Tag: ಹುಟ್ಟುಹಬ್ಬ

  • 50 ಸಾಲು ಸಸಿ ನೆಡುವ ಮೂಲಕ ಸುದೀಪ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಿದ್ರು!

    50 ಸಾಲು ಸಸಿ ನೆಡುವ ಮೂಲಕ ಸುದೀಪ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಿದ್ರು!

    ಚಾಮರಾಜನಗರ: ಇಂದು ಸ್ಯಾಂಡಲ್ ವುಡ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ 43ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಸುದೀಪ್ ಅಭಿನಮಾನಿಗಳು ಚಾಮರಾಜನಗರದಲ್ಲಿ ವಿಶೇಷವಾಗಿ ಹುಟ್ಟುಹಬ್ಬವನ್ನು ಆಚರಿಸಿದರು.

    ಹೌದು. ನಗರದ ಈಶ್ವರಿ ಮ್ಯೂಸಿಕಲ್ ಅಕಾಡೆಮಿ ಅಂಡ್ ಸೋಷಿಯಲ್ ಟ್ರಸ್ಟ್ ವತಿಯಿಂದ 50 ಸಾಲು ಸಸಿಗಳನ್ನು ನೆಟ್ಟು, ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.

    ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ ಟ್ರಸ್ಟ್ ಅಧ್ಯಕ್ಷ ವೆಂಕಟೇಶ್, ನಟರ ಹಾಗೂ ಗಣ್ಯರ ಜನ್ಮದಿನದಂದು ಗಿಡಗಳನ್ನು ನೆಟ್ಟು ಪಾಲನೆ, ಪೋಷಣೆ ಮಾಡಿಕೊಂಡು ಬರುತ್ತಿದ್ದಾರೆ. ಅದ್ರಂತೆ ಸುದೀಪ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಂದು ಗಿಡ ನೆಟ್ಟು ಹುಟ್ಟು ಹಬ್ಬ ಆಚರಣೆ ಮಾಡಿದ್ರು.

  • ಸಿಎಂಗೆ ಇಂದು 69ನೇ ಹುಟ್ಟುಹಬ್ಬದ ಸಂಭ್ರಮ

    ಸಿಎಂಗೆ ಇಂದು 69ನೇ ಹುಟ್ಟುಹಬ್ಬದ ಸಂಭ್ರಮ

    ಬೆಂಗಳೂರು: ಸಿಎಂ ಸಿದ್ದರಾಮಯ್ಯನವರಿಗೆ ಇಂದು 69ನೇ ಹುಟ್ಟುಹಬ್ಬದ ಸಂಭ್ರಮ. ಸಿಎಂ ಸಿದ್ದರಾಮಯ್ಯ ಹುಟ್ಟುಹಬ್ಬವನ್ನು ಯಾವತ್ತೂ ಆಚರಿಸಿಕೊಂಡಿಲ್ಲ.

    ನಾನು ಹುಟ್ಟಿದ ದಿನವೇ ಸರಿಯಾಗಿ ಗೊತ್ತಿಲ್ಲ ಅನ್ನುವ ಸಿದ್ದರಾಮಯ್ಯ ಅವರು ನಾನು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ. ಕಾರ್ಯಕರ್ತರು, ಅಭಿಮಾನಿಗಳಿಗೂ ಹುಟ್ಟುಹಬ್ಬ ಆಚರಿಸಬೇಡಿ ಎಂದೂ ಸಿಎಂ ಹೇಳಿದ್ದಾರೆ.

    ಕರ್ನಾಟಕದ 22ನೇ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಮೈಸೂರಿನ ವರುಣ ಹೋಬಳಿಯ ಸಿದ್ದರಾಮನಹುಂಡಿಯಲ್ಲಿ ಆಗಸ್ಟ್ 12, 1948ರಂದು ಜನಿಸಿದರು. 2015ರಲ್ಲಿ ಬರದ ಕಾರಣದಿಂದಾಗಿ ಸಿಎಂ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಕಳೆದ ವರ್ಷದ ಜುಲೈನಲ್ಲಿ ಹಿರಿಯ ಪುತ್ರ ರಾಕೇಶ್ ನಿಧನದ ಶೋಕದಲ್ಲಿದ್ದರು.

    ನಿನ್ನೆ ಮೈಸೂರಿನಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಹೊಲಿಗೆ ಯಂತ್ರ, ವಿಕಲಚೇತನರಿಗೆ ಸೈಕಲ್ ಮತ್ತು ಸೋಲಾರ್ ದೀಪ ವಿತರಿಸುವ ಮೂಲಕ ಸಿದ್ದರಾಮಯ್ಯ ಬರ್ತ್‍ಡೇ ಆಚರಿಸಿದರು. ಇಂದು ಅವರು ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸಲಿದ್ದು, ಇಡೀ ದಿನ ರಾಯಚೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಜೊತೆ ಪಾಲ್ಗೊಳಲ್ಲಿದ್ದಾರೆ.

  • ಸಂಸದ ಶ್ರೀರಾಮುಲು ಹುಟ್ಟುಹಬ್ಬಕ್ಕೆ ಗಾಲಿ ಜನಾರ್ದನ ರೆಡ್ಡಿ ಶುಭ ಕೋರಿದ್ದು ಹೀಗೆ

    ಸಂಸದ ಶ್ರೀರಾಮುಲು ಹುಟ್ಟುಹಬ್ಬಕ್ಕೆ ಗಾಲಿ ಜನಾರ್ದನ ರೆಡ್ಡಿ ಶುಭ ಕೋರಿದ್ದು ಹೀಗೆ

    ಬಳ್ಳಾರಿ: ಇಂದು ಸಂಸದ ಶ್ರೀರಾಮುಲು ಅವರು ತಮ್ಮ 46ನೇ ಜನ್ಮ ದಿನವನ್ನು ಆಚರಿಸಿಕೊಂಡರು. ಗೆಳೆಯ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಕವನಗಳ ಮುಖಾಂತರ ಫೇಸ್ ಬುಕ್ ನಲ್ಲಿ ಶ್ರೀರಾಮುಲುಗೆ ಶುಭಕೋರಿದ್ದಾರೆ. ರಾಜಕೀಯವಾಗಿ ಮತ್ತು ವೈಯಕ್ತಿಕವಾಗಿ ಹತ್ತಿರವಿರುವ ಆತ್ಮೀಯ ಗೆಳೆಯನಿಗೆ ಸುಂದರ ಸಾಲುಗಳ ಮೂಲಕ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.

