Tag: ಹುಟ್ಟುಹಬ್ಬ

  • ನಾಳೆ  ಸಿದ್ದಗಂಗಾ ಶ್ರೀಗಳಿಗೆ 110ನೇ ಹುಟ್ಟುಹಬ್ಬ: ತುಮಕೂರಿನಲ್ಲಿ ಸಂಭ್ರಮ ಜೋರು

    ನಾಳೆ ಸಿದ್ದಗಂಗಾ ಶ್ರೀಗಳಿಗೆ 110ನೇ ಹುಟ್ಟುಹಬ್ಬ: ತುಮಕೂರಿನಲ್ಲಿ ಸಂಭ್ರಮ ಜೋರು

    ತುಮಕೂರು: ನಡೆದಾಡುವ ದೇವರು, ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಶ್ರೀಗಳು ಶನಿವಾರ 110ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.  ಈ ಸಂಭ್ರಮಾಚರಣೆಯನ್ನು ತುಮಕೂರು ಸೇರಿದಂತೆ ನಾಡಿನ ಜನತೆ ಹಬ್ಬದ ರೀತಿ ಆಚರಿಸಲಿದ್ದಾರೆ. ಈಗಾಗಲೇ ನಗರಾದ್ಯಂತ ಬಂಟಿಂಗ್, ಬ್ಯಾನರ್‍ಗಳು ರಾರಾಜಿಸುತ್ತಿವೆ.

    ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳು 1908ರಲ್ಲಿ ಮಾಗಡಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ಪಟೇಲ್ ಹೊನ್ನಪ್ಪ ಮತ್ತು ಗಂಗಮ್ಮ ನವರ ಮಗನಾಗಿ ಜನಿಸಿದರು. ವೀರಾಪುರ ಮತ್ತು ನಾಗವಲ್ಲಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪಿಯುಸಿ ಮತ್ತು ಡಿಗ್ರಿ ಪದವಿ ಪಡೆದ ಕಾಲಜ್ಞಾನಿ ಶ್ರೀ ಉದ್ಧಾನ ಶಿವಯೋಗಿ ಸ್ವಾಮಿಗಳಿಂದ 1930ರಲ್ಲಿ ದೀಕ್ಷೆ ಸ್ವೀಕರಿಸಿ 1941ರಲ್ಲಿ ಮಠಾಧಿಪತಿಗಳಾದರು. ಜನಾನುರಾಗಿ ಭಾವನೆ, ಬಡವರ ಮೇಲೆ ಅನುಕಂಪ, ಶಿಸ್ತಿನ ಜೀವನ, ಮಾನವೀಯ ಗುಣಗಳಿಂದ ಪ್ರಸಿದ್ಧಿ ಪಡೆದವರು. 128 ಶಾಲಾ ಕೇಂದ್ರಗಳನ್ನು ಹೊಂದಿರೋ ಮಠದಲ್ಲಿ ಈಗಲೂ 10 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

    ನಸುಕಿನ ಜಾವ 2 ಗಂಟೆಗೆ ಏಳುವ ಶ್ರೀಗಳು ಸ್ನಾನ, ಶಿವಪೂಜೆ ಮುಗಿಸಿ ಬೆಳಗಿನ ಜಾವ 5.30 ರಿಂದ 6ರ ವೇಳೆಗೆ ಕಚೇರಿಗೆ ಬರ್ತಾರೆ. ರಾತ್ರಿ 9.30 ರವರೆಗೂ ಒಂದಲ್ಲೊಂದು ಕಾರ್ಯದಲ್ಲಿ ತೊಡಗಿ ರಾತ್ರಿ 11 ಗಂಟೆ ವೇಳೆಗೆ ನಿದ್ರೆಗೆ ಜಾರಿ ಆರೋಗ್ಯವನ್ನ ಕಾಪಾಡಿಕೊಂಡು ಬಂದಿದ್ದಾರೆ.

    ಶ್ರೀಗಳ 110 ನೇ ಹುಟ್ಟುಹಬ್ಬದ ಅಂಗವಾಗಿ ನಗರದಾದ್ಯಂತ ಶುಭಾಶಯದ ಬ್ಯಾನರ್ ಹಾಗೂ ಬಂಟಿಂಗ್ಸ್ ಗಳು ರಾರಾಜಿಸುತ್ತಿವೆ. ನಾಳೆ ಭೂರಿ ಭೋಜನದ ವ್ಯವಸ್ಥೆ ಮಾಡಲಾಗಿದೆ. 2 ಲಕ್ಷ ಭಕ್ತರಿಗೆ ಆಗುವಷ್ಟು ಪಾಯಸ, 250 ಕ್ವಿಂಟಲ್ ಬೂಂದಿ, ಚಿತ್ರಾನ್ನ ಸೇರಿದಂತೆ ವಿವಿಧ ಸಿಹಿ ತಿನಿಸುಗಳನ್ನು ಸಿದ್ಧಪಡಿಸಲಾಗುತ್ತಿದೆ.

    ಮಠದಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದೆ. ಹೀಗಾಗಿ ಶಾಂತಿಗೆ ಭಂಗವಾಗಬಾರದು ಎಂಬ ಉದ್ದೇಶದಿಂದ ಭಕ್ತಾದಿಗಳು 10 ಗಂಟೆಯ ನಂತರ ಮಠಕ್ಕೆ ಆಗಮಿಸಿ ಶುಭ ಕೋರುವಂತೆ ಕಿರಿಯ ಸಿದ್ದಲಿಂಗಶ್ರೀಗಳು ಮನವಿ ಮಾಡಿದ್ದಾರೆ.

    ಶ್ರಿಗಳ ಹೆಜ್ಜೆ ಗುರುತು:

    1908: ಬೆಂಗಳೂರು ಗ್ರಾಮಾಂತರ ಜಿಲ್ಲೆ ಈಗಿನ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ಹೊನ್ನಪ್ಪ , ಗಂಗಮ್ಮ ದಂಪತಿ ಪುತ್ರರತ್ನರಾಗಿ ಜನನ.
    1913-27: ವೀರಾಪುರ, ಪಾಲಹಳ್ಳಿಯಲ್ಲಿ ಪ್ರಾಥಮಿಕ, ನಾಗವಲ್ಲಿಯಲ್ಲಿ ಮಾಧ್ಯಮಿಕ, ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಹಾಗೂ ಮೆಟ್ರಿಕ್ಯೂಲೇಷನ್ ತೇರ್ಗಡೆ.
    1927-30: ಬೆಂಗಳೂರಿನ ತೋಟದಪ್ಪ ವಿದ್ಯಾರ್ಥಿನಿಲಯದಲ್ಲಿ ಆಶ್ರಯ, ಸೆಂಟ್ರಲ್ ಕಾಲೇಜಿನಲ್ಲಿ ಬಿಎ ವಿದ್ಯಾಭ್ಯಾಸ.
    1930: ಮಾ.3ರಂದು ಸಿದ್ದಗಂಗಾ ಕ್ಷೇತ್ರದ ಉತ್ತರಾಧಿಕಾರಿಯಾಗಿ ಆಯ್ಕೆ.

    1941: ಜ.11ರಂದು ಶ್ರೀಉದ್ಧಾನ ಶಿವಯೋಗಿ ಸ್ವಾಮೀಜಿ ಲಿಂಗೈಕ್ಯ, ಮಠಾಧ್ಯಕ್ಷರಾಗಿ ಶಿವಕುಮಾರ ಸ್ವಾಮೀಜಿ ಅಧಿಕಾರ ಸ್ವೀಕಾರ.
    1949: ಜೂ.18ರಂದು ಶ್ರೀಸಿದ್ಧಲಿಂಗೇಶ್ವರರ ಸಂಸ್ಕೃತ ಮತ್ತು ವೇದಪಾಠಶಾಲೆ ರಜತೋತ್ಸವ.
    1950: ಧರ್ಮಸ್ಥಳದ ಶ್ರೀಮಂಜಯ್ಯ ಹೆಗ್ಗಡೆಯವರಿಂದ ಮಹಾ ನಡಾವಳಿ ಉತ್ಸವದಲ್ಲಿ ಗೌರವ ಸ್ವೀಕಾರ.
    1956: ಶ್ರೀಕ್ಷೇತ್ರದಲ್ಲಿ ಸಂಸ್ಕೃತ ಕಾಲೇಜು ಕಟ್ಟಡ ನಿರ್ಮಾಣ.

    1960: ಶ್ರೀಮಠದಲ್ಲಿ ಸಾರ್ವಜನಿಕ ವಿದ್ಯಾರ್ಥಿನಿಲಯ ನಿರ್ಮಾಣ ಆರಂಭ.
    1962: ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಸ್ಥಾಪನೆ.
    1963:  ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ ಆರಂಭ ಹಾಗೂ ಸಿದ್ದಗಂಗಾ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ.
    1965: ನ.6 ಕರ್ನಾಟಕ ವಿವಿಯಿಂದ ಗೌರವ ಡಿ.ಲಿಟ್ ಸ್ವೀಕಾರ.
    1970: ಡಿ.27 ಬೆಂಗಳೂರಿನಲ್ಲಿ ನಡೆದ 47ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ.

