Tag: ಹುದ್ದೆ

  • ರಾಜ್ಯದ ಎಲ್ಲಾ ವಿವಿಯಲ್ಲೂ ಖಾಲಿ ಹುದ್ದೆಗಳ ಖಾಯಂ ನೇಮಕಾತಿ ಆಗಲಿ: ನಮೋಶಿ

    ರಾಜ್ಯದ ಎಲ್ಲಾ ವಿವಿಯಲ್ಲೂ ಖಾಲಿ ಹುದ್ದೆಗಳ ಖಾಯಂ ನೇಮಕಾತಿ ಆಗಲಿ: ನಮೋಶಿ

    ಕಲಬುರಗಿ: ರಾಜ್ಯದ ಎಲ್ಲಾ ವಿಶ್ವ ವಿದ್ಯಾಲಯಗಳಲ್ಲಿ ಬೋಧಕ, ಬೋಧಕೇತರ ಹುದ್ದೆಗಳು ಖಾಲಿಯಿದ್ದು, ಉನ್ನತ ಶಿಕ್ಷಣ ಪದ್ಧತಿ ಅವನತಿಯತ್ತ ಸಾಗುತ್ತಿದೆ. ಈ ಕುರಿತು ಕೆಲವೊಂದು ದಿನಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾಗಿದ್ದು ಉನ್ನತ ಶಿಕ್ಷಣದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿವೆ. ಖಾಲಿಯಾದ ಖಾಯಂ ಹುದ್ದೆಗಳ ಭರ್ತಿಗಾಗಿ ಈಗಾಗಲೇ ನಾನು ಸದನದಲ್ಲಿ ಸಂಭಂದಿಸಿದ ಸಚಿವರ ಗಮನ ಸೆಳೆದಿದ್ದೇನೆ ಎಂದು ಎಂಎಲ್‌ಸಿ ಶಶೀಲ್ ನಮೋಶಿ (Shashil Namoshi) ಹೇಳಿದರು.

    ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಅತಿ ಹೆಚ್ಚು ಬೋಧಕ ಹುದ್ದೆಗಳು ಖಾಲಿ ಇದ್ದು ಸರ್ಕಾರ ಬೋಧಕರ ಹುದ್ದೆಗಳ ನೇಮಕಾತಿಗೆ ಮನಸ್ಸು ಮಾಡದಿದ್ದರಿಂದ ಬಹುತೇಕ ವಿವಿಗಳಿಗೆ ಅತಿಥಿ ಉಪನ್ಯಾಸಕರೇ ಆಧಾರವಾಗಿದ್ದು, ಗುಣಮಟ್ಟದ ಶಿಕ್ಷಣದ ಪ್ರಶ್ನೆ ಕಾಡುತ್ತಿದೆ ಎಂದರು. ಇದನ್ನೂ ಓದಿ: ಬಜೆಟ್‌ಗೆ ಇನ್ನೆರಡು ತಿಂಗಳು ಬಾಕಿ – ಕಳೆದ ವರ್ಷದ ಬಜೆಟ್ ಹಣವನ್ನೇ ರಿಲೀಸ್ ಮಾಡದ ಸರ್ಕಾರ!

    ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆಯಡಿ ಬರುವ 12 ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಬೋಧಕರ ಹುದ್ದೆಗಳು ಅತಿ ಹೆಚ್ಚು ಖಾಲಿ ಇದ್ದು ಸರ್ಕಾರ ಮಾತ್ರ ನೇಮಕಾತಿಗೆ ಮನಸ್ಸು ಮಾಡುತ್ತಿಲ್ಲ, ಇದರಿಂದ ವಿಶ್ವವಿದ್ಯಾಲಯಗಳಲ್ಲಿ ಬೋಧಕರಿಲ್ಲದೆ ಗುಣಮಟ್ಟದ ಶಿಕ್ಷಣಕ್ಕೆ ಪೆಟ್ಟು ಬೀಳುವಂತಾಗಿದೆ ಎಂದರು. ಇದನ್ನೂ ಓದಿ: ಕೋರ್ಟ್‌ನಲ್ಲಿ ಪವಿತ್ರಾ ಭಾವುಕ – ಬೆನ್ನುತಟ್ಟಿ ಸಂತೈಸಿದ ದರ್ಶನ್‌

