Tag: ಹುಡುಗಿ

  • ಕೆರೆಯಲ್ಲಿ ಅಪ್ರಾಪ್ತೆಯ ಶವ ಪತ್ತೆ – ಅತ್ಯಾಚಾರ, ಕೊಲೆ ಆರೋಪ

    ಕೆರೆಯಲ್ಲಿ ಅಪ್ರಾಪ್ತೆಯ ಶವ ಪತ್ತೆ – ಅತ್ಯಾಚಾರ, ಕೊಲೆ ಆರೋಪ

    ಹಾಸನ: 16 ವರ್ಷದ ಹುಡುಗಿಯೊಬ್ಬಳ ಶವ ಕೆರೆಯಲ್ಲಿ ಪತ್ತೆಯಾಗಿದ್ದು, ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಪೋಷಕರು ಆರೋಪ ಮಾಡುತ್ತಿದ್ದಾರೆ.

    ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕೆರಗೋಡು ಗ್ರಾಮದ ಹುಡುಗಿ ಮೃತ ದುರ್ದೈವಿ. ಅದೇ ಗ್ರಾಮದ ಯುವಕನೊಬ್ಬನ ಮೇಲೆ ಪೋಷಕರು ಅತ್ಯಾಚಾರ ಮತ್ತು ಕೊಲೆ ಆರೋಪ ಮಾಡುತ್ತಿದ್ದಾರೆ.

    ಯುವಕ ತಮ್ಮ ಮಗಳನ್ನು ಪ್ರೀತಿಸುವಂತೆ ದುಂಬಾಲು ಬಿದ್ದಿದ್ದು, ನೀನಿಲ್ಲದೆ ನಾನು ಬದುಕುವುದಿಲ್ಲ ಎಂದು ಹೇಳಿ ಫೋನ್ ಮಾಡಿ ಕರೆಸಿಕೊಂಡಿದ್ದ. ಆನಂತರ ಆತ ಸ್ನೇಹಿತರೊಂದಿಗೆ ಸೇರಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

    ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಆಗ್ರಹಿಸಿದ್ದಾರೆ. ಘಟನೆ ಸಂಬಂಧ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮನೆಗೆ ನುಗ್ಗಿ ಚಿನ್ನಾಭರಣ ಕದ್ದು ಅಪ್ರಾಪ್ತೆ ಜೊತೆ ಪರಾರಿ

    ಮನೆಗೆ ನುಗ್ಗಿ ಚಿನ್ನಾಭರಣ ಕದ್ದು ಅಪ್ರಾಪ್ತೆ ಜೊತೆ ಪರಾರಿ

    – ಮಗಳಿಗಾಗಿ ಪೋಷಕರ ಕಣ್ಣೀರು

    ಪಾಟ್ನಾ: ಮನೆಗೆ ನುಗ್ಗಿದ ಕಳ್ಳರು ನಗದು, ಚಿನ್ನಾಭರಣ ಕದ್ದು, ಮಲಗಿದ್ದ ಬಾಲಕಿಯನ್ನ ಕರೆದುಕೊಂಡು ಹೋಗಿರುವ ಘಟನೆ ಬಿಹಾರದ ಗೋಪಾಲಗಂಜ್ ಜಿಲ್ಲೆಯಲ್ಲಿ ನಡೆದಿದೆ. ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಗಳನ್ನ ಹುಡುಕಿಕೊಡುವಂತೆ ಕಣ್ಣೀರು ಹಾಕುತ್ತಿದ್ದಾರೆ.

    ಮರಿಗಂಜ್ ವ್ಯಾಪ್ತಿಯ ಸವರೇಜಿ ಗ್ರಾಮದ ಮನೆಗೆ ನುಗ್ಗಿದ ಕಳ್ಳರು ಬೆಲೆ ಬಾಳುವ ವಸ್ತುಗಳನ್ನ ದೋಚಿದ್ದಾರೆ. ಹೋಗುವ ವೇಳೆ ಕೊಠಡಿಯಲ್ಲಿ ಮಲಗಿದ್ದ ಅಪ್ರಾಪ್ತೆಯನ್ನ ಅಪಹಸಿದ್ದಾರೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.

    ಇದೊಂದು ಪ್ರೇಮ ಪ್ರಸಂಗ ಎಂದು ಅನುಮಾನಗಳು ವ್ಯಕ್ತವಾಗಿವೆ. ಪೋಷಕರು ಸಹ ಕಳ್ಳತನ ಅಂತ ದೂರು ನೀಡಿದ್ದಾರೆ. ಆದ್ರೆ ಮನೆಯಲ್ಲಿಯ ಚಿನ್ನಾಭರಣಗಳ ಜೊತೆ ಅಪ್ರಾಪ್ತೆ ಪ್ರಿಯಕರನೊಂದಿಗೆ ಹೋಗಿರುವ ಸಾಧ್ಯತೆಗಳಿವೆ. ನೆರೆ ಮನೆಯ ಯುವಕನೇ ಕಳ್ಳತನ ಮಾಡಿದ್ದಾನೆ ಎಂಬ ಆರೋಪಗಳು ಕೇಳಿ ಬಂದಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಠಾಣೆ ಅಧಿಕಾರಿ ಶಶಿರಂಜನ್ ಕುಮಾರ ಹೇಳಿದ್ದಾರೆ.

  • ಕ್ಷಮಿಸು ಭಾರತ ಮಾತೆ- ಡೆತ್‍ನೋಟ್ ಬರೆದಿಟ್ಟು 17 ವರ್ಷದ ಸೇನಾ ಆಕಾಂಕ್ಷಿ ಆತ್ಮಹತ್ಯೆ

    ಕ್ಷಮಿಸು ಭಾರತ ಮಾತೆ- ಡೆತ್‍ನೋಟ್ ಬರೆದಿಟ್ಟು 17 ವರ್ಷದ ಸೇನಾ ಆಕಾಂಕ್ಷಿ ಆತ್ಮಹತ್ಯೆ

    – ಯೋಧರ ಸಮವಸ್ತ್ರದ ಕನಸು ನನಸಾಗಲಿಲ್ಲ
    – ಡೆತ್‍ನೋಟ್ ನಲ್ಲಿ ಹುಡುಗಿ ಹೇಳಿದ್ದೇನು..?

