Tag: ಹುಬ್ಬಳಿ

  • ಕಾಂಗ್ರೆಸ್ ದಿಂಬು, ಹಾಸಿಗೆ, ಬಿಸ್ಕೆಟ್, ಕಾಫಿಯಲ್ಲೂ ಭ್ರಷ್ಟಾಚಾರ ಮಾಡಿದೆ: ಬೊಮ್ಮಾಯಿ

    ಕಾಂಗ್ರೆಸ್ ದಿಂಬು, ಹಾಸಿಗೆ, ಬಿಸ್ಕೆಟ್, ಕಾಫಿಯಲ್ಲೂ ಭ್ರಷ್ಟಾಚಾರ ಮಾಡಿದೆ: ಬೊಮ್ಮಾಯಿ

    ಹುಬ್ಬಳಿ: ಆಪಾದನೆ ಮಾಡುವವರು ಮೊದಲು ಶುದ್ಧಹಸ್ತರಿರಬೇಕು. ಆವಾಗ ಮಾತ್ರ ಅದಕ್ಕೆ ಬೆಲೆ ಬರುತ್ತದೆ. ಕಾಂಗ್ರೆಸ್‌ನವರು (Congress) ದಿಂಬು ಹಾಸಿಗೆಯನ್ನೂ ಬಿಟ್ಟಿಲ್ಲ. ಬಿಸ್ಕೆಟ್, ಕಾಫಿಯಲ್ಲೂ ಭ್ರಷ್ಟಾಚಾರ (Corruption) ಮಾಡಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಆರೋಪಿಸಿದ್ದಾರೆ.

    ಹುಬ್ಬಳಿಯಲ್ಲಿ (Hubballi) ಮಾತನಾಡಿದ ಅವರು, ಕಾಂಗ್ರೆಸ್ ಎಲ್ಲದರಲ್ಲೂ ಭ್ರಷ್ಟಾಚಾರ ಮಾಡಿದೆ. ಎಂಬಿ ಪಾಟೀಲ್, ಜಾರ್ಜ್, ಮಹದೇವಪ್ಪರಿಗೆ ಕೇಳಬೇಕು, ಸಿದ್ದರಾಮಯ್ಯ ಇಷ್ಟೆಲ್ಲಾ ಟಾರ್ಗೆಟ್ ಕೊಟ್ಟಿದ್ದರು ಎಂದು. ಭ್ರಷ್ಟಾಚಾರದ ಕೂಪದಲ್ಲಿ ಇರುವವರು ಆಪಾದನೆ ಮಾಡಿದರೆ ನಡೆಯಲ್ಲ. ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣ ಬಂದ್ ಆಗುತ್ತಿದೆ. ಹೀಗಾಗಿ ರಾಜ್ಯ ಬಂದ್ ಮಾಡುವುದರಲ್ಲಿ ಅರ್ಥವಿಲ್ಲ. ಕಾಂಗ್ರೆಸ್ ಮಾಡಿದ ಕರ್ಮಕಾಂಡ ಒಂದಾ ಎರಡಾ? ಎಂದು ಸಿಎಂ ಪ್ರಶ್ನೆ ಮಾಡಿದರು.

    ಬಂದ್ ಮೂಲಕ ತಮ್ಮ ರಾಜಕೀಯ ಭವಿಷ್ಯ ಬರೆದುಕೊಳ್ಳಬಹುದು ಅನ್ನೋದು ಮೂರ್ಖತನ. ಚುನಾವಣಾ ಅಖಾಡವಿದೆ, ಜನರೇ ತೀರ್ಮಾನ ಮಾಡುತ್ತಾರೆ. ಕಾಂಗ್ರೆಸ್ ಪಕ್ಷವೇ ಭ್ರಷ್ಟಾಚಾರದ ಕೂಪವಾಗಿದೆ. ಕಾಂಗ್ರೆಸ್‌ನ ಕೈ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹೀಗಾಗಿ ಜನ ಈ ಬಂದ್ ಕರೆಗೆ ಬೆಂಬಲ ನೀಡುವುದಿಲ್ಲ ಎಂದರು. ಇದನ್ನೂ ಓದಿ: ಇಂದಿನಿಂದ ಎಲ್ಲಾ ಆರೋಗ್ಯ ಸಿಬ್ಬಂದಿಗೆ ಮಾಸ್ಕ್ ಕಡ್ಡಾಯ: ಸುಧಾಕರ್

    ಬೆಳಗಾವಿ ರಾಜಹಂಸಗಡದಲ್ಲಿ ಕಾಂಗ್ರೆಸ್‌ನಿಂದ ಶಿವಾಜಿ ಪ್ರತಿಮೆ ಮರು ಉದ್ಘಾಟನೆ ಇದೊಂದು ಹಾಸ್ಯಾಸ್ಪದ ಸಂಗತಿ. ಸರ್ಕಾರವೇ ಬಂದು ಮೂರ್ತಿ ಉದ್ಘಾಟನೆ ಮಾಡಿದ ಮೇಲೆ ಈ ರೀತಿ ಮಾಡೋದು ಸರಿಯಲ್ಲ. ಸರ್ಕಾರದಿಂದ ಉದ್ಘಾಟನೆ ಮಾಡಿದ ನಂತರ ಒಣ ಪ್ರತಿಷ್ಠೆಗಾಗಿ ಈ ರೀತಿ ಮಾಡಲಾಗಿದೆ. ರಾಷ್ಟ್ರನಾಯಕರ ಹೆಸರಲ್ಲಿ ಈ ರೀತಿ ರಾಜಕೀಯ ಮಾಡೋದು ಸರಿಯಲ್ಲ ಎಂದು ಕಿಡಿಕಾರಿದರು.

    ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಐಎಸ್‌ಕೆಪಿ ಹೊಣೆಹೊತ್ತ ವಿಚಾರವಾಗಿ ಮಾತನಾಡಿದ ಅವರು, ಈಗ ಡಿಕೆ ಶಿವಕುಮಾರ್ ಏನು ಹೇಳುತ್ತಾರೆ ಕೇಳಬೇಕು. ಬರೀ ಸಾಧಾರಣ ಕುಕ್ಕರ್ ಎಂದು ಡಿಕೆಶಿ ಹೇಳಿದ್ದರು. ಬಿಜೆಪಿಯವರು ಇದರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದಿದ್ದರು. ಈಗ ಈ ವಿಚಾರಕ್ಕೆ ಡಿಕೆಶಿ ಏನು ಹೇಳ್ತಾರೆ ಪ್ರಶ್ನೆ ಕೇಳಿ ಎಂದು ಸಿಎಂ ಮಾಧ್ಯಮಗಳಿಗೆ ಸಲಹೆ ನೀಡಿದರು. ಇದನ್ನೂ ಓದಿ: ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‍ಗೆ ಮಾಡಾಳ್ ವಿರೂಪಾಕ್ಷಪ್ಪ ಅರ್ಜಿ

  • ಈದ್ಗಾ ಮೈದಾನ ವಿಚಾರವಾಗಿ ಹಿಂದೂ ಸಂಘಟನೆಗಳ ಸವಾಲು – ಎಚ್ಚೆತ್ತ ಪಾಲಿಕೆ ದಶ ದಿಕ್ಕುಗಳಲ್ಲಿ ಹದ್ದಿನ ಕಣ್ಣು

    ಈದ್ಗಾ ಮೈದಾನ ವಿಚಾರವಾಗಿ ಹಿಂದೂ ಸಂಘಟನೆಗಳ ಸವಾಲು – ಎಚ್ಚೆತ್ತ ಪಾಲಿಕೆ ದಶ ದಿಕ್ಕುಗಳಲ್ಲಿ ಹದ್ದಿನ ಕಣ್ಣು

    ಹುಬ್ಬಳ್ಳಿ: ಈದ್ಗಾ ಮೈದಾನದ ವಿಚಾರದಲ್ಲಿ ಹುಬ್ಬಳ್ಳಿ-ಧಾರವಾಡ ಪಾಲಿಕೆಗೆ ಟೆಕ್ಷನ್ ಶುರುವಾಗಿದೆ. ಹಿಂದೂ ಸಂಘಟನೆಗಳ ಸವಾಲಿಗೆ ಪಾಲಿಕೆ ಮತ್ತು ಪೊಲೀಸ್ ಇಲಾಖೆ ಹೆದರಿಕೊಂಡಿದೆಯಾ ಎಂಬ ಅನುಮಾನ ಮೂಡಿದೆ.

    ಸದನ ಸಮಿತಿ ವರದಿ ಬರುವ ಮುಂಚಿತವಾಗಿಯೇ ಈದ್ಗಾ ಮೈದಾನದ ಸುತ್ತಲೂ ಕಣ್ಗಾವಲಿಟ್ಟಿರುವ ಅಧಿಕಾರಿಗಳು, ಈದ್ಗಾ ಮೈದಾನದಲ್ಲಿ ಪಾಲಿಕೆಯಿಂದ ಏಕಾಏಕಿ 7 ಕಡೆ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಎಲ್ಲಾ ಮುಖ್ಯ ಗೇಟ್‌ಗಳಿಗೆ ಬೀಗ ಸಹ ಹಾಕಲಾಗಿದೆ. ಇದಕ್ಕೆ ಪೊಲೀಸ್ ಇಲಾಖೆ ಸಹ ಸಾಥ್ ನೀಡಿದೆ. ಇದನ್ನೂ ಓದಿ: ಇಂಡಿಯಾ, ಪಾಕ್ ಹೈವೋಲ್ಟೇಜ್ ಕ್ರಿಕೆಟ್- ಭಾರತ ಗೆಲುವಿಗೆ ಮುಸ್ಲಿಮರಿಂದ ವಿಶೇಷ ಪೂಜೆ

    ಅವಕಾಶ ಸಿಗಲಿ, ಸಿಗದೇ ಇರಲಿ. ಈ ಬಾರಿ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡೇ ಮಾಡುತ್ತೇವೆ ಅಂತ ಹಿಂದೂ ಪರ ಸಂಘಟನೆಗಳು ಸವಾಲು ಹಾಕಿದ್ದವು. ಈ ಹಿನ್ನೆಲೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಈದ್ಗಾ ಮೈದಾನದ ದಶ ದಿಕ್ಕುಗಳಲ್ಲೂ ಹದ್ದಿನ ಕಣ್ಣಿಡಲು ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಮುಂದಾಗಿವೆ. ಇದನ್ನೂ ಓದಿ: ಮುರುಘಾ ಶ್ರೀಗಳ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ: ಬಿಎಸ್‍ವೈ

    Live Tv
    [brid partner=56869869 player=32851 video=960834 autoplay=true]

  • ಮತ್ತೆ ಮಹದಾಯಿ ಹೋರಾಟಕ್ಕೆ ನಾಂದಿ – ರಾಜ್ಯ ಸರ್ಕಾರಕ್ಕೆ ಕಾನೂನಾಸ್ತ್ರದ ಬಿಸಿ ಮುಟ್ಟಿಸಿದ ರೈತರು

    ಮತ್ತೆ ಮಹದಾಯಿ ಹೋರಾಟಕ್ಕೆ ನಾಂದಿ – ರಾಜ್ಯ ಸರ್ಕಾರಕ್ಕೆ ಕಾನೂನಾಸ್ತ್ರದ ಬಿಸಿ ಮುಟ್ಟಿಸಿದ ರೈತರು

    ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಜನರ ಕನಸಿನ ಕೂಸಾಗಿರುವ ಮಹದಾಯಿ ನೀರು ಸದ್ಬಳಕೆ ಆಸೆಯಾಗಿಯೇ ಉಳಿದಿದೆ. ಹೆಸರಿಗೆ ಮಾತ್ರ ಯೋಜನೆ ಅನುಷ್ಠಾನಕ್ಕೆ ಸಾವಿರಾರು ಕೋಟಿ ಅನುದಾನ ಮೀಸಲಿಟ್ಟಿರುವ ಸರ್ಕಾರ, ಕಾಮಗಾರಿಯನ್ನು ಮಾತ್ರ ಇನ್ನೂ ಆರಂಭಿಸಿಲ್ಲ. ಇದೀಗ ಯೋಜನೆ ಶೀಘ್ರ ಅನುಷ್ಠಾನಕ್ಕೆ ರೈತರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಈ ಮೂಲಕ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.