    ಒಟ್ಟು 2,723 ಬೋಧಕ ಹುದ್ದೆಗಳು ಖಾಲಿ:
    ರಾಜ್ಯದ 32 ವಿಶ್ವವಿದ್ಯಾಲಯಗಳಲ್ಲಿ ಒಟ್ಟು 4,709 ಹುದ್ದೆಗಳು ಮಂಜೂರಾಗಿದ್ದರೆ, ಇದರಲ್ಲಿ 2,723 ಹುದ್ದೆಗಳು ಖಾಲಿ ಉಳಿದಿವೆ. ಪ್ರಸ್ತುತ ಎಲ್ಲ ವಿವಿಗಳಲ್ಲಿ ಕಾಯಂ ಕಾರ್ಯ ನಿರ್ವಹಿಸುವವರಿಗಿಂತ ಖಾಲಿ ಹುದ್ದೆಗಳು ಹೆಚ್ಚಿವೆ. ಈ ಹಿಂದೆ ನೇಮಕಗೊಂಡವರೂ ನಿವೃತ್ತಿಯಾಗಿದ್ದು ಕೆಲವರು ಮಾತ್ರ ಉಳಿದಿದ್ದು, ಇವರೂ ಕೆಲದೇ ವರ್ಷಗಳಲ್ಲಿ ನಿವೃತ್ತಿ ಆಗಲಿದ್ದಾರೆ ಎಂದರು.

  • ಯಾವ ದೇಶದಲ್ಲಿ ಸೈನಿಕ ಸೇವೆ ಕಡ್ಡಾಯ? – ಟೂರ್ ಆಫ್ ಡ್ಯೂಟಿ ಎಲ್ಲಿದೆ?

    ಯಾವ ದೇಶದಲ್ಲಿ ಸೈನಿಕ ಸೇವೆ ಕಡ್ಡಾಯ? – ಟೂರ್ ಆಫ್ ಡ್ಯೂಟಿ ಎಲ್ಲಿದೆ?

    ನವದೆಹಲಿ: ಭಾರತದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಸೇನೆಯಲ್ಲಿ ಅಲ್ಪ ಕಾಲಾವಧಿಗೆ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದೆ. ಆದ್ರೆ ಜಗತ್ತಿನ ಕೆಲವು ದೇಶಗಳಲ್ಲಿ ಇದು ಹೊಸದಲ್ಲ. ಹಲವು ದೇಶಗಳಲ್ಲಿ ಈಗಾಗಲೇ ಈ ರೀತಿಯ ಯೋಜನೆ ಜಾರಿಯಾಗಿದೆ.

    ಇಸ್ರೇಲ್
    ಪುರುಷರು ಕನಿಷ್ಠ 3 ವರ್ಷ, ಮಹಿಳೆಯರು ಕನಿಷ್ಠ 2 ವರ್ಷ ಸೇನೆಯಲ್ಲಿ ಕೆಲಸ ಮಾಡುವುದು ಕಡ್ಡಾಯ. ವಿದೇಶಗಳಲ್ಲಿ ಇರುವ ಪೌರರಿಗೂ ಇದು ಅನ್ವಯವಾಗುತ್ತದೆ. ವಲಸೆಗಾರರಿಗೆ, ಕೆಲ ಅನ್ಯ ಧರ್ಮೀಯರಿಗೆ, ರೋಗಿಗಳಿಗೆ ವಿನಾಯಿತಿ ನೀಡಲಾಗಿದೆ. ಇದನ್ನೂ ಓದಿ: ಅಗ್ನಿಪಥ್ ಯೋಜನೆ ವಿರೋಧಿಸಿ ಬೆಳಗಾವಿ ಬಂದ್ ಕರೆ – ರ‍್ಯಾಪಿಡ್ ಆಕ್ಷನ್ ಫೋರ್ಸ್‌ನಿಂದ ಪಂಥ ಸಂಚಲನ 