    1972: ಮೇ 26 ಶ್ರೀಮಠದ ಪೀಠಾಧಿಕಾರ ಸ್ವೀಕಾರದ ರಜತ ಮಹೋತ್ಸವ.
    ಮೇ.28 ಉಚಿತ ವಿದ್ಯಾರ್ಥಿ ನಿಲಯ ಮತ್ತು ಸಂಸ್ಕೃತ ಕಾಲೇಜಿನ ಸುವರ್ಣ ಮಹೋತ್ಸವ.
    1982: ಏ.24 ರಾಷ್ಟ್ರಪತಿ ನೀಲಂ ಸಂಜೀವರೆಡ್ಡಿ ಸಮ್ಮುಖದಲ್ಲಿ ಮುಖ್ಯಮಂತ್ರಿ ಎಸ್.ಗುಂಡೂರಾವ್ ಅವರಿಂದ ಸುವರ್ಣಮಹೋತ್ಸವ ನೆನಪಿಗಾಗಿ ಗೌರವ ಗ್ರಂಥ `ಸಿದ್ಧಗಂಗಾಶ್ರೀ’ ಬಿಡುಗಡೆ,
    ಶ್ರೀಸಿದ್ಧಗಂಗಾ ಮಹಿಳಾ ಕಾಲೇಜು ಸ್ಥಾಪನೆ.
    1984: ನೆಲಮಂಗಲದಲ್ಲಿ ಶ್ರೀಸಿದ್ಧಗಂಗಾ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ, ಶ್ರೀಸಿದ್ಧಗಂಗಾ ಫಾರ್ಮಸಿ ಕಾಲೇಜು ಸ್ಥಾಪನೆ

    1987: ಏ.20 ಹುಬ್ಬಳ್ಳಿ 3 ಸಾವಿರ ಮಠದ ಜಗದ್ಗುರು ಗಂಗಾಧರರಾಜ ಯೋಗೀಂದ್ರ ಸ್ವಾಮೀಜಿ ರಜತ ಮಹೋತ್ಸವದ ಅಧ್ಯಕ್ಷತೆ.
    1988: ಮಾ.30 ಉತ್ತರಾಧಿಕಾರಿಯಾಗಿ ಸಿದ್ಧಲಿಂಗ ಸ್ವಾಮೀಜಿ ನೇಮಕ.
    1992: ಫೆ.16 ಶ್ರೀಗಳ ವಜ್ರ ಮಹೋತ್ಸವ ಸ್ಮಾರಕ ಕಟ್ಟಡಗಳ ಶಿಲಾನ್ಯಾಸ ಅಂದಿನ ಉಪರಾಷ್ಟ್ರಪತಿ ಡಾ.ಶಂಕರ್ ದಯಾಳ್ ಶರ್ಮ ಅವರಿಂದ ಸಿದ್ಧಗಂಗಾ ನರ್ಸಿಂಗ್ ಕಾಲೇಜು ಸ್ಥಾಪನೆ.
    1995: ಫೆ.2 ಸಿದ್ಧಗಂಗಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಸ್ಥಾಪನೆ.