    ಮುಂಬೈ: ಮೂವರ ಕಿರುಕುಳದಿಂದ ಬೇಸತ್ತು 17 ವರ್ಷದ ಸೇನಾ ಆಕಾಂಕಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದ ಪಂಧರ್ ಪುರ ನಗರದಲ್ಲಿ ನಡೆದಿದೆ.

    ಮೃತ ಹುಡುಗಿಗೆ ಭಾರತೀಯ ಸೇನೆಯಲ್ಲಿ ಕೆಲಸ ಮಾಡಬೇಕು ಎಂಬ ಹಂಬಲವಿತ್ತು. ಆದರೆ ಮೂವರು ವ್ಯಕ್ತಿಗಳ ನಿರಂತರ ಕಿರುಕುಳದಿಂದ ನೊಂದಿರುವ ಈಕೆ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹದಿಹರೆಯದ ಹುಡುಗಿ ಡಿಸೆಂಬರ್ 7ರಂದು ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಹುಡುಗಿ ಡೆತ್ ನೋಟ್ ಬರೆದಿದ್ದು, ಅದರಲ್ಲಿ ತ್ರಿವರ್ಣ ಬ್ಯಾಡ್ಜ್ ನೊಂದಿಗೆ ಯೋಧರ ಸಮವಸ್ತ್ರ ಧರಿಸಿಕೊಳ್ಳಬೇಕೆಂಬ ಕನಸು ನನ್ನ ಆತ್ಮಹತ್ಯೆಯ ಮೂಲಕ ನನಸಾಗುತ್ತಿಲ್ಲ. ಮೂವರು ವ್ಯಕ್ತಿಗಳು ನನಗೆ ನಿರಂತರವಾಗಿ ಕಿರುಕುಳ ಕೊಡುತ್ತಿದ್ದರಿಂದ ಬೇಸತ್ತಿದ್ದೇನೆ. ಹೀಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದು, ಕ್ಷಮಿಸು ಭಾರತ ಮಾತೆ ಎಂದು ಬರೆದುಕೊಂಡಿರುವುದಾಗಿ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಪ್ರಶಾಂತ್ ಭಾಸ್ಮೆ ವಿವರಿಸಿದ್ದಾರೆ.

    ಕಿರುಕುಳ ನೀಡುತ್ತಿರುವ ಮೂವರಲ್ಲಿ ಓರ್ವ ಈ ಬಗ್ಗೆ ಯಾರ ಜೊತೆಯೂ ಹೇಳಿಕೊಳ್ಳಬಾರದು ಎಂದು ಬೆದರಿಕೆ ಕೂಡ ಹಾಕಿದ್ದನು. ಮೂವರು ಆರೋಪಿಗಳು ನನ್ನ ಮೇಲೆ ಇಲ್ಲಸಲ್ಲದ ಟೀಕೆಗಳನ್ನು ಮಾಡುತ್ತಿದ್ದರು. ಈ ಮೂಲಕ ನಿರಂತರವಾಗಿ ನನ್ನ ಮೇಲೆ ದೌರ್ಜನ್ಯವೆಸಗುತ್ತಿದ್ದರು ಎಂದು ಹುಡುಗಿ ಡೆತ್ ನೋಟ್ ನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ಲೌಕ್‍ಡೌನ್ ವೇಳೆ ಆಂಟಿ ಮನೆಯಲ್ಲಿ ಲಾಕ್- ಹುಡ್ಗಿ ಮೇಲೆ ಅಂಕಲ್ ರೇಪ್

    ಲೌಕ್‍ಡೌನ್ ವೇಳೆ ಆಂಟಿ ಮನೆಯಲ್ಲಿ ಲಾಕ್- ಹುಡ್ಗಿ ಮೇಲೆ ಅಂಕಲ್ ರೇಪ್

    – 2 ತಿಂಗಳು ಅತ್ಯಾಚಾರಗೈದ ಕಾಮುಕ
    – ವೀಡಿಯೋ ಮಾಡಿ ಬೆದರಿಕೆ

    ಮುಂಬೈ: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶದಲ್ಲಿಯೇ ಲಾಕ್‍ಡೌನ್ ಹೇರಲಾಗಿತ್ತು. ಈ ಸಂದರ್ಭದಲ್ಲಿ ತನ್ನ ಆಂಟಿ ಮನೆಯಲ್ಲಿ ಹೋಗಿ ಸಿಲುಕಿಕೊಂಡ 17 ವರ್ಷದ ಹುಡುಗಿಯ ಮೇಲೆ ಆಕೆಯ ಅಂಕಲ್ ಅತ್ಯಾಚಾರವೆಸಗಿದ ಪ್ರಕರಣ ಬೆಳಕಿಗೆ ಬಂದಿದೆ.

    ಲಾಕ್‍ಡೌನ್ ಮುಖ್ತವಾದ ಬಳಿಕ ಅವಳು ತನ್ನ ಮನೆಗೆ ತೆರಳಿದ ವೇಳೆ ಅಂಕಲ್ ಕಥೆ ಬಯಲಾಗಿದೆ. ಆರೋಪಿ ಅಂಕಲ್ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ ಆತನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಧುಲೆ ನಿವಾಸಿಯಾಗಿರುವ ಹುಡುಗಿ, ಲಾಕ್‍ಡೌನ್ ಸಮಯದಲ್ಲಿ ಪ್ಯಾರೆಲ್‍ನಲ್ಲಿರುವ ತನ್ನ ಚಿಕ್ಕಮ್ಮನ ಸ್ಥಳಕ್ಕೆ ಬಂದಿದ್ದಾಳೆ. ಇದೇ ಸಮಯವನ್ನು ಹುಡುಗಿಯ ಚಿಕ್ಕಪ್ಪನಾಗಿರುವ ಆರೋಪಿ ಸದುಪಯೋಗಪಡಿಸಿಕೊಂಡಿದ್ದಾನೆ. ಕುಟುಂಬದ ಇತರ ಸದಸ್ಯರು ಮನೆಯಿಂದ ಹೊರಗೆ ಹೋದಾಗಲೆಲ್ಲಾ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಹುಡುಗಿ ಹೇಳಿಕೊಂಡಿದ್ದಾಳೆ. ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳ ನಡುವೆ ಆರೋಪಿ ಹುಡುಗಿಯ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿರುವುದಾಗಿ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ.

