Tag: ಹುಕ್ಕಾಬಾರ್

  • ಪೊಲೀಸ್ ವಶದಲ್ಲಿ ಹಾಸ್ಯನಟ ಮುನಾವರ್ ಫಾರೂಕಿ

    ಪೊಲೀಸ್ ವಶದಲ್ಲಿ ಹಾಸ್ಯನಟ ಮುನಾವರ್ ಫಾರೂಕಿ

    ಬಿಗ್ ಬಾಸ್ ರಿಯಾಲಿಟಿ ಶೋ ವಿನ್ನರ್ ಹಾಗೂ ಹಾಸ್ಯನಟ ಮುನಾವರ್ ಫಾರೂಕಿ ಅವರನ್ನು ನಿನ್ನೆ ತಡರಾತ್ರಿ ಮುಂಬೈ ಪೊಲೀಸರು ವಶಕ್ಕೆ ಪಡೆದ್ದಾರೆ. ಹುಕ್ಕಾ ಪಾರ್ಲರ್ (Hukkabar) ಮೇಲೆ ದಾಳಿ ಮಾಡಿದ್ದ ಮುನಾವರ್ ಫಾರೂಕಿ (Munawar Farooqui) ಮತ್ತು ಇತರರನ್ನು ರಾತ್ರಿಯೇ ಪೊಲೀಸರು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.

    ಮುಂಬೈನ ಪ್ರತಿಷ್ಠಿತ ಹುಕ್ಕಾಬಾರ್ ನಲ್ಲಿ ಮುನಾವರ್ ಮತ್ತು ಸ್ನೇಹಿತರು ಪಾರ್ಟಿ ಮಾಡುತ್ತಿದ್ದರಂತೆ. ಈ ವೇಳೆಯಲ್ಲಿ ಹುಕ್ಕಾ ಬದಲು ತಂಬಾಕು ಸೇವನೆ ಮಾಡುತ್ತಿದ್ದರು ಎನ್ನುವ ಖಚಿತ ಮಾಹಿತಿಯ ಮೇರೆಗೆ ಮುಂಬೈ ಪೊಲೀಸರು ಹುಕ್ಕಾಬಾರ್ ಮೇಲೆ ದಾಳಿ ಮಾಡಿದ್ದರು ಎನ್ನಲಾಗುತ್ತಿದೆ.

     

    ಒಂದಷ್ಟು ಹೊತ್ತು ಠಾಣೆಯಲ್ಲಿ ಇರಿಸಿಕೊಂಡು ಮುನಾವರ್ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ನಂತರ ಅವರನ್ನು ಬಿಟ್ಟು ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಈ ಕುರಿತಂತೆ ಯಾವುದೇ ಪ್ರತಿಕ್ರಿಯೆನ್ನು ಕೊಡಲು ಮುನಾವರ್ ನಿರಾಕರಿಸಿದ್ದಾರೆ.