    ಮಹದಾಯಿ ಯೋಜನೆಗಾಗಿ ಕಳೆದ 3 ಬಜೆಟ್‌ಗಳಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ಕೋಟಿ ಅನುದಾನವನ್ನು ಘೋಷಣೆ ಮಾಡಲಾಗಿದೆ. ಇದು ಕೇವಲ ರೈತರ ಮೂಗಿಗೆ ತುಪ್ಪ ಹಚ್ಚುವ ಕೆಲಸವಾಗಿದ್ದು, ಕಾಮಗಾರಿ ಆರಂಭಕ್ಕೆ ಯಾರು ಕೂಡ ಮುಂದಾಗುತ್ತಿಲ್ಲ. ಇದು ಆಶಾಭಾವನೆ ಹೊತ್ತು ಕುಳಿತಿರುವ ಲಕ್ಷಾಂತರ ರೈತರಿಗೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ರೈತರು ಮತ್ತೆ ಹೋರಾಟಕ್ಕೆ ನಾಂದಿ ಹಾಡಿ, ಸರ್ಕಾರಕ್ಕೆ ಮತ್ತೆ ಬಿಸಿ ಮುಟ್ಟಿಸಲು ಸಜ್ಜಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ತುರ್ತು ಆಕ್ಸಿಜನ್ ಜನರೇಟರ್ಸ್ ಸ್ಥಾಪನೆ

    ಮಾಜಿ ಸಿಎಂ ಯಡಿಯೂರಪ್ಪ ತಮ್ಮ ಬಜೆಟ್‌ನಲ್ಲಿ ಮಹದಾಯಿ ಕಾಮಗಾರಿಗಾಗಿ 500 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದರು. ಈಗಿನ ಸಿಎಂ ಬಸವರಾಜ ಬೊಮ್ಮಾಯಿ ಕೂಡಾ ಸಾಕಷ್ಟು ಭರವಸೆಯ ಮಾತುಗಳನ್ನಾಡಿ, ಬಜೆಟ್‌ನಲ್ಲಿ 1,000 ಕೋಟಿ ರೂ. ಮೀಸಲಿಟ್ಟಿದ್ದಾರೆ. ಈಗಾಗಲೇ 3 ಹಂತದಲ್ಲಿ ಕೇಂದ್ರ ಹಾಗೂ ರಾಜ್ಯ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಿವೆ.

    ಇಷ್ಟೆಲ್ಲಾ ಅನುದಾನವಿದ್ದರೂ ಕಾಮಗಾರಿ ಮಾತ್ರ ಆರಂಭವಾಗಿಲ್ಲ. ಕೇಂದ್ರ ಹಾಗೂ ರಾಜ್ಯದ ಸಚಿವರು ಮಾತ್ರವಲ್ಲದೆ ಸಿಎಂ ಕೂಡ ಈ ಭಾಗದವರಾಗಿದ್ದರೂ ನೋ ಯೂಸ್. ಇದು ಸಾಕಷ್ಟು ಹೋರಾಟ ಮಾಡಿ ಕೇಸ್ ಹಾಕಿಸಿಕೊಂಡು ಇಂದಿಗೂ ಸಮನ್ಸ್ ಜಾರಿಯಾಗುತ್ತಿರುವ ರೈತರ ಪರಿಶ್ರಮಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇದನ್ನೂ ಓದಿ: ಅಮರನಾಥ ಯಾತ್ರೆಗೆ ಎರಡೇ ದಿನ: ಯಾತ್ರಾರ್ಥಿಗಳಿಗೆ ಆಧಾರ್, ಸರ್ಕಾರಿ ಗುರುತಿನ ಚೀಟಿ ಕಡ್ಡಾಯ

    ಇದೀಗ ಮತ್ತೆ ಹೋರಾಟದ ಹಾದಿ ತುಳಿದಿರುವ ರೈತರು, ಈ ಬಾರಿ ಕಾನೂನಿನ ಮೂಲಕ ಸರ್ಕಾರಕ್ಕೆ ಚಾಟಿ ಬೀಸಲು ಮುಂದಾಗಿದ್ದಾರೆ. ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಕಾನೂನು ಸಮರ ಆರಂಭಿಸಿದ್ದಾರೆ.

    Live Tv

  • ಹೊರಟ್ಟಿ ಬಿಜೆಪಿ ಸೇರ್ಪಡೆಗೆ ಬಿಜೆಪಿಗರಿಂದಲೇ ತೀವ್ರ ವಿರೋಧ

    ಹೊರಟ್ಟಿ ಬಿಜೆಪಿ ಸೇರ್ಪಡೆಗೆ ಬಿಜೆಪಿಗರಿಂದಲೇ ತೀವ್ರ ವಿರೋಧ

    – ಜೆಪಿ ನಡ್ಡಾಗೆ ಬಿಜೆಪಿ ಪ್ರಮುಖರಿಂದ ಪತ್ರ
    – ಹೊರಟ್ಟಿ ವಿರುದ್ಧ ದಾಖಲೆ ಸಹಿತ ಗಂಭೀರ ಆರೋಪ

    ಹುಬ್ಬಳ್ಳಿ: ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರ ಮೇಲ್ಮನೆ ಸದಸ್ಯತ್ವದ ಅವಧಿ ಮುಗಿಯುತ್ತಿದ್ದು, ಇದೀಗ ಅವರು ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ಊಹಾಪೋಹಗಳು ಎದ್ದಿವೆ.

    ಒಂದು ಕಡೆ ಪಕ್ಷಕ್ಕೆ ಹೊರಟ್ಟಿ ಸೇರ್ಪಡೆಯಾಗುವುದಾದರೆ ಸ್ವಾಗತ ಎಂದು ಬಿಜೆಪಿಯ ಹಿರಿಯ ನಾಯಕರು ಹೇಳಿಕೆ ನೀಡಿದ್ದಾರೆ. ಮತ್ತೊಂದು ಕಡೆ ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆಗೆ ಕೆಲವು ಬಿಜೆಪಿಗರೇ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಗೆ ಬಿಜೆಪಿ ಪ್ರಮುಖರು ಪತ್ರ ಬರೆದಿದ್ದಾರೆ. ಪತ್ರದಲ್ಲಿ ಹೊರಟ್ಟಿ ವಿರುದ್ಧ ಎಫ್‌ಐಆರ್ ಸಹಿತ ಆರೋಪಗಳ ಸುರಿಮಳೆಯಿದೆ. ಇದರ ಜೊತೆಗೆ ಪ್ರಮುಖ ಹತ್ತು ಅಂಶಗಳನ್ನು ಪತ್ರದಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: 8ಕ್ಕೂ ಹೆಚ್ಚು ಸ್ವಾಮೀಜಿಗಳೊಂದಿಗೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ವೀಕ್ಷಿಸಿದ ಸಿದ್ದಗಂಗಾ ಶ್ರೀ