    ಫೇಸ್‍ಬುಕ್ ನಲ್ಲಿ ಬರೆದಿದ್ದು ಹೀಗೆ..

    ನನ್ನ, ನಿನ್ನ ಸ್ನೇಹ ಆರಂಭವಾದ ದಿನಗಳಲ್ಲಿ ಆಗ ನಮಗೆ ಯಾವುದೇ ಅಧಿಕಾರ, ಅಂತಸ್ತು, ಜಾತಿ, ಮತ ಭೇದ ಇದ್ಯಾವುದರ ಅರಿವು ಇರಲಿಲ್ಲ. ಇಂದಿಗೂ ಇಲ್ಲ. ಅದೇ ಸ್ನೇಹ ನಿಷ್ಕಳಂಕವಾಗಿ ಮುಂದುವರಿಯುತ್ತಿರುವ ಅನೂಹ್ಯ ಸ್ನೇಹ ನಮ್ಮದು. ಹಣ ಅಧಿಕಾರ, ಸಿರಿ ಸಂಪತ್ತು, ಅಂತಸ್ತು ಜೀವನದಲ್ಲಿ ಬರುತ್ತವೆ ಹೋಗುತ್ತವೆ. ಆದರೆ ಎಂದಿಗೂ ನಿನ್ನಲ್ಲಿ ಅಂತಹ ಕೂದಲೆಳೆಯಷ್ಟು ಬದಲಾವಣೆಯನ್ನು ನಾನು ಕಾಣಲೇ ಇಲ್ಲ.

    ನನ್ನ ಒಳ್ಳೆಯ ದಿನಗಳಲ್ಲಿ ಹಲವಾರು ಜನರು ನನ್ನಿಂದ ನಾನಾ ರೀತಿಯ ಲಾಭ ಪಡೆದು ಒಳಿತನ್ನು ಪಡೆದಿದ್ದಾರೆ. ನನ್ನ ಕಷ್ಟದ ದಿನಗಳಲ್ಲಿ ಇವರ್ಯಾರು ಸೌಜನ್ಯಕ್ಕಾದರೂ ನನಗೆ ಸಾಥ್ ನೀಡಲಿಲ್ಲ. ಇಂತಹ ಪ್ರಪಂಚದಲ್ಲಿ ಇಂತಹ ಜನರೂ ಇರುತ್ತಾರೆ ಎಂಬುದು ನನಗಾಗ ತಿಳಿಯಿತು. ಅದರೆ ನೀನು ಮಾತ್ರ ಪುನಃ ನನ್ನ ಕಷ್ಟದ ದಿನಗಳಲ್ಲಿ ನನಗೆ ಒಂದು ರೀತಿಯ ವಜ್ರದಂತಹ ರಕ್ಷಾ ಕವಚ ನೀಡಿದೆ. ಆ ಮೂಲಕ ಇಡೀ ನನ್ನ ಕುಟುಂಬಕ್ಕೆ ಧೈರ್ಯ ತುಂಬಿದೆ. ಮರು ಜನ್ಮ ನೀಡಿದಂತೆ ನನಗೆ, ನನ್ನ ಕುಟುಂಬದ ಬದುಕಿಗೆ ಹೊಸ ಚೇತನ ನೀಡಿದೆ. ಕಷ್ಟದ ದಿನಗಳಿಂದ ಬೇರ್ಪಡಿಸಿ ಮರು ಹುಟ್ಟು ನೀಡಿದೆ. ಎಂದಿನಂತೆ ಜೀವನ ನಡೆಸುವ ಮಾರ್ಗಕ್ಕೆ ತಂದು ನಿಲ್ಲಿಸಿದ ನಿನ್ನ ಆ ತ್ಯಾಗ, ಸುಗುಣ ಸ್ವಭಾವಕ್ಕೆ, ನಿನ್ನ ನಿಸ್ವಾರ್ಥ, ನಿಷ್ಕಲ್ಮಶ, ನಿಷ್ಕಳಂಕ ಹೃದಯಕ್ಕೆ ಈ ಶುಭ ಸಂದರ್ಭದಲ್ಲಿ ನನ್ನದೊಂದು ನಮ್ರವಾದ ಅಭಿನಂದನೆ.

    ಸ್ನೇಹಿತನಿಗೆ ಸ್ನೇಹಜೀವಿಯಾಗಿ, ಬಡವ-ಬಲ್ಲಿದರ ಆದರ್ಶ ನಾಯಕನಾಗಿ ಸದಾ ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ನೆಮ್ಮದಿಯ ಬದುಕು ನೀಡುವ ನಿಟ್ಟಿನಲ್ಲಿ ನೀನು ಮಾಡುತ್ತಿರುವ ಸೇವಾ ಯಜ್ಞ, ಹೋರಾಟ ನಿಜಕ್ಕೂ ಅವಿಸ್ಮರಣೀಯ. ಎಂತಹ ಮನುಷ್ಯನಾದರೂ ಕೆಲವೊಂದು ಸಂದರ್ಭದಲ್ಲಿ ಸ್ವಲ್ಪವಾದರೂ ಬದಲಾಗುತ್ತಾನೆ ಅಥವಾ ಬದಲಾದಂತೆ ಭಾಸವಾಗುತ್ತಾನೆ. ನಿನ್ನ ಸ್ನೇಹದ ವಿಷಯದಲ್ಲಿ ಮಾತ್ರ ಹೇಳೋದಾದರೆ ನೀನು ಎಂದಿಗೂ ಬದಲಾಗಲಿಲ್ಲ. ನೀನು ಬದಲಾದಂತೆ ನನಗೆ ಭಾಸವೂ ಆಗಲಿಲ್ಲ.