    ದಕ್ಷಿಣ ಕೊರಿಯಾ
    ಸದೃಢ ಪುರುಷರಿಗೆ ಸೇನೆ ಕರ್ತವ್ಯ ಕಡ್ಡಾಯ. 21 ತಿಂಗಳು ಭೂಸೇನೆ, 23 ತಿಂಗಳು ನೌಕಾಸೇನೆ, 24 ತಿಂಗಳು ವಾಯುಸೇನೆಯಲ್ಲಿ ಕೆಲಸ ಮಾಡಬೇಕು.

    ಉತ್ತರ ಕೊರಿಯಾ
    ದೇಶದ ಪ್ರಜೆಗಳು ಸೇನೆ ಸೇರುವುದು ಕಡ್ಡಾಯ. ಪುರುಷರು 11 ವರ್ಷ, ಮಹಿಳೆಯರು 7 ವರ್ಷ ಸೇನೆಯಲ್ಲಿ ಕೆಲಸ ಕಡ್ಡಾಯ.

    ಎರ್ರಿಟ್ರಿಯಾ
    ಪುರುಷರು, ಅವಿವಾಹಿತ ಯುವತಿಯರು ಕನಿಷ್ಠ 18 ತಿಂಗಳು ಸೇನೆಯಲ್ಲಿರಬೇಕು(ಇದು ಹೆಚ್ಚಾಗಲೂಬಹುದು).

    ಸ್ವಿಟ್ಜರ್‌ಲ್ಯಾಂಡ್
    18-34 ವರ್ಷದೊಳಗಿನ ಪುರುಷರಿಗೆ ಸೈನ್ಯದಲ್ಲಿ ಕೆಲಸ ಕಡ್ಡಾಯ. 21 ವರ್ಷಗಳ ಕಾಲ ಕಡ್ಡಾಯ ಕೆಲಸ ಮಾಡಬೇಕು. ಪ್ರತಿ ವರ್ಷಕ್ಕೊಮ್ಮೆ ಸೈನಿಕ ಶಿಕ್ಷಣ. ಇದನ್ನೂ ಓದಿ: ಮುಸ್ಲಿಂ ಹುಡುಗಿಯರು 16ನೇ ವಯಸ್ಸಿನಲ್ಲಿ ಮದುವೆಯಾಗಬಹುದು: ಹೈಕೋರ್ಟ್ 

    ಬ್ರೆಜಿಲ್
    ವಯಸ್ಕ ಪುರುಷರು 10-12 ತಿಂಗಳು ಸೇನೆಯಲ್ಲಿರುವುದು ಕಡ್ಡಾಯ(ಓದುತ್ತಿದ್ದರೆ ಶಿಕ್ಷಣ ಮುಗಿದ ಕೂಡಲೇ ಸೇನೆ ಸೇರಬೇಕು)

    ಸಿರಿಯಾ
    ಸೇನೆಯಲ್ಲಿ ಕೆಲಸ ಮಾಡಿಲ್ಲ ಎಂದರೇ ಉದ್ಯೋಗ ಸಿಗಲ್ಲ. ಸರ್ವೀಸ್ ತಪ್ಪಿಸಿಕೊಂಡವರಿಗೆ 15 ವರ್ಷದವರೆಗೂ ಜೈಲು.

    ಇದೇ ರೀತಿ, ಜಾರ್ಜಿಯಾ, ಲಿಥುವೇನಿಯಾ, ಸ್ವೀಡನ್‍ನಲ್ಲಿಯೂ ಕಡ್ಡಾಯ ಸೈನಿಕ ಸೇವೆ ಕಡ್ಡಾಯವಾಗಿದೆ.