  • ಪೊಲೀಸರ ಕಣ್ತಪ್ಪಿಸಿ ಹುಕ್ಕಾಬಾರ್ ದಂಧೆ – ಸಿಸಿಬಿ ದಾಳಿ ವೇಳೆ ಸಿಕ್ಕಿಬಿದ್ದ ಖದೀಮರು

    ಪೊಲೀಸರ ಕಣ್ತಪ್ಪಿಸಿ ಹುಕ್ಕಾಬಾರ್ ದಂಧೆ – ಸಿಸಿಬಿ ದಾಳಿ ವೇಳೆ ಸಿಕ್ಕಿಬಿದ್ದ ಖದೀಮರು

    ಬೆಂಗಳೂರು: ಸರ್ಕಾರದ ಹುಕ್ಕಾಬಾರ್  ಬ್ಯಾನ್ ಆದೇಶ ಕೇವಲ ಪೇಪರ್ ಗಷ್ಟೇ ಸೀಮಿತ ಆಯ್ತಾ ಅನ್ನೋ ಪ್ರಶ್ನೆ ಮೂಡಿದೆ. ಪೊಲೀಸರ ಕಣ್ಣಿಗೆ ಮಣ್ಣೆರಚಿ ಕದ್ದುಮುಚ್ಚಿ ಹುಕ್ಕಾ ಬಾರ್ ನಡೆಸ್ತಿರೋದು ಪಬ್ಲಿಕ್ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ಕೆಆರ್ ಪುರಂನ ಮೂನ್ ಕೆಫೆ ಹುಕ್ಕಾ ಬಾರ್ ನಲ್ಲಿ (Hookah Bar) ಅಕ್ರಮವಾಗಿ ಹುಕ್ಕಾ ಬಾರ್ ರನ್ನಿಂಗ್ ಆಗ್ತಿದೆ. ಪರಿಚಯಸ್ಥ ಕಸ್ಟಮರ್ ಗಳನ್ನ ಮಾತ್ರ ಒಳಗೆ ಬಿಟ್ಕೊಂಡು ಕಾನೂನು ಬಾಹಿರ ಕೃತ್ಯ ನಡೆಸಲಾಗ್ತಿದೆ. ಒಳಗಿನಿಂದಲೇ ಸಿಸಿಟಿವಿ ವಾಚ್ ಮಾಡುವ ಖದೀಮರು ಪೊಲೀಸರು ಯಾರಾದರು ಬಂದರೆ ಸಿಸಿಟಿವಿಯಲ್ಲಿ ನೋಡಿ ಲೈಟ್ ಆಫ್ ಮಾಡ್ತಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ತುಂಡು ತುಂಡಾಗಿ ಕತ್ತರಿಸಿ ವೃದ್ಧೆಯ ಭೀಕರ ಹತ್ಯೆ

    ಸೀಮಿತ ಗ್ರಾಹಕರನ್ನು ಒಳಗೆ ಬಿಟ್ಕೊಂಡು ಹುಕ್ಕಾ ದಂಧೆ ನಡೆಸಲಾಗುತ್ತಿದೆ. ಈ ಮೂಲಕ ಸರ್ಕಾರ ಹುಕ್ಕಾ ಬ್ಯಾನ್ ಮಾಡಿದ್ರೂ ಕೂಡ ಮಾಲೀಕರು ಮಾತ್ರ ಡೋಂಟ್ ಕೇರ್ ಅನ್ನುತ್ತಾರೆ. ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿಯೇ ಇದು ಎಗ್ಗಿಲ್ಲದೇ ನಡೆಯುತ್ತಿದೆ. ಹುಕ್ಕಾಬಾರ್ ಒಳಗೆ ಹೋಗುವ, ಹುಕ್ಕಾ ಸೇದುವ ವೀಡಿಯೊಗಳು ಲಭ್ಯವಾಗಿದೆ.

    ಘಟನೆ ಸಂಬಂಧ ಸಿಸಿಬಿ ಅಧಿಕಾರಿಗಳಿಂದ ಹುಕ್ಕಾ ಬಾರ್ ಸೀಜ್ ಮಾಡಿದ್ದಾರೆ. ಹುಕ್ಕಾಬಾರ್ ದಂಧೆ ನಡೆಸ್ತಿದ್ದವರು ಜೈಲಿಗಟ್ಟಿದ್ದಾರೆ.

  • 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಿಗರೇಟ್‌ ಮಾರಾಟ ಮಾಡುವಂತಿಲ್ಲ: ದಿನೇಶ್‌ ಗುಂಡೂರಾವ್‌

    21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಿಗರೇಟ್‌ ಮಾರಾಟ ಮಾಡುವಂತಿಲ್ಲ: ದಿನೇಶ್‌ ಗುಂಡೂರಾವ್‌

    – ಅನಧಿಕೃತ ಹುಕ್ಕಾಬಾರ್‌ ನಡೆಸಿದ್ರೆ 1 ಲಕ್ಷ ರೂ. ವರೆಗೆ ದಂಡ

    ಬೆಂಗಳೂರು: ವಿಧಾನಸಭೆಯಲ್ಲಿಂದು (Assembly) ಸಿಗರೇಟ್‌ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಯಮನ) (ಕರ್ನಾಟಕ ತಿದ್ದುಪಡಿ) ವಿಧೇಯಕ ಅಂಗೀಕರಿಸಲಾಯಿತು.

    ಈ ಕುರಿತು ಸದನದಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ (Dinesh Gundurao), ಇನ್ಮುಂದೆ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಿಗರೇಟ್‌ ಮಾರಾಟ ಮಾಡುವಂತಿಲ್ಲ ಎಂದು ತಾಕೀತು ಮಾಡಿದರು. ಈ ಹಿಂದೆ ಸಿಗರೇಟು ಮಾರಾಟ ವಯೋಮಿತಿಯನ್ನು 18 ವರ್ಷಕ್ಕೆ ನಿಗದಿಪಡಿಸಲಾಗಿತ್ತು, ಈಗ ವಯಸ್ಸಿನ ಮಿತಿಯನ್ನು 21 ವರ್ಷಕ್ಕೆ ಹೆಚ್ಚಿಸಿದ್ದೇವೆ ಎಂದು ತಿಳಿಸಿದರು.

