Tag: ಹುಡುಗಿ

  • ಆ್ಯಸಿಡ್ ದಾಳಿಯಲ್ಲಿ ಬದುಕುಳಿದ 17ರ ಹುಡುಗಿ ದೆಹಲಿಗೆ ಏರ್‌ಲಿಫ್ಟ್‌

    ಆ್ಯಸಿಡ್ ದಾಳಿಯಲ್ಲಿ ಬದುಕುಳಿದ 17ರ ಹುಡುಗಿ ದೆಹಲಿಗೆ ಏರ್‌ಲಿಫ್ಟ್‌

    ನವದೆಹಲಿ: ಆ್ಯಸಿಡ್ ದಾಳಿಗೆ ಒಳಗಾಗಿ ಬದುಕುಳಿದ 17 ವರ್ಷದ ಹುಡುಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಾರ್ಖಂಡ್‌ನಿಂದ ದೆಹಲಿಗೆ ಏರ್‌ಲಿಫ್ಟ್‌ ಮಾಡಲಾಗಿದೆ.

    ಈ ಕುರಿತು ಜಾರ್ಖಂಡ್‌ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ವೈದ್ಯಕೀಯ ಮಂಡಳಿಯು ಬಾಲಕಿಯನ್ನು ದೆಹಲಿಯ ಏಮ್ಸ್‌ಗೆ ಶಿಫಾರಸು ಮಾಡಿದೆ. ಇದನ್ನೂ ಓದಿ: ಬಲವಂತದ ಮತಾಂತರ ಆರೋಪ – ಪಾದ್ರಿಯ ಕಾರಿಗೆ ಬೆಂಕಿ, ಚರ್ಚ್ ಧ್ವಂಸ

    ರಿಮ್ಸ್ ಸೂಪರಿಂಟೆಂಡೆಂಟ್ ನೇತೃತ್ವದಲ್ಲಿ ರಚನೆಯಾದ ವೈದ್ಯಕೀಯ ಮಂಡಳಿ ನೀಡಿದ ವರದಿಯ ಆಧಾರದ ಮೇಲೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಬುಧವಾರ ಬಾಲಕಿಯನ್ನು ಏರ್‌ಲಿಫ್ಟ್ ಮಾಡುವ ನಿರ್ಧಾರ ಕೈಗೊಂಡರು ಎಂದು ಮುಖ್ಯಮಂತ್ರಿಗಳ ಸಚಿವಾಲಯದ ಪ್ರಕಟಣೆ ತಿಳಿಸಿದೆ.

    ಆ್ಯಸಿಡ್ ಸಂತ್ರಸ್ತೆ ಮತ್ತು ಆಕೆಯ ಕುಟುಂಬಕ್ಕೆ ಎಲ್ಲಾ ಸಹಕಾರ ನೀಡುವಂತೆ ಸೋರೆನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಅಗತ್ಯ ವ್ಯವಸ್ಥೆಗಳೊಂದಿಗೆ ಸಂತ್ರಸ್ತೆಗೆ ಉತ್ತಮ ಚಿಕಿತ್ಸೆ ಕೊಡಿಸಲು ರಾಂಚಿ ಡಿಸಿ ಅವರು ದೆಹಲಿಗೆ ಸ್ಥಳಾಂತರಿಸುವ ಕ್ರಮ ಕೈಗೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದ್ದಕ್ಕೆ ಶಿಕ್ಷಕನನ್ನೇ ಮರಕ್ಕೆ ಕಟ್ಟಿ ಥಳಿಸಿದ ವಿದ್ಯಾರ್ಥಿಗಳು!

    ಜಾರ್ಖಂಡ್‌ನ ಚತ್ರಾ ಜಿಲ್ಲೆಯ 17ರ ಹುಡುಗಿ ಆಗಸ್ಟ್ 5 ರಂದು ಆ್ಯಸಿಡ್ ದಾಳಿಗೆ ಒಳಗಾಗಿದ್ದಳು. ಅದೇ ದಿನ ಆರೋಪಿಯನ್ನು ಬಂಧಿಸಲಾಗಿದ್ದು, ಕಾನೂನು ಪ್ರಕ್ರಿಯೆ ನಡೆಯುತ್ತಿದೆ ಎಂದು ಛತ್ರದ ಉಪ ಆಯುಕ್ತ ಅಬು ಇಮ್ರಾನ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ಲೀಸ್ ಬ್ರೇಕಪ್ ಮಾಡಬೇಡ, ನನ್ನನ್ನು ಬಿಡಬೇಡ – ನಡು ರಸ್ತೆಯಲ್ಲಿ ಗೆಳೆಯನ ಗೋಳಾಟ

    ಪ್ಲೀಸ್ ಬ್ರೇಕಪ್ ಮಾಡಬೇಡ, ನನ್ನನ್ನು ಬಿಡಬೇಡ – ನಡು ರಸ್ತೆಯಲ್ಲಿ ಗೆಳೆಯನ ಗೋಳಾಟ

    ಪ್ರತಿಯೊಬ್ಬರ ಜೀವನದಲ್ಲಿಯೂ ಮೊದಲ ಪ್ರೀತಿ ಅದ್ಭುತವಾಗಿರುತ್ತದೆ. ಅದೇ ರೀತಿ ಲವ್ ಬ್ರೇಕ್ ಅಪ್ ಕೂಡ ಜೀವನದ ಪಾಠವನ್ನು ಕಲಿಸುತ್ತದೆ. ಫಸ್ಟ್ ಲವ್ ಬ್ರೇಕ್ ಅಪ್ ಅಲ್ಲಿ ಅದೆಷ್ಟೋ ಭಾವನೆಗಳಿರುತ್ತದೆ. ಅನೇಕ ಮಂದಿ ತಮ್ಮ ಶಾಲೆಯ ದಿನಗಳಲ್ಲಿಯೇ ಲವ್ ಬ್ರೇಕ್ ಅಪ್ ಅನುಭವವನ್ನು ಅನುಭವಿಸಿರುತ್ತಾರೆ. ಅದೇ ರೀತಿ ಹುಡುಗನೊಬ್ಬ ತನ್ನ ಪ್ರೀತಿಯನ್ನು ಮರಳಿ ಪಡೆಯಲು ಹುಡುಗಿಯ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಿರುವ ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

