Tag: ಹುಟ್ಟುಹಬ್ಬ

  • ಹುಟ್ಟು ಹಬ್ಬದ ಸಂಭ್ರಮದಲ್ಲಿರೋ ಪ್ರಭಾಸ್‍ಗೆ ಅನುಷ್ಕಾ ಗಿಫ್ಟ್ ಕೊಟ್ಟಿದ್ದು ಏನು ಗೊತ್ತಾ?

    ಹುಟ್ಟು ಹಬ್ಬದ ಸಂಭ್ರಮದಲ್ಲಿರೋ ಪ್ರಭಾಸ್‍ಗೆ ಅನುಷ್ಕಾ ಗಿಫ್ಟ್ ಕೊಟ್ಟಿದ್ದು ಏನು ಗೊತ್ತಾ?

    ಹೈದರಾಬಾದ್: ಸೌಥ್ ಸಿನಿ ಇಂಡಸ್ಟ್ರಿಯ ಪ್ರಸಿದ್ಧ ಜೋಡಿಗಳಾದ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಯಾವಾಗಲು ಒಂದಲ್ಲಾ ಒಂದು ವಿಷಯಕ್ಕೆ ಸುದ್ದಿಯಾಗುತ್ತಿರುತ್ತಾರೆ. ಸದ್ಯ ಇಬ್ಬರ ನಡುವಿನ ಹೊಸ ಸಮಾಚಾರವೊಂದು ಟಾಲಿವುಡ್ ವಲಯದಿಂದ ಕೇಳಿ ಬಂದಿದೆ.

    38ನೇ ಜನ್ಮದಿನದ ಅಂಗವಾಗಿ ಅನುಷ್ಕಾ ಶೆಟ್ಟಿ ಪ್ರಭಾಸ್ ಗೆ ಡಿಸೈನರ್ ವಾಚನ್ನು ವಿಶೇಷವಾದ ಉಡುಗರೆಯನ್ನಾಗಿ ನೀಡಿದ್ದಾರೆ ಎನ್ನುವ ಸುದ್ದಿ ಸಿಕ್ಕಿದೆ. ಮೂಲಗಳ ಪ್ರಕಾರ, ಪ್ರಭಾಸ್‍ಗೆ ಡಿಸೈನರ್ ವಾಚ್ ಇಷ್ಟವಂತೆ. ಹೀಗಾಗಿ ಅನುಷ್ಕಾ ಪ್ರಭಾಸ್‍ಗೆ ವಾಚನ್ನೇ ಗಿಫ್ಟ್ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಟಾಲಿವುಡ್‍ನಲ್ಲಿ ಈಗ ವಿಶೇಷ ಚರ್ಚೆ ಶುರುವಾಗಿದ್ದು, ಈ ಜೋಡಿ ಏನೇ ಮಾಡಿದರೂ ಇವರ ಮೇಲೆ ಒಂದು ಕಣ್ಣುಟ್ಟಿರುವ ಗಾಸಿಪ್ ಪಂಡಿತರ ಬಾಯಿಗೆ ಅಗೆಯೋದಕ್ಕೆ ಹೊಸ ತಂಬೂಲ ಸಿಕ್ಕಂತ್ತಾಗಿದೆ.

    ಈ ಹಿಂದೆ ಪ್ರಭಾಸ್-ಅನುಷ್ಕಾ ಮಧ್ಯೆ ರಿಯಲ್ ಲವ್ ಇದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇಬ್ಬರೂ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಜೋರಾಗಿ ಹಬ್ಬಿತ್ತು. ಇಂತಹ ಗಾಸಿಪ್‍ಗಳನ್ನು ಪ್ರಭಾಸ್ ನೇರವಾಗಿ ತಳ್ಳಿ ಹಾಕಿದ್ದರು.

    ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಭಾಸ್ ರ ಮುಂದಿನ ಚಿತ್ರವಾದ `ಸಾಹೋ’ ಚಿತ್ರ ತಂಡವು ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ. ‘ಸಾಹೋ’ ಫಸ್ಟ್ ಲುಕ್ ಇಂದು ರಿಲೀಸ್ ಆಗಿದೆ. ಬಿಡುಗಡೆಯಾಗಿರುವ ಫಸ್ಟ್ ಲುಕ್‍ನಲ್ಲಿ ಪ್ರಭಾಸ್ ಬ್ಲ್ಯಾಕ್ ಕೋಟ್‍ನಲ್ಲಿ ಸ್ಟೈಲಿಶ್ ಆಗಿ ಫೋನ್‍ನಲ್ಲಿ ಮಾತನಾಡುತ್ತಾ ಬರುತ್ತಿದ್ದಾರೆ. ಪೋಸ್ಟರ್‍ನಲ್ಲಿ ಪ್ರಭಾಸ್ ಕಣ್ಣುಗಳೇ ಹೈಲೈಟ್ ಆಗಿದ್ದು, ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ.

