Tag: ಹುಬ್ಬಳ್ಳಿ

  • ದೀಪಾವಳಿ ಗುಡ್‌ ನ್ಯೂಸ್;‌ ಹುಬ್ಬಳ್ಳಿಯಿಂದ ಮೈಸೂರು, ಬೆಂಗಳೂರು, ಜೈಪುರ, ಗೋವಾಕ್ಕೆ ವಿಶೇಷ ರೈಲು

    ದೀಪಾವಳಿ ಗುಡ್‌ ನ್ಯೂಸ್;‌ ಹುಬ್ಬಳ್ಳಿಯಿಂದ ಮೈಸೂರು, ಬೆಂಗಳೂರು, ಜೈಪುರ, ಗೋವಾಕ್ಕೆ ವಿಶೇಷ ರೈಲು

    ಹುಬ್ಬಳ್ಳಿ: ದೀಪಾವಳಿ (Deepavali) ಹಬ್ಬದ ಪ್ರಯುಕ್ತ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು, ನೈರುತ್ಯ ರೈಲ್ವೆ ಮಂಡಳಿ ಮೈಸೂರು ಮತ್ತು ಜೈಪುರ ನಡುವೆ ಪ್ರತಿ ದಿಕ್ಕಿನಲ್ಲಿ ತಲಾ ಎರಡು ಟ್ರಿಪ್‌ಗಳಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಕಾರ್ಯಾಚರಣೆಗೆ ಅನುಮೋದನೆ ನೀಡಿದೆ. ಬೆಂಗಳೂರು-ವಾಸ್ಕೊ-ಡ-ಗಾಮ ನಡುವೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.

    ಟ್ರೈನ್ ವಿವರಗಳು ಈ ಕೆಳಗಿನಂತಿವೆ:
    ರೈಲು ಸಂಖ್ಯೆ 06231 ಮೈಸೂರು–ಜೈಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ಅ.18 ಮತ್ತು 25 ರಂದು ಮೈಸೂರಿನಿಂದ ರಾತ್ರಿ 11:55 ಗಂಟೆಗೆ ಹೊರಡಲಿದೆ. ಸೋಮವಾರ ಸಂಜೆ 6:40 ಗಂಟೆಗೆ ಜೈಪುರವನ್ನು ತಲುಪಲಿದೆ. ಮತ್ತೆ ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06232 ಜೈಪುರ–ಮೈಸೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಅ.21 ಮತ್ತು 28 ರಂದು ಜೈಪುರದಿಂದ ಮುಂಜಾನೆ 4 ಗಂಟೆಗೆ ಹೊರಟು, ಗುರುವಾರ ಮುಂಜಾನೆ 3:30ಕ್ಕೆ ಮೈಸೂರಿಗೆ ಆಗಮಿಸಲಿದೆ. ಇದನ್ನೂ ಓದಿ: ಲೋಕ ಕಲ್ಯಾಣಕ್ಕಾಗಿಯೇ ಜನ್ಮ ತಾಳಿದ ಮಹಾನದಿ ಈ‌ ಕಾವೇರಿ – ಪುರಾಣ ಪುಣ್ಯಕಥೆ ನಿಮಗೆ ಗೊತ್ತೆ?

    ಈ ವಿಶೇಷ ರೈಲು ಮಾರ್ಗಮಧ್ಯೆ ಮಂಡ್ಯ, ಕೆಎಸ್‌ಆರ್ ಬೆಂಗಳೂರು, ತುಮಕೂರು, ಅರಸೀಕೆರೆ, ಕಡೂರು, ದಾವಣಗೆರೆ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಘಟಪ್ರಭಾ, ಮೀರಜ್, ಸಾಂಗ್ಲಿ, ಸತಾರಾ, ಪುಣೆ, ಕಲ್ಯಾಣ್, ವಸಾಯಿ ರೋಡ್, ಪಾಲ್ಘರ್, ವಾಪಿ, ವಲ್ಸಾದ, ಸೂರತ್, ವಡೋದರಾ, ಅಹಮದಾಬಾದ್, ಸಾಬರಮತಿ ಬಿಜಿ, ಮಹೆಸನಾ, ಪಾಲನ್‌ಪುರ, ಅಬು ರೋಡ್, ಫಲ್ನಾ, ರಾಣಿ, ಮಾರ್ವಾರ್, ಸೋಜತ್ ರೋಡ್, ಬೇವರ್, ಅಜ್ಮೀರ್, ಮತ್ತು ಕಿಶನ್‌ಗಢ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.

    ಜೈಪುರದ ಕಡೆಗೆ ಹೋಗುವ ರೈಲು ಸಂಖ್ಯೆ 06231 ತನ್ನ ಪ್ರಯಾಣದಲ್ಲಿ ಸಾಬರಮತಿ ಬಿಜಿ ನಿಲುಗಡೆಯನ್ನು ಬಿಟ್ಟುಬಿಡುತ್ತದೆ. ಮತ್ತು ಮೈಸೂರಿನ ಕಡೆಗೆ ಹಿಂದಿರುಗುವ ಪ್ರಯಾಣದಲ್ಲಿ ರೈಲು ಸಂಖ್ಯೆ 06232 ಅಹಮದಾಬಾದ್ ನಿಲುಗಡೆ ಇರುವುದಿಲ್ಲ.

    ಈ ವಿಶೇಷ ರೈಲು ಒಟ್ಟು 18 ಬೋಗಿಗಳನ್ನು ಒಳಗೊಂಡಿರುತ್ತದೆ. ಅವುಗಳಲ್ಲಿ 2 ಎಸಿ ಟು-ಟೈರ್, 12 ಎಸಿ ತ್ರಿ-ಟೈರ್, 2 ಸ್ಲೀಪರ್ ಕ್ಲಾಸ್ ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್-ಕಮ್-ಬ್ರೇಕ್ ವ್ಯಾನ್‌ಗಳು ಇರಲಿವೆ.

    ಬೆಂಗಳೂರು-ವಾಸ್ಕೊ-ಡ-ಗಾಮ ನಡುವೆ ವಿಶೇಷ ರೈಲುಗಳು
    ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ನೈಋತ್ಯ ರೈಲ್ವೆಯು ಕೆಎಸ್ಆರ್ ಬೆಂಗಳೂರು– ವಾಸ್ಕೊ-ಡ-ಗಾಮ – ಬೆಂಗಳೂರು ಕಂಟೋನ್ಮೆಂಟ್ ನಡುವೆ ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಇದನ್ನೂ ಓದಿ: ಸರ್ಕಾರಿ ಜಾಗಗಳಲ್ಲಿ ನಮಾಜ್‌ ಮಾಡಲು ಅವಕಾಶ ಕೊಡಬೇಡಿ – ಸರ್ಕಾರಕ್ಕೆ ಯತ್ನಾಳ್‌ ಪತ್ರ