     

    View this post on Instagram

     

    A post shared by FunTaap Official ???? (@funtaap)

    ಈ ವೀಡಿಯೋವನ್ನು ಫಂಟಾಪ್ ಎಂಬ ಹೆಸರಿನ ಇನ್‍ಸ್ಟಾಗ್ರಾಮ್ ಪೇಜ್‍ನಲ್ಲಿ ಹಂಚಿಕೊಳ್ಳಲಾಗಿದ್ದು, ವೀಡಿಯೋದಲ್ಲಿ ಹುಡುಗನೊಬ್ಬ ಲವ್ ಬ್ರೇಕ್ ಅಪ್ ಮಾಡಿಕೊಂಡಿದ್ದ ಶಾಲಾ ಬಾಲಕಿಯ ಫುಟ್‍ಪಾತ್ ಮೇಲೆ ನಿಂತಿದ್ದಾಗ, ಆಕೆಯ ಹಿಡಿದುಕೊಂಡು ತನ್ನನ್ನು ಬಿಟ್ಟು ಹೋಗಬೇಡ, ನನ್ನನ್ನು ಕರೆದುಕೊಂಡು ಹೋಗು ಎಂದು ಬೇಡಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಮಾಂಸಾಹಾರಿಗಳ ಓಟು ನಮಗೆ ಬೇಡ ಅಂತ ಬಿಜೆಪಿ ಹೇಳಲಿ – ದಿನೇಶ್ ಗುಂಡೂರಾವ್ ಸವಾಲ್

    ಹುಡುಗಿಯ ಪಾದ ಹಿಡಿದು ಆಕೆಯ ಮನವೊಲಿಸಲು ಹುಡುಗ ಎಷ್ಟೇ ಪ್ರಯತ್ನಿಸುತ್ತಿದ್ದರೂ, ಆಕೆ ಮಾತ್ರ ಇಲ್ಲ ಎಂದು ತಲೆಯಾಡಿಸುತ್ತಿರುತ್ತಾಳೆ. ಸದ್ಯ ವೈರಲ್ ಆಗುತ್ತಿರುವ ಈ ವೀಡಿಯೋವನ್ನು ಇಲ್ಲಿಯವರೆಗೂ ಸುಮಾರು 73 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, 4,600ಕ್ಕೂ ಹೆಚ್ಚು ಲೈಕ್ಸ್ ಹರಿದುಬಂದಿದೆ. ಅಲ್ಲದೇ ಅನೇಕ ನೆಟ್ಟಿಗರು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಭಯೋತ್ಪಾದಕ ಚಟುವಟಿಕೆ ಆತಂಕ – ಹೊರಗಿನಿಂದ ಬರುವ ಮಸೀದಿ, ಮದರಸಾ ಧರ್ಮಗುರುಗಳಿಗೆ ಅಸ್ಸಾಂನಲ್ಲಿ ಹೊಸ ನಿಯಮ

    Live Tv
    [brid partner=56869869 player=32851 video=960834 autoplay=true]

  • 17ರ ಹುಡುಗಿಯನ್ನು ಕಿಡ್ನ್ಯಾಪ್ ಮಾಡಿ ಚಾಲಕ ಸೇರಿ ನಾಲ್ವರಿಂದ ಅತ್ಯಾಚಾರ

    ಪಣಜಿ: ಅಪ್ರಾಪ್ತ ಹುಡುಗಿಯನ್ನು ಅಪಹರಿಸಿ ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ ಘಟನೆ ಗೋವಾದ ವಾಸ್ಕೋ ಟೌನ್‍ನಲ್ಲಿ ನಡೆದಿದೆ.

    ಘಟನೆಗೆ ಸಂಬಂಧಿಸಿ 17 ವರ್ಷದ ಹುಡುಗಿಯ ಮನೆಯ ಚಾಲಕ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಆ.11ರಂದು ಹುಡುಗಿಯು ಮನೆಯಿಂದ ನಾಪತ್ತೆ ಆಗಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯ ತಾಯಿಯು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಾಸ್ಕೋ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಕೆಯನ್ನು ಪತ್ತೆ ಹಚ್ಚಿ ರಕ್ಷಿಸಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಹುಡುಗಿಯು ಹೇಳಿಕೆಯನ್ನು ನೀಡಿದ್ದು, ನಾಲ್ವರು ಆರೋಪಿಗಳು ಬೇರೆ ಬೇರೆ ಸಂದರ್ಭದಲ್ಲಿ ಅತ್ಯಾಚಾರ ಎಸಗಿದ್ದಾರೆ. ಘಟನೆಯಲ್ಲಿ ಆಕೆಯ ಮನೆಯಲ್ಲಿ ಚಾಲಕನಾಗಿ ಕೆಲಸಕ್ಕೆ ಇರುವವನೂ ಶಾಮೀಲಾಗಿದ್ದಾನೆ ಎಂದು ತಿಳಿಸಿದ್ದಾಳೆ. ಇದನ್ನೂ ಓದಿ: ರೀಲ್ಸ್ ಮಾಡಲು ಮಹಿಳೆಯ ಕತ್ತು ಸೀಳಿ ಮೊಬೈಲ್ ಕದ್ದ ಅಪ್ರಾಪ್ತ

