ಮೈಸೂರು: ವಿದ್ಯುತ್ ತಂತಿ ತಗುಲಿ ತಾಯಿ-ಮಗ (Mother-Son) ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹುಣಸೂರು (Hunsur) ತಾಲೂಕು ಎಮ್ಮೆಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ನೀಲಮ್ಮ (39), ಹರೀಶ್ (19) ಮೃತ ದುರ್ದೈವಿಗಳು. ವಿದ್ಯುತ್ ಕಂಬದ ವಿದ್ಯುತ್ ತಂತಿಯಿಂದ ಅವಘಡ ಸಂಭವಿಸಿದೆ. ಜಮೀನಿಗೆ ಕೆಲಸಕ್ಕೆ ತೆರಳಿದ್ದ ವೇಳೆ ದುರಂತ ಸಂಭವಿಸಿದೆ. ಮೊದಲು ತಾಯಿ ನೀಲಮ್ಮಗೆ ವಿದ್ಯುತ್ ಶಾಕ್ (Electric Shock) ಹೊಡೆದಿದೆ. ಈ ವೇಳೆ ತಾಯಿಯನ್ನು ರಕ್ಷಣೆ ಮಾಡಲು ಹೋದ ಮಗ ಕೂಡ ಬಲಿಯಾಗಿದ್ದಾನೆ. ಇದನ್ನೂ ಓದಿ: ಕ್ರಿಮಿನಲ್ ಕೇಸ್‌ಗಳಲ್ಲಿ ಆರೋಪಪಟ್ಟಿ ರೂಪಿಸಲು ವಿಳಂಬ – ಸುಪ್ರೀಂ ಕಳವಳ
ಹುಣಸೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ವಿದ್ಯುತ್ ಇಲಾಖೆ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ಎಂದು ಆರೋಪಿಸಲಾಗಿದ್ದು, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ನವೆಂಬರ್ 14ರ ಬಳಿಕ ಕಾಂಗ್ರೆಸ್ ಸರ್ಕಾರ ಪತನ: ಸುರೇಶ್ ಗೌಡ
ಮೈಸೂರು: ಪರಿಹಾರ ಹಣದ (Compensation money) ಆಸೆಗೆ ಪತಿಯನ್ನ ತಾನೇ ಕೊಂದು, ಹುಲಿ ಕೊಂದಿದೆ ಅಂತ ನಂಬಿಸಲು ಯತ್ನಿಸಿದ ಘಟನೆ ಮೈಸೂರು (Mysuru) ಜಿಲ್ಲೆಯ ಹುಣಸೂರು ತಾಲ್ಲೂಕು ಚಿಕ್ಕ ಹೆಜ್ಜೂರು ಗ್ರಾಮದಲ್ಲಿ ನಡೆದಿದೆ.
ಈ ದಂಪತಿ ಅಡಿಕೆ ತೋಟದಲ್ಲಿ ಕೆಲಸ ಮಾಡಿಕೊಂಡು ಅಲ್ಲೇ ವಾಸ ಇದ್ದರು. ಒಂದು ವಾರದ ಹಿಂದೆ ಪತಿ ನಾಪತ್ತೆಯಾಗಿದ್ದಾರೆ ಅಂತ ಪತ್ನಿ ದೂರು ನೀಡಿದ್ದರು. ಹುಲಿ ಆತನನ್ನು ಕೊಂದು ಎಳೆದುಕೊಂಡು ಹೋಗಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಳು. ಈ ಬಗ್ಗೆ ಪರಿಶೀಲನೆ ನಡೆಸಿದ ಪೊಲೀಸರು ಅರಣ್ಯ ಇಲಾಖೆ ಸಿಬ್ಬಂದಿ ಯಾವುದೇ ಪ್ರಾಣಿ ಬಂದ ಕುರುಹು ಇರಲಿಲ್ಲ. ಅನುಮಾನಗೊಂಡು ಮನೆಯಲ್ಲಿ ಹುಡುಕಾಟ ವೇಳೆ ಮನೆಯ ಹಿಂದೆ ತಿಪ್ಪೆಗುಂಡಿಯಲ್ಲಿ ವೆಂಕಟಸ್ವಾಮಿ ಶವ ಪತ್ತೆಯಾಗಿದೆ.