    ಇತ್ತೀಚೆಗೆ ಹುಡುಗಿ ತನ್ನ ಮನೆಗೆ ಮರಳಿದ್ದಳು. ಈ ವೇಳೆ ಅವಳು ಹೊಟ್ಟೆನೋವಿನಿಂದ ಬಳಲಿದ್ದಳು. ಹೀಗಾಗಿ ಪೋಷಕರು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷೆಯ ವೇಳೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಬಯಲಾಗಿದೆ. ಇತ್ತ ಆಸ್ಪತ್ರೆಯ ಸಿಬ್ಬಂದಿ ಕೂಡಲೇ ಧುಲೇನಲ್ಲಿರುವ ಸ್ಥಳೀಯ ಪೊಲೀಸರನ್ನು ಎಚ್ಚರಿಸಿದ್ದು, ಅಂಕಲ್ ವಿರುದ್ಧ ಶೂನ್ಯ ಎಫ್‍ಐಆರ್ ದಾಖಲಿಸಿ ಭೋವಾಡಾ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.

    ಅಂಕಲ್ ತನ್ನ ಮೇಲೆ ಮೊದಲ ಬಾರಿಗೆ ಅತ್ಯಾಚಾರ ನಡೆಸಿದ್ದ ವೇಳೆ ಅದರ ವೀಡಿಯೋ ಮಾಡಿದ್ದಾನೆ. ಅಲ್ಲದೆ ಈ ವಿಚಾರ ಯಾರಿಗಾದರೂ ಹೇಳಿದರೆ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರ ಬಳಿ ಹೇಳಿದ್ದಾಳೆ. ಆಕೆಯ ಹೇಳಿಕೆಯ ಸಂಬಂಧ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿದರು.

  • ತಾನು ಪ್ರೀತಿಸ್ತಿದ್ದ ಹುಡುಗಿ ಮೇಲೆ ಕಣ್ಣಾಕಿದ್ದಕ್ಕೆ ಸಹೋದ್ಯೋಗಿಯನ್ನೇ ಮುಗಿಸಿದ!

    ತಾನು ಪ್ರೀತಿಸ್ತಿದ್ದ ಹುಡುಗಿ ಮೇಲೆ ಕಣ್ಣಾಕಿದ್ದಕ್ಕೆ ಸಹೋದ್ಯೋಗಿಯನ್ನೇ ಮುಗಿಸಿದ!

    – ಓರ್ವನ ಕೊಲೆಯಲ್ಲಿ ಟ್ರಯಾಂಗಲ್ ಲವ್ ಸ್ಟೋರಿ ಅಂತ್ಯ

    ಬೆಂಗಳೂರು: ತಾನು ಪ್ರೀತಿಸುತ್ತಿರುವ ಹುಡುಗಿ ಮೇಲೆ ಕಣ್ಣಾಕಿದ ಸಹೋದ್ಯೋಗಿಯನ್ನೇ ಕೊಲೆ ಮಾಡಿದ ಘಟನೆಯೊಂದು ಬೆಂಗಳೂರಿನ ಬನ್ನೇರುಘಟ್ಟದ ಬಳಿ ನಡೆದಿದೆ.

    ರವಿಕುಮಾರ್ ಕೊಲೆಯಾದವ. ಈತನನ್ನು ಹುಡುಗಿಯ ಪ್ರಿಯಕರ ಲೋಕೇಶ್ ಕೊಲೆ ಮಾಡಿದ್ದಾನೆ. ರವಿಕುಮಾರ್ ಬಳಿ ಲೋಕೇಶ್ ಕೆಲಸ ಮಾಡಿಕೊಂಡಿದ್ದ. ಈ ವೇಳೆ ಲೋಕೇಶ್ ಗೆ ಹುಡುಗಿಯೊಬ್ಬಳ ಜೊತೆಗೆ ಲವ್ ಆಗಿತ್ತು. ಹುಡುಗಿಯನ್ನು ಕರೆದುಕೊಂಡು ಬಂದು  ರವಿಕುಮಾರ್ ಗೆ ಪರಿಚಯ ಮಾಡಿಸಿದ್ದ.

    ಹೀಗೆ ಆದ ಪರಿಚಯದಿಂದ ಲೋಕೇಶ್ ಗೆ ಗೊತ್ತಾಗದಂತೆ ತನ್ನನ್ನು ಪ್ರೀತಿಸುವಂತೆ ರವಿಕುಮಾರ್ ಕಿರುಕುಳ ನೀಡಲು ಆರಂಭಿಸಿದ್ದಾನೆ. ಈ ವಿಚಾರ ತಿಳಿದ ಲೋಕೇಶ್,  ರವಿಕುಮಾರ್ ನನ್ನು ಕಿಡ್ನಾಪ್ ಮಾಡಿ ಬನ್ನೇರುಘಟ್ಟದ ಬಳಿ ಕೊಲೆ ಮಾಡಿದ್ದ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬೈಯ್ಯಪ್ಪನಹಳ್ಳಿ ಪೊಲೀಸರು ಲೋಕೇಶ್ ಸೇರಿ ಮೂವರನ್ನು ಬಂಧಿಸಿದ್ದಾರೆ.

  • 4 ಸಾವಿರ ಸಾಲ ಮರುಪಾವತಿಸುವುದಾಗಿ ಕರೆದು 16ರ ಹುಡುಗಿಯ ಅತ್ಯಾಚಾರಗೈದ

    4 ಸಾವಿರ ಸಾಲ ಮರುಪಾವತಿಸುವುದಾಗಿ ಕರೆದು 16ರ ಹುಡುಗಿಯ ಅತ್ಯಾಚಾರಗೈದ

    ಕೋಲ್ಕತ್ತಾ: ಸಾಲ ಮರುಪಾವತಿ ಮಾಡುವುದಾಗಿ 16 ವರ್ಷದ ಹುಡುಗಿಯನ್ನು ಮನೆಗೆ ಕರೆಸಿಕೊಂಡು ಕಾಮುಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.

