Tag: ಹುಡುಗರು

  • ಹಸೆಮಣೆ ಏರಿದ ‘ಹುಡುಗರು’ ಚಿತ್ರದ ವಿಶೇಷ ಚೇತನ ನಟಿ ಅಭಿನಯ

    ಹಸೆಮಣೆ ಏರಿದ ‘ಹುಡುಗರು’ ಚಿತ್ರದ ವಿಶೇಷ ಚೇತನ ನಟಿ ಅಭಿನಯ

    ಪುನೀತ್ ರಾಜ್‌ಕುಮಾರ್ ಜೊತೆ ‘ಹುಡುಗರು’ (Hudugaru Film) ಸಿನಿಮಾದಲ್ಲಿ ನಟಿಸಿದ್ದ ಅಭಿನಯ (Abhinaya) ಏ.16ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯನ ಜೊತೆ ನಟಿ ಮದುವೆಯಾಗಿದ್ದಾರೆ. ಇದನ್ನೂ ಓದಿ:ಕನ್ನಡದಲ್ಲಿ ನಟಿಸಲು ಹಲವು ಕಥೆಗಳನ್ನು ಕೇಳಿದ್ದೆ, ಯಾವುದು ಇಷ್ಟವಾಗಿಲ್ಲ: ಪೂಜಾ ಹೆಗ್ಡೆ

    15 ವರ್ಷಗಳ ಪ್ರೀತಿಗೆ ನಟಿ ಮದುವೆಯ ಮುದ್ರೆ ಒತ್ತಿದ್ದಾರೆ. ಹೈದರಾಬಾದ್‌ನಲ್ಲಿ ಗೆಳೆಯ ವೆಗೆಶನಾ ಕಾರ್ತಿಕ್ (Vegesana Karthik) ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ನವಜೋಡಿ ಹೊಸ ಬಾಳಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಇದನ್ನೂ ಓದಿ:ಕೊನೆಗೂ ಭಾವಿ ಪತಿಯ ಫೋಟೋ ಹಂಚಿಕೊಂಡ ‘ಹುಡುಗರು’ ಚಿತ್ರದ ನಟಿ ಅಭಿನಯ

    ಮಾರ್ಚ್ 9ರಂದು ಗೆಳೆಯ ವೆಗೆಶನಾ ಕಾರ್ತಿಕ್ ಜೊತೆ ಅಭಿನಯ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಆದರೆ ಹುಡುಗನ ಹಿನ್ನೆಲೆ ಮತ್ತು ಮದುವೆ ಯಾವಾಗ ಎಂದು ರಿವೀಲ್ ಮಾಡಿರಲಿಲ್ಲ. ಈಗ ನಟಿಯ ಮದುವೆ ಸುದ್ದಿ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

  • 15-20 ಹುಡುಗರು ಉದ್ದೇಶಪೂರ್ವಕವಾಗಿ ಮೋರ್ಬಿ ಸೇತುವೆಯನ್ನು ಅಲುಗಾಡಿಸಿದ್ದೆ ದುರಂತಕ್ಕೆ ಕಾರಣ: ಪ್ರತ್ಯಕ್ಷದರ್ಶಿ

    15-20 ಹುಡುಗರು ಉದ್ದೇಶಪೂರ್ವಕವಾಗಿ ಮೋರ್ಬಿ ಸೇತುವೆಯನ್ನು ಅಲುಗಾಡಿಸಿದ್ದೆ ದುರಂತಕ್ಕೆ ಕಾರಣ: ಪ್ರತ್ಯಕ್ಷದರ್ಶಿ

    ಗಾಂಧಿನಗರ: ಸುಮಾರು 15-20 ಹುಡುಗರು ಉದ್ದೇಶಪೂರ್ವಕವಾಗಿ ಮೋರ್ಬಿ ತೂಗುಸೇತುವೆ (Morbi Bridge) ಅಲುಗಾಡಿಸಿದ್ದರಿಂದ ಅವಘಡ ಸಂಭವಿಸಿದೆ ಎಂದು ಘಟನೆಯಲ್ಲಿ ಬದುಕುಳಿದವರು ಆರೋಪಿಸಿದ್ದಾರೆ.

    ಭಾನುವಾರ ಸಂಜೆ 6:30ರ ಸುಮಾರಿಗೆ ಸೇತುವೆ ಕುಸಿದು 132 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೋರ್ಬಿ ಸೇತುವೆ ಕುಸಿತದಿಂದ ಗಾಯಗೊಂಡು ಬದುಕುಳಿದವರೆಲ್ಲರನ್ನು ಜಿಎಂಇಆರ್‌ಎಸ್ (GMERS) ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಹೇಗಾಯ್ತು ಎಂಬುದರ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಅಜ್ಜಿಯ ಅಖಂಡ ಭಾರತದ ಕನಸನ್ನು ಈಡೇರಿಸುತ್ತೇನೆ: ರಾಹುಲ್ ಗಾಂಧಿ ಭಾವನಾತ್ಮಕ ಪೋಸ್ಟ್