    ನೀನು ಜನಿಸಿದ ನಕ್ಷತ್ರ, ದಿನ, ಮುಹೂರ್ತವೇ ಅಂತಹದ್ದಿದೆ. ನೀನು ಭುವಿಗೆ ಉದಯಿಸಿದ ದಿನ ಖಂಡಿತ ಸುದಿನ ಇರಬೇಕು. ಹೀಗಾಗಿ ನೀನು ಸದಾ ಜನಪರ ಕಾಳಜಿ ಹೊಂದಿರುವೆ. ಜನನಾಯಕನಾಗಿ ಜನಮಾನಸದಲ್ಲಿ ಬೇರೂರಿರುವ ನೀನು ಹೀಗೆ ಸದಾ ನಿನ್ನ ಅತುಲಿತ ಸೇವೆಯನ್ನು ಜನರಿಗಾಗಿ ಮುಂದುವರಿಸುತ್ತಿರು. ಆ ಭಗವಂತ ನಿನಗೆ, ನಿನ್ನ ಕಾರ್ಯಕ್ಷಮತೆಗೆ ಎಲ್ಲವನ್ನೂ ದಯಪಾಲಿಸಲಿ. ಸಹಸ್ರಾರು ತಾರೆಗಳಲ್ಲಿ ದೃವತಾರೆಯಂತೆ ಸದಾ ಕಂಗೊಳಿಸುತ್ತಿರು. ಭಗವಂತನ ಆಶೀರ್ವಾದ, ನೀನು ನಂಬಿದ ಸಿದ್ಧಾಂತದೊಂದಿಗೆ ಜನರ ಪ್ರೀತಿ, ವಿಶ್ವಾಸ, ನಿನ್ನ ಮೇಲೆ ಸದಾ ಹೀಗೆಯೇ ಇರಲಿ. ಇಂತಹ ಅನೇಕ ಹುಟ್ಟು ಹಬ್ಬಗಳನ್ನು ಜೊತೆ ಜೊತೆಗೇ ಆಚರಿಸಿಕೊಳ್ಳುವ ಭಾಗ್ಯ ನಮದಾಗಲಿ. ಸ್ನೇಹಕ್ಕೆ ಯಾವತ್ತೂ ಬೆಲೆ ಕಟ್ಟಲು ಸಾಧ್ಯವೇ?

    ವಿಪತ್ಕಾಲದಲ್ಲಿ ಧೈರ್ಯ, ಅಭ್ಯುಧಯ ಉಂಟಾದಾಗ ಕ್ಷಮೆ-ದಯೆ, ಸಭೆ ಸಮಾರಂಭಗಳಲ್ಲಿ ಮಾತಿನ ಚತುರತೆ, ಸೋಲುಗಳು ಉಂಟಾದಾಗ ತೋರಿದ ಪರಾಕ್ರಮ, ಯಶಸ್ಸಿನಲ್ಲಿ ಆಸಕ್ತಿ, ಜನರ ಸೇವೆಯೇ ನಿಜವಾದ ಸಾರ್ಥಕತೆ ಎಂಬ ನಿನ್ನ ಗುಣಕ್ಕೆ ನಾನು ಪರ್ಯಾಯವಾಗಿ ಏನಾದರು ಹೇಳಲುಂಟೆ? ನನ್ನ ಬದುಕಿನ ಬಂಡಿಯಾಗಿ, ಜನಮಾನಸದ ಕೊಂಡಿಯಾಗಿ ದಿನೇ ದಿನೇ ಬಡವರ- ಬಲ್ಲಿದರ ಹಿತ ಚಿಂತನೆ ಮಾಡುತ್ತಲೇ ಕಾಯಕಕ್ಕೆ ಇಳಿಯುವ ನಿನ್ನ ಧರ್ಮ ಗುಣಗಳು ಎಂದಿಗೂ ಅನುಕರಣೀಯ.

    ಇದೋ ನನ್ನ ಪ್ರಾಣಸ್ನೇಹಿತ ಬಿ.ಶ್ರೀರಾಮುಲುಗೆ ಇದೇ ನನ್ನ ಅಕ್ಕರೆಯ ಹುಟ್ಟುಹಬ್ಬದ ಹಾರ್ದಿಕ ಶುಭಶಯಗಳು.
    ನಿನ್ನ ನಲ್ಮೆಯ ಗೆಳೆಯ,
    ಜಿ.ಜನಾರ್ದನ ರೆಡ್ಡಿ.

    ತಮ್ಮ ಜೀವನದಲ್ಲಿ ಕಷ್ಟಗಳು ಬಂದಾಗ ಎದೆಗುಂದದೇ ಸಹಾಯ ಮಾಡಿ ಮಾನಸಿಕವಾಗಿ ಸದೃಢಗೊಳಿಸಿದ ಗೆಳಯನಿಗೆ ಜರ್ನಾದನ ರೆಡ್ಡಿ ಅವರು ಮನದಾಳದ ಮಾತುಗಳನ್ನು ಹೇಳುವ ಮೂಲಕ ಶುಭಾಶಯ ಕೋರಿದ್ದಾರೆ.

  • ಬಾಲಿವುಡ್ ಸೆಲೆಬ್ರೆಟಿಗಳ ಜೊತೆ ಶಾಸಕ ಜಮೀರ್ ಅಹಮದ್ ಹುಟ್ಟುಹಬ್ಬ ಆಚರಣೆ

    ಬಾಲಿವುಡ್ ಸೆಲೆಬ್ರೆಟಿಗಳ ಜೊತೆ ಶಾಸಕ ಜಮೀರ್ ಅಹಮದ್ ಹುಟ್ಟುಹಬ್ಬ ಆಚರಣೆ

    ಬೆಂಗಳೂರು: ಮಂಗಳವಾರ ಜೆಡಿಎಸ್ ರೆಬಲ್ ಶಾಸಕ ಜಮೀರ್ ಅಹಮದ್ ಖಾನ್ ಅವರ 51ನೇ ವರ್ಷದ ಹುಟ್ಟು ಹಬ್ಬದ ಸಮಾರಂಭವು ಚಾಮರಾಜಪೇಟೆಯ ಜೆ ಜೆ ನಗರ ಬಸ್ ನಿಲ್ದಾಣದಲ್ಲಿ  ಅದ್ಧೂರಿಯಾಗಿ ನಡೆಯಿತು.

    ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಸೊಹೈಲ್ ಖಾನ್, ಸೋನು ಸೂದ್, ಅರ್ಬಾಜ್ ಖಾನ್, ಗುಲ್ಶನ್ ಗ್ರೋವರ್, ತೆಲುಗು ಹಾಸ್ಯ ನಟ ಆಲಿ ಭಾಗಿಯಾಗಿದ್ದರು. ಒಟ್ಟಿನಲ್ಲಿ ಬಾಲಿವುಡ್ ಸೆಲೆಬ್ರೆಟಿಗಳ ಮಧ್ಯೆ ಖಾನ್ ಕತ್ತಿಯಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು.