    ಕೋಲ್ಕತ್ತಾದ ಗೋವಿಂದಪುರ ಕಾಲೋನಿಯಲ್ಲಿ ಘಟನೆ ನಡೆದಿದ್ದು, ತಾನು ನೀಡಬೇಕಿದ್ದ 4 ಸಾವಿರ ರೂ. ಹಿಂದಿರುಗಿಸುವುದಾಗಿ ಬಾಲಕಿಯನ್ನು ಮನೆಗೆ ಕರೆದಿದ್ದು, ಈ ವೇಳೆ ಅತ್ಯಾಚಾರ ಎಸಗಿದ್ದಾನೆ. ಆರೋಪಿಯನ್ನು ಅಬೀರ್ ನಾಸ್ಕರ್ ಅಲಿಯಾಸ್ ನಾಂಟು ಎಂದು ಗುರುತಿಸಲಾಗಿದೆ. ಈ ಹಿಂದೆ ವನ್ಯಜೀವಿ ಕಾಯ್ದೆ ಉಲ್ಲಂಘನೆಯಡಿ ಆರೋಪಿಯನ್ನು ಬಂಧಿಸಲಾಗಿತ್ತು. ಈತ ಹಲ್ಲಿಗಳನ್ನು ಮಾರಾಟ ಮಾಡುವ ಪ್ರಕರಣದಲ್ಲಿ ಆರೋಪಿಯಾಗಿದ್ದ.

    ಆರೋಪಿ ಸಾಮಾಜಿಕ ಜಾಲತಾಣದಲ್ಲಿ 16ರ ಬಾಲೆಯನ್ನು ಪರಿಚಯಿಸಿಕೊಂಡಿದ್ದು, ಬಳಿಕ ಇಬ್ಬರು ಫೋನ್‍ನಲ್ಲಿ ಹಲವು ಬಾರಿ ಮಾತನಾಡಿದ್ದರು. ನಂತರ ಇಬ್ಬರಲ್ಲಿ ಗಾಢವಾದ ಸ್ನೇಹ ಬೆಳೆದಿತ್ತು. ಹೀಗಾಗಿ ನಾಂಟುನನ್ನು ನಂಬಿ ಹುಡುಗಿ 4 ಸಾವಿರ ರೂ.ಸಾಲವನ್ನು ನೀಡಿದ್ದಳು. ಆದರೆ 16ರ ಬಾಲೆಗೆ ಆರೋಪಿ ನಾಂಟು ಹಣ ಹಿಂದಿರುಗಿಸಿರಲಿಲ್ಲ.

    ಬಳಿಕ ಹಣ ನೀಡುವಂತೆ ಹುಡುಗಿ ಆರೋಪಿಗೆ ಒತ್ತಡ ಹಾಕಿದ್ದಾಳೆ. ಈ ವೇಳೆ ಮನೆಗೆ ಬಾ ಹಣ ಕೊಡುತ್ತೇನೆ ಎಂದು ನಾಂಟು ಹೇಳಿದ್ದಾನೆ. ಮನೆಗೆ ಬರುತ್ತಿದ್ದಂತೆ ನಾಂಟು ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ್ದು, ಬಳಿಕ ವಿಚಾರವನ್ನು ಬಾಯ್ಬಿಡದಂತೆ ಬೆದರಿಕೆ ಹಾಕಿದ್ದಾನೆ.

    ಹುಡುಗಿ ಮನೆಗೆ ಮರಳುತ್ತಿದ್ದಂತೆ ಕುಟುಂಬಸ್ಥರಿಗೆ ಘಟನೆ ಕುರಿತು ವಿವರಿಸಿದ್ದು, ಬಳಿಕ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಶನಿವಾರ ಆರೋಪಿ ನಾಂಟುನನ್ನು ಬಂಧಿಸಲಾಗಿದೆ. ಸಂತ್ರಸ್ತೆಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗುವುದು. ಅವಳನ್ನು ಇದೀಗ ಮನೆಯಲ್ಲಿ ಇರಿಸಲಾಗಿದೆ. ಆರೋಪಿ ವಿರುದ್ಧ ಶೀಘ್ರವೇ ಚಾರ್ಜ್‍ಶೀಟ್ ಸಲ್ಲಿಕೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

  • ನಾನು ಅವನನ್ನೇ ಮದ್ವೆಯಾಗ್ತೀನಿ- ಫ್ಲೆಕ್ಸ್ ಬೋರ್ಡ್ ಹತ್ತಿ ಕುಳಿತ ಅಪ್ರಾಪ್ತೆ

    ನಾನು ಅವನನ್ನೇ ಮದ್ವೆಯಾಗ್ತೀನಿ- ಫ್ಲೆಕ್ಸ್ ಬೋರ್ಡ್ ಹತ್ತಿ ಕುಳಿತ ಅಪ್ರಾಪ್ತೆ

    – 45 ನಿಮಿಷ ನಡುರಸ್ತೆಯಲ್ಲಿ ಅಪ್ರಾಪ್ತೆ ಹೈಡ್ರಾಮಾ

    ಭೋಪಾಲ್: ಅಪ್ರಾಪ್ತೆ ರಾತ್ರಿ ಫ್ಲೆಕ್ಸ್ ಏರಿ ಕುಳಿತು ಹೈ ಡ್ರಾಮಾ ನಡೆಸಿದ್ದು, ತನ್ನ ತಾಯಿಯ ಇಚ್ಛೆಗೆ ವಿರುದ್ಧವಾಗಿ ಅದೇ ಹುಡುಗನನ್ನು ವಿವಾಹವಾಗುತ್ತೇನೆ ಎಂದು ಹಠ ಹಿಡಿದ್ದಾಳೆ.

    ಮಧ್ಯಪ್ರದೇಶದ ಇಂದೋರ್ ಪರದೇಸಿಪುರದಲ್ಲಿ ಘಟನೆ ನಡೆದಿದ್ದು, ನಾನು ಅದೇ ಹುಡುಗನನ್ನು ಮದುವೆಯಾಗುತ್ತೇನೆ ಎಂದು ಪಟ್ಟು ಹಿಡಿದು ಎತ್ತರದ ಫ್ಲೆಕ್ಸ್ ಏರಿ ಕುಳಿತಿದ್ದಾಳೆ. ಪರದೇಸಿಪುರದ ಭಂಡಾರಿ ಸೇತುವೆಯ ಬಳಿ ಹಾಕಿದ್ದ ಫ್ಲೆಕ್ಸ್ ಏರಿ ಕುಳಿತು ತನ್ನ ಮೊಬೈಲ್ ನೋಡುತ್ತಿದ್ದಾಳೆ. ಈ ಫೋಟೋಗಳು ಇದೀಗ ವೈರಲ್ ಆಗಿವೆ.