    ಸುಮಾರು 15-20 ಕಿಡಿಗೇಡಿಗಳು ಸೇತುವೆಯ ಹಗ್ಗಗಳನ್ನು ಉದ್ದೇಶಪೂರ್ವಕವಾಗಿ ಅಲುಗಾಡಿಸುತ್ತಿದ್ದರು. ಹೀಗಾಗಿ ಸೇತುವೆ ಕುಸಿಯುವ ಮುನ್ನ ಮೂರು ಬಾರಿ ಜೋರಾಗಿ ಶಬ್ದ ಕೇಳಿ ಬಂತು. ನಾನೂ ಕೆಳಗೆ ಬಿದ್ದೆ. ಆದರೆ ನಾನು ಬೀಳುವಾಗ ಸೇತುವೆಯ ಸುತ್ತಲೂ ಇದ್ದ ರೋಪ್ ಹಿಡಿದಿದ್ದೆ. ನನ್ನ ಜೊತೆಯಲ್ಲಿ ನನ್ನ ಸ್ನೇಹಿತನೂ ಇದ್ದ. ಸುಮಾರು ಏಳು ಜನ ರೋಪ್ ಅನ್ನು ಹಿಡಿದು ಮೇಲಕ್ಕೆ ಏರಲು ಆರಂಭಿಸಿದರು. ಘಟನೆ ವೇಳೆ ನನ್ನ ಕಾಲು ಮತ್ತು ಬೆನ್ನಿಗೆ ಗಾಯಗಳಾಗಿದ್ದು, ಇದೀಗ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಅಶ್ವಿನ್ ಮೆಹ್ರಾ ಎಂಬವರು ಹೇಳಿದ್ದಾರೆ.

    ಅಹಮದಾಬಾದ್ (Ahlahabad) ನಿವಾಸಿ ವಿಜಯ್ ಗೋಸ್ವಾಮಿ ಮತ್ತು ಅವರ ಕುಟುಂಬಸ್ಥರು ಸಹ ತೂಗು ಸೇತುವೆಗೆ ಭೇಟಿ ನೀಡಿದ್ದರು. ಆದರೆ ಕೆಲವು ಯುವಕರು ಉದ್ದೇಶಪೂರ್ವಕವಾಗಿ ಸೇತುವೆಯನ್ನು ಅಲುಗಾಡಿಸಿದ್ದರಿಂದ ಅರ್ಧದಾರಿಯಲ್ಲೇ ಹಿಂತಿರುಗಿದರು. ಬ್ರಿಟಿಷರ ಕಾಲದ ಈ ಸೇತುವೆಯನ್ನು ನವೀಕರಣಗೊಳಿಸಿ ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಸಾರ್ವಜನಿಕರಿಗಾಗಿ ಪುನಃ ತೆರೆಯಲಾಗಿತ್ತು. ಇದನ್ನೂ ಓದಿ: ಪೊಲೀಸರೇ ಪ್ಲೀಸ್ ನಮ್ಮನ್ನು ಕಳ್ಳರಿಂದ ಕಾಪಾಡಿ – ಕುರಿಗಳಿಂದ ವಿನೂತನ ಪ್ರತಿಭಟನೆ

    ಖಾಸಗಿ ಕಂಪನಿಯೊಂದು ಸೇತುವೆ ದುರಸ್ತಿ ಕಾರ್ಯ ನಡೆಸಿತ್ತು. ನವೀಕರಣ ಕಾಮಗಾರಿ ಮುಗಿದ ಬಳಿಕ ಸಾರ್ವಜನಿಕರು ಓಡಾಟಕ್ಕೆ ತೆರಯಲಾಗಿತ್ತು. ಆದರೆ ಸ್ಥಳೀಯ ಪುರಸಭೆ ನವೀಕರಣ ಕಾರ್ಯದ ನಂತರ ಯಾವುದೇ ಫಿಟ್‍ನೆಸ್ ಪ್ರಮಾಣಪತ್ರವನ್ನು ನೀಡಿರಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹುಡುಗರ ಲೈಂಗಿಕ ಸಾಮರ್ಥ್ಯ ಎರಡೇ ನಿಮಿಷ, ಮ್ಯಾಗಿ ಹಾಗೆ ಮುಗಿದು ಹೋಗತ್ತೆ: ಶಾಕಿಂಗ್ ಹೇಳಿಕೆ ಕೊಟ್ಟ ನಟಿ ರೆಜಿನಾ

    ಹುಡುಗರ ಲೈಂಗಿಕ ಸಾಮರ್ಥ್ಯ ಎರಡೇ ನಿಮಿಷ, ಮ್ಯಾಗಿ ಹಾಗೆ ಮುಗಿದು ಹೋಗತ್ತೆ: ಶಾಕಿಂಗ್ ಹೇಳಿಕೆ ಕೊಟ್ಟ ನಟಿ ರೆಜಿನಾ

