Tag: ಹುಬ್ಬಳ್ಳಿ ಗಲಭೆ ಕೇಸ್

  • ರಾಜ್ಯ ಸರ್ಕಾರಕ್ಕೆ ಮುಖಭಂಗ, ಓಲೈಕೆ ರಾಜಕಾರಣ ಬಿಟ್ಟು ಜನರ ಹಿತ ಕಾಪಾಡಲಿ: ಅರವಿಂದ್ ಬೆಲ್ಲದ್

    ರಾಜ್ಯ ಸರ್ಕಾರಕ್ಕೆ ಮುಖಭಂಗ, ಓಲೈಕೆ ರಾಜಕಾರಣ ಬಿಟ್ಟು ಜನರ ಹಿತ ಕಾಪಾಡಲಿ: ಅರವಿಂದ್ ಬೆಲ್ಲದ್

    ಬೆಂಗಳೂರು: ಹುಬ್ಬಳ್ಳಿ ಗಲಭೆ (Hubballi Communal Riots) ಪ್ರಕರಣ ಸೇರಿ 43 ಪ್ರಕರಣಗಳನ್ನು ರದ್ದುಗೊಳಿಸಿದ್ದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ (Highcourt) ಛೀಮಾರಿ ಹಾಕಿದೆ. ಇದರಿಂದ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್ (Arvind Bellad) ಟೀಕಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ನಡೆಸಿದ ದಾಳಿ ಸೇರಿ 43 ಪ್ರಕರಣಗಳನ್ನು ರದ್ದುಗೊಳಿಸುವ ಕುರಿತು ಕೆಲ ತಿಂಗಳ ಹಿಂದೆ ಸರ್ಕಾರ ನಿರ್ಧರಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಸರ್ಕಾರದ ನಡೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಪ್ರಕರಣ ವಾಪಸ್ ಪಡೆದಿದ್ದನ್ನು ರದ್ದು ಮಾಡುವಂತೆ ಆದೇಶಿಸಿದೆ. ಇದನ್ನೂ ಓದಿ: ಡಿಕೆಶಿ ಹೇಳಿಕೆಗೆ ಭಾರೀ ವಿರೋಧ; ಗ್ಯಾರಂಟಿಯಿಂದ ಮಂಗಳೂರಿಗರು ಹೊಟ್ಟೆಬಟ್ಟೆ ಕಟ್ಟಿಕೊಳ್ತಿಲ್ಲ: ಸುನಿಲ್ ಕುಮಾರ್

    ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಬೆಲ್ಲದ್, ಅತ್ಯಂತ ಹೀನ ಕೃತ್ಯಗಳಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ನೀಡುವ ಬದಲು ಅವರ ರಕ್ಷಣೆ ಸರ್ಕಾರ ನಿಂತಿರುವುದು ನಾಚಿಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಮಲ್‌ ಹಾಸನ್‌ ಪರ ಬ್ಯಾಟ್‌ ಬೀಸಿದ ರಮ್ಯಾ – ಸಿನಿಮಾ ಬಹಿಷ್ಕರಿಸುವುದು ಸ್ವಲ್ಪ ಜಾಸ್ತಿ ಆಯ್ತು ಅಲ್ಲವೇ? ಎಂದ ನಟಿ

    ಇಂತಹ ಪ್ರಕರಣ ವಾಪಸ್ ಪಡೆಯುವುದೇ ಸರಿಯಲ್ಲ. ಆದರೂ ರಾಜಕೀಯ ಒತ್ತಡ ಹಾಗೂ ಮುಸ್ಲಿಂ ಓಲೈಕೆ ರಾಜಕಾರಣಕ್ಕೆ ಕೇಸ್ ವಾಪಸ್ ಪಡೆದಿದೆ. ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡಬೇಕೆ ಹೊರತು, ಮುಸ್ಲಿಂ ಓಲೈಕೆ ರಾಜಕಾರಣ ಮಾಡಬಾರದು. ಇನ್ನಾದರೂ ಸರ್ಕಾರ ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಕ್ರಮಹಿಸಲಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಡಿಸಿ ಬಗ್ಗೆ ವಿವಾದಾತ್ಮಕ ಹೇಳಿಕೆ | ಕರ್ನಲ್ ಸೋಫಿಯಾ ವಿರುದ್ಧದ ಹೇಳಿಕೆಗೆ ಆದೇಶ ಗೊತ್ತಾ? – ರವಿಕುಮಾರ್‌ಗೆ ಹೈಕೋರ್ಟ್ ಚಾಟಿ

  • ಚನ್ನಪಟ್ಟಣದಲ್ಲಿ ಗೆಲ್ಲುವ ಅಭ್ಯರ್ಥಿ ಸಿಪಿವೈ – ಬೆಲ್ಲದ್ ಬ್ಯಾಟಿಂಗ್

    ಚನ್ನಪಟ್ಟಣದಲ್ಲಿ ಗೆಲ್ಲುವ ಅಭ್ಯರ್ಥಿ ಸಿಪಿವೈ – ಬೆಲ್ಲದ್ ಬ್ಯಾಟಿಂಗ್

    – ಸಿಪಿವೈಗೆ ಚನ್ನಪಟ್ಟಣದಲ್ಲಿ ಗೆಲುವಿನ ವಾತಾವರಣವಿದೆ

    ಹುಬ್ಬಳ್ಳಿ: ಚುನಾವಣೆ ಸ್ಪರ್ಧೆ ಮುಖ್ಯವಲ್ಲ. ಗೆಲುವು ಮುಖ್ಯ. ಸಿ.ಪಿ ಯೋಗೇಶ್ವರ್ (C P Yogeshwar) ಚನ್ನಪಟ್ಟಣದಲ್ಲಿ ಗೆಲ್ಲುವ ಅಭ್ಯರ್ಥಿ. ಚನ್ನಪಟ್ಟಣದಲ್ಲಿ ಅವರಿಗೆ ಗೆಲುವಿನ ವಾತಾವರಣವಿದೆ ಅವರೇ ಎನ್‌ಡಿಎ ಅಭ್ಯರ್ಥಿಯಾಗಬೇಕು ಎನ್ನುವ ಮೂಲಕ ಸಿಪಿವೈ ಪರ ವಿಧಾನಸಭಾ ವಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್ ಮತ್ತೆ ಬ್ಯಾಟಿಂಗ್ ಮಾಡಿದ್ದಾರೆ.

    ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಯೋಗೇಶ್ವರ್ ಮೇಲೆ ಜನರ ಪ್ರೀತಿ, ಅನುಕಂಪವಿದೆ. ಕುಮಾರಸ್ವಾಮಿ ಅವರು ಅತ್ಯಂತ ಪ್ರಬುದ್ಧ ರಾಜಕಾರಣಿ. ಅವರು ಅತ್ಯುತ್ತಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಕುಮಾರಸ್ವಾಮಿ ಬಳಿಕ ಅಲ್ಲಿ ಎನ್‌ಡಿಎಯಿಂದ ಹೊಸ ಅಭ್ಯರ್ಥಿ ಆಗಬೇಕು. ಈ ಹಿಂದೆ ಕುಮಾರಸ್ವಾಮಿ ಮತ್ತು ಡಾ. ಮಂಜುನಾಥ್ ಚುನಾವಣೆಯಲ್ಲಿ ಯೋಗೇಶ್ವರ್ ಒಳ್ಳೆಯ ಕಾರ್ಯ ಮಾಡಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸಿಪಿವೈಗೆ ಟಿಕೇಟ್ ನೀಡುವ ಭರವಸೆ ಇದೆ ಎಂದರು. ಇದನ್ನೂ ಓದಿ: ಸುದೀಪ್ ಸರ್‌ನ ನೋಡೋಕೆ ಆಗುತ್ತಿಲ್ಲ: ಲಹರಿ ವೇಲು

    ಮುಡಾ ವಿಚಾರವಾಗಿ ಸಿಎಂ ಕುಣಿಕೆ ಗಟ್ಟಿಯಾಗುತ್ತಿದೆ ಇನ್ನೂ ಕೆಲವೇ ದಿನದಲ್ಲಿ ಸಿಎಂ ರಾಜಿನಾಮೆ ನೀಡುತ್ತಾರೆ. ಜಿ ಪರಮೇಶ್ವರ್ (G Parameshwar) ಅವರು ಸಿಎಂ ಅವರನ್ನು ಮೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಪರವಾಗಿ ಮಾತನಾಡಿ ಅವರ ಅನುಗ್ರಹದಿಂದ ಸಿಎಂ ಆಗುವ ಆಸೆಯಲ್ಲಿದ್ದಾರೆ. ಈಗಾಗಲೇ ಪರಮೇಶ್ವರ್ ಸಿಎಂ ಸೀಟ್‌ಗೆ ಟೆವಲ್ ಹಾಕಿದ್ದಾರೆ. ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಎಂಬಿ ಪಾಟೀಲ್, ಪರಮೇಶ್ವರ್, ಸತೀಶ್ ಜಾರಕಿಹೊಳಿ ಸಿಎಂ ರೇಸ್‌ನಲ್ಲಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಚನ್ನಪಟ್ಟಣ ಜೆಡಿಎಸ್‌ ಕ್ಷೇತ್ರ.. ಅವರಿಗೆ ಯಾರು ಬೇಕೋ ಹೆಸರು ಘೋಷಣೆ ಮಾಡ್ತಾರೆ: ಬಿಎಸ್‌ವೈ

