Tag: ಹುಡುಗಿ

  • ಹುಡುಗಿಗಾಗಿ ಬಾರ್ ನಲ್ಲಿ 2 ಗುಂಪುಗಳ ಮಾರಾಮಾರಿ

    ಹುಡುಗಿಗಾಗಿ ಬಾರ್ ನಲ್ಲಿ 2 ಗುಂಪುಗಳ ಮಾರಾಮಾರಿ

    ಬೆಂಗಳೂರು: ಹುಡುಗಿಯ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಗಲಾಟೆ ಆಗಿರುವ ಪ್ರಕರಣವೊಂದು ಬೆಂಗಳೂರಿನ ಕಲ್ಯಾಣ ನಗರದ ಹೆಚ್‍ಆರ್ ಬಿಆರ್ ಲೇಔಟ್ ನಲ್ಲಿರುವ ಎಜೆಂಟ್ ಜಾಕ್ಸ್ ಬಿಯರ್ ಬಾರ್‍ನಲ್ಲಿ ನಡೆದಿದೆ.

    ಪಬ್ ನಲ್ಲಿ ಡ್ಯಾನ್ಸ್ ಮಾಡುತ್ತಿರುವಾಗ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ಹುಡುಗಿಯ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ಆಗಿದೆ ಎಂದು ಶಂಕಿಸಲಾಗುತ್ತಿದೆ. ಗಲಾಟೆ ವಿಷಯ ತಿಳಿದು ಸ್ಥಳಕ್ಕೆ ಬಾಣಸವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪೊಲೀಸರು ಬಾರ್ ಗೆ ಎಂಟ್ರಿ ಆಗುತ್ತಿದ್ದಂತೆ ಎರಡು ಗುಂಪುಗಳು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಸದ್ಯ ಈ ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಅಲ್ಲದೇ ಪೊಲೀಸರು ಕೂಡ ಯಾವುದೇ ದೂರನ್ನು ದಾಖಲಿಸಿಕೊಂಡಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೊಲೀಸ್ ಅಧಿಕಾರಿ ಮಗನಿಂದ ಹುಡ್ಗಿಗೆ ಹಿಗ್ಗಾಮುಗ್ಗಾ ಥಳಿತ, ಮೊಣಕಾಲಿನಿಂದ ಮುಖಕ್ಕೆ ಪಂಚ್!

    ಪೊಲೀಸ್ ಅಧಿಕಾರಿ ಮಗನಿಂದ ಹುಡ್ಗಿಗೆ ಹಿಗ್ಗಾಮುಗ್ಗಾ ಥಳಿತ, ಮೊಣಕಾಲಿನಿಂದ ಮುಖಕ್ಕೆ ಪಂಚ್!

    – ಆರೋಪಿಯ ಮೃಗೀಯ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್

    ನವದೆಹಲಿ: ನಗರದ ಪೊಲೀಸ್ ಅಧಿಕಾರಿ ಅಶೋಕ್ ಸಿಂಗ್ ಅವರ ಮಗನೊಬ್ಬ ಹುಡುಗಿಗೆ ಹಿಗ್ಗಾಮುಗ್ಗಾ ಥಳಿಸಿ ಕೂದಲು ಎಳೆದಾಡಿ, ಕಾಲಿನಿಂದ ಒದ್ದು, ಮೊಣಕಾಲಿನಿಂದ ಮುಖಕ್ಕೆ ಪಂಚ್ ಕೊಡುವ ಮೂಲಕ ವಿಕೃತಿ ಮೆರೆದ ಘಟನೆ ನಡೆದಿದೆ.

    ಈ ಘಟನೆ ದೆಹಲಿಯ ತಿಲಕ್ ನಗರದಲ್ಲಿ ನಡೆದಿದ್ದು, ಆರೋಪಿಯನ್ನು ರೋಹಿತ್ ತೋಮರ್ ಎಂದು ಗುರುತಿಸಲಾಗಿದೆ. ಸದ್ಯ ಆರೋಪಿ ಹುಡುಗಿಗೆ ಥಳಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಸೆಪ್ಟೆಂಬರ್ 2ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಉತ್ತಮ್ ನಗರ ಪ್ರದೇಶದಲ್ಲಿದಲ್ಲಿರೋ ಬಿಪಿಒ ಆಫೀಸಿನಲ್ಲಿ ಈ ವಿಡಿಯೋ ರೆಕಾರ್ಡ್ ಆಗಿದೆ. ಈ ಆಫೀಸ್ ನ ಮಾಲೀಕ ರೋಹಿತ್ ಗೆಳೆಯನೇ ಆಗಿದ್ದಾನೆ. 21 ವರ್ಷದ ಆರೋಪಿ ರೋಹಿತ್ ನಿರುದ್ಯೋಗಿಯಾಗಿದ್ದು, ಇತ್ತೀಚೆಗಷ್ಟೇ ಬಿಪಿಓದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದನು ಅಂತ ಮೂಲಗಳಿಂದ ತಿಳಿದುಬಂದಿರುವುದಾಗಿ ವರದಿಯಾಗಿದೆ.

    ಘಟನೆಗೆ ಸಂಬಂಧಿಸಿದಂತೆ ಥಳಿತಕ್ಕೊಳಗಾದ ಹುಡುಗಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ. ಹೀಗಾಗಿ ಪೊಲೀಸರು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 506(ಬೆದರಿಕೆ) ಹಾಗೂ 354(ಮಹಿಳೆಯ ಮೇಲೆ ದೌರ್ಜನ್ಯ)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪೊಲೀಸರು ಘಟನೆಯ ಬಗ್ಗೆ ಮಾತುಕತೆ ನಡೆಸಲು ಆರೋಪಿ ತಂದೆ ಅಶೋಕ್ ತೋಮರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ ಅಶೋಕ್ ಅವರು ತಮ್ಮ ಮೊಬೈಲ್ ಸ್ವಿಚ್ಚ್ ಆಫ್ ಮಾಡಿಕೊಂಡಿದ್ದಾರೆ. ಹೀಗಾಗಿ ಸದ್ಯ ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ಆರಂಭಿಸಿದ್ದಾರೆ.