    ಘಟನೆಗೆ ಸಂಬಂಧಿಸಿದಂತೆ ವಾಸ್ಕೋ ಪೊಲೀಸರು ನಾಲ್ವರು ಆರೋಪಿಗಳಾದ ಮುಕುಂದ್ ರಾವಲ್ (35), ಗುರುವೆಂಕಟೇಶ್ ಗುರುಸ್ವಾಮಿ (30), ಕುಶ್ ಜೈಸ್ವಾಲ್ (30) ಮತ್ತು ಅಫ್ತಾರ್ ಹುಸೇನ್ (23) ಅವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ರೋಹಿಂಗ್ಯಾ ಮುಸ್ಲಿಮರಿಗೆ ಫ್ಲ್ಯಾಟ್‌ : ಯೂಟರ್ನ್‌ ಹೊಡೆದ ಕೇಂದ್ರ

    Live Tv
    [brid partner=56869869 player=32851 video=960834 autoplay=true]

  • ಪ್ರೀತಿಯ ಸುಳಿಗೆ ಸಿಕ್ಕಿಬಿದ್ದ ಬಾಲೆ – ಮದುವೆಯಾಗಲು ಪ್ರಿಯಕರ ಒಪ್ಪದ್ದಕ್ಕೆ ಆತ್ಮಹತ್ಯೆ

    ಪ್ರೀತಿಯ ಸುಳಿಗೆ ಸಿಕ್ಕಿಬಿದ್ದ ಬಾಲೆ – ಮದುವೆಯಾಗಲು ಪ್ರಿಯಕರ ಒಪ್ಪದ್ದಕ್ಕೆ ಆತ್ಮಹತ್ಯೆ

    ಚಂಡೀಗಢ: ಮದುವೆಯಾಗಲು ನಿರಾಕರಿಸಿದ್ದಕ್ಕೆ 17 ವರ್ಷದ ಹುಡುಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹರಿಯಾಣದ ಅಂಬಾಲಾ ಕ್ಯಾಂಟ್‍ನಲ್ಲಿ ನಡೆದಿದೆ.

    ಆರೋಪಿಯು ಪಂಜೋಖ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಗರ್ನಾಲಾ ಗ್ರಾಮದ ನಿವಾಸಿಯಾಗಿದ್ದು, ಮೃತ ಹುಡುಗಿಯ ತಂದೆ ನೀಡಿದ ದೂರಿನ ಮೇರೆಗೆ 21 ವರ್ಷದ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ದೇವೇಗೌಡರು, ಅವರ ಕುಟುಂಬ ಬಿಟ್ಟು ರಾಜಕಾರಣ ಮಾಡಲು ಆಗಲ್ಲ: ಸೂರಜ್‍ರೇವಣ್ಣ

    crime

    ಟೀ ವ್ಯಾಪಾರಿಯಾಗಿರುವ ಹುಡುಗಿಯ ತಂದೆ, ಯುವಕ ಮತ್ತು ಅವರ ಮಗಳು ಪ್ರೀತಿಸುತ್ತಿರುವ ವಿಚಾರ ಇತ್ತೀಚೆಗಷ್ಟೇ ತಿಳಿದುಬಂದಿದೆ. ತಮ್ಮ ಮಗಳು ತನ್ನ ಸಹೋದರನ ಬಳಿ ಯುವಕ ಮದುವೆಯಾಗುವುದಾಗಿ ಭರವಸೆ ನೀಡಿದ್ದಾನೆ ಎಂದು ಹೇಳಿಕೊಂಡಿದ್ದಳು. ಆದರೆ ನಂತರದ ದಿನಗಳಲ್ಲಿ ಯುವಕ ಮದುವೆಯಾಗಲು ನಿರಾಕರಿಸಿದ್ದಾನೆ. ಇದನ್ನೂ ಓದಿ: ಯುವತಿ ಮೇಲೆ ಗೆಳತಿಯ ಸಹೋದರನಿಂದ್ಲೆ ಅತ್ಯಾಚಾರ- ಮದ್ವೆ ಕ್ಯಾನ್ಸಲ್ ಭಯದಿಂದ ಆತ್ಮಹತ್ಯೆಗೆ ಯತ್ನ

    ಈ ವಿಚಾರವನ್ನು ನನ್ನ ಮಗಳು ಸಹೋದರನೊಂದಿಗೆ ಹಂಚಿಕೊಂಡಿದ್ದಳು. ಇದರಿಂದ ಅಸಮಾಧಾನಗೊಂಡಿದ್ದ ಆಕೆಯನ್ನು ಸಮಾಧಾನ ಮಾಡಲು ಸಹೋದರ ಪ್ರಯತ್ನಿಸುತ್ತಿದ್ದನು. ಆದರೆ ಆಗಸ್ಟ್ 8ರಂದು ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾಳೆ. ನಂತರ ಪ್ರಜ್ಞಾಹೀನಳಾಗಿದ್ದ ಆಕೆಯನ್ನು ಸಮೀಪದ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ವೈದ್ಯರು ಚಿಕಿತ್ಸೆ ನೀಡಿ ಮರುದಿನವೇ ಡಿಸ್ಚಾರ್ಜ್ ಮಾಡಿದ್ದರು. ಮನೆಯಲ್ಲಿಯೇ ಸಂಪೂರ್ಣ ಚೇತರಿಸಿಕೊಳ್ಳಲು ಕೆಲವು ಔಷಧಗಳನ್ನು ನೀಡಿದ್ದರು. ಆದರೆ ಶುಕ್ರವಾರ ಆಕೆಯ ಆರೋಗ್ಯ ಸ್ಥಿತಿ ಹದಗೆಟ್ಟಿತು. ಹೀಗಾಗಿ ಅವಳನ್ನು ಮತ್ತೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ಮೃತಪಟ್ಟಿರುವುದಾಗಿ ವೈದ್ಯರು ಹೇಳಿರುವುದಾಗಿ ತಿಳಿಸಿದ್ದಾರೆ.