    ಸುಜಿತ್ ನಿರ್ದೇಶನದಲ್ಲಿ ಸಾಹೋ ಚಿತ್ರ ಮೂಡಿಬರುತ್ತಿದ್ದು, ಪ್ರಭಾಸ್‍ಗೆ ನಾಯಕಿಯಾಗಿ ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಅಭಿನಯಿಸುತ್ತಿದ್ದಾರೆ.

  • ಮಾವನ ಹುಟ್ಟುಹಬ್ಬಕ್ಕೆ ಸರ್‍ಪ್ರೈಸ್ ಗಿಫ್ಟ್ ಕೊಟ್ಟ ಸೊಸೆ ಐಶ್ವರ್ಯ ರೈ!

    ಮಾವನ ಹುಟ್ಟುಹಬ್ಬಕ್ಕೆ ಸರ್‍ಪ್ರೈಸ್ ಗಿಫ್ಟ್ ಕೊಟ್ಟ ಸೊಸೆ ಐಶ್ವರ್ಯ ರೈ!

    ಮುಂಬೈ: ಅಮಿತಾಬ್ ಬಚ್ಚನ್ ಈ ಬಾರಿ ತಮ್ಮ 75ನೇ ಹುಟ್ಟುಹಬ್ಬವನ್ನು ಮಾಲ್ಡೀವ್ಸ್ ನಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಅಮಿತಾಬ್, ಜಯಾ ಬಚ್ಚನ್, ಶ್ವೇತಾ, ಐಶ್ವರ್ಯ, ಆರಾಧ್ಯ, ಅಭಿಷೇಕ್ ಮಂಗಳವಾರ ಬೆಳಗ್ಗೆ ಮಾಲ್ಡೀವ್ಸ್ ಗೆ ತೆರಳಿದ್ದು ಅಲ್ಲಿ ಸಂತೋಷದ ಕ್ಷಣಗಳನ್ನು ಕಳೆಯಲಿದ್ದಾರೆ.

    ಕುಟುಂಬದ ಎಲ್ಲ ಸದಸ್ಯರು ಸೇರಿ ಅವರ ಹುಟ್ಟುಹಬ್ಬವನ್ನು ಬೀಚಿನಲ್ಲಿ ಆಚರಿಸಲು ನಿರ್ಧರಿಸಿದ್ದಾರೆ. ಬಿಗ್-ಬಿ ಮಾಲ್ಡೀವ್ಸ್ ನಲ್ಲಿ ತಮ್ಮ ಮೊಮ್ಮಕ್ಕಳ ಜೊತೆ ನೀರಿನಲ್ಲಿ ಆಟನಾಡಿ ನಂತರ ತಮ್ಮ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ.

    ಮಾಲ್ಡೀವ್ಸ್ ಗೆ ಫ್ಯಾಮಿಲಿ ರಜೆಯಲ್ಲಿ ಹೋಗಿ ಬರಲು ಅಭಿಷೇಕ್ ಮತ್ತು ಶ್ವೇತ  ಇಬ್ಬರೂ ತಂದೆಯ ಮನವೊಲಿಸಿದ್ದಾರೆ. ಮಾಲ್ಡೀವ್ಸ್ ಬೀಚ್‍ನಲ್ಲಿ ದೊಡ್ಡ ಕೇಕ್ ಕತ್ತರಿಸಿ ಅದ್ಧೂರಿಯಾಗಿ ಆಚರಿಸಲು ಐಶ್ವರ್ಯ, ಅಭಿಷೇಕ್ ಮತ್ತು ಶ್ವೇತ ಪ್ಲಾನ್ ನಡೆಸಿದ್ದಾರೆ.