    ರೈಲು ಸಂಖ್ಯೆ 07317/07318 ಕೆಎಸ್ಆರ್ ಬೆಂಗಳೂರು – ವಾಸ್ಕೊ-ಡ-ಗಾಮ – ಬೆಂಗಳೂರು ಕಂಟೋನ್ಮೆಂಟ್ ಎಕ್ಸ್‌ಪ್ರೆಸ್‌ ವಿಶೇಷ (ಒಂದು ಟ್ರಿಪ್):
    ರೈಲು ಸಂಖ್ಯೆ 07317 ಕೆಎಸ್ಆರ್ ಬೆಂಗಳೂರು – ವಾಸ್ಕೊ-ಡ-ಗಾಮ ವಿಶೇಷ ಎಕ್ಸ್‌ಪ್ರೆಸ್‌ ರೈಲು ಅ.17ರ ರಾತ್ರಿ 11:25ಕ್ಕೆ ಕೆಎಸ್ಆರ್ ಬೆಂಗಳೂರಿನಿಂದ ಹೊರಟು, ಮರುದಿನ ಮಧ್ಯಾಹ್ನ 2:55ಕ್ಕೆ ವಾಸ್ಕೊ-ಡ-ಗಾಮ ತಲುಪಲಿದೆ. ಮರಳಿ ಪ್ರಯಾಣದಲ್ಲಿ, ರೈಲು ಸಂಖ್ಯೆ 07318 ವಾಸ್ಕೊ-ಡ-ಗಾಮ – ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್‌ ರೈಲು ಅ.18 ರಂದು ಸಂಜೆ 5 ಕ್ಕೆ ವಾಸ್ಕೊ-ಡ-ಗಾಮದಿಂದ ಹೊರಟು, ಮರುದಿನ ಬೆಳಗ್ಗೆ 8:30ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ಗೆ ತಲುಪಲಿದೆ.

    ರೈಲು ಸಂಖ್ಯೆ 07317 ಮಾರ್ಗ ಮಧ್ಯೆ ಬೆಂಗಳೂರು ಕಂಟೋನ್ಮೆಂಟ್, ಎಸ್ಎಂವಿಟಿ ಬೆಂಗಳೂರು, ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಕ್ಯಾಸಲ್ ರಾಕ್, ಕುಲೆಮ್, ಸ್ಯಾನ್‌ವೊರ್ಡೆಮ್ ಮತ್ತು ಮಡಗಾಂವ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಅದೇ ರೀತಿ, ರೈಲು ಸಂಖ್ಯೆ 07318 ಸಹ ಬೆಂಗಳೂರು ಕಂಟೋನ್ಮೆಂಟ್‌ನತ್ತ ಹಿಮ್ಮುಖ ದಿಕ್ಕಿನಲ್ಲಿ ಇದೇ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಈ ರೈಲು ಒಟ್ಟು 22 ಬೋಗಿಗಳ ಸಂಯೋಜನೆಯನ್ನು ಹೊಂದಿದ್ದು, ಅದರಲ್ಲಿ 13 ಎಸಿ 3-ಟೈರ್, 7 ಸ್ಲೀಪರ್ ದರ್ಜೆ ಮತ್ತು 2 ಲಗೇಜ್-ಕಮ್-ಬ್ರೇಕ್ ವ್ಯಾನ್‌ಗಳು ಇರಲಿವೆ.

  • ಶೀಘ್ರದಲ್ಲೇ ಡಿಂಪಲ್ ಕ್ವೀನ್‌ ಮದುವೆ – ಸುಳಿವು ಕೊಟ್ಟ ರಚಿತಾ ರಾಮ್‌

    ಶೀಘ್ರದಲ್ಲೇ ಡಿಂಪಲ್ ಕ್ವೀನ್‌ ಮದುವೆ – ಸುಳಿವು ಕೊಟ್ಟ ರಚಿತಾ ರಾಮ್‌

    ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ (Rachita Ram) ಕೊನೆಗೂ ತಮ್ಮ ಮದ್ವೆ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗ, ಇನ್ನೂ ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವುದಾಗಿ ಹೇಳಿದ್ದಾರೆ. ಇದು ರಚ್ಚು ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ.

    ಹೌದು. ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲೂ ಮದ್ವೆ (Rachita Ram Marriage) ಬಗ್ಗೆ ಸುಳಿವು ಕೊಟ್ಟಿದ್ದರು. ಮದುವೆಯಾಗುವ ಹುಡುಗ ಹೇಗಿರಬೇಕು ಎನ್ನುವ ಬಗ್ಗೆ ಯಾವ ಡ್ರೀಮ್ ಇಲ್ಲ. ಮನೆಯಲ್ಲಿ ಹುಡುಗನನ್ನ ಹುಡುಕುವ ಕಾರ್ಯ ನಡೆಯುತ್ತಿವೆ ಎನ್ನುವ ಅಭಿಪ್ರಾಯ ಹಂಚಿಕೊಂಡಿದ್ದರು. ಇದೀಗ ಮತ್ತೊಮ್ಮೆ ಮದ್ವೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

    ಹುಬ್ಬಳ್ಳಿಯಲ್ಲಿ ಮಾತನಾಡಿದ ರಚ್ಚು, ಸದ್ಯದಲ್ಲಿಯೇ ಮದುವೆ ಆಗುವೆ, ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಡುವೆ ಎಂದು ಹೇಳಿದರು. ಲವ್ ಮ್ಯಾರೇಜೋ & ಅರೇಂಜ್ ಮ್ಯಾರೇಜೋ ಏನೋ ಮ್ಯಾರೇಜ್ ಆಗುವೆ. ಒಟ್ನಲ್ಲಿ ಇನ್ನು ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವೆ ಅಂತ ಹೇಳಿದ್ದಾರೆ.

    33ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ರಚಿತಾ ರಾಮ್ ಪರಭಾಷಾ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ರಜನಿಕಾಂತ್ ಅವರ `ಕೂಲಿʼ ಸಿನಿಮಾದಲ್ಲೂ ವಿಲನ್‌ ಪಾತ್ರದಲ್ಲಿ ನಟಿಸಿ ಭಾರೀ ಮೆಚ್ಚುಗೆ ಗಳಿಸಿದ್ದರು. ಇದೀಗ ದುನಿಯಾ ವಿಜಯ್ ನಟನೆಯ ಲ್ಯಾಂಡ್ ಲಾರ್ಡ್, ಅಯೋಗ್ಯ-2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಇವೆರಡು ಸಿನಿಮಾಗಳ ಟೀಸರ್ ರಿಲೀಸ್ ಆಗಿದೆ. ವಿಭಿನ್ನ ಕಾನ್ಸೆಪ್ಟ್‌ನ ಲ್ಯಾಂಡ್ ಲಾರ್ಡ್ ಸಿನಿಮಾ ಮೂಲಕ ದುನಿಯಾ ವಿಜಯ್ ಜೊತೆ 2ನೇ ಬಾರಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ ನಟಿ ರಚಿತಾ. ಅಲ್ಲದೇ ಇತ್ತೀಚೆಗೆ ವಿಲನ್‌ ಪಾತ್ರಗಳಿಗೆ ಬೇಡಿಕೆ ಹೆಚ್ಚಾಗ್ತಿದೆ ಎಂದು ನಟಿ ಹೇಳಿಕೊಂಡಿದ್ದರು.

  • ಸರ್ಕಾರಿ ಕಾರ್ಯಕ್ರಮದಲ್ಲಿ ಕುರಾನ್ ಪಠಣ – ಹೋಮ ನೆರವೇರಿಸಿ ಬಿಜೆಪಿ ಕೌಂಟರ್‌

    ಸರ್ಕಾರಿ ಕಾರ್ಯಕ್ರಮದಲ್ಲಿ ಕುರಾನ್ ಪಠಣ – ಹೋಮ ನೆರವೇರಿಸಿ ಬಿಜೆಪಿ ಕೌಂಟರ್‌

    ಹುಬ್ಬಳ್ಳಿ: ಇಲ್ಲಿನ ಸರ್ಕಾರಿ ಕಾರ್ಯಕ್ರಮದಲ್ಲಿ ಕುರಾನ್ (Quran) ಪಠಣ ಖಂಡಿಸಿ ಧಾರವಾಡದಲ್ಲಿ ಬಿಜೆಪಿ ಶಾಸಕ ಬೆಲ್ಲದ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯ್ತು.

