Tag: ಹುಂಡಿ

  • ತಿಮ್ಮಪ್ಪನ ಹುಂಡಿಗೆ ವಾಚ್ ಹಾಕಿ ಬಂದ ಮೇಲೆ ಕೇಂದ್ರಮಂತ್ರಿಯಾಗಿದ್ದ ಎಸ್‌ಎಂಕೆ!

    ತಿಮ್ಮಪ್ಪನ ಹುಂಡಿಗೆ ವಾಚ್ ಹಾಕಿ ಬಂದ ಮೇಲೆ ಕೇಂದ್ರಮಂತ್ರಿಯಾಗಿದ್ದ ಎಸ್‌ಎಂಕೆ!

    ಎಸ್‌ಎಂ ಕೃಷ್ಣ ಅವರು ತಿರುಪತಿ ತಿಮ್ಮಪ್ಪನ ಹುಂಡಿಗೆ ವಾಚ್ ಹಾಕಿದ್ದೇ ತಡ ಅದು ಅವರ ಜೀವನದಲ್ಲಿ ಒಂದು ವಿಶೇಷ ಬೆಳವಣಿಗೆಗೆ ನಾಂದಿ ಹಾಡಿತ್ತು. ಈ ಮೂಲಕ ಕೇಂದ್ರ ಸಚಿವರಾಗುವ ಸುದ್ದಿ ಸಿಕ್ಕಿತ್ತು.

    ಹೌದು, 1983ರಲ್ಲಿ ಎಸ್.ಎಂ.ಕೃಷ್ಣ ಅವರು ತಿರುಪತಿ ದೇವಸ್ಥಾನಕ್ಕೆ ತೆರಳಿದ್ದರು. ಆ ಸಮಯದಲ್ಲಿ ಮಂಗಳಾರತಿ ತೆಗೆದುಕೊಳ್ಳಬೇಕಾದರೆ ಅವರ ವಾಚು ಕೈಯಿಂದ ಕಳಚಿ ಬಿತ್ತು. ಇದನ್ನು ದೇವಾಲಯದ ಅರ್ಚಕರು ಗಮನಿಸಿ, ಕೃಷ್ಣರ ಸ್ನೇಹಿತರಾಗಿದ್ದ ಸಿಂಗಾರಿಗೌಡರಿಗೆ ಕಳಚಿದ ವಾಚ್‌ನ್ನು ಹುಂಡಿಗೆ ಹಾಕಿಸಿ ಎಂದು ಹೇಳಿದರು.ಇದನ್ನೂ ಓದಿ: ದಿನ ಭವಿಷ್ಯ 11-12-2024

    ಅದಾದ ಬಳಿಕ ಮತ್ತೆ ಅವರ ಪತ್ನಿ ಪ್ರೇಮಾ ಅವರ ಜೊತೆ ತಿರುಪತಿ ಹೋಗಿದ್ದರು. ಆಗ ತಮ್ಮ ವಾಚ್‌ನ್ನು ತಿಮ್ಮಪ್ಪನ ಹುಂಡಿಗೆ ಹಾಕಿ ಬಂದಿದ್ದರು. ಅಂದು ಮರಳಿ ಬೆಂಗಳೂರಿಗೆ ಬಂದು, ಮತ್ತೆ ಸಂಜೆ ವಿಮಾನದಲ್ಲಿ ಹೈದರಾಬಾದ್‌ಗೆ ತೆರಳಿದ್ದರು. ಟೆನಿಸ್ ಕ್ಲಬ್‌ಗೆ ತೆರಳಿ ಆಡುತ್ತಿದ್ದರು. ಆ ದಿನ ರಾತ್ರಿ ದೆಹಲಿ ಬರುವಂತೆ ತುರ್ತು ಕರೆ ಬಂದಿದೆ.

    ದೆಹಲಿಗೆ ತೆರಳಿದ ಎಸ್‌ಎಂ ಕೃಷ್ಣ ಅವರು ಪ್ರಧಾನಿ ಇಂದಿರಾ ಗಾಂಧಿ ಭೇಟಿಯಾದರು. ಆಗ ಪ್ರಧಾನಿಯವರು ಕೃಷ್ಣ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡುವ ಸುದ್ದಿ ಸಿಕ್ಕಿತ್ತು. ಬಳಿಕ ಪ್ರಮಾಣವಚನ ಸ್ವೀಕಾರ ಮಾಡಿ ಕೇಂದ್ರ ಸಚಿವರೂ ಆದರು. ಇದು ಅವರ ಜೀವನದಲ್ಲಾದ ವಿಶೇಷ ಬೆಳವಣಿಗೆ. ತಿರುಪತಿ ದೇವರ ಸನ್ನಿಧಿಯಲ್ಲಿ ಮಾತ್ರ ಇಂತಹ ಪವಾಡ ನಡೆಯಲು ಸಾಧ್ಯ ಎಂದು ಎಸ್‌ಎಂಕೆ ನಂಬಿದ್ದರು. ಅವರಿಗೆ ದೇವರಲ್ಲಿ ಅಪಾರ ನಂಬಿಕೆ ಇತ್ತು. ಆದರೆ ಅದನ್ನು ಬಹಿರಂಗವಾಗಿ ಎಲ್ಲಿಯೂ ತೋರಿಸಿಕೊಡುತ್ತಿರಲಿಲ್ಲ.ಇದನ್ನೂ ಓದಿ: ರಾಜ್ಯದ ಹವಾಮಾನ ವರದಿ 11-12-2024