    ನ್ನಡದ ‘ಸೂರ್ಯಕಾಂತಿ’ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ಮಾಡಿರುವ ರೆಜಿನಾ ಕಸೆಂದ್ರ (Regina Cassandra), ಹುಡುಗರ ಲೈಂಗಿಕ ಸಾಮರ್ಥ್ಯವನ್ನು ಎರಡೇ ಎರಡು ನಿಮಿಷದಲ್ಲಿ ಮುಗಿದು ಹೋಗುವ ಮ್ಯಾಗಿಗೆ ಹೋಲಿಸಿದ್ದಾರೆ. ಹುಡುಗರು ಮತ್ತು ಮ್ಯಾಗಿ ಎರಡೂ ಒಂದೇ, ಎರಡೇ ನಿಮಿಷದಲ್ಲಿ ಮುಗಿದು ಬಿಡುತ್ತೆ ಎಂದು ಜೋಕ್ ಮಾಡುವ ಮೂಲಕ ಟ್ರೋಲ್ ಆಗಿದ್ದಾರೆ. ಈ ಮಾತು ಪಡ್ಡೆಗಳನ್ನು ರೊಚ್ಚಿಗೇಳುವಂತೆ ಮಾಡಿದ್ದು, ರೆಜಿನಾ ಬಗ್ಗೆ ಸಲ್ಲದ ಕಾಮೆಂಟ್‍ಗಳನ್ನು ಬರೆಯುತ್ತಿದ್ದಾರೆ.

    ಸದ್ಯ ರೆಜಿನಾ ಶಾಕಿನಿ ಡಾಕಿನಿ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರವು ಬಿಡುಗಡೆಗೆ ಸಿದ್ಧವಾಗಿದೆ. ಹಾಗಾಗಿ ಕೋ ಸ್ಟಾರ್ ನಿವೇತಾ ಥಾಮಸ್ ಜೊತೆ ಭರ್ಜರಿಯಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಇದೇ ಸಂದರ್ಭದಲ್ಲಿ ನಡೆದ ಸಂದರ್ಶನವೊಂದರಲ್ಲಿ ರೆಜಿನಾ ಹುಡುಗರ ಸೆಕ್ಸ್ (Sex) ಸಾಮರ್ಥ್ಯವನ್ನು ಅಳೆದಿದ್ದಾರೆ. ಅದು ಎರಡೇ ನಿಮಿಷದಲ್ಲಿ ಮುಗಿಯುವಂಥದ್ದು ಎಂದು ಹೇಳುವ ಮೂಲಕ ಇಡೀ ಸಂದರ್ಶನದ ಮೂಡ್ ಅನ್ನು ಮತ್ತೊಂದು ದಿಕ್ಕಿಗೆ ತಗೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ:ಬಿಕಿನಿಯಲ್ಲಿ `ಲೈಗರ್’ ಬ್ಯೂಟಿ ಅನನ್ಯಾ ಪಾಂಡೆ ಮಿಂಚಿಂಗ್

    ಸಂದರ್ಶನದಲ್ಲಿ ನಿರೂಪಕರು ಒಂದು ಜೋಕ್ ಹೇಳ್ತಾ, ಮ್ಯಾಗಿ ಎರಡೇ ನಿಮಷದಲ್ಲಿ ರೆಡಿಯಾದರೂ, ಹುಡುಗಿಯರ ಮೇಕಪ್ ಮಾತ್ರ ಬೇಗ ಆಗುವುದೇ ಇಲ್ಲ ಎಂದು ಹೇಳುತ್ತಾರೆ. ಮ್ಯಾಗಿ (Maggie) ಬಗ್ಗೆ ನನಗೂ ಒಂದು ಜೋಕ್ ಗೊತ್ತು ಎನ್ನುವ ರೆಜಿನಾ, ಮ್ಯಾಗಿ ಎರಡೇ ನಿಮಿಷದಲ್ಲಿ ಮುಗಿದು ಹೋಗತ್ತೆ, ಹಾಗೆ ಹುಡುಗರದ್ದು (Boys) ಕೂಡ ಎರಡೇ ನಿಮಿಷ ಎಂದು ಜೋಕ್ ಕಟ್ ಮಾಡುತ್ತಾರೆ. ಇದು ನಿರೂಪಕನಿಗೆ ಮೊದ ಮೊದಲು ಗೊತ್ತೇ ಆಗುವುದಿಲ್ಲ. ಅಷ್ಟಕ್ಕೆ ಸುಮ್ಮನಿರದ ರೆಜಿನಾ, ನಿಮಗೆ ಜೋಕ್ ಅರ್ಥ ಆಗಲಿಲ್ಲವಾ? ಅಂತಾರೆ. ತಡವಾಗಿ ಅರ್ಥ ಮಾಡಿಕೊಂಡ ನಿರೂಪಕ, ಅಯ್ಯ.. ಈ ವಿಷಯವೇ ಬೇಡ ಎಂದು ಬೇರೆ ಪ್ರಶ್ನೆ ಮಾಡುತ್ತಾನೆ.

