Tag: ಹುಡುಗಿ

  • ಮದ್ವೆಗೆ ಹುಡ್ಗಿ ನೋಡಲು ಹೋಗಿದ್ದ ಯುವಕ – ಇಷ್ಟವಿಲ್ಲ ಅಂದಿದ್ದಕ್ಕೆ ಹುಡುಗಿ ತಲೆಗೆ ಗುಂಡಿಟ್ಟ..!

    ಮದ್ವೆಗೆ ಹುಡ್ಗಿ ನೋಡಲು ಹೋಗಿದ್ದ ಯುವಕ – ಇಷ್ಟವಿಲ್ಲ ಅಂದಿದ್ದಕ್ಕೆ ಹುಡುಗಿ ತಲೆಗೆ ಗುಂಡಿಟ್ಟ..!

    ಲಕ್ನೋ: ಮಗ ಅಥವಾ ಮಗಳು ಅರೇಂಜ್ ಮ್ಯಾರೇಜ್ (Arrange Marriage) ಆಗ್ತಿದ್ದಾರೆ ಅಂದ್ರೆ ಮನೆಮಂದಿಗೆ ತುಂಬಾನೇ ಖುಷಿ, ಏಕೆಂದ್ರೆ ನಾವೇ ಇಷ್ಟಪಟ್ಟ ಸಂಬಂಧದೊಂದಿಗೆ ಮದುವೆಯಾಗುತ್ತಿದ್ದಾರೆ, ಇಲ್ಲಿ ಜಾತಿ, ಸಂಪ್ರದಾಯ ಅಂತ ತೊಂದರೆ ಇರುವುದಿಲ್ಲ, ಇನ್ನು ಜಾತಕ ನೋಡಿಸಿದಾಗಲಂತೂ ತುಂಬಾ ಹೊಂದಾಣಿಕೆ ಕಂಡು ಬಂದಿರುತ್ತದೆ, ಮನೆಯವರಿಗೆ ಖುಷಿಯೋ ಖುಷಿ. ಆದ್ರೆ ಹುಡುಗಿ ನೋಡುವ ಶಾಸ್ತ್ರಕ್ಕೆ ಹೋದಾಗ ಆಕೆ ತನನ್ನ ನಿರಾಕರಿಸಿದ್ದಕ್ಕೆ ಹಣೆಗೆ ಗುಂಡು ಹಾರಿಸಿ ಯುವಕ ಎಸ್ಕೇಪ್‌ ಆಗಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಮೈನ್‌ಪುರಿನಲ್ಲಿ ನಡೆದಿದೆ.

    ಹೌದು.. ಎರಡು ಕುಟುಂಬಸ್ಥರು ಹುಡುಗ – ಹುಡುಗಿ ನೋಡುವ ಶಾಸ್ತ್ರ ಇಟ್ಟುಕೊಂಡಿದ್ದರು. ಇಬ್ಬರಿಗೂ ಒಪ್ಪಿಗೆಯಾದ್ರೆ ಮದುವೆ (Marriage) ನಿಶ್ಚಯ ಮಾಡಿಯೇ ಬಿಡೋಣ ಅಂತ ನಿರ್ಧರಿಸಿದ್ದರು, ಆದ್ರೆ ಅಲ್ಲಿ ನಡೆದಿದ್ದೇ ಬೇರೆ. ಹುಡುಗಿ ತನಗೆ ಹುಡುಗ ಇಷ್ಟವಿಲ್ಲ ಅಂತ ಹೇಳಿದ್ದಾಳೆ. ಇದರಿಂದ ಕೋಪಗೊಂಡ ಹುಡುಗ ತಲೆಗೆ ಗುಂಡು ಹಾರಿಸಿದ್ದಾನೆ. ಇದನ್ನೂ ಓದಿ: ಟ್ರಂಪ್‌ ನೀತಿಯನ್ನು ಟೀಕಿಸಿದ ಬೆನ್ನಲ್ಲೇ DOGE ಮುಖ್ಯಸ್ಥ ಪಟ್ಟದಿಂದ ಇಳಿದ ಮಸ್ಕ್‌

    ಹುಡುಗಿಯ ತಲೆಗೆ ಗುಂಡು ಹಾರಿಸಿ (Gun Shoot) ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿ ಯುವಕನನ್ನ ಸಗಾಮೈ ಪೊಲೀಸ್ ಠಾಣೆಯ ಎಲಾವ್ ಗ್ರಾಮದ ನಿವಾಸಿ ಅಮುಕ್ ಮಗ ರಾಜೇಶ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಇಬ್ಬರು ಕನ್ನಡಿಗರು ಸೇರಿ 26 ಮೃತ ಪ್ರವಾಸಿಗರ ನೆನಪಿಗೆ ಪಹಲ್ಗಾಮ್‌ನಲ್ಲಿ ಸ್ಮಾರಕ – ಒಮರ್ ಅಬ್ದುಲ್ಲಾ

    ಗುಂಡು ಹಾರಿಸಿದ ನಂತರ, ಆರೋಪಿ ಪಿಸ್ತೂಲ್, ಬೈಕ್ ಮತ್ತು ಮೊಬೈಲ್ ಅನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಸದ್ಯ ಘಟನಾ ಸ್ಥಳಕ್ಕೆ ಭೋಗಾಂವ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹುಡುಗಿ ಕುಟುಂಬಸ್ಥರಿಂದ ಹೇಳಿಕೆ ಪಡೆದಿದ್ದಾರೆ. ನಂತರ ಸ್ಥಳದಿಂದ ಒಂದು ಪಿಸ್ತೂಲ್, ಮೊಬೈಲ್ ಫೋನ್ ಮತ್ತು ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.

    ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಪಾಕ್‌ ಪರ ಬೇಹುಗಾರಿಕೆ – 7 ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ರಾಜಸ್ಥಾನದ ಸರ್ಕಾರಿ ನೌಕರ ಅರೆಸ್ಟ್‌

  • ಮಸೀದಿ ಪಕ್ಕ ನಿಂತಿದ್ದ ಹುಡ್ಗಿಯನ್ನ ʻಹಾಟ್‌ʼ ಅಂತ ಕರೆದಿದ್ದ ವೃದ್ಧ – 7 ವರ್ಷಗಳ ಬಳಿಕ 3 ವರ್ಷ ಜೈಲು ಶಿಕ್ಷೆ

    ಮುಂಬೈ: ಅಪ್ರಾಪ್ತ ಹುಡುಗಿಯನ್ನು ಅನುಚಿತವಾಗಿ ಸ್ಪರ್ಶಿಸಿ ʻಹಾಟ್‌ʼಎಂದು ಕರೆದಿದ್ದಕ್ಕಾಗಿ 50 ವರ್ಷದ ವೃದ್ಧನಿಗೆ ಮುಂಬೈ ವಿಶೇಷ ನ್ಯಾಯಾಲಯವು (Mumbai Speical Court) 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

    ಈ ಕೃತ್ಯವು ಆರೋಪಿಯು ಲೈಂಗಿಕ ದೌರ್ಜನ್ಯ ಎಸಗುವ ಉದ್ದೇಶವನ್ನು ತೋರಿಸುತ್ತದೆ ಎಂದು ಕೋರ್ಟ್‌ ಗಮನಿಸಿದೆ. ಈ ಹಿನ್ನೆಲೆಯಲ್ಲಿ 2016ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ 3 ವರ್ಷ ಜೈಲು (Jail) ಶಿಕ್ಷೆ ವಿಧಿಸಿದೆ. ಇದನ್ನೂ ಓದಿ: ಸಂಸತ್‌ ಮೇಲಿನ ದಾಳಿ ಗಂಭೀರವಾದದ್ದು; ಚರ್ಚೆ ಬೇಡ, ವಿಸ್ತೃತ ತನಿಖೆಯಾಗಲಿ: ಪ್ರಧಾನಿ ಮೋದಿ ಮೊದಲ ಪ್ರತಿಕ್ರಿಯೆ

    ವಿಶೇಷ ಪೋಕ್ಸೊ ನ್ಯಾಯಾಲಯದ (POCSO Court) ನ್ಯಾಯಾಧೀಶರಾದ ಎಸ್.ಸಿ ಜಾಧವ್ ಅವರು ಡಿಸೆಂಬರ್ 14 ರಂದು ಆರೋಪಿಗೆ ಭಾರತೀಯ ದಂಡ ಸಂಹಿತೆಗೆ (IPC) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಹಿಂಬಾಲಿಸುವುದು ಮತ್ತು ಕಿರುಕುಳ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ದೋಷಿ ಎಂದು ಪರಿಗಣಿಸಿ ತೀರ್ಪು ನೀಡಿದ್ದಾರೆ.

    ಈ ಪ್ರಕರಣವು 2016ರ ಮೇ 24ರಂದು ನಡೆದಿತ್ತು. ಆಗ ಹುಡುಗಿಗೆ 13 ವರ್ಷ ವಯಸ್ಸಾಗಿತ್ತು. ಸಂತ್ರಸ್ತೆ ಮತ್ತು ಪ್ರಾಸಿಕ್ಯೂಷನ್‌ ಸಾಕ್ಷಿಯ ಒಟ್ಟಾರೆ ಸಾಕ್ಷ್ಯವನ್ನು ಪರಿಶೀಲಿಸಿಸಲಾಯಿತು. ಈ ವೇಳೆ ಹುಡುಗಿ ಆ ದಿನಾಂಕದಂದು ಅಂದು ಮಸೀದಿ ಬಳಿ ನಿಂತಿದ್ದಾಗ ಆರೋಪಿ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದ, ಜೊತೆಗೆ ಆಕೆ ತುಂಬಾ ʻಹಾಟ್‌ʼ ಆಗಿ ಕಾಣ್ತಿದ್ದಾಳೆ ಎಂದು ಕರೆದಿದ್ದ. ಅಷ್ಟೇ ಅಲ್ಲದೇ ಆಕೆ ಕೆನ್ನೆಗೆ ಮುತ್ತಿಡಲು ಬಯಸಿದ್ದ, ಆಕೆಯನ್ನು ತನ್ನೊಂದಿಗೆ ಕೆರೆದುಕೊಂಡು ಹೋಗಬೇಕು ಅನ್ನಿಸುತ್ತದೆ ಎಂಬ ಮಾತುಗಳನ್ನಾಡಿರುವುದು ಸಾಬೀತಾಗಿದೆ.

    ಆರೋಪಿಯ ಈ ಹೇಳಿಕೆಗಳು ಲೈಂಗಿಕ ದೌರ್ಜನ್ಯ ಎಸಗುವ ಉದ್ದೇಶ ಸೂಚಿಸುತ್ತದೆ ಎಂಬುದನ್ನು ಗಮನಿಸಿ ಆರೋಪಿಗೆ ಶಿಕ್ಷೆ ವಿಧಿಸಿದೆ. ಇದನ್ನೂ ಓದಿ: ನನ್ನ 3ನೇ ಅವಧಿಯಲ್ಲಿ ಭಾರತ ಟಾಪ್‌-3 ಆರ್ಥಿಕತೆಯಲ್ಲಿ ಒಂದಾಗಲಿದೆ: ಮೋದಿ ಮತ್ತೊಂದು ಗ್ಯಾರಂಟಿ 

  • ರಾತ್ರಿ ಪಾರ್ಕ್‍ನಲ್ಲಿ ಗೆಳೆಯನ ಜೊತೆ ಕುಳಿತಿದ್ದ ಹುಡುಗಿ ಮೇಲೆ ಗ್ಯಾಂಗ್‍ರೇಪ್!

    ರಾತ್ರಿ ಪಾರ್ಕ್‍ನಲ್ಲಿ ಗೆಳೆಯನ ಜೊತೆ ಕುಳಿತಿದ್ದ ಹುಡುಗಿ ಮೇಲೆ ಗ್ಯಾಂಗ್‍ರೇಪ್!