    Live Tv

  • KPTCLನ 1899 ಹುದ್ದೆಗಳ ಭರ್ತಿಗೆ ಚಾಲನೆ ನೀಡಿದ ಸುನಿಲ್ ಕುಮಾರ್

    KPTCLನ 1899 ಹುದ್ದೆಗಳ ಭರ್ತಿಗೆ ಚಾಲನೆ ನೀಡಿದ ಸುನಿಲ್ ಕುಮಾರ್

    ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ(ಕೆಪಿಟಿಸಿಎಲ್‍) 1899 ಕಿರಿಯ ಪವರ್ ಮ್ಯಾನ್ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದ್ದು, ಇಂದು ಅದರ ಮೊದಲ ಹಂತವಾಗಿ, ಸಾಂಕೇತಿಕವಾಗಿ 21 ಜನರಿಗೆ ನೇಮಕಾತಿ ಆದೇಶ ಪತ್ರವನ್ನು ವಿತರಿಸಲಾಗುತ್ತಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.

    ಬೆಂಗಳೂರಿನ ಕಾವೇರಿ ಭವನದಲ್ಲಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಸಭಾಂಗಣದಲ್ಲಿ ಈ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ನೀಡಿದ ಬಳಿಕ ಮಾತನಾಡಿದ ಅವರು, ಕೆಪಿಟಿಸಿಎಲ್‍ನ 1899 ಹುದ್ದೆಗಳಿಗೆ 2019ರ ಫೆಬ್ರವರಿಯಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು, ಅಂದಿನಿಂದ ಇಂದಿನವರೆಗೂ ಈ ನೇಮಕಾತಿ ಪ್ರಕ್ರಿಯೆ ನಾನಾ ಕಾರಣಗಳಿಗಾಗಿ ನೆನೆಗುದಿಗೆ ಬಿದ್ದಿತ್ತು, ಈ ಬಗ್ಗೆ ಅನೇಕರು ನನ್ನ ಗಮನ ಸೆಳೆದಾಗ ನಾನು ಕೂಡಲೇ ಅಗತ್ಯವಾದ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ, ಆದೇಶ ಪತ್ರ ನೀಡುವಂತೆ ಸೂಚನೆ ನೀಡಿದ್ದೆ, ಅದರಂತೆ ಇಂದು 21 ಜನ ಕಿರಿಯ ಪವರ್ ಮ್ಯಾನ್ ಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ ಎಂದರು. ಇದನ್ನೂ ಓದಿ: ಸರ್ಕಾರಿ ಕಚೇರಿಗಳಿಗೆ ಶಾಕ್ ನೀಡಿದ ಸುನಿಲ್ ಕುಮಾರ್

    ಅತ್ಯಂತ ಶೀಘ್ರದಲ್ಲೇ ಉಳಿದ 1878 ಜನರಿಗೆ ನೇಮಕಾತಿ ಆದೇಶ ನೀಡಲಾಗುವುದು. ನಮ್ಮ ಸರ್ಕಾರ ಬಂದ ನಂತರ ಅತಿ ದೊಡ್ಡ ಪ್ರಮಾಣದಲ್ಲಿ ಈ ನೇಮಕ ಪ್ರಕ್ರಿಯೆ ನಡೆದಿರುವುದು ವೈಯಕ್ತಿಕವಾಗಿ ನನಗೆ ಸಂತೋಷ ತಂದಿದೆ. ಕೆಪಿಟಿಸಿಎಲ್ ನಲ್ಲಿ ಖಾಲಿ ಇರುವ ಇತರ ಹುದ್ದೆಗಳ ಭರ್ತಿಗೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕ್ರಮ ವಹಿಸಲಾಗುತ್ತದೆ ಎಂದು ಸ್ಪಷ್ಟಪಡಿಸದರು.