    1997: ಮಾ.22 ಶ್ರೀಗಳ ವಜ್ರಮಹೋತ್ಸವ ಬೃಹತ್ ವಿದ್ಯಾರ್ಥಿನಿಲಯ, ಪ್ರಸಾದ ನಿಲಯ ಹಾಗೂ ದಾಸೋಹ ಸಿರಿ ಗ್ರಂಥ ಸಮರ್ಪಣೆ.
    2000-05: ಜ.30 ಪ್ರಧಾನಿ ವಾಜಪೇಯಿ ಅವರಿಂದ ಸಂಸ್ಕೃತ ಕಾಲೇಜು, ಅಮೃತ ಮಹೋತ್ಸವ ಉದ್ಘಾಟನೆ. ಅಂಧ ಮಕ್ಕಳಿಗೆ ನೂತನ ಶಾಲಾ ಕಟ್ಟಡ ಹಾಗೂ ವಸತಿ ನಿಲಯ ನಿರ್ಮಾಣ.
    2005: ಏ.24 ಶ್ರೀಗಳ 98ನೇ ಜನ್ಮದಿನೋತ್ಸವ ಸಮಾರಂಭ, ಮಾಜಿ ಉಪಪ್ರಧಾನಿ ಎಲ್.ಕೆ.ಆಡ್ವಾಣಿ ಭಾಗಿ.
    ಏ.25 75ನೇ ಪೀಠಾರೋಹಣ(ಅಮೃತ ಮಹೋತ್ಸವ) ಸಮಾರಂಭ ಗೃಹಸಚಿವ ಶಿವರಾಜ್ ಪಾಟೀಲ್, ಸಿಎಂ ಧರಂಸಿಂಗ್ ಭಾಗಿ.
    2006:ಏ.7 ಶ್ರೀಗಳ ಗುರುವಂದನಾ ಕಾರ್ಯಕ್ರಮ ರಾಷ್ಟ್ರಪತಿ ಎಪಿಜೆ ಅಬ್ಬುಲ್ ಕಲಾಂ, ರಾಜ್ಯಪಾಲ ಚತುರ್ವೇದಿ, ಸಿಎಂ ಕುಮಾರಸ್ವಾಮಿ, ಡಿಸಿಎಂ ಯಡಿಯೂರಪ್ಪ, ಸುತ್ತೂರು ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧ್ಯಕ್ಷರು ಭಾಗವಹಿಸಿದ್ದರು.
    2007: ರಾಜ್ಯ ಸರ್ಕಾರದಿಂದ ಕರ್ನಾಟಕ ರತ್ನ ಪ್ರಶಸ್ತಿ, ಸಿದ್ದಗಂಗಾ ಶ್ರೀಗಳ ಜನ್ಮಶತಮಾನೋತ್ಸವ ಸಮಾರಂಭ
    2012: ಗುರುವಂದನಾ ಕಾರ್ಯಕ್ರಮ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಭಾಗಿ.
    2013: ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ.
    2014: ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಸುವರ್ಣ ಮಹೋತ್ಸವದ ಅಂಗವಾಗಿ ಹಳೆಯ ವಿದ್ಯಾರ್ಥಿಗಳ ಜಾಗತಿಕ ಸಮಾವೇಶ
    2015: ಜುಲೈನಲ್ಲಿ ಪದ್ಮಭೂಷಣ ಪ್ರಶಸ್ತಿ ಪ್ರದಾನ.

  • ಮಂತ್ರಾಲಯದಲ್ಲಿ 54ನೇ ಹುಟ್ಟುಹಬ್ಬ ಆಚರಿಸಿಕೊಂಡ ನಟ ಜಗ್ಗೇಶ್

    ಮಂತ್ರಾಲಯದಲ್ಲಿ 54ನೇ ಹುಟ್ಟುಹಬ್ಬ ಆಚರಿಸಿಕೊಂಡ ನಟ ಜಗ್ಗೇಶ್

    ರಾಯಚೂರು: ನವರಸ ನಾಯಕನೆಂದೇ ಖ್ಯಾತರಾದ ನಟ ಜಗ್ಗೇಶ್ ಅವರಿಗೆ ಇಂದು 54 ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಜಗ್ಗೇಶ್ ಮಂತ್ರಾಲಯಕ್ಕೆ ಆಗಮಿಸಿ, ಶ್ರೀ ದೇವರ ದರ್ಶನ ಪಡೆದರು.

    ಕಳೆದ 4 ವರ್ಷಗಳಿಂದ ಹುಟ್ಟುಹಬ್ಬದಂದು ನಟ ಜಗ್ಗೇಶ್ ಮಂತ್ರಾಲಯಕ್ಕೆ ಆಗಮಿಸುತ್ತಿದ್ದಾರೆ. ಅಂತೆಯೇ ಈ ಬಾರಿಯೂ ಹುಟ್ಟುಹಬ್ಬದಂದು ಮಂತ್ರಾಲಯಕ್ಕೆ ಭೇಟಿ ನೀಡಿದ ಅವರು ರಾಯರ ದರ್ಶನ ಪಡೆದರು. ಮಾತ್ರವಲ್ಲದೇ ಮಠದ ಶ್ರೀ ಸುಬುಧೇಂದ್ರ ತೀರ್ಥರಿಂದ ಆಶೀರ್ವಚನ ಪಡೆದ್ರು.

    ನಟ ಜಗ್ಗೇಶ್ ಅವರು ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರದಲ್ಲಿ 1963 ರ ಮಾರ್ಚ್ 17ರಂದು ಜನಿಸಿದ್ದಾರೆ. `ಇಬ್ಬನಿ ಕರಗಿತು’ ಇವರ ಮೊದಲನೆಯ ಚಿತ್ರ. `ಮಠ’ ನೂರನೆಯ ಚಿತ್ರವಾಗಿದ್ದು `ಮೇಕಪ್’ ಚಿತ್ರವನ್ನು ನಿರ್ಮಾಪಕರೂ ಆಗಿದ್ದಾರೆ. ತಮ್ಮ ಕೆಲವು ಚಿತ್ರಗಳಲ್ಲಿ ತಾವೇ ಹಾಡಿದ್ದಾರೆ.