    ನವದೆಹಲಿ: 16 ವರ್ಷದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣವೊಂದು ದೆಹಲಿಯ ಶಹಬಾದ್ ಡೈರಿ (Shahbad Dairy Rape Case) ಪ್ರದೇಶದಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಈ ಘಟನೆ ಜೂನ್ 27ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮದುವೆಯಾಗಲು ಹೆಣ್ಣು ಸಿಗದೆ ಮನನೊಂದು ಯುವಕ ಆತ್ಮಹತ್ಯೆ

    ಸಂತ್ರಸ್ತೆ ತನ್ನ ಗೆಳೆಯನ ಜೊತೆ ರಾತ್ರಿ ಸಮಯದಲ್ಲಿ ಪಾರ್ಕ್‍ನಲ್ಲಿ ಕುಳಿತಿದ್ದಳು. ಹೀಗೆ ಕುಳಿತುಕೊಂಡು ಮಾತನಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಮೂವರು ಎಂಟ್ರಿ ಕೊಡುತ್ತಾರೆ. ಅಲ್ಲದೆ ಕುಳಿತಿರುವ ಇಬ್ಬರ ಜೊತೆ ಮಾತಿಗಿಳಿಯುತ್ತಾರೆ. ಮಾತು ಮಾತಿಗೆ ಬೆಳೆಯುತ್ತಾ ಮೂವರು ಹುಡುಗಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡುತ್ತಾರೆ.

    ತಮ್ಮ ಕಾಮತೃಷೆ ತೀರಿಸಿಕೊಂಡ ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇತ್ತ ಘಟನೆ ಸಂಬಂಧ ದೆಹಲಿ ಪೊಲೀಸರಿಗೆ (Delhi Police) ಮಾಹಿತಿ ರವಾನೆಯಾಗುತ್ತದೆ. ಸ್ಥಳಕ್ಕೆ ಬಂದ ಪೊಲೀಸರು ಹುಡುಗಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇತ್ತ ಕೃತ್ಯ ಎಸಗಿ ಪರಾರಿಯಾಗಿರುವ ಕಾಮುಕರ ಪತ್ತೆಗೆ ಬಲೆ ಬೀಸಿದ್ದಾರೆ.

    ಸದ್ಯ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಎಫ್‍ಐಆರ್ (FIR) ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬೆಂ-ಮೈ ಎಕ್ಸ್‌ಪ್ರೆಸ್‌ವೇಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿ – ದಂಪತಿ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಾರ್ಮೋನ್ ಮಾತ್ರೆ ತೆಗೆದುಕೊಳ್ಳುವಂತೆ ಮಗಳಿಗೆ ಒತ್ತಾಯಿಸಿದ ತಾಯಿ ಅರೆಸ್ಟ್!

    ಹಾರ್ಮೋನ್ ಮಾತ್ರೆ ತೆಗೆದುಕೊಳ್ಳುವಂತೆ ಮಗಳಿಗೆ ಒತ್ತಾಯಿಸಿದ ತಾಯಿ ಅರೆಸ್ಟ್!

    ಹೈದರಾಬಾದ್: ಹಾರ್ಮೋನ್ ಮಾತ್ರೆ ತೆಗೆದುಕೊಳ್ಳುವಂತೆ ಮಗಳಿಗೆ ಒತ್ತಾಯಿಸಿದ ತಾಯಿಯನ್ನು ಆಂಧ್ರಪ್ರದೇಶ (Andhrapradesh) ದ ಪೊಲೀಸರು ಬಂಧಿಸಿದ್ದಾರೆ.

    ಆಂಧ್ರಪ್ರದೇಶ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು 16 ವರ್ಷದ ಹುಡುಗಿ (Girl) ಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ನೋವು ಮತ್ತು ಅಡ್ಡ ಪರಿಣಾಮಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಆಕೆ ಚೈಲ್ಡ್‍ಲೈನ್‍ನ ಸಹಾಯ ಪಡೆದು ದೂರು ದಾಖಲಿಸಿದ್ದಾಳೆ. ಈ ವೇಳೆ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

    ಕಳೆದ ನಾಲ್ಕು ವರ್ಷಗಳಿಂದ ಈ ಹಾರ್ಮೋನ್ ಮಾತ್ರೆ (Hormone Pills) ಗಳನ್ನು ಆಕೆ ಸೇವಿಸುತ್ತಿದ್ದಳು. ಇದರಿಂದಾಗಿ ಪ್ರಜ್ಞಾಹೀನತೆ ಮತ್ತು ದೇಹದಲ್ಲಿ ತೀವ್ರವಾದ ಊತವನ್ನು ಅನುಭವಿಸಿದ್ದಾಳೆ. ಸಿನಿಮಾದಲ್ಲಿ ಅಭಿನಯಿಸುವ ಸಲುವಾಗಿ ದೈಹಿಕ ಬೆಳವಣಿಗೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ತನ್ನ ತಾಯಿ ಒತ್ತಾಯಿಸುತ್ತಿದ್ದಳು ಎಂದು ಹುಡುಗಿ ಬಹಿರಂಗಪಡಿಸಿದ್ದಾಳೆ.

     ಬಲವಂತದ ಔಷಧ ತನ್ನ ಶಿಕ್ಷಣದ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುದನ್ನು ಗೊತ್ತಾದಾಗ ಯುವತಿ ಆಘಾತಕ್ಕೊಳಗಾಗಿದ್ದಾಳೆ. ಮಗಳನ್ನು ಹೇಗಾದ್ರೂ ಮಾಡಿ ಸಿನಿಮಾದಲ್ಲಿ ಅಭಿನಯಿಸುವಂತೆ ಮಾಡಬೇಕು ಎಮದು ಪಣ ತೊಟ್ಟಿರುವ ತಾಯಿ ಕೆಲವೊಂದು ಸಿನಿಮಾ ನಿರ್ಮಾಪಕರ ಜೊತೆ ಸಂಪರ್ಕದಲ್ಲಿದ್ದರು. ಆದರೆ ಇದನ್ನೆಲ್ಲಾ ವಿರೋಧಿಸಿದಾಗ ತಾಯಿ ತನಗೆ ನೀಡಿರುವ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನೂ ಕೂಡ ಆಕೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಇದನ್ನೂ ಓದಿ: ಮಕ್ಕಳ ಮಾಹಿತಿ ಅಕ್ರಮವಾಗಿ ಸಂಗ್ರಹ – 165 ಕೋಟಿ ಪಾವತಿಗೆ ಮುಂದಾದ ಮೈಕ್ರೋಸಾಫ್ಟ್

  • 18 ವರ್ಷಕ್ಕೂ ಮೊದಲೇ ತಾಯಿಯಂದಿರಾದ 15 ಸಾವಿರ ಹೆಣ್ಮಕ್ಕಳು – ಕಾರಣ ಕೇಳಿದ್ರೆ ಶಾಕ್‌!