    ಧಾರವಾಡ (Dharwad) ಡಿಸಿ ಕಚೇರಿ ಎದುರು ಹೋಮ ಮಾಡಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ರು. ಸರ್ಕಾರಿ ಕಚೇರಿ ಶುದ್ಧೀಕರಣ ಮಾಡೋದಾಗಿ ರುದ್ರಪಠಣ ಮಾಡಿ ಅರ್ಚಕರ ಮೂಲಕ ಹೋಮ ಮಾಡಿಸಿದ್ರು. ಇದನ್ನೂ ಓದಿ: ಕಟ್ಟಡ ಕಾರ್ಮಿಕರ ಶೆಡ್‌ನಲ್ಲಿ ಅಗ್ನಿ ಅವಘಡ – ಚಿಕಿತ್ಸೆ ಫಲಿಸದೇ ನಾಲ್ವರು ಸಾವು, ಮೂವರ ಸ್ಥಿತಿ ಗಂಭೀರ

    ಮುಲ್ಲಾ ಮೋಕ್ಷ ಹೋಮ ಎಂದು ಪ್ಲೆಕಾರ್ಡ್ ಹಿಡಿದು ಕಿಡಿಕಾರಿದ್ರು. ಕಾಂಗ್ರೆಸ್ ಶಾಸಕರಿಗೆ (Congress MLAs), ಸಚಿವರಿಗೆ ದೇವರು ಒಳ್ಳೆ ಬುದ್ಧಿಕೊಡಲಿ ಎಂದು ಶಾಸಕ ಅರವಿಂದ ಬೆಲ್ಲದ್ (Arvind Bellad) ಮಂಗಳಾರತಿ ನೆರವೇರಿಸಿದ್ರು. ಇದನ್ನೂ ಓದಿ: ಕಾಂತಾರ ಚಾಪ್ಟರ್‌ 1 ಸಕ್ಸಸ್‌ ಬೆನ್ನಲ್ಲೇ ಕಟೀಲು ಅಮ್ಮನ ದರ್ಶನ ಪಡೆದ ವಿಜಯ್‌ ಕಿರಗಂದೂರು

    ಬಳಿಕ ಮಾತನಾಡಿ, ಸರ್ವರನ್ನೂ ಸಮನಾಗಿ ನೋಡುವ ಸಿದ್ಧಾರೂಢ ಮಠದಲ್ಲಿ ಕುರಾನ್ ಪಠಾಣ್ ಮಾಡುವ ಕೆಲಸ ಸಂತೋಷ್ ಲಾಡ್ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ನಡೆದಿದೆ ಅಂತ ಕಿಡಿಕಾರಿದ್ರು. ಇದನ್ನೂ ಓದಿ: ಬಾಕ್ಸಾಫೀಸ್‌ನಲ್ಲಿ ಕಾಂತಾರ ಚಾಪ್ಟರ್‌ 1 ಮಿಂಚಿನ ಓಟ – ಸಿದ್ಧಿವಿನಾಯಕನ ದರ್ಶನ ಪಡೆದ ರಿಷಬ್‌

  • ಧಾರವಾಡದಲ್ಲೊಂದು ಅಚ್ಚರಿ ಪಕ್ರರಣ – ನವಜಾತ ಗಂಡು ಶಿಶುವಿನೊಳಗೆ ಮತ್ತೊಂದು ಶಿಶು ಪತ್ತೆ

    ಧಾರವಾಡದಲ್ಲೊಂದು ಅಚ್ಚರಿ ಪಕ್ರರಣ – ನವಜಾತ ಗಂಡು ಶಿಶುವಿನೊಳಗೆ ಮತ್ತೊಂದು ಶಿಶು ಪತ್ತೆ

    ಹುಬ್ಬಳ್ಳಿ: ನವಜಾತ ಗಂಡು ಶಿಶುವಿನೊಳಗೆ ಮತ್ತೊಂದು ಶಿಶು ಬೆಳೆಯುತ್ತಿರುವ ವಿಚಿತ್ರ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಹುಬ್ಬಳ್ಳಿ (Hubballi) ಕೆಎಂಸಿ ಆಸ್ಪತ್ರೆಯಲ್ಲಿ ಇಂತಹದೊಂದು ಅಪರೂಪದ ಪ್ರಕರಣ ಪತ್ತೆಯಾಗಿದೆ.’

    ಸೆ.23 ರಂದು ಕುಂದಗೋಳ ತಾಲೂಕಿನ ತುಂಬು ಗರ್ಭಿಣಿ ಹೆರಿಗೆ ನೋವಿನಿಂದ ಕೆಎಂಸಿಗೆ ದಾಖಲಾಗಿದ್ದರು. ಸುರಕ್ಷಿತವಾಗಿ ಮಹಿಳೆಗೆ ಹೆರಿಗೆ ಸಹ ಆಗಿತ್ತು. ತಾಯಿ ಮತ್ತು ಮಗುವಿನ ಆರೋಗ್ಯ ಸಹ ಚೆನ್ನಾಗಿತ್ತು. ಇದನ್ನೂ ಓದಿ: ಗ್ರೀನ್ ಸಿನಿಮಾದಲ್ಲಿ ಮಾಸ್ಕ್ ಮ್ಯಾನ್ – ಪ್ರಚಾರದ ವಿನೂತನ ಪ್ರಯತ್ನ

    ಮಗುವಿನ ಸ್ಕ್ಯಾನ್ ಮತ್ತು ಅಲ್ಟ್ರಾಸೌಂಡ್ ಮಾಡಿದಾಗ ಹೊಟ್ಟೆಯೊಳಗೆ ಮತ್ತೊಂದು ಮಗುವಿನ ಬೆಳವಣಿಗೆ ಲಕ್ಷಣಗಳು ಕಂಡುಬಂದಿವೆ. ಹುಟ್ಟಿದ ಮಗುವಿನ ಹೊಟ್ಟೆಯಲ್ಲಿ ಬೆನ್ನು ಮೂಳೆ, ತಲೆ ಬುರುಡೆಯ ಬೆಳೆವಣಿಗೆ ಆಗುತ್ತಿರುವುದು ವೈದ್ಯರು ಗುರುತಿಸಿದ್ದಾರೆ.

    ಇದು ಬಹಳಷ್ಟು ಅಪರೂಪದ ಪ್ರಕರಣ ಅಸಹಜ ದ್ರವ್ಯ ಸಂಗ್ರಹಣೆ ಇಂತಹ ಬೆಳವಣಿಗೆ ಆಗುತ್ತವೆ. ಅದು ಪೂರ್ಣಗೊಂಡು ಮಗುವಿನ ರೂಪ ಪಡೆದುಕೊಳ್ಳುವುದು ಅಸಾಧ್ಯ. ಹೀಗಾಗಿ ಇನ್ನೂ ಕೆಲವೊಂದು ತಪಾಸಣೆ ಮಾಡಿ, ಪಾಲಕರ ಅನುಮತಿ ಪಡೆದು ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಅಂತ ಕೆಎಂಸಿ ಆಡಳಿತ ಮಂಡಳಿ ಹೇಳಿದೆ.