    ಹಾಸ್ಯ ಪ್ರಧಾನ ಪಾತ್ರಗಳಿಗೆ ಹೆಸರಾಗಿರುವ ಜಗ್ಗೇಶ್ ಅವರು, ತಮ್ಮ ವಿಶಿಷ್ಟ ಹಾವಭಾವದಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

  • ಪವರ್ ಸ್ಟಾರ್ ಪುನೀತ್‍ಗೆ 42ನೇ ಹುಟ್ಟುಹಬ್ಬದ ಸಂಭ್ರಮ

    ಪವರ್ ಸ್ಟಾರ್ ಪುನೀತ್‍ಗೆ 42ನೇ ಹುಟ್ಟುಹಬ್ಬದ ಸಂಭ್ರಮ

    – ರಾಜಕುಮಾರ ಚಿತ್ರತಂಡದಿಂದ ಸಾಂಗ್ ಟೀಸರ್ ಗಿಫ್ಟ್
    – ದಾವಣಗೆರೆಯಲ್ಲಿ ಅಪ್ಪುಗಾಗಿ ಪುಟ್ಟ ಅಭಿಮಾನಿ ಕಣ್ಣೀರು

    ಬೆಂಗಳೂರು/ದಾವಣಗೆರೆ : ಇವತ್ತು ಸ್ಯಾಂಡಲ್‍ವುಡ್‍ನ ರಾಜರತ್ನ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ 42ನೇ ಜನ್ಮದಿನ. ರಾತ್ರಿಯಿಂದಲೇ ಬೆಂಗಳೂರಿನ ಸದಾಶಿವನಗರದಲ್ಲಿರುವ ಅಪ್ಪು ಮನೆಯ ಮುಂದೆ ಅಭಿಮಾನಿಗಳು ಜಮಾಯಿಸಿ ತಮ್ಮ ನೆಚ್ಚಿನ ನಟನಿಗೆ ಶುಭಾಶಯ ಕೋರಿದ್ದಾರೆ.

    ದೊಡ್ಮನೆ ಹುಡುಗನ ಹುಟ್ಟುಹಬ್ಬದ ಖುಷಿಯಲ್ಲಿ ರಾಜಕುಮಾರ ಚಿತ್ರತಂಡ ಚಿತ್ರದ ಸಾಂಗ್ ಟೀಸರ್‍ವೊಂದನ್ನು ಅಭಿಮಾನಿಗಳಿಗೆ ಗಿಫ್ಟ್ ಆಗಿ ನೀಡಿದೆ.

    ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಳಸಾಲ ಬಡಾವಣೆಯಲ್ಲಿ ವಾಸವಾಗಿರುವ ಪುಟ್ಟ ಬಾಲಕಿ ಪ್ರೀತಿಗೆ ಎರಡು ಕಿಡ್ನಿ ಫೇಲ್ಯೂರ್ ಆಗಿದೆ. ಅಪ್ಪನ ಇಸ್ತ್ರಿ ವೃತ್ತಿಯೇ ಬದುಕಿಗೆ ಆಧಾರ. ಚಿಕಿತ್ಸೆ ಸಿಗದಿದ್ರೆ ಪ್ರೀತಿ ಹೆಚ್ಚು ದಿನ ಬದುಕೋದಿಲ್ಲ ಎಂಬಂತಾಗಿದೆ. ಒಮ್ಮೆ ತನ್ನ ನೆಚ್ಚಿನ ಹೀರೋ ಪುನೀತ್‍ರನ್ನ ನೋಡ್ಬೇಕು, ಅವರೊಂದಿಗೆ ಮಾತಾಡ್ಬೇಕು, ಕೈ ಕುಲುಕಿ ಥ್ಯಾಂಕ್ಸ್ ಹೇಳ್ಬೇಕು ಅನ್ನೋದು ಈ ಬಾಲಕಿಯ ಆಸೆ.

  • ರಾಧಿಕಾ ಪಂಡಿತ್‍ಗೆ ಹುಟ್ಟುಹಬ್ಬ: ವಿಶ್ ಮಾಡಲು ಬಂದ ಅಭಿಮಾನಿಗಳಿಗೆ ಯಶ್ ದಂಪತಿಯಿಂದ ಗಿಫ್ಟ್!

    ರಾಧಿಕಾ ಪಂಡಿತ್‍ಗೆ ಹುಟ್ಟುಹಬ್ಬ: ವಿಶ್ ಮಾಡಲು ಬಂದ ಅಭಿಮಾನಿಗಳಿಗೆ ಯಶ್ ದಂಪತಿಯಿಂದ ಗಿಫ್ಟ್!

