Tag: ಹುಟ್ಟುಹಬ್ಬ

  • ಪ್ರೇಮ್@49 – ಕೇಕ್ ಕತ್ತರಿಸಿ ಸಂಭ್ರಮಿಸಿದ ಕೆಡಿ ಡೈರೆಕ್ಟರ್

    ಪ್ರೇಮ್@49 – ಕೇಕ್ ಕತ್ತರಿಸಿ ಸಂಭ್ರಮಿಸಿದ ಕೆಡಿ ಡೈರೆಕ್ಟರ್

    ಹ್ಯಾಟ್ರಿಕ್ ಡೈರೆಕ್ಟರ್ ಎಂದೇ ಖ್ಯಾತಿ ಪಡೆದಿರುವ ನಿರ್ದೇಶಕ ಪ್ರೇಮ್ 49ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ 49ನೇ ವರ್ಷದ ಹುಟ್ಟುಹಬ್ಬವನ್ನ ತಮ್ಮ ಕುಟುಂಬ ಹಾಗೂ ಆಪ್ತ ಬಳಗದ ಜೊತೆ ಆಚರಿಸಿಕೊಂಡಿದ್ದಾರೆ. ಕೇಕ್ ಕತ್ತರಿಸಿ, ದೀಪಾವಳಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಒಂದು ಕಡೆ ಹುಟ್ಟುಹಬ್ಬ ಹಾಗೂ ದೀಪಾವಳಿ ಸಂಭ್ರಮವನ್ನ ಒಟ್ಟೊಟ್ಟಿಗೆ ಮಾಡಿದ್ದಾರೆ.

    ಮಂಗಳವಾರ ರಾತ್ರಿ ಆಪ್ತರೊಡನೆ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬ ಆಚರಿಸಿಕೊಂಡ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸದ್ಯ ಕೆಡಿ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿರುವ ಪ್ರೇಮ್ ತಮ್ಮ ಅಭಿಮಾನಿಗಳಿಗೆ ಹಾಗೂ ಆಪ್ತ ವಲಯಕ್ಕೆ ಮನೆ ಬಳಿ ಬಾರದಂತೆ ಮನವಿ ಮಾಡಿಕೊಂಡಿದ್ದರು.

    ಧ್ರುವ ಸರ್ಜಾ ಜೊತೆಗಿನ ಪ್ಯಾನ್ ಇಂಡಿಯಾ ಕೆಡಿ ಸಿನಿಮಾ ಟೀಸರ್ ಹಾಗೂ ಸಾಂಗ್ ಮೂಲಕ ಸದ್ದು ಮಾಡುತ್ತಿದೆ. ಈ ಸಿನಿಮಾವನ್ನ ಸದ್ಯದಲ್ಲಿಯೇ ತೆರೆಗೆ ತರುವ ನಿಟ್ಟಿನಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಇದರ ಮಧ್ಯೆ ಆಪ್ತರು ಹಾಗೂ ಕುಟುಂಬದ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

  • ವಿಷ್ಣುವರ್ಧನ್ ಅಭಿಮಾನಿಗಳಿಗೆ ಗೆಲುವು – ಸಮಾಧಿ ಸಮೀಪ ಬರ್ತ್‌ಡೇಗೆ ಸಿಕ್ತು ಅನುಮತಿ

    ವಿಷ್ಣುವರ್ಧನ್ ಅಭಿಮಾನಿಗಳಿಗೆ ಗೆಲುವು – ಸಮಾಧಿ ಸಮೀಪ ಬರ್ತ್‌ಡೇಗೆ ಸಿಕ್ತು ಅನುಮತಿ

    ರ್ನಾಟಕ ರತ್ನ ಡಾ.ವಿಷ್ಣುವರ್ಧನ್ (Dr.Vishnuvardhan) ಅವರ 75ನೇ ಹುಟ್ಟುಹಬ್ಬ ಆಚರಿಸಲು ಸಜ್ಜಾಗಿರುವ ಫ್ಯಾನ್ಸ್‌ಗೆ ಖುಷಿ ಸುದ್ದಿ ಸಿಕ್ಕಿದೆ. ವಿಷ್ಣು ಸಮಾಧಿ ಇರುವ ಅಭಿಮಾನ್ ಸ್ಟುಡಿಯೋ (Abhiman Studio) ಅಕ್ಕಪಕ್ಕದಲ್ಲಿ ಕಾರ್ಯಕ್ರಮ ಆಯೋಜನೆಗೆ ಕೊನೆಗೂ ಪೊಲೀಸರು ಅನುಮತಿ ಕೊಟ್ಟಿದ್ದಾರೆ.

    ಸಮಾಧಿ ಜಾಗ ವಿವಾದ ಕೋರ್ಟ್‌ನಲ್ಲಿರುವ ಕಾರಣ ಕಾರ್ಯಕ್ರಮಕ್ಕೆ ಬೆಳಗ್ಗೆ ಪೊಲೀಸರು ಅನುಮತಿ ಕೊಡಲು ನಿರಾಕರಿಸಿದ್ದರು. ಈ ಸಂಬಂಧ ಡಾ. ವಿಷ್ಣುಸೇನಾ ಸಮಿತಿ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಡಿಸಿಪಿ ಅನಿತಾರನ್ನು ಭೇಟಿಯಾಗಿ ಮನವಿ ಮಾಡಿದ್ದರು. ಸಂಜೆ ಹೊತ್ತಿಗೆ ಷರತ್ತು ಬದ್ಧ ಅನುಮತಿ ಕೊಟ್ಟಿದ್ದು, ಅಭಿಮಾನ್ ಸ್ಟುಡಿಯೋ ಬಳಿ ಯಾರೂ ಹೋಗದೇ ನಿಗದಿ ಮಾಡಿರುವ ಜಾಗದಲ್ಲೇ ಸಂಭ್ರಮಾಚರಣೆ ಮಾಡುವಂತೆ ಡಿಸಿಪಿ ಸೂಚಿಸಿದ್ದಾರೆ.