    18 ವರ್ಷಕ್ಕೂ ಮೊದಲೇ ತಾಯಿಯಂದಿರಾದ 15 ಸಾವಿರ ಹೆಣ್ಮಕ್ಕಳು – ಕಾರಣ ಕೇಳಿದ್ರೆ ಶಾಕ್‌!

    ಮುಂಬೈ: ಇತ್ತೀಚಿನ ದಿನಗಳಲ್ಲಿ ಬಾಲ್ಯವಿವಾಹ (Child Marriage), ಪ್ರೇಮ ವೈಫಲ್ಯ, ಲೈಂಗಿಕ ಹಿತಾಸಕ್ತಿ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಹೆಣ್ಣುಮಕ್ಕಳು 18 ವರ್ಷ ತುಂಬುವ ಮೊದಲೇ ಗರ್ಭ ಧರಿಸುವ ಪ್ರಕರಣಗಳು ಕಂಡುಬರುತ್ತಿವೆ. ಈ ನಡುವೆ ಮಹಾರಾಷ್ಟ್ರದಲ್ಲಿ ಬಿಡುಗಡೆಯಾಗಿರುವ ವರದಿಯೊಂದು ಅಲ್ಲಿನ ಜನರನ್ನೇ ಬೆಚ್ಚಿ ಬೀಳಿಸಿದೆ.

    ಹೌದು. ಬುಡಕಟ್ಟು ಸಮುದಾಯದ ಜನರೇ ಹೆಚ್ಚಿರುವ ಮಹಾರಾಷ್ಟ್ರದ (Maharashtra) 16 ಜಿಲ್ಲೆಗಳಲ್ಲಿ ಕಳೆದ 3 ವರ್ಷಗಳಲ್ಲಿ 15,253 ಹದಿಹರೆಯದ ಹೆಣ್ಣುಮಕ್ಕಳು 18 ವರ್ಷ ಆಗುವ ಮೊದಲೇ ತಾಯಂದಿರಾಗಿದ್ದಾರೆ (Teenage Mother) ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಮಂಗಲ್‌ ಪ್ರಭಾತ್‌ ಲೋಧಾ (Mangal Prabhat Lodha) ತಿಳಿಸಿದ್ದಾರೆ. ಇದನ್ನೂ ಓದಿ: ಮರ್ಸಿಡಿಸ್ ಕಾರಿನಲ್ಲಿ ವೇಷ ಬದಲಿಸಿಕೊಂಡು ಮರೆಯಾದ ಅಮೃತಪಾಲ್ – ಕೊನೇ ಬಾರಿ ಕಾಣಿಸಿದ್ದು ಎಲ್ಲಿ?

    ಮಹಾರಾಷ್ಟ್ರ ವಿಧಾನ ಪರಿಷತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ಸಚಿವರು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 15 ಸಾವಿರಕ್ಕೂ ಹೆಚ್ಚು ಹೆಣ್ಣುಮಕ್ಕಳು ಗರ್ಭಿಣಿಯರಾಗಿರುವುದು ಕಂಡುಬಂದಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಇಲಾಖೆಯು ಮೂರು ಸದಸ್ಯರನ್ನು ಒಳಗೊಂಡ ಸಮತಿ ರಚಿಸಿತ್ತು. ಸಮಿತಿ ನಡೆಸಿದ ತನಿಖೆಯಲ್ಲಿ 15 ಸಾವಿರಕ್ಕೂ ಹೆಚ್ಚು ಬಾಲ್ಯವಿವಾಹಗಳು ನಡೆದಿರುವುದು ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ವಾಣಿಜ್ಯ ವಾಹನಗಳ ಖರೀದಿದಾರರಿಗೆ Tata Motors ಶಾಕ್‌ – ಏಪ್ರಿಲ್‌ 1ರಿಂದ ಬೆಲೆ ಏರಿಕೆ

    ಅಲ್ಲದೇ, 2019 ಮತ್ತು 2021ರ ಅವಧಿಯಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ 152 ಮೊಕದ್ದಮೆ ಹೂಡಿದ್ದು, 136 ಪ್ರಕರಣಗಳು ವಿಚಾರಣೆಯಲ್ಲಿವೆ ಎಂದು ಅವರು ತಿಳಿಸಿದ್ದರು. ಈ ಮಧ್ಯೆ ಸಭಾಧ್ಯಕ್ಷರು ಶೇ.10 ರಷ್ಟು ಬಾಲ್ಯ ವಿವಾಹವನ್ನಾದರೂ ತಡೆಯಲು ಸಾಧ್ಯವಿದೆಯೇ? ಎಂದು ಕೇಳಿದಾಗ, ಲಿಖಿತ ಉತ್ತರದಲ್ಲೇ ಭಾಗಶಃ ಆಗುತ್ತದೆ ಎಂದು ಉತ್ತರಿಸಿದ್ದಾರೆ.