    ಬೆಂಗಳೂರು: ಇಂದು ನಟಿ ರಾಧಿಕಾ ಪಂಡಿತ್ ಅವರಿಗೆ 33ನೇ ಹುಟ್ಟುಹಬ್ಬದ ಸಂಭ್ರಮ. ನಟ ಯಶ್ ಅವರನ್ನು ಕೈಹಿಡಿದ ಬಳಿಕ ರಾಧಿಕಾ ಪಂಡಿತ್ ಗೆ ಮೊದಲ ಹುಟ್ಟುಹಬ್ಬ ಇದಾಗಿದೆ.

    ರಾಧಿಕಾ ತಮ್ಮ ಹುಟ್ಟು ಹಬ್ಬವನ್ನು ನಗರದ ಮಲ್ಲೇಶ್ವರಂನಲ್ಲಿರೋ ತವರು ಮನೆಯಲ್ಲಿ ಆಚರಣೆ ಮಾಡ್ತಿದ್ದಾರೆ. ಏಳೂವರೆ ಕೆಜಿಯ ವಿಭಿನ್ನವಾದ ಕೇಕ್ ತಂದು ಅಭಿಮಾನಿಗಳು ರಾಧಿಕಾ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ.

    ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಬಂದಿರೋ ಅಭಿಮಾನಿಗಳಿಗೆ ಯಶ್ ಹಾಗು ರಾಧಿಕಾ ಕನಕಾಂಬರ ಹೂವಿನ ಸಸಿ ನೀಡಿದ್ದಾರೆ.

    ಬರ್ತ್ ಡೇ ಅಂದ್ರೆ ತುಂಬಾ ಇಷ್ಟ: ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತೀರುವ ರಾಧಿಕಾ ಪಂಡಿತ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ, ನನಗೆ ಬರ್ತ್‍ಡೇ ಆಚರಣೆ ಅಂದ್ರೆ ತುಂಬಾ ಇಷ್ಟ. ಯಾಕಂದ್ರೆ ಆ ದಿನ ನಮಗೆ ಜಾಸ್ತಿ ಪ್ರಾಮುಖ್ಯತೆ ಇರತ್ತೆ. ಮಾತ್ರವಲ್ಲದೇ ಕೇಕ್ ಕಟ್ ಮಾಡೋದು, ಬಲೂನ್ಸ್, ಹ್ಯಾಪಿ ಬರ್ತ್ ಡೇ ಅಂತಾ ಹಾಡು ಹೇಳೊದು ಅಂದ್ರೆ ನನಗೆ ಮೊದಲಿಂದಲೂ ತುಂಬಾ ಇಷ್ಟ ಅಂತಾ ತನ್ನ ಖುಷಿ ಹಂಚಿಕೊಂಡ್ರು.

    ಮೂರು ಕಡೆ ಹುಟ್ಟುಹಬ್ಬ: ಇನ್ನು ಸಿನಿಮಾ ವೃತ್ತಿಗೆ ಬಂದ ಬಳಿಕ ಅಭಿಮಾನಿಗಳ ಜೊತೆ, ಅಪ್ಪ-ಅಮ್ಮನ ಜೊತೆ ಇಷ್ಟು ವರ್ಷ ಹುಟ್ಟು ಹಬ್ಬ ಆಚರಿಸುತ್ತಿದ್ದೆ. ಆದ್ರೆ ಈ ಬಾರಿ ಅತ್ತೆ-ಮಾವನ ಜೊತೆನೂ ಆಚರಣೆ ಮಾಡ್ತಾ ಇದ್ದೇನೆ. ಮನೆಯಲ್ಲಿ ಅತ್ತೆ ನನಗೆ ಇಷ್ಟವಾದ ಅಡುಗೆ ಮಾಡಿರುತ್ತಾರೆ. ಒಟ್ಟಿನಲ್ಲಿ ಈ ದಿನವನ್ನು ತುಂಬಾ ಖುಷಿಯಿಂದ ಕಳೆಯುತ್ತಿದ್ದೇನೆ ಅಂತಾ ರಾಧಿಕಾ ತಮ್ಮ ಮನದಾಳದ ಮಾತನ್ನು ಹೇಳಿದ್ದಾರೆ.