  • ಕುರುಡುಮಲೆ ವಿನಾಯಕನ ಹುಂಡಿಗೆ 2 ಕಂತೆ ಹಣ ಹಾಕಿದ ಯಡಿಯೂರಪ್ಪ – ಎಲ್ಲರಲ್ಲೂ ಅಚ್ಚರಿ

    ಕುರುಡುಮಲೆ ವಿನಾಯಕನ ಹುಂಡಿಗೆ 2 ಕಂತೆ ಹಣ ಹಾಕಿದ ಯಡಿಯೂರಪ್ಪ – ಎಲ್ಲರಲ್ಲೂ ಅಚ್ಚರಿ

    ಕೋಲಾರ: ಕುರುಡುಮಲೆ ಗಣಪತಿ ದೇವಾಲಯದ (Kurudumale Ganapati Temple) ಹುಂಡಿಗೆ 1 ಲಕ್ಷ ರೂ. ಹಣವನ್ನು ಬಿಎಸ್ ಯಡಿಯೂರಪ್ಪ (BS Yediyurappa) ಹಾಕಿ ಗಮನ ಸೆಳೆದರು.

    ಸಾಮಾನ್ಯವಾಗಿ ತಿರುಪತಿ ತಿಮ್ಮಪ್ಪನ ಹುಂಡಿಗೆ ಕಂತೆ ಕಂತೆ ಹಣ ಹಾಕೋದನ್ನು ನಾವು ನೋಡಿದ್ದೇವೆ. ಆದರೆ ಇಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಕುರುಡುಮಲೆ ವಿನಾಯಕ ದೇವಾಲಯದ ಹುಂಡಿಗೆ ಯಡಿಯೂರಪ್ಪ 2 ಕಂತೆ ಎಂದರೆ 1 ಲಕ್ಷ ರೂ. ಹಣವನ್ನು ಹಾಕಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.

    ವಿನಾಯಕನ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಆಗಮಿಸಿದ ಯಡಿಯೂರಪ್ಪ, ದೇವರ ದರ್ಶನಕ್ಕೂ ಮುನ್ನ ದೇವಾಲಯದ ಪ್ರಾಂಗಣದಲ್ಲಿದ್ದ ಹುಂಡಿಗೆ 2 ಕಂತೆ ಹಣ ಹಾಕಿದರು. ಇದು ಸಾಕಷ್ಟು ಅಚ್ಚರಿಗೆ ಕಾರಣವಾಯಿತು. ಇದನ್ನೂ ಓದಿ: ರಾಜ್ಯದ 28 ಲೋಕಸಭಾ ಸ್ಥಾನದಲ್ಲೂ ಬಿಜೆಪಿ ಗೆಲುವು ಖಚಿತ: ಕಟೀಲ್ ವಿಶ್ವಾಸ

    ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ಜನಾಂದೋಲನಾ ಮಾಡಲು ನಗರದಲ್ಲಿ ಚಾಲನೆ ನೀಡಿದರು. ಗೌರಿ-ಗಣೇಶ ಹಬ್ಬದ ನಂತರ ರಾಜ್ಯಾದ್ಯಂತ ಪ್ರವಾಸ ಮಾಡಲು ಈಗಾಗಲೇ ಸಿದ್ಧತೆಗಳನ್ನು ಮಾಡಲಾಗಿದೆ. ಈ ಸಂದರ್ಭದಲ್ಲಿ ಮಾಜಿ ಸಿಎಂ ಸದಾನಂದ ಗೌಡ, ಮಾಜಿ ಸಚಿವ ಅಶ್ವಥ್ ನಾರಾಯಣ, ಗೋವಿಂದ ಕಾರಜೋಳ, ಈಶ್ವರಪ್ಪ ಮತ್ತಿತರರು ಭಾಗಿಯಾಗಿದ್ದರು. ಇದನ್ನೂ ಓದಿ: ಹಣ ತೆಗೆದುಕೊಂಡು ಟಿಕೆಟ್ ಕೊಟ್ಟಿದ್ದಾರೋ ಇಲ್ವೋ? ಇದಕ್ಕೆ ಬಿಜೆಪಿಯವರೇ ಉತ್ತರ ಕೊಡಬೇಕು: ಜಗದೀಶ್ ಶೆಟ್ಟರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೇವಸ್ಥಾನದ ಹುಂಡಿಗೆ ಹಾಕಲು ತೆಗೆದುಕೊಂಡು ಹೋಗುತ್ತಿದ್ದ 2.50 ಲಕ್ಷ ಹಣ ಸೀಜ್

    ದೇವಸ್ಥಾನದ ಹುಂಡಿಗೆ ಹಾಕಲು ತೆಗೆದುಕೊಂಡು ಹೋಗುತ್ತಿದ್ದ 2.50 ಲಕ್ಷ ಹಣ ಸೀಜ್

    ಚಿಕ್ಕಮಗಳೂರು: ಧರ್ಮಸ್ಥಳ (Dharmasthala) ಮಂಜುನಾಥ ಸ್ವಾಮಿ ಹಾಗೂ ಕಟೀಲು ದುರ್ಗಾ ಪರಮೇಶ್ವರಿ (Kateelu Durga Parameshwari) ದೇಗುಲದ ಹುಂಡಿಗೆ ಎಂದು ತೆಗೆದುಕೊಂಡು ಹೋಗುತ್ತಿದ್ದ ಸುಮಾರು 2 ಲಕ್ಷದ 50 ಸಾವಿರ ಹಣವನ್ನ ಚುನಾವಣಾ ಅಧಿಕಾರಿಗಳು ಸೀಜ್ ಮಾಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್‍ಪೋಸ್ಟ್ ನಲ್ಲಿ ನಡೆದಿದೆ.

