Tag: ಹುಕ್ಕೇರಿ

  • ಸತೀಶ್‌ ಜಾರಕಿಹೊಳಿಗೆ ಮುಖಭಂಗ – 15ಕ್ಕೆ 15 ಕ್ಷೇತ್ರ ಗೆದ್ದ ಕತ್ತಿ ಬಣ

    ಸತೀಶ್‌ ಜಾರಕಿಹೊಳಿಗೆ ಮುಖಭಂಗ – 15ಕ್ಕೆ 15 ಕ್ಷೇತ್ರ ಗೆದ್ದ ಕತ್ತಿ ಬಣ

    ಬೆಳಗಾವಿ: ಹುಕ್ಕೇರಿ (Hukeeri)  ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ರಮೇಶ್ ಕತ್ತಿ (Ramesh Katti) ಬಣ ಇತಿಹಾಸ ನಿರ್ಮಿಸಿದೆ. ಒಟ್ಟು 15 ಜನ ನಿರ್ದೇಶಕರ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ 15ಕ್ಕೆ 15 ಕ್ಷೇತ್ರಗಳನ್ನ  ರಮೇಶ್ ಕತ್ತಿ ಬಣ ಗೆದ್ದು ಬೀಗಿದೆ.

    ಕಳೆದ ಒಂದು ತಿಂಗಳಿನಿಂದ ಹುಕ್ಕೇರಿಯಲ್ಲೇಬಿಟ್ಟಿದ್ದ ಸತೀಶ್ ಜಾರಕಿಹೊಳಿ (Satish Jarkiholi) ಕುಟುಂಬಕ್ಕೆ ಭಾರಿ ಮುಖಭಂಗವಾಗಿದೆ. ಹುಕ್ಕೇರಿ ಪಟ್ಟಣದ ಬಾಪೂಜಿ ಕಾಲೇಜು ಬಳಿ ಕತ್ತಿ ಬೆಂಬಲಿಗರು ಸತೀಶ್ ಜಾರಕಿಹೊಳಿ ಬೆಂಬಗಲಿಗರು ಪ್ರಯಾಣಿಸುತ್ತಿದ್ದ ಕಾರಿಗೆ ಕಲ್ಲು ಹೊಡೆದಿದ್ದಾರೆ ಎಂದ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ:  ಮತ್ತೆ ಹೊಸ ನಾಟಕ- ಕಪ್‌ ನೀಡಲು ಹೊಸ ಷರತ್ತು ಮುಂದಿಟ್ಟ ನಖ್ವಿ

     

    ಮಲಪ್ರಭಾ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ನೇತೃತ್ವದ ಪುನಶ್ಚೇತನ ಪ್ಯಾನೆಲ್ ಭರ್ಜರಿ ಗೆಲುವು ಸಾಧಿಸಿದೆ. ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಶಾಸಕ ಬಾಬಾ ಸಾಹೇಬ್ ಪಾಟೀಲ್, ವಿಠ್ಠಲ ಹಲಗೇಕರ್ ನೇತೃತ್ವದ ಪ್ಯಾನೆಲ್‌ನಿಂದ ಸ್ಫರ್ಧಿಸಿದ್ದ 12ಕ್ಕೂ ಹೆಚ್ಚು ಸದಸ್ಯರು ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ಮದ್ದೂರು ಕಲ್ಲು ತೂರಾಟಕ್ಕೆ ಟ್ವಿಸ್ಟ್ ಟಾರ್ಗೆಟ್ ಮಾಡಿದ್ದೇ ಒಂದು, ಕಲ್ಲು ತೂರಿದ್ದೇ ಮತ್ತೊಂದು ಗಣೇಶನ ಮೇಲೆ

    ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾರ್ಖಾನೆಯ ಎದುರು ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.

  • ಶ್ರೀರಾಮ ಸೇನೆ ಕಾರ್ಯಕರ್ತರ‌ ಮೇಲೆ ಹಲ್ಲೆ ಕೇಸ್‌ – ಹುಕ್ಕೇರಿ ಪಿಎಸ್‌ಐ ಅಮಾನತು

    ಶ್ರೀರಾಮ ಸೇನೆ ಕಾರ್ಯಕರ್ತರ‌ ಮೇಲೆ ಹಲ್ಲೆ ಕೇಸ್‌ – ಹುಕ್ಕೇರಿ ಪಿಎಸ್‌ಐ ಅಮಾನತು

    ಚಿಕ್ಕೋಡಿ: ಇಂಗಳಿ ಗ್ರಾಮದಲ್ಲಿ ಶ್ರೀರಾಮ ಸೇನೆ (Sri Ram Sena) ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಕ್ಕೇರಿ ಪೊಲೀಸ್ ಠಾಣೆ (Hukkeri Police Station) ಪಿಎಸ್‌ಐ ನಿಖಿಲ್ ಕಾಂಬ್ಳೆ ಅವರನ್ನು ಅಮಾನತು ಮಾಡಲಾಗಿದೆ.