    ಡಿಸಿಪಿ ಒಪ್ಪಿಗೆಯ ಬೆನ್ನಲ್ಲೇ ಅಭಿಮಾನ ಸ್ಟುಡಿಯೋಗೆ 200 ಮೀಟರ್ ಅಂತರದಲ್ಲಿ 2 ಎಕರೆ ಜಾಗ ಬಾಡಿಗೆ ಪಡೆದು ವಿಷ್ಣು ಹುಟ್ಟುಹಬ್ಬ ಆಚರಣೆಗೆ ಫ್ಯಾನ್ಸ್ ಸಿದ್ಧತೆ ನಡೆಸಿದ್ದಾರೆ. ರಕ್ತದಾನ, ಅನ್ನದಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

  • ಕಿಚ್ಚನ ಅಭಿಮಾನಿಯಿಂದ ಬಡ ಮಹಿಳೆಗೆ ಸೂರು ಉಡುಗೊರೆ!

    ಕಿಚ್ಚನ ಅಭಿಮಾನಿಯಿಂದ ಬಡ ಮಹಿಳೆಗೆ ಸೂರು ಉಡುಗೊರೆ!

    ಬೆಳಗಾವಿ: ಕರ್ನಾಟಕದ ರನ್ನ ಕಿಚ್ಚ ಸುದೀಪ್ (Sudeep) ಅವರಿಗೆ ಇಂದು ಜನ್ಮದಿನದ ಸಂಭ್ರಮ. ಕಿಚ್ಚನ ಹುಟ್ಟು ಹಬ್ಬಕ್ಕೆ (Birth Day) ಅವರ ಅಭಿಮಾನಿಯೊಬ್ಬರು ಅನಾಥ ಕುಟುಂಬಕ್ಕೆ ಭರ್ಜರಿ ಗಿಫ್ಟ್ ನೀಡಿದ್ದಾರೆ.

     

    ಬೆಳಗಾವಿ ತಾಲೂಕಿನ ಮಾರ್ಕಂಡೇಯ ನಗರದಲ್ಲಿ ಒಂದು ಗುಂಟೆ ಜಾಗದಲ್ಲಿ ಬಡ ಮಹಿಳೆ ರತ್ನವ್ವ ಅವರಿಗೆ ಕಿಚ್ಚನ ಅಭಿಮಾನಿ ಆದಿಶೇಷ ಮನೆ (House) ನಿರ್ಮಾಣ ಮಾಡಿಕೊಟ್ಟಿದ್ದಾರೆ. ಬಡ ಮಹಿಳೆಗೆ ಸೂರು ಒದಗಿಸುವುದರ ಮೂಲಕ ಕಿಚ್ಚನ ಬರ್ತಡೇಯನ್ನು ವಿಭಿನ್ನವಾಗಿ ಆಚರಿಸಲಾಗಿದೆ.  ಇದನ್ನೂ ಓದಿ: ಬಿಗ್‌ ಬಾಸ್‌ ಪ್ರೋಮೋ ರಿಲೀಸ್‌ ಸ್ಪರ್ಧಿಗಳ ಬಗ್ಗೆ ಮಾಹಿತಿಯೂ ಔಟ್‌

    ಸುದೀಪ್ ಹುಟ್ಟುಹಬ್ಬವನ್ನು ಮನೆಯ ಮುಂದೆ ಕೇಕ್ ಕಟ್ ಮಾಡಿ ರಿಬ್ಬನ್ ಟೇಪ್ ಕತ್ತರಿಸಿ ಗೃಹ ಪ್ರವೇಶ ಕಾರ್ಯಕ್ರಮ ಮಾಡಲಾಯಿತು. ತಂದೆ ತಾಯಿ ಇಲ್ಲದ ಒಂಭತ್ತು ಜನ ಮೊಮ್ಮಕ್ಕಳೊಂದಿಗೆ ರತ್ನವ್ವ ಬದುಕು ಸಾಗಿಸುತ್ತಿದ್ದಾರೆ.

    ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಸದ್ಯ ರತ್ನವ್ವ ಒಬ್ಬರೇ ಆಸರೆಯಾಗಿದ್ದು ಮನೆಯ ಸಂಕಷ್ಟವನ್ನು ಗಮನಿಸಿ ಆದಿಶೇಷ ನಾಯಕ ಮನೆ ನಿರ್ಮಿಸಿಕೊಟ್ಟಿದ್ದಾರೆ.

  • ಸರ್ಕಾರಿ ಕಚೇರಿಯಲ್ಲಿ ಖಾಸಗಿ ವ್ಯಕ್ತಿಯ ಹುಟ್ಟುಹಬ್ಬ ಆಚರಣೆ – ಮೂವರು ಸಾರಿಗೆ ಅಧಿಕಾರಿಗಳ ಅಮಾನತು

    ಸರ್ಕಾರಿ ಕಚೇರಿಯಲ್ಲಿ ಖಾಸಗಿ ವ್ಯಕ್ತಿಯ ಹುಟ್ಟುಹಬ್ಬ ಆಚರಣೆ – ಮೂವರು ಸಾರಿಗೆ ಅಧಿಕಾರಿಗಳ ಅಮಾನತು

    ಹಾಸನ: ಸರ್ಕಾರಿ ಕಚೇರಿಯಲ್ಲಿ (Government Office) ಖಾಸಗಿ ವ್ಯಕ್ತಿಯೊಬ್ಬರ ಹುಟ್ಟುಹಬ್ಬವನ್ನು (Birthday) ಸಂಭ್ರಮದಿಂದ ಆಚರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಕಲೇಶಪುರ (Sakleshpura) ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ಎಆರ್‌ಟಿಓ) ಎಸ್.ಎನ್.ಮಧುರಾ ಸೇರಿ ಮೂವರು ನೌಕರರನ್ನು ಸೇವೆಯಿಂದ ಅಮಾನತು (Suspend) ಮಾಡಲಾಗಿದೆ.

