯನ್ನು ಧರ್ಮಸ್ಥಳ ಹೆಬ್ಬಾಗಿಲಿಗೆ ನುಗ್ಗಿಸ್ತೇನೆ ಅಂತಿದ್ದಾರೆ. ಮತಾಂದರು ಮತ್ತು ನಗರ ನಕ್ಸಲರು ಬಂದಿದ್ದಾರೆ. ಟಿಪ್ಪು ಪ್ರೇರಿತ ಗ್ಯಾಂಗ್‌ಗೆ ಸಿದ್ದರಾಮಯ್ಯ ಬೆಂಬಲ ನೀಡ್ತಿದ್ದಾರೆ. ಸಮೀರ್, ಪಿಎಫ್‌ಐ, ಎಸ್‌ಡಿಪಿ ಕಾರ್ಯಕರ್ತರಿಂದಲೇ ಸಿಎಂ ಆಫೀಸ್ ಸುತ್ತುವರಿದಿದೆ ಎಂದಿದ್ದಾರೆ. ಇದನ್ನೂ ಓದಿ: ವಿಷ್ಣು ಸ್ಮಾರಕ ನಿರ್ಮಿಸೋಕೆ ನಿಮ್ಮ ಜೊತೆ ನಾವಿದ್ದೇವೆ – ಅಭಿಮಾನಿಗಳೊಂದಿಗೆ ನಿಂತ ನಟ ಅನಿರುದ್ಧ

    ಷಡ್ಯಂತ್ರ ಇದೆ ಅಂತ ಡಿಕೆ ಶಿವಕುಮಾರ್ ಹೇಳ್ತಿದ್ದಾರೆ. ಆದ್ರೆ ಸಿದ್ದರಾಮಯ್ಯನವರ ಬಾಯಲ್ಲಿ ಒಂದು ಮಾತು ಬಂದಿದ್ಯಾ? ಡಿ.ಕೆ ಶಿವಕುಮಾರ್ (DK Shivakumar) ಮ್ಯಾನೇಜ್ ಮಾಡ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಈ ಬಗ್ಗೆ ಒಡಕಿದೆ. ಪೊಲೀಸರೇ ಕೋರ್ಟ್ಗೆ ಅರ್ಜಿ ಹಾಕಿದ್ದಾರೆ. ಎಲ್ಲಾ ಕೇಸ್‌ಗೂ ಇದೇ ರೀತಿ ಮಾಡ್ತಾರಾ? ಒಂದೇ ಸಲ ನೂರು ಅಡಿ ಹೋಗಿ ತನಿಖೆ ಮಾಡಬೇಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿಗರ ರ‍್ಯಾಲಿ ಧರ್ಮಸ್ಥಳದ ಪರ, ನ್ಯಾಯದ ಪರ ಅಲ್ಲ – ಡಿಕೆಶಿ

    ಧರ್ಮಸ್ಥಳ ವಿಚಾರದಲ್ಲಿ ನಾವು ರಾಜಕಾರಣ ಮಾಡಿಲ್ಲ. ಈ ಪ್ರಕರಣದಲ್ಲಿ ರಾಜಕಾರಣ ಮಾಡಿದ್ದು ಕಾಂಗ್ರೆಸ್, ಇದರ ಹಿಂದೆ ದೊಡ್ಡ ಖತರ್ನಾಕ್ ಗ್ಯಾಂಗ್ ಇದೆ. ಯೂಟ್ಯೂಬ್ ಚಾನಲ್ ಮಾಡಲು ಎಲ್ಲಿಂದ ದುಡ್ಡು ಬಂದಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

    ಹಿಂದೂ ಧರ್ಮ ಬಿಜೆಪಿ ಸ್ವತ್ತಲ್ಲ ಅನ್ನೋ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಫಸ್ಟ್ ನಿಮ್ಮ ಸ್ವತ್ತು ಅಂತ ಡಿಕೆಶಿ ಹೇಳಲಿ. ಮಸೀದಿ ಬಗ್ಗೆ ಈ ರೀತಿ ಆರೋಪ ಬಂದಿದ್ರೆ, ನೀವು ತನಿಖೆಗೆ ಕೊಡ್ತಿದ್ರಾ? ಎದೆ ಮುಟ್ಟಿಕೊಂಡು ಹೇಳಿ ಎಂದು ಸವಾಲ್ ಹಾಕಿದರು.