Tag: ಹುಚ್ಚಾ ವೆಂಕಟ್

  • ಮಡಿಕೇರಿ ಸಿಪಾಯಿಯಾದ ಫೈರಿಂಗ್ ಸ್ಟಾರ್ ಹುಚ್ಚಾ ವೆಂಕಟ್

    ಮಡಿಕೇರಿ ಸಿಪಾಯಿಯಾದ ಫೈರಿಂಗ್ ಸ್ಟಾರ್ ಹುಚ್ಚಾ ವೆಂಕಟ್

    ಮಡಿಕೇರಿ: ನಟ ಹುಚ್ಚಾ ವೆಂಕಟ್ ಅಂದ್ರೇನೆ ಹಾಗೆ ಅವರೇ ಬೇರೆ, ಅವರ ಸ್ಟೈಲೇ ಬೇರೆ ಸದಾ ನೀಲಿ ಬಟ್ಟೆ ತೊಡುವುದರಿಂದ `ಬ್ಲೂ ಸ್ಟಾರ್’ ಅಂತ ಫೇಮಸ್ ಆಗಿರುವ ಹುಚ್ಚ ವೆಂಕಟ್ ಈಗ ಹೊಸ ಸಿನಿಮಾ ಮಾಡೋಕೆ ಸಿದ್ಧತೆ ನಡೆಸುತ್ತಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೀಘ್ರದಲ್ಲೇ ‘ಮಡಿಕೇರಿ ಸಿಪಾಯಿ ಹುಚ್ಚ ವೆಂಕಟ್’ ಟೈಟಲ್‍ನ ಸಿನಿಮಾ ಶೂಟಿಂಗ್ ಚಿತ್ರೀಕರಣ ಆರಂಭವಾಗಲಿದೆ. ಬಾಲ್ಯದಿಂದಲೂ ಕೊಡಗಿನ ಬಗ್ಗೆ ನನಗೆ ಅಪಾರ ಪ್ರೀತಿ ಇದೆ. ಇಲ್ಲಿನ ಜನರ ಮೇಲೆ ವಿಶೇಷ ಗೌರವನ್ನು ಹೊಂದಿದ್ದೇನೆ. ಹೀಗಾಗಿ ಈ ಸಿನಿಮಾ ಮಾಡುತ್ತಿದ್ದೇವೆ ಅಂತ ತಿಳಿಸಿದ್ದಾರೆ.

    ಚಿತ್ರದಲ್ಲಿ ನಾನು ನಾಯಕನಾಗಿದ್ದು, ಇಬ್ಬರು ನಟಿಯರಿರುತ್ತಾರೆ. ಇದು ಪಕ್ಕಾ ಲವ್ ಸ್ಟೋರಿ ಚಿತ್ರವಾಗಿದೆ. ಭಾರತ ಮತ್ತು ಪಾಕಿಸ್ತಾನ, ಹಿಂದು ಮತ್ತು ಮುಸಲ್ಮಾನರ ನಡುವಿನ ಸಂಬಂಧವನ್ನಾಧರಿಸಿದ ಸ್ಟೋರಿ ಇದಾಗಿದೆ. ಕೊಡಗು ಹಾಗೂ ಪಾಕಿಸ್ತಾನ ಗಡಿಯಲ್ಲಿ ಚಿತ್ರೀಕರಣ ನಡೆಯಲಿದೆ ಅಂದ್ರು.

    ಹುಚ್ಚ ವೆಂಕಟ್ ಮಡಿಕೇರಿ ಸಿಪಾಯಿ ಸಿನಿಮಾವನ್ನು ಅತೀ ಶೀಘ್ರದಲ್ಲೇ ರಿಲೀಸ್ ಮಾಡ್ತೀವಿ ಅಂತ ಅವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೋಕಸಭೆ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸ್ತಾರಂತೆ ಹುಚ್ಚ ವೆಂಕಟ್

    ಲೋಕಸಭೆ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸ್ತಾರಂತೆ ಹುಚ್ಚ ವೆಂಕಟ್

    ಬೆಂಗಳೂರು: 2019ರ ಲೋಕಸಭಾ ಚುನಾವಣೆಗೆ ನನ್ನ ತವರೂರು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಮಂಡ್ಯದ ಜನರು ನನ್ನ ಕೈ ಹಿಡಿಯುತ್ತಾರೆ. ಒಂದು ವೇಳೆ ಕೈ ಬಿಟ್ಟರೂ ಅದಕ್ಕೆ ಬಲವಾದ ಕಾರಣ ಇರುತ್ತದೆ ಎಂದು ನಟ ಹುಚ್ಚ ವೆಂಕಟ್ ಹೇಳಿದ್ದಾರೆ.