  • ಕಾಂಗ್ರೆಸ್ ಕಮಿಷನ್ ದಂಧೆಯಲ್ಲಿ ತೊಡಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ: ಪ್ರಹ್ಲಾದ್ ಜೋಶಿ ಕಿಡಿ

    ಕಾಂಗ್ರೆಸ್ ಕಮಿಷನ್ ದಂಧೆಯಲ್ಲಿ ತೊಡಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ: ಪ್ರಹ್ಲಾದ್ ಜೋಶಿ ಕಿಡಿ

    ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರವು ಕಮಿಷನ್ ದಂಧೆಯಲ್ಲಿ ತೊಡಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಕಿಡಿಕಾರಿದ್ದಾರೆ.

    ಗುತ್ತಿಗೆದಾರರು ಸಿಎಂ ಸಿದ್ದರಾಮಯ್ಯಗೆ (Siddaramaiah) ಪತ್ರ ಬರೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ರಾಜ್ಯ ಸರ್ಕಾರದ ನಿಜ ಬಣ್ಣವನ್ನು ಬಯಲು ಮಾಡಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ನೇತೃತ್ವದಲ್ಲಿ ಅವೈಜ್ಞಾನಿಕ ಗ್ಯಾರಂಟಿಗಳನ್ನು ಮುಂದಿಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇದೀಗ ರಾಜ್ಯದ ಸಂಪತ್ತನ್ನೇ ಹಾಳು ಮಾಡಿದೆ. ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ದೋಚುತ್ತ ಅಧಃಪತನದತ್ತ ನೂಕುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಯುದ್ಧೋಪಾದಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರವಾಹಕ್ಕೆ ಸರ್ಕಾರ ಸ್ಪಂದಿಸಬೇಕು: ಸಿ.ಟಿ ರವಿ

    ರಾಜ್ಯ ಸರ್ಕಾರ ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣ ಹಳ್ಳಕ್ಕೆ ತಳ್ಳಿದೆ. ಅಲ್ಲದೇ, ಕೈಗೊಂಡಿರುವ ಕಾಮಗಾರಿಗಳ ಬಗೆಗಿನ ಮೊತ್ತವನ್ನೂ ಗುತ್ತಿಗೆದಾರರಿಗೆ ನೀಡದೇ ಅವರ ಜೀವನವನ್ನು ಕಷ್ಟಕ್ಕೆ ತಳ್ಳಿದೆ. ಅಭಿವೃದ್ಧಿ ಕಾಮಗಾರಿಗಳು ನಡೆದು ವರ್ಷಗಳೇ ಕಳೆದರೂ ಹಣ ನೀಡದೇ ಸತಾಯಿಸುತ್ತಿದೆ. ಕಮಿಷನ್ ದಂಧೆಯಲ್ಲಿ ತೊಡಗಿ ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದರ ವಿರುದ್ಧ ಗುತ್ತಿಗೆದಾರರು ಆಕ್ರೋಶ ವ್ಯಕ್ತಪಡಿಸಿ ಸಿಎಂಗೆ ಪತ್ರ ಬರೆದರೂ ಕಿಮ್ಮತ್ತಿಲ್ಲದಂತಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಗುತ್ತಿಗೆದಾರರು ಮಾಡಿರೋ ಕಮಿಷನ್ ಆರೋಪದ ಹೊಣೆ ಹೊತ್ತು ಸಿಎಂ ರಾಜೀನಾಮೆ ಕೊಡಬೇಕು: ಸಿ.ಟಿ ರವಿ ಆಗ್ರಹ

    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದುರಾಡಳಿತ ನಡೆಸುತ್ತಿದೆ. ಒಂದೆಡೆ ಬೆಲೆ ಏರಿಕೆಯ ಬರೆ ಎಳೆದು ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದು, ಮತ್ತೊಂದೆಡೆ ಗ್ಯಾರೆಂಟಿಗಳ ನೆಪದಲ್ಲಿ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದೆ. ಅಲ್ಲದೇ ವರ್ಗಾವಣೆಯನ್ನು ಒಂದು ದಂಧೆಯನ್ನಾಗಿ ಮಾಡಿಕೊಂಡಿದೆ ಎಂದು ದೂರಿದ್ದಾರೆ.

  • ಹಾಲ್‌ನಲ್ಲಿ ಮದ್ವೆಯಾಗದಿದ್ರೂ ಸುಳ್ಳು ದಾಖಲೆ ಸೃಷ್ಟಿ –  ಯೂಟ್ಯೂಬರ್ ಮುಕುಳೆಪ್ಪನ ಜೊತೆ ಅಧಿಕಾರಿಗಳನ್ನು ಬಂಧಿಸುವಂತೆ ಆಗ್ರಹ

    ಹಾಲ್‌ನಲ್ಲಿ ಮದ್ವೆಯಾಗದಿದ್ರೂ ಸುಳ್ಳು ದಾಖಲೆ ಸೃಷ್ಟಿ – ಯೂಟ್ಯೂಬರ್ ಮುಕುಳೆಪ್ಪನ ಜೊತೆ ಅಧಿಕಾರಿಗಳನ್ನು ಬಂಧಿಸುವಂತೆ ಆಗ್ರಹ

    – ವಾಸವಾಗದೇ ಇದ್ರೂ ಬಾಡಿಗೆ ಮನೆಯ ನಕಲಿ ಒಪ್ಪಂದ ಪತ್ರ ಸಲ್ಲಿಕೆ
    – ಮುಕುಳೆಪ್ಪ ಹಿಂದೂ ಧರ್ಮಕ್ಕೆ ಬರುವಂತೆ ಗಾಯತ್ರಿ ತಾಯಿ ಆಗ್ರಹ

    ಹುಬ್ಬಳ್ಳಿ: ಯೂಟ್ಯೂಬರ್ ಮುಕುಳೆಪ್ಪ ಮದುವೆ ವಿವಾದ (Mukaleppa Marriage Controversy) ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.‌ ಖಾಜ್ವಾ ಮತ್ತು ಗಾಯತ್ರಿ (Gayathri) ನಕಲಿ‌ ದಾಖಲೆಗಳನ್ನು ನೀಡಿ, ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಉಪ ನೋಂದಣಿ ಕಚೇರಿಯಲ್ಲಿ ವಿಶೇಷ ಮದುವೆ ಕಾಯ್ದೆಯ ಅಡಿ (Special Marriage Act) ಮದುವೆಯಾಗಿರುವುದಕ್ಕೆ ಗಾಯತ್ರಿ ಕುಟುಂಬಸ್ಥರು ಮತ್ತು ಶ್ರೀರಾಮಸೇನೆ (Srirma Sene) ದಾಖಲೆ ಬಿಡುಗಡೆ ಮಾಡಿದೆ.

    ಉಪ ನೋಂದಣಿ ಕಚೇರಿ ಸಲ್ಲಿಕೆ ಮಾಡಿರುವ ದಾಖಲೆ ಬಿಡುಗಡೆಯಾದ ಬೆನ್ನಲ್ಲೇ ಗಾಯತ್ರಿ ಕುಟುಂಬಸ್ಥರು ಮತ್ತು ಶ್ರೀರಾಮಸೇನೆ, ಮುಕುಳೆಪ್ಪ ಬಂಧನಕ್ಕೆ ಆಗ್ರಹಿಸಿದೆ. ಮುಕುಳೆಪ್ಪ ಮತಾಂತರ ಮಾಡಿಲ್ಲ ಅಂತ ಹೇಳಿಕೆ ನೀಡಿದ್ದಾನೆ. ಆದರೆ ಯುವತಿಗೆ ತಾಳಿ ಹಾಕಿಲ್ಲ ಕೈ ಮೇಲೆ ಉರ್ದು ಅಕ್ಷರದಲ್ಲಿ ಹೆಸರನ್ನು ಬರೆಸಿದ್ದಾನೆ ಎಂದು ಸಂಘಟನೆಗಳು ಆರೋಪಿಸಿವೆ.