    ನಾಲ್ಕು ದಿನಗಳ ಕಾಲ ಬಚ್ಚನ್ ಫ್ಯಾಮಿಲಿ ಮಾಲ್ಡೀವ್ಸ್ ನಲ್ಲಿ ತಂಗಲಿದ್ದು, ಜೆಟ್ ಸ್ಕಿಟಿಂಗ್, ಸೇಲಿಂಗ್‍ ನಂತಹ ಹಲವು ನೀರಿನ ಗೇಮ್ ಆಡಲಿದ್ದಾರೆ. ಯಾಚ್ ಪಾರ್ಟಿಯನ್ನು ಕೂಡ ಆಯೋಜಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

  • ಅಮೆರಿಕದಲ್ಲಿ ಮುದ್ದು ಮಗಳ 2ನೇ ವರ್ಷದ ಬರ್ತ್ ಡೇ ಆಚರಿಸಿದ ಸನ್ನಿ ಲಿಯೋನ್

    ಅಮೆರಿಕದಲ್ಲಿ ಮುದ್ದು ಮಗಳ 2ನೇ ವರ್ಷದ ಬರ್ತ್ ಡೇ ಆಚರಿಸಿದ ಸನ್ನಿ ಲಿಯೋನ್

    ವಾಷಿಂಗ್ಟನ್: ತನ್ನ ಮುಂದಿನ ಸಿನಿಮಾ ತೇರಾ ಇಂತಝಾರ್ ಬಿಡುಗಡೆಗೂ ಮುನ್ನ ಸನ್ನಿ ಲಿಯೋನ್, ಪತಿ ಡೇನಿಯಲ್ ವೆಬರ್ ಮತ್ತು ಮಗಳು ನಿಶಾ ಜೊತೆ ಅಮೂಲ್ಯ ಸಮಯವನ್ನ ಕಳೆಯುತ್ತಿದ್ದಾರೆ. ಇಂದು ವೆಬರ್ ದಂಪತಿ ಆರಿಝೋನಾದಲ್ಲಿ ಮಗಳು ನಿಶಾಳ 2ನೇ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ.

    ಮುದ್ದು ಮಗಳ ಹುಟ್ಟುಹಬ್ಬಕ್ಕಾಗಿ ಹೆಲ್ಲೋ ಕಿಟಿ ಥೀಮ್ ಆಯ್ಕೆ ಮಾಡಿಕೊಂಡಿದ್ದಾರೆ. ನಿಶಾ ನೀಲಿ ಬಣ್ಣದ ಬಟ್ಟೆ ಧರಿಸಿದ್ದು, ತಲೆಗೆ ಸುಂದರವಾದ ಕಿರೀಟ ತೊಟ್ಟು ರಾಜಕುಮಾರಿಯಂತೆ ಕಂಗೊಳಿಸಿದ್ದಾಳೆ. ಸದ್ಯಕ್ಕೆ ಸನ್ನಿ ಕುಟುಂಬ ಅಮೆರಿಕ ಪ್ರವಾಸದಲ್ಲಿದೆ.

    ರಾಜೀವ್ ವಾಲಿಯಾ ನಿರ್ದೇಶನದ ತೇರಾ ಇಂತಝಾರ್ ಸನ್ನಿಯ ಮುಂದಿನ ಸಿನಿಮಾ. ಈ ಚಿತ್ರದಲ್ಲಿ ಅರ್ಬಾಜ್ ಖಾನ್‍ಗೆ ಜೋಡಿಯಾಗಿ ಸನ್ನಿ ಲಿಯೋನ್ ಅಭಿನಯಿಸಿದ್ದಾರೆ. ಇದೇ ವರ್ಷ ನವೆಂಬರ್‍ಗೆ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ.

    ಇದನ್ನೂ ಓದಿ: ವಿವಾದಕ್ಕೆ ಕಾರಣವಾಗಿದೆ ಸನ್ನಿ ಮತ್ತು ಮಗುವಿನ ಫೋಟೋ!

     

  • 63 ವಸಂತಕ್ಕೆ ಕಾಲಿಟ್ಟ ರೇಖಾ- ಇಲ್ಲಿವೆ ಅವರ ಅಪರೂಪದ ಫೋಟೋಗಳು

    63 ವಸಂತಕ್ಕೆ ಕಾಲಿಟ್ಟ ರೇಖಾ- ಇಲ್ಲಿವೆ ಅವರ ಅಪರೂಪದ ಫೋಟೋಗಳು

    ಮುಂಬೈ: ಬಾಲಿವುಡ್‍ನ ಹಿಂದಿನ ಕಾಲದಿಂದಲ್ಲೂ ಈಗಿನ ಕಾಲದವರೆಗೂ ರೇಖಾ ಬಾಲಿವುಡ್‍ನ ದೀವಾ ಆಗಿ ರಾರಾಜಿಸುತ್ತಿದ್ದಾರೆ. ಮಂಗಳವಾರ (ಇಂದು) ಅವರು ತಮ್ಮ 63ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

