Tag: ಹುಜರಾತ್

  • ನವಜೋಡಿಗೆ ಪತ್ರದ ಮೂಲಕ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

    ನವಜೋಡಿಗೆ ಪತ್ರದ ಮೂಲಕ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

    ಬೆಂಗಳೂರು: ಪ್ರಧಾನಿ ನರೇಂದ್ರಮೋದಿ ಅವರು ನವಜೋಡಿಗೆ ಪತ್ರದ ಮೂಲಕ ಶುಭಾಶಯ ತಿಳಿಸಿದ್ದಾರೆ.

    ಬೆಂಗಳೂರಿನ ಅಕಾಶ್ ಎಂಬವರು ಇತ್ತೀಚೆಗೆ ಸ್ವಚ್ಛ ಭಾರತ ಲೋಗೋ ಇರುವ ತನ್ನ ಸಹೋದರಿ ಮದುವೆಯ ಆಮಂತ್ರಣ ಪತ್ರಿಕೆಯನ್ನು ಪ್ರಧಾನಿ ಮೋದಿಗೆ ಟ್ವಟ್ಟರ್‍ನಲ್ಲಿ ಟ್ಯಾಗ್ ಮಾಡಿದ್ದರು. ಈ ಟ್ವಿಟ್ಟರ್ ಅನ್ನು ಅಂದು ರೀ ಟ್ವೀಟ್ ಮಾಡಿದ್ದ ಮೋದಿ ಏಪ್ರಿಲ್ 26ರಂದು ಭಾರತ ಸರ್ಕಾರದ ಲೋಗೋ ಇರುವ ಪತ್ರವನ್ನು ಕಳುಹಿಸಿ ನವ ಜೋಡಿಗೆ ಶುಭಾಶಯ ತಿಳಿಸಿದ್ದಾರೆ.

    ಗುಜರಾತ್ ಮೂಲದವರಾಗಿರೋ ಆಕಾಶ್ ಮೈಸೂರಿಗೆ ಬಂದು ನೆಲೆಸಿದ್ದು, ಪ್ರಸ್ತುತ ಬೆಂಗಳೂರಿನ ಬಾಣಸವಾಡಿಯಲ್ಲಿರೋ ಇವರು ತನ್ನ ಸಹೋದರಿಯ ಮದುವೆಯ ಅಮಂತ್ರಣ ಪತ್ರಿಕೆಯನ್ನು ಏಪ್ರಿಲ್ 1 ರಂದು ಪ್ರಧಾನಿಗೆ ಟ್ವೀಟ್ ಮಾಡಿದ್ರು. ಈ ಹೊಸ ಪ್ರಯೋಗಕ್ಕೆ ಪ್ರಧಾನಿಯವರೇ ಮೆಚ್ಚಿ ರೀ ಟ್ವೀಟ್ ಮಾಡಿದ್ರು.

    ಆಮಂತ್ರಣ ಪತ್ರಿಕೆಯಲ್ಲಿ ಸ್ವಚ್ಛ ಭಾರತ ಲೋಗೋ ಪ್ರಕಟಿಸಿದ್ದು, ಈ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಆಕಾಶ್ ರನ್ನು ಸಂಪರ್ಕಿಸಿದಾಗ `ನನ್ನ ತಂದೆಯವರಿಗೆ ಮೋದಿ ಅವರ ಸ್ವಚ್ಛ ಭಾರತ ಅಭಿಯಾನ ಬಹಳ ಇಷ್ಟವಾಗಿದೆ. ಏಪ್ರಿಲ್ 28 ರಂದು ರಾಜಸ್ಥಾನದ ಜೋದ್‍ಪುರದಲ್ಲಿ ನನ್ನ ಸಹೋದರಿಯ ಮದುವೆ ಇದೆ. ಈ ಮದುವೆಯ ಆಹ್ವಾನ ಪತ್ರಿಕೆಯಲ್ಲಿ ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ಏನಾದರೂ ಒಂದು ಉತ್ತಮ ಸಂದೇಶವನ್ನು ತಿಳಿಸುವ ಉದ್ದೇಶದಿಂದ ತಂದೆಯವರು ಸ್ವಚ್ಛ ಭಾರತದ ಲೋಗೋವನ್ನು ಪ್ರಿಂಟ್ ಹಾಕಿಸಿದ್ದಾರೆ’ ಎಂದು ತಿಳಿಸಿದ್ದರು.