    ಬಾಲಕಿ ಫ್ಲೆಕ್ಸ್ ಮೇಲೆ ಕುಳಿತಿರುವುದನ್ನು ಕಂಡು ಸ್ಥಳೀಯರು ಆಗಮಿಸಿದ್ದು, ತಕ್ಷಣವೇ ಪೊಲೀಸರು ಸಹ ಆಗಮಿಸಿದ್ದಾರೆ. ಬಳಿಕ ಹುಡುಗಿಯನ್ನು ಮನವೊಲಿಸಲು ಯತ್ನಿಸಿದ್ದಾರೆ. ಆರಂಭದಲ್ಲಿ ಬಾಲಕಿ ಪೊಲೀಸರ ಮಾತನ್ನೂ ಕೇಳಿಲ್ಲ. ಬಳಿಕ ತನ್ನ ಲವ್ ಸ್ಟೋರಿಯನ್ನು ಪೊಲೀಸರಿಗೆ ವಿವರಿಸಿದ್ದಾಳೆ.

    ಬಾಲಕಿಯಿಂದ ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣವೇ ಪೊಲೀಸರು ಹುಡುಗನಿಗೆ ಕರೆ ಮಾಡಿದ್ದಾರೆ. ಈ ಕುರಿತು ಪರದೇಸಿಪುರದ ಎಸ್‍ಐ ಅಶೋಕ್ ಪಾಟಿದಾರ್ ಮಾತನಾಡಿ, ತಾನು ಪ್ರೀತಿಸಿದ ಹುಡುಗನ ಜೊತೆಗೇ ವಿವಾಹ ಮಾಡಿಸುವುದಾಗಿ ಭರವಸೆ ನೀಡಿದ ಬಳಿಕ ಹುಡುಗಿ ಕೆಳಗೆ ಬರಲು ನಿರ್ಧರಿಸಿದ್ದು, ಬಳಿಕ ಫ್ಲೆಕ್ಸ್ ಹೋರ್ಡಿಂಗ್‍ನಿಂದ ಕೆಳಗಿಳಿದಿದ್ದಾಳೆ ಎಂದು ವಿವರಿಸಿದ್ದಾರೆ.

    ಬಾಲಕಿ ತನ್ನ ತಾಯಿಯ ಇಚ್ಛೆಗೆ ವಿರುದ್ಧವಾಗಿ ಹುಡುಗನನ್ನು ವಿವಾಹವಾಗಲು ಪಟ್ಟು ಹಿಡಿದು, ಫ್ಲೆಕ್ಸ್ ಏರಿ ಕುಳಿತಿದ್ದಳು. ಹುಡುಗನ ಕಡೆಯಿಂದ ಮಾತನಾಡಿಸಿದ ನಂತರ ಕೆಳಗಿಳಿದಳು ಎಂದು ಪಾಟಿದಾರ್ ವಿವರಿಸಿದ್ದಾರೆ. ಬಾಲಕಿ 45 ನಿಮಿಷಗಳ ಕಾಲ ಹೈ ಡ್ರಾಮಾ ನಡೆಸಿದ್ದು, ಯಾರು ಮನವೊಲಿಸಿದರೂ ಕೆಳಗೆ ಇಳಿದಿಲ್ಲ. ತನ್ನ ಪ್ರಿಯತಮನ ಜೊತೆ ಮಾತನಾಡಿದ ಬಳಿಕ ಕೆಳಗಿಳಿದಿದ್ದಾಳೆ.