    ಸುಳ್ಳು ದಾಖಲೆ ಸಲ್ಲಿಕೆ:
    ಮುಕುಳೆಪ್ಪ ಧಾರವಾಡ, ಗಾಯತ್ರಿ ಹುಬ್ಬಳ್ಳಿ ನಿವಾಸಿಯಾಗಿದ್ದು ಆರಂಭದಲ್ಲಿ ಮುಂಡಗೋಡ ಉಪ ನೋಂದಣಿ ಕಚೇರಿಗೆ ಹೋಗಿದ್ದಾರೆ. ಈ ವೇಳೆ ಸಲ್ಲಿಕೆ ಮಾಡಿದ ದಾಖಲೆಗಳು ಸರಿಯಾಗಿರದ ಕಾರಣ ಅರ್ಜಿ ತಿರಸ್ಕೃತಗೊಂಡಿವೆ.  ಇದನ್ನೂ ಓದಿ:  ನಾನು ಯಾವುದೇ ಲವ್‌ ಜಿಹಾದ್‌ ಮಾಡಿಲ್ಲ, ಇಬ್ಬರೂ ಇಷ್ಟಪಟ್ಟು ಮದುವೆಯಾಗಿದ್ದೇವೆ: ಯೂಟ್ಯೂಬರ್‌ ಮುಕಳೆಪ್ಪ

    ಈ ಅರ್ಜಿ ತಿರಸ್ಕೃತಗೊಳ್ಳಲು ಕಾರಣ ತಿಳಿದ ಬಳಿಕ ಮುಂಡಗೋಡದಲ್ಲಿ ಮದುವೆಯಾದರೆ ಮತ್ತು ಒಂದು ತಿಂಗಳು ಜೊತೆಯಾಗಿ ನೆಲೆಸಿದ್ದ ದಾಖಲೆ ನೀಡಿದರೆ ಮದುವೆ ಮಾನ್ಯವಾಗುತ್ತದೆ ಎಂದು ಯಾರೋ ಇವರಿಗೆ ಸಲಹೆ ನೀಡಿದ್ದಾರೆ. ಈ ಕಾರಣಕ್ಕೆ ಇವರು ಮುಂಡಗೋಡ ಟ್ರಿನಿಟಿ ಹಾಲ್‌ನಲ್ಲಿ ಮದುವೆಯಾಗಿದ್ದೇವೆ ಮತ್ತು ಮುಂಡುಗೋಡದಲ್ಲಿ ನೆಲೆಸಿದ್ದಕ್ಕೆ ಬಾಡಿಗೆ ಮನೆಯ ಒಪ್ಪಂದ ಪತ್ರವನ್ನು ಸಲ್ಲಿಕೆ ಮಾಡಿ ಮದುವೆಯನ್ನು ಮಾನ್ಯ ಮಾಡಿಸಿಕೊಂಡಿದ್ದಾರೆ.

    ಮದುವೆ ವಿಚಾರ ಜೋರಾಗಿ ವಿವಾದವಾಗುತ್ತಿದ್ದಂತೆ ಉಪ ನೋಂದಣಿ ಕಚೇರಿಗೆ ಸಲ್ಲಿಕೆ ಮಾಡಿದ ದಾಖಲೆಗಳನ್ನು ಗಾಯತ್ರಿ ಕುಟುಂಬಸ್ಥರು ಪಡೆದುಕೊಂಡಿದ್ದಾರೆ. ಈ ವೇಳೆ ಶ್ರೀರಾಮ ಸೇನೆಯವರು ತನಿಖೆಗೆ ಇಳಿದಾಗ ಏಪ್ರಿಲ್‌ 28 ರಂದು ಟ್ರಿನಿಟಿ ಹಾಲ್‌ನಲ್ಲಿ ಮದುವೆಯಾಗದೇ ಇರುವ ವಿಚಾರ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಮುಂಡಗೋಡ ಗಾಂಧಿನಗರದ ಬಾಡಿಗೆ ಮನೆಯಲ್ಲೂ ನೆಲೆಸದೇ ಇರುವ ವಿಚಾರವೂ ಗೊತ್ತಾಗಿದೆ. ಇದರ ಜೊತೆ ಸುಳ್ಳು ಸಾಕ್ಷಿಗಳ ಸಹಿಯನ್ನು ಹಾಕಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ:  ನಕಲಿ ದಾಖಲೆ ತೋರಿಸಿ ಹಿಂದೂ ಯುವತಿ ಜೊತೆ ಮದ್ವೆ – ಯೂಟ್ಯೂಬರ್ ಮುಕಳೆಪ್ಪ ವಿರುದ್ಧ ಎಫ್‌ಐಆರ್

    ಮುಕುಳೆಪ್ಪ ಸುಳ್ಳು ದಾಖಲೆ ನೀಡಿ ಮದುವೆಯಾಗಿದ್ದಾನೆ. ಸುಳ್ಳು ದಾಖಲೆ ನೀಡಿ ಮದುವೆಯಾದ ಮುಕುಳೆಪ್ಪನನ್ನು ಬಂಧಿಸಬೇಕು. ದಾಖಲೆಗಳನ್ನು ಪರಿಶೀಲನೆ ಮಾಡದೇ ಈ ಮದುವೆಯನ್ನು ಮಾನ್ಯ ಮಾಡಿದ ಸಬ್ ರಿಜಿಸ್ಟರ್ ಮತ್ತು ಕಚೇರಿ ಸಿಬ್ಬಂದಿ ಸೇರಿ ಎಲ್ಲರನ್ನ ಬಂಧನ ಮಾಡಬೇಕು ಎಂದು ಶ್ರೀರಾಮಸೇನೆ ಲವ್ ಜಿಹಾದ್ ತಡೆ ಸಮಿತಿ ಅಧ್ಯಕ್ಷ ಬಸವರಾಜ ಗೌಡರ ಆಗ್ರಹಿಸಿದ್ದಾರೆ.

    ತನ್ನ ಮಗಳ ವಿರುದ್ಧ ಮತ್ತೊಮ್ಮೆ ತಾಯಿ ಶಿವಕ್ಕ, ನನ್ನ ಮಗಳು ಬೇಕು ಅಂದರೆ ಮುಕುಳೆಪ್ಪ ಮುಸ್ಲಿಂ ಧರ್ಮ‌ ಬಿಟ್ಟು ಹಿಂದೂ ಧರ್ಮಕ್ಕೆ ಮತಾಂತರ ಆಗಲಿ. ಹಿಂದೂ ಧರ್ಮಕ್ಕೆ ಖ್ವಾಜಾ ಬರಬೇಕು, ನಮ್ಮ ಆಚಾರ ವಿಚಾರ ಕಲಿಯಬೇಕು ಆಗ ನಾನು ಮದುವೆಗೆ ಒಪ್ಪುತ್ತೇನೆ. ಮುಕುಳೆಪ್ಪ ಕಲಾವಿದರಿಗೆ ಜಾತಿ ಧರ್ಮ ಇಲ್ಲ ಎನ್ನುತ್ತಾನೆ. ಆದರೆ ನನ್ನ ಮಗಳನ್ನು ಈಗಾಗಲೇ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದ್ದಾನೆ. ನನ್ನ ಮಗಳು ಸುರಕ್ಷಿತವಾಗಿಲ್ಲ ನನ್ನ ಮಗಳಿಗೆ ಖ್ವಾಜಾ ಮನೆಯಲ್ಲಿ ಪ್ರಾಣಾಪಾಯವಿದೆ ಅಂತ ಆತಂಕ ವ್ಯಕ್ತಪಡಿಸಿದ್ದಾರೆ.