ವಿಷ ಹಾಕಿ ಪತಿ ಕೊಲೆ ಮಾಡಿದ್ದ ಪತ್ನಿ ನಂತರ ತಿಪ್ಪೆಗುಂಡಿಗೆ ಎಳೆದುಕೊಂಡು ಹಾಕಿ ಕಥೆ ಕಟ್ಟಿದ್ದಾಳೆ. ಪೊಲೀಸರ ವಿಚಾರಣೆ ವೇಳೆ ಪರಿಹಾರದ ಹಣಕ್ಕಾಗಿ ಕೃತ್ಯವೆಸಗಿರುವ ಬಗ್ಗೆ ಹೇಳಿಕೆ ನೀಡಿದ್ದಾಳೆ. ಕಾಡು ಪ್ರಾಣಿಯಿಂದ ಹತ್ಯೆಗೊಳಗಾದ ಕುಟುಂಬಕ್ಕೆ ಲಕ್ಷ ಲಕ್ಷ ಪರಿಹಾರ ಸಿಗುತ್ತದೆ ಅಂತಾ ಕೊಲೆ ಮಾಡಿದ್ದಾಳೆ. ಪತ್ನಿ ಸಲ್ಲಾಪುರಿಯನ್ನ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ – ಬಂಗ್ಲೆ ಗುಡ್ಡ ಕಾಡಿನಲ್ಲಿ 3 ಅಸ್ಥಿಪಂಜರ ಪತ್ತೆ
ಮೊಬೈಲ್ ಸ್ಫೋಟಗೊಂಡು ಸತ್ತಿದ್ದಾಳೆ ಎಂದು ಕಥೆ ಕಟ್ಟಿದ್ದ ಪಾಪಿ
ಮೈಸೂರು: ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯ (Lover) ಬಾಯಿಗೆ ಜಿಲೆಟಿನ್ (Gelatin) ಕಡ್ಡಿ ಇಟ್ಟು ಸ್ಫೋಟಿಸಿ ಹತ್ಯೆಗೈದ ಘಟನೆ ಸಾಲಿಗ್ರಾಮ ತಾಲೂಕಿನ ಬೇರ್ಯ ಗ್ರಾಮದಲ್ಲಿ ನಡೆದಿದೆ.
ಹುಣಸೂರು (Hunasuru) ತಾಲೂಕಿನ ಗೆರಸನಹಳ್ಳಿ ಗ್ರಾಮದ ರಕ್ಷಿತ (20) ಮೃತ ಮಹಿಳೆ. ಪಿರಿಯಾಪಟ್ಟಣದ ಬಿಳಿಕೆರೆ ಗ್ರಾಮದ ಸಿದ್ದರಾಜು ಕೊಲೆಗೈದ ಆರೋಪಿಯಾಗಿದ್ದಾನೆ. ರಕ್ಷಿತ ಕೇರಳದ ವ್ಯಕ್ತಿಯನ್ನು ಮದುವೆಯಾಗಿದ್ದಳು. ಅಲ್ಲದೇ ಸಿದ್ದರಾಜು ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬೀದರ್‌ನಲ್ಲಿ ಭೀಕರ ಅಪಘಾತ – ಸ್ಥಳದಲ್ಲೇ ತಾಯಿ, ಮಗಳ ದುರಂತ ಅಂತ್ಯ
ಮಹಿಳೆ ಕಪ್ಪಡಿ ಕ್ಷೇತ್ರಕ್ಕೆ ಹೋಗೋಣ ಎಂದು ಕರೆದಿದ್ದಳು. ಬಳಿಕ ಲಾಡ್ಜ್‍ನಲ್ಲಿ ಇಬ್ಬರು ತಂಗಿದ್ದರು. ಈ ವೇಳೆ, ಆಕೆಯ ಬಾಯಿಗೆ ಜಿಲೆಟಿನ್ ಕಡ್ಡಿ ಇಟ್ಟು ಸ್ಫೋಟಿಸಿ ಹತ್ಯೆ ಮಾಡಿದ್ದಾನೆ. ಬಳಿಕ ಮೊಬೈಲ್ ಸ್ಫೋಟಗೊಂಡು ಸಾವನ್ನಪ್ಪಿದ್ದಾಳೆ ಎಂದು ಕಥೆ ಕಟ್ಟಿದ್ದ.