  • 3 ನಾಯಿಗಳೊಂದಿಗೆ ವಾಕ್‍ಗೆ ಹೋಗಿದ್ದ ಹುಡುಗಿ ನಾಪತ್ತೆ- 4 ದಿನದ ನಂತ್ರ ಪೊದೆಯಲ್ಲಿ ಪತ್ತೆ

    3 ನಾಯಿಗಳೊಂದಿಗೆ ವಾಕ್‍ಗೆ ಹೋಗಿದ್ದ ಹುಡುಗಿ ನಾಪತ್ತೆ- 4 ದಿನದ ನಂತ್ರ ಪೊದೆಯಲ್ಲಿ ಪತ್ತೆ

    – ಮನೆಯ ಸಮೀಪದ ಪೊದೆಯಲ್ಲಿ 16ರ ಹುಡುಗಿ ಪತ್ತೆ

    ಹೈದರಾಬಾದ್: 16 ವರ್ಷದ ಹುಡುಗಿಯೊಬ್ಬಳು ತನ್ನ ಮನೆಯಿಂದ ಹೊರ ಹೋಗಿದ್ದ ನಾಲ್ಕು ದಿನಗಳ ನಂತರ ಸುರಕ್ಷಿತವಾಗಿ ಮನೆಗೆ ವಾಪಸ್ ಬಂದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಲಾರಾ ರವಿಕುಮಾರ್ ಭಾನುವಾರ ಸಂಜೆ 7 ಗಂಟೆಗೆ ಸುರಕ್ಷಿತವಾಗಿ ಮನೆಗೆ ವಾಪಾಸ್ ಬಂದಿದ್ದಾಳೆ. ಹುಡುಗಿ ಹೆಚ್ಚಾಗಿ ಮೊಬೈಲ್ ಫೋನ್ ಬಳಸುತ್ತಿದ್ದಳು. ಹೀಗಾಗಿ ಆಕೆಯ ತಂದೆ ಬೈದಿದ್ದಾರೆ. ಹುಡುಗಿ ತಂದೆಯ ಜೊತೆ ಜಗಳ ಮಾಡಿದ ನಂತರ ಅ.7 ರಂದು ವಾಕ್ ಮಾಡಲು ಮನೆಯಿಂದ ಹೋಗಿದ್ದಳು. ಆದರೆ ತುಂಬಾ ಸಮಯವಾದರೂ ವಾಪಸ್ ಬಂದಿರಲಿಲ್ಲ. ಇದೀಗ ನಾಲ್ಕು ದಿನಗಳ ನಂತರ ಲಾರಾ ಮನೆಗೆ ವಾಪಸ್ ಬಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಹಯಾತ್‍ನಗರ ನಿವಾಸಿಯಾಗಿದ್ದ ಲಾರಾ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಹೆಚ್ಚಾಗಿ ಫೋನ್ ಬಳಸುತ್ತಿದ್ದಕ್ಕೆ ತಂದೆ ಬೈದಿದ್ದಾರೆ. ಆಗ ತಂದೆ-ಮಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಅಕ್ಟೋಬರ್ 7ರಂದು ರಾತ್ರಿ ಊಟ ಮಾಡಿ ಲಾರಾ ತನ್ನ ಮೂರು ನಾಯಿಗಳೊಂದಿಗೆ ವಾಕ್ ಮಾಡಲು ಮನೆಯಿಂದ ಹೊರ ಹೋಗಿದ್ದಾಳೆ. ಅವಳು ವಾಕಿಂಗ್‍ಗೆ ಹೋದ 10 ನಿಮಿಷಗಳ ನಂತರ ಲಾರಾ ಕಾಣೆಯಾಗಿದ್ದನ್ನು ಕುಟುಂಬ ಗಮನಿಸಿದೆ.

    ತನ್ನ ಮನೆಯಿಂದ ಹೊರಡುವ ಸಮಯದಲ್ಲಿ ಲಾರಾ ತನ್ನ ಫೋನ್, ಪರ್ಸ್ ಯಾವುದನ್ನೂ ತೆಗೆದುಕೊಂಡು ಹೋಗಿರಲಿಲ್ಲ. ಹೀಗಾಗಿ ಪೋಷಕರು ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿರಲಿಲ್ಲ. ಕೊನೆಗೆ ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರು ದಾಖಲಿಸಿದ್ದಾರೆ. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಕೂಡ ಮಗಳನ್ನು ಪತ್ತೆ ಹಚ್ಚಲು ಪೋಷಕರು ಸಹಾಯ ಕೇಳಿದ್ದರು. ಕೂಡಲೇ ಪೊಲೀಸರು ಆ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ.

    ನಿರಂತರವಾಗಿ ನಾಲ್ಕು ದಿನಗಳ ಕಾಲ ಹುಡುಗಿಯನ್ನು ಪತ್ತೆಹಚ್ಚಲು ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳಿಂದ 100 ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ್ದಾರೆ. ಆದರೆ ಲಾರಾ ಮಾತ್ರ ಎಲ್ಲೂ ಪತ್ತೆಯಾಗಿರಲಿಲ್ಲ. ಆದರೆ ಹಯಾತ್‍ನಗರ ಪೊಲೀಸ್ ವ್ಯಾಪ್ತಿಯಲ್ಲಿ ಲಾರಾ ನಮ್ಮ ಮನೆಯ ಸಮೀಪ ಪೊದೆಗಳ ನಡುವೆ ಅಡಗಿಕೊಂಡಿದ್ದಳು ಎಂದು ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಲಾರಾ ಭಾನುವಾರ ಸಂಜೆ 7 ಗಂಟೆಗೆ ಮನೆಗೆ ಹಿಂದಿರುಗಿದ್ದಾಳೆ. ಅವಳು ಸುರಕ್ಷಿತವಾಗಿ ವಾಪಸ್ ಮನೆಗೆ ಬಂದಿದ್ದಾಳೆ. ಆದರೆ ಸ್ವಲ್ಪ ವೀಕ್ ಆಗಿದ್ದಾಳೆ. ಹೀಗಾಗಿ ಇನ್ನೂ ಆಕೆಯ ಹೇಳಿಕೆಯನ್ನು ಪಡೆದುಕೊಂಡಿಲ್ಲ. ನಾಪತ್ತೆಯಾದ ಮಗಳಿಗಾಗಿ ಪೋಷಕರು ಸೋಶಿಯಲ್ ಮೀಡಿಯಾದ ಮೂಲಕ ಸಹಾಯ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಹುಡುಗಿ ವಾಪಸ್ ಮನೆಗೆ ಬಂದ ತಕ್ಷಣ ಪೋಷಕರು ಎಲ್ಲರಿಗೂ ಮಾಹಿತಿ ನೀಡಿದ್ದಾರೆ ಎಂದು ಇನ್ಸ್‌ಪೆಕ್ಟರ್ ಎಸ್.ಸುರೇಂದರ್ ತಿಳಿಸಿದ್ದಾರೆ.

  • ಬೋಟ್‍ನಲ್ಲಿ ಲವ್ ಪ್ರಪೋಸ್, ಯುವಕನಿಗೆ ಒದ್ದ ಪ್ರೇಯಸಿ- ವಿಡಿಯೋ

    ಬೋಟ್‍ನಲ್ಲಿ ಲವ್ ಪ್ರಪೋಸ್, ಯುವಕನಿಗೆ ಒದ್ದ ಪ್ರೇಯಸಿ- ವಿಡಿಯೋ

    – ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

    ನವದೆಹಲಿ: ಹಲವರು ತಮ್ಮ ಪ್ರೇಯಸಿಗೆ ವಿಶೇಷವಾಗಿ ಲವ್ ಪ್ರಪೋಸ್ ಮಾಡಬೇಕೆಂಬ ಕನಸು ಕಂಡಿರುತ್ತಾರೆ. ಹಲವರು ಅದೇ ರೀತಿ ಪ್ರಪೋಸ್ ಮಾಡುತ್ತಾರೆ. ಹೀಗೆ ವಿಶೇಷವಾಗಿ ಪ್ರಪೋಸ್ ಮಾಡಲು ಹೋಗಿ ಇಲ್ಲೊಬ್ಬ ಪ್ರೇಯಸಿಯಿಂದ ಒದಿಸಿಕೊಂಡ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