  • 181 ರೂ. ಸಂಬಳ, SL ಭೈರಪ್ಪಗೂ ಹುಬ್ಬಳ್ಳಿಗೂ ಅವಿನಾಭಾವ ನಂಟು

    181 ರೂ. ಸಂಬಳ, SL ಭೈರಪ್ಪಗೂ ಹುಬ್ಬಳ್ಳಿಗೂ ಅವಿನಾಭಾವ ನಂಟು

    -ಸಾಹಿತ್ಯಕ್ಕೆ ಮಹತ್ವ ತಿರುವು ಕೊಟ್ಟಿದ್ದೆ ವಾಣಿಜ್ಯ ನಗರಿ 

    ಹುಬ್ಬಳ್ಳಿ: ನಾಡುಕಂಡ ಸರಸ್ವತಿ ಸಮ್ಮಾನ್ ಎಸ್.ಎಲ್ ಭೈರಪ್ಪನವರಿಗೂ ವಾಣಿಜ್ಯ ನಗರಿ ಹುಬ್ಬಳ್ಳಿಗೂ (Hubballi) ಅವಿನಾಭಾವ ನಂಟಿದೆ.

    ಹೌದು, ಭೈರಪ್ಪನವರ ವೃತ್ತಜೀವನ ಮತ್ತು ಸಾಹಿತ್ಯ ಹುಬ್ಬಳ್ಳಿಯಲ್ಲಿ ಮಹತ್ವದ ತಿರುವು ಪಡೆದುಕೊಂಡಿತ್ತು. ಹುಬ್ಬಳ್ಳಿಯ ಕೆಎಲ್‌ಇ ಸಂಸ್ಥೆಯ ಕಾಡುಸಿದ್ದೇಶ್ವರ ಕಾಲೇಜಿನಲ್ಲಿ ಕಲಾ ವಿಭಾಗದ ಸೈಕಾಲಜಿ ಮತ್ತು ಲಾಜಿಕ್ ವಿಷಯದ ಪ್ರಾಧ್ಯಾಪಕರಾಗಿ ಭೈರಪ್ಪನವರು 1959 ರಿಂದ 1961 ಕೆಲಸ ಮಾಡಿದ್ದರು. ಆಗ ಭೈರಪ್ಪನವರಿಗೆ 181 ರೂ. ಸಂಬಳ ಇತ್ತು. ಇವರ ಸೇವೆಯನ್ನು ಕಾಲೇಜು ಆಡಳಿತ ಮಂಡಳಿ ಇಂದಿಗೂ ನೆನಪಿಸಿಕೊಳ್ಳುತ್ತಿದೆ.ಇದನ್ನೂ ಓದಿ: ʼಲೆಫ್ಟಿಸ್ಟ್‌ಗಳು ಅಪ್ರಾಮಾಣಿಕರು, ದೇಶ ಬೆಳೆಯಬೇಕಾದರೆ ಕ್ಯಾಪಿಟಲಿಸಂ ಅಗತ್ಯʼ

    ಇನ್ನೂ ಭೈರಪ್ಪನವರ ಮೊದಲ ಕಾದಂಬರಿ `ಧರ್ಮಶ್ರೀ’ ಹುಬ್ಬಳ್ಳಿ ಸಾಹಿತ್ಯ ಭಂಡಾರದಲ್ಲಿ ಮುದ್ರಣಗೊಂಡಿತ್ತು. ಬ್ಯಾಂಕ್ ಮ್ಯಾನೇಜರ್ ಒಬ್ಬರ ಸಹಾಯದಿಂದ ಸಾಹಿತ್ಯ ಭಂಡಾರಕ್ಕೆ ಮನವಿ ಮಾಡಿದ್ದ ಭೈರಪ್ಪನವರು, ತಮ್ಮ ಕೃತಿಯನ್ನು ಮೊದಲ ಗೌರವ ಧನಕ್ಕೆ ನೀಡಿದ್ದರು.

    ಇನ್ನೂ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಹುಬ್ಬಳ್ಳಿಗೆ ಬಂದಿದ್ದರು. ಎಂಟು ದಿನ ಹುಬ್ಬಳ್ಳಿಯ ನೃಪತುಂಗ ಬೆಟ್ಟ, ಉಣಕಲ್ ಕೆರೆ, ಕಂಚಾಗರಗಲ್ಲಿ, ಧಾರವಾಡದಲ್ಲಿ ಸುತ್ತಾಡಿದ್ದರು.ಇದನ್ನೂ ಓದಿ: ನಾಡಿನ ಶ್ರೀಮಂತ ಇತಿಹಾಸವನ್ನು ಪರಿಚಯಿಸಿದ್ದ ಸಾಹಿತ್ಯದ ಸಾಕ್ಷಿಪ್ರಜ್ಞೆ: ಆರ್‌ಎಸ್‌ಎಸ್‌ ಸಂತಾಪ

  • ದಸರಾ 2025 | ಹುಬ್ಬಳ್ಳಿ-ಕೊಲ್ಲಂ ನಡುವೆ ವಿಶೇಷ ರೈಲು

    ದಸರಾ 2025 | ಹುಬ್ಬಳ್ಳಿ-ಕೊಲ್ಲಂ ನಡುವೆ ವಿಶೇಷ ರೈಲು

    ಬೆಂಗಳೂರು: ದಸರಾ ಹಬ್ಬ ಮತ್ತು ಶಬರಿಮಲೆ ಯಾತ್ರೆಯ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆಯು ಹುಬ್ಬಳ್ಳಿ (Hubballi) ಮತ್ತು ಕೊಲ್ಲಂ (Kollam) ನಡುವೆ 14 ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚರಿಸಲಿದೆ.

    ರೈಲು ಸಂಖ್ಯೆ 07313 ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೊಲ್ಲಂ ವಿಶೇಷ ಎಕ್ಸ್‌ಪ್ರೆಸ್‌ ರೈಲು ಇದೇ ಸೆ.28ರಿಂದ ಡಿ.28ರವರೆಗೆ ಪ್ರತಿ ಭಾನುವಾರ ಸಂಜೆ 3:15ಕ್ಕೆ ಹುಬ್ಬಳ್ಳಿಯಿಂದ ಹೊರಟು ಮರುದಿನ ಮಧ್ಯಾಹ್ನ 12:55ಕ್ಕೆ ಕೊಲ್ಲಂ ತಲುಪಲಿದೆ. ಇನ್ನೂ ರೈಲು ಸಂಖ್ಯೆ 07314 ಕೊಲ್ಲಂ-ಎಸ್‌ಎಸ್‌ಎಸ್ ಹುಬ್ಬಳ್ಳಿಗೆ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸೆ.29ರಿಂದ ಡಿ.29ರವರೆಗೆ ಪ್ರತಿ ಸೋಮವಾರ ಸಂಜೆ 5:00ಕ್ಕೆ ಕೊಲ್ಲಂನಿಂದ ಹೊರಟು ಮರುದಿನ ಸಂಜೆ 6:30ಕ್ಕೆ ಹುಬ್ಬಳ್ಳಿ ತಲುಪಲಿದೆ.ಇದನ್ನೂ ಓದಿ: ನಿವೃತ್ತ ಬ್ಯಾಂಕ್‌ ಅಧಿಕಾರಿಗೆ ಬರೋಬ್ಬರಿ 1 ತಿಂಗಳು ಡಿಜಿಟಲ್‌ ಅರೆಸ್ಟ್‌ – 23 ಕೋಟಿ ವಂಚನೆ