    ಹತ್ತು ಅಂಶಗಳು:
    1) ಬಸವರಾಜ್ ಹೊರಟ್ಟಿಗೆ 76 ವರ್ಷ. ಪಕ್ಷದ ನಿಯಮದಂತೆ ಇವರಿಗೆ ಟಿಕೆಟ್ ನೀಡಲು ಅವಕಾಶವಿಲ್ಲ.
    2) ಈ ಹಿಂದೆ ಹೊರಟ್ಟಿ ಒಂದೇ ಸಮಯದಲ್ಲಿ ಎರಡೆರಡು ವೇತನ ಪಡೆದಿದ್ದರು. 1980ರಲ್ಲಿ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರೂ 1999ರ ವರೆಗೆ ಲ್ಯಾಮಿಂಗ್ಟನ್ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ವೇತನ ಪಡೆದಿದ್ದರು.
    3) ಧಾರವಾಡದಲ್ಲಿ ಎಸ್‌ಟಿ ಸಮಾಜಕ್ಕೆ ಸೇರಿದ ಸರ್ವೋದಯ ಶಿಕ್ಷಣ ಸಂಸ್ಥೆ ಆಸ್ತಿ ಕಬಳಿಸಿದ ಆರೋಪ ಇವರ ಮೇಲಿದೆ.
    4) ಶಿಕ್ಷಣ ಸಂಸ್ಥೆ ವಿಚಾರದಲ್ಲಿ ಇವರ ಮೇಲೆ ಎಫ್‌ಐಆರ್ ದಾಖಲಾಗಿದೆ.
    5) ಹಿಂದುತ್ವ ವಿರುದ್ಧದ ಚಳುವಳಿಯಲ್ಲಿ ಕಾಂಗ್ರೆಸ್ ಜೊತೆ ಹೊರಟ್ಟಿ ಗುರುತಿಸಿಕೊಂಡಿದ್ದರು.
    6) ಬಿಜೆಪಿ ಪಕ್ಷದ ಸಿದ್ಧಾಂತಗಳನ್ನು ಇವರು ಒಪ್ಪಿಕೊಂಡಿಲ್ಲ.
    7) ಹಾವೇರಿ, ಧಾರವಾಡ, ಗದಗ, ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದೆ.
    8) ಕ್ಷೇತ್ರದಲ್ಲಿ 17 ಶಾಸಕರು, 3 ಸಂಸತ್ ಸದಸ್ಯರು, 4 ಪರಿಷತ್ ಸದಸ್ಯರು, ಓರ್ವ ಸಭಾಪತಿ, 3 ಕ್ಯಾಬಿನೆಟ್ ಸಚಿವರು, ಒಬ್ಬ ಕೇಂದ್ರ ಸಚಿವ, ರಾಜ್ಯದ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು ಕ್ಷೇತ್ರದಲ್ಲಿದ್ದಾರೆ.
    9) ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಯಾರೊಬ್ಬರೂ ಶಾಸಕರಿಲ್ಲ.
    10) ಬಸವರಾಜ್ ಹೊರಟ್ಟಿ ಒಬ್ಬ ಕಳಂಕಿತ ವ್ಯಕ್ತಿ, ಇಂತಹ ಕಳಂಕಿತ ವ್ಯಕ್ತಿಗೆ ಟಿಕೆಟ್ ಕೊಟ್ಟು ಸಾಧಿಸುವುದು ಏನಿದೆ? ಇದನ್ನೂ ಓದಿ: 21 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ- ರಾಜ್ಯದಲ್ಲಿಂದು 92 ಮಂದಿಗೆ ಕೊರೊನಾ, ಇಬ್ಬರು ಸಾವು

    ಹೀಗೆ ಪತ್ರದ ಜೊತೆಗೆ ಹಲವು ದಾಖಲೆಗಳನ್ನು ಹೈಕಮಾಂಡ್‌ಗೆ ಸಲ್ಲಿಸಿದ್ದಾರೆ. ಯಾವುದೇ ಕಾರಣಕ್ಕೂ ಹೊರಟ್ಟಿ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಬಾರದು ಎಂದು ಮನವಿ ಮಾಡಲಾಗಿದೆ.

  • ಆರ್‌ಎಸ್‌ಎಸ್‌ನಿಂದ ಕೋವಿಡ್ ನೆರವು ಕೇಂದ್ರ ಸ್ಥಾಪನೆ..!

    ಆರ್‌ಎಸ್‌ಎಸ್‌ನಿಂದ ಕೋವಿಡ್ ನೆರವು ಕೇಂದ್ರ ಸ್ಥಾಪನೆ..!

    ಹುಬ್ಬಳ್ಳಿ: ಪರಸ್ಪರ ಸಹಕಾರದಿಂದ ಮಾತ್ರ ಕೊರೊನಾ ಎರಡನೇ ಅಲೆಯನ್ನು ಎದುರಿಸಲು ಸಾಧ್ಯ ಎಂದು ಆರ್‍ಎಸ್‍ಎಸ್ ಹಿರಿಯ ಪ್ರಚಾರಕ ರಾಷ್ಟ್ರೀಯ ವ್ಯವಸ್ಥಾ ಪ್ರಮುಖ ಮಂಗೇಶ ಬೇಂಡೆ ಹೇಳಿದರು.

    ಸೇವಾ ಭಾರತಿ ಟ್ರಸ್ಟ್ ಹಾಗೂ ನೆರವು ಸಹಯೋಗದಲ್ಲಿ ಇಲ್ಲಿನ ಕಿಮ್ಸ್ ಎದುರು ಸ್ಥಾಪಿಸಲಾದ ಕೊರೊನಾ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೊರೊನಾ ವಿಚಾರದಲ್ಲಿ ಭಾರತವನ್ನು ಇತರೆ ರಾಷ್ಟ್ರಗಳ ಜೊತೆಗೆ ಹೋಲಿಕೆ ಮಾಡುವುದು ಸರಿಯಲ್ಲ. ಅಮೆರಿಕ, ಇಂಗ್ಲೆಂಡ್ ಗೆ ಹೋಲಿಸಿದರೆ ಭಾರತ ಕೊರೊನಾ ಸೋಂಕನ್ನು ಸಮರ್ಥವಾಗಿ ಎದುರಿಸುತ್ತದೆ. ನಮ್ಮ ದೇಶದಲ್ಲಿ ಪರಸ್ಪರ ಸಹಕಾರದಿಂದ ಕೊರೊನಾ ಎದುರಿಸಲಾಗುತ್ತಿದೆ ಎಂದು ಹೇಳಿದರು.

