Tag: ಹುಟ್ಟುಹಬ್ಬ ಆಚರಣೆ

  • ಇದು ನಮ್ಮ ಸರ್ಕಾರ, ಹಿಂದೂಗಳು ಏನೂ ಮಾಡಲು ಸಾಧ್ಯವಿಲ್ಲ- ಬರ್ತ್ ಡೇ ಆಚರಿಸಿದ್ದಕ್ಕೆ ಚಾಕು ಇರಿತ

    ಇದು ನಮ್ಮ ಸರ್ಕಾರ, ಹಿಂದೂಗಳು ಏನೂ ಮಾಡಲು ಸಾಧ್ಯವಿಲ್ಲ- ಬರ್ತ್ ಡೇ ಆಚರಿಸಿದ್ದಕ್ಕೆ ಚಾಕು ಇರಿತ

    ಮೈಸೂರು: ಹುಟ್ಟುಹಬ್ಬ ಆಚರಣೆ (Birthday Celebration) ವೇಳೆ ಗಲಾಟೆ ನಡೆದು ಅನ್ಯ ಕೋಮಿನವರಿಂದ ಯುವಕನಿಗೆ (Young Man) ಚಾಕು ಇರಿತವಾದ (Stabbing) ಘಟನೆ ಮೈಸೂರು (Mysuru) ಜಿಲ್ಲೆಯ ನಂಜನಗೂಡು ಪಟ್ಟಣದ ನೀಲಕಂಠನಗರದಲ್ಲಿ ನಡೆದಿದೆ.

    ಪ್ರಸಾದ್ (22) ಚಾಕು ಇರಿತಕ್ಕೊಳಗಾದ ಯುವಕ. ಹುಟ್ಟುಹಬ್ಬ ಆಚರಿಸುತ್ತಿದ್ದಕ್ಕೆ ಆಕ್ಷೇಪಿಸಿ, ಇಲ್ಲಿ ಹುಟ್ಟುಹಬ್ಬ ಆಚರಿಸಬೇಡಿ. ಇನ್ನು ಮುಂದೆ ನಿಮ್ಮ ಮನೆಗಳಲ್ಲಿ ಹುಟ್ಟುಹಬ್ಬ ಆಚರಿಸಿ. ಇದು ನಮ್ಮ ಸರ್ಕಾರ, ನೀವು ಹಿಂದೂಗಳು ಏನು ಮಾಡಲಾಗುವುದಿಲ್ಲ ಎಂದು ಅವಾಚ್ಯ ಶಬ್ಧಗಳಿಂದ ಕೆಲ ಯುವಕರು ನಿಂದಿಸಿದ್ದಾರೆ. ಬಳಿಕ ಗಲಾಟೆ ನಡೆದು ಯುವಕನಿಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಆರೋಪಿಸಲಾಗಿದೆ.

    ಘಟನೆಗೆ ಸಂಬಂಧಿಸಿದಂತೆ 5 ಜನರ ವಿರುದ್ಧ ಪೊಲೀಸರು ಎಫ್‌ಐರ್ ದಾಖಲಿಸಿದ್ದಾರೆ. ಶೋಹೆಬ್, ಶಹೇನಸಾ, ಸಲ್ಮಾನ್, ಇಲ್ಲು ಹಾಗೂ ಜಾಫರ್ ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಯುವತಿಯ ಶವ ಕೆರೆಯಲ್ಲಿ ಪತ್ತೆ- ಆತ್ಮಹತ್ಯೆ ಶಂಕೆ

    ಗಾಯಗೊಂಡಿರುವ ಪ್ರಸಾದ್‌ಗೆ ನಂಜನಗೂಡು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಟಿಪ್ಪರ್, ಕಾರು ಮಧ್ಯೆ ಭೀಕರ ಅಪಘಾತ – ಇಬ್ಬರು ಸಾವು, ಇಬ್ಬರಿಗೆ ಗಂಭೀರ ಗಾಯ