    ಬಳಿಕ ಮಾತನಾಡಿದ ಜಮೀರ್, 51 ವರ್ಷದ ಹುಟ್ಟು ಹಬ್ಬದ ಸಮಾರಂಭಕ್ಕೆ ಸಲ್ಮಾನ್ ಖಾನ್ ಬರಬೇಕಿತ್ತು. ಆದರೆ ಶೂಟಿಂಗ್ ಇದ್ದ ಕಾರಣ ಅವರು ಬರಲಿಲ್ಲ. ಅವರ ಸಹೋದರರನ್ನು ಕಳುಹಿಸಿದ್ದಾರೆ. ರಾಜಕೀಯ ಕಾರಣಕ್ಕೆ ಬಾಲಿವುಡ್ ನಟರನ್ನು ಕರೆಸಿಲ್ಲ. ನನ್ನ ಮೇಲಿನ ಪ್ರೀತಿಯಿಂದ ಈ ನಟರು ಬಂದಿದ್ದಾರೆ. ನಟರಿಂದ ಓಟು ಬರೋದಿಲ್ಲ. ಅಭಿಮಾನಿಗಳಿಗಾಗಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದೇನೆ ಅಂತ ಹೇಳಿದ್ರು.

    ಇದೇ ವೇಳೆ, ಕಳೆದ ತಿಂಗಳವರೆಗೆ ನಾವು ಜೆಡಿಎಸ್ ನಲ್ಲೇ ಇರಲು ಬಯಸಿದ್ದೆವು. ಆದರೆ ಮಾಜಿ ಅಣ್ಣ ಕುಮಾರಸ್ವಾಮಿ ಅವರ ಲೂಸ್ ಟಾಕ್ ನಿಂದ ಪಕ್ಷ ಬಿಡಲು ತೀರ್ಮಾನ ಮಾಡಿದೆವು. ಯಾವುದೇ ಕಾರಣಕ್ಕೂ ಜೆಡಿಎಸ್ ಗೆ ವಾಪಸ್ ಹೋಗಲ್ಲ. ಇಮ್ರಾನ್ ಪಾಷಾ ನನ್ನ ಜೊತೆಯಲ್ಲೇ ಇದ್ದಾರೆ. ಬೇರೆ ಕೆಲಸದ ಕಾರಣ ಇಂದು ಬಂದಿಲ್ಲ. ನನ್ನ ಜೊತೆ ಇರುವ ನನ್ನ ಬೆಂಬಲಿಗರನ್ನು ಬಲವಂತವಾಗಿ ನಾನು ಇಟ್ಟುಕೊಂಡಿಲ್ಲ. ದೇವೇಗೌಡರು ನನ್ನ ರಾಜಕೀಯ ಗುರುಗಳು, ಕುಮಾರಸ್ವಾಮಿ ಅಲ್ಲ. ಹುಟ್ಟುಹಬ್ಬದಂದು ನಾನು ಈ ಹಿಂದೆಯೂ ದೇವೇಗೌಡರ ಮನೆಗೆ ಹೋಗಿಲ್ಲ. ಇಂದು ಹೋದರೆ ಬೇರೆ ಅರ್ಥ ಬರುತ್ತೆ, ಆ ಕಾರಣಕ್ಕಾಗಿ ಹೋಗಿಲ್ಲ. ದೇವೇಗೌಡರು ನನಗೆ ಕೆಟ್ಟದು ಮಾಡಲಿ, ಒಳ್ಳೆಯದು ಮಾಡಲಿ. ಹುಟ್ಟಿದ ಹಬ್ಬದಂದು ಅವರ ವಿರುದ್ಧ ಮಾತಾಡಲ್ಲ ಎಂದರು.

    ಜಮೀರ್ ಅಹಮದ್ ಖಾನ್ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಅವರ ಪುತ್ರ ಜೈದ್ ಖಾನ್ ಬಾಲಿವುಡ್‍ಗೆ ಎಂಟ್ರಿ ನೀಡುತ್ತಿದ್ದಾರೆ. ಅವರಿಗೆ ಆತ್ಮೀಯ ಸ್ವಾಗತ ಕೊರುತ್ತೇನೆ ಅಂತ ನಟ ಸೊಹೈಲ್ ಖಾನ್ ತಿಳಿಸಿದರು.

    ಜಮೀರ್ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಇಂದು ನಾವು ಶುಭಾಶಯ ಕೋರಲು ಬಂದಿದ್ದೇವೆ. ನೀವೆಲ್ಲಾ ಜಮೀರ್ ಅವರನ್ನು ತುಂಬಾ ಪ್ರೀತಿಸುತ್ತೀರಿ. ಅವರಿಗಾಗಿ ಸಾಕಷ್ಟು ಕೆಲಸ ಮಾಡಿದ್ದೀರಿ. ಇನ್ನು ಮುಂದೆಯೂ ಕೂಡ ಜಮೀರ್ ಅಹಮದ್ ಅವರಿಗೆ ಸಹಕಾರ ನೀಡುತ್ತೀರಿ ಎಂದು ಭಾವಿಸುತ್ತೇನೆ ಅಂತ ನಟ ಅರ್ಬಾಜ್ ಖಾನ್ ಹೇಳಿದ್ರು.

    ಲಘು ಲಾಠಿ ಚಾರ್ಜ್: ಈಟಾ ಮಾಲ್ ಸರ್ಕಲ್ ನಿಂದ ಮೊದಲು ತೆರದ ವಾಹನದಲ್ಲಿ ಮೆರವಣಿಗೆ ಮಾಡಿ ಬಳಿಕ ಸಭೆ ಸೇರಲಾಯಿತು. ಈ ವೇಳೆ ಬಾಲಿವುಡ್ ಸ್ಟಾರ್ ಗಳನ್ನು ನೋಡಲು ಅಭಿಮಾನಗಳಿಂದ ನೂಕು ನುಗ್ಗಲು ಉಂಟಾಯಿತು. ಇದರಿಂದಾಗಿ ಪೊಲೀಸರಿಗೆ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಲಾಠಿ ರುಚಿ ತೋರಿಸಿದ್ರೂ ಅಭಿಮಾನಿಗಳು ಜಗ್ಗಲಿಲ್ಲ. ಕೊನೆಗೆ ಲಘು ಲಾಠಿ ಜಾರ್ಜ್ ಮಾಡಬೇಕಾಯಿತು. ಅಭಿಮಾನಿಗಳ ನೂಕು ನುಗ್ಗಲಿನಿಂದ ಚೇರ್ ಗಳು ಪುಡಿಪುಡಿಯಾಗಿದ್ದು, ಬ್ಯಾನರ್ ಗಳು ಹರಿದುಹೋಗಿವೆ.