    ಭರತ್ ಬೊಮ್ಮಾಯಿ (Bharath Bommai) ಅವರಿಗೆ ಟಿಕೇಟ್ ನೀಡಿದ್ದು ಕುಟುಂಬ ರಾಜಕೀಯ ಅಲ್ಲಾ. ಸ್ಥಳೀಯ ಕಾರ್ಯಕರ್ತರೇ ಭರತ್ ಅವರನ್ನಾ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ರಾಜಾಭವನ ದಾಸ ಶಿಗ್ಗಾಂವಿಯಲ್ಲಿ ಪ್ರವಾಸ ಮಾಡಿ ಎಲ್ಲರ ಅಭಿಪ್ರಾಯ ಪಡೆದೇ ಭರತ್ ಹೆಸರು ಅಂತಿಮಗೊಳಿಸಿದ್ದಾರೆ. ಉಪಚುನಾವಣೆಯಲ್ಲಿ ಗೆಲುವು ಅವಶ್ಯಕತೆ ಇದೆ. ಹೀಗಾಗಿ ಜನರ ಅಭಿಪ್ರಾಯದಿಂದ ಅಭ್ಯರ್ಥಿ ಆಯ್ಕೆ ಅಂತಿಮವಾಗಿದೆ. ಆದರೆ ಕಾಂಗ್ರೆಸ್‌ನಲ್ಲಿ ತಮ್ಮ ಕುಟುಂಬದಲ್ಲೆ ನಾಮಿನೇಟ್ ಮಾಡುತ್ತಾರೆ. ಅದು ಕುಟುಂಬ ರಾಜಕೀಯ. ನಮ್ಮ ಪಕ್ಷದಲ್ಲಿ ಜನರ ಅಭಿಪ್ರಾಯ ಪಡೆಯತ್ತಾರೆ. ನಮ್ಮದು ಪ್ರಜಾಪ್ರಭುತ್ವ ಪಕ್ಷ ಎಂದು ತಿಳಿಸಿದರು. ಇದನ್ನೂ ಓದಿ: ಮಂಗಳೂರಲ್ಲಿ ರೈಲು ಹಳಿ ತಪ್ಪಿಸಲು ಸಂಚು? – ಹಳಿಗಳ ಮೇಲೆ ಕಲ್ಲುಗಳನ್ನಿಟ್ಟು ದುಷ್ಕರ್ಮಿಗಳು ಪರಾರಿ

    ಹುಬ್ಬಳ್ಳಿ ಗಲಭೆ ಕೇಸ್‌ಗಳಲ್ಲಿ ವಿವಿಧ ನ್ಯಾಯಾಲಯದಲ್ಲಿ 17 ಬಾರಿ ಜಾಮೀನು ಅರ್ಜಿ ವಜಾ ಆಗಿತ್ತು. ಸಾಕಷ್ಟು ಬಾರಿ ಸುಪ್ರೀಂ ಕೋರ್ಟ್ನಲ್ಲಿ ಸಹ ಜಾಮೀನು ಅರ್ಜಿ ವಜಾ ಆಗಿತ್ತು. ಗಲಭೆಯಲ್ಲಿ ರಾಷ್ಟ್ರೀಯ ಭದ್ರತಾ ವಿಚಾರ ಸಹ ಕೇಳಿ ಬಂದಿತ್ತು. ಹೀಗಾಗಿ ಇದರಲ್ಲಿ ಎನ್‌ಐಎ ಪ್ರವೇಶ ಆಗಿತ್ತು. ಇಂತಹ ಕೇಸ್‌ಗಳನ್ನು ಸರ್ಕಾರ ವಾಪಸ್ ಪಡೆದು ಗಂಭೀರ ತಪ್ಪು ಮಾಡುತ್ತಿದೆ ಎಂದು ಹರಿಯಾಯ್ದರು. ಇದನ್ನೂ ಓದಿ: ಕಲಬುರಗಿ ಜೈಲಿನೊಳಗೆ ಗುಟ್ಕಾ, ಬೀಡಿ, ಪಾನ್ ಮಸಾಲಾ ಸಾಗಣೆ ಯತ್ನ

  • ಮುಸ್ಲಿಮರ ಋಣ ತೀರಿಸಲು ಕಾಂಗ್ರೆಸ್ ಮುಂದಾಗಿದೆ: ಹುಬ್ಬಳ್ಳಿ ಕೇಸ್ ವಾಪಸ್‌ಗೆ ಅಶೋಕ್ ಕಿಡಿ

    ಮುಸ್ಲಿಮರ ಋಣ ತೀರಿಸಲು ಕಾಂಗ್ರೆಸ್ ಮುಂದಾಗಿದೆ: ಹುಬ್ಬಳ್ಳಿ ಕೇಸ್ ವಾಪಸ್‌ಗೆ ಅಶೋಕ್ ಕಿಡಿ

    ಬೆಂಗಳೂರು: ಮುಸ್ಲಿಮರ ಋಣ ತೀರಿಸುವ ಕೆಲಸಕ್ಕೆ ಕಾಂಗ್ರೆಸ್ (Congress) ಮುಂದಾಗಿದೆ. ಹೀಗಾಗಿ ಮತಬ್ಯಾಂಕ್, ಹಗರಣಗಳನ್ನು ಮರೆಮಾಚಲು ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R Ashok) ಆಕ್ರೋಶ ವ್ಯಕ್ತಪಡಿಸಿದರು.

    ನಗರದ ಫ್ರೀಡಂ ಪಾರ್ಕ್‌ನಲ್ಲಿ (Freedom Park) ರಾಜ್ಯ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಳಿಕ ಬಿಜೆಪಿ ಶಾಸಕರು, ಮುಖಂಡರೊಂದಿಗೆ ರಾಜಭವನಕ್ಕೆ ತೆರಳಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರನ್ನು ಭೇಟಿ ಮಾಡಿ ದೂರು ನೀಡಿದರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ್ರೋಹಿ ಚಟುವಟಿಕೆ, ಪೊಲೀಸರ ಮೇಲೆ ಹಲ್ಲೆ ಮಾಡಿದ ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರ ಮುಚ್ಚಿಹಾಕಿದೆ. ರೈತ ಹೋರಾಟ, ಕನ್ನಡ ಹೋರಾಟಗಳಿಗೆ ಇದನ್ನು ಹೋಲಿಸಬಾರದು. ಕುರ್ಚಿ ಅಲುಗಾಡುತ್ತಿರುವ ಸಮಯದಲ್ಲಿ ಮುಸ್ಲಿಮರು ನನ್ನ ಪರವಾಗಿದ್ದಾರೆ ಹಾಗೂ ಕಾಂಗ್ರೆಸ್‌ಗೆ ಮುಸ್ಲಿಮರ ವೋಟು ಬೇಕೆಂದು ಹೀಗೆ ಮಾಡಲಾಗಿದೆ. ಜೊತೆಗೆ ರೈತರ ವಿರುದ್ಧದ ಪ್ರಕರಣ ವಾಪಸ್ ಪಡೆಯಲು ಸಿ.ಟಿ.ರವಿ ಮನವಿ ಮಾಡಿದ್ದರೂ ಅದಕ್ಕೆ ಸರ್ಕಾರ ಸ್ಪಂದಿಸಿಲ್ಲ ಎಂದು ದೂರಿದರು.ಇದನ್ನೂ ಓದಿ:ಹಕ್ಕಿಯಂತೆ ಹಾರಬಹುದು, ಆಕಾಶದಿಂದ ನಂದಿಬೆಟ್ಟ ನೋಡಬಹುದು – ನಂದಿಗಿರಿಧಾಮದಲ್ಲಿ ಪ್ಯಾರಾಗ್ಲೈಡಿಂಗ್‌ ಆಕರ್ಷಣೆ

    ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ಮಾಡಿದಾಗಲೂ ಇದೇ ರೀತಿ ಮಾಡಿದ್ದಾರೆ. ಇರ‍್ಯಾರೂ ಸ್ವಾತಂತ್ರ‍್ಯ ಹೋರಾಟಗಾರರಲ್ಲ. ಮುಡಾ, ವಾಲ್ಮೀಕಿ ನಿಗಮದ ಹಗರಣದಿಂದ ತಪ್ಪಿಸಿಕೊಳ್ಳಲು ಈ ತಂತ್ರ ಮಾಡಿರಬಹುದು. ಆದರೆ ಬಿಜೆಪಿಯಿಂದ ಈ ಎರಡೂ ಹಗರಣಗಳ ವಿರುದ್ಧ ಹೋರಾಟ ಮುಂದುವರಿಯಲಿದೆ. ಇದರ ಜೊತೆಗೆ ಕೇಂದ್ರ ಸರ್ಕಾರ ಅನುದಾನ ತಾರತಮ್ಯ ಮಾಡಿದೆ ಎಂಬ ಸುಳ್ಳು ಹಬ್ಬಿಸುತ್ತಿದ್ದಾರೆ. ಮೆಟ್ರೊ, ಜಲಜೀವನ್ ಮಿಷನ್, ಉಪನಗರ ರೈಲು ಮೊದಲಾದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಅನುದಾನ ನೀಡಿದ್ದಾರೆ. ಅಷ್ಟು ಆರೋಪ ಮಾಡುವುದಾದರೆ ಶ್ವೇತಪತ್ರ ಬಿಡುಗಡೆಗೊಳಿಸಿ ಎಷ್ಟು ಅನುದಾನ ನೀಡಲಾಗಿದೆ ತಿಳಿಸಲಿ ಎಂದು ಸವಾಲೊಡ್ಡಿದರು.

    224 ಶಾಸಕರಿಗೆ ಎಷ್ಟು ಅನುದಾನ ನೀಡಲಾಗಿದೆ? ಎಂದು ರಾಜ್ಯ ಸರ್ಕಾರ ಪಟ್ಟಿ ನೀಡಲಿ. ಪ್ರತಿ ಜಿಲ್ಲೆಗೆ ತೆರಿಗೆಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಲಿ. ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಹೆಚ್ಚಿದ್ದು, ವಾಹನಗಳ ಸರಾಸರಿ ವೇಗ 17 ಕಿ.ಮೀ.ನಿಂದ 12 ಕಿ.ಮೀ.ಗೆ ಇಳಿದಿದೆ. ರಾಜ್ಯದ ಜನರಿಗೆ ಕಾಂಗ್ರೆಸ್ ಎಷ್ಟು ತಾರತಮ್ಯ ಮಾಡಿದೆ ತಿಳಿಸಲಿ ಎಂದು ಕಿಡಿಕಾರಿದರು.

