Tag: ಹುಂಡೈ ಐ20

  • ಹೊಸ ಅವತಾರದಲ್ಲಿ ಹುಂಡೈ ಐ20 ಬಿಡುಗಡೆ

    ಹೊಸ ಅವತಾರದಲ್ಲಿ ಹುಂಡೈ ಐ20 ಬಿಡುಗಡೆ

    ನವದೆಹಲಿ: ಹುಂಡೈ ಮೋಟಾರ್ ಕಂಪನಿ ಭಾರತದ ಮಾರುಕಟ್ಟೆಗೆ ಇಂದು ತನ್ನ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ಐ20ಯನ್ನು ಹೊಸ ಅವತಾರದಲ್ಲಿ ಬಿಡುಗಡೆ ಮಾಡಿದೆ. ಇದರ ಎಕ್ಸ್ ಷೋರೂಂ ಬೆಲೆ ರೂ. 6.79 ಲಕ್ಷದಿಂದ ರೂ.11.17 ಲಕ್ಷದವರೆಗೆ ಇದೆ. ಇವು ಪರಿಚಯಾತ್ಮಕ ಬೆಲೆಗಳಾಗಿದ್ದು ಕೇವಲ ಡಿಸೆಂಬರ್ 2020ರವರೆಗೆ ಮಾತ್ರ ಈ ದರದಲ್ಲಿ ಕಾರುಗಳನ್ನು ಖರೀದಿಸಬಹುದಾಗಿದೆ.

    ಹೊಸ ಹುಂಡೈ ಐ 20ಯ ವಿನ್ಯಾಸ ಅತ್ಯಾಕರ್ಷಕವಾಗಿದೆ. ವಿನ್ಯಾಸದಲ್ಲಿ ಟಾಟಾ ಅಲ್ಟ್ರೋಜ್ ಕಾರಿಗೆ ಹೋಲಿಕೆಯಾಗುತ್ತದೆ.

    ಬೆಲೆ ಎಷ್ಟು?
    2020ರ ಐ20ಯ 1.2 ಕಪ್ಪಾ ಪೆಟ್ರೋಲ್ ಎಂಜಿನ್‍ನ ಮ್ಯಾನ್ಯುಯಲ್ ಆವೃತ್ತಿ ಬೆಲೆ ರೂ. 6.79 ಲಕ್ಷದಿಂದ ರೂ. 9.9 ಲಕ್ಷದವರೆಗೆ ಇದೆ. ಇದೇ ಎಂಜಿನ್‍ನ ಆಟೊಮ್ಯಾಟಿಕ್ ವೇರಿಯಂಟ್‍ನ ಬೆಲೆ ರೂ.8.59 ಲಕ್ಷದಿಂದ ರೂ.9.69 ಲಕ್ಷದವರೆಗಿದೆ.

    ಐಎಂಟಿ ತಂತ್ರಜ್ಞಾನ ಹೊಂದಿರುವ 1.0 ಟರ್ಬೊ ಜಿಡಿಐ ಪೆಟ್ರೋಲ್ ಎಂಜಿನ್ ಆವೃತ್ತಿಯ ಬೆಲೆ ರೂ. 8.79 ಲಕ್ಷದಿಂದ ರೂ. 9.89 ಲಕ್ಷ ಇದೆ. 7ಡಿಸಿಟಿ ವೇರಿಯಂಟ್‍ನ ಬೆಲೆ ರೂ. 10.66 ಲಕ್ಷದಿಂದ ರೂ. 11.17 ಲಕ್ಷ ಇದೆ.

    1.5 ಯು2 ಸಿಆರ್‍ಡಿಐ ಡೀಸೆಲ್ ಎಂಜಿನ್ ಆವೃತ್ತಿಯ ಬೆಲೆ ರೂ. 8.19 ಲಕ್ಷದಿಂದ ರೂ. 10.59 ಲಕ್ಷ ಇದೆ.

    6 ಏರ್ ಬ್ಯಾಗ್‌, ಎಲ್‍ಇಡಿ ಪ್ರೊಜೆಕ್ಟರ್‌ ಹೆಡ್‍ಲ್ಯಾಂಪ್ಸ್, ಹಿಂಬದಿ ಕ್ಯಾಮೆರಾ, ಹಿಲ್ ಅಸಿಸ್ಟ್ ಕಂಟ್ರೋಲ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್, ಆಕ್ಸಿಬೂಸ್ಟ್ ಏರ್ ಪ್ಯೂರಿಫೈಯರ್, ಎಲೆಕ್ಟ್ರಿಕ್ ಸನ್‍ರೂಫ್, ವಯರ್‍ಲೆಸ್ ಚಾರ್ಜರ್ ವಿಥ್ ಕೂಲಿಂಗ್ ಪ್ಯಾಡ್, 26.03 ಸೆ.ಮೀ ಹೆಚ್‍ಡಿ ಟಚ್‍ಸ್ಕ್ರೀನ್ ಮತ್ತು ನ್ಯಾವಿಗೇಶನ್ ಸಿಸ್ಟಮ್, ಉತ್ಕೃಷ್ಟ ಗುಣಮಟ್ಟದ ಬೋಸ್ ಕಂಪನಿಯ 7 ಸ್ಪೀಕರ್‌ಗಳು ಮತ್ತು ಹುಂಡೈ ಬ್ಲೂ ಲಿಂಕ್ ಸೌಲಭ್ಯಗಳನ್ನು ಈ ಹೊಸ ಕಾರು ಹೊಂದಿದೆ.