     

  • ಹ್ಯಾಟ್ರಿಕ್ ಹೀರೋಗೆ ಇಂದು 55ರ ಸಂಭ್ರಮ: ಶಿವಣ್ಣನ ಬರ್ತ್ ಡೇಗೆ ಅಪ್ಪು ಕೊಟ್ಟ ಗಿಫ್ಟ್ ಏನು ಗೊತ್ತೆ?

    ಹ್ಯಾಟ್ರಿಕ್ ಹೀರೋಗೆ ಇಂದು 55ರ ಸಂಭ್ರಮ: ಶಿವಣ್ಣನ ಬರ್ತ್ ಡೇಗೆ ಅಪ್ಪು ಕೊಟ್ಟ ಗಿಫ್ಟ್ ಏನು ಗೊತ್ತೆ?

    ಬೆಂಗಳೂರು: ಸ್ಯಾಂಡಲ್ ವುಡ್‍ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗಿಂದು 55 ನೇ ಹುಟ್ಟು ಹಬ್ಬದ ಸಂಭ್ರಮ.

    ಶಿವರಾಜ್ ಕುಮಾರ್, ತಮ್ಮ ನಿವಾಸದಲ್ಲಿ ತಡರಾತ್ರಿ ಕುಟುಂಬಸ್ಥರು, ಸ್ನೇಹಿತರ ಹಾಗೂ ನೂರಾರು ಜನ ಅಭಿಮಾನಿಗಳ ಸಮ್ಮುಖದಲ್ಲಿ ಸರಳವಾಗಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡ್ರು.

    ಪತ್ನಿ ಗೀತಾ ಶಿವರಾಜ್ ಕುಮಾರ್ ಜೊತೆ ಮೊದಲಿಗೆ ಕೇಕ್ ಕತ್ತರಿಸಿ, ಬಳಿಕ ಸ್ನೇಹಿತರು ಮತ್ತು ಅಭಿಮಾನಿಗಳ ಜೊತೆ ಬರ್ತಡೇ ಸೆಲಬ್ರೇಷನ್ ಮಾಡಿಕೊಂಡ್ರು. ಶಿವಣ್ಣನ ಹುಟ್ಟು ಹಬ್ಬಕ್ಕೆ ಪುನೀತ್ ರಾಜ್ ಕುಮಾರ್ ಮೂರು ಲಕ್ಷ ರೂಪಾಯಿ ಮೌಲ್ಯದ ಬಿಎಂಡಬ್ಲೂ ಸೈಕಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

     

     

  • ಹುಟ್ಟುಹಬ್ಬಕ್ಕೆ ಖರ್ಚು ಮಾಡೋ ಹಣವನ್ನು ಬಡವರಿಗೆ ನೀಡಿದ್ರೆ ಅದೇ ನನಗೆ ನೀಡೋ ಗಿಫ್ಟ್: ಅಭಿಮಾನಿಗಳಿಗೆ ಸುದೀಪ್ ಪತ್ರ

    ಹುಟ್ಟುಹಬ್ಬಕ್ಕೆ ಖರ್ಚು ಮಾಡೋ ಹಣವನ್ನು ಬಡವರಿಗೆ ನೀಡಿದ್ರೆ ಅದೇ ನನಗೆ ನೀಡೋ ಗಿಫ್ಟ್: ಅಭಿಮಾನಿಗಳಿಗೆ ಸುದೀಪ್ ಪತ್ರ

    ಬೆಂಗಳೂರು: ಇನ್ನು ಮುಂದೆ ನಾನು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

    ಹುಟ್ಟುಹಬ್ಬಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳಿಗೆ ಪತ್ರ ಬರೆದಿರುವ ಅವರು, ಬಹಳಷ್ಟು ಮಂದಿ ಕಷ್ಟಪಟ್ಟು ಗಳಿಸಿದ ಹಣವನ್ನು ಕೇಕ್, ಹಾರಗಳಿಗೆ ಖರ್ಚು ಮಾಡುವುದನ್ನು ನಾನು ನೋಡಿದ್ದೇನೆ. ಹುಟ್ಟುಹಬ್ಬದಂದು ರಸ್ತೆಯನ್ನು, ಬೀದಿಯನ್ನು ಮತ್ತು ನನ್ನ ಮನೆಯನ್ನು ಸಿಂಗರಿಸಲು ಹಲವಾರು ಮಂದಿ ಸಿಕ್ಕಾಪಟ್ಟೆ ಹಣ ಖರ್ಚು ಮಾಡುತ್ತಾರೆ. ಆದರೆ ನೀವು ಕೇಕು ಮತ್ತು ಸಿಂಗಾರಕ್ಕೆ ಬಳಸುವ ಆ ಹಣದಿಂದ ಅದೆಷ್ಟೋ ಮನೆಗಳನ್ನು ಉಳಿಸಬಹುದು. ಅದೆಷ್ಟೋ ಜೀವಗಳನ್ನು ಉಳಿಸಬಹುದು. ನನ್ನನ್ನು ನಂಬಿ ಎಂದು ಕೇಳಿಕೊಂಡಿದ್ದಾರೆ.

    ಸುದೀಪ್ ಗೂಗಲ್ ಪ್ಲಸ್ ನಲ್ಲಿ ಅಭಿಮಾನಿಗಳಿಗೆ ಬರೆದಿರುವ ಪತ್ರವನ್ನು ಇಲ್ಲಿ ನೀಡಲಾಗಿದೆ.