    ಯಾರು ಯಾವಾಗ ಜೈಲಿಗೆ ಹೋಗುತ್ತಾರೆ? ಯಾವಾಗ ಮರಳಿ ಚುನಾವಣೆ ಬರಲಿದೆ? ಎಂದು ಸಿದ್ದರಾಮಯ್ಯನವರಿಗೆ ಗೊತ್ತಿಲ್ಲ. ಅದಕ್ಕಾಗಿ ಮತ ಕ್ರೋಢೀಕರಣಕ್ಕೆ ಮುಂದಾಗಿದ್ದಾರೆ. ಈ ಸರ್ಕಾರ ಉಳಿಯುವುದಿಲ್ಲ ಎಂದು ಅವರಿಗೂ ಗೊತ್ತಿದೆ. ಅವರ ಶಾಸಕರೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಇನ್ನೂ ಮಾನ ಮರ್ಯಾದೆ ಇದ್ದಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.ಇದನ್ನೂ ಓದಿ: Mumbai | ಲಘು ಮೋಟರ್ ವಾಹನಗಳಿಗೆ ಟೋಲ್ ಫ್ರೀ ಪ್ರವೇಶ: ಸಿಎಂ ಶಿಂಧೆ

    ಮುಸ್ಲಿಮರ ಋಣ ತೀರಿಸುವ ಕೆಲಸಕ್ಕೆ ಕಾಂಗ್ರೆಸ್ ಮುಂದಾಗಿದೆ. ಒಂದು ಕಡೆ ಸಿದ್ದರಾಮಯ್ಯ ಸೈಟು ವಾಪಸ್ ಕೊಟ್ಟರೆ, ಮತ್ತೊಂದೆಡೆ ಮಲ್ಲಿಕಾರ್ಜುನ ಖರ್ಗೆ ಸೈಟು ವಾಪಸ್ ನೀಡಿದ್ದಾರೆ. ಇನ್ನೊಂದೆಡೆ ಸರ್ಕಾರ ಪ್ರಕರಣ ವಾಪಸ್ ಪಡೆದಿದೆ. ಹಿಂದೂಗಳನ್ನು ಟಾರ್ಗೆಟ್ ಮಾಡುವ ಜೊತೆಗೆ ಕ್ರಿಮಿನಲ್‌ಗಳ ಪ್ರಕರಣ ವಾಪಸ್ ಪಡೆದಿದ್ದಾರೆ. ಕನ್ನಡ ಹೋರಾಟಗಾರ ನಾರಾಯಣಗೌಡರನ್ನು ಜೈಲಿಗೆ ಹಾಕಿದ್ದರು. ಆದರೆ ಭಯೋತ್ಪಾದಕರಿಗೆ ಮಾತ್ರ ಪರೋಕ್ಷವಾಗಿ ಬೆಂಬಲ ನೀಡಲಾಗುತ್ತಿದೆ. ಡಿಜೆ ಹಳ್ಳಿ ಗಲಭೆಯಲ್ಲಿ ಭಾಗಿಯಾದವರು ಕಾಂಗ್ರೆಸ್‌ನ ಪದಾಧಿಕಾರಿಗಳಾಗಿದ್ದಾರೆ. ರಾಮೇಶ್ವರಂ ಕೆಫೆಯ ಬಾಂಬ್ ಸ್ಪೋಟ ಪ್ರಕರಣವನ್ನು ಮುಚ್ಚಿಹಾಕುವ ಕೆಲಸ ಮಾಡಿದ್ದಾರೆ ಎಂದು ದೂರಿದರು.

    ಈ ಸರ್ಕಾರ ಟಿಪ್ಪು ಆಡಳಿತ ನೀಡುತ್ತಿದೆ. ಸಿದ್ದರಾಮಯ್ಯನವರು ಟಿಪ್ಪುವನ್ನೇ ಮನೆ ದೇವರಾಗಿ ಮಾಡಿಕೊಂಡಿದ್ದಾರೆ. ಎಂದಿಗೂ ಕುಂಕುಮ ಇಡದ ಸಿದ್ದರಾಮಯ್ಯ ಈಗ ದೇವಸ್ಥಾನಕ್ಕೆ ಹೋಗಿ ಬೊಟ್ಟು ಇಡುತ್ತಿದ್ದಾರೆ. ಕುರ್ಚಿಯಿಂದ ಕೆಳಕ್ಕಿಳಿಯುವುದು ಖಾತರಿಯಾಗಿರುವುದರಿಂದ ದೇವರ ಮೊರೆ ಹೋಗಿದ್ದಾರೆ. ಹಿಂದೂಗಳು ಈಗ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲವಾದರೆ ಮುಸಲ್ಮಾನರೇ ಕಾಂಗ್ರೆಸ್‌ಗೆ ಬಿಗ್‌ಬಾಸ್ ಆಗಿ, ಅವರು ಹೇಳಿದಂತೆಯೇ ಸರ್ಕಾರ ನಡೆದುಕೊಳ್ಳಲಿದೆ ಎಂದು ತಿಳಿಸಿದರು.

    ರಾಜ್ಯಪಾಲರಿಗೆ ಮನವಿ
    ಪ್ರಕರಣ ಹಿಂಪಡೆದ ಕುರಿತು ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ಪತ್ರ ಸಲ್ಲಿಸಲಾಗಿದೆ. ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದ ಬಗ್ಗೆ ಸರ್ಕಾರದ ಬಳಿ ಸ್ಪಷ್ಟನೆ ಕೇಳಲಾಗುವುದು ಎಂದು ರಾಜ್ಯಪಾಲರು ತಿಳಿಸಿದ್ದಾರೆ. ಸರ್ಕಾರದ ಈ ಕ್ರಮದ ವಿರುದ್ಧ ಹುಬ್ಬಳ್ಳಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಇದನ್ನೂ ಓದಿ: 2 ವರ್ಷಗಳ ಹಿಂದೆ ಘೋಷಿಸಿದ್ದ ಎಥೆನಾಲ್ ಘಟಕ ಇನ್ನೂ ಆರಂಭವಾಗಿಲ್ಲ: ಸುಮಲತಾ ಆಪ್ತ ಬೇಸರ

  • ಕಾಂಗ್ರೆಸ್‌ ಸರ್ಕಾರಕ್ಕೆ ಭಯೋತ್ಪಾದಕರೇ ಬಿಗ್ ಬಾಸ್, ಸಿದ್ದರಾಮಯ್ಯ ಮುಸಲ್ಮಾನರ ಬಿಗ್‌ ಬಾಸ್: ಅಶೋಕ್‌ ಲೇವಡಿ

    ಕಾಂಗ್ರೆಸ್‌ ಸರ್ಕಾರಕ್ಕೆ ಭಯೋತ್ಪಾದಕರೇ ಬಿಗ್ ಬಾಸ್, ಸಿದ್ದರಾಮಯ್ಯ ಮುಸಲ್ಮಾನರ ಬಿಗ್‌ ಬಾಸ್: ಅಶೋಕ್‌ ಲೇವಡಿ

    ಬೆಂಗಳೂರು: ಟಿವಿ ಶೋ ಬಿಗ್ ಬಾಸ್ ಕಾರ್ಯಕ್ರಮಕ್ಕೆ (Bigg Boss TV Show) ಸುದೀಪ್ ಬಿಗ್ ಬಾಸ್. ಆದ್ರೆ ಈ ಕಾಂಗ್ರೆಸ್‌ ಸರ್ಕಾರಕ್ಕೆ ಭಯೋತ್ಪಾದಕರೇ ಬಿಗ್ ಬಾಸ್. ಸಿದ್ದರಾಮಯ್ಯ ಮುಸಲ್ಮಾನರ ಬಿಗ್‌ಬಾಸ್ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ (R Ashoka) ಲೇವಡಿ ಮಾಡಿದ್ದಾರೆ.

    ರಾಜ್ಯ ಸರ್ಕಾರದಿಂದ ಹುಬ್ಬಳ್ಳಿ ಗಲಭೆ ಕೇಸ್‌ (Hubballi Riot Case) ವಾಪಸ್‌ಗೆ ನಿರ್ಧಾರ ಖಂಡಿಸಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು, ಟಿವಿ ಶೋ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸುದೀಪ್ ಬಿಗ್ ಬಾಸ್. ಆದ್ರೆ ಈ ಕಾಂಗ್ರೆಸ್‌ ಸರ್ಕಾರಕ್ಕೆ ಭಯೋತ್ಪಾದಕರೇ ಬಿಗ್ ಬಾಸ್. ಸಿದ್ದರಾಮಯ್ಯ (Siddaramaiah) ಮುಸಲ್ಮಾನರ ಬಿಗ್‌ಬಾಸ್. ಭಾರತಕ್ಕೆ ಅಪಮಾನ ಮಾಡುವ ಕೆಲಸ ಮಾಡ್ತಿರೋರೇ ಹೆಚ್ಚು ಇವರಿಗೆ. ಇವರು ಸಿಎಂ ಸ್ಥಾನದಲ್ಲಿ ಕೂತು ಕಾನೂನು ಕಾಪಾಡುವ ಕೆಲಸ ಮಾಡ್ತಿಲ್ಲ. ಮುಡಾ ಸೈಟು ವಾಪಸ್, ಖರ್ಗೆ ಸಿಎ ಸೈಟು ವಾಪಸ್, ಈಗ ಕೇಸ್ ವಾಪಸ್. ಮುಸಲ್ಮಾನರ ಓಲೈಕೆಯಿಂದ ಅಧಿಕಾರದಲ್ಲಿ ಉಳ್ಕೋತಾರೆ ಅನ್ಕೊಂಡಿದ್ದಾರೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಕೇಸ್‌ ವಾಪಸ್‌ ಪಡೆಯುವ ಸರ್ಕಾರದ ನಿರ್ಧಾರಕ್ಕೆ ಖಂಡನೆ – ಭುಗಿಲೆದ್ದ ಬಿಜೆಪಿ ಪ್ರತಿಭಟನೆ

    ಹಿಂದೂಗಳ ಮೇಲಿನ ಕೇಸ್ ವಾಪಸ್ ತಗೋತಾರಾ? ಕನ್ನಡ ಪರ ಹೋರಾಟಗಾರರ ಕೇಸ್ ವಾಪಸ್ ತಗೋತಾರಾ? ಕರ್ನಾಟಕ ರಕ್ಷಣ ವೇದಿಕೆ ನಾರಾಯಣ ಗೌಡಗೆ ತಿಂಗಳಾನುಗಟ್ಟಲೆ ಜೈಲಿಗೆ ಹಾಕಿದ್ರು. ಆದ್ರೆ ಠಾಣೆ ಕಲ್ಲೆಸೆದವರ ಕೇಸ್ ವಾಪಸ್ ಪಡೆದ್ರು. ಇವರ ಯೋಗ್ಯತೆ ಏನು ಅಂತ ಗೊತ್ತಾಯ್ತಲ್ಲ. ಕುಲಕರ್ಣಿ ವಿರುದ್ಧ ಕ್ರಮ ಇಲ್ಲ, ಮುನಿರತ್ನ ಕೂಡಲೇ ಬಂಧನವಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಎಸ್‌ಸಿಒ ಶೃಂಗಸಭೆ – ಮಂಗಳವಾರ ಪಾಕ್‌ಗೆ ಪ್ರಯಾಣಿಸಲಿದ್ದಾರೆ ಭಾರತದ ವಿದೇಶಾಂಗ ಸಚಿವ ಜೈಶಂಕರ್‌

    ಇದೇ ವೇಳೆ ನಾಗಮಂಗಲ ಪ್ರಕರಣದ ಕುರಿತು ಮಾತನಾಡಿದ ಅಶೋಕ್‌, ಗಣಪತಿಯನ್ನೇ ಅರೆಸ್ಟ್ ಮಾಡಿದ ನೀಚರು ಇವರು. ನಾಗಮಂಗಲ ಪ್ರಕರಣದಲ್ಲಿ ಹಿಂದೂಗಳೇ ಮೊದಲ ಆರೋಪಿಗಳು. ಇದು ಪಕ್ಕಾ ಟಿಪ್ಪು ಸುಲ್ತಾನ್ ಸರ್ಕಾರ. ಸಿದ್ದರಾಮಯ್ಯ ಪದೇ ಪದೇ ಚಾಮುಂಡಿ ಕಾಪಾಡ್ತಾಳೆ ಅಂತಿದ್ರು. ಚಾಮುಂಡಿ ಮೇಲೆ ಪ್ರೀತಿ ಇದ್ದಿದ್ರೇ ಮೈಸೂರು ಏರ್‌ಪೋರ್ಟ್‌ಗೆ ಚಾಮುಂಡೇಶ್ವರಿ ಹೆಸರಿಡ್ಬೇಕಾಗಿತ್ತು. ಏರ್‌ಪೋರ್ಟ್‌ಗೆ ಯಾಕೆ ಟಿಪ್ಪು ಸುಲ್ತಾನ್ ಹೆಸರು ಇಡಲು ಹೋಗಿದ್ರು? ಎಂದು ಪ್ರಶ್ನೆ ಮಾಡಿದರು.