    ಸಂಘದಿಂದ 5 ಲಕ್ಷಕ್ಕೂ ಹೆಚ್ಚಿನ ಕಾರ್ಯಕರ್ತರು ಹಗಲಿರುಳು ಸ್ವಯಂಪ್ರೇರಿತ ಕೋವಿಡ್ ವಾರಿಯರ್ ಆಗಿ ಶ್ರಮಿಸುತ್ತಿದ್ದಾರೆ. ಆತ್ಮಸ್ಥೈರ್ಯ ಹೆಚ್ಚಿಸುವ ಕಾರ್ಯವನ್ನು ಸಂಘದ ಕಡೆಯಿಂದ ಮಾಡುತ್ತಿದ್ದು, ಸಂಘ ಈ ಕಾರ್ಯವನ್ನು ಸಹಾಯ ಎಂಬ ಭಾವನೆಯಿಂದ ಅಲ್ಲದೆ, ಸಹಕಾರ ಸೌಹಾರ್ದದಿಂದ ಎಂಬಂತೆ ಕಾರ್ಯ ಮಾಡುತ್ತಿದೆ ಎಂದರು. ನಮ್ಮ ಮಾಧ್ಯಮಗಳು ಸಮಾಜದಲ್ಲಿ ಜನರಿಗೆ ಆತ್ಮವಿಶ್ವಾಸ ಹೆಚ್ಚಿಸುವ ಮತ್ತು ಜನರ ಮನಸ್ಥಿತಿಗೆ ಧೈರ್ಯ ತುಂಬುವ ಕಾರ್ಯ ಮಾಡಬೇಕಾಗಿದೆ ಎಂದು ಮನವಿ ಮಾಡಿದರು.

    ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರಠಾಣೆ ಆರೋಗ್ಯ ಇಲಾಖೆಗಳೊಂದಿಗೆ ಸಹಕಾರ ನೀಡುವ ಸಂಘ ಸಂಸ್ಥೆಗಳ ಕಾರ್ಯ ಶ್ಲಾಘನೀಯವಾದದ್ದು, ಹಾಗೂ ಬಡವರಿಗೆ ನೆರವು ನೀಡುವ ಕೆಲಸ ಪ್ರತಿಯೊಂದು ಸಹಕಾರಿ ಸಂಘ ಸಂಸ್ಥೆಗಳಿಂದ ಆಗುತ್ತಿರುವುದು ಸಂತೋಷವಾಗಿದೆ ಎಂದು ತಿಳಿಸಿದರು. ಮೇ ತಿಂಗಳಲ್ಲಿ ಕೊರೊನಾ ವಿಕೋಪಕ್ಕೆ ಹೋಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಜನತೆಯ ನೆರವಿಗೆ ಧಾವಿಸಿರುವುದು ಸ್ವಾಗತಾರ್ಹ ಎಂದರು.

    ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ವಿಭಾಗ ಕಾರ್ಯವಾಹಕ ಕಿರಣ ಗುಡ್ಡದಕೇರಿ ಮಾತನಾಡಿ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಂಘ ಯಾವ ರೀತಿಯಲ್ಲಿ ಸ್ಪಂದನೆ ಮಾಡುತ್ತದೆಯೋ ಅದೇ ರೀತಿ ಈಗಲೂ ಮುಂದಾಗಿದೆ. ಮೊದಲನೇಯದಾಗಿ ಸರ್ಕಾರದ ಕಾನೂನುಗಳನ್ನು ತಿಳಿಸಿ ಜಾಗೃತಿ ಮೂಡಿಸುವ ಕಾರ್ಯ, ರಕ್ತದಾನ ಶಿಬಿರಗಳನ್ನು ಏರ್ಪಡಿಸಿರುವುದು, ಸಹಾಯವಾಣಿ ಮೂಲಕ ಕೋವಿಡ್ ಮಾಹಿತಿಯನ್ನು ನೀಡುವ ಕಾರ್ಯ, ಟೆಲಿ ಮೆಡಿಸಿನ್, ಔಷಧ ಒದಗಿಸುವುದು, ಮೃತಪಟ್ಟರೆ ಅಂತ್ಯಸಂಸ್ಕಾರಕ್ಕೆ ನೆರವಾಗುವುದು, ಅಲ್ಲದೇ ಕೋವಿಡ್ ಕೇರ್ ಸೆಂಟರ್ ಸ್ಥಾಪನೆಯ ಉದ್ದೇಶವಿದ್ದು, ಕಾರ್ಯ ಪ್ರವೃತ್ತರಾಗಿದ್ದೇವೆ ಎಂದರು.

    ಸಾರ್ವಜನಿಕರು ನೆರವಿಗಾಗಿ 7411734247 ಹಾಗೂ 7411744246 ಈ ನಂಬರ್ ಗಳಿಗೆ ಕರೆ ಮಾಡಿ ತಮ್ಮ ಕೋವಿಡ್ ಸಂಬಂದಿತ ಏನೇ ಸಮಸ್ಯೆಗಳಿದ್ದರೂ ಸಲಹೆ ಪಡೆಯಬಹುದಾಗಿದೆ.

    ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಸೇವಾಭಾರತಿ ಕಾರ್ಯದರ್ಶಿ ಗೋವರ್ಧನ ರಾಯರು, ಡಾ. ರಾಜಶೇಖರ ದ್ಯಾಬೇರಿ, ಜಯತೀರ್ಥ ಕಟ್ಟಿ, ಬಸವರಾಜ ಕುಂದಗೋಳಮಠ, ಸಂದೀಪ ಬೂದಿಹಾಳ, ಕಿಮ್ಸ್ ಅಧಿಕ್ಷಕರು ಡಾ. ಅರುಣಕುಮಾರ, ಕೀಮ್ಸ್ ಭದ್ತಾ ಪಡೆ ಮುಖ್ಯಸ್ಥರು ಎ. ಆರ್ ಬಡಿಗೇರ, ಡಾ. ಕಡಕೋಳ, ಡಾ. ಜಾಲಿಹಾಳ, ಉಮೇಶ ದುಶಿ, ತಿಪ್ಪಣ್ಣ ಮಜ್ಜಗಿ, ಪ್ರಭು ನವಲಗುಂದಮಠ, ಸಂತೋಷ ಚೌವ್ಹಾಣ್, ಸುಭಾಸಸಿಂಗ್ ಜಮಾದಾರ್, ವಿನಯ ಸಜ್ಜನವರ, ಶಂಕರ ಗುಮಾಸ್ತೆ ಮಹಾನಗರ ಪ್ರಚಾರಕ ವಿಶ್ವನಾಥ್, ಶಿವಯ್ಯ ಹಿರೇಮಠ, ಬಸವರಾಜ ದೇವರಮನಿ, ಸುಭಾಷ ಮಾಸಗೋನಿ ಮ, ಬೀರೇಶ ಎನ್ ಟಿ ಹಾಗೂ ಸೇವಾಭಾರತಿ ಮತ್ತು ನೇರವು ಸ್ವಯಂಸೇವರು ಇದ್ದರು. ಕಾರ್ಯಕ್ರಮವನ್ನು ಜೀತೇಂದ್ರ ನಾಯಕ ನಿರೂಪಿಸಿದರು, ಸಂದೀಪ ಬೂದಿಹಾಳ ವಂದಿಸಿದರು.

