ಬಾಗಲಕೋಟೆ: ಅಂಗನವಾಡಿಗೆ (Anganwadi) ಹೊರಟಿದ್ದ ಮಗುವನ್ನು ಚಿಕ್ಕಪ್ಪನೇ ಎತ್ತಿಕೊಂಡು ಹೋಗಿ ಕತ್ತು ಸೀಳಿ ಕೊಲೆಗೈದ ಘಟನೆ ಹುನಗುಂದ (Hungund) ತಾಲೂಕಿನ ಬೆನಕನವಾರಿ ಗ್ರಾಮದಲ್ಲಿ ನಡೆದಿದೆ.
ಹತ್ಯೆ ಆರೋಪಿಯನ್ನು ಭೀಮಪ್ಪ ಎಂದು ಗುರುತಿಸಲಾಗಿದೆ. ಈ ಹಿಂದೆ ಹೆಂಡತಿ (Wife) ಮೇಲೆ ಹಲ್ಲೆ ಮಾಡಬೇಡ ಎಂದು ಭೀಮಪ್ಪನಿಗೆ ಆತನ ಸಹೋದರ ಮಾರುತಿ ಬುದ್ಧಿ ಹೇಳಿದ್ದರು. ಇದರಿಂದ ದ್ವೇಷಕಾರುತ್ತಿದ್ದ ಭೀಮಪ್ಪ ಮಾರುತಿ ಅವರ ಪುತ್ರನನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಮನೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿ, ಮಗುವನ್ನು ಕರೆದೊಯ್ದು ಕೊಲೆಗೈದಿದ್ದಾನೆ. ಆತನಿಗೆ ಕಠಿಣ ಶಿಕ್ಷೆ ನೀಡಿ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಇನ್ನೂ ಪುಟಾಣಿ ಮಗುವಿನ ಮೃತದೇಹ ಕಂಡು ಅಜ್ಜಿ ಪಾರ್ವತಿ ಕಣ್ಣೀರಿಟ್ಟಿದ್ದಾರೆ.
ಬಾಗಲಕೋಟೆ: ಹುನಗುಂದ (Hungund) ಹಾಗೂ ಇಳಕಲ್ (Ilkal) ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿಗಳಿಗೆ (Anganwadi) ಮೂರು ತಿಂಗಳಿನಿಂದ ಆಹಾರ (Food) ಸರಬರಾಜು ಆಗುತ್ತಿಲ್ಲ ಎಂಬ ಆರೋಪ ಬಂದಿದೆ.
ಅಂಗನವಾಡಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಸಮರ್ಪಕ ಪೌಷ್ಟಿಕ ಆಹಾರ ಸಿಗುತ್ತಿಲ್ಲ ಎಂದು ಆ ತಾಲೂಕಿನ ಗರ್ಭಿಣಿಯರು ಆರೋಪ ಮಾಡಿದ್ದಾರೆ.
ಹುನಗುಂದ, ಇಳಕಲ್ ತಾಲ್ಲೂಕಿನ ವ್ಯಾಪ್ತಿಯಲ್ಲಿ ಒಟ್ಟು 422 ಅಂಗನವಾಡಿ ಕೇಂದ್ರಗಳಿದ್ದು, ಈ ಅಂಗನವಾಡಿಗಳಿಗೆ ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳಿನಲ್ಲಿ ಸಮರ್ಪಕ ಆಹಾರ ಸಿಕ್ಕಿಲ್ಲ ಎಂದು ದೂರಿದ್ದಾರೆ. ದಾಸ್ತಾನು ಅಂಗನವಾಡಿಗಳಿಗೆ ವಿತರಣೆಯಾಗದೇ ಮೂರು ತಿಂಗಳಿನಿಂದ ರೇಷನ್ ಮಹಿಳಾ ಸಪ್ಲಿಮೆಂಟರಿ ನ್ಯೂಟ್ರಿಷನ್ ಪ್ರೊಡಕ್ಟ್ ಸೆಂಟರ್‌ನಲ್ಲೇ (MSPTC) ಉಳಿದಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ: ಹಾವೇರಿ| 3 ತಿಂಗಳಿನಿಂದ ಪಾವತಿಯಾಗಿಲ್ಲ ಅಂಗನವಾಡಿ ಟೀಚರ್‌ಗಳ ಸಂಬಳ
ಎಂಎಸ್‌ಪಿಟಿಸಿಯಿಂದ ಎಲ್ಲಾ ಅಂಗನವಾಡಿಗೆ ರೇಷನ್ ಸಾಗಿಸಬೇಕಾಗಿತ್ತು. ಆದರೆ ದಾಸ್ತಾನು ಯಾವ ಕಾರಣಕ್ಕೆ ಹಂಚಿಕೆಯಾಗಿಲ್ಲ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಜನರ ಆರೋಪವನ್ನು ಗಮನಿಸಿದಾಗ ಇಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ಎದ್ದುಕಾಣುತ್ತಿದೆ.