    ನಮಸ್ತೇ ಗೆಳೆಯರೇ,
    ಈ ವರ್ಷಗಳಲ್ಲಿ ನೀವು ನನ್ನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುವುದನ್ನು ನೋಡಿ ಖುಷಿ ಪಟ್ಟಿದ್ದೇನೆ. ನಾನೇ ಪುಣ್ಯವಂತ ಎಂದುಕೊಂಡಿದ್ದೇನೆ. ಕಳೆದ ಎರಡು ದಶಕಗಳಿಂದ ನೀವೆಲ್ಲರೂ ನನಗೆ ತೋರಿಸಿದ ಬೇಷರತ್ ಪ್ರೀತಿಗೆ ನಾನು ಋಣಿ. ಇದಕ್ಕೆ ಬದಲಾಗಿ ನಾನು ಪ್ರೀತಿಯನ್ನಷ್ಟೇ ನೀಡಬಲ್ಲೆ ಹೊರತು ಬೇರೇನೂ ಕೊಡುವುದಕ್ಕೆ ಸಾಧ್ಯವಿಲ್ಲ. ನನ್ನ ಕಡೇ ಉಸಿರಿನವರೆಗೂ ಆ ಪ್ರೀತಿ ಹಾಗೇ ಇರುತ್ತದೆ.

    ಬಹಳಷ್ಟು ಮಂದಿ ಈ ವರ್ಷಗಳಲ್ಲಿ ತಾವು ಕಷ್ಟಪಟ್ಟು ಗಳಿಸಿದ ಹಣವನ್ನು ಕೇಕ್‍ಗಳು, ಹಾರಗಳು ಮತ್ತಿತರ ವಸ್ತುಗಳಿಗಾಗಿ ವ್ಯಯಿಸುವುದನ್ನು ನಾನು ಗಮನಿಸಿದ್ದೇನೆ. ಅನೇಕರು ನನ್ನನ್ನು ನೋಡಲೆಂದು ತಾವು ದುಡಿದ ಹಣವನ್ನು ಖರ್ಚು ಮಾಡಿ ಬಂದಿದ್ದು ನನಗೆ ಗೊತ್ತಿದೆ. ಹುಟ್ಟುಹಬ್ಬದಂದು ರಸ್ತೆಯನ್ನು, ಬೀದಿಯನ್ನು ಮತ್ತು ನನ್ನ ಮನೆಯನ್ನು ಸಿಂಗರಿಸಲು ಹಲವಾರು ಮಂದಿ ಸಿಕ್ಕಾಪಟ್ಟೆ ಹಣ ಖರ್ಚು ಮಾಡುತ್ತಾರೆ.

    ನಾನು ನಿಮ್ಮೆಲ್ಲರ ಹತ್ತಿರ ಮನವಿ ಮಾಡಿಕೊಳ್ಳುವುದಿಷ್ಟೇ. ನೀವು ಖರ್ಚು ಮಾಡುವ ಆ ಎಲ್ಲಾ ಹಣವನ್ನು ಅವಶ್ಯಕತೆ ಇರುವವರಿಗೆ ನೀಡಿ. ಒಂದು ದಿನದ ಊಟಕ್ಕಾಗಿ ಒದ್ದಾಡುವವರ ಹಸಿವು ನೀಗಿಸುವುದಕ್ಕೆ ಈ ಹಣವನ್ನು ಬಳಸಿ. ನೀವು ಕೇಕು ಮತ್ತು ಸಿಂಗಾರಕ್ಕೆ ಬಳಸುವ ಆ ಹಣದಿಂದ ಅದೆಷ್ಟೋ ಮನೆಗಳನ್ನು ಉಳಿಸಬಹುದು. ಅದೆಷ್ಟೋ ಜೀವಗಳನ್ನು ಉಳಿಸಬಹುದು. ನನ್ನನ್ನು ನಂಬಿ.

    ಇದು ನೀವು ನನಗೆ ನೀಡಬಹುದಾದ ಅತ್ಯುತ್ತಮ ಉಡುಗೊರೆ. ಸಂಭ್ರಮಿಸುವ ಅತ್ಯುತ್ತಮ ವಿಧಾನ ಕೂಡ ಇದೇ ಅಂತ ನಾನಂದುಕೊಂಡಿದ್ದೇನೆ. ಇದು ಅವಶ್ಯಕತೆಯಲ್ಲಿರುವ ನಮ್ಮ ಜನಕ್ಕೆ ನಾವು ಮಾಡಬಹುದಾದ ಪುಟ್ಟ ಸಹಾಯ.ಇನ್ನು ಮುಂದೆ ನಾನು ನನ್ನ ಹುಟ್ಟುಹಬ್ಬವನ್ನು ಆಚರಿಸುವುದಿಲ್ಲ. ಅವತ್ತು ನಾನು ಮನೆಯಿಂದ ದೂರ ಇರುತ್ತೇನೆ. ಬಹುಶಃ ನಾನು ನಿಮಗೆ ಏನು ಮಾಡಲು ಹೇಳಿದ್ದೇನೋ ಅದನ್ನೇ ಮಾಡುತ್ತಿರುತ್ತೇನೆ. ನನ್ನ ಈ ಮಾತನ್ನು ನೀವೆಲ್ಲರೂ ಗೌರವಿಸುತ್ತೀರಿ ಅಂತಂದುಕೊಂಡಿದ್ದೇನೆ.

    ಬದುಕು ಕೊಟ್ಟಿರುವ ಅವಕಾಶವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳೋಣ. ಒಂದಷ್ಟು ಮಂದಿಯ ಮುಖದಲ್ಲಿ ನಗು ಮೂಡುವಂತೆ ಮಾಡೋಣ. ಒಂದ್ಸಲ ನಮ್ಮ ಸುತ್ತಮುತ್ತ ನೋಡಿದರೆ ಸಾಕು, ನೆರವಿನ ಅವಶ್ಯಕತೆ ಇರುವ ಹಲವಾರು ಮಂದಿ ನಮ್ಮ ಕಣ್ಣಿಗೆ ಬೀಳುತ್ತಾರೆ. ಅವರ ನೆರವಿಗೆ ಧಾವಿಸೋಣ. ಆ ಕೈಗಳನ್ನು ಹಿಡಿಯೋಣ.