    ಈಗಿನ ಕಾಲದ ನಟಿಯರಿಗೆ ನಾನೇನೂ ಕಮ್ಮಿಯಿಲ್ಲ ಎಂದು ರೇಖಾ ತಮ್ಮ ಆಕರ್ಷಕ ಕಣ್ಣುಗಳಿಂದ ಹಾಗೂ ತಮ್ಮ ಸೌಂದರ್ಯದಿಂದ ಯುವ ನಟಿಯರಿಗೆ ಸೆಡ್ಡು ಹೊಡೆದಿದ್ದಾರೆ. ರೇಖಾ ಅವರು ನಟಿಸಿದ ಉಮಾರಾವ್ ಜಾನ್ ಮತ್ತು ಕುಬ್‍ಸೂರತ್ ಚಿತ್ರದಲ್ಲಿ ಅತ್ಯುತ್ತಮವಾಗಿ ನಟಿಸಿದ್ದಾರೆ.

    ರೇಖಾ ಅವರು ತಮ್ಮ ಸಿನಿಮಾಗಳಲ್ಲಿ ಯಾವ ರೀತಿಯಲ್ಲಿ ಕಾಣಿಸಿಕೊಂಡು ಜನರ ಮನಸ್ಸು ಗೆದಿದ್ದಾರೆ ಎಂಬುದನ್ನು ಈ ಫೋಟೋಗಳಲ್ಲಿ ನೀವು ನೋಡಿ.

  • ಈ ಬಾರಿ ಹುಟ್ಟುಹಬ್ಬ, ದೀಪಾವಳಿ ಆಚರಿಸುತ್ತಿಲ್ಲ ಬಿಗ್-ಬಿ!

    ಈ ಬಾರಿ ಹುಟ್ಟುಹಬ್ಬ, ದೀಪಾವಳಿ ಆಚರಿಸುತ್ತಿಲ್ಲ ಬಿಗ್-ಬಿ!

    ಮುಂಬೈ: ಅಕ್ಟೋಬರ್ 11 ರಂದು ಅಮಿತಾಬ್ ಬಚ್ಚನ್ 75 ವರ್ಷಕ್ಕೆ ಕಾಲಿಡುತ್ತಿದ್ದಾರೆ. ಆದರೆ ಈ ಬಾರಿ ಬಿಗ್-ಬಿ ತಮ್ಮ ಹುಟ್ಟು ಹಬ್ಬ ಮತ್ತು ದೀಪಾವಳಿ ಆಚರಿಸಲ್ಲ ಎಂದು ಟ್ಟಿಟ್ಟರ್ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

    ಹೌದು. ಅಮಿತಾಬ್ ಈ ಬಾರಿ ತಮ್ಮ ಹುಟ್ಟುಹಬ್ಬ ಹಾಗೂ ದೀಪಾವಳಿ ಆಚರಿಸುತ್ತಿಲ್ಲ. ಐಶ್ವರ್ಯ ರೈ ಅವರ ತಂದೆ ಸಾವನ್ನಪ್ಪಿದ ಕಾರಣ ಅವರು ತಮ್ಮ ಹುಟ್ಟುಹಬ್ಬ ಆಚರಿಸಲ್ಲ ಎಂದು ತಿಳಿಸಿದ್ದಾರೆ. ಈ ಬಾರಿ ಹುಟ್ಟುಹಬ್ಬದ ದಿನದಂದು ಊರಲ್ಲಿ ಇರುವುದಿಲ್ಲ ಎಂದು ಬಿಗ್-ಬಿ ತಮ್ಮ ಅಭಿಮಾನಿಗಳಿಗೆ ಟ್ವಿಟ್ಟರ್‍ನಲ್ಲಿ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

    ತುಂಬಾ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಐಶ್ ಅವರ ತಂದೆ ಮಾರ್ಚ್ ತಿಂಗಳಲ್ಲಿ ನಿಧನರಾಗಿದ್ದರು.

  • ಧೃವ ಸರ್ಜಾಗೆ 29ನೇ ಹುಟ್ಟುಹಬ್ಬ – ಅಭಿಮಾನಿಗಳ ಜೊತೆ ಭರ್ಜರಿ ಬರ್ತ್ ಡೇ ಆಚರಣೆ

    ಧೃವ ಸರ್ಜಾಗೆ 29ನೇ ಹುಟ್ಟುಹಬ್ಬ – ಅಭಿಮಾನಿಗಳ ಜೊತೆ ಭರ್ಜರಿ ಬರ್ತ್ ಡೇ ಆಚರಣೆ

    ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಇಂದು 29ನೇ ಹುಟ್ಟುಹಬ್ಬ.