    ಹುಡುಗಿಯ ತಂದೆ ನೀಡಿದ ದೂರಿನ ಮೇರೆಗೆ ಶುಕ್ರವಾರ ಭಾರತೀಯ ದಂಡ ಸಂಹಿತೆ ಸೆಕ್ಷನ್ 306ರ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿರುವುದಾಗಿ ಪರಾವ್ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಸೂರಜ್ ಕುಮಾರ್ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಲವ್ ಪ್ರೂವ್ ಮಾಡಲು ಹೆಚ್‍ಐವಿ ಸೋಂಕಿತ ಬಾಯ್‍ಫ್ರೆಂಡ್ ರಕ್ತ ಇಂಜೆಕ್ಟ್ ಮಾಡ್ಕೊಂಡ ಅಪ್ರಾಪ್ತೆ!

    ಲವ್ ಪ್ರೂವ್ ಮಾಡಲು ಹೆಚ್‍ಐವಿ ಸೋಂಕಿತ ಬಾಯ್‍ಫ್ರೆಂಡ್ ರಕ್ತ ಇಂಜೆಕ್ಟ್ ಮಾಡ್ಕೊಂಡ ಅಪ್ರಾಪ್ತೆ!

    ಡಿಸ್ಪೂರ್: ಪ್ರೀತಿ ಕುರುಡು ಮತ್ತು ಪ್ರೀತಿಯಲ್ಲಿ ಯಾವುದೇ ಭೇದ-ಭಾವವಿರುವುದಿಲ್ಲ ಎಂದು ಹೇಳಲಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಅಸ್ಸಾಂ ಹುಡುಗಿಯೊಬ್ಬಳು ತನ್ನ ಪ್ರೀತಿಯನ್ನು ಸಾಬೀತು ಮಾಡಲು ದೊಡ್ಡ ಸಾಹಸವನ್ನೇ ಮಾಡಿದ್ದಾಳೆ. ತನ್ನ ಪ್ರಿಯಕರ ಹೆಚ್‍ಐವಿ ಸೋಂಕಿತ ಎಂದು ತಿಳಿದಿದ್ದರೂ, ಆತನ ರಕ್ತವನ್ನು ಇಂಜೆಕ್ಟ್ ಮಾಡಿಕೊಳ್ಳುವ ಮೂಲಕ ತನಗೂ ಹೆಚ್‍ಐವಿ ಬರುವಂತೆ ಮಾಡಿಕೊಂಡಿದ್ದಾಳೆ.

    ಹಜೋದಲ್ಲಿನ ಸತ್ಡೋಲಾದಲ್ಲಿರುವ ಎಚ್‍ಐವಿ ಪೀಡಿತ ಯುವಕ ಫೇಸ್‍ಬುಕ್‍ನಲ್ಲಿ ಪರಿಚಯವಾದ 15 ವರ್ಷದ ಹುಡುಗಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ದಿನೇ, ದಿನೇ ಅವರ ಪ್ರೀತಿ ಬಲವಾಗಿ, ಗಾಢವಾಯಿತು. ಇಬ್ಬರು ಒಬ್ಬರನ್ನೊಬ್ಬರು ಬಹಳ ಪ್ರೀತಿಸುತ್ತಿದ್ದರು. ಎಂದಿಗೂ ಒಬ್ಬರಿಗೊಬ್ಬರು ಬಿಟ್ಟು ಇರಲು ಸಾಧ್ಯವಾಗುತ್ತಿರಲಿಲ್ಲ. ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿರುವ ಹುಡುಗಿ ಈ ಹಿಂದೆ ಪ್ರಿಯಕರನೊಂದಿಗೆ ಸಾಕಷ್ಟು ಪರಾರಿಯಾಗಲು ಪ್ರಯತ್ನಿಸಿದ್ದಳು. ಆದರೆ ಪ್ರತಿ ಸಲ ಅವಳ ಮನೆಯವರು ಆಕೆಯನ್ನು ತಡೆದು ಮನೆಗೆ ವಾಪಸ್ ಕರೆದುಕೊಂಡು ಬರುತ್ತಿದ್ದರು.

    ಆದರೆ, ಈ ಬಾರಿ ಯಾರೂ ಊಹಿಸಲು ಸಾಧ್ಯವಾಗದಂತಹ ದೊಡ್ಡ ಸಾಹಸವನ್ನು ಮಾಡಿದ್ದಾಳೆ. ಎಚ್‍ಐವಿ ಪೀಡಿತ ತನ್ನ ಪ್ರೇಮಿಯಿಂದ ತೆಗೆದ ರಕ್ತವನ್ನು ಸಿರಿಂಜ್ ಬಳಸಿ ಹುಡುಗಿ ತನ್ನ ದೇಹಕ್ಕೆ ಇಂಜೆಕ್ಟ್ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ತವರು ಮನೆಯಿಂದ 12 ವರ್ಷ ದೂರವಾಗಿದ್ದಕ್ಕೆ ದಂತವೈದ್ಯೆ ಆತ್ಮಹತ್ಯೆ?