ಸ್ಥಳದಲ್ಲಿ ಯಾವುದೇ ಮೊಬೈಲ್ ಇಲ್ಲದ ಕಾರಣ ಲಾಡ್ಜ್ ಸಿಬ್ಬಂದಿಗೆ ಅನುಮಾನ ಬಂದಿತ್ತು. ಬ್ಲಾಸ್ಟ್ ಆದ ಮೊಬೈಲ್ ಎಲ್ಲಿ ಎಂದಿದ್ದಕ್ಕೆ ಹೊರಗೆ ಬಿಸಾಡಿದ್ದಾಗಿ ಸುಳ್ಳು ಹೇಳಿ ಪರಾರಿಯಾಗಲು ಯತ್ನಿಸಿದ್ದ. ಅನುಮಾನ ಬಂದು ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಫೋನ್ ಮಾಡಿದ್ದರು. ಸ್ಥಳಕ್ಕೆ ಬಂದ ಪೊಲೀಸರ ಬಳಿ ಅಸಲಿ ವಿಷಯವನ್ನು ಸಿದ್ದರಾಜು ಹೇಳಿದ್ದಾನೆ. ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಒಡಿಶಾ | ಜಲಪಾತದಲ್ಲಿ ರೀಲ್ಸ್ ಮಾಡಲು ಹೋಗಿ ಕೊಚ್ಚಿಹೋದ ಯೂಟ್ಯೂಬರ್
ಮೈಸೂರು: ಸಿಲಿಂಡರ್ ಬದಲಾಯಿಸುವ ವೇಳೆ ಗ್ಯಾಸ್ ಸೋರಿಕೆಯಾದ ಪರಿಣಾಮ ಬೆಂಕಿ ಹೊತ್ತಿಕೊಂಡು ಐವರಿಗೆ ಗಾಯಗಳಾದ ಘಟನೆ ಮೈಸೂರಿನ (Mysuru) ಹುಣಸೂರು (Hunsuru) ನಗರದ ಕಲ್ಕುಣಿಕೆಯ ಕುರ್ಜನ್ ಬೀದಿಯ ವಠಾರದಲ್ಲಿ ನಡೆದಿದೆ.
ನಿಂಗರಾಜುರವರ ಮನೆಯಲ್ಲಿ ಸಿಲಿಂಡರ್ ಬದಲಾಯಿಸುವ ವೇಳೆ ಗ್ಯಾಸ್ ಸೋರಿಕೆಯಾಗಿ ದಂಪತಿಗೆ ಬೆಂಕಿ ಹತ್ತಿಕೊಂಡಿದೆ. ಜೋರಾದ ಶಬ್ದ ಕೇಳಿದ ಪಕ್ಕದ ಮನೆಯವರಾದ ರಾಣಿಯಮ್ಮ, ಶೀಲ, ನಾಗಮ್ಮರವರು ನೋಡಲು ಹೋಗುತ್ತಿದ್ದಂತೆ ಅವರ ಬಟ್ಟೆಗಳಿಗೆ ಬೆಂಕಿ ಹತ್ತಿಕೊಂಡಿದೆ. ಘಟನೆ ಸಂಬಂಧ ಹುಣಸೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮತ್ಸ್ಯ 6000 – ಆಳ ಸಮುದ್ರದ ರಹಸ್ಯಗಳನ್ನು ಭೇದಿಸಲು ಭಾರತ ಸಜ್ಜು
ರಾಮನಗರ: ಸಚಿವ ಚಲುವರಾಯಸ್ವಾಮಿಗೆ (Chaluvarayaswamy) ಕಪಾಳಮೋಕ್ಷ ಆಗಿದ್ಯಾ? ಮಾಜಿ ಎಂಎಲ್‌ಸಿ ಕೀಲಾರ ಜಯರಾಂ ಹಲ್ಲೆ ಮಾಡಿದ್ರಾ? ಟ್ರಾನ್ಸ್‌ಫರ್ ವಿಚಾರದಲ್ಲಿ ಗಲಾಟೆ ಆಯ್ತಾ? ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಮಾಡಿದ ಆರೋಪ ಇಂತಹ ಅನುಮಾನಗಳಿಗೆ ಕಾರಣ ಆಗಿದೆ.