    ಟಿಪ್ಪು ಹೆಸರು ಇಡಲು ಹೋದಾಗ ನಾವು ತಡೆದ್ವಿ. ಈಗ ಕುರ್ಚಿ ಖಾಲಿ ಆಗುತ್ತೆ ಅಂತ ಚಾಮುಂಡೇಶ್ವರಿ ಜಪ ಮಾಡ್ತಿದ್ದಾರೆ. ಇದು ತುಘಲಕ್ ಸರ್ಕಾರ. ಗಲಭೆಕೋರರಿಗೆ ಬೆಂಬಲಿಸುವ ಸರ್ಕಾರ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕುಖ್ಯಾತ ದರೋಡೆಕೋರ ಬಿಷ್ಣೋಯ್‌ನನ್ನು ಮುಂಬೈ ಪೊಲೀಸರು ಯಾಕೆ ಕಸ್ಟಡಿಗೆ ಪಡೆಯಲು ಸಾಧ್ಯವಾಗುತ್ತಿಲ್ಲ?

  • ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ 43 ಕೇಸ್ ವಾಪಸ್ ಪಡೆಯುವ ತೀರ್ಮಾನ ಆಗಿದೆ: ಸಚಿವ ಪರಮೇಶ್ವರ್‌

    ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ 43 ಕೇಸ್ ವಾಪಸ್ ಪಡೆಯುವ ತೀರ್ಮಾನ ಆಗಿದೆ: ಸಚಿವ ಪರಮೇಶ್ವರ್‌

    -ಕಣ್ಮುಚ್ಚಿಕೊಂಡು ಯಾವುದೇ ಕೇಸ್ ವಾಪಸ್ ಪಡೆಯಲ್ಲ; ವಿಪಕ್ಷಗಳಿಗೆ ತಿರುಗೇಟು

    ಬೆಂಗಳೂರು: ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ 43 ಕೇಸ್ ವಾಪಸ್ ಪಡೆಯುವ ತೀರ್ಮಾನ ಆಗಿದೆ. ಕಣ್ಮುಚ್ಚಿಕೊಂಡು ಯಾವುದೇ ಕೇಸ್ ವಾಪಸ್ ಪಡೆಯಲ್ಲ. ನಿಯಮಾನುಸಾರ ವಾಪಸ್ ಪಡೆಯುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ (G Parameshwar) ಹೇಳಿದ್ದಾರೆ.

    ಈ ಬಗ್ಗೆ ಬೆಂಗಳೂರಿನಲ್ಲಿ (Bengaluru) ಮಾಧ್ಯಗಳೊಂದಿಗೆ ಮಾತನಾಡಿದ ಅವರು, ಸುಳ್ಳು ಕೇಸ್‌ಗಳನ್ನು ಹಾಕಿದ್ರೆ ಪರಿಶೀಲಿಸಿ ವಾಪಸ್ ಪಡೆಯಲು ಸರ್ಕಾರಕ್ಕೆ ಅವಕಾಶ ಇದೆ. ಯಾರೋ ಹೇಳಿದ್ರು ಅಂತ ಕೇಸ್ ವಾಪಸ್ ಪಡೆಯಲ್ಲ. ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ 43 ಕೇಸ್ ವಾಪಸ್ ಮಾಡುತ್ತೇವೆ. ಇದರಲ್ಲಿ ಕೇವಲ ಅಲ್ಪಸಂಖ್ಯಾತರಷ್ಟೇ ಇಲ್ಲ, ವಿದ್ಯಾರ್ಥಿಗಳು, ರೈತರು ಇದ್ದಾರೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಕೇಸ್‌ಗಳನ್ನೂ ಪರಿಶೀಲನೆ ಮಾಡುತ್ತೇವೆ. ಕಣ್ಮುಚ್ಚಿಕೊಂಡು ಯಾವುದೇ ಕೇಸ್ ವಾಪಸ್ ಪಡೆಯಲ್ಲ ನಿಯಮಾನುಸಾರ ವಾಪಸ್ ಪದೆಯುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಕುಖ್ಯಾತ ದರೋಡೆಕೋರ ಬಿಷ್ಣೋಯ್‌ನನ್ನು ಮುಂಬೈ ಪೊಲೀಸರು ಯಾಕೆ ಕಸ್ಟಡಿಗೆ ಪಡೆಯಲು ಸಾಧ್ಯವಾಗುತ್ತಿಲ್ಲ?

    ಹುಬ್ಬಳ್ಳಿ ಗಲಭೆ ಕೇಸ್‌ಗಳು ವಾಪಸ್ ವಿಚಾರವಾಗಿ ಮಾತನಾಡಿ, ಕೇಸ್‌ಗಳನ್ನು ವಾಪಸ್ ಪಡೆಯಲು ಯಾರಾದರೂ ಮನವಿ ಮಾಡ್ತಾರೆ. ಆಗ ನಾವು ಅದರ ಪರಿಶೀಲನೆಗೆ ಸಂಪುಟ ಉಪಸಮಿತಿ ಮಾಡುತ್ತೇವೆ. ಸಂಬಂಧಿಸಿದ ಇಲಾಖೆಗೆ ಮಾಹಿತಿ ಕೇಳುತ್ತೇವೆ. ನಂತರ ಸಂಪುಟ ಉಪಸಮಿತಿ ಅದರ ಬಗ್ಗೆ ತೀರ್ಮಾನ ಮಾಡುತ್ತದೆ. ವಾಪಸ್ ತಗೋಬೇಕಾ ಬೇಡವಾ ಎಂದು ಉಪಸಮಿತಿ ನಿರ್ಧರಿಸುತ್ತೆ. ಹುಬ್ಬಳ್ಳಿ ಕೇಸ್‌ಗಳೂ ಅಷ್ಟೊಂದು ಜನರ ಮೇಲೆ ಹಾಕುವ ಅಗತ್ಯವಿಲ್ಲ ಅಂತ ಸಂಪುಟ ಉಪಸಮಿತಿ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ. ನಂತರ ಸಂಪುಟ ಸಭೆಯಲ್ಲಿ ಕೇಸ್‌ಗಳನ್ನು ವಾಪಸ್ ಪಡೆಯುವ ನಿರ್ಧಾರ ಆಗಿದೆ. ಇದನ್ನು ಕೋರ್ಟಿಗೆ ಕಳಿಸುತ್ತೇವೆ. ಕೋರ್ಟ್ ಒಪ್ಪಿಕೊಂಡರೆ ಆ ಕೇಸ್‌ಗಳು ವಾಪಸ್ ಆಗುತ್ತವೆ. ಇದನ್ನು ಬಿಜೆಪಿ ರಾಜಕೀಯ ಮಾಡುತ್ತಿದೆ. ಬಿಜೆಪಿ ಇದ್ದಾಗಲೂ ಹಲವು ಕೇಸ್‌ಗಳನ್ನು ವಾಪಸ್ ಪಡೆದಿತ್ತು ಎಂದರು. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಕೇಸ್‌ ವಾಪಸ್‌ ಪಡೆಯುವ ಸರ್ಕಾರದ ನಿರ್ಧಾರಕ್ಕೆ ಖಂಡನೆ – ಭುಗಿಲೆದ್ದ ಬಿಜೆಪಿ ಪ್ರತಿಭಟನೆ

    ಯುಪಿಯಲ್ಲಿ (Uttat Pradesh) ಅಲ್ಲಿನ ಸಿಎಂ ವಿರುದ್ಧವೇ ಹಲವು ಕೇಸ್‌ಗಳಿದ್ದವು. ಅದನ್ನೆಲ್ಲ ಅವರು ವಾಪಸ್ ಪಡೆದುಕೊಂಡರು. ಈಗ ಹುಬ್ಬಳ್ಳಿ ಕೇಸ್‌ಗಳನ್ನು ವಾಪಸ್ ಪಡೆಯಲು ಕೋರ್ಟ್ ಒಪ್ಪುತ್ತೋ ಇಲ್ವೋ ಗೊತ್ತಿಲ್ಲ. ನಿಯಮಾನುಸಾರ ಕೇಸ್‌ಗಳನ್ನು ವಾಪಸ್ ಪಡೆಯಬಹುದು. ಹುಬ್ಬಳ್ಳಿ ಕೇಸ್‌ನಲ್ಲಿ ಒಟ್ಟು 56 ಕೇಸ್‌ಗಳಿದ್ದು 43 ನ್ನು ವಾಪಸ್ ಪಡೆಯುವ ತೀರ್ಮಾನ ಆಗಿದೆ. ಬಿಜೆಪಿ ಎಲ್ಲವನ್ನೂ ರಾಜಕೀಯ ಮಾಡಲು ಹೋಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: Bengaluru | ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ – ಕಾರಣ ಏನು?