    ಈ ಬಾರಿ ಜೊತೆಗಿದ್ದೇ ವಿಶ್ ಮಾಡ್ದೆ:  ಪತ್ನಿ ಹುಟ್ಟು ಹಬ್ಬದ ಬಗ್ಗೆ ಮಾತನಾಡಿದ ನಟ ಯಶ್, ಮೊದಲೆಲ್ಲ ಫೋನಲ್ಲೆ ವಿಶ್ ಮಾಡ್ತಾ ಇದ್ದೆ. ಅದು ಹುಟ್ಟು ಹಬ್ಬದ ದಿನ ರಾತ್ರಿ. ಯಾಕಂದ್ರೆ ಬರ್ತ್ ಡೇ ದಿನದಂದು ಅವರು ಸಿಗುತ್ತಿರಲಿಲ್ಲ. ಅದು ನನ್ನ ಬರ್ತ್ ಡೇ ಆಗ್ಲಿ ರಾಧಿಕಾ ಅವರ ಬರ್ತ್ ಡೇ ಆಗಿರಲಿ. ಬೆಳಗ್ಗೆ ಹೊತ್ತು ಅಭಿಮಾನಿಗಳ ಜೊತೆ ಆಚರಣೆಯಲ್ಲಿ ಬ್ಯುಸಿಯಾಗಿರ್ತೀವಿ. ಆದ್ರೆ ಈ ಬಾರಿ ಮಾತ್ರ ಮದುವೆ ಆಗಿರೋದ್ರಿಂದ ಒಟ್ಟಿಗೆ ಇದ್ದು, ವಿಶ್ ಮಾಡಿದೆ ಅಂತಾ ಹೇಳಿದ್ರು.

    ಯಶ್ ದಂಪತಿ ಸಸಿ ಗಿಫ್ಟ್ ನೀಡುವುದು ಹೊಸದೆನಲ್ಲ. ಈ ಹಿಂದೆ ಅತಿಥಿಗಳಿಗೆ ಸಂಪಿಗೆ ಸಸಿ ನೀಡಿ ಮದುವೆಯ ಆಹ್ವಾನ ಪತ್ರಿಕೆಯನ್ನು ಯಶ್ ನೀಡಿದ್ದರು.

    ಯಶ್ ದಂಪತಿ ಸಸಿ ಗಿಫ್ಟ್ ನೀಡುವುದು ಹೊಸದೆನಲ್ಲ. ಈ ಹಿಂದೆ ಅತಿಥಿಗಳಿಗೆ ಸಂಪಿಗೆ ಸಸಿ ನೀಡಿ ಮದುವೆಯ ಆಹ್ವಾನ ಪತ್ರಿಕೆಯನ್ನು ಯಶ್ ನೀಡಿದ್ದರು.

  • 20 ದಿನದ ಹಿಂದೆ ಸುದೀಪ್- ದರ್ಶನ್ ಪರಸ್ಪರ ವಿಶ್ ಮಾಡ್ಕೊಂಡಿದ್ರು!

    20 ದಿನದ ಹಿಂದೆ ಸುದೀಪ್- ದರ್ಶನ್ ಪರಸ್ಪರ ವಿಶ್ ಮಾಡ್ಕೊಂಡಿದ್ರು!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅಭಿನಯ ಚಕ್ರವರ್ತಿ ಸುದೀಪ್ ನಡುವೆ ಈಗ ವಿರಸವಿದ್ದರೂ ಕೆಲ ದಿನಗಳ ಹಿಂದೆ ಇವರಿಬ್ಬರೂ ಟ್ವೀಟ್ ಮೂಲಕ ಮಾತನಾಡಿದ್ದರು.

    40ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಫೆಬ್ರವರಿ 15ರ ರಾತ್ರಿ ಸುದೀಪ್ ಅವರು ದರ್ಶನ್ ಅವರಿಗೆ ಟ್ಟಿಟ್ಟರ್‍ನಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು.

    ಈ ಟ್ವೀಟ್‍ಗೆ ಪ್ರತಿಯಾಗಿ ಫೆ. 17ರ ರಾತ್ರಿ ರಾತ್ರಿ ದರ್ಶನ್ ಧನ್ಯವಾದ ಎಂದು ತಿಳಿಸಿದ್ದರು. ಟ್ವಿಟ್ಟರ್‍ನಲ್ಲಿ ಇವರ ಚಾಟ್ ನೋಡಿದ ಅಭಿಮಾನಿಗಳು, ನೀವಿಬ್ಬರು ಒಂದಾಗಿ ಒಂದೇ ಚಿತ್ರದಲ್ಲಿ ಅಭಿನಯಿಸಬೇಕೆಂದು ಅಂದೇ ಕೇಳಿದ್ದರು.

    ಅಷ್ಟೇ ಅಲ್ಲದೇ ಮತ್ತೊಬ್ಬರು ಈ ಮೆಸೇಜ್‍ಗೆ,”ನಾನು ನಿನ್ನೆಯಿಂದ ಕಾಯುತ್ತಿದ್ದೆ. ನೀವಿಬ್ಬರು ದಿಗ್ಗಜರು” ಎಂದು ಟ್ವೀಟ್ ಮಾಡಿದ್ದರು.