ಹುಣಸೂರಿನ (Hunsur) ಹೋಟೆಲ್‌ವೊಂದರಲ್ಲಿ ಸಚಿವ ಚಲುವರಾಯಸ್ವಾಮಿ ಮತ್ತು ಮಾಜಿ ಎಂಎಲ್‌ಸಿ ಕಿಲಾರ ಜಯರಾಮ್ ನಡುವೆ ವರ್ಗಾವಣೆ ಹಣಕಾಸಿನ ವಿಚಾರದಲ್ಲಿ ಕಿತ್ತಾಟ ನಡೆದಿತ್ತು. ಈ ವೇಳೆ ಕೃಷಿ ಸಚಿವರ ಮೇಲೆ ಮಾಜಿ ಎಂಎಲ್‌ಸಿ ಹಲ್ಲೆ ಮಾಡಿದ್ದರು ಎಂಬ ವಿಚಾರವನ್ನು ಕುಮಾರಸ್ವಾಮಿ ಬಹಿರಂಗ ಮಾಡಿದ್ದರು. ಸಚಿವರ ಮೇಲೆ ಹಲ್ಲೆ ನಡೆಯುವಂತಹ ಸ್ಥಿತಿ ರಾಜ್ಯದಲ್ಲಿ ಉದ್ಭವವಾಗಿದೆ ಎಂದು ಲೇವಡಿ ಮಾಡಿದ್ದರು. ಇದನ್ನೂ ಓದಿ: Tumakuru| ಮಗನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ಕೊಡಿ: ಹೆತ್ತ ತಾಯಿ ಅಳಲು
ಆದರೆ ಈ ಆರೋಪವನ್ನು ಸಚಿವ ಚಲುವರಾಯಸ್ವಾಮಿ ಅಲ್ಲಗಳೆದಿದ್ದಾರೆ. ಅವರು ಚಪಲಕ್ಕೆ ಏನೇನು ಹೇಳುತ್ತಾರೋ ಗೊತ್ತಿಲ್ಲ. ಹೆಚ್‌ಡಿಕೆಗೆ ಮಗನ ಚುನಾವಣೆಗಿಂತ ಚಲುವರಾಯಸ್ವಾಮಿ ವಿಚಾರ ಮುಖ್ಯವಾಗಿದೆ. ನನಗೂ, ಜಯರಾಂಗೂ ಯಾವುದೇ ವರ್ಗಾವಣೆ, ಹಣದ ವ್ಯವಹಾರ ನಡೆದಿಲ್ಲ. ನಮ್ಮ ಸರ್ಕಾರ ಬಂದಾಗಿಂದ ಅವರು ಯಾವುದೇ ಸಹಕಾರ ನಮಗೆ ಕೊಟ್ಟಿಲ್ಲ. ಎಲ್ಲರದ್ದು ನನ್ನ ಜೇಬಲ್ಲಿ ಇದೆ ಎನ್ನುತ್ತಾರೆ. ಒಂದೂವರೆ ವರ್ಷದಿಂದ ಇನ್ನೂ ಬಿಡುಗಡೆ ಮಾಡಿಲ್ಲ. ಬರೀ ಈ ರೀತಿಯ ಹೇಳಿಕೆಯಲ್ಲೇ ಹೆಚ್‌ಡಿಕೆ ಕಾಲಹರಣ ಮಾಡುತ್ತಿದ್ದಾರೆ. ನಮ್ಮ ಹೆಸರು ಹೇಳದಿದ್ದರೆ ಅವರಿಗೆ ನಿದ್ದೆ ಬರಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಕಾರವಾರ ಕದಂಬ ನೌಕಾನೆಲೆ ವ್ಯಾಪ್ತಿಯಲ್ಲಿ ಟ್ರ್ಯಾಕರ್ ಅಳವಡಿಸಿದ ರಣ ಹದ್ದು ಪತ್ತೆ!
– ರೇವಣ್ಣ ಕಡೆಯವರಿಂದ ಸಂತ್ರಸ್ತೆಯ ಅಪಹರಣ ಪ್ರಕರಣ
– ಪಬ್ಲಿಕ್ ಟಿವಿ ಜೊತೆ ಅಳಲು ತೋಡಿಕೊಂಡ ಕಾರ್ಮಿಕರು
– ಆ ಮಹಿಳೆಯನ್ನು ನಾವು ನೋಡೇ ಇಲ್ಲ
ಮೈಸೂರು: ಶನಿವಾರ 40ಕ್ಕೂ ಹೆಚ್ಚು ಪೊಲೀಸರು (Police) ಬಂದು ಹೊಡೆದಿದ್ದಾರೆ. ಪೊಲೀಸರ ಏಟಿನ ಭಯದಿಂದ ನಾವು ಕೆಲ ಸುಳ್ಳು ಹೇಳಬೇಕಾಯ್ತು ಎಂದು ರಾಜ್‌ಗೋಪಾಲ್ ಅವರ ತೋಟದ ಮನೆಯ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.