    ಬೆಂಗಳೂರಿನ ಕೆಆರ್ ರಸ್ತೆಯ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಧೃವ ಸರ್ಜಾ ಬರ್ತ್ ಡೇ ಆಚರಿಸಿಕೊಂಡ್ರು. ಈ ವೇಳೆ ಮಾತನಾಡಿದ ಧ್ರುವ, ಅಭಿಮಾನಿಗಳ ನಡುವೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳೋಕೆ ಸಂತೋಷವಾಗುತ್ತೆ ಅಂದ್ರು. ತಮ್ಮ ಮುಂದಿನ ಸಿನಿಮಾ ಪೊಗರು ಅಂತ ತಿಳಿಸಿದರು.

    ಇದೇ ವೇಳೆ ಧ್ರುವ ಅವರಿಗೆ ವಿಶ್ ಮಾಡಲು ಅಣ್ಣ ಚಿರಂಜೀವಿ ಸರ್ಜಾ ಕೂಡ ಬಂದಿದ್ರು. ಭರ್ಜರಿ ಸಿನಿಮಾದ ನಿರ್ದೇಶಕ ಚೇತನ್ ಕೂಡಾ ಸಂಭ್ರಮದಲ್ಲಿ ಭಾಗಿಯಾಗಿದ್ರು.

  • ತಾಯಿ ಕರೀನಾಗೆ ಬರ್ತ್ ಡೇ ಗಿಫ್ಟ್ ಕೊಟ್ಟ ಮುದ್ದು ಮಗ ತೈಮೂರ್

    ತಾಯಿ ಕರೀನಾಗೆ ಬರ್ತ್ ಡೇ ಗಿಫ್ಟ್ ಕೊಟ್ಟ ಮುದ್ದು ಮಗ ತೈಮೂರ್

    ಮುಂಬೈ: ಇತ್ತೀಚಿಗೆ ಕರೀನಾ ಕಪೂರ್ ಹಾಗೂ ಸೈಫ್ ಅಲಿಖಾನ್ ದಂಪತಿಯ ಪುತ್ರ ತೈಮೂರ್ ಅಲಿಖಾನ್‍ನ ಮುದ್ದಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿವೆ. ಆದರೆ ಈಗ ತಾಯಿ ಕರೀನಾಗೆ ಹೂವು ಹಿಡಿದುಕೊಂಡು ಬರ್ತ್ ಡೇ ವಿಶ್ ಮಾಡುವ ಫೋಟೋ ವೈರಲ್ ಆಗಿದೆ.

    ತಾಯಿ ಕರೀನಾ ಕಪೂರ್ ಹುಟ್ಟುಹಬ್ಬಕ್ಕೆ ಬಾಲಿವುಡ್ ಹಾಗೂ ಅಭಿಮಾನಿಗಳು ಶುಭ ಕೋರಿದ್ದಾರೆ. ತಾನೂ ಕೂಡ ನನ್ನ ತಾಯಿಗೆ ಶುಭಕೋರಲು ಪುತ್ರ ತೈಮೂರ್ ಪಾರ್ಕ್ ನಲ್ಲಿ ಕುಳಿತು ಸುಂದರವಾದ ಹೂವು ಹಿಡಿದಿರುವ ಫೋಟೋ ತೆಗೆಸಿಕೊಂಡಿದ್ದಾನೆ.

    https://www.instagram.com/p/BZSUrOcHdry/?taken-by=therealkareenakapoor

    ದೆಹಲಿಯಲ್ಲಿಯ ಕೆಲಸಗಳು ಇನ್ನು ಕೆಲವು ದಿನಗಳಲ್ಲಿ ಮುಗಿಯುತ್ತಿದ್ದು, ದೀಪಾವಳಿ ಹಬ್ಬವನ್ನು ನನ್ನ ಕುಟುಂಬದೊಂದಿಗೆ ಆಚರಣೆ ಮಾಡುತ್ತೇನೆ. ದೀಪಾವಳಿ ನಮ್ಮ ಕುಟುಂಬಕ್ಕೆ ಈ ಬಾರಿ ವಿಶೇಷವಾಗಿರುತ್ತದೆ ಕಾರಣ ಚೋಟಾ ನವಾಬ ತೈಮೂರ್ ಅಥಿತಿಯಾಗಿರುತ್ತಾನೆ. ಅಂದು ಎಷ್ಟೇ ಕೆಲಸವಿದ್ದರೂ ದೀಪಾವಳಿಯಲ್ಲಿ ನನ್ನ ಕುಟುಂಬದ ಜೊತೆ ಇರುತ್ತೇನೆ ಎಂದು ಕರೀನಾ ತಿಳಿಸಿದ್ದಾರೆ.