    ಈ ಸಂದರ್ಭದಲ್ಲಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯಕ್ ಹಾಗೂ ಕೆಪಿಟಿಸಿಎಲ್‍ನ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಎಂ.ಮಂಜುಳಾ ಅವರು ಉಪಸ್ಥಿತರಿದ್ದರು. ಇದನ್ನೂ ಓದಿ: ಕಗ್ಗತ್ತಲಲ್ಲಿ ಕರ್ನಾಟಕ ಮುಳುಗುವ ಆತಂಕ – ಇಂಧನ ಸಚಿವರು ಹೇಳಿದ್ದೇನು?

  • ಸುಶೀಲ್ ಕುಮಾರ್​ಗೆ ಶಾಕ್‍ಕೊಟ್ಟ ರೈಲ್ವೇ ಇಲಾಖೆ

    ಸುಶೀಲ್ ಕುಮಾರ್​ಗೆ ಶಾಕ್‍ಕೊಟ್ಟ ರೈಲ್ವೇ ಇಲಾಖೆ

    ನವದೆಹಲಿ: ಕೊಲೆ ಪ್ರಕರಣದಲ್ಲಿ ದೆಹಲಿ ಪೊಲೀಸ್ ಕಸ್ಟಡಿಯಲ್ಲಿರುವ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ಉತ್ತರ ರೈಲ್ವೇ ಇಲಾಖೆ ಸರ್ಕಾರಿ ಹುದ್ದೆಯಿಂದ ಅಮಾನತು ಮಾಡಿದೆ.

    ಕುಸ್ತಿಪಟು ಸಾಗರ್ ಧನ್ಕರ್ ಅವರ ಹತ್ಯೆ ಪ್ರಕರಣದಲ್ಲಿ ದೆಹಲಿಯ ಕ್ರೈಮ್ ಬ್ರಾಂಚ್ ಅಧಿಕಾರಿಗಳು ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಬಂಧಿತ ಸುಶೀಲ್ ಕುಮಾರ್ ಹಾಗೂ ಆತನ ಸಹಚರರು ಪೊಲೀಸರ ವಶದಲ್ಲಿದ್ದಾರೆ.

    2015ರಲ್ಲಿ ಸುಶೀಲ್ ಕುಮಾರ್ ಉತ್ತರ ರೈಲ್ವೇ ಇಲಾಖೆಯ ಸೀನಿಯರ್ ಕಮರ್ಷಿಯಲ್ ಮ್ಯಾನೇಜರ್ ಆಗಿದ್ದರು. ಅಲ್ಲದೇ ಶಾಲಾ ಮಟ್ಟದ ಕ್ರೀಡೆಗಳ ಅಭಿವೃದ್ಧಿಯ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ನೇಮಕಗೊಂಡಿದ್ದರು.

    ಸರ್ಕಾರಿ ನೌಕರನ ಮೇಲೆ ಕ್ರಿಮಿನಲ್ ಪ್ರಕರಣದಲ್ಲಿ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಅಮಾನತು ಮಾಡಲಾಗಿದೆ. ತನಿಖೆ ಮುಗಿಯುವವರೆಗೂ ಸುಶೀಲ್ ಕುಮಾರ್ ಅವರನ್ನು ಹುದ್ದೆಯಿಂದ ಅಮಾನತು ಮಾಡಲಾಗಿದೆ. ಮುಂದಿನ ಆದೇಶದವರೆಗೆ ಈ ಹುದ್ದೆಯನ್ನು ಅಮಾನತು ಮಾಡಿಡಲಾಗಿದೆ ಎಂದು ಉತ್ತರ ರೈಲ್ವೇ ತಿಳಿಸಿದೆ.