    ಸದ್ಯ ವೈದ್ಯರು ಹುಡುಗಿಗೆ ಚಿಕಿತ್ಸೆ ನೀಡುತ್ತಿದ್ದು, ಹಜೋ ಪೊಲೀಸರು ಪ್ರಿಯಕರನನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ಹುಡುಗಿಯ ಕುಟುಂಬಸ್ಥರು ಆಕೆಯ ಪ್ರೇಮಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲೊಂದು ‘ರುದ್ರಪ್ರಯಾಗ’ದ ಥ್ರಿಲ್ಲರ್ ಸ್ಟೋರಿ – ಚಿರತೆ ಸೆರೆಗೆ 7 ಬೋನ್, 16 ಕ್ಯಾಮೆರಾ

    Live Tv
    [brid partner=56869869 player=32851 video=960834 autoplay=true]

  • ರೈಲ್ವೆ ಸ್ಟೇಷನ್ ಬಳಿ ವ್ಯಾಪಾರಿಗಳಿಂದ 17ರ ಹುಡುಗಿ ಮೇಲೆ ಅತ್ಯಾಚಾರ

    ರೈಲ್ವೆ ಸ್ಟೇಷನ್ ಬಳಿ ವ್ಯಾಪಾರಿಗಳಿಂದ 17ರ ಹುಡುಗಿ ಮೇಲೆ ಅತ್ಯಾಚಾರ

    ನವದೆಹಲಿ: 17 ವರ್ಷದ ಹುಡುಗಿಯ ಮೇಲೆ ಇಬ್ಬರು ವ್ಯಾಪಾರಿಗಳು ಅತ್ಯಾಚಾರ ಎಸಗಿದ ಘಟನೆ ರಾಷ್ಟ್ರ ರಾಜಧಾನಿಯ ತಿಲಕ್ ಸೇತುವೆ ಬಳಿ ನಡೆದಿದೆ.

    ತಿಲಕ್ ಸೇತುವೆ ಬಳಿ ರೈಲ್ವೆ ಹಳಿಗಳ ಬಳಿ ಈ ಘಟನೆ ನಡೆದಿದೆ. ಹುಡುಗಿಯು ಗುಜರಾತ್ ಮೂಲದವರಾಗಿದ್ದು, ಸ್ನೇಹಿತನ ಜೊತೆ ರೈಲ್ವೆ ಸ್ಟೇಷನ್‍ಗೆ ಬಂದಿದ್ದಳು. ಆದರೆ ಹುಡುಗಿಗೂ ಸ್ನೇಹಿತನಿಗೂ ಜಗಳವಾಗಿದೆ. ಇದಾದ ನಂತರ ಸ್ನೇಹಿತನು ಅವಳನ್ನು ಅಲ್ಲೇ ಬಿಟ್ಟು ಹೋಗಿದ್ದನು. ಆ ಸಂದರ್ಭದಲ್ಲಿ ವ್ಯಾಪಾರಿಗಳು 17 ವರ್ಷದ ಹುಡುಗಿಯನ್ನು ರೈಲಿಗೆ ಹತ್ತಿಸುವ ನೆಪದಲ್ಲಿ ಆಕೆಯನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ.

    ಹುಡುಗಿಯು ವ್ಯಾಪಾರಿಗಳ ಬಳಿ ತನ್ನ ಮನೆಗೆ ಕರೆ ಮಾಡಲು ಮೊಬೈಲ್‍ನ್ನು ನೀಡುವಂತೆ ಕೇಳಿದ್ದಾಳೆ. ಇದಾದ ಬಳಿಕ ರೈಲನ್ನು ಹತ್ತಲು ಸಹಾಯ ಮಾಡುವಂತೆ ಯುವತಿ ವ್ಯಾಪಾರಿಗಳನ್ನು ಕೇಳಿದ್ದಾರೆ. ಆ ಸಂದರ್ಭದಲ್ಲಿ ವ್ಯಾಪಾರಿಗಳು ಈ ನಿಲ್ದಾಣದಲ್ಲಿ ರೈಲಿಲ್ಲ. ಬದಲಿಗೆ ಬೇರೆ ನಿಲ್ದಾಣದಲ್ಲಿ ರೈಲು ಲಭ್ಯವಿರುತ್ತೆ ಎಂದು ಹೇಳಿ ಬೇರೆ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಮಹಿಳೆಯರ ಮುಂದೆ ನಗ್ನತೆ ಪ್ರದರ್ಶನ – ವ್ಯಕ್ತಿಯ ಖಾಸಗಿ ಅಂಗಕ್ಕೆ ಬೆಂಕಿ ಹಚ್ಚಿದ ಜನ

    ನಂತರ ಅಲ್ಲಿ ಇಬ್ಬರು ವ್ಯಾಪಾರಿಗಳು ಸೇರಿ ಹುಡುಗಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಘಟನೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: 16 ವರ್ಷದ ಮಗನ ಮುಂದೆಯೇ ತಂದೆಯನ್ನು ಹತ್ಯೆ ಮಾಡಿದ ದುಷ್ಕರ್ಮಿ

    Live Tv
    [brid partner=56869869 player=32851 video=960834 autoplay=true]