    ವಿಡಿಯೋದಲ್ಲೇನಿದೆ?:
    ಆರೋಪಿಯು ಹುಡುಗಿಯ ಕೂದಲನ್ನು ಹಿಡಿದು ಎಳೆದುಕೊಂಡು ಬರುತ್ತಾನೆ. ಆಕೆಗೆ ಬೈಯುತ್ತಾ ಆಕೆಯ ಹೊಟ್ಟೆಗೆ ಕಾಲಿನಿಂದ ಒದೆಯುತ್ತಾನೆ. ಒದ್ದ ರಭಸಕ್ಕೆ ಹುಡುಗಿ ಕೆಳಗೆ ಬಿದ್ದು, ತನ್ನನ್ನು ಏನೂ ಮಾಡಬೇಡವೆಂದು ಪರಿಪರಿಯಾಗಿ ಬೇಡಿಕೊಳ್ಳುತ್ತಾಳೆ. ಆದ್ರೆ ಆಕೆಯ ಮಾತನ್ನು ಲೆಕ್ಕಿಸದೆ ಆರೋಪಿ ಮನಬಂದಂತೆ ತನ್ನ ಕೈಯಿಂದ ಆಕೆಯ ತಲೆಗೆ ಹೊಡೆದಿದ್ದಾನೆ.

    ಬಳಿಕ ಬಿದ್ದಲ್ಲಿಂದ ಹುಡುಗಿ ಎದ್ದು ಕುಳಿತುಕೊಳ್ಳುವಾಗ ಮತ್ತೆ ಬೈಯುತ್ತಾ ಆಕೆಯ ಕೂದಲನ್ನು ಹಿಡಿದು ಎಳೆದಾಡಿಕೊಂಡು ನಡುಬಗ್ಗಿಸಿ ಬೆನ್ನಿಗೆ ತನ್ನ ಮುಂಗೈಯಿಂದ, ಮೊಣ ಕಾಲಿನಿಂದ ಹುಡುಗಿಯ ಮುಖಕ್ಕೆ ಒದೆಯುವ ಮೂಲಕ ತನ್ನ ರಾಕ್ಷಸ ಕೃತ್ಯ ಸೆಗಿದ್ದಾನೆ. ಇದೇ ವೇಳೆ ಪಕ್ಕದಲ್ಲಿ ಯುವಕನೊಬ್ಬ ಪಾಸಾಗುತ್ತಾನೆ. ಆದ್ರೆ ಆತ ಏನೂ ಮಾತಾಡದೆ ತನ್ನ ಪಾಡಿಗೆ ಆ ಕಡೆ ಈ ಕಡೆ ಹೋಗುತ್ತಾನೆ.

    ಈ ಎಲ್ಲಾ ಘಟನೆಗಳನ್ನು ಪಕ್ಕದಲ್ಲೇ ಇದ್ದ ವ್ಯಕ್ತಿಯೊಬ್ಬ ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾನೆ. ಒಟ್ಟಿನಲ್ಲಿ ಆರೋಪಿ ಆ ಹುಡುಗಿಗೆ ಥಳಿಸಲು ಕಾರಣವೇನೆಂದು ತಿಳಿದುಬಂದಿಲ್ಲ. ಆದ್ರೆ ಈ ವಿಡಿಯೋ ನೋಡಿದ್ರೆ ಮನಕಲಕುತ್ತದೆ.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಮಗೆ ಈ ಸಂಬಂಧ ಇಷ್ಟವಿಲ್ಲ ಅಂದ್ರಂತೆ ಅನಿತಾಕುಮಾರಸ್ವಾಮಿ!

    ನಮಗೆ ಈ ಸಂಬಂಧ ಇಷ್ಟವಿಲ್ಲ ಅಂದ್ರಂತೆ ಅನಿತಾಕುಮಾರಸ್ವಾಮಿ!

    ಬೆಂಗಳೂರು: ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಯವರು ತಮ್ಮ ಪುತ್ರ ನಿಖಿಲ್ ಗೆ ಆಂಧ್ರ ಮೂಲದ ಹುಡುಗಿಯೊಂದಿಗೆ ವಿವಾಹ ಮಾಡಲು ಮಾತುಕತೆ ನಡೆದಿದೆ ಎಂಬ ಸುದ್ದಿಗೆ ಇಂದು ಮತ್ತೊಂದು ಟ್ವಿಸ್ಟ್ ದೊರೆತಿದೆ.