    ಅಲ್ಲದೇ ಶಾಲೆಗಳಿಂದ 100 ಮೀಟರ್ ವ್ಯಾಪ್ತಿಯಲ್ಲಿ ಸಿಗರೇಟ್ ಮಾರಾಟ (Cigarette Sale) ಮಾಡುವಂತಿಲ್ಲ. ಒಂದು ವೇಳೆ ಮಾರಾಟ ಮಾಡುವರಿಗೆ ದಂಡದ ಪ್ರಮಾಣ 100 ರೂ. ನಿಂದ 1000 ರೂ. ಗೆ ಏರಿಕೆ ಮಾಡಿದ್ದೇವೆ ಎಂದು ತಿಳಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ನಿಮ್ಮ ನಿಲುವು ಸ್ವಾಗತಾರ್ಹವಾಗಿದೆ. ಆದ್ರೆ ಈ ಕಾನೂನು ಇನ್ನೂ 5 ವರ್ಷ ಹೀಗೇ ಇರುತ್ತೆ. ಆದ್ದರಿಂದ ದಂಡದ ಮೊತ್ತವನ್ನು 10,000 ರೂ.ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಯೋಚನೆ ಮಾಡಿ ಹೇಳ್ತೀನಿ: ಡಾ.ಸಿ.ಎನ್.ಮಂಜುನಾಥ್

    ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ದಿನೇಶ್‌ ಗುಂಡೂರಾವ್‌, ಸಿಗರೇಟ್‌ ಮಾಡುವವರು ಅದೊಂದನ್ನೇ ಮಾರಲ್ಲ. ಸಣ್ಣಪುಟ್ಟ ವ್ಯಾಪಾರಿಗಳಿರುತ್ತಾರೆ, ದಿನಸಿಯನ್ನೂ ಮಾರಾಟ ಮಾಡ್ತಿರ್ತಾರೆ. 10 ಸಾವಿರ ದಂಡ ಹಾಕಿದ್ರೆ ಸಮಸ್ಯೆಯಾಗುತ್ತೆ. ಆದ್ದರಿಂದ 1 ಸಾವಿರಕ್ಕೆ ಮಿತಿಗೊಳಿಸಿದ್ದೇವೆ. ಹುಕ್ಕಾ ಬಾರ್‌ ನಡೆಸೋರು ಶ್ರೀಮಂತರಿರ್ತಾರೆ. ಆದ್ದರಿಂದ ಅವರಿಗೆ 50,000 ರೂ. ನಿಂದ 1 ಲಕ್ಷ ರೂ.ವೆರೆಗೆ ದಂಡ ವಿಧಿಸುತ್ತೇವೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ದಾವಣಗೆರೆಯಲ್ಲಿ ಮಂತ್ರ ಮಾಂಗಲ್ಯ ಮೂಲಕ ಮದುವೆ; ಅನಾಥ ಯುವತಿ ಬಾಳಿಗೆ ದಾಂಪತ್ಯದ ಬೆಳಕು!

    ಹುಕ್ಕಾ ಬಾರ್‌ಗೆ ನಿಷೇಧ:
    ಅಲ್ಲದೇ ಯಾವುದೇ ಬಾರ್‌ & ರೆಸ್ಟೋರೆಂಟ್‌ ಹಾಗೂ ಇತರ ಕಡೆಗಳಲ್ಲಿ ಹುಕ್ಕಾ ಬಾರ್‌ಗೆ ನಿಷೇಧ ಹೇರಿದ್ದೇವೆ. ಹುಕ್ಕಾ ಬಾರ್ ಅನಧಿಕೃತವಾಗಿ‌ ನಡೆಸಿದರೆ ಒಂದು ವರ್ಷಕ್ಕೆ ಕಡಿಮೆ ಇಲ್ಲದಂತೆ ಹಾಗೂ 3 ವರ್ಷಕ್ಕೆ ವಿಸ್ತರಣೆ ಮಾಡುವ ಜೈಲು ಶಿಕ್ಷೆ ಮತ್ತು 50 ಸಾವಿರದಿಂದ 1 ಲಕ್ಷ ರೂ. ವರೆಗೆ ದಂಡ ವಿಧಿಸಲು ಅವಕಾಶವಿದೆ ಎಂದು ಹೇಳಿದರು. ಇದನ್ನೂ ಓದಿ: 4 ದಿನದ ಕೂಸನ್ನು ಬಿಸಿ ನೀರಿನಲ್ಲಿ ಕೂರಿಸಿ ಸ್ನಾನ ಪ್ರಕರಣ- ಧಾರವಾಡದ ಆಸ್ಪತ್ರೆಗೆ 10 ಲಕ್ಷ ದಂಡ