ರಾಜ್‌ಗೋಪಾಲ್ ಅವರ ಹುಣಸೂರು ಪಟ್ಟಣದಿಂದ ಸುಮಾರು 14 ಕಿ.ಮೀ ದೂರದಲ್ಲಿರುವ ಕಾಳೇನಹಳ್ಳಿಯಲ್ಲಿ ತೋಟದ ಮನೆಯಲ್ಲಿ ಅಪಹರಣಕ್ಕೆ ಒಳಗಾದ ಸಂತ್ರಸ್ತೆ ಪತ್ತೆಯಾದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಇಂದು ತೋಟದ ಮನೆಗೆ ಹೋಗಿತ್ತು. ಈ ವೇಳೆ ಅಲ್ಲಿದ್ದ ಇಬ್ಬರು ಕೆಲಸಗಾರರ ಬಳಿ ಮಹಿಳೆಯ ಬಗ್ಗೆ ಮಾತನಾಡಿಸಿದಾಗ ಬಹಳ ಸ್ಫೋಟಕ ವಿಚಾರಗಳು ಹೊರಬಿದ್ದಿದೆ. ಇದನ್ನೂ ಓದಿ: ಆ ಯುವತಿ ನಂಬರ್‌ಗೆ ದಿನಕ್ಕೆರಡು ಬಾರಿ ಕರೆ ಮಾಡ್ತಿದ್ದಾರಂತೆ ಪ್ರಜ್ವಲ್ – ರಹಸ್ಯ ಸ್ಫೋಟ!
ಯಾಕೆ ಹೊಡೆದಿದ್ದು ಎಂದು ಪಬ್ಲಿಕ್ ಟಿವಿ ಪ್ರಶ್ನಿಸಿದ್ದಕ್ಕೆ, ಆ ಮಹಿಳೆಯನ್ನು ಹೊರಗೆ ಬಿಟ್ಟಿದ್ದು ಯಾಕೆ ಎಂದು ನಮ್ಮನ್ನು ಪ್ರಶ್ನಿಸಿ ಹೊಡೆದರು. ನಾನು ಮನೆಯ ಮಾಲೀಕರು ಹೇಳಿದಂತೆ ಕೆಲಸ ಮಾಡುತ್ತೇನೆ. ನೀವು ಯಾವುದೇ ವಿಚಾರ ಇದ್ದರೂ ಮಾಲೀಕರನ್ನು ಕೇಳಿ. ನಮಗೆ ವಿಚಾರ ಗೊತ್ತಿಲ್ಲ. ನಮ್ಮನ್ನು ಯಾಕೆ ಹೊಡೆಯುತ್ತೀರಿ ಎಂದು ಪ್ರಶ್ನಿಸಿದೆ ಎಂದು ಕಾರ್ಮಿಕ ಉತ್ತರಿಸಿದರು.
ಈ ವೇಳೆ ಮತ್ತೊಬ್ಬ ಕೆಲಸಗಾರನಿಗೆ ಹೊಡೆದ ವಿಚಾರವನ್ನು ತಿಳಿಸಿದ ಅವರು, ಅವನಿಗೆ ದೊಣ್ಣೆಯಲ್ಲಿ ಹೊಡೆದಿದ್ದಾರೆ. ಅವನಿಗೆ ಭಯ ಜಾಸ್ತಿ. ಯಾವಾಗ ಏಟು ಹೊಡೆದರೋ ಈಗ ಇವನು ಸುಳ್ಳು ಹೇಳುವ ಸನ್ನಿವೇಶಕ್ಕೆ ಬಂದಿದ್ದಾನೆ. ಏಟು ಹೊಡೆಯುವುದನ್ನು ನಾನೇ ಕಣ್ಣಾರೆ ಕಂಡಿದ್ದೀನಿ. ದೊಣ್ಣೆಯಿಂದ ಏಟು ತಿಂದ ಬಳಿಕ ಆತನಿಗೆ ಈಗ ಕೆಲಸ ಮಾಡಲು ಆಗುತ್ತಿಲ್ಲ. ನಿಜವಾಗಿ ಆ ಯಮ್ಮ ಯಾರು ಅಂತಾನೆ ಗೊತ್ತಿಲ್ಲ. ಇಲ್ಲಿಯವರೆಗೆ ನಾನು ಆಕೆಯನ್ನು ನೋಡಿಲ್ಲ ಎಂದು ತಿಳಿಸಿದರು.