    ಚುನಾವಣಾ ನೀತಿ ಸಂಹಿತೆ (Code Of Conduct) ಹಿನ್ನೆಲೆ ಜಿಲ್ಲೆಯಲ್ಲಿ ಅಕ್ಕಪಕ್ಕದ ಜಿಲ್ಲೆಯ ಗಡಿ ಹಂಚಿಕೊಂಡಿರುವ ವಿವಿಧ ಮಾರ್ಗದಲ್ಲಿ ಒಟ್ಟು 18 ಚೆಕ್‍ಪೋಸ್ಟ್‍ಗಳನ್ನ ನಿರ್ಮಿಸಲಾಗಿದೆ. ಅದರಲ್ಲಿ ಜಿಲ್ಲೆಯ ಮೂಡಿಗೆರೆಯಿಂದ ದಕ್ಷಿಣಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ (Charmadi Ghat) ಸಮೀಪದ ಕೊಟ್ಟಿಗೆಹಾರದ ಬಳಿಯೂ ಚೆಕ್‍ಪೊಸ್ಟ್ ನಿರ್ಮಿಸಲಾಗಿದೆ.

    ಉಡುಪಿ-ಮಂಗಳೂರು (Udupi- Mangaluru) ಹೋಗುವವರು ಹೆಚ್ಚಾಗಿ ಈ ಮಾರ್ಗವನ್ನ ಬಳಸುತ್ತಾರೆ. ಆದರೆ ಇದೇ ಮಾರ್ಗದಲ್ಲಿ ತುಮಕೂರು ಜಿಲ್ಲೆ ಪಾವಗಡ ಮೂಲದ ವೈದ್ಯ ಧರ್ಮಸ್ಥಳ ಮಂಜುನಾಥ ಸ್ವಾಮಿ ಹಾಗೂ ಕಟೀಲು ದುರ್ಗಾಪರಮೇಶ್ವರಿ ದೇಗುಲದ ಹುಂಡಿಗೆಂದು ತೆಗೆದುಕೊಂಡು ಹೋಗುತ್ತಿದ್ದ ಹಣವನ್ನ ವಾಹನವನ್ನ ತಪಾಸಣೆ ವೇಳೆ ಸಿಕ್ಕಿದ ಎರಡೂವರೆ ಲಕ್ಷ ಹಣವನ್ನ ಸೀಜ್ ಮಾಡಿದ್ದಾರೆ. ಇದನ್ನೂ ಓದಿ: ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬಾವುಟ ಹಾರಿಸ್ತೇವೆ, ದಶಪಥ ಹೆದ್ದಾರಿ ದೊಡ್ಡ ಶಕ್ತಿ – ಪ್ರತಾಪ್ ಸಿಂಹ

    ಚುನಾವಣೆ ನೀತಿ ಸಂಹಿತಿ ಜಾರಿಯಲ್ಲಿರುವ ಕಾರಣ ಓರ್ವ ವ್ಯಕ್ತಿ ಏಕಕಾಲಕ್ಕೆ 50 ಸಾವಿರ ಹಣವನ್ನ ಮಾತ್ರ ತೆಗೆದುಕೊಂಡು ಹೋಗಬಹುದು. ವಾಹನ ಅಂತ ಬಂದಾಗಲೂ ಒಂದು ವಾಹನಕ್ಕೆ 50 ಸಾವಿರ ಅಷ್ಟೆ ಅವಕಾಶವಿರೋದು. ಕಾರಿನಲ್ಲಿ ಐದು ಜನ ಇದ್ದೇವೆಂದು ಎಲ್ಲರೂ 50 ಸಾವಿರ ಇಡುವಂತಿಲ್ಲ. ಹಾಗಾಗಿ ಕಾರಿನಲ್ಲಿ ಎರಡೂವರೆ ಲಕ್ಷ ಹಣ ಸಿಕ್ಕಿದ ಹಿನ್ನೆಲೆ ಸೂಕ್ತ ದಾಖಲೆ ಇಲ್ಲದ ಕಾರಣ ಹಣವನ್ನ ಪೊಲೀಸರು ಸೀಜ್ ಮಾಡಿದ್ದಾರೆ.

    ಗುರುವಾರ ಕೂಡ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದು ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ ಹೋಗುತ್ತಿದ್ದ ರಾಮನಗರ ಮೂಲದ ಭಕ್ತಾದಿಗಳ ಬಳಿಯೂ ಒಂದು ಲಕ್ಷ ಹಣವಿತ್ತು. ಅದನ್ನು ಕೂಡ ಪೊಲೀಸರು ಇದೇ ಕೊಟ್ಟಿಗೆಹಾರ ಚೆಕ್‍ಪೋಸ್ಟ್‍ನಲ್ಲಿ ಸೂಕ್ತ ದಾಖಲೆ ಇಲ್ಲದ ಕಾರಣ ಸೀಜ್ ಮಾಡಿದ್ದರು.

  • ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲಿ ಹುಂಡಿ ಕಾಣಿಕೆ ಎಣಿಕೆ –  72 ಲಕ್ಷ ರೂ. ಸಂಗ್ರಹ

    ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲಿ ಹುಂಡಿ ಕಾಣಿಕೆ ಎಣಿಕೆ – 72 ಲಕ್ಷ ರೂ. ಸಂಗ್ರಹ

    ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ತಾಲೂಕಿನ ಐತಿಹಾಸಿಕ ನಾಗರಾಧಾನ ಕ್ಷೇತ್ರ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲಿ (Ghati Subramanya Temple) ಎರಡು ತಿಂಗಳ ನಂತರ ಹುಂಡಿ ಕಾಣಿಕೆ ಎಣಿಕೆ ಮಾಡಲಾಗಿದ್ದು 72 ಲಕ್ಷ ರೂ. ಸಂಗ್ರಹವಾಗಿದೆ.

    ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ (Temple) ಒಟ್ಟು 72,37098 ರೂ. ಮೊತ್ತ ಸಂಗ್ರಹವಾಗಿದ್ದು, ಜೊತೆಗೆ 40 ಸಾವಿರ ರೂಪಾಯಿ ಮೌಲ್ಯದ 9 ಗ್ರಾಂ 870 ಮಿಲಿ ಚಿನ್ನ, 72,200 ರೂ. ಮೌಲ್ಯದ 2 ಕೆ.ಜಿ 400 ಗ್ರಾಂ ಬೆಳ್ಳಿಯನ್ನು ಭಕ್ತರು ಹುಂಡಿಯಲ್ಲಿ ಹಾಕುವ ಮೂಲಕ ಹರಕೆ ತೀರಿಸಿದ್ದಾರೆ. ಹುಂಡಿಯನ್ನು ನಿಯಮಾನುಸಾರ ತೆಗೆದು ಎಣಿಸಲಾಗಿದ್ದು, ಎಣಿಕೆ ಕಾರ್ಯದಲ್ಲಿ ದೇವಾಲಯಕ್ಕೆ ಆಗಮಿಸಿದ್ದ ಭಕ್ತಾದಿಗಳು ಭಾಗವಹಿಸಿದ್ದರು. ಇದನ್ನೂ ಓದಿ: ಇಂದಿಗೆ 8 ಶತಕೋಟಿ ಮೀರಿತು ಜಾಗತಿಕ ಜನಸಂಖ್ಯೆ: ವಿಶ್ವಸಂಸ್ಥೆ

    ಈ ವೇಳೆ ಮುಜರಾಯಿ ಇಲಾಖೆ ಸಹಾಯಕ ಆಯುಕ್ತೆ ಜೆ.ಜೆ.ಹೇಮಾವತಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಡಿ.ನಾಗರಾಜ್, ಪ್ರಧಾನ ಅರ್ಚಕ ಎಸ್.ಎನ್.ಸುಬ್ಬಕೃಷ್ಣಶಾಸ್ತ್ರೀ, ದೇವಾಲಯದ ಸೂಪರ್ ಡೆಂಟ್ ರಘು, ನಂಜಪ್ಪ ಹುಚ್ಚಪ್ಪ ಸೇರಿದಂತೆ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಹಾಗೂ ದೇವಸ್ಥಾನದ ಸಿಬ್ಬಂದಿ ವರ್ಗ, ಭಕ್ತಾದಿಗಳ ಸಮ್ಮುಖದಲ್ಲಿ ಹುಂಡಿ ಹಣ ಎಣಿಕೆ ಮಾಡಲಾಗಿದೆ. ಇದನ್ನೂ ಓದಿ: ಮುಸ್ಲಿಮರ ವೋಟು ಪಡೆಯೋಕೆ ಕಾಂಗ್ರೆಸ್‌ ಕೇಸರಿ ವಿರೋಧ ಮಾಡ್ತಿದೆ – ಬಿ.ಸಿ.ನಾಗೇಶ್‌ ಕಿಡಿ

    Live Tv
    [brid partner=56869869 player=32851 video=960834 autoplay=true]

  • ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ – 2.50 ಕೋಟಿ ರೂ. ಸಂಗ್ರಹ

    ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ – 2.50 ಕೋಟಿ ರೂ. ಸಂಗ್ರಹ

    ಚಾಮರಾಜನಗರ: ಪ್ರಸಿದ್ಧ ಯಾತ್ರಾಸ್ಥಳ ಮಲೆಮಹದೇಶ್ವರ ಸ್ವಾಮಿ (Male Mahadeshwara Hill) ದೇವಾಲಯ ಹುಂಡಿಯಲ್ಲಿ (Hundi) 2.50 ಕೋಟಿ ರೂಪಾಯಿ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ.