  • ಕಾಂಗ್ರೆಸ್ಸಿನವ್ರು 70 ವರ್ಷದಿಂದ ಮಾಡಿದ್ದು, ಈಗ ಬಯಲಿಗೆ ಬರ್ತಾ ಇದೆ: ಶೆಟ್ಟರ್

    ಕಾಂಗ್ರೆಸ್ಸಿನವ್ರು 70 ವರ್ಷದಿಂದ ಮಾಡಿದ್ದು, ಈಗ ಬಯಲಿಗೆ ಬರ್ತಾ ಇದೆ: ಶೆಟ್ಟರ್

    ಹುಬ್ಬಳಿ: ಕಾಂಗ್ರೆಸ್ಸಿನವರು 60-70 ವರ್ಷಗಳ ಕಾಲ ದೇಶವನ್ನು ದರೋಡೆ ಮಾಡಿದ್ದಾರೆ. ಅದೆಲ್ಲವೂ ಈಗ ಬಯಲಿಗೆ ಬರುತ್ತಾ ಇದೆ ಎಂದು ಬೃಹತ್, ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಕೈ ನಾಯಕರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

    ಹುಬ್ಬಳ್ಳಿಯಲ್ಲಿಂದು ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಶೆಟ್ಟರ್, ಜೆಡಿಎಸ್ ಪಕ್ಷದಲ್ಲಿ ಸಾಕಷ್ಟು ಶಾಸಕರು ಅಸಮಧಾನಗೊಂಡಿದ್ದಾರೆ. ಶನಿವಾರ ಹಲವು ಶಾಸಕರು ಹೊರಟ್ಟಿಯವರ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ. ಜೆಡಿಎಸ್ ಶಾಸಕರು ಅಸಮಧಾನಗೊಂಡು ಮುಂದಿನ ತೀರ್ಮಾನ ಕೈಗೊಳ್ಳಲು ರೆಡಿಯಾಗಿದ್ದಾರೆ ಎಂದು ತಿಳಿಸಿದರು.

    ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಐಟಿ ದಾಳಿ ಬಗ್ಗೆ ನಾನು ಏನೂ ಹೇಳಲ್ಲ. ಪರಮೇಶ್ವರ್ ಸಹ ರಾಜಕೀಯ ಪ್ರೇರಿತವಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದರು.

    ಕಾಂಗ್ರೆಸ್ಸಿನವರು ಐಟಿ ದಾಳಿ ವಿಚಾರದಲ್ಲಿ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಾ ಇದ್ದಾರೆ. ರಮೇಶ್ ಆತ್ಮಹತ್ಯೆ ಪ್ರಕರಣ ತನಿಖೆ ನಡೆಯುತ್ತಿದೆ. ಮುಂದೆ ಎಲ್ಲವೂ ಬಯಲಿಗೆ ಬರಲಿದೆ ಎಂದು ಹೇಳುವ ಮೂಲಕ ಐಟಿ ದಾಳಿ ರಾಜಕೀಯ ಪ್ರೇರಿತ ಎಂದು ಹೇಳಿದ ಕೈ ನಾಯಕರಿಗೆ ತಿರುಗೇಟು ನೀಡಿದರು.

  • ಹೈವೇಯಲ್ಲೇ ಚಪ್ಪಲಿ ಹಿಡಿದು ಸರ್ಕಾರಿ ಬಸ್ ಹಾಗೂ ಲಾರಿ ಚಾಲಕನ ಮಾರಾಮಾರಿ

    ಹೈವೇಯಲ್ಲೇ ಚಪ್ಪಲಿ ಹಿಡಿದು ಸರ್ಕಾರಿ ಬಸ್ ಹಾಗೂ ಲಾರಿ ಚಾಲಕನ ಮಾರಾಮಾರಿ

    – ಗಂಟೆಗಂಟಲೇ ನಿಂತಲ್ಲೇ ನಿಂತ ನೂರಾರು ವಾಹನಗಳು

    ಹುಬ್ಬಳ್ಳಿ: ಇಟ್ಟಿಗಟ್ಟಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸರ್ಕಾರಿ ಬಸ್ ಚಾಲಕ ಹಾಗೂ ಲಾರಿ ಡ್ರೈವರ್ ಪರಸ್ಪರ ಕೈ ಕೈ ಮಿಲಾಯಿಸಿದ ಪರಿಣಾಮ ಗಂಟೆಗಂಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಓವರ್‍ಟೇಕ್ ಮಾಡುವ ವಿಚಾರಕ್ಕೆ ಈಶಾನ್ಯ ಕರ್ನಾಟಕ ಸಾರಿಗೆ ಚಾಲಕ ಹಾಗೂ ಲಾರಿ ಡ್ರೈವರ್ ಇಬ್ಬರೂ ನಡುರಸ್ತೆಯಲ್ಲೇ ಚಪ್ಪಲಿ ಹಿಡಿದು ಕೈ ಕೈ ಮಿಲಾಯಿಸಿದ್ದಾರೆ. ಬೆಳಗಾವಿಯಿಂದ ಹುಬ್ಬಳ್ಳಿಗೆ ಬರುತ್ತಿದ್ದ ಬಸ್ ಲಾರಿಯನ್ನು ಓವರ್‌ಟೇಕ್ ಮಾಡಿ ಮುಂದೆ ಸಾಗಲು ಯತ್ನಿಸಿತ್ತು. ಈ ವೇಳೆ ಲಾರಿ ಚಾಲಕ ಅಡ್ಡಾದಿಡ್ಡಿಯಾಗಿ ಲಾರಿ ಓಡಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಬಸ್ ಚಾಲಕ ಲಾರಿಯನ್ನು ಹಿಂದಿಕ್ಕಿ ರಸ್ತೆಮಧ್ಯೆಯೇ ಬಸನ್ನು ನಿಲ್ಲಿಸಿದ್ದಾನೆ.