ಆರಂಭದಲ್ಲಿ ಪಬ್ಲಿಕ್ ಟಿವಿ ಕಾರ್ಮಿಕರೊಬ್ಬರ ಜೊತೆ ಮಾತನಾಡಿದಾಗ ಮಹಿಳೆಯ ಬಗ್ಗೆ ಹಲವು ವಿಚಾರ ತಿಳಿಸಿದ್ದರು. ಈ ವೇಳೆ ಮತ್ತೊಬ್ಬ ಕೆಲಸಗಾರ ಮಧ್ಯಪ್ರವೇಶಿಸಿ ಆತನಿಗೆ ಭಯ ಜಾಸ್ತಿ. ಹೀಗಾಗಿ ಸುಳ್ಳು ಹೇಳುತ್ತಿದ್ದಾನೆ. ನಿನ್ನೆ ಪೊಲೀಸರು ಬಂದು ನಮಗೆ ಹೊಡೆದಿದ್ದರು ಎಂಬ ವಿಚಾರ ತಿಳಿಸಿದಾಗ ಈ ಮೇಲಿನ ಮಾಹಿತಿಗಳು ಪ್ರಕಟವಾಗಿದೆ.
ರಾಜ್‌ಗೋಪಾಲ್ ಯಾರು?
ರಾಜಗೋಪಾಲ್ ಅವರು ಹುಣಸೂರು ತಾಲ್ಲೂಕಿನ ಹೊಸೂರು ಕೊಡಗು ಕಾಲೊನಿ ಗ್ರಾಮದ ನಿವಾಸಿಯಾಗಿದ್ದಾರೆ. ರೇವಣ್ಣ ಲೋಕೋಪಯೋಗಿ ಸಚಿವರಾಗಿದ್ದಾಗ ಅವರ ಆಪ್ತ ಸಹಾಯಕರಾಗಿ ಕೆಲಸ ಮಾಡಿದ್ದರು. ಏಳು ವರ್ಷದ ಹಿಂದೆ ತೋಟದ ಮನೆ ನಿರ್ಮಿಸಿದ್ದ ಇವರು ರೇವಣ್ಣ ಅವರಿಗೆ ಸಂಬಂಧಿಸಿದ ಪ್ರಮುಖ ಕಡತಗಳನ್ನು ನಿರ್ವಹಿಸುತ್ತಿದ್ದಾರೆ.
ಮೈಸೂರು: ಕೆಎಸ್‌ಆರ್‌ಟಿಸಿ (KSRTC) ಹಾಗೂ ಜೀಪ್ (Jeep) ನಡುವೆ ಭೀಕರ ಅಪಘಾತ (Accident) ನಡೆದ ಪರಿಣಾಮ ಚಾಲಕ ಸೇರಿ ಒಟ್ಟು ನಾಲ್ವರು ಸಾವನ್ನಪ್ಪಿದ ಘಟನೆ ಮೈಸೂರು (Mysuru) ಜಿಲ್ಲೆಯ ಹುಣಸೂರು (Hunsur) ನಗರದಲ್ಲಿ ನಡೆದಿದೆ.