ಈ ವಿಚಾರದ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಓ ಶಶಿಧರ್ ಕುರೇರ್ ಅವರನ್ನು ಕೇಳಿದರೆ ಎಲ್ಲಾ ಅಂಗನವಾಡಿಗಳಿಗೆ ಎರಡು ತಿಂಗಳ ದಾಸ್ತಾನು ಸರಬರಾಜು ಮಾಡಲಾಗಿದೆ. ಆದರೆ ಈ ವಿಷಯ ಈಗ ನನ್ನ ಗಮನಕ್ಕೆ ಬಂದಿದ್ದು, ಈ ಕುರಿತು ಕೂಡಲೇ ಇಲಾಖೆ ಅಧಿಕಾರಿಗಳು ಹಾಗೂ ಆ ಭಾಗದ ಸಿಡಿಪಿಓ ಅವರಿಗೆ ವರದಿ ಕೇಳಿದ್ದೇನೆ. ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದರೆ ಅವರ ವಿರುದ್ದ ಖಂಡಿತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಬಾಗಲಕೋಟೆ: ಕ್ಯಾಂಟರ್ ಹಾಗೂ ಕಾರು ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ (Bagalkote) ಜಿಲ್ಲೆ ಹುನಗುಂದ ತಾಲ್ಲೂಕಿನ ಧನ್ನೂರು ಎಂಬಲ್ಲಿ ನಡೆದಿದೆ.
ಲಕ್ಷ್ಮಣ ವಡ್ಡರ್ (55),ಬೈಲಪ್ಪ ಬಿರಾದಾರ್(45), ರಾಮಣ್ಣ ನಾಯಕಮಕ್ಕಳು (50) ಹಾಗೂ ಕಾರು ಚಾಲಕ ರಫಿಕ್ ಮುಲ್ಲಾ(25) ಸಾವಿಗೀಡಾದವರು. ಮೃತರು ವಿಜಯಪುರ (Vijayapura) ಜಿಲ್ಲೆ ಬಿದರಕುಂದಿ ಗ್ರಾಮದವರು. ತಡರಾತ್ರಿ 2 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಇದನ್ನೂ ಓದಿ: ಮುಡಾ ಹಗರಣ ಸಂಕಷ್ಟ; ಹೈಕಮಾಂಡ್‌ಗೆ ವರದಿ ನೀಡಿದ ಸಿಎಂ ಸಿದ್ದರಾಮಯ್ಯ
ಕಾರು ಮುದ್ದೇಬಿಹಾಳ (Muddebihal) ಕಡೆ ಹೊರಟಿತ್ತು. ಕ್ಯಾಂಟರ್ ಮುದ್ದೇಬಿಹಾಳದಿಂದ ಹುನಗುಂದ ಕಡೆ ಬರುತ್ತಿತ್ತು. ಈ ವೇಳೆ ಕಾರು ಚಾಲಕ ನಿದ್ರೆಗೆ ಜಾರಿದ್ದು, ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಕಾರು ನಜ್ಜುಗುಜ್ಜಾಗಿದೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: Karawar | ಹಣಕೋಣ ಉದ್ಯಮಿ ಹತ್ಯೆ -ಪ್ರಮುಖ ಆರೋಪಿ ಆತ್ಮಹತ್ಯೆ, ಮೂವರ ಬಂಧನ
ಬಾಗಲಕೋಟೆ: ಕುಡಿದ ನಶೆಯಲ್ಲಿ ಎಗ್ ರೈಸ್ (Egg Rice) ತಿಂದು ಹಣ ಕೇಳಿದ್ದಕ್ಕೆ ಜಗಳ ಶುರುವಾಗಿ ಎಗ್‌ರೈಸ್ ಅಂಗಡಿ ಮಾಲೀಕನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬಾಗಲಕೋಟೆ (Bagalkot) ಜಿಲ್ಲೆಯಲ್ಲಿ ನಡೆದಿದೆ.