    ಮುಂದೊಂದು ದಿನ, ಒಂದೇ ಒಂದು ಬೆಳಕಿನ ಕಿರಣಕ್ಕಾಗಿ ಹಂಬಲಿಸುವ ಹೊತ್ತಲ್ಲಿ, ಬೆಳಕು ನಿಮ್ಮ ಮೇಲೆ ಬಿದ್ದು ಹೊಳೆಯುವುದನ್ನು ನೀವು ಕಾಣುತ್ತೀರಿ.

    ತುಂಬು ಪ್ರೀತಿಯಿಂದ
    ಕಿಚ್ಚ

    1973 ಸೆಪ್ಟೆಂಬರ್ 2ರಂದು ಜನಿಸಿದ ಸುದೀಪ್ ಅವರಿಗೆ ಹಾಲಿವುಡ್ ಚಿತ್ರದಲ್ಲಿ ನಟಿಸಲು ಈಗ ಆಫರ್ ಬಂದಿದೆ. ಈ ಚಿತ್ರದ ನಟಿಸಲು ಸುದೀಪ್ ಒಪ್ಪಿಗೆ ನೀಡಿದ್ದು, ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

     

     

    https://twitter.com/lightdnight/status/884791507206651904

  • ಹುಟ್ಟುಹಬ್ಬದ ದಿನದಂದು ಧೋನಿಗೆ ಹೊಸ ಹೆಸರಿಟ್ಟ ಯುವಿ

    ಹುಟ್ಟುಹಬ್ಬದ ದಿನದಂದು ಧೋನಿಗೆ ಹೊಸ ಹೆಸರಿಟ್ಟ ಯುವಿ

    ಹೊಸದಿಲ್ಲಿ: ಟೀಂ ಇಂಡಿಯಾದ ಮಾಜಿ ನಾಯಕ ಎಂ ಎಸ್ ಧೋನಿ ಅವರು 36ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಕ್ರಿಕೆಟ್ ಆಟಗಾರರಾದ ಯುವರಾಜ್ ಸಿಂಗ್, ಸೆಹ್ವಾಗ್ ಸೇರಿದಂತೆ ಹಲವಾರು ಆಟಗಾರು ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.

    ಎಡಗೈ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಅವರು ಟ್ವೀಟ್ ಮಾಡಿ ಹೆಲಿಕಾಪ್ಟರ್ ಧೋನಿ ಎಂದು ಕರೆದು ಶುಭಾಶಯ ಕೋರಿದ್ದಾರೆ. ಕ್ರಿಕೆಟ್ ಚರಿತ್ರೆಯಲ್ಲಿ ನಿಮ್ಮ ಸಾಧನೆ ಇನ್ನೂ ಹೆಚ್ಚಾಗಲಿ. ಈ ಹುಟ್ಟುಹಬ್ಬದ ಕೇಕ್ ನಿಮಗಾಗಿ ಕಾಯುತ್ತಿದೆ ಎಂದು ಟ್ವೀಟರ್‍ನಲ್ಲಿ ಶುಭ ಕೋರಿದ್ದಾರೆ.

    ಕ್ಯಾಪ್ಟನ್ ಕೂಲ್ ಧೋನಿ ಹೆಲಿಕಾಪ್ಟರ್ ಶಾಟ್ ಹಿಂದೆ ನೋವಿನ ಕಥೆಯಿದೆ. ಧೋನಿ ಅವರಿಗೆ ಈ ರೀತಿಯ ಸಿಕ್ಸರ್ ಹೊಡೆಯುವುದನ್ನು ಕಲಿಸಿಕೊಟ್ಟವರು ಸ್ನೇಹಿತ ಮಾಜಿ ರಣಜಿ ಆಟಗಾರ ಸಂತೋಷ್ ಲಾಲ್. ಧೋನಿ ಮತ್ತು ಸಂತೋಷ್ ಲಾಲ್ ಈ ಹಿಂದೆ ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಸಂತೋಷ್ ಲಾಲ್ ಉತ್ತಮ ಬ್ಯಾಟ್ಸ್ ಮನ್ ಆಗಿದ್ದರು. ಇಬ್ಬರು ಒಟ್ಟಿಗೆ ಕ್ರಿಕೆಟ್ ಆಡುವ ಸಂದರ್ಭದಲ್ಲಿ ಧೋನಿ ಹೆಲಿಕಾಪ್ಟರ್ ಶಾಟ್ ಹೊಡೆಯುವದುನ್ನು ಹೇಳಿಕೊಟ್ಟಿದ್ದರು. ಅನಾರೋಗ್ಯಕ್ಕೆ ತುತ್ತಾಗಿದ್ದ ಸಂತೋಷ್ 2013ರ ಜೂನ್‍ನಲ್ಲಿ ಮೃತಪಟ್ಟಿದ್ದಾರೆ.

    https://www.youtube.com/watch?v=Qxw6IKyFr94

    https://twitter.com/YUVSTRONG12/status/883088220950478848

     

     

  • ಗೋಲ್ಡನ್ ಸ್ಟಾರ್ ಗಣೇಶ್‍ಗೆ 38ನೇ ಹುಟ್ಟುಹಬ್ಬ- ಆರೇಂಜ್ ಚಿತ್ರದ ಲೋಗೋ ರಿಲೀಸ್

    ಗೋಲ್ಡನ್ ಸ್ಟಾರ್ ಗಣೇಶ್‍ಗೆ 38ನೇ ಹುಟ್ಟುಹಬ್ಬ- ಆರೇಂಜ್ ಚಿತ್ರದ ಲೋಗೋ ರಿಲೀಸ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್‍ಗೆ ಹುಟ್ಟುಹಬ್ಬದ ಸಂಭ್ರಮ, 38ನೇ ವಸತಂತಕ್ಕೆ ಕಾಲಿಟ್ಟ ಗಣೇಶ್ ತಮ್ಮ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡ್ರು.