    Mahadeshwara Hills

    ಚಾಮರಾಜನಗರ (Chamarajanagara) ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರುವಾರ ಹುಂಡಿ ಎಣಿಕೆ ನಡೆಸಲಾಯಿತು. ಈ ವೇಳೆ ಹುಂಡಿಯಲ್ಲಿ 2.50 ಕೋಟಿ ರೂಪಾಯಿಗು ಹೆಚ್ಚು ಹಣ ಸಂಗ್ರಹವಾಗಿದೆ. ತಡರಾತ್ರಿವರೆಗೂ ನಡೆದ ಹುಂಡಿ ಎಣಿಕೆ ನಡೆದಿದ್ದು, 2,50,85,794 ರೂಪಾಯಿ ನಗದು, 122 ಗ್ರಾಂ ಚಿನ್ನ, 2.71 ಕೆ.ಜಿ ಬೆಳ್ಳಿ ಸಂಗ್ರಹವಾಗಿದೆ. ಕಳೆದ 36 ದಿನಗಳ ಅವಧಿಯಲ್ಲಿ ಭಕ್ತರು ಸಲ್ಲಿಸಿದ ಕಾಣಿಕೆ ಇದಾಗಿದ್ದು, 14 ಲಕ್ಷ ರೂಪಾಯಿಗೂ ಹೆಚ್ಚು ಹಣ ನಾಣ್ಯದ ರೂಪದಲ್ಲಿ ಕಾಣಿಕೆಯನ್ನು ಭಕ್ತರು ಸಲ್ಲಿಸಿದ್ದಾರೆ. ಇದನ್ನೂ ಓದಿ: ಗುಜರಾತ್‌ ಚುನಾವಣೆ – ಮಾಜಿ ಪತ್ರಕರ್ತ, ಟಿವಿ ಆ್ಯಂಕರ್‌ ಇಸುದನ್‌ ಗಧ್ವಿ ಎಎಪಿ ಸಿಎಂ ಅಭ್ಯರ್ಥಿ

    ಇತ್ತೀಚೆಗಷ್ಟೇ ಮಹದೇಶ್ವರ ಬೆಟ್ಟ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಹಾಗು ಎಸ್‍ಬಿಐ ಸಹಯೋಗದಲ್ಲಿ ಮಾದಪ್ಪನ ಸನ್ನಿಧಿಯಲ್ಲಿ ಇ- ಹುಂಡಿ ಸ್ಥಾಪಿಸಿದೆ. ಭಕ್ತರು ಕ್ಯೂಆರ್ ಕೋಡ್ ಬಳಕೆ ಮಾಡಿ ದೇವರಿಗೆ ಕಾಣಿಕೆ ಅರ್ಪಿಸಬಹುದಾಗಿದೆ. ಇದನ್ನೂ ಓದಿ: ನಮ್ಮ ಪಕ್ಷದ ಕಾರ್ಯಕರ್ತರಿಂದ ಹಣ ಸಂಗ್ರಹಿಸಿದ್ರೆ ಬಿಜೆಪಿಯವರಿಗೇನು ನೋವು?: ಡಿ.ಕೆ. ಶಿವಕುಮಾರ್

    ಇ-ಹುಂಡಿಗೆ ಸಂಪೂರ್ಣ ಭದ್ರತೆ ವಹಿಸಲಾಗಿದೆ. ವರ್ಷಕ್ಕೆ ಮೂರು ಬಾರಿ ನಡೆಯವ ಜಾತ್ರೆ ಹಾಗು ಪ್ರತಿ ಅಮಾವಾಸ್ಯೆ ಸೇರಿದಂತೆ ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತರು ಮಹದೇಶ್ವರನ ಸನ್ನಿಧಿಗೆ ಬರುತ್ತಾರೆ. ದೇವಾಲಯ ಒಳಾಂಗಣದಲ್ಲಿ ಹುಂಡಿಗಳನ್ನು ಇಡಲಾಗಿದ್ದು, ಭಕ್ತರು ಹುಂಡಿಗಳಲ್ಲೇ ಹಾಕಿ ತಮ್ಮ ಕಾಣಿಕೆ ಸಲ್ಲಿಸಬೇಕಿತ್ತು. ನೂಕು ನುಗ್ಗಲಿನ ಕಾರಣ ಕಾಣಿಕೆ ಸಲ್ಲಿಸಲು ಸಹ ಹಲವು ರೀತಿಯ ಅಡಚಣೆಗಳು ಎದುರಾಗುತ್ತಿದ್ದವು. ಆದರೀಗ ಇ-ಹುಂಡಿ ಸ್ಥಾಪನೆ ಮಾಡಲಾಗಿದ್ದು, ಈ ಮೂಲಕ ಕೂಡ ಭಕ್ತರು ಕಾಣಿಕೆಯನ್ನು ಸಲ್ಲಿಸಬಹುದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮತ್ತೆ ಕೋಟ್ಯಧೀಶನಾದ ಮಾದಪ್ಪ- ಹುಂಡಿಯಲ್ಲಿ 2 ಕೋಟಿ 66 ಸಾವಿರ ರೂ. ಸಂಗ್ರಹ

    ಮತ್ತೆ ಕೋಟ್ಯಧೀಶನಾದ ಮಾದಪ್ಪ- ಹುಂಡಿಯಲ್ಲಿ 2 ಕೋಟಿ 66 ಸಾವಿರ ರೂ. ಸಂಗ್ರಹ

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ 2 ಕೋಟಿ 16 ಸಾವಿರ ರೂ. ಸಂಗ್ರಹವಾಗಿದೆ.

    ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ಮಠಾಧ್ಯಕ್ಷ ವಿದ್ವಾನ್ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮೆರಾ ಕಣ್ಗಾವಲು ಹಾಗೂ ಪೊಲೀಸ್ ಬಂದೋಬಸ್ತ್ ನಲ್ಲಿ ಎಣಿಕೆ ಕಾರ್ಯ ಪ್ರಾರಂಭ ಮಾಡಲಾಯಿತು. ಎಣಿಕೆ ಕಾರ್ಯವು ಸಂಜೆ 7 ಗಂಟೆಯವರೆಗೂ ನಡೆಯಿತು.