    ನರೇಂದ್ರ ಮೋದಿಯವರ ಈ ಹಿಂದೆ ಪ್ರತಿನಿಧಿಸುತ್ತಿದ್ದ ಮಣಿನಗರ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಕುಟುಂಬ ನೆಲೆಸಿದೆ. ಹಿಂದಿನಿಂದಲೂ ನಾವು ಮೋದಿ ಅವರ ಕೆಲಸ ಕಾರ್ಯಗಳನ್ನು ನೋಡಿದ್ದೇವೆ. ನಮ್ಮ ಕುಟುಂಬ ಸದಸ್ಯರಿಗೆ ಮೋದಿ ಅಂದ್ರೆ ಅಚ್ಚುಮೆಚ್ಚು. ಈ ಹಿಂದೆ ನನ್ನ ತಂದೆ ಬಿಸಿನೆಸ್ ಮಾಡಲು ಮೈಸೂರಿಗೆ ಬಂದಿದ್ದರು. 12 ವರ್ಷ ಮೈಸೂರಿನಲ್ಲಿ ಇದ್ದು ಬಳಿಕ ಗುಜರಾತ್‍ಗೆ ಮರಳಿದ್ವಿ. ಇದಾದ ಬಳಿಕ 2009ರಲ್ಲಿ ಮೈಸೂರಿಗೆ ಪುನಃ ಬಂದು ಈಗ ಇಲ್ಲೇ ನೆಲೆಸಿದ್ದೇವೆ. ನಾನು ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿ ಎಂಜಿನಿಯರ್ ಪದವಿ ಓದಿದ್ದೇನೆ ಎಂದರು.

    ಫಾಲೋ ಮಾಡಿದ್ರು: ಆಕಾಶ್ ಅವರ ಟ್ವೀಟನ್ನು ಮೋದಿ ರೀಟ್ವೀಟ್ ಮಾಡಿದ್ದು ಮಾತ್ರ ಅಲ್ಲದೇ ಈಗ ಅವರನ್ನು ಫಾಲೋ ಮಾಡಿದ್ದಾರೆ. ಮೋದಿಯವರು ಇದುವರೆಗೆ ಒಟ್ಟು 1,698 ಜನರನ್ನು ಫಾಲೋ ಮಾಡುತ್ತಿದ್ದಾರೆ. ಅದರಲ್ಲಿ ನಾನೂ ಒಬ್ಬನಾಗಿದ್ದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ ಎಂದು ಆಕಾಶ್ ಸಂತಸ ಹಂಚಿಕೊಂಡಿದ್ದರು.

    ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಆಕಾಶ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಉದ್ಯಮಿ, ಬ್ಲಾಗರ್, ಸೋಷಿಯಲ್ ಮೀಡಿಯಾ ಕನ್ಸಲ್ಟೆಂಟ್ ಎಂದು ತಮ್ಮ ವೃತ್ತಿ ವಿವರನ್ನು ಹಾಕಿದ್ದಾರೆ. ಅಷ್ಟೇ ಅಲ್ಲದೇ ಧೋನಿ ಅಭಿಮಾನಿ ಮತ್ತು ನರೇಂದ್ರ ಮೋದಿಯವರು ಫಾಲೋ ಮಾಡುತ್ತಿರುವ ವ್ಯಕ್ತಿ ಎಂದು ತಮ್ಮ ಪ್ರೊಫೈಲ್‍ನಲ್ಲಿ ಬರೆದುಕೊಂಡಿದ್ದರು.