  • ಕಾರಾಗೃಹದಲ್ಲಿ ಬರ್ತ್ ಡೇ ಸೆಲೆಬ್ರೇಷನ್ – ಬಿಡುಗಡೆಯಾಗ್ತಿದಂತೆ ಮತ್ತೆ ರೌಡಿಶೀಟರ್ ಬಂಧನ

    ಕಾರಾಗೃಹದಲ್ಲಿ ಬರ್ತ್ ಡೇ ಸೆಲೆಬ್ರೇಷನ್ – ಬಿಡುಗಡೆಯಾಗ್ತಿದಂತೆ ಮತ್ತೆ ರೌಡಿಶೀಟರ್ ಬಂಧನ

    ರಾಮನಗರ: ಜಿಲ್ಲಾ ಕಾರಾಗೃಹದಲ್ಲಿ (Jail) ಬರ್ತ್ ಡೇ ಸೆಲೆಬ್ರೇಷನ್ (Birthday Celebration) ಪ್ರಕರಣ ಸಂಬಂಧ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ರೌಡಿಶೀಟರ್ ಕಿರಣ್ ಅಲಿಯಾಸ್ ತಮಟೆ ಸೇರಿ ಐವರ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಈ ಹಿನ್ನೆಲೆ ಬುಧವಾರ ಸಂಜೆ ಶಿಕ್ಷೆ ಅವಧಿ ಮುಗಿದು ಜೈಲಿನಿಂದ ಬಿಡುಗಡೆಯಾಗಿದ್ದ ಕಿರಣ್‌ನನ್ನು ಮತ್ತೆ ರಾಮನಗರ ಟೌನ್ ಪೊಲೀಸರು (Ramanagara Police) ಬಂಧಿಸಿದ್ದಾರೆ.

    ಜೈಲಿನಿಂದ ಕಿರಣ್ ಹೊರಬರುತ್ತಿದ್ದಂತೆಯೇ ಪೊಲೀಸರು ಆತನನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಿರಣ್ ರಾಬರಿ ಕೇಸ್‌ನಲ್ಲಿ ಜೈಲು ಸೇರಿದ್ದ. ಬುಧವಾರ ಶಿಕ್ಷೆ ಅವಧಿ ಮುಕ್ತಾಯವಾಗಿತ್ತು. ಆದರೆ ಜೈಲಿನಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದ ಕಿರಣ್ ಇದೀಗ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ. ಇದನ್ನೂ ಓದಿ: ಕಪ್ಪು ಬಟ್ಟೆ ಧರಿಸಿ ಬಂದವ್ರಿಗೆ ನಮೋ ಕಾರ್ಯಕ್ರಮಕ್ಕೆ ನೋ ಎಂಟ್ರಿ- ಯುವತಿಯರಿಗೆ ಅಸಮಾಧಾನ

    ರೌಡಿಶೀಟರ್ ಕಿರಣ್‌ನ ಹುಟ್ಟುಹಬ್ಬವನ್ನು ಜೈಲಿನಲ್ಲಿಯೇ ಆಚರಿಸಿ ಕೇಕ್ ಕತ್ತರಿಸಲಾಗಿತ್ತು. ಕೈದಿಗಳು ಹುಟ್ಟುಹಬ್ಬವನ್ನು ಆಚರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು. ಹ್ಯಾಪಿ ಬರ್ತ್ ಡೇ ಕಿರಣ್ ಅಣ್ಣ ಎಂದು ಹೂವಿನಲ್ಲಿ ಬರೆದು ಗ್ರೂಪ್ ಫೋಟೋ ತೆಗೆದುಕೊಂಡಿದ್ದ 2 ಫೋಟೋಗಳು ವೈರಲ್ ಆಗಿದ್ದವು.

    ಜೈಲಿನ ಒಳಗಡೆ ಕೇಕ್ ತೆಗೆದುಕೊಂಡು ಹೋಗಲು ಅಧಿಕಾರಿ, ಸಿಬ್ಬಂದಿಯೇ ಸಾಥ್ ನೀಡಿದ್ದಾರೆ. ಕೈದಿಗಳು ಹುಟ್ಟುಹಬ್ಬ ಆಚರಿಸಿಕೊಳ್ಳಲು ಜೈಲಿನ ಅಧಿಕಾರಿಗಳೇ ಸಾಥ್ ನೀಡಿದ್ದಾರೆ ಎಂಬ ಆರೋಪ ಬಂದಿದೆ. ಇದನ್ನೂ ಓದಿ: ಚಿಕ್ಕಮಗಳೂರು, ಕೊಡಗನ್ನು ಸ್ವಿಜರ್ಲ್ಯಾಂಡ್ ರೀತಿ ಬೆಳೆಸಿ – ಎಷ್ಟು ಬೇಕಾದ್ರೂ ಹಣ ಕೊಡ್ತೀವಿ: ಬೊಮ್ಮಾಯಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನೆಲಮಂಗಲದಲ್ಲಿ ಸಾಹಸ ಸಿಂಹನ 71ನೇ ಹುಟ್ಟುಹಬ್ಬ ಆಚರಣೆ

    ನೆಲಮಂಗಲದಲ್ಲಿ ಸಾಹಸ ಸಿಂಹನ 71ನೇ ಹುಟ್ಟುಹಬ್ಬ ಆಚರಣೆ

    ನೆಲಮಂಗಲ: ಸಾಹಸ ಸಿಂಹ, ಅಭಿನವ ಭಾರ್ಗವ, ದಿವಂಗತ ಡಾ.ವಿಷ್ಣುವರ್ಧನ್ ಅವರ 71ನೇ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಆಚರಿಸಿದ್ದಾರೆ.

