Tag: ಹುಂಡಿ

  • 4 ತಿಂಗ್ಳಲ್ಲಿ ಚಾಮುಂಡಿ ದೇವಿ ಹುಂಡಿಗೆ 11 ಕೋಟಿಗೂ ಅಧಿಕ ಆದಾಯ

    4 ತಿಂಗ್ಳಲ್ಲಿ ಚಾಮುಂಡಿ ದೇವಿ ಹುಂಡಿಗೆ 11 ಕೋಟಿಗೂ ಅಧಿಕ ಆದಾಯ

    ಮೈಸೂರು: ನಾಲ್ಕೇ ತಿಂಗಳಲ್ಲಿ ಮೈಸೂರಿನ ಅಧಿದೇವತೆ ಚಾಮುಂಡಿಬೆಟ್ಟದ ಚಾಮುಂಡಿ ದೇವಿಗೆ ದಾಖಲೆ ಪ್ರಮಾಣದ ಕಾಣಿಕೆ ಹರಿದು ಬಂದಿದೆ.

    ಈ ಹುಂಡಿಗೆ ಸುಮಾರು ಮೂರು ಮುಕ್ಕಾಲು ಕೋಟಿ ಹಣ ಬಂದಿದೆ. ಹಾಗೆ ವಿವಿಧ ರೂಪದಲ್ಲಿ ದೇವಾಲಯಕ್ಕೆ 7 ಕೋಟಿಗೂ ಅಧಿಕ ಆದಾಯ ಕೂಡ ಬಂದಿದೆ. ಆಷಾಢದ ಮಾಸದಲ್ಲೇ ಒಂದೂ ಮುಕ್ಕಾಲು ಕೋಟಿ ಹಣ ಸಂಗ್ರಹವಾಗಿದೆ.

    4 ತಿಂಗಳಲ್ಲಿ ಒಟ್ಟು 11 ಕೋಟಿಗೂ ಅಧಿಕ ಆದಾಯ ಬಂದಿದೆ. ಕಳೆದೆರಡು ವರ್ಷಕ್ಕಿಂತ ಶೇ 40ರಷ್ಟು ಆದಾಯ ಹೆಚ್ಚಾಗಿದೆ ಅಂತ ಜಿಲ್ಲಾಡಳಿತ ಮಾಹಿತಿ ನೀಡಿದೆ.

     

  • ಕೊಪ್ಪಳ: ದೇವಸ್ಥಾನದ ಹುಂಡಿಯಲ್ಲಿ ಪತ್ತೆಯಾಯ್ತು 2000 ರೂ. ನಕಲಿ ನೋಟು

    ಕೊಪ್ಪಳ: ದೇವಸ್ಥಾನದ ಹುಂಡಿಯಲ್ಲಿ ಪತ್ತೆಯಾಯ್ತು 2000 ರೂ. ನಕಲಿ ನೋಟು

    ಕೊಪ್ಪಳ: ದೇವಸ್ಥಾನದ ಕಾಣಿಕೆ ಡಬ್ಬಿಯಲ್ಲಿ 500 ಹಾಗೂ 2 ಸಾವಿರ ರೂ. ನಕಲಿ ನೋಟುಗಳು ಪತ್ತೆಯಾದ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಇಲ್ಲಿನ ಗಂಗಾವತಿ ನಗರದ ಹಿರೇಜಂತಕಲ್ ಐತಿಹಾಸಿಕ ದೇವಸ್ಥಾನದ ಪ್ರಸನ್ನ ಪಂಪಾತಿಯ ಕಾಣಿಕೆ ಹುಂಡಿಯಲ್ಲಿ ಈ ನೋಟುಗಳು ದೊರೆತಿವೆ. ದೇವಸ್ಥಾನದ ಆಡಳಿತಾಧಿಕಾರಿ ಗಂಗಾವತಿಯ ತಹಶೀಲ್ದಾರ್ ಎಲ್.ಡಿ. ಚಂದ್ರಕಾಂತ್ ನೇತೃತ್ವದಲ್ಲಿ ದೇವಸ್ಥಾನದ ಆವರಣದಲ್ಲಿ ಕಾಣಿಕೆ ಹುಂಡಿಯಲ್ಲಿನ ಹಣ ಸಂಗ್ರಹಿಸಲು ಮುಂದಾಗಿದ್ರು. ನಂವೆಬರ್ 8 ರಂದು 500 ಮತ್ತು 1000 ಮುಖಬೆಲೆಯ ನೋಟುಗಳು ನಿಷೇಧವಾಗಿದೆ. ಆದ್ರೆ ಹುಂಡಿ ತೆಗೆದಾಗ ನಿಷೇಧಿತ 500 ರೂಪಾಯಿ ಹಾಗೂ ನಕಲಿ 2 ಸಾವಿರ ಮುಖಬೆಲೆಯ ನೋಟುಗಳು ಪತ್ತೆಯಾಗಿದೆ.

    ಹುಂಡಿಯಲ್ಲಿ ಪತ್ತೆಯಾದ 2000 ಮುಖಬೆಲೆಯ ಹಾಗೂ ಹಳೇ 500 ರೂ. ನೋಟು ಮಕ್ಕಳು ಆಡುವ ಆಟಿಕೆ ನೋಟುಗಳಾಗಿವೆ. ಆಟಿಕೆಯ ಎರಡು ಸಾವಿರದ ನೋಟು ಗಾತ್ರದಲ್ಲಿ ಚಿಕ್ಕದಾಗಿದ್ದು, ಬಹುತೇಕ ಅಸಲಿ ನೋಟಿನ ವಿನ್ಯಾಸವನ್ನೇ ಹೋಲುತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಕ್ಕಳು ಹುಂಡಿಯಲ್ಲಿ ಆಟಿಕೆ ನೋಟುಗಳನ್ನು ಹಾಕಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಹುಂಡಿಯಲ್ಲಿ ಒಟ್ಟು 38,770 ರೂಪಾಯಿ ಹಣ ಸಂಗ್ರಹವಾಗಿದ್ದು, ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಎಂದು ತಹಶೀಲ್ದಾರ್ ಎಲ್.ಡಿ ಚಂದ್ರಕಾಂತ್ ಮಾಹಿತಿ ನೀಡಿದ್ರು.