    ಈ ತಿಂಗಳಲ್ಲಿ ಮುಗುಳ್ನಗೆ ಚಿತ್ರ ಆಡಿಯೋ ರಿಲೀಸ್ ಆಗಲಿದ್ದು, ಇಂದಿನ ಹುಟ್ಟುಹಬ್ಬಕ್ಕೆ `ಆರೇಂಜ್’ ಚಿತ್ರದ ಲೋಗೋ ಬಿಡುಗಡೆ ಮಾಡಿದ್ದಾರೆ. ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಟ ಗಣೇಶ್, ನನ್ನ ಅಭಿಮಾನಿ ಹಾಗೂ ಗೆಳೆಯರ ಜೊತೆ ಸೇರಲು ಪ್ರತಿ ವಷ್ಧ ಹುಟ್ಟುಹಬ್ಬ ನನಗೊಂದು ಅವಕಾಶ ಮಾಡಿಕೊಡುತ್ತದೆ. ಈ ಒಂದು ದಿನವನ್ನು ಅಭಿಮಾನಿ, ಗೆಳೆಯರಿಗೋಸ್ಕರವೇ ನೀಡುತ್ತಿದ್ದು, ಅವರ ಜೊತೆನೇ ಇರುತ್ತೇವೆ. ಹುಟ್ಟು ಹಬ್ಬ ಆಚರಿಸಕೊಳ್ಳೆಮದು ಬೇರೆ ಊರುಗಳಿಂದ ಅಭಿಮಾನಿಗಳು ಆಗಮಿಸುತ್ತಾರೆ ಅವರಿಗೆಲ್ಲರಿಗೂ ನನ್ನ ಧನ್ಯವಾದಗಳು ಅಂತಾ ಹೇಳಿದ್ರು.

    ಹುಟ್ಟುಹಬ್ಬದ ಜೊತೆಗೆ ಆರೇಂಜ್ ಚಿತ್ರದ ಲೋಗೋವನ್ನು ಬಿಡುಗಡೆ ಮಾಡಿದ್ದೇವೆ. ಸದ್ಯ ನಾನು ಚಮಕ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದೇನೆ. ಒಂದು ವಾರದ ಬಳಿಕ ಮುಗುಳ್ನಗೆ ಆಡಿಯೋ ರಿಲೀಸ್ ಕೂಡ ಮಾಡಬೇಕೆಂದಿದ್ದೇವೆ.

     

  • ಕ್ರೇಜಿಸ್ಟಾರ್ ರವಿಚಂದ್ರನ್‍ಗೆ 56ನೇ ಜನ್ಮದಿನದ ಸಂಭ್ರಮ – ಸೀಜರ್ ಚಿತ್ರತಂಡದಿಂದ ಟೀಸರ್ ಬಿಡುಗಡೆ

    ಕ್ರೇಜಿಸ್ಟಾರ್ ರವಿಚಂದ್ರನ್‍ಗೆ 56ನೇ ಜನ್ಮದಿನದ ಸಂಭ್ರಮ – ಸೀಜರ್ ಚಿತ್ರತಂಡದಿಂದ ಟೀಸರ್ ಬಿಡುಗಡೆ

    ಬೆಂಗಳೂರು: ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ವಿ. ರವಿಚಂದ್ರನ್‍ಗೆ ಇಂದು 56ನೇ ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ಮನೆ ಮುಂದೆ ಬಂದು ನಿಂತ್ರೂ ಅದ್ಯಾಕೋ ರವಿಮಾಮ ಹೊರಗೆ ಬರಲಿಲ್ಲ. ಆದ್ರೆ ಕುಟುಂಬದವರ ಜೊತೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ್ರು.

    ಇನ್ನು ಕನಸುಗಾರನ ಹುಟ್ಟುಹಬ್ಬದ ಪ್ರಯುಕ್ತ `ಸೀಜರ್’ ಚಿತ್ರತಂಡ ಟೀಸರ್‍ವೊಂದನ್ನು ಬಿಡುಗಡೆ ಮಾಡಿದೆ. ಈ ಟೀಸರ್ ರವಿಚಂದ್ರನ್ ಅವರಿಗೆ ಅರ್ಪಿಸಿದ್ದಾರೆ. ಚಿತ್ರದಲ್ಲಿ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರಕಾಶ್ ರಾಜ್, ಚಿರಂಜೀವಿ ಸರ್ಜ, ಪಾರುಲ್ ಯಾದವ್ ಮತ್ತಿತರರು ಅಭಿನಯಿಸಿದ್ದಾರೆ.

    ರಣಧೀರನ ಜನ್ಮದಿನದ ಶುಭಾಶಯ ಕೋರಿ ಸೀಜರ್ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ.

    https://www.youtube.com/watch?v=5ZSTOY0lbuA

  • ಹುಟ್ಟುಹಬ್ಬದಂದೇ ಕಾವೇರಿ ನದಿಯಲ್ಲಿ ಮುಳುಗಿ ಮಂಡ್ಯ ಯುವಕನ ದುರ್ಮರಣ

    ಹುಟ್ಟುಹಬ್ಬದಂದೇ ಕಾವೇರಿ ನದಿಯಲ್ಲಿ ಮುಳುಗಿ ಮಂಡ್ಯ ಯುವಕನ ದುರ್ಮರಣ

    ಮಂಡ್ಯ: ತನ್ನ ಹುಟ್ಟುಹಬ್ಬದಂದೇ ಯುವಕನೊಬ್ಬ ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ನಡೆದಿದೆ.

    ರಾಮನಗರ ಮೂಲದ 20 ವರ್ಷದ ಯುವಕ ಮಹೇಶ್ ಮೃತ ದುರ್ದೈವಿ. ಬೆಂಗಳೂರಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಮಹೇಶ್ ತನ್ನ ಹುಟ್ಟುಹಬ್ಬ ಆಚರಿಸಲು 12 ಜನ ಗೆಳೆಯರೊಂದಿಗೆ ಶುಕ್ರವಾರದಂದು ಮುತ್ತತ್ತಿಗೆ ಬಂದಿದ್ದರು. ಮೊದಲು ಮಹೇಶ್ ತನ್ನ ಗೆಳೆಯರೊಂದಿಗೆ ಸೇರಿ ಕಾವೇರಿ ನದಿ ದಂಡೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆನಂತರ ಗೆಳೆಯರೆಲ್ಲ ಈಜಲು ಕಾವೇರಿ ನದಿಗೆ ಇಳಿದಿದ್ದಾರೆ. ಆದರೆ ಈಜಲು ನದಿಗೆ ಇಳಿದ ಮಹೇಶ್ ತನ್ನ ಹುಟ್ಟುಹಬ್ಬದ ದಿನದಂದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

    ವಿಧಿಯಾಟಕ್ಕೆ ಮಹೇಶ್ ಪೋಷಕರು ಮತ್ತು ಗೆಳೆಯರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.