    ನಗರದ ಹೊನ್ನಗಂಗಯ್ಯನ ಪಾಳ್ಯದಲ್ಲಿ ಕಳೆದ 7 ವರ್ಷದ ಹಿಂದೆ ಡಾ.ವಿಷ್ಣು ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಕುಮಾರ್ ನೇತೃತ್ವದಲ್ಲಿ ಅಭಿಮಾನಿಗಳು ಕಂಚಿನ ಪುತ್ಥಳಿಯನ್ನ ಮಾಡಿಸಿ ವಿಷ್ಣು ಮಂದಿರ ನಿರ್ಮಾಣ ಮಾಡಿದ್ದರು. ಇಂದು ಡಾ.ವಿಷ್ಣುವರ್ಧನ್ ಅವರ 71ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಂದಿರವನ್ನು ವಿವಿಧ ಹೂಗಳಿಂದ ಅಲಂಕರಿಸಿ, ಕೇಕ್ ಕತ್ತರಿಸಿ, ಸಿಹಿ ಹಂಚಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮದಿಂದ ಆಚರಿಸಿದ್ದಾರೆ. ಇದನ್ನೂ ಓದಿ: ರಾಮ್ ಗೋಪಾಲ್ ವರ್ಮಾ ಸಿನಿಮಾದಲ್ಲಿ ಬುದ್ಧಿವಂತ

    ಈ ವೇಳೆ ಡಾ.ವಿಷ್ಣು ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಕುಮಾರ್, ಸದಸ್ಯರಾದ ಶಿವಕುಮಾರ್, ರವಿಕುಮಾರ್, ಉಮೇಶ್, ವಿಷ್ಣು ಸೇರಿದಂತೆ ನೆರದಿದ್ದ ಮಹಿಳಾ ಅಭಿಮಾನಿಗಳು ದಿ.ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ಜೈಕಾರ ಕೂಗಿ ತಮ್ಮ ಪ್ರೀತಿ ಹಾಗೂ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅನುಮತಿ ಇಲ್ಲದೇ ವಿಷ್ಣು ಪ್ರತಿಮೆ ನಿರ್ಮಾಣ – ಪ್ರತಿಮೆ ತೆರವುಗೊಳಿಸಿದ ಪೊಲೀಸರು

    ರಾಜ್ಯಾದ್ಯಂತ ಇಂದು ವಿಷ್ಣುವರ್ಧನ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಅಚರಿಸುತ್ತಿದ್ದು, ವಿಷ್ಣುವರ್ಧನ್ ನಮ್ಮನ್ನಗಲಿ ಸುಮಾರು 11 ವರ್ಷಗಳು ಕಳೆದರೂ ಅವರ ಅಭಿಮಾನಿಗಳ ಅಭಿಮಾನ ಮಾತ್ರ ದಿನೇ ದಿನೇ ಜಾಸ್ತಿಯಾಗುತ್ತಲೇ ಇದೆ.

     

  • ಹಡಗಿನಲ್ಲಿ ‘ಯಥರ್ವ್’ ಸಂಭ್ರಮ- ಗೋವಾ ಬೀಚ್‍ನಲ್ಲಿ ಜೂ.ರಾಖಿ ಭಾಯ್ ಕಲರವ

    ಹಡಗಿನಲ್ಲಿ ‘ಯಥರ್ವ್’ ಸಂಭ್ರಮ- ಗೋವಾ ಬೀಚ್‍ನಲ್ಲಿ ಜೂ.ರಾಖಿ ಭಾಯ್ ಕಲರವ

    ಬೆಂಗಳೂರು: ಮನೆಯಲ್ಲಿ ಸಿಂಪಲ್ಲಾಗಿ ಯಥರ್ವ್ ಹುಟ್ಟುಹಬ್ಬ ಆಚರಿಸಿದರೂ ಬಳಿಕ ತುಂಬಾ ವಿಷೇಶವಾಗಿ ಹಾಗೂ ವಿಭಿನ್ನವಾಗಿ ತಮ್ಮದೇ ಶೈಲಿಯಲ್ಲಿ ಯಶ್ ಕುಟುಂಬ ಆಚರಿಸಿದ್ದು, ಗೋವಾ ಬೀಚ್‍ನಲ್ಲಿ ಹಡಗಿನಲ್ಲಿ ಅದ್ಧೂರಿಯಾಗಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.