    ಶುಕ್ರವಾರ ಕುಮಾರಸ್ವಾಮಿ ದಂಪತಿ ಆಂಧ್ರದ ಉದ್ಯಮಿ ಬೋಡಪುಡಿ ಶಿವ ಕೋಟೇಶ್ವರ್ ರಾವ್ ಮನೆಗೆ ಹೋಗಿದ್ದರು. ವಿಜಯವಾಡದಲ್ಲಿರುವ ಉದ್ಯಮಿಯ ಮನೆಗೆ ಹೋಗಿ ದಂಪತಿ ಮದ್ವೆ ಮಾತುಕತೆ ನಡೆಸಿದ್ದರು. ಆದ್ರೆ ಈ ಸಂಬಂಧ ಅನಿತಾ ಕುಮಾರಸ್ವಾಮಿಗೆ ಇಷ್ಟನೇ ಇರಲಿಲ್ಲ. ಆದ್ರೆ ಮನೆಗೆ ಬರ್ತಿವಿ ಅಂತ ಕುಮಾರಸ್ವಾಮಿ ಮೊದಲೇ ಹುಡುಗಿ ಮನೆಯವರಿಗೆ ಮಾತು ಕೊಟ್ಟಿದ್ದರು. ಕೊಟ್ಟ ಮಾತು ಉಳಿಸಿಕೊಳ್ಳಲು ಅನಿವಾರ್ಯವಾಗಿ ಕುಮಾರಸ್ವಾಮಿ ದಂಪತಿ ಹುಡುಗಿ ಮನೆಗೆ ಹೋಗಿದ್ದರು. ಮಾತುಕತೆ ವೇಳೆ ಅನಿತಾ ಕುಮಾರಸ್ವಾಮಿ ಅವರು `ನಮಗೆ ಈ ಸಂಬಂಧ ಇಷ್ಟ ಇಲ್ಲ’ ಅಂತ ಹುಡುಗಿ ಮನೆಯವರಿಗೆ ತಿಳಿಸಿದ್ದಾರೆ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಇತ್ತ ಮದ್ವೆ ಮಾತುಕತೆ ಸುದ್ದಿಯ ಬಗ್ಗೆ ಪುತ್ರ ನಿಖಿಲ್ ತಾಯಿ ಬಳಿ ವಿಚಾರಿಸಿದ್ದಾರೆ. ಈ ವೇಳೆ `ಕರ್ನಾಟಕ ಬಿಟ್ಟು ಬೇರೆ ಕಡೆಯಿಂದ ಹೆಣ್ಣು ತರಲ್ಲ, ತಲೆಕೆಡಿಸಿಕೊಳ್ಳಬೇಡ’ ಅಂತ ಅನಿತಾ ಅವರು ತಮ್ಮ ಪುತ್ರನಿಗೆ ಸಮಾಧಾನಪಡಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಆಂಧ್ರ ಅಲ್ಲ, ಕನ್ನಡದ ಹುಡುಗಿಯನ್ನೇ ವರಿಸಲಿದ್ದಾರೆ ನಿಖಿಲ್

    ನಿನ್ನೆ ನಿಖಿಲ್ ಅವರಿಗೆ ಹುಡುಗಿ ನೋಡುವುದಕ್ಕಾಗಿ ಸಿಎಂ ದಂಪತಿ ಆಂಧ್ರಕ್ಕೆ ತೆರಳಿದ್ದರು ಎಂಬ ಸುದ್ದಿಯ ಬೆನ್ನಲ್ಲೇ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿರುವ ನಿಖಿಲ್ ಅವರ ಮ್ಯಾನೇಜರ್, ಈ ಕುರಿತು ಶೀಘ್ರವೇ ಅಧಿಕೃತವಾಗಿ ಕುಟುಂಬ ಸದಸ್ಯರು ಮಾಹಿತಿ ನೀಡಲಿದ್ದಾರೆ. ಆದರೆ ನಿಖಿಲ್ ಅವರು ಆಂಧ್ರ ಹುಡುಗಿಯನ್ನು ಮದುವೆಯಾಗಲಿದ್ದಾರೆ ಎನ್ನುವುದು ಸುಳ್ಳು. ಅವರು ಕನ್ನಡ ಹುಡುಗಿಯನ್ನೇ ಮದುವೆಯಾಗಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು.

    ಈ ವೇಳೆ ಆಂಧ್ರ ಪ್ರದೇಶದ ಖ್ಯಾತ ಉದ್ಯಮಿ ಬೋಡೆಪುಡಿ ಶಿವ ಕೋಟೇಶ್ವರ ರಾವ್ ಕೂಡ ಪ್ರತಿಕ್ರಿಯೆ ನೀಡಿದ್ದು, ಸಿಎಂ ಕುಮಾರಸ್ವಾಮಿ ಅವರು ನಾವು ಸ್ನೇಹಿತರಾಗಿದ್ದು, ಸಹಜವಾಗಿ ಇಂದು ಮನೆಗೆ ಭೇಟಿ ನೀಡಿದ್ದಾರೆ. ನಿಖಿಲ್‍ರೊಂದಿಗೆ ಮದುವೆಯ ಸುದ್ದಿ ಬಗ್ಗೆ ಈ ವೇಳೆ ಚರ್ಚೆ ನಡೆದಿಲ್ಲ. ಸ್ನೇಹಿತರಾದ ಕಾರಣಕ್ಕೆ ಮಾತ್ರ ಭೇಟಿ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=yCWzT5DwKiM

    https://www.youtube.com/watch?v=gRdK_wrERMI

  • ಸ್ನೇಹಿತನನ್ನೇ ಗುಂಡಿಕ್ಕಿ ಹತ್ಯೆ- 10 ವರ್ಷದ ಹಿಂದಿನ ಜಗಳ ಅಂತ್ಯ

    ಸ್ನೇಹಿತನನ್ನೇ ಗುಂಡಿಕ್ಕಿ ಹತ್ಯೆ- 10 ವರ್ಷದ ಹಿಂದಿನ ಜಗಳ ಅಂತ್ಯ

    ಬೆಂಗಳೂರು: ಹುಡುಗಿ ವಿಚಾರದಲ್ಲಿ ಹತ್ತು ವರ್ಷಗಳ ಹಿಂದಿನ ಹಳೆ ದ್ವೇಷಕ್ಕೆ ಸತೀಶ್ ಎಂಬಾತ ತನ್ನ ಸ್ನೇಹಿತ ಲತೀಶ್ ಎಂಬಾತನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

    ಬೆಂಗಳೂರಿನ ವಿಜಯನಗರದ ಪೈಪ್ ಲೈನ್ ರಸ್ತೆಯ ಮಾರುತಿ ಬಾರ್ ಬಳಿ ಈ ಘಟನೆ ನಡೆದಿದೆ. ಕೊಲೆಯಾದ ಲತೀಶ್ ಆಟೋ ಚಾಲಕನಶಾಗಿದ್ರೆ, ಸತೀಶ್ ಬ್ಯಾಟರಿ ಅಂಗಡಿ ಇಟ್ಟುಕೊಂಡಿದ್ದ.

