Tag: ಹುಚ್ಚ

  • ಕಿಚ್ಚನಿಗೆ ಇಂದು ವಿಶೇಷ ದಿನ : ಫ್ಯಾನ್ಸ್ ಸಂಭ್ರಮ

    ಕಿಚ್ಚನಿಗೆ ಇಂದು ವಿಶೇಷ ದಿನ : ಫ್ಯಾನ್ಸ್ ಸಂಭ್ರಮ

    ಕಿಚ್ಚನಿಗೆ (Kiccha) ಎಂದು ಮರೆಯಲಾಗದ ದಿನವಿಂದು. ಅಲ್ಲದೇ, ಸುದೀಪ್ (Sudeep) ಅವರ ವೃತ್ತಿ ಬದುಕಿಗೆ ಇವತ್ತಿನ ದಿನ ತುಂಬಾ ಸ್ಪೆಷಲ್. ಅದಕ್ಕೊಂದು ಕಾರಣವಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರರಂಗ ಪ್ರವೇಶಿಸಿ 26 ವರ್ಷ ಕಳೆದಿದೆ. ಈ ಪಯಣದಲ್ಲಿ ಏಳು ಬೀಳು ಕಂಡಿರುವ ಕೋಟಿಗೊಬ್ಬನಿಗೆ ಈ ದಿನ ಬಹಳ ವಿಶೇಷ. ಸುದೀಪ್ ಸಿನಿಕರಿಯರ್ ಗೆ ದೊಡ್ಡ ಯಶಸ್ಸು ನೀಡಿದ ‘ಹುಚ್ಚ’ (Huchcha) ಬಿಡುಗಡೆಯಾಗಿ ಸರಿಯಾಗಿ 22 ವರ್ಷ ಕಳೆದಿದೆ.

    2001ರ ಜು.6ರಂದು ರಾಜ್ಯಾದ್ಯಂತ ಹುಚ್ಚ ರಿಲೀಸ್ ಆಗಿತ್ತು. ಡಿಫರೆಂಟ್ ಆದ ಶೀರ್ಷಿಕೆ, ಪೋಸ್ಟರ್ ಗಳಲ್ಲಿ ಕಾಣಿಸಿಕೊಂಡ ಸುದೀಪ್ ಡಿಫರೆಂಟ್ ಗೆಟಪ್ ನೋಡಿ ಸಹಜವಾಗಿಯೇ ಚಿತ್ರದ ಬಗ್ಗೆ ಜನರಲ್ಲಿ ನಿರೀಕ್ಷೆ ಮೂಡಿತ್ತು. ಆ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದ್ದು ರಾಜೇಶ್ ರಾಮನಾಥ್ ಅವರ ಸುಮಧುರ ಹಾಡುಗಳು. ಜು.6ರಂದು ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರ ನಿರೀಕ್ಷೆ ಹುಸಿ ಆಗಲಿಲ್ಲ. ಇದನ್ನೂ ಓದಿ:‘ಸಲಾರ್’ ಚಿತ್ರಕ್ಕೂ ‘ಕೆಜಿಎಫ್ 2’ಗೂ ಇದೆ ನಂಟು: ತಲೆಕೆಡಿಸಿಕೊಂಡ ಫ್ಯಾನ್ಸ್