    ಬಳಿಕ ಲಾರಿಯನ್ನು ತಡೆದು, ವಿಚಾರಿಸಿದ್ದಾನೆ. ಈ ವೇಳೆ ಇವರಿಬ್ಬರ ಗಲಾಟೆ ತರಾಕಕ್ಕೇರಿ ಚಪ್ಪಲಿ ಹಿಡಿದು, ಹೊಡೆದಾಡಿಕೊಂಡಿದ್ದಾರೆ. ಇವರಿಬ್ಬರ ಕಿತ್ತಾಟದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆ ಗಟ್ಟಲೇ ವಾಹನಗಳನ್ನು ನಿಂತಿದ್ದವು. ಈ ವೇಳೆ ಮಧ್ಯ ಪ್ರವೇಶಿಸಿದ ಪ್ರಯಾಣಿಕರು ಇಬ್ಬರನ್ನೂ ಸಮಾಧಾನ ಮಾಡಿ ಕಳುಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಂದಲ್ಲ, ಎರಡಲ್ಲ 6 ಮದುವೆ – ತಾಳಿ ಕಟ್ಟೋದು, ಕೈ ಕೊಡೋದೇ ಈ ಪೊಲೀಸಪ್ಪನ ಖಯಾಲಿ

    ಒಂದಲ್ಲ, ಎರಡಲ್ಲ 6 ಮದುವೆ – ತಾಳಿ ಕಟ್ಟೋದು, ಕೈ ಕೊಡೋದೇ ಈ ಪೊಲೀಸಪ್ಪನ ಖಯಾಲಿ

    ಹುಬ್ಬಳ್ಳಿ: ಪೊಲೀಸಪ್ಪನೊಬ್ಬ 5 ಪತ್ನಿಯರಿಗೆ ಕೈಕೊಟ್ಟು 6ನೇ ಮದುವೆಯಾಗಿರುವ ಘಟನೆ ಹುಬ್ಬಳಿಯಲ್ಲಿ ನಡೆದಿದೆ.

    ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ಶಿವಕುಮಾರ್ ಮೇಲಿನಮನಿ 6 ಮದುವೆಯಾಗಿದ್ದಾನೆ. 20 ವರ್ಷಗಳ ಹಿಂದೆ ಮಹನಂದಾರನ್ನು ಮದುವೆಯಾಗಿದ್ದ. 5 ವರ್ಷ ಸಂಸಾರ ಮಾಡಿ ಮೂರು ಮಕ್ಕಳಾದ ಮೇಲೆ ಅವರಿಗೆ ಕೈ ಕೊಟ್ಟಿದ್ದಾನೆ.

    2009ರಲ್ಲಿ ಯಲಬುರ್ಗದಲ್ಲಿ ಸಾಮೂಹಿಕ ವಿವಾಹದಲ್ಲಿ ಮಹನಂದಾ ಬಳಿಕ ಭಾಸ್ಕರಮ್ಮ, ಸಲೀಮಾ, ಲಕ್ಷ್ಮವ್ವ, ಮಂಜುಳಾ, ಶಾಂತ ಹೀಗೆ ಒಟ್ಟು ಆರು ಮಂದಿಯನ್ನು ಮದುವೆಯಾಗಿದ್ದಾನೆ. ಹೊಸಬರನ್ನು ಮದುವೆಯಾದ ಮೇಲೆ ಹಳೇ ಹೆಂಡತಿಗೆ ಕೈ ಕೊಡೋದು ಇವನ ಖಯಾಲಿ.

    ಗಂಡನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೊದಲ ಪತ್ನಿ ಮಹನಂದಾ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎಂ.ಎನ್ ನಾಗರಾಜ್ ಅವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.

  • ಕ್ಷುಲ್ಲಕ ಕಾರಣಕ್ಕೆ ಬಾರ್ ಮುಂದೆ ಹೊಡೆದಾಡಿಕೊಂಡ ಕುಡುಕರ ಗುಂಪು

    ಕ್ಷುಲ್ಲಕ ಕಾರಣಕ್ಕೆ ಬಾರ್ ಮುಂದೆ ಹೊಡೆದಾಡಿಕೊಂಡ ಕುಡುಕರ ಗುಂಪು

    ಹುಬ್ಬಳಿ: ಕುಡಿದ ಮತ್ತಿನಲ್ಲಿ ಕುಡುಕರ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ತಡರಾತ್ರಿ ನಗರದ ಕೇಶ್ವಾಪುರದ ಕಿಂಗ್ಸ್ ಬಾರ್ ಬಳಿ ನಡೆದಿದೆ.

    ಕ್ಷುಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಎಣ್ಣೆ ಮತ್ತಿನಲ್ಲಿ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದರೂ ಸ್ಥಳಿಯರು ಜಗಳ ಬಿಡಿಸಲಿಲ್ಲ. ಕೊನೆಗೂ ಹೊಡೆದಾಡಿಕೊಂಡ ಗುಂಪುಗಳ ಸದಸ್ಯರು ತಾವೇ ಹೊರಟು ಹೋಗಿದ್ದಾರೆ.

    ಈ ಎರಡು ಗುಂಪಿನ ಯುವಕರ ಹೊಡೆದಾಟವನ್ನು ಸ್ಥಳಿಯರು ತಮ್ಮ ಮೊಬೈಲ್ ಗಳಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಆದರೆ ಹೊಡೆದಾಡಿಕೊಂಡವರ ಹೆಸರು ತಿಳಿದು ಬಂದಿಲ್ಲ. ಕ್ಷುಲ್ಲಕ ಕಾರಣಕ್ಕೆ ಹೊಡೆದಾಡಿಕೊಂಡಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ದೂರು ದಾಖಲಾಗಿಲ್ಲ.