    ಈ ವಿಡಿಯೋವನ್ನು ನಟಿ ರಾಧಿಕಾ ಪಂಡಿತ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ತುಂಬಾ ರಿಚ್ ಆಗಿ ಆಚರಿಸಿರುವುದನ್ನು ನೋಡಬಹುದಾಗಿದೆ. ಈ ಸಂಭ್ರಮಾಚರಣೆಯಲ್ಲಿ ಕೇವಲ ನಾಲ್ಕೈದು ಮಂದಿ ಕುಟುಂಬಸ್ಥರು ಮಾತ್ರ ಭಾಗವಹಿಸಿದ್ದು, ಗೋವಾದ ಬೀಚ್‍ನಲ್ಲಿ ಬೃಹತ್ ಹಡಗಿನಲ್ಲಿ ಆನಂದಿಸಿ, ಕೇಕ್ ಕಟ್ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ತಮ್ಮ ಇಬ್ಬರು ಮಕ್ಕಳನ್ನು ಎತ್ತಿಕೊಂಡು ಸಂಭ್ರಮಿಸಿದ್ದಾರೆ.

    ರಾಧಿಕಾ ಪಂಡಿತ್ ಡಿಯೋ ಪೋಸ್ಟ್ ಮಾಡಿ ಸಂಭ್ರಮ ಹಂಚಿಕೊಂಡಿದ್ದು, ನೀನು ಈ ಕೇಕ್‍ನ ಫ್ಲೇವರ್‍ನ್ನು ನೆನಪಿಟ್ಟುಕೊಳ್ಳುವುದಿಲ್ಲ, ಈ ದಿನ ಏಕೆ ವಿಶೇಷ ಎಂದು ಸಹ ನಿನಗೆ ತಿಳಿಯುವುದಿಲ್ಲ. ಆದರೆ ಹೆತ್ತವರಾದ ನಮಗೆ ಜೀವನದಲ್ಲಿ ಆಚರಿಸಬೇಕಾದ ಸಂಭ್ರಮವಾಗಿದೆ. ಇಂತಹ ಅದ್ಭುತ ಸಂತೋಷ ಉಂಟಾಗಿ ಇಂದಿಗೆ ಒಂದು ವರ್ಷ ಕಳೆದಿದೆ. ಹ್ಯಾಪಿ ಬರ್ತ್ ಡೇ ಎಂದು ಬರೆದು ಹಾರ್ಟ್ ಸಿಂಬಲ್ ಮೂಲಕ ತಮ್ಮ ಮಗನಿಗೆ ರಾಧಿಕಾ ಮತ್ತೊಮ್ಮೆ ಶುಭಾಶಯ ತಿಳಿಸಿದ್ದಾರೆ.

    ಹಡಗಿನಲ್ಲಿ ಸಮುದ್ರದ ಮಧ್ಯೆ ತೆರಳಿ ಜಾಲಿ ರೈಡ್ ಮೂಲಕ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಇದರಲ್ಲಿ ಕುಟುಂಬಸ್ಥರು ಹಾಗೂ ಕೆಲ ಸ್ನೇಹಿತರು ಮಾತ್ರ ಭಾಗವಹಿಸಿದ್ದು, ಡ್ರೋನ್ ಬಳಸಿ ರಿಚ್ ಆಗಿ ವಿಡಿಯೋ ಮಾಡಿಸಲಾಗಿದೆ. ಈ ವಿಡಿಯೋದ ತುಣುಕನ್ನು ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅವರ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದಾರೆ.

    ಸಮುದ್ರ, ಬೀಚ್ ಎಂದರೆ ರಾಧಿಕಾ ಪಂಡಿತ್ ಅವರಿಗೆ ತುಂಬಾ ಇಷ್ಟ ಎಂದು ಈ ಹಿಂದೆ ರಾಖಿ ಭಾಯ್ ತಿಳಿಸಿದ್ದಾರೆ. ಹೀಗಾಗಿ ರಾಧಿಕಾ ಇಷ್ಟದಂತೆಯೇ ಗೋವಾದಲ್ಲೇ ಹುಟ್ಟುಹಬ್ಬ ಆಚರಿಸಿದ್ದಾರೆ. ಅಲ್ಲದೆ ಯಾಶ್ ಹಾಗೂ ರಾಧಿಕಾ ಪಂಡಿತ್ ಅವರ ನಿಶ್ಚಿತಾರ್ಥ ಸಹ ಗೋವಾದಲ್ಲೇ ನಡೆದಿತ್ತು. ಮ್ಯೂಸಿಕ್ ಬೀಟ್ ಜೊತೆಗೆ ಹಡಗಿನಲ್ಲಿ ಕಾಲ ಕಳೆದ ರಿಚ್ ವಿಡಿಯೋವನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