    ಭಾನುವಾರ ರಾತ್ರಿ ಮದ್ಯಪಾನ ಮಾಡುವ ವೇಳೆ ಇಬ್ಬರ ನಡುವೆ ಯುವತಿ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದ್ದು, ಇದು ವಿಕೋಪಕ್ಕೆ ಹೋಗಿದೆ. ಕುಡಿದ ಮತ್ತಿನಲ್ಲಿ ಸತೀಶ್ ತನ್ನ ಬಳಿ ಇದ್ದ ಪಿಸ್ತೂಲ್‍ನಿಂದ ಲತೀಶ್‍ಗೆ ಗುಂಡಿಕ್ಕಿದ್ದಾನೆ.

    ಇನ್ನು ಆರೋಪಿ ಸತೀಶ್ ವಿಜಯನಗರ ಪೊಲೀಸರಿಗೆ ಶರಣಾಗಿದ್ದಾನೆ.

  • ಶಾಲಾ ಬಸ್‍ನಲ್ಲಿ ಹುಡುಗಿ ಪಕ್ಕದ ಸೀಟಿಗಾಗಿ ಹುಡುಗರ ಕಿತ್ತಾಟ, ಮಾರಣಾಂತಿಕ ಹಲ್ಲೆ

    ಶಾಲಾ ಬಸ್‍ನಲ್ಲಿ ಹುಡುಗಿ ಪಕ್ಕದ ಸೀಟಿಗಾಗಿ ಹುಡುಗರ ಕಿತ್ತಾಟ, ಮಾರಣಾಂತಿಕ ಹಲ್ಲೆ

    ಕೋಲ್ಕತ್ತಾ: ಶಾಲಾ ಬಸ್ಸಿನಲ್ಲಿ ಹುಡುಗಿ ಪಕ್ಕ ಕುಳಿತುಕೊಳ್ಳುವ ವಿಷಯಕ್ಕೆ ಸಂಬಂಧಿಸಿ ಆರಂಭವಾದ ಜಗಳ ಮಾರಣಾಂತಿಕ ದಾಳಿಯಲ್ಲಿ ಕೊನೆಗೊಂಡ ಘಟನೆ ಪಶ್ಚಿಮ ಬಂಗಾಳದ ಡಂಡಂ ನಗರದಲ್ಲಿ ನಡೆದಿದೆ.

    11ನೇ ತರಗತಿಯ ವಿನಯ್(ಹೆಸರು ಬದಲಾಯಿಸಲಾಗಿದೆ) ದಾಳಿಗೊಳಗಾದ ಬಾಲಕನಾಗಿದ್ದಾನೆ. ವಿಕ್ರಮ್(ಹೆಸರು ಬದಲಾಯಿಸಲಾಗಿದೆ) ಎನ್ನುವ 12ನೇ ತರಗತಿಯ ವಿದ್ಯಾರ್ಥಿಯು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಇವರಿಬ್ಬರೂ ಡಂಡಂ ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾಗಿದ್ದಾರೆ. ಕೇವಲ ಬಸ್ಸಿನಲ್ಲಿ ಹುಡುಗಿ ಪಕ್ಕದಲ್ಲಿ ಕುಳಿತುಕೊಳ್ಳುವ ವಿಚಾರಕ್ಕೆ ಜಗಳ ನಡೆದು, ವಿಕೋಪಕ್ಕೆ ತಿರುಗಿ ಮಾರಣಾಂತಿಕ ಹಲ್ಲೆ ನಡೆದಿದೆ.

    ಘಟನೆಯಿಂದ ವಿನಯ್ ನ ಕತ್ತು ಹಾಗೂ ಭುಜಕ್ಕೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಡಂಡಂ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ವಿನಯ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ಸಂಬಂಧ ಆರೋಪಿ ವಿಕ್ರಮ್ ನನ್ನು ಸೋಮವಾರ ಸಂಜೆ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

    ಏನಿದು ಗಲಾಟೆ?
    ಸೋಮವಾರ ಸಂಜೆ ಸುಮಾರು 4.45 ರಷ್ಟೊತ್ತಿಗೆ ಶಾಲಾ ಮಕ್ಕಳು ಶಾಲಾ ವಾಹನದಲ್ಲಿ ಮನೆಗೆ ಮರಳುತ್ತಿದ್ದರು. ಈ ವೇಳೆ ವಿನಯ್ ಹುಡುಗಿ ಪಕ್ಕ ಕುಳಿತಿದ್ದ. ಅಷ್ಟರಲ್ಲಿ ಬಸ್ಸನ್ನೇರಿದ ವಿಕ್ರಮ್ ನನ್ನ ಗೆಳತಿಯ ಪಕ್ಕದಿಂದ ಎದ್ದೇಳು ಎಂದು ಗಲಾಟೆ ಮಾಡಿದ್ದಾನೆ. ಇಬ್ಬರ ನಡುವೆ ಜಗಳ ತಾರಕ್ಕೇರಿದಾಗ, ಅಲ್ಲೇ ಇದ್ದ ವಿದ್ಯಾರ್ಥಿಗಳು ಅವರಿಬ್ಬರನ್ನು ಸಮಾಧಾನ ಪಡಿಸಲು ಯತ್ನಿಸಿದರಾದರೂ ಪ್ರಯೋಜನವಾಗಿಲ್ಲ.