    ರೆಜಿನಾ ಕನ್ನಡ ಸಿನಿಮಾ ರಂಗಕ್ಕೆ ಹೊಸಬರೇನೂ ಅಲ್ಲ. ಚೇತನ್ ನಟನೆಯ ‘ಸೂರ್ಯಕಾಂತಿ’ ಚಿತ್ರದಲ್ಲಿ ನಟಿಸಿದ್ದಾರೆ. ಕೆ.ಎಂ. ಚೈತನ್ಯ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡಿತ್ತು. ಚೇತನ್ ಅವರಿಗೆ ಒಳ್ಳೆಯ ಹೆಸರು ತಂದು ಕೊಟ್ಟಿತ್ತು.

    Live Tv
    [brid partner=56869869 player=32851 video=960834 autoplay=true]

  • ಹೆಚ್ಚು ಹುಡುಗರೊಂದಿಗೆ ಮಾತಾಡ್ತಾಳೆ ಅಂತ ಮಗಳನ್ನೇ ಕೊಂದ ಪೋಷಕರು

    ಹೆಚ್ಚು ಹುಡುಗರೊಂದಿಗೆ ಮಾತಾಡ್ತಾಳೆ ಅಂತ ಮಗಳನ್ನೇ ಕೊಂದ ಪೋಷಕರು

    ಲಕ್ನೋ: ತಮ್ಮ ಮಗಳು ಹಲವಾರು ಹುಡುಗರೊಂದಿಗೆ ಮಾತನಾಡುತ್ತಾಳೆ ಮತ್ತು ಅಸಭ್ಯವಾಗಿ ವರ್ತಿಸುತ್ತಾಳೆ ಎಂದು ಕೋಪಗೊಂಡ ಪೋಷಕರು ಆಕೆಯನ್ನು ಕಾಲುವೆಗೆ ತಳ್ಳಿ ಹತ್ಯೆಗೈದಿರುವ ಘಟನೆ ಮೀರತ್‍ನಲ್ಲಿ ನಡೆದಿದೆ.

    crime

    ಈ ಕುರಿತಂತೆ ವಿಚಾರಣೆ ವೇಳೆ ತಮ್ಮ ಮಗಳು “ಹಲವು ಹುಡುಗರೊಂದಿಗೆ ಮಾತನಾಡುತ್ತಿದ್ದಳು ಮತ್ತು ಅಸಭ್ಯ ಸನ್ನೆಗಳನ್ನು ಮಾಡುತ್ತಿದ್ದಳು. ಇದರಿಂದಾಗಿ ಕೋಪಗೊಂಡು ಆಕೆಯನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದೇವೆ ಎಂದು ದಂಪತಿ ಪೊಲೀಸರ ಮುಂದೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆದರೆ ಬಾಲಕಿಯ ಶವ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೇಶವ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಮಹಾಮಳೆಗೆ ನಲುಗಿದ ರಾಜ್ಯ ರಾಜಧಾನಿ- 100ಕ್ಕೂ ಹೆಚ್ಚು ಮನೆಗೆ ನುಗ್ಗಿದ ನೀರು, ಕೆರೆಯಂತಾದ ರಸ್ತೆಗಳು

    ಐದನೇ ತರಗತಿಯಲ್ಲಿ ಓದುತ್ತಿದ್ದ ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಬಬ್ಲೂ ಮತ್ತು ಆತನ ಪತ್ನಿ ರೂಬಿ ಸೆಪ್ಟೆಂಬರ್ 1 ರಂದು ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ಈ ಘಟನೆ ಸಂಬಂಧ ತನಿಖೆ ನಡೆಸಿದ ಪೊಲೀಸರಿಗೆ ಪೋಷಕರೇ ಆರೋಪಿಗಳು ಎಂದು ತಿಳಿದುಬಂದಿದ್ದು ಇದೀಗ ಅವರನ್ನು ಬಂಧಿಸಿದ್ದಾರೆ. ತಮ್ಮ ಮಗಳನ್ನು ಕಾಲುವೆಗೆ ತಳ್ಳಿರುವುದಾಗಿ ದಂಪತಿ ತಪ್ಪೊಪ್ಪಿಕೊಂಡ ಹಿನ್ನೆಲೆ ಸದ್ಯ ಬಾಲಕಿಯ ಶವವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಾಲ್ ಟಿಕೆಟ್ ಸಿಗದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಕಾಲೇಜು ವಿದ್ಯಾರ್ಥಿನಿ

    Live Tv
    [brid partner=56869869 player=32851 video=960834 autoplay=true]