    ನೆಲಮಂಗಲದ ಮಾರುತಿನಗರದಲ್ಲಿ ಗಣೇಶ ಚತುರ್ಥಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಮಂಡ್ಯ ಜೆಡಿಎಸ್ ಭದ್ರಕೋಟೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ನನಗೆ ಮಾತ್ರ ಮಂಡ್ಯ ಭದ್ರ ಕೋಟೆ ಎಂದ ಅವರು, ರಾಜ್ಯ ಸಮ್ಮಿಶ್ರ ಸರ್ಕಾರ ಶೀಘ್ರವೇ ಪತನವಾಗುತ್ತದೆ. ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದು ರಾಜ್ಯ ಸರ್ಕಾರಕ್ಕೆ ತೊಂದರೆ ಎಂದು ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಅವರು ಮತ್ತೇ ಪ್ರಧಾನಿ ಆಗುತ್ತಾರೆ ಎಂದ ಹುಚ್ಚ ವೆಂಕಟ್, ತಕ್ಷಣವೇ ಮಾತು ಬದಲಿಸಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಅವಕಾಶ ಕೊಟ್ಟರೆ ತಪ್ಪೇನು ಇಲ್ಲ ಎಂದರು.

    ವೇದಿಕೆ ಮೇಲೆ ಡೈಲಾಗ್ ಹೇಳುತ್ತಿದ್ದಾಗ ಮದ್ಯ ಸೇವಿಸಿದ್ದ ವ್ಯಕ್ತಿಯೊಬ್ಬರಿಗೆ ಕ್ಲಾಸ್ ತೆಗೆದುಕೊಂಡ ಹುಚ್ಚ ವೆಂಕಟ್, ನಾನು ನಿನಗಿಂತ ಜಾಸ್ತಿನೇ ಕುಡಿಯುತ್ತೇನೆ ಕಣೋ. ಕುಡಿದಿರುವೆ ಅಂತಾ ಜಾಸ್ತಿ ಮಾತನಾಡಬಾರದು, ಸುಮ್ಮನೆ ನಿಂತಕೋ ಎಂದು ಖಡಕ್ ವಾರ್ನಿಂಗ್ ಕೊಟ್ಟರು.

    ಬಳಿಕ ಕಾರ್ಯಕ್ರಮ ಆಯೋಜಕರು ಹುಚ್ಚ ವೆಂಕಟ್‍ಗೆ ಸನ್ಮಾನ ಮಾಡಿ, ಪ್ರಶಸ್ತಿ ನೀಡಿದ್ದಾರೆ. ಅಲ್ಲಿಂದ ಹೊರ ಬಂದ ಹುಚ್ಚವೆಂಕಟ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯುವಕರ ದಂಡೇ ಮುಗಿಬಿದ್ದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮುಂದುವರಿದ ಹುಚ್ಚಾ ವೆಂಕಟ್ ಹುಚ್ಚಾಟ: ನಡುರಸ್ತೆಯಲ್ಲೇ ಜನರ ಮೇಲೆ ಏಕಾಏಕಿ ಹಲ್ಲೆ-ವಿಡಿಯೋ ನೋಡಿ!

    ಮುಂದುವರಿದ ಹುಚ್ಚಾ ವೆಂಕಟ್ ಹುಚ್ಚಾಟ: ನಡುರಸ್ತೆಯಲ್ಲೇ ಜನರ ಮೇಲೆ ಏಕಾಏಕಿ ಹಲ್ಲೆ-ವಿಡಿಯೋ ನೋಡಿ!

    ಬೆಂಗಳೂರು: ನಗರದ ಉಲ್ಲಾಳದ ಅಂಗಡಿ ಬಳಿ ನಿಂತಿದ್ದ ಜನರ ಮೇಲೆ ಗುರುವಾರ ಬೆಳಗ್ಗೆ ಏಕಾಏಕಿ ಹುಚ್ಚಾ ವೆಂಕಟ್ ಹಲ್ಲೆ ನಡೆಸಿದ್ದಾನೆ.

    ಬುಧವಾರ ರಸ್ತೆಯಲ್ಲಿ ಕುಡಿದು ತೂರಾಡುವ ಮೂಲಕ ಸುದ್ದಿಯಾಗಿದ್ದ ಹುಚ್ಚಾ ವೆಂಕಟ್ ಇಂದು ಅಂಗಡಿ ಬಳಿ ನಿಂತಿದ್ದವರ ಮೇಲೆ ಹಲ್ಲೆ ನಡೆಸಿ ಮತ್ತೊಮ್ಮೆ ತನ್ನ ಹುಚ್ಚಾಟ ಮುಂದುವರಿಸಿದ್ದಾನೆ.