    ಕರೀನಾ ಕಪೂರ್ ತೈಮೂರ್‍ಗೆ ಜನ್ಮ ನೀಡಿದ ಬಳಿಕ ಯಾವುದೇ ಚಿತ್ರದಲ್ಲಿ ನಟಿಸಿರಲಿಲ್ಲ. ಒಂದು ವರ್ಷದ ಬಳಿಕ ಸೋನಂ ಕಪೂರ್ ಮತ್ತು ರೆಯಾ ಕಪೂರ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ಕರೀನಾ ಮತ್ತೆ ಬಣ್ಣ ಹಚ್ಚಿದ್ದಾರೆ. ಚಿತ್ರದ ಪ್ರಮೋಶನ್‍ಗಾಗಿ ವೀರ್ ದಿ ವೆಡ್ಡಿಂಗ್ ತಂಡದಿಂದ ಫೋಟೋ ಶೂಟ್ ಈಗಾಗಲೇ ನಡೆದಿದ್ದು, ಫೋಟೋಗಳಲ್ಲಿ ಕರೀನಾ ಕ್ಲಾಸಿಕ್ ರೀತಿ ಪೋಸ್ ನೀಡಿದ್ದಾರೆ.

    https://www.instagram.com/p/BZQOEi_hy5b/?taken-by=rheakapoor

    https://www.instagram.com/p/BZQM1qgBKFQ/?taken-by=rheakapoor

    https://www.instagram.com/p/BZQMU6fhRSo/?taken-by=rheakapoor

    https://www.instagram.com/p/BZRRlFRnwNq/?taken-by=therealkareenakapoor

    https://www.instagram.com/p/BZRRGJ8n4tA/?taken-by=therealkareenakapoor

    https://www.instagram.com/p/BZRQnsUHgGp/?taken-by=therealkareenakapoor

    https://www.instagram.com/p/BZS2DtrARc4/?tagged=kareenakapoor

  • ಪ್ರಧಾನಿಗೆ ಪತ್ರ ಬರೆದು ಸಾರಿಗೆ ಇಲಾಖೆ ಅಧಿಕಾರಿಗಳ ಚಳಿ ಬಿಡಿಸಿದ ವೈದ್ಯ!

    ಪ್ರಧಾನಿಗೆ ಪತ್ರ ಬರೆದು ಸಾರಿಗೆ ಇಲಾಖೆ ಅಧಿಕಾರಿಗಳ ಚಳಿ ಬಿಡಿಸಿದ ವೈದ್ಯ!

    ಶಿವಮೊಗ್ಗ: ಜಿಲ್ಲೆಯಿಂದ ವೈದ್ಯರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವ ಮೂಲಕ ಸಾರಿಗೆ ಇಲಾಖೆ ಅಧಿಕಾರಿಗಳ ಮೈ ಚಳಿ ಬಿಟ್ಟು ಕೆಲಸಮಾಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    ಕೇಂದ್ರ ಸರ್ಕಾರದ ಜೆನರ್ಮ್ ಯೋಜನೆಯಡಿ ಶಿವಮೊಗ್ಗಕ್ಕೆ ನಗರ ಸಂಚಾರಕ್ಕೆ ನೂರು ಬಸ್ ಗಳು ಮಂಜೂರು ಆಗಿದ್ದವು. ಆದರೆ ಸರ್ಕಾರಿ ಜಾಗದಲ್ಲಿ ಡಿಪೋ ಸ್ಥಾಪನೆ ಮಾಡಬೇಕಿದ್ದ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದರು.