  • 17ರ ಹುಡುಗಿ ಮೇಲೆ ಅತ್ಯಾಚಾರವೆಸಗಿದ ಪೊಲೀಸ್ ಅರೆಸ್ಟ್

    17ರ ಹುಡುಗಿ ಮೇಲೆ ಅತ್ಯಾಚಾರವೆಸಗಿದ ಪೊಲೀಸ್ ಅರೆಸ್ಟ್

    ಮುಂಬೈ: ಹೋಟೆಲ್‍ವೊಂದರಲ್ಲಿ 17 ವರ್ಷದ ಹುಡುಗಿ ಮೇಲೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿ ಪೊಲೀಸ್ ಹಾಗೂ ಹುಡುಗಿ ಇಬ್ಬರು ಒಂದೇ ಗ್ರಾಮದವರಾಗಿದ್ದು, ಪರಸ್ಪರ ಪರಿಚಯ ಹೊಂದಿದ್ದರು. ನಾಗ್ಪುರದಲ್ಲಿ ಪೇಯಿಂಗ್ ಗೆಸ್ಟ್ ಆಗಿ ಹುಡುಗಿ ವಾಸಿಸುತ್ತಿದ್ದಳು. ಜುಲೈ 13 ರಂದು ಈ ಘಟನೆ ನಡೆದಿದ್ದು, ಆರೋಪಿ ಹುಡುಗಿಯನ್ನು ನಗರದ ಹೊರಗೆ ಕಾರ್ ರೈಡಿಂಗ್‍ಗೆ ಕರೆದೊಯ್ದಿದ್ದನು. ಈ ವೇಳೆ ಆಕೆಗೆ ಮದ್ಯವನ್ನು ಕುಡಿಸಿ ನಂತರ ಹೋಟೆಲ್ ರೂಂ ಬುಕ್ ಮಾಡಿ ಹುಡುಗಿ ಮೇಲೆ ಅತ್ಯಾಚಾರವೆಸಗಿ ಜೀವ ಬೆದರಿಕೆಯೊಡ್ಡಿದ್ದಾನೆ.

    ಡಿಐಜಿ ಆಂಟಿ-ನಕ್ಸಲ್ ಕಾರ್ಯಾಚರಣೆಯ ಕಚೇರಿಗೆ ಪೊಲೀಸ್ ಅನ್ನು ಲಗತ್ತಿಸಲಾಗಿತ್ತು. ಆದರೆ ನಾಗ್ಪುರದ ಸೀತಾಬುಲ್ಡಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಇದೀಗ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಹೆದ್ದಾರಿಯಲ್ಲಿ ಮಹಿಳೆಯ ಟ್ರಕ್ ಸವಾರಿ – ಲೇಡಿ ಡ್ರೈವರ್‌ಗೆ ಸಲಾಂ ಅಂದ ನೆಟ್ಟಿಗರು

    ಘಟನೆ ಕುರಿತಂತೆ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಐಪಿಸಿಯ ಸೆಕ್ಷನ್ 363 (ಅಪಹರಣ), 376 (ಅತ್ಯಾಚಾರ) ಮತ್ತು ಇತರ ಸಂಬಂಧಿತ ನಿಬಂಧನೆಗಳು ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: 7,500 ಭಾರತೀಯ ಸೈನಿಕರಿಗೆ ಆಭರಣ ಸಂಸ್ಥೆಯಿಂದ ಉಂಗುರ ಗಿಫ್ಟ್

    Live Tv
    [brid partner=56869869 player=32851 video=960834 autoplay=true]

  • 44 ಕಿಮೀ ಸುತ್ತಾಡಿ ಕಾರಿನಲ್ಲಿಯೇ ಹುಡುಗಿ ಮೇಲೆ ಸಾಮೂಹಿಕ ಅತ್ಯಾಚಾರ – ಮೂವರು ಅರೆಸ್ಟ್

    44 ಕಿಮೀ ಸುತ್ತಾಡಿ ಕಾರಿನಲ್ಲಿಯೇ ಹುಡುಗಿ ಮೇಲೆ ಸಾಮೂಹಿಕ ಅತ್ಯಾಚಾರ – ಮೂವರು ಅರೆಸ್ಟ್

    ನವದೆಹಲಿ: 16 ವರ್ಷದ ಹುಡುಗಿಯನ್ನು ಆಕೆಯ ಮನೆಯ ಸಮೀಪದಲ್ಲಿ ಅಪಹರಿಸಿ ಚಲಿಸುತ್ತಿದ್ದ ಕಾರಿನೊಳಗೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

    ದೆಹಲಿಯ ವಸಂತ ವಿಹಾರ್‌ನಿಂದ 16 ವರ್ಷದ ಹುಡುಗಿಯನ್ನು ಆರೋಪಿಗಳು ಅಪಹರಿಸಿದ್ದಾರೆ. ಸುಮಾರು 44 ಕಿಲೋಮೀಟರ್‍ಗಳವರೆಗೆ ಕಾರನ್ನು ಚಲಾಯಿಸುತ್ತಲ್ಲೆ ಹುಡುಗಿಯನ್ನು ಕಿರಾತಕರು ಅತ್ಯಾಚಾರ ಮಾಡಿದ್ದಾರೆ. ಕಾರು ಓಡಿಸಿಕೊಂಡೆ ಅತ್ಯಾಚಾರವೆಸಗಿದರಿಂದ ಯಾರಿಗೂ ತಿಳಿದುಬಂದಿಲ್ಲ. ಘಟನೆ ನಂತರ ಸಂತ್ರಸ್ತೆ ಕುಟುಂಬಸ್ಥರಿಗೆ ತಿಳಿಸಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾಳೆ. ಇದನ್ನೂ ಓದಿ: ಸರ್ಕಾರಿ ಶಾಲಾ-ಕಾಲೇಜುಗಳ ಆಸ್ತಿ ರಕ್ಷಣೆಗೆ ಶಿಕ್ಷಣ ಇಲಾಖೆಯಿಂದ ವಿಶೇಷ ಅಭಿಯಾನ

    ಆಸ್ಪತ್ರೆಯಿಂದ ಪೊಲೀಸರಿಗೆ ಘಟನೆ ಬಗ್ಗೆ ಮಾಹಿತಿ ತಿಳಿದುಬಂದಿದೆ. ನಂತರ ಸಂತ್ರಸ್ತೆಯನ್ನು ವಿಚಾರಣೆ ಮಾಡಿದ ಪೊಲೀಸರು ಆರೋಪಿಗಳನ್ನು ಕಂಡುಹಿಡಿದಿದ್ದಾರೆ. ಯುವತಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಮನೋಜ್ ಕುಮಾರ್ (25), ರೂಪೇಶ್ ಕುಮಾರ್ (35), ಮೊಹಮ್ಮದ್ ಆರಿಫ್ (23) ಎಂದು ಗುರುತಿಸಲಾಗಿದ್ದು, ಎಲ್ಲರೂ ಟ್ಯಾಕ್ಸಿ ಚಾಲಕರಾಗಿದ್ದಾರೆ.