    ಅದಾಗಿ 11 ವರ್ಷ ಕಳೆಯುವುದರಲ್ಲಿ ಅಂದರೆ 2012ರಲ್ಲಿ ಸುದೀಪ್ ನಿರ್ದೇಶಕ ರಾಜಮೌಳಿ ಜೊತೆ ಸಿನಿಮಾ ಮಾಡುವ ಮಟ್ಟಕ್ಕೆ ಬೆಳೆದರು. ಕನ್ನಡದಲ್ಲಿ ಸ್ಟಾರ್ ನಟನಾಗಿದ್ದ ಅವರ ಜೊತೆ ಜಕ್ಕಣ್ಣ ಕೈ ಜೋಡಿಸಿ ‘ಈಗ’  (Eega)  ಸಿನಿಮಾ ಮಾಡಿದರು. ತೆಲುಗು ಮತ್ತು ತಮಿಳಿನಲ್ಲಿ ಆ ಚಿತ್ರ ಬಿಡುಗಡೆಯಾಗಿ ಜಯಭೇರಿ ಬಾರಿಸಿತು. ‘ಈಗ’ ರಿಲೀಸ್ ಆಗಿದ್ದು ಕೂಡ ಜುಲೈ 6ರಂದು. ಅಂದರೆ ಇವತ್ತಿಗೆ 11 ವರ್ಷ. ಹೀಗಾಗಿ ಕಿಚ್ಚ ಸುದೀಪ್ ಪಾಲಿಗೆ ಜುಲೈ 6 ತುಂಬಾ ಸ್ಪೆಷಲ್.

    ಧೂಳ್ ಎಬ್ಬಿಸಿದ ಕಿಚ್ಚ 46 ಟೀಸರ್

    ಕಿಚ್ಚ ಸುದೀಪ್ ಸದ್ಯ 46ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜುಲೈ 2ರಂದು ಯೂಟ್ಯೂಬ್ ಲೋಕಕ್ಕೆ ಎಂಟ್ರಿ ಕೊಟ್ಟ ಡಿಮೋನ್ ಟೀಸರ್ ಭಾರೀ ಸದ್ದು ಮಾಡ್ತಿದೆ. ರಕ್ತಸಿಕ್ತ ದೇಹದ ಹೆಬ್ಬುಲಿ ಘರ್ಜನೆ ಜೋರಾಗಿದೆ. ಇದೇ ಜುಲೈ 15ರಿಂದ ಸುದೀಪ್ ಹೊಸ ಚಿತ್ರದ ಶೂಟಿಂಗ್ ಅಖಾಡಕ್ಕೆ ಧುಮುಕಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮರೆಯಲಾಗದ ಎರಡು ಸಿನಿಮಾಗಳು ಒಂದೇ ದಿನ: ಸುದೀಪ್

    ಮರೆಯಲಾಗದ ಎರಡು ಸಿನಿಮಾಗಳು ಒಂದೇ ದಿನ: ಸುದೀಪ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪಾಲಿಗೆ ಇಂದು ಮಹತ್ವದ ದಿನ. 25 ವರ್ಷಗಳ ಸಿನಿ ಜರ್ನಿಯಲ್ಲಿ ಸುದೀಪ್‍ರವರು ಸಕ್ಸಸ್ ಕಾಣಲು ಜುಲೈ 6 ಪ್ರಮುಖ ಪಾತ್ರವಹಿಸಿದೆ.

    ಹೌದು, ಜುಲೈ 6 ಕಿಚ್ಚ ಸುದೀಪ್ ಅಭಿನಯಿಸಿದ ಹುಚ್ಚ ಹಾಗೂ ಈಗ ಎರಡು ಸಿನಿಮಾಗಳು ಬಿಡುಗಡೆಯಾದ ದಿನ. ಸಿನಿರಂಗದಲ್ಲಿ ಸುದೀಪ್‍ರವರಿಗೆ ಸ್ಟಾರ್ ಪಟ್ಟ ತಂದು ಕೊಟ್ಟ ಸಿನಿಮಾ ಹುಚ್ಚ ಆದರೆ, ಇಡೀ ಭಾರತೀಯ ಸಿನಿಮಾ ರಂಗವೇ ಕಿಚ್ಚನ ಕಡೆ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಈಗ. ಸದ್ಯ ಈ ಕುರಿತಂತೆ ಸುದೀಪ್‍ರವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