    ಶ್ರೀರಾಮ ಸೇನೆ ಕಾರ್ಯಕರ್ತರು ಜೂನ್‌ 26 ರಂದು ಗೋವು ಸಮೇತ ಠಾಣೆಗೆ ಹೋಗಿದ್ದರೂ ಎಫ್‌ಐಆರ್ ಮಾಡದೇ ನಿರ್ಲಕ್ಷ್ಯ ತೋರಿದ್ದಕ್ಕೆ ಎಸ್‌ಪಿ ಭೀಮಾಶಂಕರ್ ಗುಳೇದ್ ಅಮಾನತು ಆದೇಶ ಹೊರಡಿಸಿದ್ದಾರೆ.  ಇದನ್ನೂ ಓದಿ: ವಾಲ್ಮೀಕಿ ಹಗರಣ| ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆ ಎಸ್‌ಐಟಿ ರದ್ದು, ಸಿಬಿಐ ತನಿಖೆಗೆ ಆದೇಶ


    ಘಟನೆಯ ಬಗ್ಗೆ ಮೇಲಾಧಿಕಾರಿಗಳ‌ ಗಮನಕ್ಕೆ ತರದೇ ಬೇಜವಾಬ್ದಾರಿ ತೋರಿದ್ದು ಹಾಗೂ ಗಡಿಪಾರಾದ ರೌಡಿ ಶೀಟರ್ ಶ್ರೀರಾಮ ಸೇನೆ ಕಾರ್ಯಕರ್ತ ಮಹಾವೀರ್ ಸೊಲ್ಲಾಪುರೆಯನ್ನ ಕೂಡ ಬಿಟ್ಟು ಕಳುಹಿಸಿದ ಅಂಶಗಳನ್ನು ಪರಿಗಣಿಸಿ ಅಮಾನತು ಮಾಡಲಾಗಿದೆ.  ಇದನ್ನೂ ಓದಿ: 30 ವರ್ಷದಿಂದ ತಲೆಮರೆಸಿಕೊಂಡಿದ್ದ ಬೆಂಗಳೂರು ಸ್ಫೋಟದ ಉಗ್ರ ಬಂಧನ

    ಜುಲೈ 3 ರಂದು ಇಂಗಳಿ ಚಲೋ ಕರೆ ಕೊಟ್ಟಿರುವ ಶ್ರೀರಾಮ ಸೇನೆ ಸಂಘಟನೆ ಪ್ರತಿಭಟನೆಗೂ ಮುನ್ನವೇ ಪಿಎಸ್‌ಐ ಅವರನ್ನು ಅಮಾನತು ಮಾಡಿ ಬೆಳಗಾವಿ ಎಸ್ ಪಿ ಆದೇಶ ಹೊರಡಿಸಿದ್ದಾರೆ.

  • ಹುಕ್ಕೇರಿಯಲ್ಲಿ ಗೋರಕ್ಷಕರ ಮೇಲೆ ಹಲ್ಲೆ ಪ್ರಕರಣ – ಶ್ರೀರಾಮಸೇನೆ ಕಾರ್ಯಕರ್ತರ ವಿರುದ್ಧ FIR

    ಹುಕ್ಕೇರಿಯಲ್ಲಿ ಗೋರಕ್ಷಕರ ಮೇಲೆ ಹಲ್ಲೆ ಪ್ರಕರಣ – ಶ್ರೀರಾಮಸೇನೆ ಕಾರ್ಯಕರ್ತರ ವಿರುದ್ಧ FIR

    ಬೆಳಗಾವಿ: ಜಿಲ್ಲೆಯ ಹುಕ್ಕೇರಿ (Hukkeri) ತಾಲೂಕಿನ ಇಂಗಳಿ ಗ್ರಾಮದಲ್ಲಿ ಶ್ರೀ ರಾಮಸೇನೆ ಕಾರ್ಯಕರ್ತರನ್ನ ಗಿಡಕ್ಕೆ ಕಟ್ಟಿ ಥಳಿಸಿದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಹಲ್ಲೆಗೊಳಗಾದ ಗೋ ರಕ್ಷಕರು ಹಾಗೂ ಹಲ್ಲೆ ಮಾಡಿದವರ ಇಬ್ಬರ ಮೇಲೂ ಪ್ರಕರಣ ದಾಖಲಿಸಿಕೊಂಡು ಪೊಲೀಸರು (Belagavi Police) ತನಿಖೆ ಆರಂಭಿಸಿದ್ದಾರೆ.

    ಇಂಗಳಿ ಗ್ರಾಮದಲ್ಲಿ ಅಕ್ರಮ ಗೋ ಸಾಗಾಟ ತಡೆಯಲು ಹೋದ ಶ್ರೀರಾಮಸೇನೆ ಕಾರ್ಯಕರ್ತರ (Sri Rama Sena Workers) ಮೇಲಿನ ಹಲ್ಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಡೆತ ತಿಂದ ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ಎಫ್‌ಐಅರ್ ದಾಖಲಾಗಿದೆ. ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ಶಿವಪುತ್ರ ಸನದಿ ಎಂಬುವರು ದೂರು ದಾಖಲಿಸಿದ್ದಾರೆ. ಎಫ್‌ಐಆರ್‌ನಲ್ಲಿ ಮಹಿಳೆಯರ ಮೇಲೆ ಹಲ್ಲೆ ಮಾಡಿದ ಆರೋಪ ದಾಖಲಾಗಿದೆ. ಇದನ್ನೂ ಓದಿ: ಗೋ ರಕ್ಷಣೆ ಮಾಡಲು ಮುಂದಾಗಿದ್ದಕ್ಕೆ ಮರಕ್ಕೆ ಕಟ್ಟಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ

    Sri Rama Sena activists tied to a tree and attacked for trying to protect cows hukkeri

    ಇನ್ನು ಮರಕ್ಕೆ ಕಟ್ಟಿ ಹಾಕಿ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮೊಟೊ ಪ್ರಕರಣವನ್ನ ಯಮಕನಮರಡಿ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಶಿವಪುತ್ರ ಸನದಿ, ಬಾಬುಸಾಬ್ ಮುಲ್ತಾನಿ ಮತ್ತು ಇಂಗಳಿ ಗ್ರಾಮದ ಕೆಲವರ ಮೇಲೆ ದೂರು ದಾಖಲಾಗಿದೆ. ಎರಡೂ ಕಡೆ ದೂರುಗಳನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.