  • ಬಸ್ ಸ್ಟ್ಯಾಂಡ್ ರೋಮಿಯೋಗಳನ್ನು ಕಾಲೇಜಿಗೆ ಕಳುಹಿಸಿಲು ಟಿಸಿ ಮಾಸ್ಟರ್ ಪ್ಲಾನ್

    ಬಸ್ ಸ್ಟ್ಯಾಂಡ್ ರೋಮಿಯೋಗಳನ್ನು ಕಾಲೇಜಿಗೆ ಕಳುಹಿಸಿಲು ಟಿಸಿ ಮಾಸ್ಟರ್ ಪ್ಲಾನ್

    ಹಾಸನ: ಕಾಲೇಜಿಗೆ ತೆರಳದೆ ಬಸ್ ನಿಲ್ದಾಣದಲ್ಲೇ ಕುಳಿತು ಮೊಬೈಲ್‍ನಲ್ಲಿ ಗೇಮ್ ಆಡುವುದು, ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತ ಕಾಲ ಕಳೆಯುತ್ತಿದ್ದ ಹುಡುಗರಿಗೆ ಟಿಸಿ ಬುದ್ಧಿ ಹೇಳಿ ಕಾಲೇಜಿಗೆ ಕಳುಹಿಸುತ್ತಿದ್ದಾರೆ.

    ಹಾಸನದ ಅರಸೀಕೆರೆಯಲ್ಲಿ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಕೆಲವು ವಿದ್ಯಾರ್ಥಿಗಳು ಕಾಲೇಜಿಗೆ ಹೋಗುವುದಾಗಿ ಊರಿನಿಂದ ಬಂದು ಬಸ್ ನಿಲ್ದಾಣದಲ್ಲಿ ಕಾಲ ಕಳೆಯುತ್ತಿದ್ದರು. ಇವರಲ್ಲಿ ಕೆಲವರು ಬಸ್ ಸ್ಟ್ಯಾಂಡ್ ರೋಮಿಯೋಗಳ ರೀತಿ ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದರು. ಈ ಬಗ್ಗೆ ವಿದ್ಯಾರ್ಥಿನಿಯರು ಟಿಸಿ ಬಳಿ ಅಳಲು ತೋಡಿಕೊಂಡಿದ್ದರು.

    ಕಾಲೇಜಿಗೆ ಹೋಗಿ ಎಂದು ಟಿಸಿ ಬಾಯಿ ಮಾತಲ್ಲಿ ಹುಡುಗರಿಗೆ ಹೇಳಿದರೆ ಕ್ಯಾರೆ ಅನ್ನುತ್ತಿರಲಿಲ್ಲ. ಇದರಿಂದ ಹೊಸ ಉಪಾಯ ಮಾಡಿದ ಟಿಸಿ, ಮೊಬೈಲ್ ಕ್ಯಮೆರಾ ಆನ್ ಮಾಡಿ, ಯಾಕೆ ಇಲ್ಲಿ ಕುಳಿತಿದ್ದೀರಾ. ನಿಮಗೆ ಕಾಲೇಜ್ ಇಲ್ಲವೇ ಎಂದು ಪ್ರಶ್ನೆ ಮಾಡಲಾರಂಭಿಸಿದ್ದಾರೆ. ಯಾವಾಗ ತಮ್ಮನ್ನು ವಿಡಿಯೋ ಮಾಡುತ್ತಿದ್ದಾರೆ ಎಂದು ತಿಳಿಯಿತೋ ಆಗ ಸಹಜವಾಗೇ ಹುಡುಗರು ಬಸ್ ಸ್ಟ್ಯಾಂಡ್‍ನಿಂದ ಕಾಲ್ಕಿತ್ತಿದ್ದಾರೆ. ಸಧ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ಭೀಮಾ ನದಿಯಲ್ಲಿ ನೀರು ಪಾಲಾಗಿದ್ದ ನಾಲ್ವರು ಸ್ನೇಹಿತರ ಮೃತದೇಹ ಪತ್ತೆ

    ಭೀಮಾ ನದಿಯಲ್ಲಿ ನೀರು ಪಾಲಾಗಿದ್ದ ನಾಲ್ವರು ಸ್ನೇಹಿತರ ಮೃತದೇಹ ಪತ್ತೆ

    ಯಾದಗಿರಿ: ಭೀಮಾ ನದಿಯಲ್ಲಿ ಈಜಾಡಲು ತೆರಳಿ ನೀರು ಪಾಲಾಗಿದ್ದ ನಾಲ್ವರು ಹುಡುಗರ ಶವ ಪತ್ತೆಯಾಗಿವೆ. ಎನ್‌ಡಿಆರ್‌ಎಫ್ ತಂಡ, ಅಗ್ನಿಶಾಮಕ ದಳ ಮತ್ತು ನುರಿತ ಮೀನುಗಾರರ ತಂಡಗಳು ನಡೆಸಿದ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ನಾಲ್ವರು ಹುಡುಗರ ಮೃತದೇಹವನ್ನು ಪತ್ತೆ ಮಾಡಲಾಗಿದೆ. ಇದನ್ನೂ ಓದಿ: ಈಜಲು ಭೀಮಾ ನದಿಗಿಳಿದ ನಾಲ್ವರು ನೀರುಪಾಲು