    ಈ ಬಾರಿ ಅಮಾವಾಸ್ಯೆ ಹಾಗೂ ಸರ್ಕಾರಿ ರಜಾ ದಿನಗಳಂದು ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಜನ ಭಕ್ತರು ಆಗಮಿಸಿದ್ದರು. ಕಳೆದ 40 ದಿನಗಳ ಅವಧಿಯಲ್ಲಿ 2 ಕೋಟಿ 16 ಸಾವಿರದ 340 ರೂ ನಗದು, 50 ಗ್ರಾಂ ಚಿನ್ನ ಹಾಗೂ 2.342 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.

    ಶ್ರೀ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿ ದೇವಿ, ಉಪಕಾರ್ಯದರ್ಶಿ ಬಸವರಾಜು ಸೇರಿದಂತೆ ಇತರರು ಹಾಜರಿದ್ದರು. ಇದನ್ನೂ ಓದಿ: ಜೊಮ್ಯಾಟೊಗೆ ಶಾಕ್ – ಲೇಟ್ ಮಾಡಿ ಆರ್ಡರ್ ಕ್ಯಾನ್ಸಲ್ ಆದ್ರೆ ದಂಡದ ಜೊತೆ ಊಟನೂ ಫ್ರೀ ಕೊಡ್ಬೇಕು

    Live Tv
    [brid partner=56869869 player=32851 video=960834 autoplay=true]

  • ಚಾಮುಂಡಿದೇವಿ ದೇವಸ್ಥಾನದ ಹುಂಡಿಯಲ್ಲಿ ಭರ್ಜರಿ ಕಾಣಿಕೆ – ಆಷಾಢ ಮಾಸದಲ್ಲಿ 2.33 ಕೋಟಿ ರೂ. ಸಂಗ್ರಹ

    ಚಾಮುಂಡಿದೇವಿ ದೇವಸ್ಥಾನದ ಹುಂಡಿಯಲ್ಲಿ ಭರ್ಜರಿ ಕಾಣಿಕೆ – ಆಷಾಢ ಮಾಸದಲ್ಲಿ 2.33 ಕೋಟಿ ರೂ. ಸಂಗ್ರಹ

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ ಬಾರಿ ಆಷಾಢ ಮಾಸದಲ್ಲಿ 2,33,51,270(ಎರಡು ಕೋಟಿ ಮೂವತ್ತೂರು ಲಕ್ಷದ ಐವತ್ತೊಂದು ಸಾವಿರದ ಎರಡು ನೂರ ಎಪ್ಪತ್ತು) ರೂ. ಕಾಣಿಕೆ ಸಂಗ್ರಹವಾಗಿದೆ.

    ಕೊರೊನಾ ಹಿನ್ನೆಲೆ ಕಳೆದ ಎರಡು ವರ್ಷದ ಬಳಿಕ ಆಷಾಢ ಮಾಸದ ವಿಶೇಷ ಪೂಜೆ ಮತ್ತು ದರ್ಶನಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡಿದ್ದು, ಕಾಣಿಕೆ ಸಂಗ್ರಹದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಕಳೆದ ವರ್ಷಕ್ಕಿಂತ ಎರಡುಪಟ್ಟು ಹೆಚ್ಚಾಗಿದ್ದು, ಅಪಾರ ಭಕ್ತ ಸಮೂಹ ಹೊಂದಿರುವ ಸುಪ್ರಸಿದ್ಧ ಯಾತ್ರಾಸ್ಥಳ ಎಂಬುದಕ್ಕೆ ಶ್ರೀ ಚಾಮುಂಡೇಶ್ವರಿ ಸನ್ನಿಧಿ ಸಾಕ್ಷಿಯಾಗಿದೆ.  ಇದನ್ನೂ ಓದಿ: ಮಂಗಳೂರು ಪಬ್ ಮೇಲೆ ದಾಳಿ ನಡೆದಿಲ್ಲ, ಯಾರೂ ದೂರು ನೀಡಿಲ್ಲ: ಎನ್.ಶಶಿಕುಮಾರ್

    ಇಲ್ಲಿಯವರೆಗೆ 1.59 ಕೋಟಿ ರೂ. ಅತೀ ಹೆಚ್ಚಿನ ಸಂಗ್ರಹಣೆಯಾಗಿತ್ತು. ಆದರೆ ಈ ವರ್ಷದ ಆಷಾಢ ಮಾಸದಲ್ಲಿ 2 ಕೋಟಿ ರೂ. ದಾಟುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ. 2,33,51,270 ರೂ.ಗಳಲ್ಲಿ 2,29,93,739 ರೂ. ನೋಟುಗಳು ಹಾಗೂ 3,57,531 ರೂ. ನಾಣ್ಯಗಳು ಸಂಗ್ರಹವಾಗಿದೆ. ಅಲ್ಲದೇ ಟಿಕೆಟ್ ಕೌಂಟರ್ (300 ಮತ್ತು 50 ರೂ. ಟಿಕೆಟ್)ನಿಂದ 1,03,69,270 ರೂ. ಆದಾಯ ಸಂಗ್ರಹವಾಗಿದೆ. ಇದನ್ನೂ ಓದಿ: ಅಭಿವೃದ್ಧಿಗೆ ಕ್ರಿಶ್ಚಿಯನ್ನರೇ ಕಾರಣ, ಕ್ರಿಶ್ಚಿಯನ್ನರು ಇಲ್ಲದಿದ್ರೆ ರಾಜ್ಯ ಬಿಹಾರ ಆಗ್ತಿತ್ತು: ತಮಿಳುನಾಡು ಸ್ಪೀಕರ್