    ಕಾರ್ಯಕರ್ತರ ಮೇಲೆ ಹಲ್ಲೆ ಖಂಡಿಸಿದ ಶ್ರೀರಾಮಸೇನೆ ಪ್ರತಿಭಟನೆಗೆ ಕರೆ ನೀಡಿದೆ. ಶ್ರೀರಾಮಸೇನೆ ಮುಖಂಡ ಪ್ರಮೋದ ಮುತಾಲಿಕ್ ನೇತೃತ್ವದಲ್ಲಿ ಜುಲೈ 3ರಂದು ಇಂಗಳಿ ಚಲೋ ಪ್ರತಿಭಟನೆಗೆ ಕರೆ ನೀಡಲಾಗಿದೆ. ಇದನ್ನೂ ಓದಿ: ಶ್ರೀರಾಮಸೇನೆ ಕಾರ್ಯಕರ್ತರು ನೈತಿಕ ಪೊಲೀಸ್‌ಗಿರಿ ಮಾಡಲು ಹೋಗಿದ್ದು ತಪ್ಪು – ಪರಮೇಶ್ವರ್

    ನಾಲ್ವರ ಬಂಧನ
    ಗೋರಕ್ಷಕರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧ ಬೆಳಗಾವಿ (Belagavi) ಎಸ್‌ಪಿ ಭೀಮಾಶಂಕರ್ ಗುಳೇದ್ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಶ್ರೀರಾಮಸೇನೆ ಕಾರ್ಯಕರ್ತರೇ ಮೊದಲು ಮನೆಗೆ ನುಗ್ಗಿದ್ದು ಬಳಿಕ ಅವರ ಮೇಲಿನ ಹಲ್ಲೆ ನಡೆದಿದ್ದು ದುರಾದೃಷ್ಟಕರ. ಹಲ್ಲೆ ಕುರಿತು ನಾವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದೇವೆ. ಜೂನ್ 28ರಂದು ಗೋ ಶಾಲೆಯಲ್ಲಿ ದನದ ಮಾಲೀಕ ಗೋವು ಬಿಡಿಸಿಕೊಳ್ಳಲು ಹೋಗ್ತಾನೆ. ಆತನನ್ನ ಹಿಂಬಾಲಿಸಿದ ಶ್ರೀರಾಮ ಸೇನೆ ಕಾರ್ಯಕರ್ತರು ವಾಹನದ ಮಾಲೀಕ ಬಾಬು ಸಾಬ್ ಮನೆಗೆ ನುಗ್ಗುತ್ತಾರೆ. ಮನೆಯಲ್ಲಿ ಹೆಣ್ಣು ಮಕ್ಕಳಿರ್ತಾರೆ. ಈ ವೇಳೆ ಮಹಿಳೆಯರು ಕಿರುಚಿಕೊಂಡಾಗ ಪಕ್ಕದ ಜನರು ಬರ್ತಾರೆ. ಬಂದು ಎಲ್ಲರನ್ನೂ ಮರಕ್ಕೆ ಕಟ್ಟಿ ಥಳಿಸಿದ್ದಾರೆ. ಘಟನೆ ಸಂಬಂಧ ಪೊಲೀಸರ ಬಳಿ ಆ ದಿನವೇ ಇಬ್ಬರು ಯಾವುದೇ ತಂಟೆ ತಕರಾರು ಇಲ್ಲ ಅಂತಾ ಬರೆದುಕೊಟ್ಟಿದ್ದಾರೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಹಾಸನ ಯುವಜನತೆಯಲ್ಲಿ ಹೃದಯಾಘಾತ – ತನಿಖೆಗೆ ವಿಶೇಷ ಸಮಿತಿ ರಚಿಸಿದ ಸರ್ಕಾರ

    ಇನ್ನೂ ಈ ಘೋರ ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಿ ನಾಲ್ವರನ್ನು ಬಂಧಿಸಿದ್ದೇವೆ. ನಾಲ್ವರಲ್ಲಿ ಓರ್ವ ಹಿಂದೂ, ಮೂವರು ಮುಸ್ಲಿಮರ ಬಂಧನವಾಗಿದೆ. ಮುಸ್ಲಿಮರು ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಲ್ಲ. ಎಲ್ಲರೂ ಸೇರಿಕೊಂಡು ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಶ್ರೀರಾಮ ಸೇನೆ ಕಾರ್ಯಕರ್ತ ಮಹಾವೀರ್ ಸೊಲ್ಲಾಪುರೆ ಸೇರಿ ಇನ್ನುಳಿದವರ ಮೇಲೆ ಎಫ್‌ಐಆರ್ ದಾಖಲಾಗಿದೆ. ಶಿವಪುತ್ರ ಸನದಿ ಡ್ರೈವರ್‌ನಿಂದ ದೂರು ದಾಖಲಾಗಿದೆ. ಮಹಾವೀರ್‌ಗೆ ಕಲಬುರಗಿಗೆ ಗಡಿ ಪಾರು ಮಾಡಲಾಗಿತ್ತು. ಗಡಿ ಪಾರಾದ ರೌಡಿ ಶೀಟರ್ ಮಹಾವೀರ್ ಇಲ್ಲಿಗ್ಯಾಕೆ ಬಂದಿದ್ದ. ಒಬ್ಬ ರೌಡಿ ಶೀಟರ್‌ಗೆ ಸಂಘಟನೆಯವರು ಯಾಕೆ ಸಪೋರ್ಟ್ ಮಾಡ್ತಿದ್ದಾರೆ. ಇಂತವರ ಪರ ಪ್ರತಿಭಟನೆ ಮಾಡಲು ನಾವು ಅವಕಾಶ ಕೊಡಲ್ಲ ಎಂದು ಎಸ್‌ಪಿ ಶ್ರೀ ರಾಮಸೇನೆ ಕಾರ್ಯಕರ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಗೋ ರಕ್ಷಣೆ ಮಾಡಲು ಮುಂದಾಗಿದ್ದಕ್ಕೆ ಮರಕ್ಕೆ ಕಟ್ಟಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ

    ಗೋ ರಕ್ಷಣೆ ಮಾಡಲು ಮುಂದಾಗಿದ್ದಕ್ಕೆ ಮರಕ್ಕೆ ಕಟ್ಟಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ

    ಬೆಳಗಾವಿ: ಗೋ ರಕ್ಷಣೆ ಮಾಡಲು ಮುಂದಾದ ಹಿಂದೂ ಕಾರ್ಯಕರ್ತರ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ ಘಟನೆ ಹುಕ್ಕೇರಿ (Hukkeri) ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ.

    ಗೋ ಶಾಲೆಯಿಂದ ಗೋವುಗಳನ್ನು ತೆಗೆದುಕೊಂಡು ಹೋಗಿದ್ದನ್ನು ನೋಡಿ 5 ಮಂದಿ ಶ್ರೀರಾಮ ಸೇನೆಯ (Sri Rama Sene) ಕಾರ್ಯಕರ್ತರು ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆ ಮಾಡಿದ್ದಕ್ಕೆ ದಲ್ಲಾಳಿಗಳು ಮರಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.  ಇದನ್ನೂ ಓದಿ: ಗಾಳಿಯಲ್ಲಿ ಗುಂಡು ಹಾರಿಸಿ ಹುಟ್ಟುಹಬ್ಬ ಆಚರಣೆ – ಪಂಚಾಯತ್‌ ಸದಸ್ಯ ಅರೆಸ್ಟ್‌

     

    ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ ಥಳಿಸುತ್ತಿರುವ ವಿಡಿಯೋ ಹರಿದಾಡುತ್ತಿದೆ.

    ಈ ಬಗ್ಗೆ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ವಿಠ್ಠಲ್ ಗಡ್ಡಿ ಪ್ರತಿಕ್ರಿಯಿಸಿ, ಕರ್ನಾಟಕದಲ್ಲಿರುವುದು ಸಿದ್ದರಾಮಯ್ಯ ಸರ್ಕಾರ ಅಲ್ಲ. ಇದು ಖಾನ್ ಸರ್ಕಾರ. ಪೊಲೀಸರಿಗೆ ದೂರು ಕೊಡಲು ಹೋದರೆ ರೇಪ್ ಮಾಡಿದ್ದೀರಿ ಎಂದು ಧಮಕಿ ಹಾಕಿದ್ದಾರೆ. ಕಾನೂನು ರೀತಿಯಲ್ಲಿ ಥಳಿಸಿದವರಿಗೆ ಶಿಕ್ಷೆಯಾಗಬೇಕು. ಸರಿಯಾಗಿ ಕಾನೂನು ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

  • ಸಾರ್ವಜನಿಕ ಸ್ಥಳದಲ್ಲಿ ತಲ್ವಾರ್ ಪ್ರದರ್ಶನ – ಇಬ್ಬರು ಪೊಲೀಸ್ ವಶಕ್ಕೆ

    ಸಾರ್ವಜನಿಕ ಸ್ಥಳದಲ್ಲಿ ತಲ್ವಾರ್ ಪ್ರದರ್ಶನ – ಇಬ್ಬರು ಪೊಲೀಸ್ ವಶಕ್ಕೆ

    ಚಿಕ್ಕೋಡಿ: ಸಾರ್ವಜನಿಕ ಸ್ಥಳದಲ್ಲಿ ತಲ್ವಾರ್ ಪ್ರದರ್ಶನ ಮಾಡಿದ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ (Hukkeri) ತಾಲೂಕಿನ ಶಹಾಬಂದರ ಗ್ರಾಮದ ಬಳಿ ನಡೆದಿದೆ.

    ಬೆಳಗಾವಿ ತಾಲೂಕಿನ ಬಮ್ಮನಟ್ಟಿ ಗ್ರಾಮದ ನಿವಾಸಿ ಹಾಲಪ್ಪ ದ್ಯಾಮಪ್ಪ ಕಾಟಾಬಳಿ(25), ಹುಕ್ಕೇರಿ ತಾಲೂಕಿನ ಚಿಕಲದಿನ್ನಿ ಗ್ರಾಮದ ನಿವಾಸಿ ನಾಗರಾಜ ದ್ಯಾಮಪ್ಪ ಕಟಾಬಳಿ(21) ಬಂಧಿತರು. ಇದನ್ನೂ ಓದಿ: ಪಾಕ್‌ಗೆ ಸೇನಾ ಮಾಹಿತಿ ರವಾನೆ – ಇಬ್ಬರು ಅರೆಸ್ಟ್‌