    ಅಮಾನ್ (16), ಅಯಾನ್ (16), ರೆಹಮಾನ್ (16), ಕಲಬುರಗಿ ಮೂಲದ ರೆಹಮಾನ್ (15) ಮೃತ ಹುಡುಗರು. ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಗ್ರಾಮದ ಸಮೀಪದ ಭೀಮಾ ನದಿಯಲ್ಲಿ ನಾಲ್ವರು ಸ್ನೇಹಿತರು ಭಾನುವಾರ ಸಂಜೆ ಈಜಾಡಲು ಹೋಗಿ ನೀರು ಪಾಲಾಗಿದ್ದರು.

    ಹುಡುಗರ ಪತ್ತೆಗಾಗಿ ಇಂದು ಬೆಳಗ್ಗೆಯಿಂದ ಹೈದರಾಬಾದಿನ ಎನ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ದಳ ಭೀಮಾನದಿಯಲ್ಲಿ ಬೋಟ್‍ಗಳ ಮೂಲಕ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ನೀರು ಪಾಲಾಗಿದ್ದ ಅಮಾನ್, ಅಯಾನ್, ರೆಹಾನ್, ಇರ್ಫಾನ್ ಹುಡುಗರ ಶವ ಪತ್ತೆ ಮಾಡಲಾಗಿದೆ.

    ಜಿಲ್ಲಾಧಿಕಾರಿ ಡಾ.ರಾಗಾಪ್ರಿಯಾ, ಎಸ್‍ಪಿ ಋಷಿಕೇಶ್ ಭಗವಾನ್ ಸೋನವಣೆ, ಎಸಿ ಶಂಕರಗೌಡ ಸೋಮನಾಳ ಅವರ ಮಾರ್ಗದರ್ಶನದಲ್ಲಿ ಈ ಶೋಧ ಕಾರ್ಯಾಚರಣೆ ನಡೆದಿದೆ. ಮೃತದೇಹಗಳನ್ನು ಹೊರತರುತ್ತಿದ್ದಂತೆ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ವಡಗೇರಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • ಇನ್ಮುಂದೆ ನಮ್ಮದೇ ಹವಾ ಇರ್ಬೇಕು: ಪೊಲೀಸರಿಗೆ ಪುಡಿ ರೌಡಿಗಳ ಅವಾಜ್

    ಇನ್ಮುಂದೆ ನಮ್ಮದೇ ಹವಾ ಇರ್ಬೇಕು: ಪೊಲೀಸರಿಗೆ ಪುಡಿ ರೌಡಿಗಳ ಅವಾಜ್

    ಶಿವಮೊಗ್ಗ: ನಾಲ್ಕೈದು ಯುವಕರ ಗುಂಪೊಂದು ಹುಕ್ಕಾ ಸೇವಿಸಿ ಪಾನಗೋಷ್ಠಿ ಮಾಡುತ್ತಾ ಪೊಲೀಸರು ಮತ್ತು ಕೆಲವರಿಗೆ ವಿಡಿಯೋ ಮೂಲಕ ಬೆದರಿಕೆ ಹಾಕಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ.

    ಬಣ್ಣದ ಅಂಗಡಿಯೊಂದರಲ್ಲಿ ಕುಳಿತು ಮದ್ಯ ಹಾಗೂ ಹುಕ್ಕಾ ಸೇವಿಸುತ್ತಿರುವ ಯುವಕರ ಗುಂಪು ಅಪರಾಧ ವಿಭಾಗದ ಕೆಲವು ಪೊಲೀಸರ ಹೆಸರು ಉಲ್ಲೇಖಿಸಿ ಬೆದರಿಕೆ ಹಾಕಿದ್ದಾರೆ. ಶಿವಮೊಗ್ಗದಲ್ಲಿ ಇನ್ನು ಮುಂದೆ ನಮ್ಮದೇ ಹವಾ ಇರಬೇಕು. ರೌಡಿಶೀಟರ್ ಮಾರ್ಕೆಟ್ ಲೋಕಿ ರೆಕಾರ್ಡ್ ಮುರಿಯುತ್ತೇವೆ. ರೌಡಿಶೀಟರ್ ಕಡೆಕಲ್ ಅಬೀದ್‍ನ ಮುಗಿಸುತ್ತೀವಿ. ಶಿವಮೊಗ್ಗದಲ್ಲಿ ಶೇಕ್ ಅಹಮದ್ ಅಲಿಯಾಸ್ ಶಾರು ಹೆಸರು ಮಾತ್ರ ಇರಬೇಕು ಎಂದು ಏರು ಧ್ವನಿಯಲ್ಲಿ ಮಾತನಾಡಿದ್ದಾರೆ.