    ಎಆರ್‌ಟಿಓ ಜೊತೆಗೆ ಕಚೇರಿ ಅಧೀಕ್ಷಕ ಎಂ.ಕೆ.ಗಿರೀಶ್, ಮೋಟಾರು ವಾಹನ ನಿರೀಕ್ಷಕಿ ಎನ್.ಆರ್.ಆಶಾ ಅಮಾನತುಗೊಂಡವರು. ಜು.11ರಂದು ಶುಕ್ರವಾರ ಡ್ರೈವಿಂಗ್ ಶಾಲೆಯೊಂದರ ಮುಖ್ಯಸ್ಥ ಮೋಹನ್ ಶೆಟ್ಟಿ ಎಂಬವರ ಹುಟ್ಟುಹಬ್ಬವನ್ನು ಕಚೇರಿಯಲ್ಲಿ ಆಚರಿಸಲಾಗಿತ್ತು. ಇದರ ಬಗ್ಗೆ ದೃಶ್ಯ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು. ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸಾರಿಗೆ ಮತ್ತು ಶಿಸ್ತು ಪ್ರಾಧಿಕಾರ ಆಯುಕ್ತ ಎ.ಎಂ.ಯೋಗೀಶ್ ಅವರು ಮೂವರನ್ನು ಅಮಾನತು ಮಾಡಿ ಸೋಮವಾರ ಆದೇಶಿಸಿದ್ದಾರೆ. ಇದನ್ನೂ ಓದಿ: ದಾವಣಗೆರೆ ಶೃಂಗ ಸಮ್ಮೇಳನ – 15 ವರ್ಷಗಳ ಬಳಿಕ ಒಂದಾದ ಪಂಚಪೀಠಾಧೀಶರು

    ಪ್ರಕರಣ ಕುರಿತು ಸ್ಪಷ್ಟನೆ ಕೋರಿದ್ದ ಮೇಲಧಿಕಾರಿಗಳಿಗೆ ಎಆರ್‌ಟಿಓ ಎಸ್.ಎನ್.ಮಧುರಾ ಅವರು ನೀಡಿದ ಸಮಜಾಯಿಷಿಯಲ್ಲಿ ಖಾಸಗಿ ವ್ಯಕ್ತಿ ಮೋಹನ್ ಶೆಟ್ಟಿ ಅವರನ್ನು ಪರ ಲಿಖಿತ ಹೇಳಿಕೆ ಕೊಟ್ಟಿದ್ದರು. ಆ ವ್ಯಕ್ತಿ ಡ್ರೈವಿಂಗ್ ಶಾಲೆಯ ಮುಖ್ಯಸ್ಥರಾಗಿದ್ದು, ಕಚೇರಿ ಆವರಣದ ಗೇಟ್ ಹಾಗೂ ಬೀಗದ ವ್ಯವಸ್ಥೆ ಉಚಿತವಾಗಿ ನೀಡಿದ ದಾನಿಗಳಾಗಿದ್ದಾರೆ. ಶುಕ್ರವಾರ ಎಂದಿನಂತೆ ಪೂಜೆ ಮಾಡುತ್ತಿದ್ದೆವು. ಮೋಹನ್ ಶೆಟ್ಟಿ ಅವರ ಹುಟ್ಟುಹಬ್ಬ ಹಾಗೂ ಕಚೇರಿಯಲ್ಲಿ ಆಚರಿಸುವ ಕುರಿತು ಮಾಹಿತಿ ಇರಲಿಲ್ಲ. ಏಕಾಏಕಿ ಕೇಕ್, ಶಾಲು, ಹಾರ ತಂದಿದ್ದರು. ನಾನು ಅವರಿಗೆ ಜನ್ಮ ದಿನದ ಶುಭಾಶಯ ಕೋರಿದ್ದೇನೆ ಹೊರತು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿಲ್ಲವೆಂದು ತಿಳಿಸಿದ್ದರು. ಇವರಲ್ಲದೆ ಎಂ.ಕೆ.ಗಿರೀಶ್ ಹಾಗೂ ಎನ್.ಆರ್.ಆಶಾ ಸಹ ಇದೇ ರೀತಿ ಸಮಜಾಯಿಷಿ ನೀಡಿದ್ದಾರೆ. ಇದನ್ನೂ ಓದಿ: 1.25 ಲಕ್ಷ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ಪಿಎಸ್‌ಐ

    ಎಎಆರ್‌ಟಿಓ ಹಾಗೂ ಇತರ ಇಬ್ಬರು ನೌಕರರ ಸಮಜಾಯಿಷಿಯನ್ನು ಪರಿಶೀಲಿಸಿದ ಮೇಲಧಿಕಾರಿಗಳು, ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದನ್ನು ಪರಿಗಣಿಸಿ ಅಮಾನತು ಮಾಡಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ಗಣ್ಯ ವ್ಯಕ್ತಿಗಳ ಜಯಂತಿ ಮತ್ತು ಕಾರ್ಯಕ್ರಮ ಆಯೋಜಿಸಲು ಮಾತ್ರ ಅವಕಾಶವಿದೆ. ಪ್ರಸ್ತುತ ಪ್ರಕರಣದಲ್ಲಿ ಸರ್ಕಾರಿ ಕಚೇರಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಹುಟ್ಟುಹಬ್ಬ ಆಚರಿಸುವುದು ಸಾಕ್ಷಿ ಸಮೇತ ಕಂಡುಬಂದಿದ್ದು, ಕಚೇರಿ ಶಿಸ್ತು ಉಲ್ಲಂಘನೆ ಮಾಡಿದ್ದಾರೆಂದು ಅಮಾನತು ಮಾಡಲಾಗಿದೆ. ಇದನ್ನೂ ಓದಿ: D-CET ಶುಲ್ಕ ಪಾವತಿಗೆ ದಿನಾಂಕ ವಿಸ್ತರಣೆ: KEA

  • ಗಾಳಿಯಲ್ಲಿ ಗುಂಡು ಹಾರಿಸಿ ಹುಟ್ಟುಹಬ್ಬ ಆಚರಣೆ – ಪಂಚಾಯತ್‌ ಸದಸ್ಯ ಅರೆಸ್ಟ್‌

    ಗಾಳಿಯಲ್ಲಿ ಗುಂಡು ಹಾರಿಸಿ ಹುಟ್ಟುಹಬ್ಬ ಆಚರಣೆ – ಪಂಚಾಯತ್‌ ಸದಸ್ಯ ಅರೆಸ್ಟ್‌

    ಬೆಳಗಾವಿ: ರಸ್ತೆ ಮಧ್ಯೆ ಗಾಳಿಯಲ್ಲಿ ಗುಂಡು ಹಾರಿಸಿ (Firing Bullets) ಗ್ರಾಮ ಪಂಚಾಯತ್‌ ಸದಸ್ಯನೊಬ್ಬ ಹುಟ್ಟುಹಬ್ಬ ಆಚರಿಸಿದ ಘಟನೆ ರಾಯಬಾಗ ತಾಲೂಕಿನ‌ ಕುಡಚಿ (Kudachi) ಪಟ್ಟಣದಲ್ಲಿ ನಡೆದಿದೆ.