    ಇತ್ತೀಚೆಗೆ ಹಾಲಪ್ಪ ಹಾಗೂ ದ್ಯಾಮಪ್ಪ ಶಹಬಂದರ ಕ್ರಾಸ್‌ನ ವಾಲ್ಮೀಕಿ ಸರ್ಕಲ್ ಬಳಿ ಕೈಯಲ್ಲಿ ತಲ್ವಾರ್ ಹಿಡಿದು ಓಡಾಡಿದ್ದರು. ಅಲ್ಲದೇ ಜನರನ್ನ ನಿಂದಿಸಿ, ಭಯದ ವಾತಾವರಣ ನಿರ್ಮಾಣ ಮಾಡಿದ್ದರು. ಇದನ್ನೂ ಓದಿ: ಪಹಲ್ಗಾಮ್ ದಾಳಿ, ಸುಹಾಸ್ ಶೆಟ್ಟಿ ಕೊಲೆ ಖಂಡಿಸಿ ಚಿಕ್ಕಮಗಳೂರು ಬಂದ್‌ಗೆ ಕರೆ

    ವಿಷಯ ತಿಳಿದ ಯಮಕನಮರಡಿ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ (Hamakanamardi Police Station) ಪ್ರಕರಣ ದಾಖಲಾಗಿದೆ.

  • ಅನೈತಿಕ ಸಂಬಂಧ ಮುಚ್ಚಿ ಹಾಕಲು ಪುತ್ರ, ಮೈದುನ ಪತ್ನಿಯ ಕೊಲೆ – ತಾಯಿ, ಪ್ರಿಯಕರನಿಗೆ ಜೀವಾವಧಿ ಶಿಕ್ಷೆ

    ಅನೈತಿಕ ಸಂಬಂಧ ಮುಚ್ಚಿ ಹಾಕಲು ಪುತ್ರ, ಮೈದುನ ಪತ್ನಿಯ ಕೊಲೆ – ತಾಯಿ, ಪ್ರಿಯಕರನಿಗೆ ಜೀವಾವಧಿ ಶಿಕ್ಷೆ

    ಬೆಳಗಾವಿ: ಅನೈತಿಕ ಸಂಬಂಧ (Illicit Relationship) ಮುಚ್ಚಿ ಹಾಕಲು ಪುತ್ರ ಹಾಗೂ ಮೈದುನನ ಹೆಂಡತಿಯನ್ನು ಕೊಲೆಗೈದ ತಾಯಿ (Mother) ಹಾಗೂ ಪ್ರಿಯಕರನಿಗೆ (Lover) ಕೋರ್ಟ್‌ ಜೀವಾವಧಿ ಶಿಕ್ಷೆ (Life Imprisonment) ವಿಧಿಸಿದೆ.

    ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಚಿಕ್ಕೋಡಿಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಪ್ರಕಟಿಸಿದೆ. ಗ್ರಾಮದ ಸುಧಾ ಸುರೇಶ ಕರಿಗಾರ (32), ಪ್ರಿಯಕರ ರಾಮಪ್ಪ ಅಲಿಯಾಸ್‌ ರಮೇಶ ಕೆಂಚಪ್ಪ ಬಸ್ತವಾಡೆ (25) ಶಿಕ್ಷೆಗೆ ಗುರಿಯಾದವರು.

    ಅಕ್ರಮ ಸಂಬಂಧಕ್ಕಾಗಿ ಬಾವಿಗೆ ದೂಕಿ ಸ್ವಂತ ಮಗನನ್ನು (Son) ಕೊಂದಿದ್ದಲ್ಲದೇ ಮಹಿಳೆಯೊಬ್ಬಳನ್ನು ಮಲಗಿದ್ದಾಗಲೇ ಬೆಂಕಿ ಹಚ್ಚಿ ಸುಟ್ಟಿರುವ ಆರೋಪದ ಮೇಲೆ ಸುಧಾ ಸುರೇಶ ಕರಿಗಾರ ಮತ್ತು ಆಕೆಯ ಪ್ರಿಯಕರ ರಮೇಶ ಕೆಂಚಪ್ಪ ಬಸ್ತವಾಡೆ ಅವರನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ನನ್ನ ಕಪಾಳಕ್ಕೆ 10-15 ಬಾರಿ ಹೊಡೆದಿದ್ದಾರೆ – ನಾನು ಅಮಾಯಕಿ ಎಂದ ರನ್ಯಾ

    ಸಹಜ ಸಾವು ಎನ್ನುವಂತೆ ಬಿಂಬಿಸಲಾಗಿದ್ದ ಈ ಎರಡೂ ಕೊಲೆ ಪ್ರಕರಣ ಭೇದಿಸುವಲ್ಲಿ ಹುಕ್ಕೇರಿ ಪೊಲೀಸರು (Hukkeri Police) ಯಶಸ್ವಿಯಾಗಿದ್ದರು. ಆರೋಪಿ ಸುಧಾ ತನ್ನ ಗಂಡನ ಅಣ್ಣನ ಪತ್ನಿ ಭಾಗ್ಯಶ್ರೀ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದಾಗ ಆರೋಪಿಗಳ ಪೂರ್ವನಿಯೋಜಿತ ಕೃತ್ಯ ಬೆಳಕಿಗೆ ಬಂದಿತ್ತು.