  • ಶ್ರೀಲಂಕಾ ಹುಡುಗಿ ಜೊತೆ ಖ್ಯಾತನಟ ಸಿಂಭು ಮದುವೆ

    ಶ್ರೀಲಂಕಾ ಹುಡುಗಿ ಜೊತೆ ಖ್ಯಾತನಟ ಸಿಂಭು ಮದುವೆ

    ಮಿಳಿನ ಸ್ಟಾರ್ ನಟ ಸಿಲಂಬರಸನ್ ಅಲಿಯಾಸ್ ಸಿಂಭು ಬಗ್ಗೆ ಹೊಸ ಸುದ್ದಿಯೊಂದು ಕಾಲಿವುಡ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ತಡವಾಗಿಯಾದರೂ ಮದುವೆಗೆ ಒಪ್ಪಿಕೊಂಡಿರುವ ಸಿಂಭು, ಶ್ರೀಲಂಕಾದ ಶ್ರೀಮಂತ ಉದ್ಯಮಿಯೊಬ್ಬರ ಮಗಳನ್ನು ಸಿಂಭು ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಎರಡೂ ಕುಟುಂಬಗಳ ಮಾತುಕತೆ ಕೂಡ ಮುಗಿದಿದೆ ಎನ್ನಲಾಗುತ್ತಿದೆ.

    ಸಿಂಭು ಮದುವೆಯಾಗಲು ಹಲವರು ತುದಿಗಾಲಲ್ಲಿ ನಿಂತಿದ್ದರು. ಆದರೆ, ಅಷ್ಟು ಸುಲಭಕ್ಕೆ ಸಿಂಭು ಒಪ್ಪುತ್ತಿರಲಿಲ್ಲ. ಅದಕ್ಕೆ ಅನೇಕ ಕಾರಣಗಳನ್ನು ಹೇಳಲಾಗುತ್ತಿದೆ. ತಮ್ಮ ಜೊತೆ ನಟಿಸಿದ್ದ ಹೆಸರಾಂತ ನಾಯಕಿಯನ್ನು ಅವರು ಪ್ರೀತಿಸುತ್ತಿದ್ದರಂತೆ. ಆದರೆ, ಆಕೆಯನ್ನು ಪಡೆಯಲಾಗಲಿಲ್ಲ ಎನ್ನುವ ನೋವು ಅವರಲ್ಲಿ ಉಳಿದಿತ್ತು ಎಂದು ಹೇಳಲಾಗುತ್ತಿದೆ. ಅಲ್ಲದೇ, ನಯನತಾರಾ, ತ್ರಿಶಾ ಸೇರಿದಂತೆ ಹಲವು ನಾಯಕಿಯರ ಹೆಸರು ಕೂಡ ಸಿಂಭು ಹೆಸರಿನೊಂದಿಗೆ ತಳುಕು ಹಾಕಿಕೊಂಡಿತ್ತು. ಹೀಗಾಗಿ ಅವರು ವಿವಾಹದಿಂದ ದೂರ ಉಳಿಸಿದ್ದರು.

    ಈಗಾಗಲೇ ಸಿಂಭು ಅವರ ಕಿರಿಯ ಸಹೋದರಿ ಮತ್ತು ಸಹೋದರನಿಗೆ ಮದುವೆ ಆಗಿದೆ. ಆದರೂ, ಕೂಡ ಸಿಂಭು ಮದುವೆ ಬಗ್ಗೆ ಯೋಚಿಸಿರಲಿಲ್ಲ. ಈ ಕುರಿತು ಯಾರೇ ಪ್ರಶ್ನೆ ಮಾಡಿದರೂ, ಹಾರಿಕೆಯ ಉತ್ತರಗಳನ್ನು ನೀಡುತ್ತಿದ್ದರು. ಆದಷ್ಟು ಮದುವೆ ಕುರಿತಾಗಿ ಚರ್ಚೆ ಆಗದಂತೆ ನೋಡಿಕೊಳ್ಳುತ್ತಿದ್ದರು. ಇದೀಗ ಮದುವೆ ಆಗಲು ಅವರು ಮುಂದೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಅಪ್ಪು ಹೆಸರಿನಲ್ಲಿ ಮಕ್ಕಳ ಚಿತ್ರೋತ್ಸವ: ಅದ್ಧೂರಿ ಚಾಲನೆ

    ಅಂದುಕೊಂಡಂತೆ ನಡೆದರೆ 42ರ ವಯಸ್ಸಿನ ಸಿಂಭು, ತಮಿಳು ಕುಟುಂಬದ ಶ್ರೀಲಂಕಾ ಉದ್ಯಮಿಯ ಮಗಳ ಜೊತೆ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ. ಆ ಹುಡುಗಿ ವೃತ್ತಿಯಲ್ಲಿ ವೈದ್ಯೆ ಎಂದು ಹೇಳಲಾಗುತ್ತಿದೆ. ಹಲವು ವರ್ಷಗಳಿಂದ ಪರಿಚಯವಿರುವ ಕುಟುಂಬ ಎನ್ನುವುದು ಅವರ ಆಪ್ತರು ಕೊಟ್ಟಿರುವ ಮಾಹಿತಿ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೇರೊಬ್ಬನ ಜೊತೆ ಮೊಬೈಲ್‍ನಲ್ಲಿ ಮಾತನಾಡಿದ್ದಕ್ಕೆ ಪ್ರಿಯತಮೆಯ ಮೇಲೆ ಶೂಟೌಟ್!

    ಬೇರೊಬ್ಬನ ಜೊತೆ ಮೊಬೈಲ್‍ನಲ್ಲಿ ಮಾತನಾಡಿದ್ದಕ್ಕೆ ಪ್ರಿಯತಮೆಯ ಮೇಲೆ ಶೂಟೌಟ್!

    ಲಕ್ನೋ: ತಾನು ಪ್ರೀತಿಸುತ್ತಿರುವ ಹುಡುಗಿ ಬೇರೊಬ್ಬನ ಜೊತೆ ಮೊಬೈಲ್‍ (Mobile) ನಲ್ಲಿ ಮಾತನಾಡಿದ್ದಾಳೆಂದು ಸಿಟ್ಟಿಗೆದ್ದು ಹುಡುಗನೊಬ್ಬ ಆಕೆಗೆ ಶೂಟೌಟ್ (Shootout) ಮಾಡಿ ನಂತರ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರಪ್ರದೇಶ (Uttarpradesh) ದಲ್ಲಿ ನಡೆದಿದೆ.