    ತಾಯವ್ವ ಸಿನಿಮಾದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ಸುದೀಪ್, ನಂತರ ರಮೇಶ್ ಅರವಿಂದ್ ಅಭಿನಯದ ಪ್ರತ್ಯಾರ್ಥ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ನಿರ್ದೇಶಕ ಕುಮಾರ್ ದೇಸಾಯಿ ನಿರ್ದೇಶಿಸಿದ ಸ್ಪರ್ಶ ಸಿನಿಮಾದ ಮೂಲಕ ನಾಯಕರಾಗಿ ಹೊರಹೊಮ್ಮಿದರು. ಆದರೆ ಈ ಸಿನಿಮಾ ಸುದೀಪ್‍ರವರಿಗೆ ಅಷ್ಟಾಗಿ, ಖ್ಯಾತಿ ಹಾಗೂ ಯಶಸ್ಸು ತಂದು ಕೊಡಲಿಲ್ಲ.

    ಆದರೆ ನಿರ್ದೇಶಕ ಓಂ ಪ್ರಕಾಶ್ ರಾವ್ ಹಾಗೂ ಸುದೀಪ್‍ರವರ ಕಾಂಬೀನೇಷನ್‍ನಲ್ಲಿ 2001ರ ಜುಲೈ 6 ರಂದು ಬಿಡುಗಡೆಯಾದ ಹುಚ್ಚ ಸಿನಿಮಾ ಚಂದನವನದಲ್ಲಿ ಬಿಗ್ ಸಕ್ಸಸ್ ಕಂಡಿತು. ಈ ಸಿನಿಮಾ ಸುದೀಪ್‍ರವರ ವೃತ್ತಿ ಜೀವನಕ್ಕೆ ಹೊಸ ತಿರುವು ನೀಡುವುದರ ಜೊತೆಗೆ ಕಿಚ್ಚ ಎಂಬ ಸ್ಟಾರ್ ಪಟ್ಟ ತಂದು ಕೊಟ್ಟಿತು. ಸದ್ಯ ಹುಚ್ಚ ಸಿನಿಮಾ ಬಿಡುಗಡೆಯಾಗಿ ಇಂದಿಗೆ 20 ವರ್ಷ ತುಂಬಿದೆ.

    ಮತ್ತೊಂದು ವಿಶೇಷವೆಂದರೆ ಕಿಚ್ಚ ಸುದೀಪ್ ಅಭಿನಯಿಸಿದ ಟಾಲಿವುಡ್ ಸಿನಿಮಾ ಈಗ ಕೂಡ 2012 ಜುಲೈ 6 ರಂದು ಬಿಡುಗಡೆಗೊಂಡಿತು. ಮೊದಲ ಬಾರಿಗೆ ತೆಲುಗಿನಲ್ಲಿ ಬಣ್ಣ ಹಚ್ಚಿದ್ದ ಸುದೀಪ್‍ರವರಿಗೆ ಈ ಸಿನಿಮಾ ಟಾಲಿವುಡ್ ಬಾಕ್ಸ್ ಆಫಿಸ್ ಕೊಳ್ಳೆ ಹೊಡೆಯುವುದರ ಜೊತೆಗೆ, ಬಿಗ್ ಸಕ್ಸಸ್ ಕಂಡಿತು. ನಂತರ ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗಿನಲ್ಲಿಯೂ ಸುದೀಪ್ ಸ್ಟಾರ್ ನಟರಾಗಿ ಗುರುತಿಸಿಕೊಂಡರು.