    ಪ್ರಸ್ತುತ ಕಿತ್ತೂರು ಸಿಪಿಐ ಶಿವಾನಂದ ಗುಡಗನಟ್ಟಿ ಅವರು ಹುಕ್ಕೇರಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಸಹಜ ಸಾವು ಎಂದು ಬಿಂಬಿತವಾಗಿದ್ದ ಈ ಪ್ರಕರಣದ ತನಿಖೆ ಕೈಗೊಂಡಿದ್ದರು. ಅಂದಿನ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಇದನ್ನೂ ಓದಿ: ಗದಗ| ಹೋಳಿ ಆಚರಿಸಿ ಕೆರೆಯಲ್ಲಿ ಈಜಲು ಹೋದ ಬಾಲಕ ಸಾವು

    2019 ಡಿ.9ರಂದು ನಡೆದ ಭಾಗ್ಯಶ್ರೀ ಕೊಲೆ ಪ್ರಕರಣದಲ್ಲಿ ಈ ಇಬ್ಬರನ್ನೂ ದೋಷಿ ಎಂದು ಪರಿಗಣಿಸಿದ ನ್ಯಾಯಾಲಯವು, ಜೀವಾವಧಿ ಶಿಕ್ಷೆ ಹಾಗೂ 2.10 ಲಕ್ಷ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ನ್ಯಾಯಾಧೀಶ ತಾರಕೇಶ್ವರಗೌಡ ಪಾಟೀಲ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದು, ಸರ್ಕಾರಿ ಅಭಿಯೋಜಕರಾಗಿ ವೈ.ಜಿ.ತುಂಗಳ ವಾದ ಮಂಡಿಸಿದ್ದರು.

    ಸ್ವಂತ ಮಗನನ್ನೇ ಬಾವಿಗೆ ದೂಡಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 2023ರ ಆಗಸ್ಟ್ 11 ರಂದು ಸುಧಾಗೆ ಜೀವಾವಧಿ ಶಿಕ್ಷೆಯಾಗಿತ್ತು.

     

  • ಕಾಶಿ ಮಾದರಿಯಲ್ಲಿ ಹೀರಣ್ಯಕೇಶಿ ನದಿಗೆ ಗಂಗಾರತಿ: ಕಣ್ಣು ತುಂಬಿಕೊಂಡ ಸಾವಿರಾರು ಭಕ್ತರು

    ಕಾಶಿ ಮಾದರಿಯಲ್ಲಿ ಹೀರಣ್ಯಕೇಶಿ ನದಿಗೆ ಗಂಗಾರತಿ: ಕಣ್ಣು ತುಂಬಿಕೊಂಡ ಸಾವಿರಾರು ಭಕ್ತರು

    ಚಿಕ್ಕೋಡಿ: ಉತ್ತರ ಭಾರತದಲ್ಲಿ ನದಿಗಳಿಗೆ ಗಂಗಾರತಿ (Ganga Aarti) ಮಾಡುವ ಮಾದರಿಯಲ್ಲೆ ಹೀರಣ್ಯಕೇಶಿ ನದಿಗೆ ಗಂಗಾರತಿ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದ ಸುಪ್ರಸಿದ್ಧ ಹೊಳೆಮ್ಮ ದೇವಸ್ಥಾನ ಪಕ್ಕದ ಹೀರಣ್ಯಕೇಶಿ (Hiranyakeshi) ನದಿಗೆ ಗಂಗಾರತಿ ಜರುಗಿತು. ಕಳೆದ ನಾಲ್ಕು ವರ್ಷಗಳಿಂದ ಕಾರ್ತಿಕ ಮಾಸದಲ್ಲಿ ಹೀರಣ್ಯಕೇಶಿ ನದಿಗೆ ಗಂಗಾರತಿ ಕಾರ್ಯಕ್ರಮವನ್ನ ಹುಕ್ಕೇರಿ ಹಿರೇಮಠದಿಂದ ಆಯೋಜನೆ ಮಾಡಲಾಗುತ್ತಿದೆ.

    ಕಾಶಿ ಗಂಗಾರತಿ ಮಾದರಿಯಲ್ಲೇ ಮಂತ್ರ ಜಪಿಸಿ ನದಿಗೆ ಪೂಜೆ ಸಲ್ಲಿಸಿ ಗಂಗಾರತಿ ಮಾಡುವುದು ವಿಶೇಷವಾಗಿತ್ತು. ನದಿಗಳನ್ನು ಸ್ವಚ್ಛಂದವಾಗಿಟ್ಟುಕೊಳ್ಳಲು ಗಂಗಾರತಿಯನ್ನು ಆಯೋಜಿಸಲಾಗುತ್ತಿರುವುದು ವಿಶೇಷ. ಇದನ್ನೂ ಓದಿ: ಕಡೆಯ ಕಾರ್ತಿಕ ಸೋಮವಾರ – ಕೋಲಾರದ ಅಂತರಗಂಗೆಗೆ ಭಕ್ತರ ದಂಡು

    ಗಂಗಾರತಿ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿ ಗಂಗಾರತಿಯನ್ನ ಕಣ್ಣು ತುಂಬಿಕೊಂಡರು. ಗಂಗಾರತಿ ಬಳಿಕ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.

     

  • ಹುಕ್ಕೇರಿ ಹಿರೇಮಠದಿಂದ ಈ ಬಾರಿ ಹೋಳಿಗೆ ದಸರಾ

    ಹುಕ್ಕೇರಿ ಹಿರೇಮಠದಿಂದ ಈ ಬಾರಿ ಹೋಳಿಗೆ ದಸರಾ

    – 9 ದಿನಗಳ‌ ಕಾಲ ಹೋಳಿಗೆ ತುಪ್ಪ ಸವಿಯಲಿರುವ ಲಕ್ಷಾಂತರ ಜನ

    ಚಿಕ್ಕೋಡಿ: ನಾಡಿನಾದ್ಯಂತ ಇಂದಿನಿಂದ ದಸರಾ ಹಬ್ಬದ (Dasara Festival) ಸಂಭ್ರಮ ಎಲ್ಲೆಡೆ ಮನೆಮಾಡಿದೆ. ಮೈಸೂರು ದಸರಾ (Mysuru Dasara) ಕಣ್ಣು ತುಂಬಿಕೊಳ್ಳಲು ದೇಶ ವಿದೇಶಗಳಿಂದ ಜನರು ಆಗಮಿಸಿದರೆ ಉತ್ತರ ಕರ್ನಾಟಕದ ಸುಪ್ರಸಿದ್ಧ ಮಠದಲ್ಲಿ ನಡೆಯಲಿರುವ 9 ದಿನಗಳ ಕಾಲ ದಸರಾದಲ್ಲಿ ಲಕ್ಷಾಂತರ ಜನರು ಹೋಳಿಗೆ ಸವಿಯಲು ಆಗಮಿಸಲಿದ್ದಾರೆ.