    ನಡೆದಿದ್ದೇನು?
    ಜುಲೈ 6ರ ಸಂಜೆ ಸಂತ್ರಸ್ತೆಯು ತನ್ನ ಸ್ನೇಹಿತೆ ಮನೆಯಿಂದ ಹಿಂದಿರುಗುತ್ತಿದ್ದಳು. ವಸಂತ್ ವಿಹಾರ್ ಮಾರುಕಟ್ಟೆಯಲ್ಲಿ ಇಬ್ಬರು ಆರೋಪಿಗಳನ್ನು ಸಂತ್ರಸ್ತೆ ಭೇಟಿಯಾಗಿದ್ದಾಳೆ. ಅವರು ಆಕೆಯ ಸುತ್ತಮುತ್ತ ತಿರುಗಾಡುತ್ತಿದ್ದರು. ಸ್ವಲ್ಪ ಸಮಯದ ನಂತರ ಸಂತ್ರಸ್ತೆಯ ಬಳಿಗೆ ಕಾರನ್ನು ತೆಗೆದುಕೊಂಡು ಹೋಗಿ ಆಕೆಯ ಮುಖಕ್ಕೆ ಮದ್ಯವನ್ನು ಎಸೆದು ಕಾರಿನಲ್ಲಿ ಅಪಹರಿಸಿದ್ದಾರೆ. ಇದನ್ನೂ ಓದಿ: ಒಕ್ಕೂಟದ ಪತನದ ನಂತರ ರಾಜೀನಾಮೆ ನೀಡಲು ಮುಂದಾದ ಇಟಲಿ ಪಿಎಂ

    CRIME 2

    ನಂತರ ಆರೋಪಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಗರದಾದ್ಯಂತ ಕಾರು ಓಡಿಸುತ್ತ ಆಕೆಯ ಮೇಲೆ ಥಳಿಸಿದ್ದಾರೆ. ಅಪರಾಧ ಎಸಗಬೇಕಾದರೆ ವೀಡಿಯೋ ಕೂಡ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಿಂದ ಎರಡು ದಿನಗಳ ನಂತರ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, 23, 25 ಮತ್ತು 35 ವರ್ಷ ವಯಸ್ಸಿನ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡಕ್ಕೂ ಬರ್ತಿದ್ದಾಳೆ ರಾಮ್ ಗೋಪಾಲ್ ವರ್ಮಾ ‘ಹುಡುಗಿ’

    ಕನ್ನಡಕ್ಕೂ ಬರ್ತಿದ್ದಾಳೆ ರಾಮ್ ಗೋಪಾಲ್ ವರ್ಮಾ ‘ಹುಡುಗಿ’

    ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಸಿನಿಮಾಗಳು ಅಂದರೆ ವಿಭಿನ್ನವಾಗಿಯೇ ಇರುತ್ತದೆ. ಸದಾ ಡಿಫರೆಂಟ್ ಶೈಲಿಯೇ ಚಿತ್ರ‌ ಮಾಡುವುದರಲ್ಲಿ ಸದಾ ಮುಂದೆ. ಹೊಸತನದ ಹೆಜ್ಜೆಗಳನ್ನು ಇಡುವ ಆರ್ ಜಿವಿ ಈಗ ಸಮರ ಕಲೆಯಾಧಾರಿತ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದು, ಆ ಚಿತ್ರ‌ ಹುಡುಗಿ ಎಂಬ ಶೀರ್ಷಿಕೆಯಡಿ ಕನ್ನಡದಲ್ಲೂ ರಿಲೀಸ್ ಮಾಡಲಾಗ್ತಿದೆ. ಇದೇ 15ಕ್ಕೆ ಚಿತ್ರ ತೆರೆಗೆ ಬರ್ತಿದ್ದು, ಈ ಹಿನ್ನೆಲೆ ರಾಮ್ ಗೋಪಾಲ್ ಬೆಂಗಳೂರಿನಲ್ಲಿ ಸಿನಿಮಾ ಪ್ರಚಾರ ನಡೆಸಿದರು.

    ಮಾಧ್ಯಮಗಳೊಟ್ಟಿಗೆ ಸುದ್ದಿಗೋಷ್ಠಿ ನಡೆಸಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಇದು ತುಂಬಾ ವಿಶೇಷವಾದ ಸಿನಿಮಾ. ನಾನು ಚಿಕ್ಕವನಿದ್ದಾಗ ಎಂಟರ್ ದಿ ಡ್ರ್ಯಾಗನ್ ಸಿನಿಮಾ ನೋಡಿದ್ದೆ. ಆ ಕಥೆಯ ನಾಯಕ‌ ಬ್ರೂಸ್ಲಿಯಿಂದ ಸ್ಪೂರ್ತಿಯಿಂದ ಈ ಸಿನಿಮಾ ಮಾಡಿದ್ದು, ಮಾರ್ಷಲ್ ಆರ್ಟ್ಸ್ ಗೆ ಸಂಬಂಧಪಟ್ಟ ಸಿನಿಮಾವಾಗಿದ್ದು, ಈ ಕಲೆ ಮಾಡುವವರ ಸಂಖ್ಯೆ ತೀರಾ ವಿರಳ. ಅದ್ರಲ್ಲೂ ಹೆಣ್ಣು ಮಕ್ಕಳು ಮಾಡೋದು‌ ಕಡಿಮೆ. ನಾಯಕಿ ಪೂಜಾ ಹನ್ನೆರೆಡು ವರ್ಷದಿಂದ ಸಮರಕಲೆ ಅಭ್ಯಾಸ ಮಾಡ್ತಿದ್ದು, ಹೀಗಾಗಿ ಆಕೆಯನ್ನು ನಾಯಕಿಯನ್ನು ಆಕೆ ಮಾಡಲಾಗಿದೆ. ಟ್ರಯಾಂಗಲ್ ಲವ್ ಸ್ಟೋರಿ ಕೂಡ ಸಿನಿಮಾದಲ್ಲಿದೆ ಎಂದು ತಿಳಿಸಿದರು. ಇದನ್ನೂ ಓದಿ:ಟ್ವೀಟರ್‌ನಲ್ಲಿ ಯಶ್ ಹೆಸರು ಟ್ರೇಂಡಿಂಗ್: ಯಶ್ 19ನೇ ಚಿತ್ರದ ಅಪ್‌ಡೇಟ್ ಇಲ್ಲಿದೆ