    ಇಂದು ಬೆಳಗ್ಗೆ 8.30ರ ಸುಮಾರಿಗೆ ಉಲ್ಲಾಳದ ಬೇಕರಿ ಬಳಿ ಬಂದು, ಟೀ ಕೊಡುವ ಯುವಕನ ಮುಖಕ್ಕೆ ಬಿಸಿ ಟೀ ಎರಚಿದ್ದು ಅಲ್ಲದೇ ಆತನನ್ನು ಹಿಂಬಾಲಿಸಿಕೊಂಡು ಹೋಗಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ತಡೆಯಲು ಬಂದ ಇಬ್ಬರು ಯುವಕರ ಮೇಲೆಯೂ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ಯುವಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಡು ರಸ್ತೆಯಲ್ಲಿ ಕುಡಿದು, ತೂರಾಡಿದ ಹುಚ್ಚಾ ವೆಂಕಟ್!

    ಕೂಡಲೇ ಸ್ಥಳಕ್ಕೆ ಆಗಮಿಸಿದ ಬ್ಯಾಡರಹಳ್ಳಿ ಪೊಲೀಸರು ಹುಚ್ಚಾ ವೆಂಕಟನನ್ನು ವಶಕ್ಕೆ ಪಡೆದುಕೊಂಡು, ಬಳಿಕ ಜ್ಞಾನ ಭಾರತಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು, ವಿಚಾರಣೆ ನಡೆಸಿದ ಬಳಿಕ ಹುಚ್ಚಾ ವೆಂಕಟ್‍ಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಈ ಹಿಂದೆಯೂ ಸಹ ಸಾರ್ವಜನಿಕರ ಮೇಲೆ ಸುಖಾ ಸುಮ್ಮನೆ ಹಲ್ಲೆ ನಡೆಸಿದ್ದರ ಸಂಬಂಧ ಯಶವಂತಪುರದ ಪೊಲೀಸರು ಸಹ ಎಚ್ಚರಿಕೆಯನ್ನು ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=8Ngjmqu7Zw0

  • ನಡು ರಸ್ತೆಯಲ್ಲಿ ಕುಡಿದು, ತೂರಾಡಿದ ಹುಚ್ಚಾ ವೆಂಕಟ್!

    ನಡು ರಸ್ತೆಯಲ್ಲಿ ಕುಡಿದು, ತೂರಾಡಿದ ಹುಚ್ಚಾ ವೆಂಕಟ್!

    ಬೆಂಗಳೂರು: ನಗರದ ಜ್ಞಾನಭಾರತಿ ಕ್ಯಾಂಪಸ್‍ನ ಉಲ್ಲಾಳ ಮುಖ್ಯ ರಸ್ತೆಯಲ್ಲಿ ಹುಚ್ಚಾ ವೆಂಕಟ್ ಕುಡಿದು ತೂರಾಟ ನಡೆಸಿ ಹುಚ್ಚಾಟ ಮೆರೆದಿದ್ದಾರೆ.

    ಉಲ್ಲಾಳ ರಸ್ತೆಯ ಬಾರ್ ವೊಂದರಲ್ಲಿ ಕುಡಿದು ಹೊರ ಬರುತ್ತಿದ್ದ ಹುಚ್ಚಾ ವೆಂಕಟ್ ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದಿದ್ದಾರೆ. ಈ ವೇಳೆ ಯುವಕರ ಜೊತೆ ಸೆಲ್ಫಿ ತೆಗೆಸಿಕೊಂಡ ಬಳಿಕ, ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ತನ್ನ ಹುಚ್ಚಾಟವನ್ನು ಮುಂದುವರಿಸಿದ್ದಾರೆ. ಹುಚ್ಚಾ ವೆಂಕಟ್‍ನ ಹುಚ್ಚಾಟ ನೋಡಲು ಸ್ಥಳೀಯರು ಮುಗಿಬಿದ್ದಿದ್ದರು.

    ಕುಡಿದ ಮತ್ತಿನಲ್ಲಿ ಕೈಯಲ್ಲಿ ಕೂಲ್ ಡ್ರಿಂಕ್ಸ್ ಬಾಟಲ್ ಹಿಡಿದುಕೊಂಡು ತೂರಾಟ ನಡೆಸಿದ್ದು, ಅಲ್ಲದೇ ಮೈಮೇಲಿನ ಬಟ್ಟೆಗಳನ್ನು ಸ್ವತಃ ತಾನೇ ಕೊಳೆ ಮಾಡಿಕೊಂಡು ಕುಡುಕರಂತೆ ವರ್ತಿಸಿದ್ದಾರೆ. ವೆಂಕಟ್ ಹುಚ್ಚಾಟ ಕಂಡ ಸ್ಥಳೀಯರು ಕೊನೆಗೆ ಆಟೋ ಹತ್ತಿಸಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

    ಹುಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಡಿಯೋ: ಬಿಜೆಪಿ ವಿರುದ್ಧ ಹುಚ್ಚಾ ವೆಂಕಟ್ ಕಿಡಿ

    ವಿಡಿಯೋ: ಬಿಜೆಪಿ ವಿರುದ್ಧ ಹುಚ್ಚಾ ವೆಂಕಟ್ ಕಿಡಿ

    ಬೆಂಗಳೂರು: ಮಂಗಳೂರು ಚಲೋ ರ‍್ಯಾಲಿ ನಡೆಸುತ್ತಿರುವ ಬಿಜೆಪಿ ವಿರುದ್ಧ ಹುಚ್ಚಾ ವೆಂಕಟ್ ಕಿಡಿ ಕಾರಿದ್ದಾರೆ.

    ಮಂಗಳೂರಿಗೆ  ಹೋದ್ರೆ ರಾಜ್ಯದಲ್ಲಿರೋ ಸಮಸ್ಯೆ ಸರಿಹೋಗುತ್ತಾ? ವಿಧಾನಸೌಧಕ್ಕೆ ಹೋಗಿ, ಸಿಎಂ ಹತ್ತಿರ ಹೋಗಿ, ಇಲ್ಲ ಮೋದಿ ಹತ್ತಿರ ಹೋಗಿ. ಅದು ಬಿಟ್ಟು ಮಂಗಳೂರಿಗೆ ಹೋಗಿ ಏನ್ ಸಾಧನೆ ಮಾಡೋಕೆ ಹೊರಟಿದ್ರಾ ಅಂತ ಹುಚ್ಚ ವೆಂಕಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಾಳೆ ಹುಬ್ಬಳಿ ರ‍್ಯಾಲಿ, ತುಮಕೂರು, ಮಂಡ್ಯ ರ‍್ಯಾಲಿ ಮಾಡಿ. ಏನ್ರಿ ಇದೆಲ್ಲಾ? ನಿಮಗೆ ರಾಜಕೀಯ ಗೊತ್ತಾ? ಅಂತ ಕಿಡಿ ಕಾರಿದ್ದಾರೆ. ಈ ಆಕ್ರೋಶದ ವಿಡಿಯೋವನ್ನು ಯೂಟ್ಯೂಬ್‍ನಲ್ಲಿ ಹರಿಯಬಿಟ್ಟಿದ್ದಾರೆ.

    ರಮಾನಾಥ್ ರೈ ರಾಜೀನಾಮೆ, ಪಿಎಫ್‍ಐ ಮತ್ತು ಎಸ್‍ಡಿಪಿಐ ನಿಷೇಧಕ್ಕೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಆಯೋಜಿಸಿರುವ ಮಂಗಳೂರು ರ‍್ಯಾಲಿಗೆ ಇವತ್ತು ಕೊನೆಯ ದಿನ. ನಿರ್ಬಂಧದ ನಡುವೆಯೂ `ಮಂಗಳೂರು ಚಲೋ’ ರ‍್ಯಾಲಿಗೆ ಬಿಜೆಪಿ ಕಸರತ್ತು ನಡೆಸಿದೆ. ಜ್ಯೋತಿ ವೃತ್ತದಿಂದ ಹಿಡಿದು ಸ್ಟೇಟ್ ಬ್ಯಾಂಕ್ ವೃತದವರೆಗೂ ಬಿಜೆಪಿ ಕಾರ್ಯಕರ್ತರು ಜಮಾವಣೆಯಾಗಿದ್ದಾರೆ. ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಕೊಲೆ ಮಾಡಿದವರ ಬಂಧನಕ್ಕೆ ಆಗ್ರಹಿಸಿದ್ದಾರೆ.

    ರ‍್ಯಾಲಿ ಗೆ ಪರ್ಮೀಷನ್ ನೀಡದ ಪೊಲೀಸರ ಜೊತೆ ಸಂಸದ ನಳೀನ್ ಕುಮಾರ್ ಕಟೀಲ್ ವಾಗ್ವಾದಕ್ಕಿಳಿದ ಘಟನೆಯೂ ನಡೆದಿದೆ. ಮುಂಜಾಗ್ರತಾ ಕ್ರಮವಾಗಿ ಜ್ಯೋತಿ ವೃತ್ತದಲ್ಲಿ ಸಾವಿರಾರು ಪೊಲೀಸರು ಜಮಾಯಿಸಿದ್ದಾರೆ.