    ಸಿದ್ಧಾರ್ಥ ವಿಹಾರ ಟ್ರಸ್ಟ್‌ನಿಂದ 5 ಎಕರೆ ಸಿಎ ನಿವೇಶನ ವಾಪಸ್ ಮಾಡಿದ ವಿಚಾರವಾಗಿ ಮಾತನಾಡಿ, ಇಲ್ಲಿ ತಪ್ಪಾಗಿದೆ ಎಂದು ಅವರು ಭೂಮಿ ವಾಪಸ್ ಮಾಡಿಲ್ಲ. ಕಾನೂನು ಉಲ್ಲಂಘನೆ ಆಗಿರಲಿಲ್ಲ. ಆದರೂ ವಿವಾದ ಸೃಷ್ಟಿಸಲಾಗಿದೆ. ಆಪಾದನೆ ಮಾಡಿದ್ದಕ್ಕೆ ಅವರು ಭೂಮಿ ಬೇಡ ಅಂತ ವಾಪಸ್ ಮಾಡಿದ್ದಾರೆ. ಬಿಜೆಪಿಯವರಿಗೆ ಕಾಮಾಲೆ ಕಣ್ಣು, ಎಲ್ಲವನ್ನೂ ಹಳದಿಯಾಗೇ ಕಾಣ್ಸತ್ತೆ. ಅವರಿಗೆ ಬೇರೆ ಬಣ್ಣ ಕಾಣಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಬೀದರ್ – ಬಿಜೆಪಿ ಮುಖಂಡ, ಉದ್ಯಮಿ ಸಂಜೀವಕುಮಾರ್ ಸುಗೂರೆ ನಾಪತ್ತೆ

    ಅ.15 ರಂದು ಕೆ ಸಿ ವೇಣುಗೋಪಾಲ ರಾಜ್ಯಕ್ಕೆ ಆಗಮನ ವಿಚಾರವಾಗಿ ಮಾತನಾಡಿ, ನಾಳೆ ಕೇಂದ್ರದ ಪಿಎಸಿ ಕಮಿಟಿ ರಾಜ್ಯಕ್ಕೆ ಬರುತ್ತಿದೆ. ರಾಜ್ಯಕ್ಕೆ ಬಂದಾಗ ಸರ್ಕಾರ, ಪಕ್ಷದ ಕೆಲಸಗಳನ್ನು ಗಮನಿಸುತ್ತಾರೆ. ಇಲ್ಲಿ ಏನಾಗುತ್ತಿದೆ ಎಂದು ಸಹಜವಾಗಿ ಗಮನಿಸುತ್ತಾರೆ. ನಾನು ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡುವ ಅಜೆಂಡಾ ಇಲ್ಲ ಎಂದರು. ಇದನ್ನೂ ಓದಿ: ಎಸ್‌ಸಿಒ ಶೃಂಗಸಭೆ – ಮಂಗಳವಾರ ಪಾಕ್‌ಗೆ ಪ್ರಯಾಣಿಸಲಿದ್ದಾರೆ ಭಾರತದ ವಿದೇಶಾಂಗ ಸಚಿವ ಜೈಶಂಕರ್‌

  • ಹುಬ್ಬಳ್ಳಿ ಗಲಭೆ ಕೇಸ್‌ ವಾಪಸ್‌ ಪಡೆಯುವ ಸರ್ಕಾರದ ನಿರ್ಧಾರಕ್ಕೆ ಖಂಡನೆ – ಭುಗಿಲೆದ್ದ ಬಿಜೆಪಿ ಪ್ರತಿಭಟನೆ

    ಹುಬ್ಬಳ್ಳಿ ಗಲಭೆ ಕೇಸ್‌ ವಾಪಸ್‌ ಪಡೆಯುವ ಸರ್ಕಾರದ ನಿರ್ಧಾರಕ್ಕೆ ಖಂಡನೆ – ಭುಗಿಲೆದ್ದ ಬಿಜೆಪಿ ಪ್ರತಿಭಟನೆ

    – ಸರ್ಕಾರಕ್ಕೆ ಅಲ್ಪಸಂಖ್ಯಾತರ ಮೇಲಿನ ಪ್ರೀತಿ ಹೆಚ್ಚಾಗಿದೆ
    – ಸಿದ್ದರಾಮಯ್ಯ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹ

    ಬೆಂಗಳೂರು: ಹುಬ್ಬಳ್ಳಿ ಗಲಭೆ ಪ್ರಕರಣವನ್ನು (Hubballi Riots Case) ವಾಪಸ್‌ ಪಡೆಯುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ಇದರ ಭಾಗವಾಗಿ ಬೆಂಗಳೂರಿನ (Bengaluru) ಫ್ರೀಡಂ ಪಾರ್ಕ್‌ನಲ್ಲೂ ರಾಜ್ಯಬಿಜೆಪಿ ಘಟಕ ಪ್ರತಿಭಟನೆ ನಡೆಸಿದೆ. ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra), ವಿಪಕ್ಷ ನಾಯಕ ಆರ್.ಅಶೋಕ್, ಅಶ್ವಥ್ ನಾರಾಯಣ, ಶಾಸಕರಾದ ಎಸ್‌.ಆರ್ ವಿಶ್ವನಾಥ್, ಸಿ.ಕೆ ರಾಮಮೂರ್ತಿ, ರವಿ ಸುಬ್ರಹ್ಮಣ್ಯ, ಸಂಸದ ಕಾರಜೋಳ, ಎಮ್‌ಎಲ್‌ಸಿ ರವಿಕುಮಾರ್ ಮೊದಲಾದ ನಾಯಕರು ಪಾಲ್ಗೊಂಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ಆಕ್ರೋಶ ಹೊರಹಾಕಿದ್ದಾರೆ.

    ಹುಬ್ಬಳ್ಳಿ ಗಲಭೆ ಪ್ರಕರಣವನ್ನು ರಾಜ್ಯ ಸರ್ಕಾರ ವಾಪಸ್‌ ಪಡೆಯಲು ನಿರ್ಧಾರ ಕೈಗೊಂಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ (Cabinet Meeting) ಹುಬ್ಬಳ್ಳಿ ಗಲಭೆಯಲ್ಲಿ ದಾಖಲಾಗಿದ್ದವರ ಮೇಲಿನ ಪ್ರಕರಣ ವಾಪಸ್‌ ಪಡೆಯುವ ನಿರ್ಧಾರ ಕೈಗೊಂಡಿದ್ದಕ್ಕೆ ಬಿಜೆಪಿ (BJP) ಆಕ್ರೋಶ ವ್ಯಕ್ತಪಡಿಸಿದೆ. ಇದನ್ನೂ ಓದಿ: ಎಸ್‌ಸಿಒ ಶೃಂಗಸಭೆ – ಮಂಗಳವಾರ ಪಾಕ್‌ಗೆ ಪ್ರಯಾಣಿಸಲಿದ್ದಾರೆ ಭಾರತದ ವಿದೇಶಾಂಗ ಸಚಿವ ಜೈಶಂಕರ್‌

    ಪ್ರತಿಭಟನೆ ವೇಳೆ ವಿಧಾನ ಪರಿಷತ್‌ ಸದಸ್ಯ ರವಿಕುಮಾರ್‌ ಮಾತನಾಡಿ, ಆವತ್ತು ಹುಬ್ಬಳ್ಳಿ ಪೊಲೀಸ್ ಠಾಣೆ ಮುಂದೆ ಅಲ್ಪಸಂಖ್ಯಾತರು ಪ್ರತಿಭಟನೆ ನಡೆಸಿದ್ದು, ಕಲ್ಲೆಸೆದಿದ್ದರು, ಪೊಲೀಸರ ಕಾಲರ್ ಹಿಡಿದು, ಹಲ್ಲೆ ಮಾಡಿದರು. ಇದೆಲ್ಲ ಕ್ರಿಮಿನಲ್ ಕೇಸ್‌ಗಳು, ಇದನ್ನೆಲ್ಲ ಸರ್ಕಾರ ವಾಪಸ್ ಪಡೆದಿದೆ. ಈ ಸರ್ಕಾರಕ್ಕೆ ಅಲ್ಪಸಂಖ್ಯಾತರ ಮೇಲೆ ವಿಪರೀತ ಪ್ರೀತಿ, ಇದೇ ತುಷ್ಟೀಕರಣ ನೀತಿ. ಈ ಗಲಭೆಕೋರ ಗುಂಪಿನಲ್ಲಿ ಪಿಎಫ್‌ಐ ಸದಸ್ಯರು ಇದ್ದರು ಎನ್ನಲಾಗಿದೆ, ಎನ್‌ಐಎಗೆ ಈ ಗುಂಪಿನ ಮೇಲೆ ಅನುಮಾನ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

    ಮುಖ್ಯಮಂತ್ರಿಗಳು ಸಿ.ಟಿ ರವಿ, ಪ್ರಹ್ಲಾದ್‌ ಜೋಶಿ ಮೇಲಿನ ಕೇಸ್ ವಾಪಸ್ ಪಡೀಲಿಲ್ವಾ ಅಂತಾರೆ, ಸಿಟಿ ರವಿ, ಜೋಶಿ ಭಯೋತ್ಪಾದಕರಾ? ಪ್ರಹ್ಲಾದ್ ಜೋಶಿ, ಭಯೋತ್ಪಾದಕ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯರನ್ನ ಬಂಧಿಸಿ, ವಿಚಾರಣೆಗೆ ಒಳಪಡಿಸಿ – ಲೋಕಾಯುಕ್ತಕ್ಕೆ ಸ್ನೇಹಮಯಿ ಕೃಷ್ಣ ಮನವಿ

  • ಎನ್‌ಐಎಗೆ ನೀಡಿರುವ ಪ್ರಕರಣ ವಾಪಸ್ ಪಡೆಯಲು ಸರ್ಕಾರಕ್ಕೆ ಅಧಿಕಾರ ಇಲ್ಲ: ಬಸವರಾಜ ಬೊಮ್ಮಾಯಿ

    ಎನ್‌ಐಎಗೆ ನೀಡಿರುವ ಪ್ರಕರಣ ವಾಪಸ್ ಪಡೆಯಲು ಸರ್ಕಾರಕ್ಕೆ ಅಧಿಕಾರ ಇಲ್ಲ: ಬಸವರಾಜ ಬೊಮ್ಮಾಯಿ

    – ಹುಬ್ಬಳ್ಳಿ ಕೇಸ್‌ ವಾಪಸ್ ಪಡೆದದ್ದು ರಾಜ್ಯ ಸರ್ಕಾರದಿಂದ ತುಷ್ಟ್ರೀಕರಣದ ರಾಜಕಾರಣ

    ಬೆಂಗಳೂರು: ರಾಜ್ಯ ಸರ್ಕಾರ ಹುಬ್ಬಳ್ಳಿಯ ಪೊಲೀಸ್‌ ಸ್ಟೇಷನ್ ಮೇಲೆ ದಾಳಿ ಮಾಡಿರುವ ಪ್ರಕರಣವನ್ನು ಎನ್‌ಐಎ ತನಿಖೆ ನಡೆಸುತ್ತಿದ್ದು, ರಾಜ್ಯ ಸರ್ಕಾರ ವಾಪಸ್‌ ಪಡೆಯುವ ಮೂಲಕ ತುಷ್ಠಿಕರಣ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಆರೋಪಿಸಿದ್ದಾರೆ.

    ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೊಲೀಸ್ ಸ್ಟೇಷನ್ ಮೇಲೆ ದಾಳಿ ಮಾಡಿದ್ದು, ರಾಜ್ಯದ ಮೇಲಿನ ದಾಳಿಯಾಗಿದೆ. ಇದು ಗಂಭೀರವಾದ ಪ್ರಕರಣ. ಇದನ್ನು ಎನ್‌ಐಎಗೆ ನೀಡಲಾಗಿದ್ದು, ಚಾರ್ಜ್‌ಶೀಟ್ ಆಗಿದೆ. ಯುಎಪಿಐ ಅಡಿ ಎನ್‌ಐಎಗೆ ತನಿಖೆಗೆ ನೀಡುವಂತಹ ಪ್ರಕರಣವನ್ನು ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ. ಈಗ ಇವರು ಸಮಾಜವನ್ನು ಸಂತುಷ್ಟಿ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಎನ್‌ಐಎಗೆ (NIA) ನೀಡಿರುವ ಪ್ರಕರಣವನ್ನು ವಾಪಸ್ ಪಡೆಯಲು ಬರುವುದಿಲ್ಲ ಎಂದು ರಾಜ್ಯ ಸರ್ಕಾರಕ್ಕೂ ಗೊತ್ತಿದೆ. ಆದರೂ, ತುಷ್ಠೀಕರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ವಿಜಯೇಂದ್ರ ಏನು ಪುರೋಹಿತನಾ, ಜ್ಯೋತಿಷಿನಾ?: ಸಿಎಂ ಸಿದ್ದರಾಮಯ್ಯ

    ರಾಜ್ಯ ಸರ್ಕಾರ ದೊಡ್ಡ ತಪ್ಪು ಸಂದೇಶ ರವಾನೆ ಮಾಡುತ್ತಿದೆ. ರಾಜ್ಯದಲ್ಲಿ ಡಿಜೆ ಹಳ್ಳಿ ಕೆಜೆ ಹಳ್ಳಿ ಪ್ರಕರಣ, ಮಂಗಳೂರಿನಲ್ಲಿ ಗಲಭೆ, ಹುಬ್ಬಳ್ಳಿಯಲ್ಲಿ ಪೊಲೀಸ್ ಸ್ಟೇಶನ್ ಮೇಲೆ ದಾಳಿ ಮಾಡಲಾಗಿದೆ. ಹಾಗಿದ್ದರೆ ಇನ್ನು ಮುಂದೆ ಪೊಲೀಸ್ ಸ್ಟೇಶನ್ ಮೇಲೆ ದಾಳಿ ಮಾಡಿದರೆ ಪೊಲೀಸರು ಏನೂ ಮಾಡುವಂತಿಲ್ಲವೇ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರ ತಮ್ಮ ರಕ್ಷಣೆ ಮಾಡಿಕೊಳ್ಳದಂತಹ ಪರಿಸ್ಥಿತಿಗೆ ಬಂದಿದೆ. ನನ್ನ ಪ್ರಕಾರ ಕಾನೂನು ಸುವ್ಯವಸ್ಥೆ ಕಿತ್ತು ಹೋಗಿದೆ. ಈ ಥರ ಒಂದು ಕಾನೂನಾತ್ಮಕ ಚಿಂತನೆಯನ್ನೂ ರಾಜ್ಯ ಸರ್ಕಾರ ಕಳೆದುಕೊಂಡಿದೆಯಲ್ಲ ಎಂದು ಖೇದ ಅನಿಸುತ್ತಿದೆ. ತಮ್ಮ ತಪ್ಪು ಹಾಗೂ ಹಗರಣಗಳನ್ನು ಮುಚ್ಚಿಕೊಳ್ಳಲು ಈ ರೀತಿಯ ಆತುರದ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

    ಸರ್ಕಾರ ಹುಬ್ಬಳ್ಳಿ ಕೇಸ್‌ (Hubballi Riots) ವಾಪಸ್‌ ಪಡೆದಿರುವುದನ್ನು ವಿರೋಧಿಸಿ ಬಿಜೆಪಿಯವರು ಶಾಂತಿಯುತವಾಗಿ ಮನವಿ ಸಲ್ಲಿಸಲು ತೀರ್ಮಾನಿಸಿದ್ದರೂ, ಪೊಲೀಸರು ಅನುಮತಿ ನೀಡದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ಪೊಲೀಸ್ ರಾಜ್ಯವಾಗಿದೆ. ಇಲ್ಲಿ ಪಜಾಪಭುತ್ವ ಇಲ್ಲದಾಗಿದೆ ಎಂದರು. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದು ಸಿಎಂ ಭಯೋತ್ಪಾದಕರ ಬೆಂಬಲಿಗ: ಜೋಶಿ ವಾಗ್ದಾಳಿ

    ರಾಜ್ಯ ಸರ್ಕಾರ ದುಷ್ಟರ ಸಂಹಾರ ಮಾಡುವ ಬಗ್ಗೆ ಜಾಹೀರಾತು ನೀಡಿರುವ ಕುರಿತು ಪ್ರತಿಕ್ರಿಯಿಸಿ, ಇದು ಅಪರಾಧಿ ಮನೋಭಾವ. ತಾವು ಏನೂ ತಪ್ಪು ಮಾಡಿಲ್ಲ ಎಂಬ ಭಾವನೆ ಮೂಡಿಸುವ ಸಲುವಾಗಿ ಇತರರನ್ನು ದುಷ್ಟರು ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ರೀತಿ ಹಿಂದೆ ಆಗಿರಲಿಲ್ಲ. ಸರ್ಕಾರಿ ಜಾಹೀರಾತನ್ನು ತಮ್ಮ ಸ್ವಂತ ರಾಜಕಾರಣಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು ಇದೇ ಪಥಮ. ಇದು ಅತ್ಯಂತ ಖಂಡನೀಯ ಎಂದು ಬೇಸರಿಸಿದರು.

  • ಸಿದ್ದರಾಮಯ್ಯ ಗೋಮುಖ ವ್ಯಾಘ್ರ – ವಿಪಕ್ಷ ನಾಯಕ ಅಶೋಕ್‌ ಲೇವಡಿ

    ಸಿದ್ದರಾಮಯ್ಯ ಗೋಮುಖ ವ್ಯಾಘ್ರ – ವಿಪಕ್ಷ ನಾಯಕ ಅಶೋಕ್‌ ಲೇವಡಿ

    ಬೆಂಗಳೂರು: ಮುಸ್ಲಿಂ ಭಯೋತ್ಪಾದಕರಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದು ರೀತಿ ಹಬ್ಬ. ಹಿಂದೆಯೂ ಅನೇಕ ಗಲಭೆ ಕೇಸ್ ವಾಪಸ್ ಪಡೆದು ಅಧಿಕಾರ ಕಳ್ಕೊಂಡ್ರು. ಈಗಲೂ ಹುಬ್ಬಳ್ಳಿ ಗಲಭೆ ಕೇಸ್ ಗಳನ್ನು ವಾಪಸ್ ಪಡೆದಿದ್ದಾರೆ. ಸಿದ್ದರಾಮಯ್ಯ ಗೋಮುಖ ವ್ಯಾಘ್ರ, ಈ ಥರಹದ ಬೆಳವಣಿಗೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತ ಆಗಲಿದೆ. ಕಾನೂನು ಸುವ್ಯವಸ್ಥೆ ಹದಗೆಡಲಿದೆ ಎಂದು ವಿಪಕ್ಷ ನಾಯಕ ಆರ್.‌ ಅಶೋಕ್‌ ಲೇವಡಿ ಮಾಡಿದ್ದಾರೆ.

    ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಸರ್ಕಾರದಿಂದ ವಾಪಸ್‌ ಪಡೆದಿರುವ ಬಗ್ಗೆ ಸಿಎಂ ಹೇಳಿಕೆಯನ್ನು ಬಿಜೆಪಿ ಖಂಡಿಸಿದೆ. ಈ ಸಂಬಂಧ ವಿಪಕ್ಷ ನಾಯಕ ಆರ್.‌ ಅಶೋಕ್‌ ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಇದನ್ನೂ ಓದಿ: ವಿವಾದದ ಬಳಿಕ ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ ನೀಡಿದ್ದ ಸಿಎ ನಿವೇಶನ ವಾಪಸ್ ನೀಡಿದ ಖರ್ಗೆ ಕುಟುಂಬ

    ಮುಸ್ಲಿಂ ಭಯೋತ್ಪಾದಕರಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದು ರೀತಿ ಹಬ್ಬ. ಹಿಂದೆಯೂ ಅನೇಕ ಗಲಭೆ ಕೇಸ್ ವಾಪಸ್ ಪಡೆದು ಅಧಿಕಾರ ಕಳ್ಕೊಂಡ್ರು. ಈಗಲೂ ಹುಬ್ಬಳ್ಳಿ ಗಲಭೆ ಕೇಸ್ ಗಳನ್ನು ವಾಪಸ್ ಪಡೆದಿದ್ದಾರೆ. ಸರ್ಕಾರದ ಈ ನಡೆ ಪೊಲೀಸರ ಸ್ಥೈರ್ಯ ಕುಂದಿಸುವ ಕೆಲಸ. ಪೊಲೀಸರಿಗೇ ಈಗ ಅನಿಸಿಬಿಟ್ಟಿದೆ, ಈ ಸಮುದಾಯದವರ ಮೇಲೆ ದೂರು ದಾಖಲಿಸಬಾರದು ಅಂತ. ಸರ್ಕಾರ ಮತಾಂಧ ಶಕ್ತಿಗಳಿಗೆ ಪ್ರಚೋದನೆ ಕೊಡ್ತಿದೆ. ಇದರ ಬಗ್ಗೆ ಬಿಜೆಪಿಯಿಂದ ಹೋರಾಟ ನಡೆಸುವ ಬಗ್ಗೆ ಚರ್ಚೆ ಮಾಡ್ತೇವೆ. ಈಗಾಗಲೇ ರಾಜ್ಯದಲ್ಲಿ ಪಾಕ್, ಬಾಂಗ್ಲಾದಿಂದ ಅಕ್ರಮವಾಗಿ ಬಂದಿರುವವರನ್ನು ಬಂಧಿಸಿದ್ದಾರೆ. ಇವರ ಮೇಲಿನ ಕೇಸ್‌ಗಳನ್ನೂ ವಾಪಸ್ ಪಡೆದುಕೊಳ್ಳಿ. ಸಿದ್ದರಾಮಯ್ಯ ಗೋಮುಖ ವ್ಯಾಘ್ರ, ಈ ಥರಹದ ಬೆಳವಣಿಗೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತ ಆಗಲಿದೆ. ಕಾನೂನು ಸುವ್ಯವಸ್ಥೆ ಹದಗೆಡಲಿದೆ ಎಂದು ಲೇವಡಿ ಮಾಡಿದ್ದಾರೆ.