    Live Tv
    [brid partner=56869869 player=32851 video=960834 autoplay=true]

  • ಚಾಮುಂಡಿ ಬೆಟ್ಟದ ಹುಂಡಿ ಹಣ ಎಣಿಕೆ – ಒಟ್ಟು 2.07 ಕೋಟಿ ರೂ ಸಂಗ್ರಹ

    ಚಾಮುಂಡಿ ಬೆಟ್ಟದ ಹುಂಡಿ ಹಣ ಎಣಿಕೆ – ಒಟ್ಟು 2.07 ಕೋಟಿ ರೂ ಸಂಗ್ರಹ

    ಮೈಸೂರು: ಸಾಂಸ್ಕೃತಿಕ ನಗರ ಮೈಸೂರಿನ ಚಾಮುಂಡಿ ಬೆಟ್ಟದ ಹುಂಡಿಗೆ ಭಕ್ತರಿಂದ ಈ ಬಾರಿ ಭರ್ಜರಿ ಕಾಣಿಕೆ ಬಿದ್ದಿದೆ.

    ಭಾನುವಾರ ಚಾಮುಂಡಿ ಬೆಟ್ಟದ ದೇವಸ್ಥಾನದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ 23 ವಿದೇಶಿ ನೋಟುಗಳು ಪತ್ತೆಯಾಗಿದ್ದು, ಬರೋಬ್ಬರಿ 2 ಕೋಟಿಗೂ ಅಧಿಕ ಮೊತ್ತ ಸಂಗ್ರಹವಾಗಿದೆ. ಇದನ್ನೂ ಓದಿ: ಇನ್ನೂ ಪತ್ತೆಯಾಗದ `ದಿ ಪಾರ್ಕ್’ ಡ್ರಗ್ ಮೂಲ – 40 ಫಾರಿನ್ ಮಾಡೆಲ್‍ಗಳಿಗೆ ಪೊಲೀಸ್ ನೋಟಿಸ್

    ಎಣಿಕೆಯಲ್ಲಿ ನಾಣ್ಯರೂಪದಲ್ಲಿ 4,13,684 ರೂಪಾಯಿ ದೊರೆತಿದೆ. 320 ಗ್ರಾಂ ಚಿನ್ನ ಮತ್ತು 960 ಗ್ರಾಂ ಬೆಳ್ಳಿ ಪದಾರ್ಥ ಕೂಡ ಪತ್ತೆಯಾಗಿದ್ದು, ಒಟ್ಟು 2,07,64,133 ರೂ. ಸಂಗ್ರಹವಾಗಿದೆ. ಅದರಲ್ಲಿಯೂ ಹುಂಡಿಯಲ್ಲಿ 500 ರೂ. ಮುಖ ಬೆಲೆಯ ಹೆಚ್ಚಿನ ನೋಟುಗಳು ಸಿಕ್ಕಿದೆ ಎಂದು ಚಾಮುಂಡಿ ಬೆಟ್ಟ ಆಡಳಿತ ಮಂಡಳಿ ತಿಳಿಸಿದೆ. ಇದನ್ನೂ ಓದಿ: ಇಂದು ಬೆಂಗಳೂರಿಗೆ ಮೋದಿ – ಎಲ್ಲಿ ಸಂಚಾರ ನಿಷೇಧ? ಪರ್ಯಾಯ ಮಾರ್ಗ ಯಾವುದು?

    Live Tv

  • ಮತ್ತೆ ಕೋಟ್ಯಧೀಶನಾದ ಮಾದಪ್ಪ- ಹುಂಡಿಯಲ್ಲಿ 2 ಕೋಟಿಗೂ ಹೆಚ್ಚು ಹಣ ಸಂಗ್ರಹ

    ಮತ್ತೆ ಕೋಟ್ಯಧೀಶನಾದ ಮಾದಪ್ಪ- ಹುಂಡಿಯಲ್ಲಿ 2 ಕೋಟಿಗೂ ಹೆಚ್ಚು ಹಣ ಸಂಗ್ರಹ

    ಚಾಮರಾಜನಗರ: ಹನೂರು ತಾಲೂಕಿನ ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ಎರಡು ಕೋಟಿ ರೂಪಾಯಿಗೂ ಹೆಚ್ಚು ಕಾಣಿಕೆ ಸಂಗ್ರಹವಾಗಿದೆ.

    ಹುಂಡಿ ಎಣಿಕೆ ಕಾರ್ಯ ನಡೆದು ಕಳೆದ 35 ದಿನಗಳ ಅವಧಿಯಲ್ಲಿ 2,03,25,354 ಕೋಟಿ ರೂ. ನಗದು ಸಂಗ್ರಹವಾಗಿದೆ. ಈ ಪೈಕಿ ನಾಣ್ಯಗಳ ರೂಪದಲ್ಲೇ 12 ಲಕ್ಷ ರೂಪಾಯಿ ಕಾಣಿಕೆಯಾಗಿ ಬಂದಿರುವುದು ವಿಶೇಷವಾಗಿದೆ. ನಗದು ಹಣದ ಜೊತೆಗೆ 110 ಗ್ರಾಂ ಚಿನ್ನ, 3.560 ಕೆಜಿ ಬೆಳ್ಳಿಯನ್ನು ಸಹ ಭಕ್ತರು ಮಹದೇಶ್ವರನಿಗೆ ಅರ್ಪಿಸಿದ್ದಾರೆ. ಇದನ್ನೂ ಓದಿ: ಸುರಂಗ ಮಾರ್ಗದಲ್ಲಿ ಬಿದ್ದಿದ್ದ ಕಸವನ್ನು ಬರಿಗೈಯಲ್ಲೇ ತೆಗೆದ ಮೋದಿ

    ಇತ್ತೀಚಿನ ದಿನಗಳಲ್ಲಿ ಮಹದೇಶ್ವರನ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿರುವುದು ಸಹ ಹುಂಡಿಯಲ್ಲಿ ಕಾಣಿಕೆ ಮೊತ್ತ ಹೆಚ್ಚಲು ಕಾರಣವಾಗಿದೆ.