    ಸದ್ಯ ಈ ವಿಶೇಷ ದಿನದ ಪ್ರಯುಕ್ತ ಸುದೀಪ್‍ರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಮರೆಯಲಾಗದ ಎರಡು ಸಿನಿಮಾಗಳು ಒಂದೇ ದಿನ, 11 ವರ್ಷಗಳ ಅಂತರದಲ್ಲಿ. ರೆಹಮಾನ್ ಮತ್ತು ಓಂ ಪ್ರಕಾಶ್, ಸಾಯಿ ಗುರು ಹಾಗೂ ರಾಜಮೌಳಿಯವರಿಗೆ ಬಹಳ ಧನ್ಯವಾದ, ಲವ್ ಯೂ ಆಲ್ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

  • ಜುಲೈ 6, ನನ್ನ ಜೀವನದಲ್ಲಿ ಯಾವಾಗಲೂ ತುಂಬಾ ವಿಶೇಷವಾದ ದಿನ: ಸುದೀಪ್

    ಜುಲೈ 6, ನನ್ನ ಜೀವನದಲ್ಲಿ ಯಾವಾಗಲೂ ತುಂಬಾ ವಿಶೇಷವಾದ ದಿನ: ಸುದೀಪ್

    ಬೆಂಗಳೂರು: ನಟ-ನಟಿ ಯಾರೆ ಆಗಲಿ ಪ್ರತಿಯೊಬ್ಬರ ಜೀವನದಲ್ಲಿ ಮರೆಯಲಾಗದ ಒಂದು ದಿನ ಇರುತ್ತದೆ. ಅಂದಿನ ದಿನಗಳಲ್ಲಿ ನಡೆದ ವಿಚಾರಗಳು ಅಥವಾ ಘಟನೆಗಳನ್ನು ನೆನಪಿನಲ್ಲಿಟ್ಟುಕೊಂಡಿರುತ್ತಾರೆ. ಅದೇ ರೀತಿ ಈಗ ನಟ ಕಿಚ್ಚ ಸುದೀಪ್ ತನ್ನ ಜೀವನದಲ್ಲಿ ಜುಲೈ 6 ಎಂದಿಗೂ ಮರೆಯಲಾಗದ ದಿನವಾಗಿದೆ ಎಂದು ಹೇಳುತ್ತಿದ್ದಾರೆ.

    ಸುದೀಪ್ ಜೂಲೈ 6 ತಮ್ಮ ಸಿನಿಮಾರಂಗದಲ್ಲಿ ಮರೆಯಲಾಗದ ದಿನ ಎಂದು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. ಜುಲೈ 6 ರಂದು ಸುದೀಪ್ ಅವರಿಗೆ ಎರಡು ರೀತಿಯ ತಿರುವನ್ನು ಸಿನಿಮಾರಂಗ ನೀಡಿದೆ. ಆದ್ದರಿಂದ ಅವರು ಈ ದಿನವನ್ನು ಅವರು ಈಗ ಸ್ಮರಿಸಿದ್ದಾರೆ.

    ಜುಲೈ 6 2001 ರಲ್ಲಿ ಸುದೀಪ್ ನಟನಾಗಿ ಅಭಿನಯ ಮಾಡಿದ `ಹುಚ್ಚ’ ಸಿನಿಮಾ ಬಿಡುಗಡೆಯಾಗಿತ್ತು. ಆ ಸಿನಿಮಾದ ಮೂಲಕವೇ ಅವರು ಸ್ಯಾಂಡಲ್‍ ವುಡ್ ನಲ್ಲಿ ಭರವಸೆಯ ನಟನಾಗಿ ಪರಿಚಯಗೊಂಡಿದ್ದರು. ಅದೇ ರೀತಿ ಸುದೀಪ್ ಟಾಲಿವುಡ್ ನಲ್ಲಿ ಪ್ರಖ್ಯಾತಿ ಪಡೆದ `ಈಗ’ ಚಿತ್ರ ಕೂಡ 2012 ಜುಲೈ 6 ರಂದೇ ಬಿಡುಗಡೆಗೊಂಡಿತ್ತು. `ಈಗ’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಸ್ಟಾರ್ ಟಾಲಿವುಡ್ ನಲ್ಲಿಯೂ ಮಿಂಚಿದ್ದರು.