    ಈ ವಿಶೇಷ ರೈಲು ಒಟ್ಟು 22 ಬೋಗಿಗಳನ್ನು ಒಳಗೊಂಡಿದ್ದು, ಇದರಲ್ಲಿ 01 ಎಸಿ 2-ಟೈರ್, 02 ಎಸಿ 3-ಟೈರ್, 12 ಸ್ಲೀಪರ್ ಕ್ಲಾಸ್, 05 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 02 ಸೆಕೆಂಡ್ ಕ್ಲಾಸ್ ಲಗೇಜ್-ಕಮ್-ಬ್ರೇಕ್ ವ್ಯಾನ್‌ಗಳು ಇರಲಿವೆ. ಮಾರ್ಗಮಧ್ಯೆ ಈ ವಿಶೇಷ ರೈಲು, ಹಾವೇರಿ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಎಸ್‌ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರು, ಪೊದನೂರು, ಪಾಲಕ್ಕಾಡ್, ತ್ರಿಶೂರ್, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಸ್ಸೇರಿ, ತಿರುವಲ್ಲ, ಚೆಂಗನ್ನೂರು, ಮಾವೆಲಿಕರ, ಕಾಯಂಕುಲಂ, ಕರುನಾಗಪಳ್ಳಿ ಮತ್ತು ಸಂಸ್ಥಾನಕೋಟ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.

    ದಸರಾ ಹಬ್ಬ ಮತ್ತು ಶಬರಿಮಲೆ ಯಾತ್ರಾ ಅವಧಿಯಲ್ಲಿ ಪ್ರಯಾಣಿಕರಿಗೆ ಅನುಕೂಲಕರ ಪ್ರಯಾಣ ಸೌಲಭ್ಯ ಒದಗಿಸುವ ಉದ್ದೇಶದಿಂದ ಈ ವಿಶೇಷ ರೈಲು ಸೇವೆ ಆರಂಭಿಸಲಾಗಿದೆ.ಇದನ್ನೂ ಓದಿ: ಗುಜರಾತ್‌ ಕಡಲ ತೀರದಲ್ಲಿ ಸೋಮಾಲಿಯಕ್ಕೆ ಹೊರಡಬೇಕಿದ್ದ ಹಡಗಿಗೆ ಬೆಂಕಿ – ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ

  • ಯೂಟ್ಯೂಬರ್ ಮುಕಳೆಪ್ಪ ಮದುವೆ ಕೇಸ್; ಪೋಷಕರ ವಿರುದ್ಧವೇ ತಿರುಗಿ ಬಿದ್ದ ಮಗಳು!

    ಯೂಟ್ಯೂಬರ್ ಮುಕಳೆಪ್ಪ ಮದುವೆ ಕೇಸ್; ಪೋಷಕರ ವಿರುದ್ಧವೇ ತಿರುಗಿ ಬಿದ್ದ ಮಗಳು!

    ಹುಬ್ಬಳ್ಳಿ: ಯೂಟ್ಯೂಬರ್ (YouTuber) ಕ್ವಾಜಾ ಅಲಿಯಾಸ್ ಮುಕಳೆಪ್ಪ ಮದುವೆ ಧರ್ಮ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಮುಕಳೆಪ್ಪ (Mukleppa) ವಿರುದ್ಧ ಯುವತಿ ತಂದೆ ತಾಯಿ, ಹಿಂದೂಪರ ಸಂಘಟನೆಗಳು ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಮತ್ತೊಂದು ಕಡೆ ಯುವತಿ ಮುಕಳೆಪ್ಪ ಪರವಾಗಿ ಧ್ವನಿ ಎತ್ತಿದ್ದು, ಈ ಇಬ್ಬರ ಗದ್ದಲ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

    ಯೂಟ್ಯೂಬರ್ ಕ್ವಾಜಾ ಅಲಿಯಾಸ್ ಮುಕಳೆಪ್ಪ ಮದುವೆ ಪ್ರಕರಣ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಲವ್ ಜಿಹಾದ್, ನಕಲಿ ದಾಖಲೆ ಆಯಿತು. ಈಗ ಮುಕಳೆಪ್ಪ ಮದುವೆಯಾಗಿರುವ ಯವತಿಯ ತಂದೆ ತಾಯಿ ದೂರಿನ ಆಧಾರದ ಮೇಲೆ ಮುಕಳೆಪ್ಪ ಮೇಲೆ ಜೀವ ಬೆದರಿಕೆ ಮತ್ತು ಅಪಹರಣ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಕಲಿ ದಾಖಲೆ ತೋರಿಸಿ ಹಿಂದೂ ಯುವತಿ ಜೊತೆ ಮದ್ವೆ – ಯೂಟ್ಯೂಬರ್ ಮುಕಳೆಪ್ಪ ವಿರುದ್ಧ ಎಫ್‌ಐಆರ್

    ಈ ಮಧ್ಯೆ ಮುಕಳೆಪ್ಪ ಪತ್ನಿ ಗಾಯತ್ರಿ, ವಿಡಿಯೋ ಬಿಡುಗಡೆ ಮಾಡಿ, ತನ್ನ ತಂದೆ ತಾಯಿ ವಿರುದ್ಧವೇ ತಿರುಗಿ ಬಿದ್ದಾಳೆ. ನಮ್ಮ ಮದುವೆಗೆ ನಮ್ಮ ತಾಯಿ ಒಪ್ಪಿಗೆ ಇತ್ತು. ಈಗ ಯಾರೋ ಹೇಳಿರುವ ಮಾತು ಕೇಳಿ ನನ್ನ ಹಾಗೂ ಮುಕಳೆಪ್ಪ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಮತ್ತೊಂದು ಟ್ವಿಸ್ಟ್ ನೀಡಿದ್ದಾಳೆ. ಇದನ್ನೂ ಓದಿ: ಧಾರವಾಡ | ನಕಲಿ ದಾಖಲೆ ಸೃಷ್ಟಿಸಿ ಹಿಂದೂ ಯುವತಿ ಜೊತೆ ಮದ್ವೆ – ಯುಟ್ಯೂಬರ್‌ ಮುಕಳೆಪ್ಪ ವಿರುದ್ಧ ದೂರು

    ಭಾನುವಾರ ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಗೆ ಹಿಂದೂಪರ ಸಂಘಟನೆಗಳ ಬೆಂಬಲದಿಂದ ಗಾಯತ್ರಿ ಪೋಷಕರು ದೂರು ದಾಖಲಿಸಿದ್ದರು. ಮುಕಳೆಪ್ಪ ತಪ್ಪು ಮಾಹಿತಿ ನೀಡಿದ್ದಾನೆ. ಮೊದಲಿಗೆ ತಾನು ಮುಸ್ಲಿಂ ಎನ್ನುವ ಸಂಗತಿ ಮುಚ್ಚಿಟ್ಟಿದ್ದ. ಇನ್ನೂ ಗಾಯತ್ರಿ ತನ್ನ ತಂಗಿಯ ರೀತಿ ಎಂದು ಹೇಳಿ ನಂಬಿಸಿದ್ದ. ಅಲ್ಲದೆ ಇವರಿಬ್ಬರ ಮದುವೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಹೀಗಿದ್ದರೂ ಮಗಳ ತಲೆಕೆಡಿಸಿ ಮುಕಳೆಪ್ಪ ಬಲವಂತವಾಗಿ ಮದುವೆ ಆಗಿದ್ದಾನೆ ಎಂದು ಯುವತಿ ಪೋಷಕರು ಆರೋಪಿಸಿದ್ದರು.