    ಕುಡಚಿ ಪಟ್ಟಣದ ಗ್ರಾಮ ಪಂಚಾಯತಿ ಸದಸ್ಯ ಬಾಬಾಜಾನ್ ಖಾಲಿಮುಂಡಾಸೈ ಬಂದೂಕು ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿ ಗೂಂಡಾ ವರ್ತನೆ ತೋರಿದ್ದಾನೆ‌. ಇದನ್ನೂ ಓದಿ: ವೃದ್ಧಾಪ್ಯ ತಡೆಯುವ ಚಿಕಿತ್ಸೆಯೇ ಶೆಫಾಲಿ ಜರಿವಾಲಾಗೆ ಮುಳುವಾಯ್ತಾ ?

    ಕೇಕ್ ಕತ್ತರಿಸುವಾಗ ಯುವಕರು ನಡುರಸ್ತೆಯಲ್ಲೇ ಕೈಯಲ್ಲಿ ಚಾಕು ಹಿಡಿದ ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ. ಪಕ್ಕದಲ್ಲೇ ಠಾಣೆ ಇದ್ದರೂ ಪೊಲೀಸರು (Police) ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದರು.   ಇದನ್ನೂ ಓದಿ: Chikkamagaluru | ವಸತಿ ಶಾಲೆಯ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು

    ರ್ವಜನಿಕ ವಲಯದಲ್ಲಿ ಗುರುತಿಸಿಕೊಂಡ ಬಾಬಾಜಾನ್ ಖಾಲಿಮುಂಡಾಸೈ ಹುಟ್ಟುಹಬ್ಬದ ಆಚರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿತ್ತು.

    ನಡು ರಸ್ತೆಯಲ್ಲಿ ಫೈರಿಂಗ್ ಮಾಡಿ ಅಸಭ್ಯ ವರ್ತನೆ ತೋರಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಕುಡಚಿ ಪೊಲೀಸರು ಪ್ರಕರಣ ದಾಖಲಿಸಿ ಬಾಬಾಜಾನನ್ನು ಬಂಧಿಸಿದ್ದಾರೆ.

  • Chikkaballapura | ಲಾಂಗ್‌ನಲ್ಲಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಣೆ – ಆಟೋ ಚಾಲಕ ಅರೆಸ್ಟ್

    Chikkaballapura | ಲಾಂಗ್‌ನಲ್ಲಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಣೆ – ಆಟೋ ಚಾಲಕ ಅರೆಸ್ಟ್

    ಚಿಕ್ಕಬಳ್ಳಾಪುರ: ಲಾಂಗ್ ಮೂಲಕ ಕೇಕ್ ಕಟ್ ಮಾಡಿ ಹುಟ್ಟುಹಬ್ಬ (Birthday) ಆಚರಣೆ ಮಾಡಿದ ಆಟೋ ಚಾಲಕನನ್ನು (Auto Driver) ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

    ಗೌರಿಬಿದನೂರು ತಾಲೂಕಿನ ವೈಚಕೂರಹಳ್ಳಿ ನಿವಾಸಿ ಆಟೋ ಚಾಲಕ ಅನಿಲ್ ಕುಮಾರ್ ತನ್ನ ಹುಟ್ಟು ಹಬ್ಬದಂದು ಕಿಂಗ್ ಎಂದು ಕೇಕ್ ಮಾಡಿಸಿ ಮಾರಕಾಸ್ತç ಲಾಂಗ್‌ನಲ್ಲಿ ಕಟ್ ಮಾಡಿ ಬರ್ತ್‌ಡೇ ಆಚರಿಸಿಕೊಂಡಿದ್ದ. ಬಳಿಕ ಆ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಇದನ್ನೂ ಓದಿ: ಏಕದಿನಕ್ಕೆ ಆಸೀಸ್‌ ಆಲ್‌ರೌಂಡರ್‌ ಮ್ಯಾಕ್ಸ್‌ವೆಲ್‌ ದಿಢೀರ್‌ ನಿವೃತ್ತಿ

    ಈ ವೀಡಿಯೋ ನೋಡಿದ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಆಟೋ ಚಾಲಕನನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: 4,000 ಸಕ್ರಿಯ ಕೊರೊನಾ ಕೇಸ್‌ಗಳ ಸನಿಹದಲ್ಲಿ ಭಾರತ – ಕೇರಳದಲ್ಲಿಯೇ 1,400 ಪ್ರಕರಣ

  • ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಹುಟ್ಟುಹಬ್ಬ – ಮೋದಿ, ಸಿದ್ದರಾಮಯ್ಯ ಸೇರಿ ಗಣ್ಯರಿಂದ ಶುಭಾಶಯ

    ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಹುಟ್ಟುಹಬ್ಬ – ಮೋದಿ, ಸಿದ್ದರಾಮಯ್ಯ ಸೇರಿ ಗಣ್ಯರಿಂದ ಶುಭಾಶಯ

    ಬೆಂಗಳೂರು: ಇಂದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ (HD Deve Gowda) 92ನೇ ವರ್ಷದ ಹುಟ್ಟುಹಬ್ಬದ (Birthday) ಹಿನ್ನೆಲೆ ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ದೇವೇಗೌಡರಿಗೆ ಶುಭಾಶಯ ಕೋರಿದ್ದಾರೆ.

    ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯಗಳು. ಸಾರ್ವಜನಿಕ ಸೇವೆಗಾಗಿ ಹೆಚ್‌ಡಿಡಿ ಎಲ್ಲೆಡೆ ಗೌರವಾನ್ವಿತರಾಗಿದ್ದಾರೆ. ಹಲವಾರು ವಿಷಯಗಳ ಕುರಿತು ಅವರ ಬುದ್ಧಿವಂತಿಕೆ ಮತ್ತು ಒಳನೋಟಗಳು ಹೆಚ್ಚಿನ ಶಕ್ತಿಯ ಮೂಲವಾಗಿದೆ. ಅವರಿಗೆ ದೀರ್ಘ ಮತ್ತು ಆರೋಗ್ಯಕರ ಜೀವನ ಕರುಣಿಸಲಿ ಎಂದು ಹಾರೈಸುತ್ತೇನೆಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಮಸೀದಿಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ – ಪರಿಶೀಲಿಸುವಂತೆ ಪೊಲೀಸ್ ಆಯುಕ್ತರಿಗೆ ಬೆಲ್ಲದ್ ಪತ್ರ

    ಇನ್ನು ಸಿಎಂ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ನಾಡಿನ ಹಿರಿಯ ರಾಜಕಾರಣಿ, ಮಾಜಿ ಪ್ರಧಾನಿಗಳು ಆದ ಹೆಚ್‌ಡಿ ದೇವೇಗೌಡ ಅವರಿಗೆ ಜನ್ಮದಿನದ ಶುಭಾಶಯಗಳು. ಮತ್ತಷ್ಟು ಕಾಲ ತಮಗೆ ಉತ್ತಮ ಆರೋಗ್ಯ ಮತ್ತು ಆಯಸ್ಸನ್ನು ದೇವರು ಕರುಣಿಸಲೆಂದು ಹಾರೈಸುತ್ತೇನೆ ಎಂದು ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಎಣ್ಣೆ ಏಟಲ್ಲಿ ಮಹಿಳಾ ಸಿಬ್ಬಂದಿ ಜೊತೆ ಗೃಹರಕ್ಷಕ ದಳ ಅಧಿಕಾರಿ ಅನುಚಿತ ವರ್ತನೆ ಆರೋಪ – ದೂರು

    ಹೆಚ್‌ಡಿ ಕುಮಾರಸ್ವಾಮಿ ಎಕ್ಸ್‌ನಲ್ಲಿ, ನನ್ನ ಪೂಜ್ಯ ತಂದೆಯವರು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನಮಂತ್ರಿಗಳೂ ಆಗಿರುವ ಮಣ್ಣಿನಮಗ ಹೆಚ್‌ಡಿ ದೇವೇಗೌಡ ಅವರಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು. ನನ್ನ ಶಕ್ತಿ, ನನ್ನ ಧೈರ್ಯ, ನನ್ನ ಸ್ಫೂರ್ತಿ ನನ್ನ ತಂದೆಯವರೇ ಆಗಿದ್ದಾರೆ. ಅವರ ಸಂಘರ್ಷದ ಹಾದಿ, ಸಾಧನೆ, ಸೇವಾ ತತ್ಪರತೆ ನನ್ನ ಮೇಲೆ ಅಗಾಧ ಪ್ರಭಾವ ಬೀರಿದೆ. ಇಡೀ ಬದುಕನ್ನು ರಾಷ್ಟ್ರ ಸೇವೆಗೆ ಸಮರ್ಪಿಸಿರುವ ಈ ಮಹಾನ್ ನಾಯಕನ ಕುಡಿಯಾಗಿ ಹುಟ್ಟಿರುವುದು ನನ್ನ ಜನ್ಮಜನ್ಮದ ಸುಕೃತ. ಆ ಭಗವಂತ ನನ್ನ ತಂದೆಯವರಿಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಲಿ. ಸುದೀರ್ಘ ಕಾಲ ನಮಗೆಲ್ಲಾ ಮಾರ್ಗದರ್ಶನ ಮಾಡಿ, ಜನಸೇವೆ ಮಾಡುವ ಚೈತನ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಬೇಕಾ, ನರಕ ಬೇಕಾ ಅಂತ ಕೇಳಿದ್ರೆ ನಾನು ನರಕವನ್ನೇ ಆಯ್ಕೆ ಮಾಡ್ತೀನಿ: ಜಾವೇದ್‌ ಅಖ್ತರ್‌

    ಹೆಚ್‌ಡಿಡಿ ಜನ್ಮದಿನದ ಹಿನ್ನೆಲೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಪದ್ಮನಾಭ ನಗರದ ನಿವಾಸದಲ್ಲಿ ದೇವೇಗೌಡರನ್ನು ಭೇಟಿ ಮಾಡಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.  ಇದನ್ನೂ ಓದಿ: Hyderabad | ಚಾರ್‌ಮಿನಾರ್ ಬಳಿಯ ಗುಲ್ಜಾರ್ ಹೌಸ್‌ನಲ್ಲಿ ಬೆಂಕಿ ಅವಘಡ – 17 ಮಂದಿ ಸಜೀವ ದಹನ

  • ನಿಮ್ಮ ಹಾರೈಕೆಗಳು ನನ್ನ ಮುಂದಿನ ಹೆಜ್ಜೆಗೆ ದಾರಿ ತೋರುವ ಬೆಳಕು, ಶೀಘ್ರವೇ ಭೇಟಿಯಾಗುತ್ತೇನೆ: ಅಭಿಮಾನಿಗಳಿಗೆ ದರ್ಶನ್‌ ಪತ್ರ

    ನಿಮ್ಮ ಹಾರೈಕೆಗಳು ನನ್ನ ಮುಂದಿನ ಹೆಜ್ಜೆಗೆ ದಾರಿ ತೋರುವ ಬೆಳಕು, ಶೀಘ್ರವೇ ಭೇಟಿಯಾಗುತ್ತೇನೆ: ಅಭಿಮಾನಿಗಳಿಗೆ ದರ್ಶನ್‌ ಪತ್ರ

    ನಿಮ್ಮ ಹಾರೈಕೆಗಳು ನನ್ನ ಮುಂದಿನ ಹೆಜ್ಜೆಗೆ ದಾರಿ ತೋರು ಬೆಳಕು, ಶೀಘ್ರದಲ್ಲಿ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Darshan) ಅವರು ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ.