    ಇದರಿಂದ ಸಿಟ್ಟಿಗೆದ್ದ ವಿಕ್ರಮ್ ಬಸ್ ನಿಂದ ಕೆಳಗಿಳಿದು ರಸ್ತೆ ಬದಿಯ ಅಂಗಡಿಯಲ್ಲಿದ್ದ ಪೀಲರ್ (ಆಲೂಗಡ್ಡೆ ಸುಲಿಯುವ ಸಾಧನ)ವನ್ನು ಎತ್ತಿಕೊಂಡು ಬಸ್ ಏರಿದ್ದಾನೆ. ಕೈಗೆ ಸಿಕ್ಕ ಪೀಲರ್ ನಿಂದ ವಿನಯ್ ಮೇಲೆ ಮನಬಂದಂತೆ ದಾಳಿ ಮಾಡಿದ್ದಾನೆ. ಆತನ ಕ್ರೌರ್ಯಕ್ಕೆ ಬೆಚ್ಚಿದ ಬಸ್ ಚಾಲಕ, ಸಹಾಯಕ ಮತ್ತು ಇತರ ವಿದ್ಯಾರ್ಥಿಗಳು ಆರೋಪಿ ಬಾಲಕನನ್ನು ತಡೆದು ಬಸ್‍ನಿಂದ ಕೆಳಗಡೆ ಇಳಿಸಿದ್ದಾರೆ.

  • ಹುಡುಗಿಯ ಫೋಟೋ ಹಾಕಿ ಅವರಂತೆ ಚಾಟ್ ಮಾಡ್ತಿದ್ದ ವ್ಯಕ್ತಿ ಬಂಧನ

    ಹುಡುಗಿಯ ಫೋಟೋ ಹಾಕಿ ಅವರಂತೆ ಚಾಟ್ ಮಾಡ್ತಿದ್ದ ವ್ಯಕ್ತಿ ಬಂಧನ

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯ ಫೋಟೋ ಹಾಕಿಕೊಂಡು ವಂಚನೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸೈಬರ್ ಪೊಲೀಸರು ಬಂಧಿಸಿದ್ದಾರೆ.

    ಸಾಗರ್ ರಾವ್(22) ಬಂಧಿತ ಆರೋಪಿ. ಈತ ಫ್ರೀ ಡೇಟಿಂಗ್ ವೆಬ್ ಸೈಟ್ ನಲ್ಲಿ ಹುಡುಗಿಯರ ಫೋಟೋ ಹಾಕಿಕೊಂಡು ಹುಡುಗರಿಗೆ ವಂಚಿಸುತ್ತಿದ್ದನು. ಡೇಟಿಂಗ್ ವೆಬ್ ಸೈಟ್ ನಲ್ಲಿ ಹುಡುಗಿಯರ ಫೋಟೋ ಹಾಕಿ, ಹುಡುಗರೊಂದಿಗೆ ಹುಡುಗಿಯರ ರೀತಿ ಚಾಟ್ ಮಾಡಿ ಹಣ ದೋಚುತ್ತಿದ್ದನು.

    ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಈಗ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಮೂರು ಮೊಬೈಲ್ ವಶಪಡಿಸಿಕೊಂಡಿದ್ದಾರೆ.

  • ಹುಡ್ಗಿಗೆ ಮೆಸೇಜ್ ಮಾಡಿದನೆಂದು ಮನೆಯಲ್ಲಿ ಕೂಡಿಹಾಕಿ, ಕೈಕಾಲು ಕಟ್ಟಿ, ಅರೆಬೆತ್ತಲೆ ಮಾಡಿ ಥಳಿಸಿದ್ರು!

    ಹುಡ್ಗಿಗೆ ಮೆಸೇಜ್ ಮಾಡಿದನೆಂದು ಮನೆಯಲ್ಲಿ ಕೂಡಿಹಾಕಿ, ಕೈಕಾಲು ಕಟ್ಟಿ, ಅರೆಬೆತ್ತಲೆ ಮಾಡಿ ಥಳಿಸಿದ್ರು!

    ಮಂಗಳೂರು: ಹುಡುಗಿಯೊಬ್ಬಳಿಗೆ ಮೆಸೇಜ್ ಮಾಡಿದ ಎಂದು ಆರೋಪಿಸಿ ಮುಸ್ಲಿಂ ಯುವಕನೊಬ್ಬನನ್ನು ಮನೆಯಲ್ಲಿ ಕೂಡಿಹಾಕಿ, ಹಿಗ್ಗಾಮುಗ್ಗಾ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ದಕ್ಷಿಣ ಕನ್ನಡ-ಕಾಸರಗೋಡು ಗಡಿಭಾಗದಲ್ಲಿ ಈ ಘಟನೆ ನಡೆದಿದ್ದು ಅಂತಾ ಹೇಳಲಾಗುತ್ತಿದ್ದು, ನಿರ್ದಿಷ್ಟ ಪ್ರದೇಶದ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.

    ಮುಸ್ಲಿಮರೇ ಮನೆಗೆ ಕರೆದು ಯುವಕನನ್ನು ಕೈಕಾಲು ಕಟ್ಟಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ತಮ್ಮ ಹುಡುಗಿಯನ್ನು ಪುಸಲಾಯಿಸಲು ಯತ್ನಿಸಿದ್ದಾನೆಂಬ ಒಂದೇ ಕಾರಣಕ್ಕೆ ಅರೆಬೆತ್ತಲೆಯಾಗಿಸಿ ಹಲ್ಲೆ ಮಾಡಿದ್ದಾರೆ.

    ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಯುವಕನ ಮೇಲಿನ ಹಲ್ಲೆ ದೃಶ್ಯ ನೋಡಿದ್ರೆ ಕರುಳು ಚುರುಕ್ ಎನ್ನುವಂತಿದೆ.

     

  • ಪ್ರೀತ್ಸೆ..ಪ್ರೀತ್ಸೆ.. ಅಂತ ಬೆನ್ನು ಬಿದ್ದ ಯುವಕನಿಗೆ ಅಪ್ರಾಪ್ತೆಯ ತಂದೆಯಿಂದ ಬಿತ್ತು ಗೂಸಾ!

    ಪ್ರೀತ್ಸೆ..ಪ್ರೀತ್ಸೆ.. ಅಂತ ಬೆನ್ನು ಬಿದ್ದ ಯುವಕನಿಗೆ ಅಪ್ರಾಪ್ತೆಯ ತಂದೆಯಿಂದ ಬಿತ್ತು ಗೂಸಾ!

    ಹುಬ್ಬಳ್ಳಿ: ಪ್ರೀತಿಸುವಂತೆ ಯುವಕನೊಬ್ಬ ಅಪ್ರಾಪ್ತೆಯ ಬೆನ್ನು ಬಿದ್ದ ಪರಿಣಾಮ ಬಾಲಕಿಯ ತಂದೆಯಿಂದ ಧರ್ಮದೇಟು ತಿಂದಿರುವ ಘಟನೆ ಹುಬ್ಬಳ್ಳಿಯ ವಿದ್ಯಾನಗರದ ಮಹಿಳಾ ವಿದ್ಯಾಪೀಠದ ಬಳಿ ನಡೆದಿದೆ.

    ಅಮರಗೋಳದ ನಿವಾಸಿಯಾಗಿರೋ ಸುನಿಲ್ ಹನಕನಹಳ್ಳಿ ಎಂಬಾತ ಧರ್ಮದೇಟು ತಿಂದವನಾಗಿದ್ದು, ಈತ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದಾನೆ. ಸುನೀಲ್ ಈ ಪ್ರದೇಶದ ಸುಮಾಳನ್ನು(ಹೆಸರು ಬದಲಾಯಿಸಿಲಾಗಿದೆ) ಪ್ರೀತಿಸುತ್ತೇನೆಂದು ಹಲವು ದಿನಗಳಿಂದ ಆಕೆಯ ಬೆನ್ನು ಬಿದ್ದಿದ್ದ.

    ಸುನಿಲ್ ಪ್ರೀತಿಗೆ ಸುಮಾ ಒಪ್ಪಿಗೆ ಸೂಚಿಸಿರಲಿಲ್ಲ. ಹೀಗಾಗಿ 17 ವರ್ಷದ ಅಪ್ರಾಪ್ತೆ ವಿದ್ಯಾನಗರದ ಮಹಿಳಾ ಕಾಲೇಜಿನಲ್ಲಿ ಟೈಲರಿಂಗ್ ಕಲಿಯಲು ಹೋಗುತ್ತಿದ್ದ ಸಂದರ್ಭದಲ್ಲಿ ಸುನಿಲ್ ಆಕೆಯನ್ನು ಫಾಲೋ ಮಾಡಿದ್ದಾನೆ. ಇದೇ ವಿಷಯ ಸುಮಾಳ ತಂದೆ ಧರ್ಮಪ್ಪ ಅವರಿಗೆ ಗೊತ್ತಾಗುತ್ತಿದ್ದಂತೆ ಸ್ಥಳೀಯರ ಜೊತೆಗೂಡಿ ಹಿಗ್ಗಾಮುಗ್ಗ ಥಳಿಸಿದ್ದಾರೆ.

    ತನ್ನ ಮಗಳ ಒಪ್ಪಿಗೆ ಇಲ್ಲದ ಒತ್ತಾಯದ ಮೇರೆಗೆ ಆಕೆಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ಹಾಳು ಮಾಡುತ್ತಿದ್ದಾನೆಂದು ತಂದೆ ಧರ್ಮಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಧರ್ಮದೇಟು ತಿಂದ ಸುನಿಲ್ ನನ್ನು ನವನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಸುಮಾ ಅಲ್ಲದೇ ಈ ಹಿಂದೆ ಪ್ರೀತಿ-ಪ್ರೇಮ ಹೆಸರಿನಲ್ಲಿ ಅಪ್ರಾಪ್ತೆಯರನ್ನು ಪುಸಲಾಯಿಸಿ ಅವರ ಬದುಕಿನ ಜೊತೆ ಸುನಿಲ್ ಚೆಲ್ಲಾಟವಾಡುತ್ತಿದ್ದ ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.

    https://www.youtube.com/watch?v=6beI6pS8zG4

  • ಪ್ರಿಯಕರನ ಜೊತೆ ಸುತ್ತಾಡಿದ್ದಕ್ಕೆ 13ರ ಮಗಳನ್ನೇ ಕೊಂದೇಬಿಟ್ಟ!

    ಪ್ರಿಯಕರನ ಜೊತೆ ಸುತ್ತಾಡಿದ್ದಕ್ಕೆ 13ರ ಮಗಳನ್ನೇ ಕೊಂದೇಬಿಟ್ಟ!

    ನವದೆಹಲಿ: ಹುಡುಗನ ಜೊತೆ ಸುತ್ತಾಡಿದ್ದಕ್ಕೆ 7ನೇ ತರಗತಿ ಓದುತ್ತಿದ್ದ ಮಗಳನ್ನೇ ಕೊಂದ ತಂದೆಯನ್ನು ದೆಹಲಿಯ ಪೊಲೀಸರು ಶನಿವಾರ ಬಂಧಿಸಿದ್ದಾರೆ.