    ತಮ್ಮ ಸಿನಿಮಾರಂಗದ ಬದುಕಿನಲ್ಲಿ ತಿರುವು ಕೊಟ್ಟ ಜುಲೈ 6ನೇ ದಿನವನ್ನು ಇಂದಿಗೂ ಸ್ಮರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. `ಹುಚ್ಚ’ ಮತ್ತು `ಈಗ’ ಎರಡು ಸಿನಿಮಾದ ತಂಡದವರಿಗೆ ಧನ್ಯವಾದಗಳು. ಈ ದಿನ ನನಗೆ ಬಹಳ ವಿಶೇಷವಾಗಿದ್ದು, ಒಬ್ಬ ನಟನಾಗಿ ನನ್ನನ್ನು ಪರಿಚಯಿಸಿದ ದಿನವಾಗಿದೆ. ಜೊತೆಗೆ ಅಭಿಮಾನಿಗಳು ತಮ್ಮ ಮನದಲ್ಲಿ ಇರಿಸಿಕೊಂಡಿದ್ದಾರೆ. ಆದ್ದರಿಂದ ಜುಲೈ 6 ನನ್ನ ಜೀವನದಲ್ಲಿ ಒಂದು ವಿಶೇಷ ದಿನವಾಗಿದೆ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

  • ಈ ಸಮಸ್ಯೆಯಿಂದ 10 ವರ್ಷಗಳಿಂದ ಮಾನಸಿಕ ಅಸ್ವಸ್ಥನಾಗಿ ಓಡಾಡ್ತಿದ್ದಾನೆ ಕಲಾವಿದ..!

    ಈ ಸಮಸ್ಯೆಯಿಂದ 10 ವರ್ಷಗಳಿಂದ ಮಾನಸಿಕ ಅಸ್ವಸ್ಥನಾಗಿ ಓಡಾಡ್ತಿದ್ದಾನೆ ಕಲಾವಿದ..!

    ಗದಗ: 10 ವರ್ಷಗಳ ಹಿಂದೆ ಜಿಲ್ಲೆಯ ಯುವಕ ಅದ್ಭುತ ಕಲಾವಿದ ಹಾಗೂ ಫೇಮಸ್ ಪೇಂಟರ್ ಆಗಿದ್ದ. ಅವರ ಕೈ ಕುಂಚದ ಬರಹಗಳ ನೆನಪುಗಳನ್ನ ಇಂದಿಗೂ ಮರೆಯುವಂತಿಲ್ಲ. ಆದ್ರೆ ಬಡತನ ಕುಟುಂಬದ ಏಳು ಬೀಳಿನ ತೊಳಲಾಟ ದಿಂದ ಬರಹದ ಕೈ ಕುಂಚ ಅವನ ಹಣೆಯ ಬರಹವನ್ನೆ ವಿಧಿ ಅಳುಕಿಸಿ ಅರೆ ಹುಚ್ಚನಂತೆ ಮಾಡಿದೆ. ಆ ಫೇಮಸ್ ಪೇಂಟರ್ ಕೈಗೆ ಮತ್ತೆ ಕುಂಚಕೊಡಲು ಸ್ಥಳೀಯರು ಒಟ್ಟಾಗಿ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ಮೊರೆಹೊಗಿದ್ದಾರೆ.