     

    ಇದನ್ನೂ ಓದಿ: ಸುದೀಪ್ ಅವರ ಈ ಮಾತಿನಿಂದ ದರ್ಶನ್ ಮನಸ್ಸಿಗೆ ಘಾಸಿ!

    ಇದನ್ನೂ ಓದಿ: ದರ್ಶನ್ ಸುದೀಪ್ ಟ್ವಿಟ್ಟರ್ ಖಾತೆಯಲ್ಲಿ ಭಾನುವಾರ ಏನೇನಾಯ್ತು?

    ಇದನ್ನೂ ಓದಿ:  ದರ್ಶನ್-ಸುದೀಪ್ ವೈಮನಸ್ಸು ಹಿಂದೆ ದೊಡ್ಡ ಕಥೆಯಿದೆ-ಬುಲೆಟ್ ಪ್ರಕಾಶ್

    ಇದನ್ನೂ ಓದಿ: ಇಷ್ಟೆಲ್ಲಾ ಟ್ವೀಟ್ ಮಾಡಿದ್ದು ನಾನೇ, ಖಾತೆ ಹ್ಯಾಕ್ ಆಗಿಲ್ಲ: ದರ್ಶನ್

     

  • ವಿಡಿಯೋ: 100ರ ಸಂಭ್ರಮದಲ್ಲಿ ಅಜ್ಜಿ ಸಖತ್ ಸ್ಟೆಪ್ ಹಾಕಿದ್ರು!

    ವಿಡಿಯೋ: 100ರ ಸಂಭ್ರಮದಲ್ಲಿ ಅಜ್ಜಿ ಸಖತ್ ಸ್ಟೆಪ್ ಹಾಕಿದ್ರು!

    ವಾಷಿಂಗ್ಟನ್: ಹೆಚ್ಚಾಗಿ ವಯಸ್ಸಾದಂತೆ ಜನರು ಹುಟ್ಟುಹಬ್ಬ ಆಚರಿಸಲು ಹಿಂದೇಟು ಹಾಕ್ತಾರೆ. ಆದ್ರೆ ಇದಕ್ಕೆ ಅಪವಾದವೆಂಬಂತೆ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಅಜ್ಜಿಯೊಬ್ಬರು 100 ವರ್ಷದ ಹುಟ್ಟುಹಬ್ಬ ಆಚರಿಸಿದ್ದಾರೆ.

    ಫೆಬ್ರವರಿ 26ರಂದು ಎಲಿಜಬೆತ್ ಕೊಕ್ರೆಲ್ ಎಂಬ ಅಜ್ಜಿ 100 ರ ಸಂಭ್ರಮದಲ್ಲಿ ತನ್ನ ಗೆಳೆಯರ ಹಾಗೂ ಕುಟುಂಬದವರ ಮುಂದೆ ಸಖತ್ ಸ್ಟೆಪ್ ಹಾಕುವ ಮೂಲಕ ಯುವಜನತೆಯನ್ನೇ ನಾಚುವಂತೆ ಮಾಡಿದ್ದಾರೆ. ಅಜ್ಜಿಯ ಈ ಡ್ಯಾನ್ಸನ್ನು ಮೊರೆನೊ ವಾಲಿ ಎಂಬಾಕೆ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೋಡ್ ಮಾಡಿದ್ದು, ಇದೀಗ ವೈರಲ್ ಆಗಿದೆ.

    ಟ್ರೆಸರ್ ಮರ್ನೆ ಎಂಬಾಕೆ ತನ್ನ ಇನ್‍ಸ್ಟಾಗ್ರಾಂ ಈ ವಿಡಿಯೋವನ್ನು ಅಪ್‍ಲೋಡ್ ಮಾಡಿದ್ದು, ಇದನ್ನ 20 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 269 ಮಂದಿ ಕಮೆಂಟ್ಸ್ ಹಾಕಿದ್ದಾರೆ. ಅಜ್ಜಿಯ ಈ ಡ್ಯಾನ್ಸ್ ನೋಡಿದ ಮಂದಿ 100 ರ ಸಂಭ್ರದಲ್ಲಿ ಅಜ್ಜಿ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಐ ಲವ್ ದಿಸ್ ವಿಡಿಯೋ ಅಂತಾ ಕೆಲವರು ಹೇಳಿದ್ರೆ ಇನ್ನು ಕೆಲವರು, ಅಜ್ಜಿಯಾದ್ರೂ ಪರವಾಗಿಲ್ಲ ನನಗಿಂತ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ ಅಂತಾ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

    https://www.instagram.com/p/BQ9ZJSGA4xh/