    ಈ ಜಾಗ ಬೇರೆಯವರ ಪಾಲಾಗುವ ಸಾಧ್ಯತೆ ಕೂಡಾ ಇತ್ತು. ಇದನ್ನು ಮನಗಂಡ ಶಿವಮೊಗ್ಗದ ವೈದ್ಯ ಡಾ.ರವೀಂದ್ರ ನೇರವಾಗಿ ಮೋದಿ ಅವರ ಪೋರ್ಟಲ್ ನಲ್ಲಿ ದೂರು ದಾಖಲಿಸಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಪ್ರಧಾನಿ ಕಚೇರಿಯ ಅಧಿಕಾರಿಗಳು ರಾಜ್ಯ ಸಾರಿಗೆ ಇಲಾಖೆಗೆ ಕಟ್ಟು ನಿಟ್ಟಿನ ಪತ್ರ ಬರೆದಿದ್ದರು. ಸಾರಿಗೆ ಇಲಾಖೆಗೆ ಈ ಪತ್ರ ಬಂದ ಬಳಿಕ ಡಿಪೋ ನಿರ್ಮಾಣ ಕಾರ್ಯ ಚುರುಕಾಗಿ ನಡೆಯುತ್ತಿರುವುದಾಗಿ ವೈದ್ಯರು ಹೇಳಿದ್ದಾರೆ.

    ಇಲ್ಲಿ ಹೆಚ್ಚಾಗಿ ಖಾಸಗಿ ಬಸ್ ಗಳೇ ಓಡಾಡುತ್ತಿದ್ದವು. ನನ್ನ ಪತ್ರಕ್ಕೆ ಪ್ರಧಾನಿ ಕಚೇರಿ ಪ್ರತಿಕ್ರಿಯಿಸಿದ್ದು, ಉಚಿತವಾಗಿ ಭೂಮಿ ನೀಡುವುದಾಗಿ ತಿಳಿಸಿದ್ದರು. ನಮ್ಮ ದೇಶದಲ್ಲಿ ಈ ತರ ಸಿಸ್ಟಮ್ ಚೆನ್ನಾಗಿ ಕಾರ್ಯ ನಿರ್ವಹಿಸುತ್ತೆ ಅಂತ ನನಗೆ ಅಚ್ಚರಿಯೇ ಆಗಿದೆ ಅಂತ ವೈದ್ಯ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

  • ಹಾರ, ಕೇಕ್, ಬ್ಯಾನರ್‍ಗಳಿಗೆ ಅನವಶ್ಯಕ ಖರ್ಚು ಮಾಡ್ದೆ ನನ್ನ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಿ: ಉಪ್ಪಿ

    ಹಾರ, ಕೇಕ್, ಬ್ಯಾನರ್‍ಗಳಿಗೆ ಅನವಶ್ಯಕ ಖರ್ಚು ಮಾಡ್ದೆ ನನ್ನ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಿ: ಉಪ್ಪಿ

    ಬೆಂಗಳೂರು: ಹುಟ್ಟುಹಬ್ಬ ಆಚರಣೆಯನ್ನ ಮಾಡದಿರುವ ನಟರ ಲಿಸ್ಟ್ ಗೆ ಇದೀಗ ರಿಯಲ್ ಸ್ಟಾರ್ ಉಪೇಂದ್ರ ಸೇರ್ಪಡೆ ಆಗಿದ್ದಾರೆ. ಕಿಚ್ಚ ಸುದೀಪ್‍ರಂತೆಯೇ ಉಪೇಂದ್ರ ಸಾಮಾಜಿಕ ಜಾಲತಾಣದ ಮೂಲಕ ಹುಟ್ಟುಹಬ್ಬವನ್ನ ಗ್ರ್ಯಾಂಡ್ ಆಗಿ ಆಚರಿಸದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರೋ ಉಪೇಂದ್ರ, “ಪ್ರೀತಿಯ ಅಭಿಮಾನಿಗಳೇ ಹಾರ, ಕೇಕ್, ಬ್ಯಾನರ್‍ಗಳಿಗೆ ಅನವಶ್ಯಕ ಖರ್ಚು ಮಾಡದೆ ನಿಮ್ಮ ಪ್ರೀತಿ ಶುಭಾಶಯಗಳೊಂದಿಗೆ ಬಂದು ನನ್ನ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಿ ಎಂದಿದ್ದಾರೆ.

    ಇದೇ ಸಪ್ಟೆಂಬರ್ 18ಕ್ಕೆ ಉಪೇಂದ್ರ ಜನುಮದಿನ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳನ್ನುದ್ದೇಶಿಸಿ ಉಪೇಂದ್ರ ಈ ಮಾತುಗಳನ್ನಾಡಿದ್ದಾರೆ. ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ನೇರವಾಗಿ ಹೇಳದ ಉಪ್ಪಿ, ವ್ಯಥಾ ಹಣ ವ್ಯಯ ಮಾಡಬೇಡಿ ಎಂದಷ್ಟೇ ಹೇಳಿದ್ದಾರೆ. ಹುಟ್ಟುಹಬ್ಬದ ದಿನ ಅಭಿಮಾನಿಗಳನ್ನ ಮೀಟ್ ಮಾಡ್ತಾರಾ ಅನ್ನೋದು ಇದೇ 18 ಕ್ಕೆ ಗೊತ್ತಾಗಲಿದೆ.