    ಹುಡುಗಿ ಸಿನಿಮಾ ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಮಾರ್ಷಲ್ ಆರ್ಟ್ಸ್ ಹಿನ್ನೆಲೆಯಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ಸಿನಿಮಾದಲ್ಲಿ ಪೂಜಾ ಭಾಲೇಕರ್ ನಾಯಕಿಯಾಗಿ ನಟಿಸಿದ್ದಾರೆ. ಭಾರತ ಹಾಗೂ ಚೀನಾದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಚೀನಾದಲ್ಲಿ  ಬಿಡುಗಡೆಯಾಗುತ್ತಿದೆ. ಆರ್ಟ್ಸಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನಿರ್ಮಿಸಿರುವ ಈ ಚಿತ್ರ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಬೆಳ್ಳಿತೆರೆಗೆ ಜುಲೈ 15ಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಲಿದೆ.

    Live Tv
    [brid partner=56869869 player=32851 video=960834 autoplay=true]

  • ಮದ್ವೆಯಾಗಲೆಂದು ಹುಡುಗಿ ನೋಡ್ಕೊಂಡು ಬರಲು ಹೋದ ಯುವಕ ನೀರುಪಾಲು

    ಮದ್ವೆಯಾಗಲೆಂದು ಹುಡುಗಿ ನೋಡ್ಕೊಂಡು ಬರಲು ಹೋದ ಯುವಕ ನೀರುಪಾಲು

    ಗದಗ: ಬೈಕ್ ಸಮೇತ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಎಕ್ಲಾಸಪೂರ ಬಳಿ ನಡೆದಿದೆ. ರೌದ್ರ ಮಳೆಗೆ ಜಿಲ್ಲೆಯ ಮೊದಲ ಬಲಿ ಇದಾಗಿದೆ. ಎಕ್ಲಾಸಪುರ ಗ್ರಾಮದ ಟಿಪ್ಪು ಸುಲ್ತಾನ್ (26) ಎಂಬ ಯುವಕ ಮಳೆ ಅವಾಂತರಕ್ಕೆ ಮೃತಪಟ್ಟಿದ್ದಾನೆ.

    ಕೊಪ್ಪಳ ಜಿಲ್ಲೆಯ ಉಪ್ಪಿನ ಬೆಟಗೇರಿಗೆ ನಿನ್ನೆ ಕನ್ಯೆ ನೋಡಿ ಬರುವುದಾಗಿ ಹೋಗಿದ್ದ. ಮಳೆ ಜೋರಾಗಿ ಬರುತ್ತಿದೆ. ಹೀಗಾಗಿ ರಾತ್ರಿ ಮುಂಡರಗಿಯಲ್ಲಿ ಇದ್ದು, ಬೆಳಗ್ಗೆ ಊರಿಗೆ ಬರುವಂತೆ ಕುಟುಂಬಸ್ಥರು ಹೇಳಿದ್ರು. ಆಗ ಓಕೆ ಅಂದವನು, ಬಳಿಕ ಕುಟುಂಬಸ್ಥರ ಮಾತು ಕೇಳದೆ ರಾತ್ರಿ ಹಳ್ಳದಾಟಲು ಮುಂದಾಗಿದ್ದಾನೆ. ಇದನ್ನೂ ಓದಿ: 1 ವರ್ಷ ಜೈಲು ಶಿಕ್ಷೆ – ನ್ಯಾಯಾಲಯಕ್ಕೆ ಶರಣಾದ ಸಿಧು

    ಈ ವೇಳೆ ನೀರಿನ ರಭಸಕ್ಕೆ ಬೈಕ್ ಸಮೇತ ಟಿಪ್ಪು ಸುಲ್ತಾನ್ ಕೊಚ್ಚಿ ಹೋಗಿದ್ದ. ರಾತ್ರಿ ಫೋನ್ ಸ್ವಿಚ್ ಆಫ್ ಆಗಿತ್ತು. ಬೆಳಗ್ಗೆ ಬರಬಹುದು ಎಂದುಕೊಂಡ ಕುಟುಂಬಕ್ಕೆ ಶವ ನೋಡಿ ಶಾಕ್ ಆಗಿದೆ. ಇಂದು ಶವವಾಗಿ ಮುಳ್ಳಿನ ಪೊದೆಯಲ್ಲಿ ಪತ್ತೆಯಾದ ಮೇಲೆ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

    ಸ್ಥಳಕ್ಕೆ ಮುಂಡರಗಿ ಪೊಲೀಸರು ಹಾಗೂ ತಹಶಿಲ್ದಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.