    ಈ ಘಟನೆ ಉತ್ತರಪ್ರದೇಶದಲ್ಲಿ ಮಾನ್ವಿ ಭಾನ್‍ಪುರ್ ಪ್ರದೇಶದಲ್ಲಿ ನಡೆದಿದೆ. ಸದ್ಯ ಘಟನೆಯಿಂದ ಹುಡುಗಿಯ ಸ್ಥಿತಿ ಚಿಂತಾಜನಕವಾಗಿದ್ದು, ಮೀರತ್‍ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇದನ್ನೂ ಓದಿ: ಕಾರು ಡಿಕ್ಕಿಯಾಗಿ 30 ಕುರಿಗಳು ಸಾವು- ಮೂವರಿಗೆ ಗಾಯ

    ಆರೋಪಿಯನ್ನು ಪವನ್ ಕುಮಾರ್ (18) ಎಂದು ಗುರುತಿಸಲಾಗಿದೆ. ಈತ ತಾನು ಪ್ರೀತಿಸಿದ ಹುಡುಗಿ ಬೇರೊಬ್ಬನ ಜೊತೆ ಮೊಬೈಲ್ (Mobile) ನಲ್ಲಿ ಮಾತನಾಡಿದ್ದಾಳೆ ಎಂದು ರೊಚಿಗೆದ್ದು, ಆಕೆ ಶಾಲೆ ಮುಗಿಸಿ ಆಟೋದಲ್ಲಿ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಈ ಕೃತ್ಯ ಎಸಗಿದ್ದಾನೆ. ನಂತರ ತಾನೂ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಹುಡುಗಿಯ ಮುಖಕ್ಕೆ ಯುವಕ ಪವನ್ ಶೂಟೌಟ್ ಮಾಡಿದ್ದಾನೆ. ಘಟನೆ ನಡೆದ ಕೂಡಲೇ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೀರತ್ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಎಸ್‍ಪಿ ಆದಿತ್ಯ ಲಂಘೇ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೇಶದ ಹುಡುಗಿಯರು ಉರ್ಫಿ ಜಾವೇದ್ ನೋಡಿ ಕಲಿಯಿರಿ : ಯೋ ಯೋ ಹನಿ ಸಿಂಗ್

    ದೇಶದ ಹುಡುಗಿಯರು ಉರ್ಫಿ ಜಾವೇದ್ ನೋಡಿ ಕಲಿಯಿರಿ : ಯೋ ಯೋ ಹನಿ ಸಿಂಗ್

    ನ್ನ ವಿಚಿತ್ರ ಕಾಸ್ಟ್ಯೂಮ್ ಮೂಲಕ ಬಾಲಿವುಡ್ ಸಿನಿ ರಂಗದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಉರ್ಫಿ ಜಾವೇದ್ ಮೇಲೆ ಉರಿದುಕೊಂಡವರೇ ಹೆಚ್ಚು. ಅವಳು ಧರಿಸುವ ಅರೆಬರೆ ಬಟ್ಟೆಯ ಬಗ್ಗೆ ಸಾಕಷ್ಟು ದೂರುಗಳು ಇವೆ. ಈ ವಿಚಾರವಾಗಿ ಅವಳು ಪೊಲೀಸ್ ಸ್ಟೇಶನ್ ಮೆಟ್ಟಿಲೂ ಹತ್ತಿದ್ದಾರೆ. ದುಬೈನಲ್ಲಿ ಪೊಲೀಸ್ ವಿಚಾರಣೆಗೂ ಒಳಗಾಗಿದ್ದಾರೆ. ಸದಾ ವಿವಾದವನ್ನೇ ಬೆನ್ನತ್ತಿ ಹೋಗುವ ಉರ್ಫಿ ಬಗ್ಗೆ ಮೊದಲ ಬಾರಿಗೆ ವ್ಯಕ್ತಿಯೊಬ್ಬರು ಹೆಮ್ಮೆಯಿಂದ ಮಾತನಾಡಿದ್ದಾರೆ. ಅವರನ್ನು ಮಾದರಿಯಾಗಿ ತಗೆದುಕೊಳ್ಳುವಂತೆ ಕರೆಕೊಟ್ಟಿದ್ದಾರೆ.

    ಬಾಲಿವುಡ್ ಸಿಂಗರ್ ಯೋ ಯೋ ಹನಿ ಸಿಂಗ್, ಸದ್ಯ ತಮ್ಮ ಆಲ್ಬಂವೊಂದರ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ಉರ್ಫಿ ಜಾವೇದ್ ಬಗ್ಗೆ ಹಾಡಿಹೊಗಳಿದ್ದಾರೆ. ಉರ್ಫಿ ತನ್ನಿಷ್ಟದಂತೆ ಬದುಕುತ್ತಿರುವ ನಟಿ. ತುಂಬಾ ಧೈರ್ಯವಂತೆ. ಯಾರಿಗೂ ಹೆದರದೇ ತನ್ನ ಬದುಕನ್ನು ಕಟ್ಟಿಕೊಂಡಿದ್ದಾಳೆ. ಹಾಗಾಗಿ ದೇಶದ ಹುಡುಗಿಯರು ಅವಳನ್ನು ನೋಡಿ ಕಲಿತುಕೊಳ್ಳಬೇಕು’ ಎಂದು ಅಚ್ಚರಿಯ ಹೇಳಿಕೆಯನ್ನು ಕೊಟ್ಟಿದ್ದಾರೆ. ಇದನ್ನೂ ಓದಿ: ನೋರಾ ಫತೇಹಿ ಜೊತೆಗಿನ ಡೇಟಿಂಗ್ ವದಂತಿ ಬೆನ್ನಲ್ಲೇ ಪಾಕಿಸ್ತಾನ ನಟಿಯ ಜೊತೆ ಆರ್ಯನ್ ಖಾನ್ ಪಾರ್ಟಿ

    ಹನಿ ಸಿಂಗ್ ಇಂಥದ್ದೊಂದು ಮಾತು ಹೇಳುತ್ತಿದ್ದಂತೆಯೇ ಬಾಲಿವುಡ್ ನ ಅನೇಕರು ಗರಂ ಆಗಿದ್ದಾರೆ. ದೇಶದ ಹೆಣ್ಣು ಮಕ್ಕಳು ಯಾರನ್ನು ಮಾದರಿಯಾಗಿ ತಗೆದುಕೊಳ್ಳಬೇಕು ಎಂದು ಗೊತ್ತಿದೆ. ಹನಿ ಸಿಂಗ್ ಬೇಕಾದರೆ ಉರ್ಫಿಯನ್ನು ಮಾದರಿಯಾಗಿ ತಗೆದುಕೊಳ್ಳಲಿ ಎನ್ನುವ ಮಾತುಗಳನ್ನು ಆಡಿದ್ದಾರೆ. ಉರ್ಫಿ ಒಬ್ಬ ಮಾನಸಿಕ ಖಾಯಿಲೆ ಇರುವ ಹುಡುಗಿ. ಆಕೆ ಬದುಕು ಯಾವತ್ತಿಗೂ ಮಾದರಿ ಆಗುವಂಥದ್ದು ಅಲ್ಲ ಎಂದಿದ್ದಾರೆ.