    ಥಿಯೋ ಶಾಂತೋನಾಸ್ ಎಂಬ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋ ಟ್ವೀಟ್ ಮಾಡಲಾಗಿದ್ದು, ಇನ್ನೊಂದು ಬೋಟ್‍ನಲ್ಲಿ ಕುಳಿತಿದ್ದ ಗೆಳತಿಗೆ ಪ್ರಪೋಸ್ ಮಾಡಲು ವ್ಯಕ್ತಿ ಬೋಟ್ ನಲ್ಲಿ ತೆರಳಿದ್ದು, ತನ್ನದೇ ಸಪೋರ್ಟ್‍ನಿಂದ ಬೋಟ್ ಮೇಲೆ ನಿಂತು. ಗೆಳತಿ ಬಳಿ ತೆರಳಿದ್ದಾನೆ. ಇನ್ನೊಂದು ಬೋಟ್‍ನಲ್ಲಿ ಯುವತಿ ಸಹ ತನ್ನ ಬಾಯ್‍ಫ್ರೆಂಡ್ ಬಳಿಗೆ ಬೋಟ್ ತರಲು ಯತ್ನಿಸಿದ್ದಾಳೆ.

    ಹೀಗೆ ಬೋಟ್ ನಿಧಾನವಾಗಿ ಚಲಿಸುತ್ತಿರುವಾಗ ತನ್ನ ಬಾಯ್ ಫ್ರೆಂಡ್‍ಗೆ ಕಿಸ್ ನೀಡಲು ಯುವತಿ ಪ್ರಯತ್ನಿಸಿದ್ದಾಳೆ. ಈ ವೇಳೆ ಅವಳ ಕಾಲು ಜಾರಿದ್ದು, ಬೋಟ್‍ನಲ್ಲೇ ಬಿದ್ದಿದ್ದಾಳೆ. ಆದರೆ ಯುವತಿ ಕಾಲು ಬಾಯ್‍ಫ್ರೆಂಡ್ ಎದೆಗೆ ತಾಗಿದ್ದು, ತಕ್ಷಣ ಬೋಟ್‍ನ ವೇಗ ಹೆಚ್ಚಳವಾಗಿದೆ. ಆಗ ಯುವತಿ ಗೆಳೆಯ ನೀರಿನಲ್ಲಿ ಬಿದ್ದಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    https://twitter.com/TheoShantonas/status/1310241716096643078

    ಘಟನೆಯಲ್ಲಿ ಜೋಡಿಗೂ ಸಹ ಯಾವುದೇ ರೀತಿಯ ಗಾಯಗಳಾಗಿಲ್ಲ. ಸ್ವಲ್ಪ ಸಮಯದ ಬಳಿಕ ದಡ ಸೇರಿದ್ದಾರೆ. ದಡ ಸೇರುತ್ತಿದ್ದಂತೆ ಅಲ್ಲಿದ್ದವರು ಗಾಯಗಳಾಗಿರುವ ಕುರಿತು ಪ್ರಶ್ನಿಸಿದ್ದು, ಎಲ್ಲ ಸರಿಯಾಗಿದೆ. ಯಾವುದೇ ರೀತಿಯ ಸಮಸ್ಯೆಯಾಗಿಲ್ಲ. ಖುಷಿ ವಿಚಾರವೆಂದರೆ ನನ್ನ ಪ್ರಪೋಸಲ್‍ನ್ನು ಅವಳು ಒಪ್ಪಿಕಂಡಳು, ಎಸ್ ಅಂದಳು ಎಂದು ಯುವಕ ತಿಳಿಸಿದ್ದಾನೆ.

    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದು, ಲಕ್ಷಾಂತರ ವ್ಯೂವ್ಸ್ ಪಡೆದಿದೆ. ನೆಟ್ಟಿಗರು ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ. ಹಲವರು ಕಮೆಂಟ್ ಮಾಡಿ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ.

  • ಹುಡುಗಿಯ ಕೈ ಹಿಡಿದ ಬಿಗ್‍ಬಾಸ್ ವಿನ್ನರ್ – ಶೀಘ್ರದಲ್ಲಿ ಶೈನ್ ಶೆಟ್ಟಿಯಿಂದ ಸರ್ಪ್ರೈಸ್

    ಹುಡುಗಿಯ ಕೈ ಹಿಡಿದ ಬಿಗ್‍ಬಾಸ್ ವಿನ್ನರ್ – ಶೀಘ್ರದಲ್ಲಿ ಶೈನ್ ಶೆಟ್ಟಿಯಿಂದ ಸರ್ಪ್ರೈಸ್

    ಬೆಂಗಳೂರು: ಕಿರುತೆರೆ ನಟ, ಬಿಗ್‍ಬಾಸ್ ವಿನ್ನರ್ ಶೈನ್ ಶೆಟ್ಟಿ ಬಿಗ್‍ಬಾಸ್ ಮನೆಗೆ ಹೋಗಿ ಬಂದ ನಂತರ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಶೈನ್ ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಆಗಾಗ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಶೈನ್ ಶೆಟ್ಟಿ ಶೇರ್ ಮಾಡಿರುವ ವಿಡಿಯೋ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಹೊಸ ರೂಪದಲ್ಲಿ ಫುಡ್ ಟ್ರಕ್ ಆರಂಭಿಸಿದ ಬಿಗ್‍ಬಾಸ್ ವಿನ್ನರ್

    ಹೌದು, ಬಿಗ್‍ಬಾಸ್ ವಿನ್ನರ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಒಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಶೈನ್ ಒಂದು ಕಾಫಿ ಶಾಪ್‍ನಲ್ಲಿ ಕುಳಿತಿದ್ದು, ಟೇಬಲ್ ಮೇಲೆ ಒಂದು ಕಪ್ ಕಾಫಿ ಮತ್ತು ಒಂದು ಪುಸ್ತಕ ಇರುವುದನ್ನು ಕಾಣಬಹುದಾಗಿದೆ. ಜೊತೆಗೆ ಶೈನ್ ಎದುರು ಯಾವುದೋ ಹುಡುಗಿ ಕುಳಿತಿದ್ದಾರೆ. ಆದರೆ ವಿಡಿಯೋದಲ್ಲಿ ಹುಡುಗಿ ಯಾರೆಂಬುದು ಕಾಣಿಸುವುದಿಲ್ಲ.