ಮುಸ್ತಫಾ ಕುಡಿದ ನಶೆಯಲ್ಲಿ ಗೈಬುಸಾಬ್ ಮುಲ್ಲಾ ಅಂಗಡಿಗೆ ಬಂದು ಎಗ್ ರೈಸ್ ತಿಂದಿದ್ದ. ಬಳಿಕ ಗೈಬುಸಾಬ್ ಹಣ ಕೇಳಿದ್ದಕ್ಕೆ ಆತ ಕೊಡಲ್ಲ ಎಂದು ವಾದಿಸಿದ್ದ. ಇದಕ್ಕೆ ಇಬ್ಬರ ಮಧ್ಯೆ ಜಗಳ ಶುರುವಾಗಿ ಮುಸ್ತಫಾ ಚಾಕುವಿನಿಂದ ಇರಿದು ಗೈಬುಸಾಬ್‌ನ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಮಹಿಳಾ ಸಂಘಟನೆಯಲ್ಲಿ ಹೆಂಡತಿ ಬ್ಯುಸಿ – ಬೇಸತ್ತ ಪತಿಯಿಂದ ಪತ್ನಿ, ಅತ್ತೆಯ ಭೀಕರ ಹತ್ಯೆ
ಬಾಗಲಕೋಟೆ: ಪದವಿ ಕಾಲೇಜು ಆವರಣದಲ್ಲೇ ನೇಣು ಹಾಕಿಕೊಂಡು ಪ್ರಿನ್ಸಿಪಾಲ್ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ (Hungund City) ನಡೆದಿದೆ.
ಹುನಗುಂದ ಸರ್ಕಾರಿ ಪದವಿ ಕಾಲೇಜಿನ ಪ್ರಿನ್ಸಿಪಾಲ್ (Principal) ಆಗಿರುವ ನಾಗರಾಜ್ ಮುದಗಲ್ (57) ನೇಣಿಗೆ ಶರಣಾಗಿರುವ ದುರ್ದೈವಿ. ಇಂದು ಬೆಳಗಿನ ಜಾವ ಕಾಲೇಜ್ ಆವರಣದಲ್ಲಿಯ ಕ್ಯಾಂಟೀನ್ ಸ್ಟೇರ್ ಕೇಸ್ ಗ್ರಿಲ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಇದನ್ನೂ ಓದಿ: ಆಫೀಸ್‌ಗೆ ಬರದೇ ಹೋದ್ರೆ ಕೆಲ್ಸದಿಂದ ವಜಾ – ಉದ್ಯೋಗಿಗಳಿಗೆ ಖಡಕ್ ವಾರ್ನಿಗ್ ಕೊಟ್ಟ ಮೆಟಾ
ಹುನಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ನಾಗರಾಜ್ ಮುದಗಲ್ (Nagaraj Mudugal) ಶವವನ್ನು ಹುನಗುಂದ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಿನ್ಸಿಪಾಲ್ ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ, ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಏನಾದರೂ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಎಂಬ ಅನುಮಾನ ಇದೆ.
ಮಂಗಳವಾರ ಸರ್ಕಾರಿ ಪದವಿ ಕಾಲೇಜ್‌ನಲ್ಲಿ “ಜನಪದ ಜಾತ್ರೆ ಹೊನ್ನ ಸಂಭ್ರಮ” ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹೀಗಾಗಿ ಸೋಮವಾರ ರಾತ್ರಿಯವರೆಗೆ ಕಾರ್ಯಕ್ರಮಕ್ಕಾಗಿ ಗಣ್ಯರಿಗೆಲ್ಲ ಆಮಂತ್ರಣ ನೀಡಿ ಬಂದಿದ್ದ ಪ್ರಿನ್ಸಿಪಾಲ್ ಇಂದು ಬೆಳಿಗ್ಗೆ ಮನೆಗೆ ಹೋಗಿ ಕಾಲೇಜಿಗೆ ಬಂದು ನೇಣು ಹಾಕಿಕೊಂಡಿದ್ದಾರೆಂಬ ಮಾಹಿತಿ ಇದೆ.
ಮೃತ ಪ್ರಿನ್ಸಿಪಾಲ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಪ್ರಿನ್ಸಿಪಾಲ್‌ಗೆ ಪತ್ನಿ, ಮೂವರು ಮಕ್ಕಳಿದ್ದಾರೆ. 14 ವರ್ಷಗಳಿಂದ ಇಳಕಲ್ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದ ನಾಗರಾಜ್ ಆರು ತಿಂಗಳ ಹಿಂದೆಯಷ್ಟೇ ಹುನಗುಂದ ಸರ್ಕಾರಿ ಪದವಿ ಕಾಲೇಜಿಗೆ ವರ್ಗಾವಣೆಯಾಗಿದ್ದರು.
ಬಾಗಲಕೋಟೆ: ರಸ್ತೆ ವಿಭಜಕಕ್ಕೆ ಬೊಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜಿಲ್ಲೆಯ ಹುನಗುಂದ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ಡವಳಗಿ ನಿವಾಸಿ ನಿಂಗಪ್ಪ ಬೀರಗೊಂಡ (48) ಮೃತಪಟ್ಟ ವ್ಯಕ್ತಿ. ಇಳಕಲ್ ಪಟ್ಟಣದಿಂದ ವಿಜಯಪುರಕ್ಕೆ ಗ್ರಾನೈಟ್ ಸಾಗಿಸುತ್ತಿದ್ದ ವೇಳೆ ಘಟನೆ ಸಂಭವಿಸಿದೆ.