    ಇಂದು ದರ್ಶನ್‌ ಅವರು 48ನೇ ಹುಟ್ಟುಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿ ನಾನು ಹುಟ್ಟುಹಬ್ಬ ಆಚರಿಸುತ್ತಿಲ್ಲ ಎಂದು ವಿಡಿಯೋ ಮಾಡಿ ತಿಳಿಸಿದ್ದರೂ ಅಭಿಮಾನಿಗಳ ಸಂಭ್ರಮ ಕಡಿಮೆಯಾಗಿಲ್ಲ. ಈ ಕಾರಣಕ್ಕೆ ತನ್ನ ಪ್ರೀತಿಯ ಅಭಿಮಾನಿಗಳನ್ನು ಸೆಲೆಬ್ರಿಟಿಸ್ ಎಂದು ಕರೆದು ಪತ್ರ ಬರೆದಿದ್ದಾರೆ.

    ಪ್ರತದಲ್ಲಿ ಏನಿದೆ?
    ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಎಂದು ಭಾಸವಾಗುತ್ತದೆ. ಕಷ್ಟದಲ್ಲಿದ್ದಾಗ ಸದಾ ಬೆಂಬಲದಲ್ಲಿ ನಿಲ್ಲುವಂತ ಈ ನಿಷ್ಕಲ್ಮಶ ಹೃದಯಗಳಿಗೆ ನಾನು ಸದಾ ಚಿರಋಣಿ. ನಿಮ್ಮ ಪ್ರೀತಿ-ಪ್ರೋತ್ಸಾಹ ಮತ್ತು ಬೆಂಬಲವೇ ನನ್ನ ಜೀವನದ ನಿಜವಾದ ಆಸ್ತಿ.

    ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿಸುವ ನಿಮ್ಮ ಪ್ರೀತಿಯ ಆಶೀರ್ವಾದಕ್ಕೆ ನಾನು ಮನದಾಳದಿಂದ ಕೃತಜ್ಞನಾಗಿದ್ದೇನೆ. ನೀವು ಹಲವೆಡೆ ಮಾಡುತ್ತಿರುವ ದಾನ-ಧರ್ಮ ಕಾರ್ಯಗಳು ಸಹಸ್ರಾರು ಹೃದಯಗಳನ್ನು ಸ್ಪರ್ಶಿಸುವಂತಹದ್ದು. ನಿಮ್ಮ ಈ ಕೆಲಸಗಳು ಅನೇಕರಿಗೆ ದಾರಿದೀಪವಾಗಲಿ.

     


    ನಿಮ್ಮ ಮನದಾಳದ ಪ್ರೀತಿಯ ಹಾರೈಕೆಗಳು ನನ್ನ ಮುಂದಿನ ಹೆಜ್ಜೆಗೆ ದಾರಿ ತೋರುವ ಬೆಳಕು ಎಂದರೆ ಅತಿಶಯೋಕ್ತಿಯಲ್ಲ. ಆದಷ್ಟು ಬೇಗ ನಿಮ್ಮನ್ನು ಕಾಣುವ ಹಂಬಲ, ಕಾತುರ ನನ್ನಲಿಯೂ ಇದೆ. ನಿಮ್ಮನ್ನು ಪಡೆದಿರುವ ನಾನೇ ಧನ್ಯ.

  • ಆರೋಗ್ಯ ಸಮಸ್ಯೆ ಇದೆ, ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ: ಸೆಲೆಬ್ರಿಟಿಗಳಿಗೆ ದರ್ಶನ್‌ ಮನವಿ

    ಆರೋಗ್ಯ ಸಮಸ್ಯೆ ಇದೆ, ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ: ಸೆಲೆಬ್ರಿಟಿಗಳಿಗೆ ದರ್ಶನ್‌ ಮನವಿ

    ಸ್ಯಾಂಡಲ್‌ವುಡ್ ನಟ ದರ್ಶನ್‌ಗೆ (Darshan) ಫೆ.16ರಂದು ಹುಟ್ಟುಹಬ್ಬ. ಈ ಹಿನ್ನೆಲೆ ಫ್ಯಾನ್ಸ್‌ಗೆ ದಾಸ ದರ್ಶನ್ ಪ್ರೀತಿಯ ಮನವಿವೊಂದನ್ನು ಮಾಡಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಹುಟ್ಟುಹಬ್ಬ (Birthday) ಆಚರಿಸಿಕೊಳ್ಳಲ್ಲ ಎಂದು ಅಭಿಮಾನಿಗಳಿಗೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. ಇದನ್ನೂ ಓದಿ:ಅನ್‌ಲಾಕ್ ರಾಘವನ ಬಗ್ಗೆ ರೆಚೆಲ್ ಡೇವಿಡ್ ಹೇಳಿದ್ದಿಷ್ಟು!

    ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನಮಸ್ಕಾರ ಹೇಳಲಾ, ಥ್ಯಾಂಕ್ಸ್ ಹೇಳೋದಾ ನೀವೆಲ್ಲರೂ ಕೊಟ್ಟಿರುವ ಪ್ರೀತಿಗೆ ಏನು ಹೇಳಿದ್ರೂ ಕಮ್ಮಿನೇ. ಅದನ್ನು ಹೇಗೆ ಹಿಂದಿರುಗಿಸಿ ಕೊಡೋದು ನನಗೆ ಗೊತ್ತಾಗುತ್ತಿಲ್ಲ. ಆದರೆ ಇದೇ ಫೆ.16ಕ್ಕೆ ನನ್ನ ಹುಟ್ಟುಹಬ್ಬ. ಪ್ರತಿಯೊಬ್ಬರಿಗೂ ಭೇಟಿಯಾಗಿ ಥ್ಯಾಂಕ್ಸ್ ಹೇಳೋಣ ಅಂತ ಆಸೆ ಇತ್ತು. ನನ್ನ ಆರೋಗ್ಯ ಸಮಸ್ಯೆಯಿಂದ ತುಂಬಾ ಹೊತ್ತು ನಿಂತುಕೊಳ್ಳೋಕೆ ಆಗಲ್ಲ. ಹಾಗಾಗಿ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ಅಂತ ಅಭಿಮಾನಿಗಳಿಗೆ ದರ್ಶನ್ ಮನವಿ ಮಾಡಿದ್ದಾರೆ.