  • ಅಕ್ರಮ ನೇಮಕಾತಿ ಆರೋಪ – ಚಾಮುಲ್ ವಿರುದ್ಧ ಪ್ರತಿಭಟನೆ

    ಅಕ್ರಮ ನೇಮಕಾತಿ ಆರೋಪ – ಚಾಮುಲ್ ವಿರುದ್ಧ ಪ್ರತಿಭಟನೆ

    ಚಾಮರಾಜನಗರ: ಅಕ್ರಮವಾಗಿ ಚಾಮರಾಜನಗರ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಖಾಲಿ ಇದ್ದ ಹುದ್ದೆಗಳನ್ನು ಬರ್ತಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ವಿವಿಧ ಪ್ರಗತಿ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

    ಚಾಮರಾಜನಗರ ಜಿಲ್ಲೆಯ ಕುದೇರು ಗ್ರಾಮದಲ್ಲಿರುವ ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಮುಂದೆ ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿದ್ದರು. ಹಾಲು ಒಕ್ಕೂಟದಲ್ಲಿ ಖಾಲಿ ಇದ್ದ 72 ಹುದ್ದೆಗಳಿಗೆ ಒಕ್ಕೂಟದ ಆಡಳಿತ ಮಂಡಳಿ ಅಕ್ರಮವಾಗಿ ನೇಮಕಾತಿ ಮಾಡಿದೆ ಎಂದು ಆರೋಪಿಸಿ ಅನಿರ್ಧಿಷ್ಟಾವದಿ ಧರಣಿ ಸತ್ಯಾಗ್ರಹ ಆರಂಭಿಸಿದರು.

    ಹಾಲು ಒಕ್ಕೂಟದ ವಿರುದ್ಧ ದಿಕ್ಕಾರದ ಘೋಷಣೆಗಳನ್ನ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಈಗಾಗಲೇ ಒಕ್ಕೂಟದಲ್ಲಿ ಖಾಲಿ ಇದ್ದ ವಿವಿಧ ವರ್ಗದ ಹುದ್ದೆಗಳಿಗೆ ಪರೀಕ್ಷೆ ನಡೆಸದೇ ಆಯ್ಕೆ ಮಾಡಿದ ಕ್ರಮ ಸರಿಯಲ್ಲವೆಂದು ಆರೋಪಿಸಿದರು. ಅಲ್ಲದೆ ನೇಮಕಾತಿಯನ್ನ ರದ್ದು ಮಾಡಬೇಕೆಂದು ಒತ್ತಾಯಿಸಿದರು.

    ಈಗಾಗಲೇ ನಡೆದಿರುವ ಪರೀಕ್ಷಾ ಪದ್ಧತಿಯಲ್ಲಿ ಬಾರಿ ಪ್ರಮಾಣದ ಅವ್ಯವಹಾರ ನಡೆದಿದ್ದು, ಮರು ಪರೀಕ್ಷೆ ಮಾಡಬೇಕೆಂದು ಆಗ್ರಹಿಸಿದರು. ಚಾಮುಲ್‍ನಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಬಗ್ಗೆ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿಭಟನೆ ದಿಕ್ಕು ಬದಲಾಗಲಿದೆ.

  • ಹ್ಯಾಂಗ್ ಮ್ಯಾನ್ ಹುದ್ದೆಗೆ ಅರ್ಜಿ ಹಾಕಿ ಗಮನ ಸೆಳೆದ ಧಾರವಾಡದ ವ್ಯಕ್ತಿ

    ಹ್ಯಾಂಗ್ ಮ್ಯಾನ್ ಹುದ್ದೆಗೆ ಅರ್ಜಿ ಹಾಕಿ ಗಮನ ಸೆಳೆದ ಧಾರವಾಡದ ವ್ಯಕ್ತಿ

    ಧಾರವಾಡ: ದೇಶಾದ್ಯಂತ ಅಪರಾಧಿಕ ಹಾಗೂ ಅತ್ಯಾಚಾರದಂತಹ ಘಟನೆಗಳು ನಡೆಯುತ್ತಿದ್ದು, ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ದೆಹಲಿಯ ನಿರ್ಭಯಾ ಪ್ರಕರಣ ನಡೆದ ನಂತರ ಅತ್ಯಾಚಾರದ ಪ್ರಕರಣಗಳು ನಾಗರಿಕ ಸಮಾಜವನ್ನು ತಲ್ಲಣಗೊಳಿಸಿವೆ. ಇದೆಲ್ಲದರ ಮಧ್ಯೆ ಧಾರವಾಡ ಜಿಲ್ಲೆಯ ವ್ಯಕ್ತಿಯೊಬ್ಬ ಹ್ಯಾಂಗ್ ಮ್ಯಾನ್ ಹುದ್ದೆಗೆ ಅರ್ಜಿ ಹಾಕಿ ಗಮನ ಸೆಳೆಯುತ್ತಿದ್ದಾರೆ.