    ವಿಡಿಯೋದಲ್ಲಿಯ ಪೋಲಿಗಳನ್ನ ನಗರದ ಸೂಳೆಬೈಲ್ ನ ಶೇಕ್ ಅಹಮದ್, ಸೋನು ಮತ್ತು ಇತರರು ಎಂದು ಪೊಲೀಸರು ಗುರುತಿಸಿದ್ದಾರೆ. ಈಗಾಗಲೇ ಇವರೆಲ್ಲರ ಮೇಲೆ ದೊಡ್ಡಪೇಟೆ, ತುಂಗಾನಗರ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಜಾಮೀನಿನ ಮೇಲೆ ಹೊರಗಿರುವ ಸಮಯದಲ್ಲಿ ಇಂತಹ ವಿಡಿಯೋ ಮಾಡಿ ಹರಿ ಬಿಟ್ಟಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಇವರ ಪತ್ತೆಗೆ ಬಲೆ ಬೀಸಿದ್ದಾರೆ.

  • ಎಲ್ಲ ಮುಗ್ಧ ಹುಡುಗರಿಗೆ “What The F” ನೋಡಲು ರಶ್ಮಿಕಾ ಸಲಹೆ!

    ಎಲ್ಲ ಮುಗ್ಧ ಹುಡುಗರಿಗೆ “What The F” ನೋಡಲು ರಶ್ಮಿಕಾ ಸಲಹೆ!

    ಬೆಂಗಳೂರು: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಮುಗ್ಧ ಹುಡುಗರಿಗೆ ‘ವಾಟ್ ದಿ ಎಫ್’ ಹಾಡು ನೋಡಲು ಸಲಹೆ ನೀಡಿದ್ದಾರೆ.

    ರಶ್ಮಿಕಾ ಮಂದಣ್ಣ ತೆಲುಗಿನ ‘ಗೀತಾ ಗೋವಿದಂ’ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿದ್ದು, ರಶ್ಮಿಕಾ ಈ ಹಾಡನ್ನು ನೋಡಿ ಎಂದು ತಮ್ಮ ಟ್ಟಿಟ್ಟರಿನಲ್ಲಿ ವಿಡಿಯೋ ಹಾಕುವ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

    ರಶ್ಮಿಕಾ ತಮ್ಮ ಟ್ವಿಟ್ಟರಿನಲ್ಲಿ ವಿಡಿಯೋ ಹಾಕಿ “ವಾಟ್ ದಿ ಎಫ್ ಹಾಡು ಬಿಡುಗಡೆಯಾಗಿದೆ. ನಾನು ಈ ಹಾಡಿನ ಪ್ರಚಾರ ಮಾಡಬೇಕು. ಏಕೆಂದರೆ ಇದು ನನ್ನ ಚಿತ್ರ. ನಾನು ಮತ್ತೇನು ಮಾಡಲು ಆಗುವುದಿಲ್ಲ. ಎಲ್ಲ ಮುಗ್ಧ ಹುಡುಗರೇ ಈ ಹಾಡನ್ನು ನೋಡಿ ಹಾಗೂ ಎಲ್ಲ ಮಹಿಳೆಯರೇ ನಾವು ಈ ರೀತಿಯ ಹಾಡನ್ನು ಬರೆಯಬೇಕು” ಎಂದು ಟ್ವೀಟ್ ಮಾಡಿದ್ದಾರೆ.

    ವಾಟ್ ದಿ ಎಫ್ ಹಾಡನ್ನು ಬಾಲಿವುಡ್ ಗಾಯಕರಾದ ಅರ್ಜಿತ್ ಸಿಂಗ್ ಹಾಗೂ ಸೋನಂ ನಿಗಮ್ ಹಾಡಬೇಕಿತ್ತು. ಆದರೆ ಅವರು ಸಿಗಲಿಲ್ಲ ಎಂಬ ಕಾರಣಕ್ಕೆ ಸಂಗೀತ ನಿರ್ದೇಶಕ ಗೋಪಿ ಸುಂದರ್ ಈ ಹಾಡನ್ನು ನೀನು ಹಾಡು ಎಂದು ಹೇಳಿದ್ದರು. ಹಾಗಾಗಿ ನಾನು ಈ ಹಾಡು ಹಾಡುತ್ತಿದ್ದೇನೆ ಎಂದು ನಟ ವಿಜಯ್ ದೇವರಕೊಂಡ ವಿಡಿಯೋದಲ್ಲಿ ತಿಳಿಸಿದ್ದಾರೆ.

    ಗೀತಾ ಗೋವಿದಂ ಚಿತ್ರದಲ್ಲಿ ರಶ್ಮಿಕಾಗೆ ನಾಯಕನಾಗಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದಾರೆ. ಬಿಡುಗಡೆಯಾದ ಮೊದಲನೇ ಹಾಡು ಯೂಟ್ಯೂಬ್‍ನಲ್ಲಿ ಸಾಕಷ್ಟು ಹಿಟ್ ಆಗಿದ್ದು, ಹಾಡು ಇದುವರೆಗೂ 23.45 ಲಕ್ಷ ವ್ಯೂ ಪಡೆದಿದೆ.