ಹುಣಸೂರು ನಗರದ ಅಯ್ಯಪ್ಪ ಸ್ವಾಮಿ ಬೆಟ್ಟದ ಬಳಿ ಘಟನೆ ಸಂಭವಿಸಿದ್ದು, ಚಾಲಕ ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೀಪ್ ಹೆಚ್‌ಡಿ ಕೋಟೆಯಿಂದ ಬರುತ್ತಿದ್ದ ಸಂದರ್ಭ ಅಪಘಾತ ನಡೆದಿದೆ. ಘಟನೆಯಲ್ಲಿ ಸಾವನ್ನಪ್ಪಿದವರು ಕೂಲಿ ಕಾರ್ಮಿಕರು ಎಂಬ ಮಾಹಿತಿ ಲಭಿಸಿದೆ. ಸ್ಥಳಕ್ಕೆ ಹುಣಸೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕಲ್ಯಾಣಮಂಟಪದಲ್ಲೇ ಹೈಡ್ರಾಮಾ – ಹಸೆಮಣೆ ಏರಬೇಕಿದ್ದ ಸರ್ಕಾರಿ ನೌಕರ ಜೈಲುಪಾಲು
ಅದೇ ರೀತಿ ಮೈಸೂರಿನಲ್ಲಿ ಮತ್ತೊಂದು ಅಪಘಾತ ನಡೆದಿದೆ. ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳ ನಡುವೆ ಅಪಘಾತ ನಡೆದ ಪರಿಣಾಮ ಹಲವರು ಗಾಯಗೊಂಡಿದ್ದಾರೆ. ಮೈಸೂರಿನ ಜಲದರ್ಶಿನಿ ಪ್ರವಾಸ ಮಂದಿರದ ಬಳಿ ಘಟನೆ ನಡೆದಿದೆ. ಹುಣಸೂರಿನಿಂದ ಮೈಸೂರಿಗೆ ಬರುತಿದ್ದ ಸಂದರ್ಭ ಎರಡು ಬಸ್‌ಗಳ ನಡುವೆ ಅಪಘಾತ ಸಂಭವಿಸಿದೆ. ಮುಂದೆ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ತಪ್ಪಿಸುವ ಸಲುವಾಗಿ ಒಂದು ಬಸ್ಸಿನ ಚಾಲಕ ಬ್ರೇಕ್ ಹಾಕಿದ್ದು, ಹಿಂಬದಿಯಿಂದ ಬಂದ ಮತ್ತೊಂದು ಬಸ್ ಈ ಬಸ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಎರಡೂ ಬಸ್‌ನಲ್ಲಿದ್ದ ಹಲವು ಪ್ರಯಾಣಿಕರು ಗಾಯಗೊಂಡಿದ್ದು, ಮುಖ, ಕೈಕಾಲುಗಳಿಗೆ ಗಾಯವಾಗಿದೆ. ಘಟನೆಯಿಂದ ಹುಣಸೂರು-ಮೈಸೂರು ರಸ್ತೆಯಲ್ಲಿ ಕೆಲಕಾಲ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಇದನ್ನೂ ಓದಿ: ಬೆಳಗಾವಿಯಲ್ಲಿ ಭೀಕರ ಸರಣಿ ಅಪಘತ – 50 ಮೀಟರ್ ಹಾರಿ ಬಿದ್ದ ಯುವತಿ ಗಂಭೀರ
ಮೈಸೂರು: ಮಗಳನ್ನು ಕೊಟ್ಟು ಮದುವೆ ಮಾಡಲಿಲ್ಲ ಎಂಬ ದ್ವೇಷಕ್ಕೆ ಯುವತಿಯ ಪೋಷಕರು ಕಷ್ಟ ಪಟ್ಟು ಬೆಳೆದಿದ್ದ 850 ಅಡಿಕೆ ಗಿಡಗಳನ್ನು (Arcanut Trees) ನಾಶ ಮಾಡಿದ ಘಟನೆ ಹುಣಸೂರಿನ ಕಡೇ ಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಅಶೋಕ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಅದೇ ಗ್ರಾಮದ ವೆಂಕಟೇಶ್ ಎಂಬವರ ಪುತ್ರಿಯನ್ನು ಅಶೋಕ್ ಎಂಬಾತನಿಗೆ ಕೊಟ್ಟು ವಿವಾಹ ಮಾಡಲು ಮಾತುಕತೆ ನಡೆದಿತ್ತು. ಆದರೆ ಹುಡುಗ ಸರಿಯಿಲ್ಲ ಎಂದು ಯುವತಿ ಮದುವೆ ನಿರಾಕರಿಸಿದ್ದಳು. ಇದೇ ದ್ವೇಷದಿಂದ ಆತ ಮೊದಲಿಗೆ ಅರ್ಧ ಎಕರೆಯಲ್ಲಿ ಬೆಳೆದಿದ್ದ ಶುಂಠಿಯನ್ನ ನಾಶ ಮಾಡಿದ್ದ. ಇದನ್ನೂ ಓದಿ: ಕರ್ನಾಟಕ ಸುವರ್ಣ ಮಹೋತ್ಸವ – ಸಾಹಿತಿಗಳ ಸಲಹೆ ಪಡೆದ ಶಿವರಾಜ್ ತಂಗಡಗಿ