    ಹುಕ್ಕೇರಿ ಪಟ್ಟಣದಲ್ಲಿರುವ ಹುಕ್ಕೇರಿ ಹಿರೇಮಠದ ದಸರಾ(Hukkeri Hiremath Dasara) ಹಬ್ಬ ಸಂಭ್ರಮದಿಂದ ಜರಗುತ್ತದೆ. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುವ ದಸರಾ ಹಬ್ಬವನ್ನು ಪ್ರತಿ ವರ್ಷ ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ.

    ಈ ಬಾರಿಯ ದಸರಾ ಹಬ್ಬವನ್ನು ಹುಕ್ಕೇರಿ ಹಿರೇಮಠದಿಂದ ಹೋಳಿಗೆ ದಸರಾ ಎಂದು ಆಚರಣೆ ಮಾಡಲಾಗುತ್ತಿದ್ದು ದಸರಾ ಹಬ್ಬದಲ್ಲಿ ಪಾಲ್ಗೊಳ್ಳುವ ಜನರಿಗೆ 9 ದಿ‌ನಗಳ ಕಾಲ ಹೋಳಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. 9 ದಿನಗಳ ಕಾಲ ಲಕ್ಷಾಂತರ ಜನರು ಆಗಮಿಸಿ ಹೋಳಿಗೆ ತುಪ್ಪದ ಊಟದ ಸವಿಯನ್ನು ಸವಿಯಲಿದ್ದಾರೆ. ಇದನ್ನೂ ಓದಿ: ಮೈಸೂರು ದಸರಾದ ಗಜಪಡೆ – ಅಭಿಮನ್ಯು & ಟೀಂ ಬಗ್ಗೆ ಇಲ್ಲಿದೆ ಫುಲ್‌ ಡಿಟೇಲ್ಸ್‌

    ಹೋಳಿಗೆ ದಸರಾದ ಜೊತೆಗೆ ಅರ್ಥಪೂರ್ಣವಾಗಿ ದಸರಾ ಹಬ್ಬವನ್ನು ಹಿರೇಮಠದಿಂದ ಶುದ್ಧ ಗಾಳಿ, ಶುದ್ಧ ಆಹಾರ, ಶುದ್ಧ ನೀರು ಎನ್ನುವ ವಿಚಾರದೊಂದಿಗೆ ಆಚರಣೆ ಮಾಡಲಾಗುತ್ತಿದೆ. ಜನರಿಗೆ ಉತ್ತಮ ಆರೋಗ್ಯ ಕಾಪಾಡುವ ಜಾಗೃತಿಯನ್ನು ದಸರಾ ಹಬ್ಬದಲ್ಲಿ ಜನರಲ್ಲಿ ಮೂಡಿಸಲಾಗುತ್ತಿದೆ‌.

    ತಾಮ್ರದ ಪಾತ್ರೆಗಳಲ್ಲಿ ನೀರು ಕುಡಿದರೆ ಆಗುವ ಲಾಭಗಳನ್ನು ದಸರಾ ಉತ್ಸವದಲ್ಲಿ ತಾಮ್ರದ ಪಾತ್ರೆಗಳನ್ನು ಇಟ್ಟು ಜಾಗೃತಿ ಮೂಡಿಸಲಾಗುತ್ತಿದೆ. ಜೊತೆಗೆ 9 ದಿನಗಳ ಕಾಲ ಪ್ರವಚನ, ದೇವಿ ಪಾರಾಯಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.

     

  • ಕರ್ನಾಟಕದಲ್ಲೇ ಕನ್ನಡಿಗರ ಮೇಲೆ ದೌರ್ಜನ್ಯ – ಕನ್ನಡ ಧ್ವಜ ಅಳವಡಿಸಿದ್ದಕ್ಕೆ ಯುವಕರಿಗೆ ಥಳಿಸಿದ ಮರಾಠ ಪುಂಡರು

    ಕರ್ನಾಟಕದಲ್ಲೇ ಕನ್ನಡಿಗರ ಮೇಲೆ ದೌರ್ಜನ್ಯ – ಕನ್ನಡ ಧ್ವಜ ಅಳವಡಿಸಿದ್ದಕ್ಕೆ ಯುವಕರಿಗೆ ಥಳಿಸಿದ ಮರಾಠ ಪುಂಡರು