    ಅಶ್ಲೀಲ ರೀತಿಯ ಬಟ್ಟೆಗಳನ್ನು ಉರ್ಫಿ ಹಾಕುತ್ತಾರೆ ಎನ್ನುವ ಕಾರಣಕ್ಕಾಗಿ ಮುಂಬೈ ಸೇರಿದಂತೆ ಹಲವು ಕಡೆ ದೂರುಗಳು ದಾಖಲಾಗಿವೆ. ಈ ಕುರಿತು ಉರ್ಫಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮೇಲೆ ಎಷ್ಟೇ ದೂರುಗಳು ಬಂದರೂ, ನನ್ನನ್ನು ಬದಲಿಸಲು ಆಗುವುದಿಲ್ಲ. ನಾನು ಹೇಗಿರಬೇಕೋ ಹಾಗೆಯೇ ಇರುವೆ. ಅದು ನನ್ನ ಸ್ವಾತಂತ್ರ್ಯ. ಯಾವ ದೂರಿಗೂ ನಾನು ಹೆದರುವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದುವೆಯಾಗಲು ಹೆಣ್ಣು ಸಿಗಲ್ಲವೆಂದು ಸ್ಮಶಾನದಲ್ಲೇ ಬೆಂಕಿ ಹಚ್ಚಿಕೊಂಡ ಯುವಕ!

    ಮದುವೆಯಾಗಲು ಹೆಣ್ಣು ಸಿಗಲ್ಲವೆಂದು ಸ್ಮಶಾನದಲ್ಲೇ ಬೆಂಕಿ ಹಚ್ಚಿಕೊಂಡ ಯುವಕ!

    ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಮದುವೆ (Marriage) ಯಾಗಲು ಹೆಣ್ಣು ಸಿಗುತ್ತಿಲ್ಲವೆಂದು ಗಮಡು ಮಕ್ಕಳ ಆರೋಪ ಇದೆ. ಅಂತೆಯೇ ಇದೀಗ ಹುಬ್ಬಳ್ಳಿಯಲ್ಲಿ ಇದೇ ಕಾರಣಕ್ಕೆ ಯುವಕನೊಬ್ಬ ಸುಡುಗಾಡಿನಲ್ಲೇ ಬೆಂಕಿ ಹಚ್ಚಿಕೊಂಡ ಪ್ರಸಂಗವೊಂದು ನಡೆದಿದೆ.

    ಹುಬ್ಬಳ್ಳಿ ತಾಲೂಕಿನ ಅಮ್ಮಿನಬಾವಿಯಲ್ಲಿ ಈ ಘಟನೆ ನಡೆದಿದೆ. ಯುವಕನನ್ನು ಸಂತೋಷ ಕೊರಡಿ (30) ಎಂದು ಗುರುತಿಸಲಾಗಿದೆ. ತನಗೆ ವಯಸ್ಸಾದರೂ ಮದುವೆಗೆ ಕನ್ಯೆ (Girl) ಸಿಗಲಿಲ್ಲವೆಂದು ಯುವಕ ನೊಂದಿದ್ದನು. ಅಲ್ಲದೆ ಮದುವೆ ಮಾಡಿಲ್ಲ ಎಂದು ಮನನೊಂದು ಮಾನಸಿಕ ಅಸ್ವಸ್ಥನಾಗಿದ್ದನು. ಇದನ್ನೂ ಓದಿ: BREAKING: ಕೊನೆಗೂ ಗುಡ್ ನ್ಯೂಸ್ ಕೊಟ್ರು ನರೇಶ್, ಪವಿತ್ರಾ: ಮದುವೆ ಡೇಟ್ ಫಿಕ್ಸ್

    ಇದೇ ಬೇಜಾರಿಂದ ಸ್ಮಶಾನದಲ್ಲಿ ಪೆಟ್ರೋಲ್ (Petrol) ಸುರಿದುಕೊಂಡು ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬೆಂಕಿಯು ದೇಹದ ಹಲವು ಭಾಗವನ್ನು ಸುಟ್ಟು ಹಾಕಿದೆ. ದೇಹದ 50% ಭಾಗವು ಸುಟ್ಟು ಕರಕಲು ಆಗಿದ್ದು ಪ್ರಾಣಾಪಾಯಮದಿಂದ ಪಾರಾಗಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಯುವಕನಿಗೆ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಎಂಗೇಜ್ಮೆಂಟ್ ಆದ್ಮೇಲೆ ನಿನ್ನ ಮದುವೆ ಆಗ್ತೀನಂತ ಕಾಡ್ತಿದ್ದ ಯುವತಿ – ಮನೆಬಿಟ್ಟು ಮಾಯವಾದ ಮರೆಪ್ಪ

    ಎಂಗೇಜ್ಮೆಂಟ್ ಆದ್ಮೇಲೆ ನಿನ್ನ ಮದುವೆ ಆಗ್ತೀನಂತ ಕಾಡ್ತಿದ್ದ ಯುವತಿ – ಮನೆಬಿಟ್ಟು ಮಾಯವಾದ ಮರೆಪ್ಪ

    ಕಲಬುರಗಿ: ನಿನ್ನೆ ಮದುವೆ (Marriage) ಆಗ್ತೇನೆ, ಎಂಗೇಜ್ಮೆಂಟ್ ಕ್ಯಾನ್ಸಲ್ ಮಾಡಿಕೊಂಡು ಬಾ ಎಂದು ಕಾಡ್ತಿದ್ದ ಯುವತಿ ಕಾಟಕ್ಕೆ ಬೇಸತ್ತು ಅಪ್ಪ-ಅಮ್ಮನನ್ನು ಬಿಟ್ಟು ಓಡಿಹೋಗಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಹರವಾಳ ಗ್ರಾಮದಲ್ಲಿ ನಡೆದಿದೆ.