    ಸುದೇಶ್ ಕುಮಾರ್ ಬಂಧನಕ್ಕೆ ಒಳಗಾದ ವ್ಯಕ್ತಿ. ನೆರೆ ಮನೆಯವನ ಜೊತೆ ಪ್ರೇಮ ಸಂಬಂಧವನ್ನು ಹೊಂದಿದ್ದಕ್ಕೆ ನಾನೇ ಮಗಳನ್ನು ಕೊಲೆ ಮಾಡಿದ್ದೇನೆ ಎಂದು  ಸುದೇಶ್ ಕುಮಾರ್ ತಪ್ಪೊಪ್ಪಿಕೊಂಡಿದ್ದಾನೆ.

    ಏನಿದು ಪ್ರಕರಣ?
    13 ವರ್ಷದ ಅಪ್ರಾಪ್ತ ಹುಡುಗಿಯು ಬುಧವಾರದಂದು ಕಾಣೆಯಾಗಿದ್ದಳು. ಮಗಳು ಕಾಣೆಯಾದ ಹಿನ್ನೆಲೆಯಲ್ಲಿ ತಂದೆ ಸುದೇಶ್ ಕುಮಾರ್ ದೆಹಲಿಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರನ್ನು ದಾಖಲಿಸಿದ್ದ. ನಾಪತ್ತೆ ದೂರಿನ ಆಧಾರದಲ್ಲಿ ತನಿಖೆ ಆರಂಭಿಸಿದ ಪೊಲೀಸರಿಗೆ ಹುಡುಗಿಯ ಮೃತದೇಹ ಉತ್ತರ ಪ್ರದೇಶದ ಟ್ರೋನಿಕಾ ನಗರದಲ್ಲಿ ಶುಕ್ರವಾರ ಸಿಕ್ಕಿತ್ತು.

    ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡುಗಿಯ ತಂದೆ ಸುದೇಶ್ ಕುಮಾರ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನೇ ಮಗಳನ್ನ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ತನ್ನ ಮಗಳು ನೆರೆ ಮನೆಯ ಹುಡುಗನ ಜೊತೆ ಪ್ರೇಮ ಸಂಬಂಧವನ್ನ ಬೆಳೆಸಿದ ಕಾರಣಕ್ಕೆ ಈ ಕೃತ್ಯವನ್ನ ಎಸಗಿರುವುದಾಗಿ ಹೇಳಿದ್ದಾನೆ.

    ಪೊಲೀಸರಿಗೆ ಹೇಳಿದ್ದು ಏನು?
    ಮಗಳು ಹತ್ತಿರದ ಅಂಗಡಿಯಿಂದ ತಿಂಡಿ ತರುವುದಾಗಿ ಹೇಳಿ ಮನೆಯಿಂದ ಹೊರ ಹೋಗಿದ್ದಳು. ಈ ಸಮಯಕ್ಕೆ ಆಕೆಯನ್ನು ನಾನು ಹಿಂಬಾಲಿಸಿದೆ. ಈ ವೇಳೆ ಆಕೆ ಪ್ರಿಯಕರನೊಡನೆ ಮಾತನಾಡುವುದನ್ನ ಕಂಡು ಆಕ್ರೋಶಕ್ಕೆ ಒಳಗಾಗಿ, ಆಕೆಗೆ ಸರಿಯಾದ ಪಾಠ ಕಲಿಸಬೇಕು ಎಂದು ನಿರ್ಧರಿಸಿದೆ. ಬಳಿಕ ಮಗಳನ್ನು ತನ್ನ ಬೈಕ್‍ನಲ್ಲಿ ಕೂರಿಸಿಕೊಂಡು ಲೋನಿ ರಸ್ತೆಯ ನಗರಕ್ಕೆ ಕರೆದೊಯ್ದು ಗಂಟಲನ್ನು ಚಾಕುವಿನಿಂದ ಸೀಳಿ ಕೊಲೆ ಮಾಡಿದೆ. ಕೊಲೆ ಮಾಡಿದ ನಂತರ ಪ್ರಕರಣದ ದಿಕ್ಕನ್ನು ತಪ್ಪಿಸಲು ಮಗಳು ಕಾಣೆಯಾಗಿದ್ದಾಳೆ ಎಂದು  ದೂರನ್ನು ದಾಖಲಿಸಿದ್ದೆ ಎಂದಿದ್ದಾನೆ.

    ಅನುಮಾನ ಬಂದಿದ್ದು ಹೇಗೆ?
    ವಿಚಾರಣೆ ಪ್ರಾರಂಭಿಸಿದ ಪೊಲೀಸರಿಗೆ, ರಸ್ತೆ ಬಳಿಯ ಸಿಸಿಟಿವಿಯಲ್ಲಿ ಆ ಹುಡುಗಿಯನ್ನ ವ್ಯಕ್ತಿಯೊಬ್ಬ ಬೈಕ್‍ನಲ್ಲಿ ಕೂರಿಸಿಕೊಂಡು ಹೋಗುವ ದೃಶ್ಯ ಸೆರೆಯಾಗಿತ್ತು. ಸುದೇಶ್ ಬಳಿ ಅದೇ ರೀತಿಯ ಬೈಕ್ ಮತ್ತು ಹೆಲ್ಮೆಟ್ ಇರುವುದನ್ನು ಗಮನಿಸಿದ ಪೊಲೀಸರು ಶಂಕೆಯ ಆಧಾರದಲ್ಲಿ ವಶಕ್ಕೆ ಪಡೆದು ಮತ್ತಷ್ಟು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.

  • ವಿಡಿಯೋ: ಹಗ್ಗದ ಉಯ್ಯಾಲೆ ಆಡ್ತಾ 9 ಅಡಿ ಉದ್ದದ ಮೊಸಳೆ ಇದ್ದ ನೀರಿಗೆ ಜಿಗಿದಳು!