    ಹೌದು. 33 ವರ್ಷದ ಈ ವ್ಯಕ್ತಿಯ ಹೆಸರು ಅರುಣ್ ಸೋಮಪ್ಪ ಟಪಾಲಿ. ಇವರು ಗದಗ ಜಿಲ್ಲೆಯ ರೋಣ ಪಟ್ಟಣದ ನಿವಾಸಿ. ಸುಮಾರು 10 ವರ್ಷಗಳ ಹಿಂದೆ ರೋಣ ಸುತ್ತಮುತ್ತಲಿನ ಭಾಗದಲ್ಲಿ ಈ ಅರುಣ್ ಟಪಾಲಿ ಫೇಮಸ್ ಪೇಂಟರ್ ಎಂದೆ ಪ್ರಖ್ಯಾತಿಯಾಗಿದ್ದರು. ಈ ಪೇಂಟರ್ ಅರುಣ್ ಕಡೆಯಿಂದ ಶಾಲೆ, ಕಚೇರಿಗಳು, ಅಂಗಡಿಗಳು ಸೇರಿದಂತೆ ಅನೇಕ ಬೋರ್ಡ್ ಗಳು, ಮನೆಗಳಿಗೆ ಬಣ್ಣ ಹಚ್ಚುವ ಮೂಲಕ ಝಗಮಗಿಸುತ್ತಿದ್ದವು.

    ಶಾಲೆಗಳಲ್ಲಿ ನಕಾಶೆ ಬಿಡಿಸುವುದು, ವಾಹನಗಳ ನಂಬರ್ ಪ್ಲೇಟ್ ಬರೆಸಲು, ಬಣ್ಣ ಬಣ್ಣದ ಚಿತ್ತಾರ ಬಿಡಿಸುವ ಕಲಾ ಚತುರನಾಗಿದ್ದರು. 10 ವರ್ಷಗಳ ಹಿಂದೆ ಇವರ ಕೈ ಕುಂಚದಿಂದ ಬಿಡಿಸಿದ ಚಿತ್ರಗಳು, ಬೋರ್ಡ್ ಗಳ ಛಾಯೆ ಇನ್ನೂ ಮಾಸಿಲ್ಲ. ಅಷ್ಟೊಂದು ಫೇಮಸ್ ಪೇಂಟರ್ ಆಗಿದ್ದರು. ಇವರು ಈ ಹಂತಕ್ಕೆ ತರಲು ಕಾರಣ ಕುಟುಂಬದ ಬಡತನದ ಅಸಹಾಯಕತೆ ಜೊತೆಗೆ ಪ್ರೀತಿ ಮಾಯೇ ಇವರನ್ನು ಅರೆ ಹುಚ್ಚನಂತೆ ಆಗಿರುವುದನ್ನ ಕಂಡು ಸ್ಥಳಿಯರು ಮಮ್ಮಲ ಮರಗುವಂತಾಗಿದೆ.

    ಪೇಂಟರ್ ಅರುಣ್ ಸುಮಾರು 10 ವರ್ಷಗಳಿಂದ ಮಾನಸಿಕ ಅಸ್ವಸ್ಥರಾಗಿ ತಿರುಗಾಡುತ್ತಿದ್ದಾರೆ. ಇದಕ್ಕೆ ಕಾರಣ ಇವರು ಬಾಲ್ಯದಲ್ಲಿರುವಾಗಲೇ ತಾಯಿ ತೀರಿಕೊಂಡರು. ನಂತರ ಹಿರಿಯ ಸಹೋದರ, ನಂತರ ಸ್ವಲ್ಪ ವರ್ಷಗಳಲ್ಲಿ ಹಿರಿಯ ಸಹೋದರಿ ಮೃತರಾದರು. ಇದೇ ಸಂರ್ಭದಲ್ಲಿ ಪ್ರೀತಿಸಿದ ಹುಡುಗಿಯೂ ಇವರಿಂದ ದೂರವಾದ್ರು. ಹೀಗಾಗಿ ಇವರು ಮಾನಸಿಕ ಸಮತೋಲನ ಕಳೆದುಕೊಂಡು ಅರೆ ಹುಚ್ಚನಾಗಿ ಇಂದಿಗೂ ಬೀದಿ ಬೀದಿ ಅಲೆಯುತ್ತಿದ್ದಾರೆ.