    ಚಿಕ್ಕೋಡಿ: ಕರ್ನಾಟಕದಲ್ಲಿಯೇ (Karnataka) ಕನ್ನಡಿಗರ ಮೇಲೆ ದೌರ್ಜನ್ಯ ನಡೆದಿದೆ. ಕನ್ನಡ ಧ್ವಜ (Kannada Flag) ಅಳವಡಿಸಿದ್ದಕ್ಕೆ ಕನ್ನಡಿಗ (Kannadiga) ಯುವಕರಿಗೆ ಮರಾಠ (Marathas) ಪುಂಡರು ಥಳಿಸಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ (Hukkeri) ತಾಲೂಕಿನ ಅಂಕಲಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದಲ್ಲಿ ಶಿವಾಜಿ ಪುತ್ಥಳಿ ಬಳಿ ಅಳವಡಿಸಿದ್ದ ಕನ್ನಡ ಧ್ವಜವನ್ನು ತೆರವು ಮಾಡುವ ವಿಚಾರಕ್ಕೆ ಗಲಾಟೆ ಉಂಟಾಗಿತ್ತು. ಅಳವಡಿಸಿದ್ದ ಧ್ವಜವನ್ನು ತೆರವು ಮಾಡುವಂತೆ ಮರಾಠ ಪುಂಡರು ಕನ್ನಡಿಗರಿಗೆ ಥಳಿಸಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಕೆಲ ಮರಾಠ ಸಮುದಾಯದವರು ಕನ್ನಡಿಗರ ಮೇಲೆ ಹಲ್ಲೆ ಮಾಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ವೀಡಿಯೋ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಎಚ್ಚೆತ್ತಿದ್ದಾರೆ. ಇದನ್ನೂ ಓದಿ: ಕರ್ತವ್ಯ ಲೋಪ ಆರೋಪ – ಮೂವರು ಪಿಎಸ್‌ಐ ಸೇರಿ ಐವರು ಪೊಲೀಸರ ಅಮಾನತು

    ಈ ಬಗ್ಗೆ 5 ಮರಾಠ ಪುಂಡರ ವಿರುದ್ಧ ಸಂಕೇಶ್ವರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದ ನಾಲ್ವರು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಶಾಸಕರ ಬ್ಯಾನರ್ ಪ್ರೇಮ – ಪಂಚಾಯತ್‌ನಿಂದ ರಸ್ತೆ ದುರಸ್ತಿ, ಬ್ಯಾನರ್ ಶಾಸಕರದ್ದು

  • ಮಹಿಷಾಸುರ ದುರ್ಗುಣಗಳ ಪ್ರತೀಕ; ಮಹಿಷ ದಸರಾ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವುದಿಲ್ಲ: ಪೇಜಾವರ ಶ್ರೀ

    ಮಹಿಷಾಸುರ ದುರ್ಗುಣಗಳ ಪ್ರತೀಕ; ಮಹಿಷ ದಸರಾ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವುದಿಲ್ಲ: ಪೇಜಾವರ ಶ್ರೀ

    ಚಿಕ್ಕೋಡಿ: ಮಹಿಷಾಸುರ (Mahishasur) ದುರ್ಗುಣಗಳ ಪ್ರತೀಕ ಎಂದು ಮಹಿಷ ದಸರಾ ಉತ್ಸವ ಆಚರಣೆ ಕುರಿತು ಉಡುಪಿಯ ಪೇಜಾವರ ಶ್ರೀಗಳು (Pejavara Sri) ಪ್ರತಿಕ್ರಿಯೆ ನೀಡಿದ್ದಾರೆ.

    ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ (Hukkeri) ಪಟ್ಟಣದ ಹುಕ್ಕೇರಿ ಹಿರೇಮಠದ ದಸರಾ ಉತ್ಸವದಲ್ಲಿ ಭಾಗಿಯಾಗಿ ಪೇಜಾವರ ಶ್ರೀಗಳು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದರು. ಮಹಿಷಾಸುರ ಮರ್ದಿನಿ ಎಂದು ಚಾಮುಂಡೇಶ್ವರಿ ಪೂಜೆ ಮಾಡುತ್ತೇವೆ. ದುಷ್ಟ ಅಂತ ಹೇಳಿ ಚಾಮುಂಡೇಶ್ವರಿ ಮಹಿಷಾಸುರನನ್ನು ಮರ್ದನ ಮಾಡಿದ್ದಾಳೆ ಎಂದು ತಿಳಿಸಿದರು.

    ಚಾಮುಂಡೇಶ್ವರಿ ಉತ್ಸವವನ್ನು ಸರ್ಕಾರವೇ ಮಾಡುತ್ತಿದೆ. ಮತ್ತೊಂದು ಕಡೆ ಮಹಿಷಾಸುರನ ಉತ್ಸವ ಮಾಡುವಲ್ಲಿ ಅರ್ಥವಿಲ್ಲ. ದುರ್ಗುಣಗಳ ಉತ್ಸವ ಮಾಡುವುದು ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಭಾರತದಲ್ಲಿ ಇರಬೇಕೆಂದರೆ ಭಾರತ್ ಮಾತಾ ಕಿ ಜೈ ಎನ್ನಬೇಕು: ಕೇಂದ್ರ ಸಚಿವ

    ಪ್ರೋ.ಕೆಎಸ್ ಭಗವಾನ್ ಒಕ್ಕಲಿಗರ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದು ಭಗವಾನ್ ಅವರ ವಿಚಾರಕ್ಕೆ ಬಿಟ್ಟಿದ್ದು. ಸಮಾಜದಲ್ಲಿ ಹೆಸರು ಬರಲು ದೊಡ್ಡವರ ಬಗ್ಗೆ ತುಚ್ಛವಾಗಿ ನಿಂದಿಸುವ, ಪ್ರಚಾರ ಪಡೆಯುವ ಹುನ್ನಾರ ಭಗವಾನ್ ಅವರದ್ದಾಗಿದೆ ಎಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಪಬ್ಲಿಕ್ ಟಿವಿಗೆ ಪೇಜಾವರ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಐಸಿಎಸ್‌ಐ ವಾಕಥಾನ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]