    ವಿಡಿಯೋ: ಹಗ್ಗದ ಉಯ್ಯಾಲೆ ಆಡ್ತಾ 9 ಅಡಿ ಉದ್ದದ ಮೊಸಳೆ ಇದ್ದ ನೀರಿಗೆ ಜಿಗಿದಳು!

    ಫ್ಲೋರಿಡಾ: ಯುವತಿಯೊಬ್ಬಳು ಮರಕ್ಕೆ ಕಟ್ಟಿದ ಹಗ್ಗದಲ್ಲಿ ಉಯ್ಯಾಲೆ ಆಡುತ್ತಾ ಮೊಸಳೆ ಇದ್ದ ನೀರಿಗೆ ಜಿಗಿಯುವ ಮೈನವಿರೇಳಿಸೋ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

    ಫ್ಲೋರಿಡಾದ ಎವರ್ ಗ್ಲೇಡ್ಸ್ ನಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. 9 ಅಡಿ ಉದ್ದದ ಮೊಸಳೆ ನದಿಯಲ್ಲಿ ಇದೆ ಅಂತ ಗೊತ್ತಿದ್ದರೂ ಆ ಹುಡುಗಿ ಯಾವುದೇ ಭಯವಿಲ್ಲದೆ ಅದರ ಪಕ್ಕದಲ್ಲೇ ಜಿಗಿದಿದ್ದಾಳೆ.

    ವಿಡಿಯೋದ ಆರಂಭದಲ್ಲಿ ಕುಟುಂಬವೊಂದು ನದಿ ದಡದಲ್ಲಿ ಆಟವಾಡ್ತಿರೋದನ್ನ ಕಾಣಬಹುದು. ಹುಡುಗಿಯೊಬ್ಬಳು ನೀರಿನಲ್ಲಿ ಮೊಸಳೆಯ ಹಿಂದೆಯೇ ಆಟವಾಡ್ತಿದ್ದು, ಇತ್ತ ಆಕೆಯ ತಂದೆ ಎನ್ನಲಾದ ವ್ಯಕ್ತಿ ತನ್ನ ಕಾಲಿನ ಬೆರಳುಗಳನ್ನ ಮೊಸಳೆಗೆ ಹತ್ತಿರದಲ್ಲೇ ಇಟ್ಟಿದ್ದಾರೆ. ಅತ್ತ ಮತ್ತೊಬ್ಬ ಹುಡುಗಿ ತಾನು ನೀರೊಳಗೆ ಜಿಗಿಯುತ್ತಿದ್ದೇನೆ ಎಂದು ತನ್ನ ತಂದೆಗೆ ಕೂಗಿ ಹೇಳಿ ಜಿಗಿದಿದ್ದಾಳೆ. ಈ ವೇಳೆ ಆಕೆ ಜಿಗಿದ ಸ್ಥಳಕ್ಕಿಂತ ಕೆಲವೇ ಇಂಚುಗಳ ಅಂತರದಲ್ಲಿ ಮೊಸಳೆ ಇದ್ದರೂ ಆಕೆಗೆ ಏನೂ ಮಾಡ್ಲಿಲ್ಲ.

    ಮೊಸಳೆ ತುಂಬಾ ಹತ್ತಿರದಲ್ಲಿತ್ತು ಅಂತ ಆಕೆಯ ತಂದೆ ಕೂಲಾಗಿ ಹೇಳೋದನ್ನ ಕೇಳಬಹುದು. ಹುಡುಗಿ ಕೂಡ ಮತ್ತೆ ಈಜಿಕೊಂಡು ದಡ ಸೇರಿದ್ದಾಳೆ. ಈ ವಿಡಿಯೋವನ್ನ 2017ರ ಜುಲೈನಲ್ಲಿ ಯೂಟ್ಯೂಬ್‍ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಇತ್ತೀಚೆಗೆ ಫೇಸ್‍ಬುಕ್‍ನಲ್ಲಿ ಮತ್ತೆ ಹಂಚಿಕೊಂಡ ಬಳಿಕ ಚರ್ಚೆ ಶುರುವಾಗಿದೆ.

    ಆ ಮೊಸಳೆ ವೆಜಿಟೇರಿಯನ್ ಇರಬೇಕು ಮಾಂಸ ತಿನ್ನಲ್ವೇನೋ ಅಂತ ವಿಡಿಯೋ ನೋಡಿದವರೊಬ್ಬರು ಕಮೆಂಟ್ ಮಾಡಿದ್ದಾರೆ. ಆದ್ರೆ ಇನ್ನೂ ಕೆಲವರು ಪೋಷಕರು ಬೇಜವಾಬ್ದಾರಿಯುತವಾಗಿ ನಡೆದುಕೊಂಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.

    ಇದನ್ನ ನಾನು ಟಿವಿಯಲ್ಲಿ ನೋಡಿದ್ದೆ. ಈ ಮೊಸಳೆ ಸಾಕುಪ್ರಾಣಿಯಾಗಿದ್ದು, ಮಕ್ಕಳು ಅದರೊಂದಿಗೆಯೇ ಬೆಳೆದಿವೆ. ಅವು ದಾಳಿ ಮಾಡುವುದಿಲ್ಲ ಅಂತೇನಿಲ್ಲ. ಆದ್ರೆ ಇವರು ಈ ರೀತಿಯ ಸಾಹಸ ಮಾಡ್ತಿರೋದು ಇದೇ ಮೊದಲೇನಲ್ಲ ಅಂತ ಟ್ರಾವಿಸ್ ವಿಲಿಯಮ್ಸ್ ಎಂಬವರು ಹೇಳಿದ್ದಾರೆ.

    https://www.youtube.com/watch?v=lYw8huDC4C4