  • ಮುಗೀತಿಲ್ಲ ಮಹದಾಯಿ ಹೋರಾಟಗಾರರ ಅಲೆದಾಟ- ಕೇಸ್ ಗಳಿಂದಾಗಿ ಕೋರ್ಟ್ ಕಚೇರಿಗೆ ಅಲೆದು ಅಲೆದು ಸುಸ್ತಾದ ರೈತರು

    ಮುಗೀತಿಲ್ಲ ಮಹದಾಯಿ ಹೋರಾಟಗಾರರ ಅಲೆದಾಟ- ಕೇಸ್ ಗಳಿಂದಾಗಿ ಕೋರ್ಟ್ ಕಚೇರಿಗೆ ಅಲೆದು ಅಲೆದು ಸುಸ್ತಾದ ರೈತರು

    ಹುಬ್ಬಳಿ: ಅವರು ನೀರಿಗಾಗಿ ನಿರಂತರವಾಗಿ ಹೋರಾಟ ಮಾಡಿದ್ದರು. ಹಾಗಾಗಿಯೇ ಪೊಲೀಸರಿಂದ ಲಾಠಿ ರುಚಿ ಕಂಡಿದ್ದರು. ಆದರೆ ಆಗ ಸರ್ಕಾರ ಅವರ ಮೇಲೆ ಹಾಕಿದ ಕೇಸ್ ಗಳಿಂದಾಗಿ ಕೋರ್ಟ್ ಕಚೇರಿ ಎಂದು ಅಲೆದು ಅಲೆದು ಸುಸ್ತಾಗಿದ್ದಾರೆ. ಈಗ ಮತ್ತೇ ಪೊಲೀಸರ ಮೇಲೆ ದಾಖಲಾದ ಕೇಸ್ ಗಳ ವಿಚಾರಣೆಗೆ ಸಾಕ್ಷಿ ಹೇಳಲು ಅಲೆದಾಡುತ್ತಿದ್ದಾರೆ. ಹೀಗಾಗಿ ಇದರಿಂದ ನಮಗೆ ಯಾವಾಗ ಮುಕ್ತಿ ಆ ಜನ ಹೇಳುತ್ತಿದ್ದಾರೆ.

    ಮಹದಾಯಿ ಹೋರಾಟ ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ನಡೆದ ಬಹು ದೊಡ್ಡ ಹೋರಾಟ ಎನಿಸಿಕೊಂಡಿದೆ. ಆದರೆ ಹೋರಾಟ ಮಾಡಿದ ರೈತರು ಪೊಲೀಸರ ಲಾಠಿ ರುಚಿಯನ್ನು ಕಂಡಿದ್ದರು. ಕಳೆದ ವರ್ಷ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಯಮನೂರು ಹಾಗೂ ಅರೇಕುರಟ್ಟಿ ಗ್ರಾಮದಲ್ಲಿ ರೈತರು ಪೊಲೀಸರ ದೌರ್ಜನ್ಯಕ್ಕೆ ಒಳಗಾಗಿದ್ದರು. ಅಂದು ಲಾಠಿ ಏಟು ತಿಂದಿದ್ದ ರೈತರು, ಪೊಲೀಸರು ಹಾಕಿದ ವಿವಿಧ ಪ್ರಕರಣಗಳಿಂದ ಕೋರ್ಟ್ ಗೆ ಅಲೆದು ಸುಸ್ತಾಗಿದ್ದಾರೆ. ಇವಾಗ ಪೊಲೀಸ್ ಮುಂದೆ ಸಾಕ್ಷಿ ಹೇಳಲು ಕೆಲಸ ಬಿಟ್ಟು ಬರುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳುತ್ತಾರೆ.

    ಇದನ್ನೂ ಓದಿ: ಮಹದಾಯಿ ವಿಚಾರದಲ್ಲಿ ಕೇಂದ್ರದಿಂದ ಮಹಾಮೋಸ- ಸುಳ್ಳು ವರದಿ ಆಧರಿಸಿ ಕರ್ನಾಟಕಕ್ಕೆ ಸುಪ್ರೀಂ ಎಚ್ಚರಿಕೆ

    ಕಳೆದ ವರ್ಷ ಮಹದಾಯಿ ನ್ಯಾಯಾಧೀಕರಣ ಮಧ್ಯಂತರ ತೀರ್ಪಿನ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ಯಮನೂರು ಹಾಗೂ ಅರೇಕುರಟ್ಟಿ ಗ್ರಾಮದ ಜನರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿ ಮನ ಬಂದಂತೆ ಹಲ್ಲೆ ಮಾಡಿದ್ದರು. ಹಲ್ಲೆಯಲ್ಲಿ ಗರ್ಭಿಣಿ ಮಹಿಳೆ ಸೇರಿದಂತೆ ವಯೋವೃದ್ಧರು ಗಂಭೀರವಾಗಿ ಗಾಯ ಗೊಂಡಿದ್ದರು.

    ಇದನ್ನೂ ಓದಿ: ಮಹದಾಯಿ ಹೋರಾಟಗಾರರಿಗೆ ಸಮನ್ಸ್- ಅಂಬ್ಯುಲೆನ್ಸ್ ಸಿಬ್ಬಂದಿ, ಸೈನಿಕ, ಎಂಜಿನೀಯರ್‍ಗೂ ನೋಟಿಸ್

    ಈ ಸಂಬಂಧ ಸರ್ಕಾರ ಎಡಿಜಿಪಿ ಕಮಲ್ ಪಂತ್ ನೇತ್ರತ್ವದಲ್ಲಿ ತನಿಖೆ ನಡೆಸುವಂತೆ ಸೂಚಿಸಿತ್ತು. ಕಾರಣ ಇಂದು ಪ್ರಕರಣದ ವಿಚಾರಣಾ ಅಧಿಕಾರಿ ಎನ್ ಶಿವಪ್ರಸಾದ ಅವರು ಹುಬ್ಬಳ್ಳಿಯ ಸಿ ಆರ್ ಮೈದಾನದಲ್ಲಿ 15 ಕ್ಕೂ ಹೆಚ್ಚು ಜನ ರೈತ ಮಹಿಳೆಯರು ವಯೋವೃದ್ದರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಹಾಗಾಗಿ ಪದೇ ಪದೇ ಅಲೆದಾಡುವದರಿಂದ ಬಹಳ ತೊಂದರೆಯಾಗುತ್ತಿದೆ ಎಂದು ಹೇಳುತ್ತಿದ್ದಾರೆ.

    ಕೆಲಸ ಬಗಸೆ ಬಿಟ್ಟು ಕೋರ್ಟ್ ಕಚೇರಿ ಎಂದು ಅಲೆದಾಡುವಂತಾಗಿದೆ ರೈತಾಪಿ ವರ್ಗದ ಜನರ ಸ್ಥಿತಿ ಏನಾದರೂ ಸರ್ಕಾರ ಇವರ ಅಲೆದಾಟ ತಪ್ಪಿಸಬೇಕಾಗಿದೆ. ಒಟ್ಟಿನಲ್ಲಿ ಮಹದಾಯಿ, ಕಳಸಾ ಬಂಡೂರಿ ಸಮಸ್ಯೆಯನ್ನು ಇತ್ಯರ್ಥ ಮಾಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಶ್ರಮಿಸಿ, ಸುದೀರ್ಘ ಹೋರಾಟಕ್ಕೆ ನ್ಯಾಯ ನೀಡಬೇಕಾಗಿದೆ.