ಚಾಲಕನ ನಿಯಂತ್ರ ತಪ್ಪಿದ ಜೀಪ್, ರೋಡ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಪಲ್ಟಿ ಹೊಡೆದಿದ್ದು, ಸ್ಥಳದಲ್ಲಿಯೇ ನಿಂಗಪ್ಪ ಅವರು ಮೃತಪಟ್ಟಿದ್ದಾರೆ. ಚಾಲಕ ರವಿ ಹಾಗೂ ಸೇರಿದಂತೆ ಮತ್ತೊಬ್ಬರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಹುನಗುಂದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೊಲೆರೋದಲ್ಲಿದ್ದ ಮೂವರು ವಿಜಯಪುರ ಜಿಲ್ಲೆಯ ಡವಳಗಿ ನಿವಾಸಿಗಳಾಗಿದ್ದಾರೆ. ಘಟನಾ ಸ್ಥಳಕ್ಕೆ ಹುನಗುಂದ ಠಾಣೆ ಪೊಲೀಸರು ಭೇಟಿ ನೀಡಿ ಪರಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಾಗಲಕೋಟೆ: ಹುನಗುಂದ ಹಾಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಹೆಸರು ಎರಡು ಮತದಾರರ ಪಟ್ಟಿಯಲ್ಲಿರುವ ವಿಷಯ ಬೆಳಕಿಗೆ ಬಂದಿದೆ.
ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟಿಲ್ ದಾಖಲೆ ಸಮೇತ ಇಂತಹದ್ದೊಂದು ಗಂಭೀರ ಆರೋಪ ಮಾಡಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಮಾಜಿ ಶಾಸಕ ದೊಡ್ಡನಗೌಡ ಪಾಟಿಲ್, ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ್ ತಮ್ಮ ಹುಟ್ಟೂರು ಹುನಗುಂದ ತಾಲೂಕಿನ ಹಾವರಗಿ ಗ್ರಾಮದ ಪತದಾರರ ಪಟ್ಟಿಯಲ್ಲಿ ಹೆಸರನ್ನು ಹೊಂದಿದ್ದಾರಲ್ಲದೇ, ಇಳಕಲ್ ನಗರದ ವಾರ್ಡ್ ನಂಬರ್ 1ರ ಮತದಾರರ ಪಟ್ಟಿಯಲ್ಲಿಯೂ ಹೆಸರನ್ನು ಹೊಂದಿದ್ದಾರೆ. ಈ ಮೂಲಕ ಕಾನೂನಿಗೆ ಮಣ್ಣೆರಚಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಇಳಕಲ್ ನಗರದ ಬೂತ್ ನಂಬರ್ 151ರಲ್ಲಿ ಬೇರೆ ಬೇರೆ ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮದಲ್ಲಿರುವ 29 ಜನರನ್ನು ಸೇರಿಸಲಾಗಿದೆ. ಅಲ್ಲದೇ ಅದೇ ಬೂತ್ ನಲ್ಲಿ 16 ಜನ ಸತ್ತವರ ಹೆಸರನ್ನು ಸೇರ್ಪಡೆ ಮಾಡಿದ್ದಾರೆ ಎಂದು ದಾಖಲೆ ನೀಡಿದ್ದಾರೆ. ಕ್ಷೇತ್ರದಾದ್ಯಂತ ಶಾಸಕ ಕಾಶಪ್ಪನವರ್ ತಮ್ಮ ಪ್ರಭಾವ ಬಳಸಿ ಹುನಗುಂದ ಮತಕ್ಷೇತ್ರದಲ್ಲಿ 10 ಸಾವಿರಕ್ಕೂ ಅಧಿಕ ನಕಲಿ ಮತದಾರರನ್ನು ಸೃಷ್ಟಿ ಮಾಡಿದ್ದಾರೆ ಎಂದು ದೊಡ್ಡನಗೌಡ ಪಾಟಿಲ್ ಆರೋಪಿಸಿದ್ದಾರೆ.
ಇದಕ್ಕೆ ಹುನಗುಂದ ತಹಶೀಲ್ದಾರ ಸುಭಾಸ್ ಸಂಪಗಾವಿ, ಇಳಕಲ್ ನಗರಸಭೆ ಆಯುಕ್ತ ಪಾತ್ರವಹಿಸಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ, ಚುನಾವಣಾ ಆಯೋಗ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರಿನ ಮನವಿ ನೀಡಿದ್ದಾರೆ.