    ಅಲ್ಲದೇ ಶೈನ್ ತಮ್ಮ ಎದುರು ಕುಳಿತಿರುವ ಹುಡುಗಿಯ ಮುಂದೆ ಕೈ ಚಾಚಿದ್ದಾರೆ. ಆಗ ಆ ಹುಡುಗಿಯ ಶೈನ್ ಶೆಟ್ಟಿಗೆ ತಮ್ಮ ಕೈಯನ್ನು ಕೊಟ್ಟಿದ್ದಾರೆ. ನಂತರ ಶೈನ್ ಹುಡುಗಿಯ ಕೈ ಹಿಡಿದು ಆಕೆಯನ್ನೇ ನೋಡುತ್ತಿರುವುದನ್ನು ಕಾಣಬಹುದು. ರೊಮ್ಯಾಂಟಿಕ್ ವಿಡಿಯೋವನ್ನು ಪೋಸ್ಟ್ ಮಾಡಿ, “ಹಳೆ ಪುಸ್ತಕ, ಹೊಸ ನವಿಲುಗರಿ” ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಇದರ ಬಗ್ಗೆ ಒಂದು ವಿಶೇಷತೆ ಇದೆ. ಇದಕ್ಕಾಗಿ ಕಾಯಿರಿ ಎಂದು ಹೇಳಿದ್ದಾರೆ.

    ಶೈನ್ ವಿಡಿಯೋ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಆ ಹುಡುಗಿ ಶೈನ್ ಶೆಟ್ಟಿ ಮದುವೆಯಾಗುತ್ತಿರುವ ಯುವತಿ ಇರಬೇಕು ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಶೈನ್ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದು, ತಮಗೆ ಪರಿಚಯ ಇರುವ ಹುಡುಗಿಯನ್ನೇ ವಿವಾಹವಾಗುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಶೈನ್ ಅಧಿಕೃತವಾಗಿ ತಮ್ಮ ಮದುವೆ ಮತ್ತು ಆ ಹುಡುಗಿಯ ಬಗ್ಗೆ ರಿವೀಲ್ ಮಾಡಿಲ್ಲ.

    ಅಭಿಮಾನಿಗಳು ಶೈನ್ ಶೆಟ್ಟಿ ಯಾವಾಗ ಹುಡುಗಿಯನ್ನು ಪರಿಚಯಿಸುತ್ತಾರೆ, ಆ ಹುಡುಗಿ ಯಾರು ಎಂದು ಕಾತುರದಿಂದ ಕಾಯುತ್ತಿದ್ದಾರೆ. ಕೆಲವರು ದೀಪಿಕಾ ದಾಸ್ ಎಂತಲೂ ಕಮೆಂಟ್ ಮಾಡಿದ್ದಾರೆ. ಯಾಕೆಂದರೆ ಬಿಗ್‍ಬಾಸ್ ಮನೆಯಲ್ಲಿದ್ದಾಗ ಶೈನ್ ಶೆಟ್ಟಿ ಮತ್ತು ದೀಪಿಕಾ ದಾಸ್ ಇಬ್ಬರ ಮಧ್ಯೆ ಪ್ರೇಮವಿದೆ ಎಂಬ ಚರ್ಚೆ ಆಗಿತ್ತು.

    ಇತ್ತೀಚೆಗಷ್ಟೆ ಶೈನ್ ಶೆಟ್ಟಿ ತಮ್ಮ ಫುಡ್ ಟ್ರಕ್‍ಗೆ ಹೊಸ ರೂಪ ನೀಡಿ ಮತ್ತೆ ಪ್ರಾರಂಭಿಸಿದ್ದಾರೆ. ಶೈನ್ ಶೆಟ್ಟಿ ಸಿನಿಮಾದಲ್ಲಿ ನಟಿಸಬೇಕು ಎಂಬ ಕನಸು ಕಂಡಿದ್ದರು. ಆದರೆ ಅವಕಾಶಗಳು ಸಿಗದಿದ್ದಾಗ ಟ್ರಕ್ ಫುಡ್ ಮೂಲಕ ಶೈನ್ ಜೀವನ ಸಾಗಿಸುತ್ತಿದ್ದರು. ನಂತರ ರಿಯಾಲಿಟಿ ಶೋ ಬಿಗ್‍ಬಾಸ್‍ಗೆ ಹೋಗಲು ಆಫರ್ ಬಂದಿತ್ತು. ಶೈನ್ ಬಿಗ್‍ಬಾಸ್ ಮನೆಗೆ ಹೋಗಿದ್ದಾಗ ಅವರ ತಾಯಿ ಈ ಫುಡ್ ಟ್ರಕ್ ನಿಭಾಯಿಸಿಕೊಂಡು ಹೋಗುತ್ತಿದ್ದರು.

    https://www.instagram.com/p/CFaR2oEjdZV/?utm_source=ig_web_copy_link

    ಮತ್ತೆ ಕೊರೊನಾ ಲಾಕ್‍ಡೌನ್‍ನಿಂದ ಗಲ್ಲಿ ಕಿಚನ್ ಅನ್ನು ಕ್ಲೋಸ್ ಮಾಡಲಾಗಿತ್ತು. ಲಾಕ್‍ಡೌನ್ ಸಡಿಲಿಕೆ ಆದ ಮೇಲೂ ಜನರ ಆರೋಗ್ಯ ದೃಷ್ಟಿಯಿಂದ ಇನ್ನೂ ಕೆಲವು ದಿನ ಫುಡ್ ಟ್ರಕ್ ಓಪನ್ ಮಾಡುವುದಿಲ್ಲ ಎಂದು ಶೈನ್ ಶೆಟ್ಟಿ ತಿಳಿಸಿದ್ದರು. ಇದೀಗ ಮತ್ತೆ ‘ಗಲ್ಲಿ ಕಿಚನ್’ ಫುಡ್ ಟ್ರಕ್ ಆರಂಭಿಸಿದ್ದಾರೆ. ಸದ್ಯಕ್ಕೆ ಶೈನ್ ಶೆಟ್ಟಿ ನಿರ್ದೇಶಕ ರಿಷಬ್ ಶೆಟ್ಟಿ ಅವರ ಬಹುನಿರೀಕ್ಷೆಯ ‘ರುದ್ರ ಪ್ರಯಾಗ’ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.