    ನವಲಗುಂದ ಪಟ್ಟಣದ ಶೌಕತ ಎಂಬವರು ಹ್ಯಾಂಗ್ ಮ್ಯಾನ್ ಹುದ್ದೆಗಾಗಿ ಕಳೆದ 2013ರಲ್ಲಿ ಅರ್ಜಿ ಹಾಕಿದ್ದರು. ದೇಶದ್ರೋಹಿಗಳಿಗೆ ಗಲ್ಲು ಹಾಕಲು ನನಗೆ ಅನುಮತಿ ಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದರು. ರಾಜ್ಯದಲ್ಲಿ ಹ್ಯಾಂಗ್ ಮ್ಯಾನ್ ಹುದ್ದೆಗೆ ಯಾರಿಲ್ಲ ಎಂದು ತಿಳಿದ ಶೌಕತ 2013ರಲ್ಲಿ ಕರ್ನಾಟಕ ಸರ್ಕಾರದ ಕಾರಾಗೃಹ ಇಲಾಖೆ ಅಧಿಕಾರಿಗಳಿಗೆ ಅರ್ಜಿ ಹಾಕಿದ್ದರು.

    ದೇಶಪ್ರೇಮವನ್ನು ಮೈಗೂಡಿಸಿಕೊಂಡ ಶೌಕತ ಎಲ್ಲರೂ ಡಾಕ್ಟರ್, ಎಂಜಿನಿಯರ್, ಕ್ಲರ್ಕ್ ಹುದ್ದೆ ಬಯಸುತ್ತಾರೆ. ನನಗೆ ದೇಶ ಸೇವೆ ಮಾಡಬೇಕೆನ್ನುವ ಬಯಕೆಯಿಂದ ನಾನು ಹ್ಯಾಂಗ್ ಮ್ಯಾನ್ ಹುದ್ದೆಗೆ ಅರ್ಜಿ ಹಾಕಿದ್ದೆನೆ ಎಂದು ಹೇಳುತ್ತಾರೆ. ಹ್ಯಾಂಗ್ ಮಾಡುವ ವಿಷಯದ ಬಗ್ಗೆ ಎಲ್ಲವನ್ನು ತಿಳಿದುಕೊಂಡಿದ್ದೆನೆ. ಈ ಕೆಲಸ ಕೊಟ್ಟರೆ ಸರಿಯಾಗಿ ನಿಭಾಯಿಸುತ್ತೇನೆ ಎಂದು ಶೌಕತ್ ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ.

    ನವಲಗುಂದದಲ್ಲಿ ಚಿಕ್ಕ ಹೊಟೇಲ್ ನಡೆಸುವ ಇವರು, ಸದ್ಯ ಹಲವು ಜೈಲುಗಳಲ್ಲಿ ಗಲ್ಲಿಗೆರಿಸುವ ಅಪರಾಧಿಗಳಿದ್ದು, ಅವರಿಗೆ ಗಲ್ಲು ಏರಿಸಲು ಯಾರೂ ಇಲ್ಲ, ನನಗೆ ಈ ಅವಕಾಶ ಸಿಕ್ಕರೆ ಮಾಡುತ್ತೇನೆ ಎಂದು ಹೇಳುತ್ತಾರೆ. ಈ ನೌಕರಿಗಾಗಿ ಇವರು ಬೆಂಗಳೂರು ಹಾಗೂ ದೆಹಲಿಗೆ ಕೂಡ ಹೋಗಿ ಬಂದಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.