    ಈ ಹಿಂದೆ ಕಿಚ್ಚ ಸುದೀಪ್ ಅವರು ನನ್ನ ಹುಟ್ಟುಹಬ್ಬಕ್ಕೆ ಖರ್ಚು ಮಾಡುವ ಹಣವನ್ನು ಬಡವರಿಗೆ ನೀಡಿದರೆ ಅದೇ ನನಗೆ ನೀಡುವ ಉಡುಗೊರೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ತನ್ನ ನಿರ್ಧಾರವನ್ನು ಪತ್ರದ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು.

    ಇದನ್ನೂ ಓದಿ: ಸುದೀಪ್ ಅಭಿಮಾನಿಗಳಿಗೆ ಬರೆದ ಪತ್ರದಲ್ಲಿ ಏನಿದೆ?

    ಇದನ್ನೂ ಓದಿ: ಬರ್ತ್ ಡೇ ಯಾಕ್ ಆಚರಿಸಿಕೊಂಡಿಲ್ಲ ಅನ್ನೋ ಅಭಿಮಾನಿಗಳ ಪ್ರಶ್ನೆಗಳಿಗೆ ಸುದೀಪ್ ಉತ್ತರಿಸಿದ್ದು ಹೀಗೆ

  • 23 ವರ್ಷಗಳ ಹಿಂದಿನ ಸುದೀಪ್ ಬಗ್ಗೆ ಸುಮಲತಾ ಅಂಬರೀಶ್ ಹೇಳಿದ್ದು ಹೀಗೆ

    23 ವರ್ಷಗಳ ಹಿಂದಿನ ಸುದೀಪ್ ಬಗ್ಗೆ ಸುಮಲತಾ ಅಂಬರೀಶ್ ಹೇಳಿದ್ದು ಹೀಗೆ

    ಬೆಂಗಳೂರು: ಕಿಚ್ಚ ಸುದೀಪ್ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ನಟಿ ಸುಮಲತಾ ಅಂಬರೀಶ್ 23 ವರ್ಷಗಳ ಹಿಂದಿನ ಫೋಟೋವನ್ನು ಪ್ರಕಟಿಸಿ ಶುಭಾಶಯ ತಿಳಿಸಿದ್ದಾರೆ.

    23 ವರ್ಷಗಳ ಹಿಂದೆ ಬೆಳ್ಳಿತೆರೆ ಮೇಲೆ ಮಿನುಗಬೇಕು ಎಂದು ಕಾಯುತ್ತಿದ್ದ ಯುವಕ ಇಂದು ತನ್ನದೇ ರೀತಿಯಲ್ಲಿ ಯಶಸ್ವಿ ಆಗಿದ್ದಾರೆ. ನಿಮ್ಮ ಬಗ್ಗೆ ಹೆಮ್ಮೆ ಆಗುತ್ತದೆ. ಸದಾ ಖುಷಿಯಾಗಿರಿ ಎಂದು ನಟಿ ಸುಮಲತಾ ಅಂಬರೀಶ್ 23 ವರ್ಷಗಳ ಹಿಂದೆ ತೆಗೆಸಿಕೊಂಡ ಫೋಟೋವನ್ನು ತಮ್ಮ ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    ನಟಿ ಸುಮಲತಾ ಅವರು ಪೋಸ್ಟ್ ಮಾಡಿರುವ ಟ್ವೀಟ್ ವೈರಲ್ ಆಗಿದ್ದು ಇದಕ್ಕೆ 1,527 ಲೈಕ್‍ಗಳು ಹಾಗೂ 179 ರೀ-ಟ್ವೀಟ್‍ ಆಗಿದೆ.

    ಇದನ್ನೂ ಓದಿ: ನನ್ನ ಹುಟ್ಟುಹಬ್ಬವನ್ನು ಈ ರೀತಿಯಾಗಿ ಆಚರಿಸಿ, ಅಭಿಮಾನಿಗಳಿಗೆ ಸುದೀಪ್ ಪತ್ರ