    Live Tv

  • ಪುನೀತ್ ರಾಜ್‌ಕುಮಾರ್‌ರನ್ನು ಮರಳಿ ಕಳುಹಿಸು – ಅಭಿಮಾನಿಯಿಂದ ದೇವರಿಗೆ ಪತ್ರ

    ಪುನೀತ್ ರಾಜ್‌ಕುಮಾರ್‌ರನ್ನು ಮರಳಿ ಕಳುಹಿಸು – ಅಭಿಮಾನಿಯಿಂದ ದೇವರಿಗೆ ಪತ್ರ

    ಕಲಬುರಗಿ: ಕನ್ನಡ ಚಿತ್ರರಂಗದ ಮೇರು ನಟ ಯುವರತ್ನ ಪುನೀತ್ ರಾಜ್‍ಕುಮಾರ್ ನಮ್ಮನ್ನೆಲ್ಲ ಅಗಲಿ ತಿಂಗಳುಗಳು ಉರುಳಿವೆ. ಆದರೆ, ಅಪ್ಪು ನೆನಪಲ್ಲಿ ಅದೆಷ್ಟೋ ಒಳ್ಳೆ ಕಾರ್ಯಗಳು ನಿತ್ಯವೂ ನಡೆಯುತ್ತಿವೆ. ಅಭಿಮಾನಿಗಳ ಹೃದಯದಲ್ಲಿ ಅಪ್ಪು ಅಜರಾಮರವಾಗಿದ್ದು, ಅದಕ್ಕೆ ಸಾಕ್ಷಿ ಎಂಬಂತೆ ಪುನೀತ್ ರಾಜ್‍ಕುಮಾರ್ ಅವರನ್ನು ಮರಳಿ ಕಳುಹಿಸು ಪ್ರಭುವೇ ಎಂದು ಅಪ್ಪು ಅಭಿಮಾನಿಯೊಬ್ಬರು ಬರೆದಿರುವ ಚೀಟಿ ದೇವರ ಹುಂಡಿಯಲ್ಲಿ ಸಿಕ್ಕಿದೆ.

    ಕಲಬುರಗಿಯ ಅಫಜಲಪುರ ತಾಲೂಕಿನ ಸುಪ್ರಸಿದ್ಧ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದ ಹುಂಡಿಯಲ್ಲಿ ಪುನೀತ್ ರಾಜ್‍ಕುಮಾರ್ ಅವರನ್ನು ಮರಳಿ ಕಳುಹಿಸು ಪ್ರಭು ಎಂದು ಅಭಿಮಾನಿ ಬರೆದಿರುವ ಚೀಟಿ ದೇವಸ್ಥಾನದ ಹುಂಡಿ ಎಣಿಕೆ ಸಂದರ್ಭದಲ್ಲಿ ದೊರೆತಿದೆ. ಅಪ್ಪು ಅವರನ್ನು ಮತ್ತೆ ಕಳುಹಿಸಿ ಎಂದು ದೇವರ ಮೊರೆ ಹೋಗಿರುವ ಈ ವಿಚಾರ ಭಾವನಾತ್ಮಕವಾಗಿದೆ. ಇದನ್ನೂ ಓದಿ: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ

    ಸದ್ಯ ಇತ್ತೀಚೆಗಷ್ಟೇ ಪುನೀತ್ ರಾಜ್‍ಕುಮಾರ್ ಅವರ ಜೇಮ್ಸ್ ಸಿನಿಮಾ ಬಿಡುಗಡೆಗೊಂಡಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದಲ್ಲಿ ಅಪ್ಪು ಡ್ಯಾನ್ಸ್, ಫೈಟ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಜೇಮ್ಸ್ ಸಿನಿಮಾಕ್ಕೆ ನಿರ್ದೇಶಕ ಚೇತನ್ ಆ್ಯಕ್ಷನ್ ಕಟ್ ಹೇಳಿದ್ದು, ಅಪ್ಪುಗೆ ಜೋಡಿಯಾಗಿ ಪ್ರಿಯಾ ಆನಂದ್ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಶರತ್ ಕುಮಾರ್, ಪ್ರಿಯಾ ಆನಂದ್, ಸಾಧು ಕೋಕಿಲಾ, ಶ್ರೀಕಾಂತ್, ಆದಿತ್ಯ ಮೆನನ್ ಸೇರಿದಂತೆ ಹಲವಾರು ಕಲಾವಿದರೂ ಅಭಿನಯಿಸಿದ್ದಾರೆ. ಇದನ್ನೂ ಓದಿ: ಜೇಮ್ಸ್ ಸಿನಿಮಾ ನೋಡೋಕೆ 10 ಅಲ್ಲ, 100 ಕಾರಣ