    ಕಲಬುರಗಿ ಜಿಲ್ಲೆಯ ಹರವಾಳ ಗ್ರಾಮದ ಮರೆಪ್ಪಾ ಮನೆಯಿಂದ ನಾಪತ್ತೆಯಾದ ಯುವಕ. ಇದನ್ನೂ ಓದಿ: ಶ್ರದ್ಧಾಳನ್ನ ಕೊಂದು ಗೆಳತಿಯೊಂದಿಗೆ ಸೆಕ್ಸ್- ಡಾಕ್ಟರ್ ಜೊತೆ ಡೇಟಿಂಗ್ ಮಾಡ್ತಿದ್ದ ಅಫ್ತಾಬ್

    ಹೆಣ್ಣು ನೋಡೊಕೆ ಹೋದಾಗ ಹುಡುಗ ಇಷ್ಟವಿಲ್ಲ ಎಂದು ಮರೆಪ್ಪನನ್ನು ತಿರಸ್ಕರಿಸಿದ್ದ ಯುವತಿ ಮತ್ತೊಂದು ಹುಡುಗಿಯನ್ನ ನೋಡಿ ಎಂಗೆಜ್ಮೆಂಟ್ ಆದ್ಮೇಲೆ ಕಾಟ ಕೊಡಲು ಶುರು ಮಾಡಿದ್ದಾಳೆ. ನಿನ್ನೇ ಮದುವೆ ಆಗ್ತೇನೆ, ನಿನ್ನ ಎಂಗೇಜ್ಮೆಂಟ್ ಕ್ಯಾನ್ಸಲ್ ಮಾಡಿಕೊಂಡು ಬಾ ಎಂದು ಯುವತಿ ನಿರಂತರವಾಗಿ ಕಾಡಲು ಶುರು ಮಾಡಿದ್ದಾಳೆ. ಯುವತಿಯ ಕಾಟಕ್ಕೆ ಬೇಸತ್ತು ಮರೆಪ್ಪ ಮನೆ ಬಿಟ್ಟೇ ಹೋಗಿದ್ದಾನೆ. ಇದನ್ನೂ ಓದಿ: ಶ್ರದ್ಧಾಳನ್ನ ಕೊಂದು ಗೆಳತಿಯೊಂದಿಗೆ ಸೆಕ್ಸ್- ಡಾಕ್ಟರ್ ಜೊತೆ ಡೇಟಿಂಗ್ ಮಾಡ್ತಿದ್ದ ಅಫ್ತಾಬ್

    ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಹರವಾಳ ಗ್ರಾಮದ ಮರೆಪ್ಪ ಬೀದರ್ (Bidar) ಜಿಲ್ಲಾ ಪಂಚಾಯ್ತಿಯಲ್ಲಿ ನರೇಗಾ ಸಂಯೋಜಕನಾಗಿ ಕೆಲಸ ಮಾಡ್ತಿದ್ದ. ಸ್ನೇಹಿತರ ಜೊತೆ ಸೇರಿಕೊಂಡು ಬೀದರ್ ನಲ್ಲೆ ಹುಡುಗಿ ನೋಡಿದ್ದ. ಆ ಯುವತಿ ಹುಡುಗ ಸರಿ ಇಲ್ಲ ಅಂತಾ ತಿರಸ್ಕರಿಸಿದ್ದಳು. ನಂತರ ಮರೆಪ್ಪ ಮತ್ತೊಂದು ಹುಡುಗಿಯನ್ನು ನೋಡಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದ.

    ಈ ಮಧ್ಯೆ ಹಳೆ ಹುಡುಗಿ ಸಿಕ್ಕು ಇಬ್ಬರ ಮಧ್ಯೆ ಸ್ನೇಹ ಬೇಳೆದಿತ್ತು. ಇಬ್ಬರು ಫೋನ್‌ನಂಬರ್ ಬದಲಾಯಿಸಿಕೊಂಡು ಫೋನ್, ಮೆಸೇಜ್ ಮಾಡುತ್ತಿದ್ದರು. ಆದರೆ, ಕೆಲ ದಿನಗಳ ಬಳಿಕ ನಿಶ್ಚಿತಾರ್ಥ ವಿಷಯ ತಿಳಿದು ರಿಜೆಕ್ಟ್ ಮಾಡಿದ್ದ ಯುವತಿ ಮತ್ತೆ ಮದುವೆಯಾಗುವಂತೆ ಒತ್ತಾಯ ಮಾಡಿದ್ದಳು. ಯವತಿಯ ಕಾಟಕ್ಕೆ ಬೇಸತ್ತ ಯುವಕ ನವೆಂಬರ್ 13 ರಂದು ಮನೆ ಬಿಟ್ಟು ತೆರಳಿದ್ದಾನೆ.

    ಐದು ಪುಟಗಳ ಪತ್ರ ಬರೆದು, ಮೊಬೈಲ್ ಫೋನ್ (Mobile Phone) ಮನೆಯಲ್ಲೇ ಬಿಟ್ಟು ನಾಪತ್ತೆಯಾಗಿದ್ದಾನೆ. ಇತ್ತ ವೃದ್ಧ ತಂದೆ ತಾಯಿ ಬಿಟ್ಟು ಹೋದ ಮಗನಿಗಾಗಿ ಕಣ್ಣಿರು ಹಾಕುತ್ತಾ ಕಾಯುತ್ತಿದ್ದಾರೆ. ನೆಲೋಗಿ ಪೊಲೀಸ್ ಠಾಣೆಯಲ್ಲಿ (Police Station) ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]