    ಸಿನಿಮಾದ ಟೀಸರ್ ಬಿಡುಗಡೆಯಾದ 7 ಗಂಟೆಯಲ್ಲಿ 14 ಲಕ್ಷ ವ್ಯೂ ಆಗಿದ್ದು, ನಂ.1 ಟ್ರೆಂಡಿಂಗ್ ನಲ್ಲಿತ್ತು. ಈಗ ಈ ಟೀಸರ್ 55 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದಿದೆ. ಕನ್ನಡದ ವರನಟ ರಾಜ್‍ಕುಮಾರ್ ಅವರ ಎಂದೆಂದೂ ನಿನ್ನನು ಮರೆತು ನಾನಿರಲಾರೆ ಹಾಡಿನ ತೆಲುಗು ಟ್ಯೂನ್‍ನೊಂದಿಗೆ ಟೀಸರ್ ಆರಂಭವಾಗಿದೆ.

    ಸದ್ಯ ಈ ಚಿತ್ರವನ್ನು ಪರುಶರಾಮ್ ನಿರ್ದೇಶನ ಮಾಡಿದ್ದು, ಗೋಪಿ ಸುಂದರ್ ಸಂಗೀತ ನೀಡಿದ್ದಾರೆ. ಲಿರಿಕಲ್ ವಿಡಿಯೋ ಸಾಂಗ್ ಮೂಲಕವೇ ಈ ಹಾಡು ಸಾಕಷ್ಟು ವೈರಲ್ ಆಗಿದೆ. ಸದ್ಯ ಈ ಸಿನಿಮಾ ರಶ್ಮಿಕಾ ಅವರ ಎರಡನೇ ತೆಲುಗು ಸಿನಿಮಾ ಆಗಿದ್ದು, ಇದೇ ಆಗಸ್ಟ್ 15ಕ್ಕೆ ಚಿತ್ರ ಬಿಡುಗಡೆಯಾಗಲಿದೆ.

    https://www.youtube.com/watch?v=T4imX7yFgY0

  • ಹುಡ್ಗಿರನ್ನು ಚುಡಾಯಿಸುತ್ತಿದ್ದ ಪಡ್ಡೆ ಹುಡ್ಗುರನ್ನು ಪ್ರಶ್ನಿಸಿದ್ದ ಪೇದೆ ಮೇಲೆ ಹಲ್ಲೆ!

    ಹುಡ್ಗಿರನ್ನು ಚುಡಾಯಿಸುತ್ತಿದ್ದ ಪಡ್ಡೆ ಹುಡ್ಗುರನ್ನು ಪ್ರಶ್ನಿಸಿದ್ದ ಪೇದೆ ಮೇಲೆ ಹಲ್ಲೆ!

    ಬೆಂಗಳೂರು: ರಸ್ತೆ ಬದಿ ಬೈಕ್ ನಿಲ್ಲಿಸಿ ಹೆಣ್ಣುಮಕ್ಕಳನ್ನ ಚುಡಾಯಿಸ್ತಿದ್ದನ್ನ ಪ್ರಶ್ನೆ ಮಾಡಲು ಹೋದ, ಸಂಚಾರಿ ಪೇದೆಯನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಕೆಆರ್‍ಪುರಂ ಭಟ್ಟರಹಳ್ಳಿಯಲ್ಲಿ ನಡೆದಿದೆ.

    ಶಿವಾನಂದ ರಾಥೋಡ್ ಹಲ್ಲೆಗೊಳಗಾದ ಸಂಚಾರಿ ಪೇದೆ. ಕೆಆರ್ ಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿರೋ ಇವರು ಸಬ್ ಇನ್ಸ್ ಪೆಕ್ಟರ್ ಜೊತೆ ಡಿಡಿ ಕೇಸ್ ಚೆಕ್ ಮಾಡ್ತಿದ್ರು.

    ಈ ವೇಳೆ ರಸ್ತೆ ಬದಿಯಲ್ಲಿ ಬೈಕ್‍ಗಳನ್ನ ಪಾರ್ಕಿಂಗ್ ಮಾಡಿಕೊಂಡು ಕೆಲ ಹುಡುಗರು ಹೆಣ್ಣುಮಕ್ಕಳನ್ನ ಚುಡಾಯಿಸೋ ಕೆಲಸ ಮಾಡುತ್ತಿದ್ದನು, ಮನಗಂಡ ಪೇದೆ ಶಿವಾನಂದ ರಾಥೋಡ್ ಆ ಹುಡುಗರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ತಳ್ಳಾಡಿ ನೂಕಾಡಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

    ಅದಿಲ್, ನದೀಮ್ ಹಾಗು ಆತನ ಸಹಚರರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ ಅಂತಾ ಪೇದೆ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    https://www.youtube.com/watch?v=47mHt00Bhy4&feature=youtu.be