    ನಿಂತುಕೊಂಡು ಎಲ್ಲರಿಗೂ ವಿಶ್ ಮಾಡೋಕೆ ನನ್ನ ಕೈಯಲ್ಲಿ ಆಗಲ್ಲ. ಒಂದು ಇಂಜೆಕ್ಷನ್ ತೆಗೆದುಕೊಂಡಾಗ ಒಂದು 15ರಿಂದ 20 ದಿನ ಆರಾಮ ಆಗಿರುತ್ತೇನೆ. ಅದರ ಪವರ್ ಕಮ್ಮಿಯಾಗುತ್ತಿದ್ದಂತೆ ನೋವು ಶುರುವಾಗುತ್ತದೆ. ಆಪರೇಷನ್ ಅನ್ನೋದು ಕಟ್ಟಿಟ್ಟ ಬುಟ್ಟಿ. ಅದು ನನಗೂ ಗೊತ್ತು. ಅದನ್ನು ಮುಂದೆ ಮಾಡಿಸಲೇಬೇಕು ನಾನು. ಈಗ ಇರೋ ಕೆಲಸಗಳಲ್ಲಿ ಈಗಾಗಲೇ ಒಪ್ಪಿಕೊಂಡಿರೋದನ್ನು ಮಾಡಬೇಕಿದೆ. ನನ್ನ ನಿರ್ಮಾಪಕರಿಗೆ ಥ್ಯಾಂಕ್ಯೂ ಹೇಳ್ತೀನಿ. ಯಾಕೆಂದರೆ ಇಷ್ಟು ದಿನ ನನಗಾಗಿ ಕಾದಿದ್ದಾರೆ. ಅವರಿಗೆ ನಾನು ಅನ್ಯಾಯ ಮಾಡಬಾರದು ಅಂತ ಎಷ್ಟು ದಿನ ಸಾಧ್ಯವಾಗುತ್ತದೋ ಅಷ್ಟು ದಿನ ಆಪರೇಷನ್ ಮುಂದಕ್ಕೆ ಹಾಕಲು ನೋಡ್ತಾ ಇದ್ದೀನಿ. ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಪ್ರೀತಿಯ ಮನವಿ ಈ ವರ್ಷ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಕ್ಷಮೆ ಇರಲಿ ಎಂದು ನಟ ಮನವಿ ಮಾಡಿದ್ದಾರೆ.

    ಯಾವುದೇ ಊಹಾಪೋಹಗಳಿಗೆ ಕಿವಿ ಕೊಡಬೇಡಿ. 101% ಹೌದು ನಾನು ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ದುಡ್ಡು ವಾಪಸ್ ಕೊಟ್ಟಿದ್ದೇನೆ. ನನ್ನ ಹತ್ತಿರ ಸಿನಿಮಾಗೆ ಬರುವಾಗಲೇ ಸಿಕ್ಕಾಪಟ್ಟೆ ಕಮಿಟ್‌ಮೆಂಟ್ ಇತ್ತು. ಹಾಗಾಗಿ ವಾಪಸ್ ಕೊಟ್ಟೆ. ಮುಂದೆ ನಾವಿಬ್ಬರೂ ಸಿನಿಮಾ ಮಾಡೇ ಮಾಡ್ತೀವಿ.

    ಅದಷ್ಟೇ ಅಲ್ಲ, ಮುಂದೆ ನಾನು ಪ್ರೇಮ್ ಒಟ್ಟಾಗಿ ಸಿನಿಮಾ ಮಾಡೇ ಮಾಡುತ್ತೇವೆ. ನನ್ನ ಗುರುಗಳು, ನನ್ನ ಪ್ರೀತಿಯ ಸ್ನೇಹಿತೆಯ ಆಸೆ ಅದು. ಕೆವಿಎನ್ ಪ್ರೊಡಕ್ಷನ್‌ನವರು ಅವರು ಬೇರೆ ಸಿನಿಮಾ ಮಾಡ್ತಿದ್ದಾರೆ. ಮತ್ತೊಂದು ಪ್ರೊಡಕ್ಷನ್ ಅಂದಾಗ ಅವರಿಗೂ ಕಷ್ಟ ಆಗುತ್ತೆ. ಅದಕ್ಕೆ ಯಾರು ಯಾವುದೇ ಪ್ರೊಡಕ್ಷನ್ ಇಲ್ಲದೇ ಸುಮ್ಮನೆ ಇರತಾರಲ್ಲ ಅವರಿಗೆ ಅವಕಾಶ ಕೊಡೋಣ ಅಂತ ಎಂದಿದ್ದಾರೆ.

    ನಿಮ್ಮ ಪ್ರೀತಿ, ಅಭಿಮಾನ, ಪ್ರೋತ್ಸಾಹ ನನ್ನ ಮೇಲೆ ಇರೋದಕ್ಕೆ ಯಾವಾಗಲೂ ಚಿರಋಣಿಯಾಗಿರುತ್ತೇನೆ. ಇದನ್ನು ನಾನೆಂದೂ ತೀರಿಸೋಕೆ ಆಗಲ್ಲ ಎಂದಿದ್ದಾರೆ. ಈ ವೇಳೆ, ನಾನು 3 ಜನರಿಗೆ ಥ್ಯಾಂಕ್ಸ್ ಹೇಳಬೇಕು. ಧನ್ವೀರ್ ಯಾವಾಗಲೂ ಪಾಪ ನನ್ನ ಜೊತೆಯಲಿಯೇ ಇರುತ್ತಿದ್ದರು. ನನ್ನ ದೊಡ್ಡ ಬೆಂಬಲವಾಗಿ ನಿಂತರು. ‘ಬುಲ್ ಬುಲ್’ ರಚಿತಾ ರಾಮ್‌ಗೂ ಥ್ಯಾಂಕ್ಯೂ. ನನ್ನ ಪ್ರಾಣ ಸ್ನೇಹಿತೆ ಆಗಿರುವ ರಕ್ಷಿತಾಗೂ ಥ್ಯಾಂಕ್ಸ್. ನನ್ನ ಎಲ್ಲಾ ಸೆಲೆಬ್ರಿಟಿಗಳು ಧನ್ಯವಾದಗಳು.