    ಇನ್ನೂ ತೆರಿಗೆ ಪಾಲಿನಲ್ಲಿ ತಾರತಮ್ಯ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದುವರೆಗೆ ಕೇಂದ್ರದಿಂದ ಕೊಟ್ಟ ಹಣವನ್ನು ಈ ಸರ್ಕಾರ ಲೂಟಿ ಹೊಡೆದಿದೆ. ಮುಡಾ, ವಾಲ್ಮೀಕಿ ನಿಗಮದ ಹಣ ಲೂಟಿ ಹೊಡೆಯಲಾಗಿದೆ. ಕೇಂದ್ರದಿಂದ ತಾರತಮ್ಯ ಆಗಿಲ್ಲ, ಈ ಹಿಂದೆಯೇ ನಾವು ಅಂಕಿಅಂಶ ಬಿಡುಗಡೆ ಮಾಡಿದ್ದೇವೆ. ಮನಮೋಹನ್ ಸಿಂಗ್ ಕಾಲದಲ್ಲಿ ಎಷ್ಟು ಬರ್ತಿತ್ತು? ಮೋದಿ ಕಾಲದಲ್ಲಿ ಎಷ್ಟು ಬಂದಿದೆ ನೋಡಲಿ. ಮೆಟ್ರೋ, ಹೈವೇ, ರೈಲು, ಬೆಂಗಳೂರು ಅಭಿವೃದ್ಧಿಗೆ ಇತ್ಯಾದಿಗಳಿಗೆ ಎಷ್ಟು ಬಂದಿದೆ ಹೇಳಿ? ಮೆಟ್ರೋಗೆ ಎಷ್ಟು ಬಂದಿದೆ ಅಂತ ಸಿದ್ದರಾಮಯ್ಯ ಹೇಳೋದೇ ಇಲ್ಲ. ಬಂದ ಹಣ ಎಲ್ಲ ಲೂಟಿ ಹೊಡೀತಾರೆ. ಜಲಜೀವನ್ ಮಿಷನ್‌ಗೆ ಎಷ್ಟು ಬಂದಿದೆ, ಲೆಕ್ಕ ಕೊಡಿ. ಎಲ್ಲ ಲೆಕ್ಕ ಕೊಡಿ, ಜನ ತೀರ್ಮಾನ ಮಾಡ್ತಾರೆ ಎಂದು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಉಗ್ರಗಾಮಿ ಪಕ್ಷ ಎಂಬ ತಂದೆ ಮಾತು ಸಮರ್ಥನೆ ಮಾಡಿಕೊಂಡ ಪುತ್ರ ಪ್ರಿಯಾಂಕ್ ಖರ್ಗೆ

    ಮುಡಾ, ವಾಲ್ಮೀಕಿ ಹಗರಣಗಳನ್ನು ಡೈವರ್ಟ್ ಮಾಡಲು ಈಥರ ಆರೋಪ ಮಾಡ್ತಿದ್ದಾರೆ. ಜಿಎಸ್‌ಟಿ ಸಭೆಗೆ ಹೋದಾಗ ಏನ್ ಕಡಲೆ ಕಾಯಿ ತಿಂತೀರಾ? ರಾಜ್ಯದಿಂದ ಆಯ್ಕೆಯಾದ ಕಾಂಗ್ರೆಸ್ ಸಂಸದರು, ಖರ್ಗೆಯವರು ಇದುವರೆಗೆ ಸಂಸತ್, ರಾಜ್ಯಸಭೆಯಲ್ಲಿ ಇದರ ಬಗ್ಗೆ ಯಾಕೆ ಮಾತಾಡಿಲ್ಲ? ವೋಟ್ ಪಾಲಿಟಿಕಗ್ಸ್‌ಗಾಗಿ ಇಲ್ಲಿ ಮಾತಾಡ್ತೀರ, ಅಲ್ಲೂ ಮಾತಾಡಿ, ಯಾಕೆ ಅಲ್ಲಿ ಬಾಯಿ ಬಿಡಲ್ಲ? ನಿಮ್ಮ ಲೂಟಿತನ ಜನಕ್ಕೆ ಗೊತ್ತಾಗಿ ಹೋಗಿದೆ ಎಂದು ಕಾಂಗ್ರೆಸ್ ವಿರುದ್ಧ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಎಂಪಿಗಳಿಗೆ ಮೋದಿ, ಅಮಿತ್ ಶಾ ಕಂಡ್ರೆ ಭಯ: ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ಕೇಂದ್ರ ತೆರಿಗೆ ಪಾಲಿನಲ್ಲಿ ತಾರತಮ್ಯ ಮಾಡ್ತಿದೆ ಅಂತಾರಲ್ಲ, ಇಲ್ಲಿ ರಾಜ್ಯದಲ್ಲಿ ಎಲ್ಲ ಕ್ಷೇತ್ರಗಳಿಗೂ ಸಮನಾದ ಅನುದಾನ ಕೊಡ್ತಿದ್ದಾರಾ? ನೀವು ಇಲ್ಲಿ ತಾರತಮ್ಯ ಮಾಡಿ, ಕೇಂದ್ರದಲ್ಲಿ ತಾರತಮ್ಯ ಆಗಿದೆ ಅನ್ನೋದು ಎಷ್ಟು ಸರಿ? ಕರ್ನಾಕದಲ್ಲಿ ನೀವು ಅನುದಾನ ತಾರತಮ್ಯ ಮಾಡಿಲ್ಲ ಅಂದ್ರೆ ನಾವು ಕೇಳ್ತೀವಿ. ಮೊದಲು ನೀವು ಇಲ್ಲಿ ತಾರತಮ್ಯ ಸರಿಪಡಿಸಿ. ಉತ್ತರದ ರಾಜ್ಯಗಳಿಗೆ ಹೆಚ್ಚು ಅನುದಾನವನ್ನು ಜನಸಂಖ್ಯೆಗೆ ಅನುಗುಣವಾಗಿ ಕೇಂದ್ರ ಸರ್ಕಾರ ಹಂಚಿಕೆ ಮಾಡುತ್ತಿದೆ. ಈ ನೀತಿಯನ್ನು ಮಾಡಿದವರು ಮನಮೋಹನಗ್ ಸಿಂಗ್ ಅವರೇ, ಸಿಂಗ್ ಅವರು ಮಾಡಿರುವ ನೀತಿಯನ್ವಯವೇ ರಾಜ್ಯಗಳಿಗೆ ತೆರಿಗೆ ಪಾಲು ಬರ್ತಿದೆ. ಇಲ್ಲೂ ಎಲ್ಲಾ ಕ್ಷೇತ್ರಗಳು, ಜಿಲ್ಲೆಗಳಿಗೆ ತಾರತಮ್ಯ ಮಾಡ್ತಿಲ್ಲ ಅಂತ ತೋರಿಸಿ. ನಿಮ್ಮನೆ ದೋಸೆಯೇ ತೂತು, ಕೇಂದ್ರದ ದೋಸೆ ಬಗ್ಗೆ ಮಾತಾಡುವ ಹಕ್ಕಿಲ್ಲ ನಿಮಗೆ ಎಂದು ಲೇವಡಿ ಮಾಡಿದ್ದಾರೆ.

    ಇದೇ ವೇಳೆ ಸ್ವಪಕ್ಷದ ವಿರುದ್ದವೇ ಕಾಂಗ್ರೆಸ್ ಶಾಸಕ ರಾಜುಕಾಗೆ ಅಸಮಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶೋಕ್‌, ಕಾಂಗ್ರೆಸ್ ಶಾಸಕರಿಗೆ ಅರ್ಜಿ ಕೊಟ್ಟು ಕೊಟ್ಟು ಸಾಕಾಗಿದೆ. ರಾಜು ಕಾಗೆ ಹೇಳಿದಂತೆ ಕಾಂಗ್ರೆಸ್ ಶಾಸಕರಿಗೆ ಆತ್ಮಹತ್ಯೆಯೊಂದೇ ದಾರಿ. ಕಾಂಗ್ರೆಸ್ ಶಾಸಕರ ಪಾಡೇ ಹೀಗಾದರೆ ವಿಪಕ್ಷ ಶಾಸಕರ ಗತಿ ಏನು..? ನಮಗಂತೂ ಒಂದು ನಯಾಪೈಸೆ ಅನುದಾನ ಕೊಟ್ಟಿಲ್ಲ. ನಾವು ಪ್ರಶ್ನೆ ಮಾಡಿದ್ರೆ ಗ್ಯಾರಂಟಿ ಕೊಟ್ಟಿಲ್ವೇನ್ರಿ ಅಂತಾರೆ. ಫ್ರೀ ಗ್ಯಾರಂಟಿ ತಗೊಂಡು ರಸ್ತೆ, ಸ್ಕೂಲ್ ಮಾಡೋಕಾಗುತ್ತಾ..? ಕಾಂಗ್ರೆಸ್‌ನಲ್ಲಿ ಮಂತ್ರಿಗಳು ಗೌರವ ಕಳೆದುಕೊಂಡಿದ್ದಾರೆ. ಡಿಕೆಶಿ ಅವ್ರು ಹೇಳ್ತಾರೆ, ಗ್ಯಾರಂಟಿ ಹಣದಿಂದ ಫ್ರಿಡ್ಜ್ ತಗೊಂಡ್ರು ಅಂತ ಏನ್ ಚಂದ್ರ ಲೋಕದಿಂದ ಇಂಪೋರ್ಟ್ ಮಾಡಿರೋ ವಸ್ತುನಾ ಅದು? ಇವ್ರು ಗ್ಯಾರಂಟಿ ಕೊಡೋದಕ್ಕೆ ಮೊದಲಿನಿಂದಲೂ ಜನರ ಬಳಿ ಫ್ರಿಡ್ಜ್, ಟಿವಿ ಇತ್ತು ಎಂದು ಕುಟುಕಿದ್ದಾರೆ.