  • ಹೊಳೆನರಸೀಪುರದ ಒಂಟಿ ಮನೆಯಲ್ಲಿ ಹುಕ್ಕಾಬಾರ್ – ಏಳು ಮಂದಿ ಬಂಧನ

    ಹೊಳೆನರಸೀಪುರದ ಒಂಟಿ ಮನೆಯಲ್ಲಿ ಹುಕ್ಕಾಬಾರ್ – ಏಳು ಮಂದಿ ಬಂಧನ

    – ಗಾಂಜಾ ಹಾಗೂ ಹುಕ್ಕಾ ಉಪಕರಣಗಳನ್ನು ವಶಕ್ಕೆ

    ಹಾಸನ: ಒಂಟಿ ಮನೆಯೊಂದರಲ್ಲಿ ನಡೆಯುತ್ತಿದ್ದ ಹುಕ್ಕಾಬಾರ್ ಪಾರ್ಟಿ ಮೇಲೆ ದಾಳಿ ನಡೆಸಿದ ಹೊಳೆನರಸೀಪುರ ಪೊಲೀಸರು, ಏಳು ಮಂದಿ ಯುವಕರನ್ನು ಬಂಧಿಸಿದ್ದಾರೆ. ಜೊತೆಗೆ ಗಾಂಜಾ ಹಾಗೂ ಹುಕ್ಕಾ ಉಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ.

    ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಅಡಿಕೆರೆ ಗ್ರಾಮದಲ್ಲಿ, ಚನ್ನರಾಯಪಟ್ಟಣ ತಾಲೂಕು ಮೂಲದ ಎಚ್.ವಿ.ಸುಹಾಸ್ ನೇತೃತ್ವದಲ್ಲಿ ಹುಕ್ಕಾಬಾರ್ ನಡೆಯುತ್ತಿತ್ತು. ಸುಹಾಸ್ ಸೇರಿ ಆರು ಜನರ ಬಂಧನವಾಗಿದೆ. ಒಂಟಿ ಮನೆಯನ್ನು ಬಾಡಿಗೆ ಪಡೆದು ಅಲ್ಲಿ ಹುಕ್ಕಾಬಾರ್ ನಡೆಸುತ್ತಿದ್ದ ಸುಹಾಸ್ ತನ್ನದೇ ಗ್ರಾಹಕರನ್ನು ಹೊಂದಿದ್ದ ಎನ್ನಲಾಗಿದೆ.

    ಗ್ರಾಮೀಣ ಪ್ರದೇಶವಾದ ಕಾರಣ ಯಾರ ಗಮನಕ್ಕೂ ಬರುವುದಿಲ್ಲ ಎಂದು ಭಾವಿಸಿ ಪಾರ್ಟಿ ಮಾಡಿದ್ದಾರೆ. ಆದರೆ ಖಚಿತ ಮಾಹಿತಿ ಆಧರಿಸಿ ರಾತ್ರಿ ಮನೆ ಮೇಲೆ ದಾಳಿ ಮಾಡಿದ ಹೊಳೆನರಸೀಪುರ ಪೊಲೀಸರು ಗಾಂಜಾ ಸೇವಿಸುತ್ತಿದ್ದ ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಡಿವೈಎಸ್ಪಿ ಲಕ್ಷ್ಮೇಗೌಡ ನೇತೃತ್ವದಲ್ಲಿ ಸಿಪಿಐ ಆರ್.ಪಿ. ಅಶೋಕ್, ಪಿಎಸ್‍ಐ ಮೋಹನ್ ಕೃಷ್ಣ ತಂಡ ಕಾರ್ಯಾಚರಣೆ ನಡೆಸಿ ಹುಕ್ಕಾಬಾರ್ ಬಂದ್ ಮಾಡಿಸಿದೆ.