    ಮುಕಳೆಪ್ಪ ವಿರುದ್ಧ ದಾಖಲಾಗಿರುವ ಅಪಹರಣ ಮತ್ತು ಜೀವ ಬೆದರಿಕೆ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಬಗ್ಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, ಯುವತಿ ಎಲ್ಲೋ ದೂರದಲ್ಲಿ ಇದ್ದು ವೀಡಿಯೋ ಬಿಡುಗಡೆ ಮಾಡಿದ್ರೆ ಆಗಲ್ಲ. ವಿಡಿಯೋ ಸ್ವ ಇಚ್ಛೆಯಿಂದ ಹೇಳಿದ್ದಾರಾ ಅಥವಾ ಯಾರಾದರೂ ಬಲವಂತವಾಗಿ ಮಾಡಿಸಿದ್ದಾರಾ ವಿಚಾರಣೆ ಮಾಡಬೇಕು. ಯೂಟ್ಯೂಬರ್ ಕ್ವಾಜಾ ಅಲಿಯಾಸ್ ಮುಕಳೆಪ್ಪ ವಿರುದ್ಧ ಎಫ್‌ಐಆರ್ ದಾಖಲು ಹಿನ್ನಲೆ ಮುಕಳೆಪ್ಪ ಮತ್ತು ಗಾಯತ್ರಿ ಹೇಗೆ ಮದುವೆ ಆಗಿದ್ದಾರೆ ಅನ್ನೋದು ಗೊತ್ತಿಲ್ಲ. ಆದರೆ ಮುಕಳೆಪ್ಪ ವಿರುದ್ಧ ದೂರು ಬಂದಿದೆ. ಹೀಗಾಗಿ ನಾವು ವಿಚಾರಣೆ ಮಾಡಬೇಕು. ಅದಕ್ಕೂ ಮೊದಲು ಯುವತಿಯನ್ನು ರಕ್ಷಣೆ ಮಾಡುತ್ತೇವೆ ಎಂದಿದ್ದಾರೆ.

  • 18,000 ಬದಲಿಗೆ 8,000 ರೂ. ವೇತನ – ಗುತ್ತಿಗೆದಾರನಿಂದ ಬೇಸತ್ತು ಪೌರಕಾರ್ಮಿಕ ಆತ್ಮಹತ್ಯೆಗೆ ಯತ್ನ

    18,000 ಬದಲಿಗೆ 8,000 ರೂ. ವೇತನ – ಗುತ್ತಿಗೆದಾರನಿಂದ ಬೇಸತ್ತು ಪೌರಕಾರ್ಮಿಕ ಆತ್ಮಹತ್ಯೆಗೆ ಯತ್ನ

    ಧಾರವಾಡ: 18,000 ರೂ. ಬದಲಿಗೆ 8,000 ರೂ. ವೇತನ ನೀಡುತ್ತಿದ್ದುದ್ದಕ್ಕೆ ಮನನೊಂದ ಪೌರಕಾರ್ಮಿಕರೊಬ್ಬರು (Pourakarmika) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ.

    ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಕೃಷ್ಣ ವಗ್ಗೆಣ್ಣವರ ಎಂಬುವವರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನೂ ಓದಿ: ದಾವಣಗೆರೆ | ಡಿವೋರ್ಸ್ ವಿವಾದ – ಕೋರ್ಟ್‍ನಲ್ಲೇ ಪತ್ನಿಗೆ ಚಾಕು ಇರಿದ ಪತಿ

    ಇವರಿಗೆ ಸರ್ಕಾರ ತಿಂಗಳಿಗೆ 18,000 ರೂ. ವೇತನ ನೀಡುತ್ತದೆ. ಆದರೆ ಮಹಾನಗರ ಪಾಲಿಕೆಗೆ ಬರುವ ಈ ವೇತನವನ್ನು ಗುತ್ತಿಗೆದಾರ ಕಡಿತ ಮಾಡಿ, ಕೇವಲ 8,000 ರೂ. ಹಣವನ್ನು ಮಾತ್ರ ನೀಡುತ್ತಿದ್ದ. ರಜೆ ಮಾಡಿದರೆ ಆ ಸಂಬಳದಲ್ಲೂ ಕಡಿತಗೊಳಿಸಿ ಹಣ ನೀಡುತ್ತಿದ್ದ.

    ಇದರಿಂದ ಮನನೊಂದು ಪೌರಕಾರ್ಮಿಕ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪಾಲಿಕೆ ನಾಮ ನಿರ್ದೇಶಿತ ಸದಸ್ಯ ತುಳಸಪ್ಪ ಪೂಜಾರ ಆರೋಪಿಸಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿರುವ ಪೌರ ಕಾರ್ಮಿಕನಿಗೆ ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

    ಕಳೆದ 15 ವರ್ಷಗಳಿಂದ ಧಾರವಾಡದ 17ನೇ ವಾರ್ಡ್ನಲ್ಲಿ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಕೃಷ್ಣ ಅವರಿಗೆ ಗುತ್ತಿಗೆದಾರ ಕೆಲ ತಿಂಗಳಿನಿಂದ ವೇತನವನ್ನೇ ನೀಡಿರಲಿಲ್ಲ. ಜೊತೆಗೆ ಕಿರುಕುಳ ಸಹ ನೀಡುತ್ತಿದ್ದ ಎಂದು ಪತ್ನಿ ಆರೋಪಿಸಿದ್ದಾರೆ.

    ಈ ಬಗ್ಗೆ ಪಾಲಿಕೆಯ ಮೇಯರ್ ಜ್ಯೋತಿ ಪಾಟೀಲ್ ಪ್ರತಿಕ್ರಿಯಿಸಿ, ಮಹಾನಗರ ಪಾಲಿಕೆಯಿಂದ ಪ್ರತಿ ತಿಂಗಳು ಹೊರ ಗುತ್ತಿಗೆ ಆಧಾರದ ಮೇಲೆ ಪೌರ ಕಾರ್ಮಿಕರಿಗೆ 18,000 ಸಾವಿರ ವೇತನವನ್ನ ನೇರವಾಗಿ ಅವರ ಅಕೌಂಟ್‌ಗೆ ಜಮೆ ಮಾಡುತ್ತದೆ. ಆದರೆ ಗುತ್ತಿಗೆದಾರ ಸಾಕಷ್ಟು ಪೌರ ಕಾರ್ಮಿಕರಿಗೆ ಇದೇ ರೀತಿಯಾಗಿ ಪ್ರತಿ ತಿಂಗಳು ವೇತನ ಕಡಿಮೆ ಕೊಟ್ಟು ತೊಂದರೆ ಕೊಡುತ್ತಿದ್ದಾನೆ. ಸಂಬAಧಪಟ್ಟ ಗುತ್ತಿಗೆದಾರನ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.