  • ಬಿಜೆಪಿ ಅಧಿಕಾರದಲ್ಲಿದ್ದಾಗ RSS ಮೇಲಿನ ಕೇಸ್ ವಾಪಸ್ ತೆಗೆದುಕೊಂಡಿದ್ರಲ್ಲಾ – ಸಿಎಂ ಪ್ರಶ್ನೆ

    ಬಿಜೆಪಿ ಅಧಿಕಾರದಲ್ಲಿದ್ದಾಗ RSS ಮೇಲಿನ ಕೇಸ್ ವಾಪಸ್ ತೆಗೆದುಕೊಂಡಿದ್ರಲ್ಲಾ – ಸಿಎಂ ಪ್ರಶ್ನೆ

    – ಸರ್ಕಾರದಿಂದ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಬಗ್ಗೆ ಪ್ರತಿಕ್ರಿಯೆ

    ಮೈಸೂರು: ಬಿಜೆಪಿ ಅಧಿಕಾರದಲ್ಲಿದ್ದಾಗ ಆರ್‌ಎಸ್‌ಎಸ್ (RSS)ಮೇಲಿನ ಕೇಸ್ ವಾಪಾಸ್ ತೆಗೆದುಕೊಂಡಿದ್ದರಲ್ಲ ಅದು ಏನಂಥೆ? ಎಂದು ಹುಬ್ಬಳ್ಳಿ ಗಲಭೆ ಕೇಸ್ ವಿಚಾರವಾಗಿ ಬಿಜೆಪಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರಶ್ನಿಸಿದ್ದಾರೆ.

    ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಗಲಭೆ ಕೇಸ್ (Hubballi Violence) ವಾಪಸ್‌ಗೆ ಬಿಜೆಪಿಯವರು ವಿರೋಧ ವ್ಯಕ್ತಪಡಿಸುತ್ತಿರುವ ವಿಚಾರವಾಗಿ ಮಾತನಾಡಿದರು. ಬಿಜೆಪಿಯವರು ಯಾವಾಗಲೂ ಹಾಗೇ ವಿರೋಧ ವ್ಯಕ್ತಪಡಿಸುತ್ತಾರೆ. ಪ್ರತಿಭಟನೆ ಬೇಕಾದರೆ ಮಾಡಲಿ, ಕ್ಯಾಬಿನೆಟ್ ಸಬ್ ಕಮಿಟಿಯಿಂದ ತೀರ್ಮಾನ ಆಗಿದ್ದು, ನಂತರ ಕಾನೂನು ಅಡಿಯಲ್ಲಿ ಕೇಸ್ ವಾಪಸ್ ಪಡೆಯಲಾಗಿದೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಆರ್‌ಎಸ್‌ಎಸ್ ಮೇಲಿನ ಕೇಸ್ ವಾಪಾಸ್ ತೆಗೆದುಕೊಂಡಿದ್ದರಲ್ಲ ಅದು ಏನಂಥೆ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ಚುನಾವಣಾ ಫಲಿತಾಂಶದ ದಿನ ವಾಟ್ಸಪ್ ಗ್ರೂಪ್‌ನಲ್ಲಿ ಹರಿಯಾಣ ಸಿಎಂಗೆ ಕೊಲೆ ಬೆದರಿಕೆ – ಆರೋಪಿ ಅರೆಸ್ಟ್‌

    ಇದೇ ವೇಳೆ ಕೇಂದ್ರದಿಂದ ತೆರಿಗೆ ಪಾಲು ವಿಚಾರವಾಗಿ ಮಾತನಾಡಿ, ನಮಗೆ ತೆರಿಗೆ ಪಾಲಿನಲ್ಲಿ ಅನ್ಯಾಯ ಆಗಿದೆ. ಪದೇ ಪದೇ ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯ ಆಗುತ್ತಿದೆ. ಉತ್ತರ ಪ್ರದೇಶಕ್ಕೆ ಜಾಸ್ತಿ ಕೊಟ್ಟಿದ್ದಾರೆ. ಕರ್ನಾಟಕದ ಎಂಪಿಗಳು ಈ ಕುರಿತು ಧ್ವನಿ ಎತ್ತಬೇಕು. ಈ ಬಗ್ಗೆ ಬಿಜೆಪಿ ನಾಯಕರು ಮಾತನಾಡಲ್ಲ. ಜೋಶಿ ಸೇರಿದಂತೆ ಯಾರು ಮಾತನಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇನ್ನೂ ನಾಡಹಬ್ಬ ಮೈಸೂರು ದಸರಾ ಕುರಿತು ಮಾತನಾಡಿದ ಅವರು, ಈ ಬಾರಿ ದಸರಾದಲ್ಲಿ ಹೆಚ್ಚು ಜನರು ಪಾಲ್ಗೊಂಡಿದ್ದರು. ನೀವೆಲ್ಲರೂ ಯಶಸ್ವಿ ಅಂದರೆ ದಸರಾ ಯಶಸ್ವಿ ಆದ ಹಾಗೇ. ಎಲ್ಲರೂ ಖುಷಿಯಾಗಿ ದಸರಾ ನೋಡಿದ್ದಾರೆ. ಎಲ್ಲರೂ ಖುಷಿಯಾಗಿ ಇದ್ದರೆ ನಮಗೂ ಖುಷಿ. ಅದ್ದೂರಿ ದಸರಾ ಮಾಡುವುದಕ್ಕೆ ನಮ್ಮೆಲ್ಲ ಅಧಿಕಾರಿಗಳು ಶ್ರಮ ಹಾಕಿದ್ದಾರೆ ಎಂದು ತಿಳಿಸಿದರು.

    ಏನಿದು ಪ್ರಕರಣ?

    ಹುಬ್ಬಳ್ಳಿ ಗಲಭೆ ಪ್ರಕರಣವನ್ನು ರಾಜ್ಯ ಸರ್ಕಾರ ವಾಪಸ್‌ ಪಡೆಯಲು ನಿರ್ಧರಿಸಿತ್ತು.  ಈ ಹಿನ್ನೆಲೆ ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ (Cabinet Meeting) ಹುಬ್ಬಳ್ಳಿ ಗಲಭೆಯಲ್ಲಿ ದಾಖಲಾಗಿದ್ದವರ ಮೇಲಿನ ಪ್ರಕರಣವನ್ನು ವಾಪಸ್‌ ಪಡೆದುಕೊಂಡಿತ್ತು. ಈ ನಿರ್ಧಾರದ ಬೆನ್ನಲ್ಲೇ ಬಿಜೆಪಿ (BJP) ಆಕ್ರೋಶ ವ್ಯಕ್ತಪಡಿಸಿತ್ತು.. ಇದನ್ನೂ ಓದಿ: ಸರ್ಕಾರದಿಂದ ಹುಬ್ಬಳ್ಳಿ ಗಲಭೆ ಕೇಸ್‌ ವಾಪಸ್‌ – ಮುಸ್ಲಿಮರ ಓಲೈಕೆ ರಾಜಕೀಯ ಎಂದು ಬಿಜೆಪಿ ಕಿಡಿ

  • ರಾಜಕೀಯ ಪ್ರೇರಿತ ಕೇಸ್ ವಾಪಸ್ ಪಡೆದಿದ್ದೇವೆ: ಪ್ರಿಯಾಂಕ್ ಖರ್ಗೆ ಸಮರ್ಥನೆ

    ರಾಜಕೀಯ ಪ್ರೇರಿತ ಕೇಸ್ ವಾಪಸ್ ಪಡೆದಿದ್ದೇವೆ: ಪ್ರಿಯಾಂಕ್ ಖರ್ಗೆ ಸಮರ್ಥನೆ

    ಬೆಂಗಳೂರು: 2022ರ ಹುಬ್ಬಳ್ಳಿ (Hubballi) ಗಲಭೆ ಕೇಸ್ ವಾಪಸ್ ಪಡೆದಿರೋ ಸರ್ಕಾರದ ನಿರ್ಧಾರವನ್ನ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸಮರ್ಥನೆ ಮಾಡಿಕೊಂಡಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕೀಯ ಪ್ರೇರಿತವಾಗಿ ದಾಖಲಿಸಿದ್ದ ಕೇಸ್ ವಾಪಸ್ ತೆಗೆದುಕೊಂಡಿದ್ದೇವೆ. ಕೆಲವು ಕೇಸ್‌ಗಳನ್ನು ಚರ್ಚೆ ಮಾಡಿ ವಾಪಸ್ ತೆಗೆದುಕೊಂಡಿದ್ದೇವೆ. ಗಲಭೆ ಪ್ರಕರಣಗಳಲ್ಲಿ ಇತರೆ ಆರೋಪಿಗಳು ಎಂದು ಸೇರಿಸಿರುತ್ತಾರೆ. ಹೀಗಾಗಿ ಅದರ ತನಿಖೆ ಮಾಡಿ ಪ್ರಕರಣಗಳನ್ನು ಹಿಂಪಡೆದಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದರು. ಇದನ್ನೂ ಓದಿ: ಎತ್ತಿಗೆ ಸ್ನಾನ ಮಾಡಿಸಲು ಹೋದಾಗ ಮೊಸಳೆ ದಾಳಿ – ಮಾಲೀಕನ ಜೀವ ಉಳಿಸಿದ ಎತ್ತು

    ಸಿ.ಟಿ ರವಿ (C T Ravi) ಅವರ ಪ್ರಕರಣವನ್ನು ವಾಪಸ್ ತೆಗೆದುಕೊಂಡಿದ್ದೇವೆ. ಇದು ರಾಜಕೀಯ ಅಂತಾ ಅವರು ಹೇಳ್ತಾರಾ? ಹೇಳಲಿ ಅವರಿಗೆ ಏನು ಶಿಕ್ಷೆ ಆಗಬೇಕು ಆಗಲಿ. ಎಲ್ಲ ಕೇಸ್ ಪರಿಶೀಲನೆ ಮಾಡಲಾಗಿದೆ. ಸ್ಥಳೀಯರಿಂದ ಮಾಹಿತಿ ಪಡೆದು ಬಿ ರಿಪೋರ್ಟ್ ಹಾಕುತ್ತಿದ್ದೇವೆ ಎಂದು ಸರ್ಕಾರದ ನಿರ್ಧಾರವನ್ನ ಸಮರ್ಥನೆ ಮಾಡಿಕೊಂಡರು. ಇದನ್ನೂ ಓದಿ:  ದೇವಾಲಯಗಳಲ್ಲಿ ವಿಶೇಷ ಆಯುಧಪೂಜೆ – ವಾಹನಗಳಿಗೆ ಪೂಜೆ ಮಾಡಿ ಸಂಭ್ರಮಿಸಿದ ಜನ