  • ಉಡುಪಿಯಲ್ಲಿ ಎಚ್‍ಡಿಕೆ ಹುಟ್ಟುಹಬ್ಬ – ವಿಶೇಷ ಮಕ್ಕಳಿಗೆ ಸಿಹಿಯೂಟ ಬಡಿಸಿದ ಜೆಡಿಎಸ್

    ಉಡುಪಿಯಲ್ಲಿ ಎಚ್‍ಡಿಕೆ ಹುಟ್ಟುಹಬ್ಬ – ವಿಶೇಷ ಮಕ್ಕಳಿಗೆ ಸಿಹಿಯೂಟ ಬಡಿಸಿದ ಜೆಡಿಎಸ್

    ಉಡುಪಿ: ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿಯವರ ಹುಟ್ಟುಹಬ್ಬವನ್ನು ಉಡುಪಿಯಲ್ಲಿ ಆಚರಿಸಲಾಯಿತು. ಜಿಲ್ಲಾ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ವಿಶೇಷ ಮಕ್ಕಳ ಜೊತೆ ತಮ್ಮ ನಾಯಕ ಎಚ್‍ಡಿಕೆ ಹುಟ್ಟುಹಬ್ಬವನ್ನು ಆಚರಣೆ ಮಾಡಿದರು.

    ನಗರದ ಆಶಾ ನಿಲಯ ವಿಶೇಷ ಮಕ್ಕಳ ಜೊತೆ ಕೇಕ್ ಕತ್ತರಿಸಿದ ಜೆಡಿಎಸ್ ಮುಖಂಡರು ಕುಮಾರಸ್ವಾಮಿಗೆ ಶುಭ ಕೋರಿದರು. ಕೇಕ್ ಕತ್ತರಿಸಿದ ಬಳಿಕ ಮಕ್ಕಳಿಗೆ ಭೋಜನದ ವ್ಯವಸ್ಥೆಯನ್ನೂ ಜೆಡಿಎಸ್ ವತಿಯಿಂದ ಆಯೋಜಿಸಲಾಗಿತ್ತು. ಜಿಲ್ಲಾ ಜೆಡಿಎಸ್ ಮುಖಂಡರು ಪ್ರತಿ ವರ್ಷ ಒಂದೊಂದು ಸಂಸ್ಥೆಗಳಲ್ಲಿ ಎಚ್‍ಡಿಕೆ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಬಂದಿದ್ದಾರೆ. ಹೀಗಾಗಿ ಈ ಬಾರಿ ಆಶಾ ನಿಲಯವನ್ನು ದಳ ನಾಯಕರು ಎಚ್‍ಡಿಕೆ ಹುಟ್ಟುಹಬ್ಬ ಆಚರಣೆ ಮಾಡಲು ಆಯ್ಕೆ ಮಾಡಿಕೊಂಡಿದ್ದರು.

    ಈ ಬಗ್ಗೆ ಮಾತನಾಡಿದ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಎಚ್‍ಡಿಕೆ ಅವರು ಇನ್ನಷ್ಟು ವರ್ಷ ಜನ ಸೇವೆ ಮಾಡಬೇಕು. ಮಕ್ಕಳ ಆಶೀರ್ವಾದದಿಂದ ನೂರು ವರ್ಷ ಕುಮಾರಸ್ವಾಮಿ ಆರೋಗ್ಯದಿಂದಿರಬೇಕು. ಈ ಹಿಂದೆ ಎರಡು ಬಾರಿ ಸಣ್ಣ ಅವಧಿಗೆ ರಾಜ್ಯದ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸಿದ್ದಾರೆ. ಮತ್ತೊಮ್ಮೆ ಸುದೀರ್ಘ ಅವಧಿಗೆ ಜನಸೇವೆ ಮಾಡುವ ಅವಕಾಶವನ್ನು ದೇವರು ಅವರಿಗೆ ಕರುಣಿಸಲಿ ಎಂದು ಶುಭ ಹಾರೈಸಿದರು.