    ಇದೇ ವೇಳೆ, ಬೇರೆ ಭಾಷೆಯಲ್ಲಿ ಸಿನಿಮಾ ಮಾಡೋ ಬಗ್ಗೆ ದರ್ಶನ್ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಇಲ್ಲಿಯೇ ಇಷ್ಟೊಂದು ಪ್ರೀತಿ ಅಭಿಮಾನ ತೋರಿಸಿದ್ದೀರಾ. ಸುಮ್ಮನೆ ಎಲ್ಲಿಗೆ ಅಂತಾ ಹೋಗಲಿ. ಸಾಯೋವರೆಗೂ ಇಲ್ಲಿಯೇ ಇರುತ್ತೇನೆ. ಇಲ್ಲಿ ಬಿಟ್ಟು ನಾನು ಹೋಗೋಕೆ ಆಗೋದಿಲ್ಲ. ಕಾವೇರಿ ಹುಟ್ಟಿರೋದು ಎಲ್ಲಿ ಅಂತ ಎಲ್ಲರಿಗೂ ಚೆನ್ನಾಗಿ ಗೊತ್ತು. ನಾನು ಕೂಡ ಇಲ್ಲೇ ಹುಟ್ಟಿರೋದು. ಕಾವೇರಿ ಎಲ್ಲಾ ಕಡೆ ಹರಿದುಕೊಂಡು ಬರುತ್ತಾಳೆ. ಆದರೆ ನನ್ನದು ಮೇಕೇದಾಟು ಮಾತ್ರ ಸೀಮಿತ. ನನ್ನ ಸಿನಿಮಾಳು ಡಬ್ ಆಗಿ ಬೇರೆಕಡೆ ಹೋದರೆ ಅದು ಬೇರೆ ಥರ ಆಗುತ್ತದೆ. ಯಾವಾಗಲೂ ನಾನು ಕನ್ನಡ ಸಿನಿಮಾನೇ ಮಾಡೋದು ಎಂದಿದ್ದಾರೆ.

  • ಪವಿತ್ರಾಗೌಡ ಬರ್ತ್‌ಡೇಗೆ ವೀಡಿಯೋ ಹಂಚಿಕೊಂಡು ವಿಶ್ ಮಾಡಿದ ಮಗಳು ಖುಷಿ ಗೌಡ

    ಪವಿತ್ರಾಗೌಡ ಬರ್ತ್‌ಡೇಗೆ ವೀಡಿಯೋ ಹಂಚಿಕೊಂಡು ವಿಶ್ ಮಾಡಿದ ಮಗಳು ಖುಷಿ ಗೌಡ

    ಪವಿತ್ರಾಗೌಡ ಹುಟ್ಟುಹಬ್ಬಕ್ಕೆ ಮಗಳು ಖುಷಿ ಗೌಡ ವೀಡಿಯೋ ಹಂಚಿಕೊಳ್ಳುವ ಮೂಲಕ ತಾಯಿಗೆ ಬರ್ತ್‌ಡೇಗೆ ವಿಶ್ ತಿಳಿಸಿದ್ದಾರೆ.ಇದನ್ನೂ ಓದಿ: ನವಜಾತ ಶಿಶುಗಳ ಸರಣಿ ಸಾವು – ಎರಡು ವಾರದ ಅಂತರದಲ್ಲಿ ಮೂರು ಶಿಶುಗಳ ಮರಣ

    ಇನ್ಸ್‌ಸ್ಟಾಗ್ರಾಂನಲ್ಲಿ ಪವಿತ್ರಾಗೌಡ ಮಗಳು ಖುಷಿ ಗೌಡ ವೀಡಿಯೋ ಹಂಚಿಕೊಂಡಿದ್ದು, ಕಳೆದ ವರ್ಷ ನಿನಗೆ ಬಹಳ ಕಷ್ಟದಾಯಕವಾಗಿತ್ತು ಅನ್ನೋದು ನನಗೆ ಗೊತ್ತಿದೆ. ಆದರೆ 2025 ನಿಮ್ಮ ಜೀವನದ ಹೊಸ ಹೆಜ್ಜೆಯಾಗಿ, ನಿಮ್ಮನ್ನ ಸಂಪೂರ್ಣವಾಗಿ ಬದಲಾಯಿಸುತ್ತದೆ. ನಾನು ಪ್ರಾಮಿಸ್ ಮಾಡ್ತೀನಿ. ಒಂದಿನ ನೀವು ಹೆಮ್ಮೆ ಪಡುವಂತೆ ನಾನು ಮಾಡ್ತೀನಿ. ಇವಳು ನನ್ನ ಮಗಳು ಎಂದು ಹೆಮ್ಮೆಯಿಂದ ಹೇಳುವಂತೆ ಮಾಡ್ತೀನಿ. ನಿನ್ನನ್ನು ಹೆಮ್ಮೆ ಪಡಿಸುವುದೇ ನನ್ನ ಜೀವನದ ಏಕೈಕ ಕನಸು ಅಮ್ಮ ಎಂದು ವಿಶ್ ಮಾಡಿದ್ದಾರೆ.

    ಮಗಳು ಖುಷಿ ಗೌಡ ಹಂಚಿಕೊಂಡಿರುವ ವೀಡಿಯೋವನ್ನು ತಾಯಿ ಪವಿತ್ರಾ ಗೌಡ ಕೂಡ ಇನ್ಸ್‌ಸ್ಟಾಗ್ರಾಂನಲ್ಲಿ ರೀಪೋಸ್ಟ್ ಮಾಡಿದ್ದಾರೆ.ಇದನ್ನೂ ಓದಿ: ಹೆಚ್ಚುವರಿ ಪರಿಹಾರ ನೀಡದ್ದಕ್ಕೆ ಸಣ್ಣ ನೀರಾವರಿ ಇಲಾಖೆಯ 1.43 ಲಕ್ಷ ರೂ. ಮೌಲ್ಯದ ಪೀಠೋಪಕರಣ ಜಪ್ತಿ

    :