    ಸುಮಾರು 80 ವರ್ಷದ ತಂದೆ ಸೋಮಪ್ಪ ಹರಕು ಮುರುಕಲಿನ ಜೋಪಿಡಿಯಲ್ಲಿ ಬಿದ್ದು ನರಳಾಡುತ್ತಿದ್ದಾರೆ. ಈ ಮುಪ್ಪಿನ ವಯಸ್ಸಿನಲ್ಲೂ ತಂದೆಯನ್ನು ನೋಡಿಕೊಳ್ಳಲಾಗದಷ್ಟು ಮಾನಸಿಕ ಅಸ್ವಸ್ಥನಾಗಿ ತಿರುಗುತ್ತಿದ್ದಾರೆ. ಇವರಿಗೆ ನನ್ನವರು ತನ್ನವರು ಎಂಬ ಯಾರ ಅರಿವಿಲ್ಲದೆ ಹಸಿದಾಗ ಭಿಕ್ಷೆ ಬೇಡಿ ತಿಂದು, ಬಸ್ ನಿಲ್ದಾಣ, ಯಾವುದಾದರೂ ಅಂಗಡಿ ಮುಂಭಾಗ, ಶಾಲಾ ಮೈದಾನ ಹೀಗೆ ಎಲ್ಲಂದರಲ್ಲಿ ಮಲಗುತ್ತಾ ದಿನಕಳೆಯುತ್ತಿದ್ದಾರೆ. ಇವರಿಗೆ ಒಬ್ಬಳು ಸಹೋದರಿ ಇದ್ದು, ಅವರು ಮದುವೆಯಾಗಿ ಗಂಡನ ಮನೆಯಲ್ಲಿದ್ದಾರೆ. ಇವರ ನೇರವಿಗೆ ಸದ್ಯ ಯಾರು ಇಲ್ಲದಂತಾಗಿದೆ. ಇನ್ನು ಇವರ ಸ್ಥಿತಿನೋಡಿ ಸ್ಥಳಿಯರೆಲ್ಲಾ ಸೇರಿ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ನೆರವು ಬಯಸಿದ್ದಾರೆ.

    ಬೆಳಕು ಕಾರ್ಯಕ್ರಮ ಮೂಲಕ ಮಾನಸಿಕ ತಜ್ಞರಿಂದ ಚಿಕಿತ್ಸೆ ಕೊಡಿಸಿದ್ರೆ, ಖಂಡಿತ ಮೊದಲಿನಂತೆಯೇ ಅರುಣ್ ಫೇಮಸ್ ಪೇಂಟರ್ ಆಗುತ್ತಾನೆ ಅಂತಿದ್ದಾರೆ. ಈ ಕಲಾವಿದನ ಬಾಳಲ್ಲಿ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ಬೆಳಕಾಗಿ ಕಲಾ ಸೌಂದರ್ಯ ಮತ್ತೆ ಅರಳುವಂತೆ ಮಾಡಬೇಕು ಎಂಬುದು ಸ್ಥಳಿಯ ಭಿನ್ನವಾಗಿದೆ. ಅರುಣ್ ಟಪಾಲಿ ಅವರ ಮಾನಸಿಕ ಸುಧಾರಣೆ ಆಗುವವರೆಗೆ ಚಿಕಿತ್ಸೆ ಹಾಗೂ ಇರುವಿಕೆ ನೋಡಿಕೊಳ್ಳಲು ಗಜೇಂದ್ರಗಢ ಪಟ್ಟಣದ `ಬಾಪೂಜಿ ವಿದ್ಯಾಸಂಸ್ಥೆ ಮಂಧಮತಿ ಮಕ್ಕಳ ವಸತಿಯೂತ ವಿಶೇಷ ಶಾಲೆ’ ಯ ಕಾರ್ಯದರ್ಶಿ ರಾಜು ಸೂರ್ಯವಂಶಿ ಎಂಬವರು ಮುಂದಾಗಿರುವುದು ಹೆಮ್ಮೆಯ ಸಂಗತಿ.

    https://www.youtube.com/watch?v=gF9wvwOOZts